ಸಮಾನತೆಯ ಯುಗದಲ್ಲಿ ಇಂದಿನ ಮಹಿಳೆ ಅಡುಗೆಮನೆ ಹಾಗೂ ಮಕ್ಕಳ ಜವಾಬ್ದಾರಿಯನ್ನು ಸಂಭಾಳಿಸುವುದಲ್ಲದೆ, ಬದಲಾವಣೆ ಹಾಗೂ ಮನರಂಜನೆಗಾಗಿ ಫೆಸ್ಟಿವ್ ಪಾರ್ಟಿ ಕ್ಲಬ್‌ನ ಸದಸ್ಯರಾಗುತ್ತಿದ್ದಾರೆ. ಪಾರ್ಟಿ ಅಥವಾ ಕ್ಲಬ್‌ಗಳಿಗೆ ಮಹಿಳೆಯರು ಅಲಂಕರಿಸಿಕೊಂಡು ಫ್ಯಾಷನ್ ಪೆರೇಡ್‌ನಲ್ಲಿ ಭಾಗವಹಿಸಲು, ಮಾತುಕಥೆಯಾಡಲು, ಚಾಡಿ ಹೇಳಲು, ಹೊಸ ರುಚಿಗಳನ್ನು ಸವಿಯಲು ತಂಬೋಲಗಳಲ್ಲಿ ಗೆಲ್ಲುವ ಉಪಾಯ ಮಾಡಲು ಮತ್ತು ತಮ್ಮ ಹೊಸ ಸ್ಟೈಲಿಶ್ ಡ್ರೆಸ್ ಮತ್ತು ದುಬಾರಿ ಒಡವೆಗಳನ್ನು ಡಿಸ್ ಪ್ಲೇ ಮಾಡುವ ಅವಕಾಶ ಸಿಗುತ್ತದೆ.
ನಗರದ ಫೆಸ್ಟಿವ್ ಪಾರ್ಟಿಗಳ ಈ ರೂಪ ಸಾಮಾನ್ಯವಾಗಿ ಎಲ್ಲ ಸಣ್ಣ, ದೊಡ್ಡ ಕಾಲೋನಿಗಳಲ್ಲಿ ಪ್ರತಿ ತಿಂಗಳೂ ಕಂಡುಬರುತ್ತದೆ. ಈ ಪಾರ್ಟಿಗಳು ಆಧುನಿಕತೆ ಪರಿಚಯಿಸುವ ಜೊತೆ ಜೊತೆಗೆ ಸ್ಟೇಟಸ್ ಸಿಂಬಲ್ ಮತ್ತು ಹಣ ಸೇರಿಸುವ ಶಾರ್ಟ್ ಕಟ್ ದಾರಿ ಕೂಡ ಆಗಿದೆ. ಇದರಲ್ಲಿ ಪ್ರತಿ ತಿಂಗಳೂ ಒಂದು ನಿಶ್ಚಿತ ಮೊಬಲಗನ್ನು ಕಟ್ಟಿದರೆ ವರ್ಷದ ಕೊನೆಯಲ್ಲಿ ಏಕ ಕಂತಿನಲ್ಲಿ ದೊಡ್ಡ ಮೊತ್ತ ಕೈಗೆ ಸಿಗುತ್ತದೆ. ಊಟ ತಿಂಡಿ, ಹರಟೆ ಮತ್ತು ಮೋಜು ಈ ಪಾರ್ಟಿಗಳ ಪ್ರಮುಖ ಥೀಮ್ ಆಗಿದೆ. ರೊಟೀನ್ ಮತ್ತು ಬೋರ್‌ಯುಕ್ತ ಲೈಫ್‌ನಲ್ಲಿ ಹೊಸತನ ತರಲು ಈ ಪಾರ್ಟಿಗಳು ಉತ್ತಮ ಮಾಧ್ಯಮಗಳಾಗಿವೆ. ಇವುಗಳಲ್ಲಿ ಪಾಲ್ಗೊಂಡು ಮಹಿಳೆಯರು ರಿಫ್ರೆಶ್ ಆಗುತ್ತಾರೆ. ಆದರೆ ಒಂದು ಮಿತಿಯಲ್ಲಿರುವ ಈ ಪಾರ್ಟಿಗಳಿಗೆ ಒಂದು ಹೊಸ ರೂಪ ಕೊಟ್ಟರೆ ಅದರಿಂದ ಪ್ರತೀ ಬಾರಿ ಏನಾದರೊಂದು ಹೊಸದು ಕಲಿಯಬಹುದು.
ಮಹಿಳೆಯರು ಫೆಸ್ಟಿವ್ ಪಾರ್ಟಿಗಳಲ್ಲಿ ಕೆಲವು ವಿಧಾನಗಳನ್ನು ತಮ್ಮದಾಗಿಸಿಕೊಂಡು ಪಾರ್ಟಿಗೆ ಅದ್ಭುತ ರೂಪ ಕೊಟ್ಟು ಅದನ್ನು ರಚನಾತ್ಮಕವಾಗಿಸಬಹುದು.
ಸ್ಪರ್ಧೆಗಳನ್ನು ಆಯೋಜಿಸುವುದು
ಊಟ ತಿಂಡಿ, ಮೋಜು ಇತ್ಯಾದಿ ಎಲ್ಲ ಪಾರ್ಟಿಗಳಲ್ಲೂ ಇರುತ್ತದೆ. ಈ ಬಾರಿ ನಿಮ್ಮ ಪಾರ್ಟಿಯಲ್ಲಿ ಸ್ಪರ್ಧೆಗಳನ್ನು ಆಯೋಜಿಸಿ. ಯಾವುದಾದರೂ ಸ್ವಾದಿಷ್ಟ ಡಿಶ್ ತಯಾರಿಸುವುದು, ಫ್ಲವರ್ ಡೆಕೋರೇಶನ್, ಸೀರೆ ಡೆಕೋರೇಶನ್ ಅಥವಾ ಮೇಕಪ್ ಕೂಡ ಆಗಬಹುದು. ಅವುಗಳಲ್ಲಿ ಪ್ರತಿ ಸ್ಪರ್ಧಿಯೂ ತಮ್ಮ ಟ್ಯಾಲೆಂಟ್‌ಗೆ ಅನುಸಾರ ಪ್ರದರ್ಶನ ತೋರುತ್ತಾರೆ ಮತ್ತು ವಿಜೇತರಿಗೆ ಬಹುಮಾನ ಕೊಡಲಾಗುತ್ತದೆ. ಅವರನ್ನು ಪ್ರೋತ್ಸಾಹಿಸಿದಂತೆಯೂ ಆಗುತ್ತದೆ. ಇದರಿಂದ ಪ್ರತಿ ಬಾರಿ ಏನಾದರೂ ಹೊಸದನ್ನು ಕಲಿಯಬಹುದು ಹಾಗೂ ಸ್ಪರ್ಧಿಗಳಿಗೆ ತಮ್ಮ ಕೌಶಲ್ಯ ತೋರಲು ಅವಕಾಶ ಸಿಗುತ್ತದೆ.
ಟೆಕ್ನಿಕ್ನ ಕೊಡುಕೊಳ್ಳುವಿಕೆ
ಫೆಸ್ಟಿವ್ ಪಾರ್ಟಿಗಳಲ್ಲಿ ನೀವು ಹೊಸ ಟೆಕ್ನಿಕ್‌ಗಳನ್ನು ಪರಸ್ಪರರಿಂದ ಕಲಿಯಬಹುದು. ನಿಮ್ಮ ಬಳಿ ಸ್ಮಾರ್ಟ್ ಫೋನ್ ಇದ್ದು ಅದನ್ನು ಆಪರೇಟ್ ಮಾಡುವುದನ್ನು ಚೆನ್ನಾಗಿ ತಿಳಿದಿದ್ದರೆ ಅದರ ಹೊಸ ಫೀಚರ್ಸ್ ಮತ್ತು ಅದರ ಅಪ್ಲಿಕೇಶನ್‌ಗಳ ಕುರಿತು ಅವುಗಳ ಬಗ್ಗೆ ಏನೂ ತಿಳಿಯದ ಗೆಳತಿಯರಿಗೆ ಮಾಹಿತಿ ಕೊಡಿ. ಇದರಿಂದ ಮನೆಯಲ್ಲೇ ಕುಳಿತು ಬ್ಯೂಟಿ, ಹೆಲ್ತ್ ಮತ್ತು ಫಿಟ್ನೆಸ್ ಬಗ್ಗೆ ಅವರಿಗೆ ಮಾಹಿತಿ ಸಿಗುತ್ತದೆ. ನಿಮ್ಮ ಮನೆಗೆ ಯಾವುದಾದರೂ ಹೊಸ ಕಿಚನ್ ಸ್ಯಾಚೆಟ್ ತಂದಿದ್ದರೆ ಅದರ ಬಗ್ಗೆಯೂ ನಿಮ್ಮ ಗೆಳತಿಯರಿಗೆ ತಿಳಿಸಬಹುದು. ಆಗ ನೀವು ಸ್ಮಾರ್ಟ್ ಅನ್ನಿಸಿಕೊಂಡು ನಿಮ್ಮ ಗೆಳತಿಯರನ್ನೂ ಸ್ಮಾರ್ಟ್ ಮಾಡಬಹುದು.
ಎಕ್ಸ್ ಪರ್ಟ್ರಿಂದ ಕಲಿಯಿರಿ
ಪರಸ್ಪರರ ಟ್ಯಾಲೆಂಟ್ ನ್ನು ಶೇರ್ ಮಾಡಿಕೊಳ್ಳುವುದಲ್ಲದೆ, ನೀವು ಬಯಸಿದರೆ ನಿಮ್ಮ ಕ್ಲಬ್ ಸದಸ್ಯೆಯರಲ್ಲಿ ಯಾವುದಾದರೂ ಕಾಮನ್ ಸಮಸ್ಯೆ ಉದಾಹರಣೆಗೆ ಮಕ್ಕಳ ಹೆಲ್ದಿ ಡಯೆಟ್, ಅವರ ಉತ್ತಮ ಶಿಕ್ಷಣ, ಫಿಟ್ನೆಸ್ ಇತ್ಯಾದಿ ಮಾಹಿತಿಗಳಿಗೆ ಪ್ರತಿ ಬಾರಿ ಒಬ್ಬ ಎತ್ಸ್ ಪರ್ಟ್‌ನ್ನು ಆಮಂತ್ರಿಸಬಹುದು. ಅವರ ಸಲಹೆಯಂತೆ ದಿನನಿತ್ಯದ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಆ ಎಕ್ಸ್ ಪರ್ಟ್‌ಯಾರಾದರೂ ಡಯೆಟೀಶಿಯನ್, ಕೌನ್ಸೆಲರ್, ಬ್ಯೂಟಿ ಎಕ್ಸ್ ಪರ್ಟ್, ಫಿಟ್ನೆಸ್ ಎಕ್ಸ್ ಪರ್ಟ್, ಸೈಕಾಲಜಿಸ್ಟ್ ಯಾರಾದರೂ ಆಗಬಹುದು.
ಹಾಸ್ಪಿಟಲ್ ಔಟಿಂಗ್
ಮಹಿಳೆಯರು ತಮ್ಮ ಒಂದು ಪಾರ್ಟಿಯಲ್ಲಿ ತಮ್ಮ ಸುತ್ತಮುತ್ತಲಿನ ಯಾವುದಾದರೂ ಒಳ್ಳೆಯ ಹಾಸ್ಪಿಟಲ್ ನಲ್ಲಿ ಔಟಿಂಗ್ ಪ್ಲ್ಯಾನ್ ಮಾಡಬಹುದು. ಹೀಗೆ ಮಾಡುವುದರಿಂದ ಆ ಆಸ್ಪತ್ರೆಯಲ್ಲಿ ಯಾವ ಯಾವ ವಿಶೇಷ ಸೌಲಭ್ಯಗಳಿವೆ, ಅವುಗಳನ್ನು ಹೇಗೆ ಉಪಯೋಗಿಸಬಹುದು ಎಂದೆಲ್ಲ ತಿಳಿದುಕೊಳ್ಳಬಹುದು. ಕೆಲವು ಆಸ್ಪತ್ರೆಗಳಲ್ಲಿ ಗರ್ಭಿಣಿಯರು ಹಾಗೂ ನವಜಾತ ಶಿಶುಗಳನ್ನು ನೋಡಿಕೊಳ್ಳಲು ವಿಶೇಷ ಸೌಲಭ್ಯಗಳಿವೆ. ಅಲ್ಲಿ ಅವರಿಗೆ ಪ್ರಸವದ ಪ್ರಕ್ರಿಯೆಯ ಮಾಹಿತಿ ನೀಡಲಾಗುತ್ತದೆ ಹಾಗೂ ನವಜಾತ ಮಗುವನ್ನು ನೋಡಿಕೊಳ್ಳುವುದನ್ನು ಕಲಿಸಲಾಗುವುದು.
ಸಾಮೂಹಿಕ ಸಮಸ್ಯೆಗಳಿಗೆ ಪರಿಹಾರ
ನಾವೆಲ್ಲರೂ ಹೆಚ್ಚುತ್ತಿರುವ ಬೆಲೆಗಳು, ಹೆಚ್ಚುತ್ತಿರುವ ಶಾಲೆಯ ಫೀಸ್, ಸಾಗಿಸುವ ಸಮಸ್ಯೆ, ಸ್ವಚ್ಛತೆಯನ್ನು ಗಮನಿಸದಿರುವುದು ಇತ್ಯಾದಿಗಳನ್ನು ದಿನನಿತ್ಯದ ಜೀವನದಲ್ಲಿ ಎದುರಿಸುತ್ತೇವೆ. ನಿಮ್ಮ ಕ್ಲಬ್‌ನ ಮೂಲಕ ಸಾಮೂಹಿಕ ರೂಪದಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಹುಡುಕಬಹುದು. ನೀವು ಸಾಮೂಹಿಕವಾಗಿ ಶಾಲೆಗಳಿಗೆ ಹೋಗಿ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸ್ಕೂಲ್ ಮ್ಯಾನೇಜ್‌ಮೆಂಟ್‌ನೊಂದಿಗೆ ಮಾತನಾಡಬಹುದು. ನಿಮ್ಮ ವಿಭಾಗದ ಸ್ವಚ್ಛತೆಗಾಗಿ ಸಂಬಂಧಿಸಿದ ವಿಭಾಗದಲ್ಲಿ ದೂರು ನೀಡಬಹುದು.
ಸಂಸದರಿಗೆ ಪತ್ರ ಬರೆಯಿರಿ
ಫೆಸ್ಟಿವ್ ಪಾರ್ಟಿಗೆ ಸಾರ್ಥಕ ಉದ್ದೇಶ ಕೊಡಲು ನಿಮ್ಮ ಗ್ರೂಪಿನ ಮಹಿಳೆಯರ ಜೊತೆ ಸೇರಿ ನಿಮ್ಮ ವಿಭಾಗದ ಸಮಸ್ಯೆಗಳು ಮತ್ತು ಅವುಗಳ ಪರಿಹಾರಕ್ಕೆ ನಿಮ್ಮ ಕ್ಷೇತ್ರದ ಸಂಸದರಿಗೆ ಪತ್ರ ಬರೆಯಬಹುದು. ಸಮಸ್ಯೆಗಳೆಂದರೆ ನಿಮ್ಮ ಏರಿಯಾದ ಪಾರ್ಕಿಂಗ್, ಅಸಾಮಾಜಿಕ ವಿಷಯಗಳು ಮತ್ತು ಸ್ವಚ್ಛತೆ ಇತ್ಯಾದಿಗಳ ಬಗ್ಗೆ ಏನಾದರೂ ಆಗಬಹುದು.
ಸಮಸ್ಯಾ ಸೆಷನ್
ಮೋಜು, ಊಟ ತಿಂಡಿ ಮತ್ತು ಸ್ಪರ್ಧೆಗಳಲ್ಲದೆ ಫೆಸ್ಟಿವ್ ಪಾರ್ಟಿಯಲ್ಲಿ ನಿಮ್ಮ ಗ್ರೂಪಿನ ಮಹಿಳೆಯರ ಕೌಟುಂಬಿಕ, ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸಬಹುದು. ಉದಾಹರಣೆಗೆ ಯಾರಾದರೂ ಮಹಿಳೆಗೆ ಮನೆಯಲ್ಲಿ ನಾದಿನಿ, ವಾರಗಿತ್ತಿ, ಅತ್ತೆ, ಮಾವ ಅಥವಾ ಗಂಡನ ಬಗ್ಗೆ ಬೇಸರವಿದ್ದರೆ ಇತರ ಮಹಿಳೆಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿ ಸಮಸ್ಯೆಗೆ ಸೂಕ್ತ ಪರಿಹಾರ ಸೂಚಿಸಬಹುದು.
ಸಂಪಾದನೆಯ ಮೂಲ
ನಿಮಗೆ ಚಾಕಲೇಟ್ ಮೇಕಿಂಗ್, ಗಿಫ್ಟ್ ಪ್ಯಾಕಿಂಗ್, ನಿಟ್ಟಿಂಗ್ ಇತ್ಯಾದಿ ಗೊತ್ತಿದ್ದರೆ ನಿಮ್ಮ ಪಾರ್ಟಿಯ ಸದಸ್ಯರನ್ನು ನಿಮ್ಮ ಗ್ರಾಹಕರನ್ನಾಗಿ ಮಾಡಿಕೊಳ್ಳಬಹುದು. ಅವರಿಗೆ ಇಷ್ಟವಾದರೆ ಅವರ ನೆಂಟರು, ಮಿತ್ರರಿಗೆಲ್ಲಾ ಹೇಳುತ್ತಾರೆ.
ಸಮಾಜ ಸೇವೆ
ಫೆಸ್ಟಿವ್ ಪಾರ್ಟಿಗೆ ಸಂಬಂಧಿಸಿದ ಮಹಿಳೆಯರು ಸಮಾಜ ಸೇವೆಯ ಭಾವನೆಯನ್ನು ಇಟ್ಟುಕೊಳ್ಳಬಹುದು. ಅವಶ್ಯಕತೆ ಇರುವ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಬಹುದು. ಇಲ್ಲವೇ ಯಾವುದಾದರೂ ಸಂಸ್ಥೆಯೊಂದಿಗೆ ಸೇರಿಕೊಂಡು ನಿರಾಶ್ರಿತ ವೃದ್ಧರಿಗೆ ಸಹಾಯ ಮಾಡಬಹುದು. ಅವರೊಂದಿಗೆ ಸ್ವಲ್ಪ ಕಾಲ ಕಳೆದು ಅವರಿಗೆ ಸಂತಸ ನೀಡಬಹುದು.
ಅನ್ಯಾಯದ ವಿರುದ್ಧ ದ್ವನಿಯೆತ್ತಿ
ಫೆಸ್ಟಿವ್ ಪಾರ್ಟಿಗಳನ್ನು ನಿಮ್ಮ ಧ್ವನಿಯೆತ್ತುವ ಸಾಧನವನ್ನಾಗಿಸಿಕೊಳ್ಳಿ. ಫೆಸ್ಟಿವ್ ಪಾರ್ಟಿಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದ ಘಟನೆಗಳು, ಹೆಚ್ಚುತ್ತಿರುವ ಲೈಂಗಿಕ ಶೋಷಣೆ, ಮಹಿಳೆಯರ ಸುರಕ್ಷತೆ ಇತ್ಯಾದಿಗಳ ಬಗ್ಗೆ ವಿಚಾರ ವಿಮರ್ಶೆ ಮಾಡಬಹುದು. ಅದರಿಂದ ನಿಮ್ಮ ಧ್ವನಿಯೆತ್ತಲು ಆತ್ಮವಿಶ್ವಾಸ ಜಾಗೃತವಾಗುತ್ತದೆ. ಎಲ್ಲರೂ ಒಟ್ಟಿಗೆ ಸೇರಿ ಈ ಸಮಸ್ಯೆಗಳ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸಬಹುದು.
– ಲಲಿತಾ ಗೋಪಾಲ್
ಡಾಗಿ ಪಾರ್ಟಿ
ನಾಯಿಗಳನ್ನು ಸಾಕುವವರು ತಮ್ಮ ನಾಯಿಗಳ ಮೂಡ್‌ನ್ನು ಫ್ರೆಶ್ ಮಾಡಲು ಹಾಗೂ ಅವುಗಳಿಗೆ ಸೋಶಿಯ್ಲ್ ಇಂಟರ್ಯಾಕ್ಷನ್‌ಮಾಡಿಸಲು ಪಾರ್ಟಿಗಳನ್ನು ಆಯೋಜಿಸುತ್ತಿದ್ದಾರೆ. ಹೀಗೆ ಮಾಡುವುದರಿಂದ ಪೆಟ್ಸ್ ಗೆ ಫ್ರೆಂಡ್ಲಿ ವಾತಾವರಣ ಸಿಗುತ್ತದೆ, ಅವುಗಳ ವರ್ತನೆಯಲ್ಲಿ ಬದಲಾವಣೆ ಬರುತ್ತದೆ. ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್‌ನಂತಹ ದೊಡ್ಡ ನಗರಗಳಲ್ಲಿ ಲೇಡೀಸ್‌ಪಾರ್ಟಿಗಳ ಜೊತೆಗೆ ಡಾಗೀಸ್ ಕಿಟಿ ಪಾರ್ಟಿಗಳಿಗೂ ಒಂದು ಹಾಲ್ ಬುಕ್ ಮಾಡಲಾಗುತ್ತಿದೆ. ಅಲ್ಲಿ ಅವು ಇತರ ನಾಯಿಗಳೊಂದಿಗೆ ಸೇರಿ ಎಂಜಾಯ್ ಮಾಡುತ್ತವೆ. ಇದು ನಾಯಿಗಳ ಮೂಡ್‌ನ್ನು ರಿಫ್ರೆಶ್ ಮಾಡುವ ಹೊಸ ಟ್ರೆಂಡ್.