ತೂಕ ಕರಗಿಸಲು ಹಾಗೂ ಸ್ಲಿಮ್ ಟ್ರಿಮ್ ಆಗಿ ಇರಲು ಬರೀ ಮಹಿಳೆಯರಷ್ಟೇ ಅಲ್ಲ, ಪುರುಷರೂ ಸಹ ಈ ದಿನಗಳಲ್ಲಿ ವಿಧವಿಧವಾದ ಉಪಾಯ ಪ್ರಯೋಗಿಸುತ್ತಿದ್ದಾರೆ. ವಿಶ್ವದೆಲ್ಲೆಡೆ ಡಯೆಟೀಶಿಯನ್ನರು ಇದರ ಬಗ್ಗೆ ಅನೇಕ ರೀತಿಯ ಡಯೆಟ್‌ಫಾರ್ಮುಲಾಗಳನ್ನು ಉಪಯೋಗಿಸುತ್ತಿದ್ದಾರೆ. ಇಲ್ಲಿ ನಾವು ಅಂತಹ ಡಯೆಟ್‌ಗಳ ಬಗ್ಗೆ ತಿಳಿಸುತ್ತಿದ್ದೇವೆ.
ಆಲ್ಕೈನ್ ಡಯೆಟ್
ಆಲ್ಕೈನ್ ಡಯೆಟ್‌ನಲ್ಲಿ ವೇಟ್ ಲಾಸ್ ಪ್ರೋಗ್ರಾಂನ ಆಧಾರದಲ್ಲಿ ಮುಖ್ಯ ರೂಪದಲ್ಲಿ ಕ್ಷಾರೀಯ ಪ್ರಕೃತಿಯ ಆಹಾರ ತಿನ್ನಲು ಒತ್ತಾಯಿಸುತ್ತದೆ. ಇದರಲ್ಲಿ ಬಾಡಿಯ ಪಿ.ಎಚ್. ಬ್ಯಾಲೆನ್ಸ್ 7.35 ನಿಂದ 7.45ರವರೆಗೆ ಸದೃಢವಾಗಿಡಲು ಪ್ರಯತ್ನಿಸಲಾಗುತ್ತದೆ.
ಲಾಭಗಳು : ಆಲ್ಕೈನ್ ಡಯೆಟ್‌ನ ಸಮರ್ಥಕರು ಅದರಿಂದ ಬರೀ ತೂಕ ಮಾತ್ರ ಕಡಿಮೆಯಾಗುವುದಿಲ್ಲ. ಬದಲಾಗಿ ಆರ್ಥ್ರೈಟಿಸ್, ಡಯಾಬಿಟೀಸ್ ಮತ್ತು ಆ ರೀತಿಯ ಕಾಯಿಲೆಗಳಿಂದ ಪರಿಹಾರ ಸಿಗುತ್ತದೆ. ಅಷ್ಟೇ ಅಲ್ಲ, ಈ ಡಯೆಟ್ ಏಜಿಂಗ್‌ನ ಪ್ರಕ್ರಿಯೆಯನ್ನು ಮಂದಾಗಿಡುತ್ತದೆ ಎನ್ನುತ್ತಾರೆ.
ಥಿಯರಿ : ಆಲ್ಕೈನ್ ಡಯೆಟ್‌ನ ಸಮರ್ಥಕರ ಪ್ರಕಾರ ನಮ್ಮ ರಕ್ತ ಒಂದು ಹಂತದವರೆಗೆ ಕ್ಷಾರೀಯ ಪ್ರಕೃತಿಯದಾಗಿರುತ್ತದೆ. ಅದರ ಪಿ.ಎಚ್ ಲೆವೆಲ್ .35 ರಿಂದ 7.45ರ ಮಧ್ಯೆ ಇರುತ್ತದೆ. ನಮ್ಮ ಡಯೆಟ್ ಸಹ ಇದೇ ಪಿ.ಎಚ್. ಲೆವೆಲ್ ನ್ನು ಮೇಂಟೇನ್ ಮಾಡುವಂತೆ ಇರಬೇಕು. ಧಾನ್ಯಗಳು, ಮೀನು, ಮಾಂಸ, ಡೇರಿ ಉತ್ಪನ್ನಗಳು ಇತ್ಯಾದಿ ತಿನ್ನುವುದರಿಂದ ಸಮತೋಲನದಲ್ಲಿ ತೊಂದರೆಯಾಗಿ ಅದರಿಂದ ಪೊಟ್ಯಾಶಿಯಂ, ಮೆಗ್ನೀಶಿಯಂ, ಸೋಡಿಯಂ ಇತ್ಯಾದಿ ಅಗತ್ಯ ಖನಿಜಗಳು ನಷ್ಟವಾಗುತ್ತವೆ. ಈ ಅಸಮತೋಲನದಿಂದ ಶರೀರದಲ್ಲಿ ಕಾಯಿಲೆಗಳ ರಿಸ್ಕ್ ಹೆಚ್ಚುತ್ತದೆ. ತೂಕ ಹೆಚ್ಚಾಗುತ್ತದೆ. ಆದ್ದರಿಂದ ಶೇ.70 ರಷ್ಟು ಆಲ್ಕೈನ್ ಫುಡ್ ತಿನ್ನಬೇಕು ಹಾಗೂ ಶೇ.30ರಷ್ಟು ಆ್ಯಸಿಡ್ ಫುಡ್ ತಿನ್ನಬೇಕು.
ಸೆಕೆಂಡ್ ಒಪೀನಿಯನ್ : ಬ್ರಿಟಿಷ್ ಡಯೆಟಿಕ್ ಅಸೋಸಿಯೇಷನ್‌ನ ರಿಕ್ ಮಿಲರ್ ಹೀಗೆ ಹೇಳುತ್ತಾರೆ, “ಆಲ್ಕೈನ್ ಡಯೆಟ್‌ನ ಸಿದ್ಧಾಂತವೇನೆಂದರೆ, ವಿಶೇಷ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ಶರೀರದ ಪಿ.ಎಚ್. ಬ್ಯಾಲೆನ್ಸ್ ಮೇಂಟೇನ್ ಆಗಿರುತ್ತದೆ. ಆದರೆ ಶರೀರ ತನ್ನ ಪಿ.ಎಚ್. ಬ್ಯಾಲೆನ್ಸ್ ಮೇಂಟೇನ್ ಮಾಡಲು ಡಯೆಟ್‌ನ್ನು ಆಧರಿಸುವುದಿಲ್ಲ ಎಂಬುದೇ ಸರಿ. ಆಲ್ಕೈನ್ ಡಯೆಟ್‌ನಿಂದ ಕ್ಯಾಲ್ಶಿಯಂ, ಕಿಡ್ನಿ ಸ್ಟೋನ್, ಆಸ್ಟೂಯೋಪೋರೋಸಿಸ್ ಮತ್ತು ಏಜಿಂಗ್ ಸಮಸ್ಯೆಗಳಿಂದ ನೆಮ್ಮದಿ ಸಿಗುತ್ತದೆ. ಆದರೆ ಆ್ಯಸಿಡ್ ಪ್ರೊಡ್ಯೂಸಿಂಗ್ ಡಯೆಟ್ ಕ್ರಾನಿಕ್ ಕಾಯಿಲೆಯ ಕಾರಣದಿಂದಾಗಿದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ.
ಮಾನೋ ಮೀಲ್ ಡಯೆಟ್
ಇದರಲ್ಲಿ ಬೆಳಗ್ಗೆ ಅಥವಾ ರಾತ್ರಿಯ ಊಟದಲ್ಲಿ ಬರೀ ಒಂದು ಆಹಾರ ಪದಾರ್ಥ (ಅದೂ ಹಣ್ಣು ಅಥವಾ ತರಕಾರಿ) ಇರುತ್ತದೆ. ನಮ್ಮ ಈಗಿನ ಆಹಾರದಂತೆ ಇದರಲ್ಲಿ ದಾಲ್, ರೈಸ್ ಅಥವಾ ಚಪಾತಿ ಪಲ್ಯ ಇರುವುದಿಲ್ಲ. ಮಾನೋಮೀಲ್ ತೆಗೆದುಕೊಳ್ಳುವವರು ಲಂಚ್‌ಗೆ ಬರೀ ಬಾಳೆಹಣ್ಣು ಮತ್ತು ಡಿನ್ನರ್‌ನಲ್ಲಿ ಬರೀ ಕ್ಯಾರೆಟ್ ಮತ್ತು ಸೇಬನ್ನು ತಿನ್ನಬೇಕು. ಈ ಡಯೆಟ್‌ನ್ನು ಕೆಲವರು 1-2 ವಾರ ಅನುಸರಿಸಿದರೆ, ಕೆಲವರು 6 ತಿಂಗಳರೆಗೆ ಅನುಸರಿಸುತ್ತಾರೆ.
ಲಾಭಗಳು : ಈ ಡಯೆಟ್‌ನ್ನು ಅನುಸರಿಸುವುದು ಬಹಳ ಸುಲಭ. ಇದರಲ್ಲಿ ಯಾವುದೇ ರೀತಿಯ ಕೃತಕ ಆಹಾರ ಸಾಮಗ್ರಿಗಳನ್ನು ಉಪಯೋಗಿಸದಿರುವುದರಿಂದ ಇದೂ ಹೆಲ್ದಿ ಆಗಿರುತ್ತದೆ. ಒಂದೇ ರೀತಿಯ ಆಹಾರ ಸೇವನೆ ಅದರಲ್ಲೂ ಪ್ರಾಕೃತಿಕ ಆಹಾರವಾಗಿದ್ದರೆ ಜೀರ್ಣಾಂಗಗಳು ಹೆಚ್ಚು ಶ್ರಮ ವಹಿಸಬೇಕಾಗಿಲ್ಲ.
ನಷ್ಟ : ತಿಂಗಳಿಗೂ ಹೆಚ್ಚು ಕಾಲ ಬರೀ ಒಂದು ಹಣ್ಣು ಅಥವಾ ತರಕಾರಿಯನ್ನು ಅವಲಂಬಿಸಿದರೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಶರೀರದ ಎನರ್ಜಿಯೂ ಕಡಿಮೆಯಾಗುತ್ತದೆ.
ಗ್ಲೂಟೆನ್ ಫ್ರೀ ಡಯೆಟ್
ಡಯೆಟ್‌ನ ಲೋಕದಲ್ಲಿ ಈ ದಿನಗಳಲ್ಲಿ ಒಂದು ತಾಜಾ ಟ್ರೆಂಡ್ ಬಂದಿದೆ. ಗ್ಲೂಟೆನ್ ಫ್ರೀ ಡಯೆಟ್. ಇದನ್ನು ಪಾಲಿಸುವವರು ಗೋಧಿಯ ಸಹಾರದಿಂದ ದೂರವಿರುತ್ತಾರೆ. ಅವರ ಪ್ರಕಾರ ಗೋಧಿ ಇಲ್ಲದ ಆಹಾರ ಅವರನ್ನು ಹಲವು ಕಾಯಿಲೆಗಳಿಂದ ರಕ್ಷಿಸುವ ಜೊತೆ ಜೊತೆಗೆ ಅವರ ಎನರ್ಜಿ ಲೆವೆಲ್‌ನ್ನು ಇಂಪ್ರೂವ್ ಮಾಡುತ್ತದೆ. ಗ್ಲೂಟೆನ್ ಫ್ರೀ ಡಯೆಟ್‌ನ ಸಮರ್ಥಕರು ಗ್ಲೂಟೆನ್, ಪೌಷ್ಟಿಕಾಂಶಗಳನ್ನು ಶರೀರದಲ್ಲಿ ಹೀರಿಕೊಳ್ಳುವ ಪ್ರಕ್ರಿಯೆಗೆ ಬಾಧೆ ಉಂಟು ಮಾಡುತ್ತದೆಂದು ಹೇಳುತ್ತಾರೆ. ಈಗ ಅನೇಕ ಜನ ಸೀಲಿಯಾಕ್ ಡಿಸೀಸ್‌ಗಳಿಂದ ಕಂಗೆಟ್ಟಿದ್ದಾರೆ. ಇದು ಗ್ಲೂಟೆನ್‌ನಿಂದಾಗಿ ಉಂಟಾಗುವ ಆಟೋ ಇಮ್ಯೂನ್ ಡಿಸ್ ಆರ್ಡರ್ ಆಗಿದೆ. ಅದರಿಂದಾಗಿ ಡಯೇರಿಯ, ತೂಕ ಕಡಿಮೆಯಾಗುವುದು ಮತ್ತು ಆಸ್ಟೂಯೊಪೋರೋಸಿಸ್‌ನಂತಹ ಸಮಸ್ಯೆಗಳಾಗುತ್ತವೆ.
ಜೆನ್ ಡಯೆಟ್ ವೇಟ್
ಮ್ಯಾನೇಜ್‌ಮೆಂಟ್ ಮತ್ತು ಗುಡ್ ಹೆಲ್ತ್ ಗಾಗಿ ನೀವು ಅನೇಕ ರೀತಿಯ ಡಯೆಟ್‌ಗಳ ಹೆಸರು ಕೇಳಿರಬಹುದು. ಆದರೆ ಜಪಾನಿ ಸಿದ್ಧಾಂತ ಕೈಝೆನ್ ಆಧಾರಿತ ಜೆನ್ ಡಯೆಟ್ ಬಗ್ಗೆ ತಿಳಿದಿಲ್ಲ. ಕೈಝೆನ್‌ನ ಅರ್ಥ ಇಂಪ್ರೂವ್ ಮೆಂಟ್. ಇದು ವೇಟ್ ಲಾಸ್ ಪ್ಲ್ಯಾನ್ ಲೈಫ್ ಸ್ಟೈಲ್‌ನ ಲಾಂಗ್ ಟರ್ಮ್ ಓವರ್ ಹಾಲಿಂಗ್ ಆಗಿದೆ. ಅದರಲ್ಲಿ ನಿಮ್ಮ ಆಹಾರವನ್ನು ಅತ್ಯಂತ ತಿಳಿವಳಿಕೆಯಿಂದ ಆರಿಸಿಕೊಂಡು ತಿನ್ನಬೇಕು.
ನಿಮ್ಮ ಆಹಾರ ಪದ್ಧತಿಗಳಲ್ಲಿ ಮಹತ್ವ ಪೂರ್ಣ ಹಾಗೂ ಶಾಶ್ವತ ಬದಲಾವಣೆ ತಂದು ಉದಾಹರಣೆಗೆ ಸಕ್ಕರೆ, ಸಂಸ್ಕರಿತ ಆಹಾರ ಮತ್ತು ಜಿಡ್ಡಿನ ಆಹಾರವನ್ನು ತಿನ್ನದಿರುವುದು ಅಥವಾ ಕಡಿಮೆ ಸೇವಿಸುವುದರಿಂದ ನಿಮ್ಮ ತೂಕ ಕರಗಿಸುವುದರೊಂದಿಗೆ ಆರೋಗ್ಯವಾಗಿರಬಹುದು.
ಶರೀರವನ್ನು ಗೌರವಿಸಿ : ಜೆನ್ ಡಯೆಟ್‌ನಲ್ಲಿ ನಿಧಾನವಾಗಿ ನಿಮ್ಮ ಆಹಾರವನ್ನು ಆನಂದದಿಂದ ಸೇವಿಸಲು ಸಲಹೆ ನೀಡಲಾಗುತ್ತದೆ. ನೀವು ಏನನ್ನು ತಿನ್ನುತ್ತಿದ್ದೀರೆಂದು ಗಮನಿಸಿ, ಚೆನ್ನಾಗಿ ನಿದ್ದೆ ಮಾಡಿ ವಿಶ್ರಾಂತಿ ಪಡೆಯಿರಿ ಎಂದು ಪ್ರೇರೇಪಿಸಲಾಗುತ್ತದೆ.
ನಿಧಾನ ಆದರೆ ಪ್ರಭಾಶಾಲಿ : ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಬಯಸುವವರಿಗೆ ಈ ಡಯೆಟ್ ಸಾಕಷ್ಟು ಪ್ರಭಾವಶಾಲಿಯಾಗಿದೆ. ಇದನ್ನು ಅನುಸರಿಸಿದರೆ ಶಾಶ್ವತವಾಗಿ ವೇಟ್ ಲಾಸ್ ಆಗುತ್ತದೆ. ಆದರೆ ಇದು ಬಹಳ ನಿಧಾನವಾದ ಪ್ರಕ್ರಿಯೆಯಾಗಿದೆ.
– ಡಾ. ಜಮುನ