ಒಂದೆಡೆ ಸಹ್ಯಾದ್ರಿ ಪರ್ವತಗಳನ್ನು ಮುತ್ತಿಕ್ಕುವ ಕಪ್ಪು ಮೋಡಗಳು ಮತ್ತು ನೂರಾರು ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತಗಳು ಪ್ರವಾಸಿಗರ ಮನಸೂರೆಗೊಳಿಸುತ್ತವೆ. ಇನ್ನೊಂದೆಡೆ ಆಳವಾದ ಕಣಿವೆಗಳು ಮತ್ತು ಕೋಟೆಗಳ ರಹಸ್ಯ ಕೂಡ ಅರನ್ನು ರೋಮಾಂಚಿತಗೊಳಿಸುತ್ತವೆ.

ಸಹ್ಯಾದ್ರಿ ಪರ್ವತ ಶ್ರೇಣಿ ಎಷ್ಟೊಂದು ವಿಶಾಲವೋ ಅಷ್ಟೊಂದು ಸುಂದರ ಕೂಡ ಆಗಿದೆ. ಪ್ರತಿಯೊಂದು ಹವಾಮಾನದಲ್ಲೂ ಇದು ಮನಸ್ಸನ್ನು ಮೋಹಗೊಳಿಸುತ್ತದೆ. ಚಳಿಗಾಲದಲ್ಲಿ ಇದು ಹಸಿರು ಆಭರಣ ಹೊದ್ದ ಸುಂದರಿಯಂತೆ ಗೋಚರಿಸುತ್ತದೆ. ಅದೇ ವೈಶಾಖ ಮಾಸದಲ್ಲಿ ಮಳೆಯಿಂದ ತೊಯ್ದು ಹೋಗಿರುತ್ತದೆ.

ಈ ಗಿರಿರಾಜನನ್ನು ಧ್ಯಾನ ಮುದ್ರೆಯಿಂದ ಎಬ್ಬಿಸುವ ಕೆಲಸವನ್ನು ಮಾಡುವುದು ಕೇವಲ ಮೋಡಗಳು ಮಾತ್ರ. ಗಿರಿರಾಜ ಮತ್ತು ಮೋಡಗಳ ಈ ಮಿಲನ ಕೇವಲ ಮಿಲನವಾಗಿರದೆ, ಅದು ಭಾರಿ ಸದ್ದಿನಿಂದ ಕೂಡಿರುತ್ತದೆ. ಮೋಡಗಳು ಬಹುಬೇಗ ಮಳೆ ಸುರಿಸುತ್ತಿದ್ದಂತೆ, ಕಾಯ್ದು ಕೆಂಡವಾದ ಸಹ್ಯಾದ್ರಿ ತಂಪಾಗಿ ಖುಷಿಯಿಂದ ನಲಿಯತೊಡಗುತ್ತದೆ.

ವರ್ಷ ಧಾರೆಯಿಂದ ತೃಪ್ತಳಾದ ಸಹ್ಯಾದ್ರಿಯ ಒಡಲಿನಲ್ಲಿರುವ ಜಲಪಾತಗಳು ಧುಮ್ಮಿಕ್ಕಿ ಹರಿಯಲಾರಂಭಿಸುತ್ತವೆ. ಅವುಗಳ ಸೌಂದರ್ಯ ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದು ಬರಲಾರಂಭಿಸುತ್ತದೆ. ಸಹ್ಯಾದ್ರಿಯ ವಿಶಾಲಕಾಯ ರೂಪ ಎಷ್ಟೊಂದು ಭಯಾನಕ ಎನಿಸುತ್ತದೊ, ಅದು ಮನಸ್ಸಿಗೆ ಅಷ್ಟೇ ಖುಷಿಯನ್ನು ಕೊಡುತ್ತದೆ.

rimjhim-barsat

ಸಹ್ಯಾದ್ರಿ ಪರ್ವತ ಪ್ರದೇಶ ಟ್ರೆಕಿಂಗ್‌ಗೆ ಹೇಳಿ ಮಾಡಿಸಿದ ತಾಣ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಯುವತಿಯರು ಕೂಡ ಟ್ರೆಕಿಂಗ್‌ಗೆ ಬರುತ್ತಿದ್ದಾರೆ. ಸಹ್ಯಾದ್ರಿಯ ಆಳ ಕಣಿವೆಗಳು, ಗಗನಚುಂಬಿ ಪರ್ವತಗಳು ಹಾಗೂ ಅದರ ಸೌಂದರ್ಯ ಯುವತಿಯರ ಕಣ್ಮನ ಸೆಳೆಯುತ್ತಿದೆ.

ಸಾಮಾನ್ಯವಾಗಿ ಸಹ್ಯಾದ್ರಿಯ ಶಿಖರಗಳ ಎತ್ತರ 2,500 ಅಡಿಯಿಂದ ಹಿಡಿದು 3,500 ಅಡಿ ತನಕ ಇವುಗಳೆಲ್ಲಕ್ಕೂ ಎತ್ತರದ ಶಿಖರವೆದರೆ ಕಳಸೂಬಾಯಿ. ಅದು 5,000 ಅಡಿ ಎತ್ತರವಿದೆ. ಈ ಶ್ರೇಣಿಯನ್ನು ಬಾಲಾಘಾಟ್‌ ಅಥವಾ ಬಾಲೇಶ್ವರ್‌ ಶ್ರೇಣಿ ಎಂದು ಕರೆಯಲಾಗುತ್ತದೆ. ಮುಸಲಧಾರೆಯ ಮಳೆಯಿಂದ ಮತ್ತು ಕಪ್ಪು ದಟ್ಟ ಮಳೆಯಿಂದ ಈ ಪರ್ವತ ಶ್ರೇಣಿಗಳು ಎಷ್ಟು ರಹಸ್ಯಮಯವಾಗಿ ಕಾಣುತ್ತವೆ, ಅಷ್ಟೇ ಮನೋಹರವಾಗಿಯೂ ಗೋಚರಿಸುತ್ತವೆ. ಹರಿಶ್ಚಂದ್ರ, ಆಜೋಬಾ, ಅಲಂಗ್‌, ಕುಲಂಗ್‌, ಮದನ್‌ ಮುಂತಾದ ಪರ್ವತಗಳು ಮತ್ತು ಭಂಡಾರಧಾರಾ ಜಲಾಶಯ ತನ್ನ ಮಡಿಲಿಗಾಗಿ ಹಾಗೂ ಪರ್ವತ ಶ್ರೇಣಿಗಳು ಟ್ರೆಕಿಂಗ್‌ಗಾಗಿ ಪ್ರಸಿದ್ಧವಾಗಿವೆ.

ಮಾಲಶೇಜ್‌ ಘಾಟ್‌ ಸಹ್ಯಾದ್ರಿಯ ಎರಡೂ ಬದಿಯ ಶಿಖರಗಳಿಂದ ದೃಷ್ಟಿ ಕದಲುವುದೇ ಇಲ್ಲ. ತುಂತುರು ಮಳೆಯಿಂದ ತೊಯ್ದಾಗ ಈ ಶಿಖರಗಳು ಹಸಿರು ಮುತ್ತುಗಳ ರಾಶಿ ಹೊತ್ತಂತೆ ಕಾಣುತ್ತವೆ. ಇಲ್ಲಿನ ರಸ್ತೆ ಕಾಡಿನ ಮಧ್ಯದಿಂದ ಹಾಯ್ದು ಸರೋವರಗಳ ಬಳಿ ತೆರೆದುಕೊಳ್ಳುತ್ತವೆ. ಮುಂಬೈನಿಂದ 140 ಕಿ.ಮೀ. ದೂರದಲ್ಲಿರುವ ಕೊಂಕಣ ಪ್ರದೇಶದ ಕಲ್ಯಾಣ, ಠಾಣೆ ಮತ್ತು ಮುರಬಾಡ್‌. ಈ ಮುಖ್ಯ ಸ್ಥಳಗಳನ್ನು ಜೋಡಿಸುವ ಪ್ರಾಚೀನ ಘಟ್ಟ ಮಾರ್ಗವಾಗಿದೆ. ಅದನ್ನು `ಮಾಲಶೇಜ್‌ ಘಾಟ್‌’ ಎಂದು ಕರೆಯಲಾಗುತ್ತದೆ. ಮುರಬಾಡದಿಂದ ಸ್ವಲ್ಪ ಮುಂದೆ ಹೋದಂತೆ ಬಲಬದಿಯಿಂದ ಸಹ್ಯಾದ್ರಿಯ ಮುಗಿಯದ ಸಾಲುಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಈ ಪರ್ವತ ಶ್ರೇಣಿಗಳ ವಿಶೇಷತೆಯೆಂದರೆ, ಸುಮಾರು 3500 ಅಡಿ ಎತ್ತರದ ಈ ಗಗನಚುಂಬಿ ಶಿಖರಗಳನ್ನು ಅಂದಾಗಿ ಕೆತ್ತಿ ಅಣಿಗೊಳಿಸಲಾಗಿದೆ ಎಂಬಂತೆ ಗೋಚರಿಸುತ್ತದೆ. ನಮಗೆ ಮೊದಲು ಸಿದ್ಧಗ್‌, ಗೋರಖ್‌ಗಢ, ಜೀವಧನ್‌ ಮತ್ತು ಎಲ್ಲಕ್ಕೂ ಕೊನೆಗೆ ಹರಿಶ್ಚಂದ್ರಗಢ ಟ್ರ್ಯಾಕ್‌ ನೋಡಲು ಸಿಗುತ್ತದೆ. ದಟ್ಟ ಅರಣ್ಯದ ಕಾರಣದಿಂದ ಮೊಲ, ಕಾಡು ಮೊಸಳೆ, ಚಿರತೆಗಳು ಹೆಚ್ಚಾಗಿ ಕಂಡು ಬರುತ್ತವೆ. ಫ್ಲೆಮಿಂಗೊ ಪಕ್ಷಿಗಳಿಗಂತೂ ಇದು ಅತ್ಯಂತ ಅಚ್ಚುಮೆಚ್ಚಿನ ಸ್ಥಳ. ಪ್ರತಿವರ್ಷದ ಜುಲೈನಿಂದ ಹಿಡಿದು ಸೆಪ್ಟೆಂಬರ್‌ ತನಕ ಆ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ.

neral-matheran-train-big

 

ಮೀರಾ ಪರ್ವತ

ಮೀರಾ ಪರ್ವತ ಮುಂಬೈನಿಂದ 76 ಕಿ.ಮೀ. ದೂರದಲ್ಲಿದೆ. ಮಳೆಗಾಲದಲ್ಲಿ ಇಲ್ಲಿ ಹಲವು ಚಿಕ್ಕಪುಟ್ಟ ಜಲಪಾತಗಳು ಕಂಡುಬರುತ್ತವೆ. ಮೊದಲ ಹಂತದಲ್ಲಿ ಬೋರಮಾಲ್ ‌ಗ್ರಾಮಕ್ಕೆ ಬರುತ್ತಿದ್ದಂತೆ ಎಡಬದಿಗೆ ಮಾಣಿಕ್‌ಗ್‌ ಮತ್ತು ಕರಮಾಳಾ ಗಿರಿಶಿಖರಗಳು ಕಣ್ಣಿಗೆ ಬೀಳುತ್ತವೆ.  ವೇಗದಿಂದ ಹರಿಯು ಜಲಪಾತ ಇಲ್ಲಿನ ಮುಖ್ಯ ಆಕರ್ಷಣೆ. 100 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತ ಕಂಡಾಗ ನಾವು ಇಲ್ಲಿಗೆ ಬಂದಿರುವುದು ಸಾರ್ಥಕ ಎನಿಸುತ್ತದೆ. ಒಂದು ದಿನದಲ್ಲಿ ಇಲ್ಲಿ ಟ್ರೆಕಿಂಗ್‌ ಮಾಡಿ ಮುಗಿಸಬಹುದು.

ಆಜೋಬಾ ಪರ್ವತ

ಕಳಸೂಬಾಯಿ ಪರ್ವತ ಮಹಾರಾಷ್ಟ್ರದ ಹೆಸರಾಂತ ಪರ್ವತ. ಟ್ರೆಕಿಂಗ್‌ ಮಾಡಲು ಬಹಳ ಖುಷಿ ಕೊಡುತ್ತದೆ. ಇಲ್ಲಿ ದೊಡ್ಡ ದೊಡ್ಡ ಪರ್ವತ ಶ್ರೇಣಿಗಳಿವೆ, ಆಳವಾದ ಕಣಿವೆಗಳಿವೆ. ಅಲ್ಲಿ ಹರಿಯುವ ನದಿಗಳು, ಎತ್ತರೆತ್ತರ ಶಿಖರಗಳು ನಿಸರ್ಗದ ಸುಂದರ ರೂಪವನ್ನು ಅನಾವರಣ ಮಾಡುತ್ತವೆ. ರತನ್‌ಗಢ ಹಾಗೂ ಹರಿಶ್ಚಂದ್ರಗಢದ ನಡುವೆ ಆಜೋಬಾ ಪರ್ವತ ಯಾವುದೊ ಪುರಾಣ ಪುರುಷನಂತೆ ನಿಂತಿದೆ.

ಯಾವುದೇ ದಾರಿಯಲ್ಲಿ ಆಜೋಬಾ ಪರ್ವತ ತಲುಪಲು ಒಂದು ದಿನ ನಡೆಯಲೇಬೇಕಾಗುತ್ತದೆ. ಅಲ್ಲಿಗೆ ಹೋಗಲು ಮುಂಬೈನಿಂದ ಡೋಲಖಾಂಬ ಬಸ್‌ ಸೇವೆ ಲಭ್ಯವಿದೆ. ಈ ಸಂಪೂರ್ಣ ಟ್ರೆಕಿಂಗ್‌ಗೆ ಯಾವುದೇ ಒಬ್ಬ ವ್ಯಕ್ತಿಗೆ ನಡಿಗೆ ಅಭ್ಯಾಸ ಅತ್ಯಗತ್ಯ. ಮುಂಬೈನಿಂದ ಇಗತ್‌ಪುರಿ ಮಾರ್ಗದಲ್ಲಿ ಹೋಗಲು 190 ಕಿ.ಮೀ. ಮಾರ್ಗ ಸವೆಸಬೇಕಾಗುತ್ತದೆ.

ಮಾಥೆರಾನ್

ಮಳೆಗಾಲದಲ್ಲಿ ಮಾಥೆರಾನ್‌ನ ಪ್ರವಾಸ ವಿಶಿಷ್ಟ ಖುಷಿ ನೀಡುತ್ತದೆ. ಮೋಡಗಳ ಹೊದಿಕೆ ಹೊದ್ದ ಸೃಷ್ಟಿಯ ಸೊಬಗನ್ನು ನೋಡುವುದು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಮಾಥೆರಾನ್‌ನ ಈ ಪರ್ವತ ಶ್ರೇಣಿಗಳು ಕಲ್ಯಾಣ ಹಾಜಿ ಮಲಂಗ್‌ನಿಂದ ಶುರುವಾಗುತ್ತವೆ. ಈ ಪರ್ವತಗಳ ಹೆಸರುಗಳು ವಿಚಿತ್ರವಾಗಿವೆ. ನರನಾರಿ ಪರ್ವತ (ಗಂಡ ಹೆಂಡತಿ ಪರ್ವತ) ಮೈಸ್‌ ಮಾಳ ಪರ್ವತ (ಎಮ್ಮೆ ಮಾಳದ ಪರ್ವತ) ಚಂದೇರಿ ಪರ್ವತದ ಎತ್ತರ ಶಿಖರ, ಆರುಪಾರು ರಂಧ್ರದ ನಾಖಿಡ್‌ ಪರ್ವತ ಮತ್ತು ಅಷ್ಟಿಷ್ಟು ಕುಬ್ಜ ರೇಬ್‌ ಪರ್ವತ.

ಮುಂಬೈ ಪುಣೆ ರೈಲು ಮಾರ್ಗದಲ್ಲಿರು ನೇರಳ ಗ್ರಾಮ ಮಾಥೆರಾನ್‌ನ ತಳಬದಿಯಲ್ಲಿ ನೆಲೆಗೊಂಡಿದೆ. ಇಲ್ಲಿ ರೈಲು 21 ಕಿ.ಮೀ. ಕ್ರಮಿಸಲು ಹೆಚ್ಚು ಕಡಿಮೆ 2 ಗಂಟೆ ತೆಗೆದುಕೊಳ್ಳುತ್ತದೆ. ಇಲ್ಲಿನ ಒಂದು ವಿಶೇಷತೆಯೆಂದರೆ ಇಲ್ಲಿ ಅತ್ಯಂತ ಒಳಭಾಗದ ತನಕ ವಾಹನಗಳನ್ನು ಬಿಡಲಾಗುವುದಿಲ್ಲ. ನೇರಳ ಗ್ರಾಮದಿಂದ ಮೇಲ್ಭಾಗಕ್ಕೆ ಬಂದ ನಂತರ ದಸ್ತೂರಿ ನಾಕಾದ ಬಳಿ ವಾಹನಗಳನ್ನು ನಿಲ್ಲಿಸಬೇಕಾಗುತ್ತದೆ. ಈ ಕಾರಣದಿಂದ ಮಾಥೆರಾನ್‌ನಲ್ಲಿ ಮಾಲಿನ್ಯ ಅಷ್ಟವಾಗಿ ಕಂಡುಬರುವುದಿಲ್ಲ. ಕಚ್ಚಾ ದಾರಿಯಲ್ಲಿ ಮುಂದೆ ಮುಂದೆ ಸಾಗಿದಂತೆ ಹೋಟೆಲ್ಸ್ ಮತ್ತು ಮಾರುಕಟ್ಟೆಗಳು ಸಿಗುತ್ತವೆ. ಮಳೆಗಾಲದಲ್ಲಿ ಇಲ್ಲಿ ಚಾರಣ ಮಾಡುವುದು ವಿಶೇಷ ಖುಷಿ ನೀಡುತ್ತದೆ.

ತುಂಗಾರೇಶ್ವರ

ಉತ್ತರ ಕೊಂಕಣ ಭಾಗದಲ್ಲಿ ಮುಂಬೈ ಅಹಮದಾಬಾದ್‌ ಮಾರ್ಗದಲ್ಲಿ ತುಂಗಾರೇಶ್ವರ ಎಲ್ಲಕ್ಕೂ ಸುಂದರ ಪರ್ವತ ಶ್ರೇಣಿಯಾಗಿದೆ. ಬಲಬದಿ ಕಣಿವೆಗೆ ಧುಮ್ಮಿಕ್ಕುವ ತುಂಗಾರೇಶ್ವರ ನದಿ ಕಣ್ಣಿಗೆ ಬೀಳುತ್ತದೆ. ಮಳೆಗಾಲದಲ್ಲಿ ಈ ಪರ್ವತದ ತನಕ ತಲುಪಲು 5 ಸಲ ನದಿಯನ್ನು ದಾಟಬೇಕಾಗುತ್ತದೆ. ಕೆಳಭಾಗದಿಂದ ಸುಮಾರು 75 ಕಿ.ಮೀ. ದಾರಿಯನ್ನು ಕ್ರಮಿಸಿದಾಗ ಈ ಪರ್ವತವನ್ನು ತಲುಪಬಹುದು.

ಮಳೆಗಾಲ ಹೊರತುಪಡಿಸಿ ಉಳಿದೆಲ್ಲ ಅವಧಿಯಲ್ಲಿ ಮೇಲ್ಭಾಗದ ತನಕ ವಾಹನಗಳು ತಲುಪಬಹುದಾಗಿದೆ. ಈ ಪರ್ವತ ಪ್ರದೇಶದಲ್ಲಿನ ಶಾಂತಿ ಮತ್ತು ಸಿಹಿನೀರಿನಿಂದಾಗಿ ಮೇಲೇರಿದ ಶ್ರಮವೆಲ್ಲ ಸ್ವಲ್ಪ ಹೊತ್ತಿನಲ್ಲಿಯೇ ಮಾಯವಾಗುತ್ತದೆ. ಪರ್ವತದ ತುದಿಯ ಮೇಲೆ ಒಂದು ಕಡೆ ನೀರಿನ ಹೊಂಡಗಳಿವೆ. ಎದುರಿಗೆ ತಾನಸಾ ನದಿ ಮತ್ತು ಟಕ್‌ಮಕ್‌ ಕೋಟೆ ಬಹಳ ಸುಂದರವಾಗಿ ಗೋಚರಿಸುತ್ತದೆ. ಈಚೆಗೆ ಇಲ್ಲಿಯೂ ಟ್ರೆಕಿಂಗ್‌ಗಾಗಿ ಸಾಕಷ್ಟು ಜನರು ಬರುತ್ತಿರುವುದು ಗೋಚರಿಸುತ್ತದೆ.

harishchandra-gad

ಹರಿಶ್ಚಂದ್ರಗಢ

ಮುಂಬೈನಿಂದ ಕಲ್ಯಾಣ ಮುರಾಡ ಜುನ್ನರ್‌ ಮಾರ್ಗದಲ್ಲಿ ಸಾಗುವಾಗ ಮಾಲಶೇಜ್‌ ಘಾಟ್‌ ದಾಟಬೇಕಾಗುತ್ತದೆ. ಅಲ್ಲಿಂದ ಎಡಬದಿಗೆ 3 ಶಿಖರಗಳುಳ್ಳ ಮತ್ತು ಸ್ವಲ್ಪ ಹೊರಬದಿಗೆ ಚಾಚಿಕೊಂಡಿರುವ ಹರಿಶ್ಚಂದ್ರಗಢದಿಂದ ಕಣ್ಣು ಕದಲಿಸಲು ಆಗುವುದಿಲ್ಲ. ಇದರ ಎತ್ತರ 4,671 ಅಡಿ. ತನ್ನ ಎತ್ತರದ ಕಾರಣದಿಂದಾಗಿ ಇದು ಚಾರಣಿಗರಿಗೆ ಬಹುಮೆಚ್ಚಿನ ಸ್ಥಳವಾಗಿದೆ.

ಹೊಸಬರು ಈ ಪರ್ವತದ ತುದಿ ಏರಿದರೆ ಕೆಳಗೆ ನೋಡುವ ಧೈರ್ಯ ತೋರಿಸಲು ಆಗುವುದಿಲ್ಲ. ಈ ಪರ್ವತಕ್ಕೆ 3 ಶಿಖರಗಳಿವೆ. ಎಡಬದಿಯಿಂದ ಸೊಂಡಿಲಿನಾಕಾರದ ಕಡಿಮೆ ಎತ್ತರದ ರೋಹಿದಾಸ, ನಟ್ಟನಡುವೆ ಎಲ್ಲಕ್ಕೂ ಎತ್ತರದ ತಾರಾಮತಿ ಮತ್ತು ಬಲಬದಿಯಲ್ಲಿ ಹರಿಶ್ಚಂದ್ರ ಹೀಗೆ 3 ಪರ್ವತಗಳಿವೆ. ಮೇಲ್ಭಾಗದಲ್ಲೊಂದು ದೊಡ್ಡ ಗುಹೆ ಇದೆ. ಈ ಗುಹೆ ಯಾವಾಗಲೂ ನೀರಿನಿಂದ ತುಂಬಿಕೊಂಡಿರುತ್ತದೆ. ಇಲ್ಲಿನ ನೀರು ಅದೆಷ್ಟು ತಂಪಾಗಿರುತ್ತದೆಂದರೆ ಅದರಲ್ಲಿ ಕೈ ಹಾಕಲು ಕೂಡ ಆಗದು.

ಪರ್ವತದ ಮೇಲ್ಭಾಗದಲ್ಲೂ ಕೂಡ ದಟ್ಟ ಅರಣ್ಯವಿದೆ. ಅಲ್ಲಿ ಎಲ್ಲ ಪ್ರಕಾರದ ಕಾಡು ಪಕ್ಷಿಗಳು ಕಂಡುಬರುತ್ತವೆ. ಸಾತಭಾಯಿ, ಭಾರದ್ವಾಜ, ದಯಾಲ್‌, ಖಂಡ್ಯಾ, ಫ್ಲೆಮಿಂಗೊ ಪಕ್ಷಿಗಳು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತವೆ. ಪುಣೆ, ರಾಣೆ ಮತ್ತು ನಗರ ಈ ಮೂರೂ ಜಿಲ್ಲೆಗಳಿಗೆ ಈ ಪರ್ವತಗಳು ಚಾಚಿಕೊಂಡಿರುವುದರಿಂದ ಯಾವ ಕಡೆಯಿಂದಾದರೂ ಈ ಪರ್ವತಕ್ಕೆ ತಲುಪಬಹುದಾಗಿದೆ.

ಇದರ ಹೊರತಾಗಿ ರಾಯಗ್‌ ಮತ್ತು ರಾಜಗ್‌ ಕೂಡ ಪ್ರವಾಸಿಗರ ಗಮನ ಸೆಳೆಯುತ್ತವೆ.

ಸಹ್ಯಾದ್ರಿಯ ಈ ಪಯಣ ಎಷ್ಟೊಂದು ರೋಚಕ, ರೋಮಾಂಚಕ ಎನಿಸುತ್ತದೆಯೆಂದರೆ, ಹಸಿರು ಸಿರಿಯ ಮಧ್ಯೆ ಓಡುತ್ತಲೇ ಇರೋಣ ಅನಿಸುತ್ತೆ. ಟ್ರೆಕಿಂಗ್‌ಗಾಗಿ ಹೋಗುವ ಮುಂಚೆ ಸಾಕಷ್ಟು ಅಭ್ಯಾಸ ಮತ್ತು ಸಿದ್ಧತೆ ಮಾಡಿಕೊಳ್ಳುವುದು ಅತ್ಯವಶ್ಯ. ಅಂದರೆ ಟ್ರೆಕಿಂಗ್‌ನ ಸ್ಥಳ. ಅಲ್ಲಿನ ಭೌಗೋಳಿಕ ಸ್ಥಿತಿ, ಟ್ರೆಕಿಂಗ್‌ನ ಅಂತರ, ಹೋಗಲು ಮತ್ತು ಬರಲು ತಗಲು ಸಮಯ. ನೀವು ಸ್ವಂತ ವಾಹನದಲ್ಲಿ ಬಂದಿದ್ದರೆ ಅದನ್ನು ಸುರಕ್ಷಿತವಾಗಿ ಇಡುವ ಸ್ಥಳ, ವಾಜಿಂಗ್‌ ಮುಂತಾದವುಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯ.

ಇದರ ಬಗ್ಗೆ ನೀವು ಇಂಟರ್‌ನೆಟ್‌ ಮತ್ತು ಪುಸ್ತಕಗಳಿಂದಲೂ ಮಾಹಿತಿ ಸಂಗ್ರಹಿಸಬಹುದು. ಇದರ ಹೊರತಾಗಿ ಟ್ರೆಕಿಂಗ್‌ಗೆ ಹೋಗುವ ವ್ಯಕ್ತಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಫಿಟ್‌ ಆಗಿರಬೇಕು. ಅದಕ್ಕಾಗಿ ಪ್ರತಿದಿನ ನಡಿಗೆ, ಈಜು, ಓಡುವುದು ಮುಂತಾದ ವ್ಯಾಯಾಮಗಳು ಲಾಭಕರವಾಗಿ ಪರಿಣಮಿಸಬಹುದು.

ಟ್ರೆಕಿಂಗ್‌ಗೆ ಹೋಗಲು ನಾವು ಧರಿಸುವ ಬಟ್ಟೆಗಳು ಕೂಡ ಅನುಕೂಲಕರವಾಗಿರಬೇಕು. 1-2 ಜೊತೆ ಹೆಚ್ಚಾಗಿಯೇ ಬಟ್ಟೆ ತೆಗೆದುಕೊಳ್ಳುವುದು ಅನುಕೂಲಕರ. ಜೊತೆಗೆ ಶೂಸ್‌, ಸಾಕ್ಸ್ ಮತ್ತು ಕ್ಯಾಪ್‌ ಮತ್ತು ತಿನ್ನಲು ಬಿಸ್ಕತ್ತುಗಳು ಕೂಡ ಜೊತೆಗಿರಲಿ.

– ಪ್ರೇಮಲತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ