ನೀವು ಸಹ ಹಾಲಿವುಡ್ ನಟಿ ಜೆಸಿಕಾ ಪಾರ್ಕರ್, ಸಿಂಗರ್ ಸೆಲೆನಾ ಗೋಮೇಜ್ ಅಥವಾ ಬಾಲಿವುಡ್ ನಟಿ ಬಿಪಾಶಾ ಬಸುರಂತೆ ಆಕರ್ಷಕವಾಗಿ ಕಾಣಿಸಿಕೊಳ್ಳಲು ಇಚ್ಛಿಸಿದ್ದೀರಾ? ಹೌದು ಎಂದಾದರೆ ನಿಮಗೆ ಬೋಲ್ಡ್ ಸ್ಟೇಟ್‌ಮೆಂಟ್ ಕೊಡುವ ಜೊತೆ ಜೊತೆಗೆ ಕೂಲ್ ಫೀಲ್ ಮಾಡುವಂತಹ ಡ್ರೆಸ್ ಬಗ್ಗೆ ತಿಳಿಸುತ್ತೇವೆ.
ಒಂದುವೇಳೆ ನೀವು ವಿಶೇಷ ಡ್ರೆಸ್ ಪರ್ಸನ್ ಅಲ್ಲದಿದ್ದರೆ ಈ ಡ್ರೆಸ್ ನಿಮಗೆ ಪರ್ಫೆಕ್ಟ್ ಆಗಿರುತ್ತದೆ. 1940ರ ಯೂರೋಪಿಯನ್‌ಫ್ಯಾಷನ್‌ನಿಂದ ಪ್ರೇರಿತವಾದ ಮ್ಯೂಲೆಟ್ ಡ್ರೆಸ್ ಇಂದು ರೆಡ್ ಕಾರ್ಪೆಟ್ ಸ್ಟೈಲ್ ಆಗುವ ಜೊತೆ ಜೊತೆಗೆ ಫ್ಯಾಷನ್‌ನೊಂದಿಗೆ ಸಾಗುವವರ ಹಾಟ್ ಪಿಕ್ ಕೂಡ ಆಗಿದೆ. ಈ ಡ್ರೆಸ್ ಧರಿಸಿ ನೀವು ಯಾವುದಾದರೂ ಪಾರ್ಟಿಯ ವೈಭವ ಹೆಚ್ಚಿಸಬಹುದು. ಮುಂದಿನಿಂದ ಶಾರ್ಟ್ ಅಂದರೆ ಎತ್ತರದ ಮತ್ತು ಹಿಂದಿನಿಂದ ಲಾಂಗ್ ಅಂದರೆ ಉದ್ದವಾಗಿರುವುದರಿಂದ ಈ ಡ್ರೆಸ್‌ನ್ನು ಹೈಲೋ ಅಥವಾ ವಾಟರ್ ಫಾಲ್ ಡ್ರೆಸ್ ಎಂದು ಕರೆಯುತ್ತಾರೆ. ಫ್ಯಾಷನ್ ಫ್ಲೋರ್‌ನಲ್ಲಿ ಚೆಲುವು ತೋರಿಸುವ ಮ್ಯೂಲೆಟ್ ಡ್ರೆಸ್ ಧರಿಸುವವರಿಗೆ ಸ್ಟನ್ನಿಂಗ್ ಲುಕ್ ಕೊಡುತ್ತದೆ.
ಈ ಡ್ರೆಸ್‌ನ ವೆರೈಟಿಯ ಬಗ್ಗೆ ಮಾತಾಡಿದರೆ ಫ್ಯಾಷನ್ ಮಾರ್ಕೆಟ್‌ನಲ್ಲಿ ಮ್ಯೂಲೆಟ್ ಟ್ಯೂನಿಕ್ಸ್, ಮ್ಯೂಲೆಟ್ ಡ್ರೆಸೆಸ್, ಸ್ಕರ್ಟ್ಸ್, ಟಾಪ್ಸ್ ಮತ್ತು ಜಾಕೆಟ್ಸ್ ಲಭ್ಯವಿವೆ. 2 ಲುಕ್ ಕೊಡುವ ಈ ಸಿಂಗಲ್ ಡ್ರೆಸ್ ಎದುರಿನಿಂದ ಬಿಸ್‌ನೆಸ್ ಅಥವಾ ಪ್ರೊಫೆಷನಲ್ ಸ್ಟೈಲ್ ಲುಕ್ ಮತ್ತು ಹಿಂದಿನಿಂದ ಪಾರ್ಟಿ ಸ್ಟೈಲ್ ಲುಕ್ ಕೊಡುತ್ತದೆ. ಈ ಎಲ್ಲ ಡ್ರೆಸ್‌ಗಳು ಎದುರಿನಿಂದ ಶಾರ್ಟ್ ಮತ್ತು ಹಿಂದಿನಿಂದ ಲಾಂಗ್ ಟೇಲ್ ಇರುತ್ತದೆ. ಮ್ಯೂಲೆಟ್ ಡ್ರೆಸ್ ಬಹಳಷ್ಟು ಬೋಲ್ಡ್ ಮತ್ತು ಸೆಕ್ಸಿ ಲುಕ್ ಕೊಡುತ್ತದೆ. ಕೆಲವು ಮ್ಯೂಲೆಟ್ ಡ್ರೆಸ್‌ಗಳಲ್ಲಿ ಫಿಟೆಡ್ ಮಿನಿ ಸ್ಕರ್ಟ್ ಕೂಡ ಅಟ್ಯಾಚ್ಡ್ ಆಗಿರುತ್ತದೆ. ಕೆಲವು ಡ್ರೆಸ್‌ಗಳಲ್ಲಿ ಬರೀ ಹೈಲೋ ಮಾತ್ರ ಇರುತ್ತದೆ. ಈ ಮ್ಯೂಲೆಟ್ ಡ್ರೆಸ್‌ಗಳು ಸೆಲೆಬ್ರಿಟಿಗಳಿಗೆ ವಿಶೇಷವಾಗಿ ಇಷ್ಟವಾಗಿದೆ. ಇವನ್ನು ಅವರು ರೆಡ್ ಕಾರ್ಪೆಟ್‌ನಿಂದ ಹಿಡಿದು ಪಾರ್ಟಿಗಳವರೆಗೆ ಧರಿಸಿ ತಮ್ಮ ಸೌಂದರ್ಯ ಪ್ರದರ್ಶಿಸುತ್ತಾರೆ.
ಪ್ರತಿ ಫಿಗರ್‌ಗೂ ಪರ್ಫೆಕ್ಟ್ ಲುಕ್ ಮ್ಯೂಲೆಟ್ ಡ್ರೆಸ್ ಪ್ರತಿ ಫಿಗರ್‌ನ ಮಹಿಳೆಯರಿಗೆ ಸೂಟ್ ಆಗಿದ್ದು ಅವರಿಗೆ ಪರ್ಫೆಕ್ಟ್ ಲುಕ್ ಕೊಡುತ್ತದೆ. ಈ ಡ್ರೆಸ್ ಬರೀ ಉದ್ದವಾಗಿರುವ ಹಾಗೂ ತೆಳುವಾಗಿರುವ ಮಹಿಳೆಯರಿಗೆ ಮಾತ್ರ ಸೂಟ್ ಆಗುತ್ತದೆ ಎಂದು ಕೆಲವು ಮಹಿಳೆಯರು ಹೇಳುತ್ತಾರೆ. ಆದರೆ ಹಾಗೇನೂ ಇಲ್ಲ. ಉದ್ದವಿರುವ ಮಹಿಳೆಯರಿಗೆ ಮ್ಯೂಲೆಟ್ ಡ್ರೆಸ್ ಸೂಪರ್ ಮಾಡಲ್ ರಂತಹ ಲುಕ್ ಕೊಡುತ್ತದೆ. ಭಾರಿ ಶರೀರದ ಮಹಿಳೆಯರಿಗೆ ಗ್ಯಾದರ್ಸ್ ಇಲ್ಲದ ಸ್ಟ್ರೇಟ್ ಕಟ್‌ನ ಮ್ಯೂಲೆಟ್ ಡ್ರೆಸ್ ಧರಿಸಬಹುದು ಹಾಗೂ ತಮ್ಮ ಕರ್ವ್ಸ್ ತೋರಿಸಬಹುದು. ಅಂತಹ ಮಹಿಳೆಯರು ವೇಸ್ಟ್ ಲೈನ್ ಮೇಲೆ ಸ್ಕೀನೀ ಬೆಲ್ಟ್ ಧರಿಸಿ ಬಾಡಿ ಶೇಪ್‌ಗೆ ಪರ್ಫೆಕ್ಟ್ ಲುಕ್ ಕೊಡಬಹುದು.
ಪಿಯರ್ ಶೇಪ್‌ನ ಮಹಿಳೆಯರು ಮ್ಯೂಲೆಟ್ ಡ್ರೆಸ್‌ನ ಟೇಲರ್ಡ್ ಕಟ್ ಧರಿಸಬಹುದು. ರೆಕ್ಟಾಂಗಲ್ ಶೇಪ್‌ನವರು ಹಿಂದಿನ ಸೈಡ್‌ಮೇಲೆ ಫ್ಲೇಯರ್ಸ್ ಇರುವಂಥದ್ದು ಹಾಗೂ ಬಲ್ಕಿ ಶರೀರದ ಹಾಗೂ ಕಡಿಮೆ ಎತ್ತರದ ಮಹಿಳೆಯರು ಅಸಮಾನ ಮ್ಯೂಲೆಟ್ ಡ್ರೆಸ್, ಹಿಂದೆ ಮತ್ತು ಮುಂದೆ ಉದ್ದದಲ್ಲಿ ಹೆಚ್ಚು ವ್ಯತ್ಯಾಸವಿಲ್ಲದ್ದನ್ನು ಆರಾಮವಾಗಿ ಧರಿಸಬಹುದು.
ಮ್ಯಾಚಿಂಗ್ ಫುಟ್‌ವೇರ್ ಹೈಹೀಲ್
ಫುಟ್‌ವೇರ್ ಮ್ಯೂಲೆಟ್ ಡ್ರೆಸ್‌ನ ಸೌಂದರ್ಯಕ್ಕೆ ಇನ್ನಷ್ಟು ಗರಿಗಳನ್ನು ಮೂಡಿಸುತ್ತದೆ. ಮ್ಯೂಲೆಟ್ ಡ್ರೆಸ್‌ನೊಂದಿಗೆ ಆ್ಯಂಕಲ್ ಲೆಂತ್‌ಸ್ಟ್ರಾಪಿ ಸ್ಯಾಂಡಲ್ ಮತ್ತು ಸ್ಮಾರ್ಟ್ ಬೂಟ್ ಕೂಡ ಆಕರ್ಷಕವಾಗಿ ಕಾಣುತ್ತದೆ ಹಾಗೂ ಟೆರಿಫಿಕ್ ಲುಕ್ ಕೊಡುತ್ತದೆ. ಮ್ಯೂಲೆಟ್ ಡ್ರೆಸ್‌ನೊಂದಿಗೆ ಹೆಚ್ಚು ಚಂಕಿ ಪ್ಲಾಟ್ ಫಾರ್ಮ್ ಅಥವಾ ವೆಜ್ ಹೀಲ್ ಧರಿಸಬೇಡಿ. ಏಕೆಂದರೆ ಅವು ಮ್ಯೂಲೆಟ್ ಡ್ರೆಸ್‌ನ ಎಲಿಗೆಂಟ್ ಲುಕ್‌ನ್ನು ಹಾಳು ಮಾಡುತ್ತವೆ. ಫ್ಲ್ಯಾಟ್ ಬೆಲೆರಿಯನ್ನಂತೂ ಧರಿಸಲೇಬೇಡಿ. ಕಡಿಮೆ ಹೈಟ್ ಇರುವ ಮಹಿಳೆಯರು ಮ್ಯೂಲೆಟ್ ಡ್ರೆಸ್‌ನೊಂದಿಗೆ ಫ್ಲ್ಯಾಟ್ ಫುಟ್‌ವೇರ್ ಧರಿಸುವ ತಪ್ಪು ಮಾಡದಿರಿ.
ಸರಿಯಾದ ಆ್ಯಕ್ಸೆಸರೀಸ್ ಮ್ಯೂಲೆಟ್ ಡ್ರೆಸ್‌ನ ಸೌಂದರ್ಯ ಅರಳಿಸುವ ಕಡೆ ಸರಿಯಾದ ಆ್ಯಕ್ಸೆಸರೀಸ್ ಆಯ್ಕೆ ಮಾಡಿಕೊಳ್ಳಬೇಕು. ತಪ್ಪು ಆ್ಯಕ್ಸೆಸರೀಸ್ ಮ್ಯೂಲೆಟ್ ಡ್ರೆಸ್‌ನ ಸೌಂದರ್ಯ ಮತ್ತು ಅದರ ಕಟ್‌ನಿಂದ ಗಮನ ಹೋಗುತ್ತದೆ. ರೆಡ್ ಪೇರ್ ಆಫ್ ಶೂಸ್ ಮತ್ತು ನಿಯಾನ್ ಬಣ್ಣದ ಕ್ಲಚ್ ಬ್ಲಾಕ್, ಐವರಿ ಅಥವಾ ಸಿಲ್ವರ್, ಮ್ಯೂಲೆಟ್ ಡ್ರೆಸ್‌ನೊಂದಿಗೆ ಆಕರ್ಷಕವಾಗಿರುತ್ತದೆ. ಒಂದು ವೇಳೆ ನೀವು ಪಾರ್ಟಿಗೆ ಹೋಗುತ್ತಿದ್ದರೆ ಮ್ಯೂಲೆಟ್ ಸ್ಕರ್ಟ್‌ನೊಂದಿಗೆ ಗ್ಲಾಮರಸ್ ಟಾಪ್, ಸ್ಲಿಮ್ ಬೆಲ್ಟ್ ಮತ್ತು ಆ್ಯಂಕಲ್ ಲೆಂತ್ ಸ್ಟ್ರಾಪಿ ಸ್ಯಾಂಡಲ್ ಧರಿಸಬಹುದು.
ಮ್ಯೂಲೆಟ್ ಡ್ರೆಸ್‌ಗೆ ಕ್ರಿಯೇಟಿವ್ ಲುಕ್ ಕೊಡಲು ಅದರೊಂದಿಗೆ ಸ್ಕಾರ್ಫ್ ಮತ್ತು ಸ್ಮಾರ್ಟ್ ಜಾಕೆಟ್ ಕ್ಯಾರಿ ಮಾಡಬಹುದು. ಫಾರ್ಮಲ್ ಮ್ಯೂಲೆಟ್ ಡ್ರೆಸ್‌ನೊಂದಿಗೆ ಸ್ಟೇಟ್‌ಮೆಂಟ್ ನೆಕ್‌ಪೀಸ್ ಕ್ಯಾಶುಯಲ್ ಮ್ಯೂಲೆಟ್ ಡ್ರೆಸ್‌ನೊಂದಿಗೆ ಕಲರ್ ಫುಲ್ ಬೀಡ್ಸ್ ನ ಜ್ಯೂವೆಲರಿ ಒಪ್ಪುತ್ತದೆ.
ನೀವು ಇಚ್ಛಿಸಿದರೆ ಮಲ್ಟಿಫಲ್ ಅಥವಾ ಸಿಂಗಲ್ ಸ್ಟಿಂಗ್ಸ್ ನ್ನು ಕ್ಯಾರಿ ಮಾಡಬಹುದು. ಒಂದು ವೇಳೆ ನೀವು ಟೀನೇಜ್ ಅಥವಾ ಕಾಲೇಜ್ ಗರ್ಲ್ ಲುಕ್ ಬಯಸದಿದ್ದರೆ ಪ್ರಿಂಟ್ ಮತ್ತು ಪ್ಯಾಟರ್ನ್ ಮ್ಯೂಲೆಟ್ ಡ್ರೆಸ್‌ನ ಬದಲು ಸಾಲಿಡ್ ಬಣ್ಣಗಳ ಮ್ಯೂಲೆಟ್ ಡ್ರೆಸ್ ಆರಿಸಿಕೊಳ್ಳಿ.
ಲೆಗ್ಸ್ ನ್ನು ಫ್ಲಾಂಟ್ ಮಾಡುವ ಮ್ಯೂಲೆಟ್ ಡ್ರೆಸ್
ಮ್ಯೂಲೆಟ್ ಡ್ರೆಸ್ ಕಾಲುಗಳನ್ನು ಶೋ ಆಫ್ ಮಾಡುವ ಅವಕಾಶ ನೀಡುತ್ತದೆ. ಮುಂದಿನಿಂದ ಸೂಪರ್ ಶಾರ್ಟ್ ಮತ್ತು ಹಿಂದಿನಿಂದ ಉದ್ದವಾಗಿರುವ ಈ ಡ್ರೆಸ್ ನಿಮ್ಮನ್ನು ಯಾವುದೇ ರಾಜಕುಮಾರಿಗಿಂತ ಕಡಿಮೆ ತೋರಿಸುವುದಿಲ್ಲ. ಈ ಡ್ರೆಸ್‌ನಲ್ಲಿ ಕಾಲುಗಳ ಸೌಂದರ್ಯವನ್ನು ಹೆಚ್ಚಿಸಲು ಕಾಲುಗಳಿಗೆ ಶೈನಿ ಲೋಶನ್ ಹಚ್ಚಿಕೊಳ್ಳಬೇಕು. ಉದ್ದವಾದ ಕಾಲುಗಳ ಮೇಲೆ ಈ ಡ್ರೆಸ್ ಬಹಳ ಸುಂದರವಾಗಿ ಕಾಣುತ್ತದೆ ಮತ್ತು ಸ್ಟನ್ನಿಂಗ್ ಲುಕ್ ಕೊಡುತ್ತದೆ. ಮ್ಯೂಲೆಟ್ ಡ್ರೆಸ್ ಲೆಗ್ ಅನ್ನು ಫ್ಲಾಂಟ್ ಮಾಡುವ ಸ್ಮಾರ್ಟ್ ಐಡಿಯಾ ಆಗಿದೆ. ಒಂದು ವೇಳೆ ನಿಮ್ಮ ಕಾಲುಗಳು ಸ್ಪಾಟ್ ಫ್ರೀ ಆಗಿಲ್ಲದಿದ್ದರೆ ಸ್ಕಿನ್ ಕಲರ್‌ನ ಸ್ಟಾಕಿಂಗ್ಸ್ ಧರಿಸಬಹುದು. ಮ್ಯೂಲೆಟ್ ಡ್ರೆಸ್‌ನ ಬೋಲ್ಡ್ ಲುಕ್ಸ್ ಬಗ್ಗೆ ತಿಳಿದುಕೊಂಡ ನಂತರ ಒಂದು ಮ್ಯೂಲೆಟ್ ಡ್ರೆಸ್ ನಿಮ್ಮ ವಾರ್ಡ್ ರೋಬ್ ನಲ್ಲಿದ್ದರೆ ಒಳ್ಳೆಯದೆಂದು ನೀವು ಯೋಚಿಸುತ್ತಿರಬಹುದು.
– ಎನ್. ಕೆ. ಸ್ಮಿತಾ