ಈ ಸ್ಟೈಲಿಶ್‌ ಬ್ಲ್ಯಾಕ್‌ ಟಾಪ್‌ ಮತ್ತು ಡೆನಿಂ ಶಾರ್ಟ್ಸ್ ಜೊತೆ ಸುಪರ್ಬ್‌ ಗಾಗಲ್ಸ್ ಇವಳಿಗೆ ಗ್ಲಾಮರಸ್‌ ಟಚ್‌ನೀಡಿದೆ.

ಬ್ಲೂ ರೆಡ್‌ ಇನ್‌ ಲೈಟ್‌ ಬ್ಲಾಕ್‌ ಗ್ರೌಂಡ್‌ನಲ್ಲಿ ಈ ಟೀಶರ್ಟ್‌ ಸ್ಮಾರ್ಟ್‌ ಆಗಿ ಕಾಣಿಸಲು ಅದರ ಸೈಡ್‌ ಕಟ್‌ ಕಾರಣ. ಇದಕ್ಕೆ ಹೊಂದುವಂತೆ ಟೋರ್ನ್‌ ಗ್ರೇ ಜೀನ್ಸ್ ಮತ್ತು ಬ್ಲೂ ಗಾಗಲ್ಸ್ ಇವಳ ಮೈಕಟ್ಟಿಗೆ ಪೂರಕಾಗಿವೆ.

ಈ ಬ್ಲ್ಯಾಕ್‌ವೈಟ್‌ ಒನ್‌ ಪೀಸ್‌ ಸ್ಲೀವ್ ಲೆ‌ಸ್‌ ಬ್ಯೂಟಿಫುಲ್ ಡ್ರೆಸ್‌ನ ಆಕರ್ಷಣೆ ಇರುವುದೇ ಬ್ಲ್ಯಾಕ್‌ ಡಾಟ್ಸ್ ಹಾಗೂ ಫ್ರಂಟ್‌ ಸ್ಲಿಟ್‌ನಿಂದಾಗಿ. ಉಡುಗೆಗೆ ತಕ್ಕಂತೆ ಹೇರ್‌ ಸ್ಟೈಲ್ ‌ಮತ್ತು ಲೈಟ್‌ ಮೇಕಪ್‌ ಡ್ಯಾಶಿಂಗ್‌ ಆಗಿದೆ.

fashion-1

ಈ ಆಕಾಶನೀಲಿ ಸ್ಲೀವ್ ಲೆಸ್ ಸ್ಮೋಕಿಂಗ್‌ ಫ್ರಾಕ್‌ನಲ್ಲಿ ಒಡಮೂಡಿದ ಬಿಳಿ ಚಿಟ್ಟೆಗಳ ವಿನ್ಯಾಸದಿಂದಾಗಿ ಈ ಡ್ರೆಸ್‌ ಸಖತ್‌ ಕ್ಯೂಟ್ ಆಗಿ ಮಿಂಚುತಿದೆ. ಕೋಮಲ ಕಾಯದ ಇವಳ ಭಾವಭಂಗಿ ಮಂದಹಾಸದಿಂದ ಮೋಹಕವಾಗಿದೆ.

ಈ ಸ್ಟ್ರೇಟ್‌ ಕಟ್‌ ರೆಡ್‌ ಸ್ಕರ್ಟ್‌ ಹಾಗೂ ಸೀಕ್ವೆನ್ಸ್ ವುಳ್ಳ ಲೈಟ್‌ ಸ್ಲೀವ್ ಲೆಸ್ ಟಾಪ್‌ನ ಬೆಡಗು ಹೆಚ್ಚಿಸುತ್ತಿರುವುದು ಬಟರ್‌ ಫ್ಲೈ ಬಕ್‌ವುಳ್ಳ ಮೋಹಕ ಲೈಟ್‌ ಬೆಲ್ಟ್. ಮಾಡರ್ನ್‌ ಹೇರ್‌ ಸ್ಟೈಲ್‌, ಲೈಟ್‌ ಮೇಕಪ್‌ ಈ ಉಡುಗೆಗೆ ಪೂರಕಾಗಿವೆ.

fashion-2

ವಾವ್‌…. ಬ್ಲ್ಯಾಕ್‌ಲೈಟ್‌ ಕಾಂಬಿನೇಷನ್‌! ಅತ್ಯಾಧುನಿಕ ಕಸೂತಿಯುಳ್ಳ ಲೈಟ್‌ ಸ್ಲೀವ್ ಲೆಸ್ ಟಾಪ್‌ ಹಾಗೂ ಬ್ಲ್ಯಾಕ್‌ ಶಿಫಾನ್ ಸ್ಕರ್ಟ್‌ ಇವಳನ್ನು ಬೆಡಗಿನ ಖನಿಯಾಗಿಸಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ