`ಸೇಲ್, ಡಿಸ್ಕೌಂಟ್‌, ಒಂದು ಖರೀದಿಸಿ ಇನ್ನೊಂದು ಪಡೆಯಿರಿ.’ ಇಂತಹ ಸಾಲುಗಳು ನಮಗೆ ಅನೇಕ ಕಡೆ ಓದಲು, ನೋಡಲು ಸಿಗುತ್ತವೆ. ಮೊದಲು ಹಬ್ಬದ ಸಂದರ್ಭದಲ್ಲಿ ಮಾತ್ರ ಇಂತಹ ಡಿಸ್ಕೌಂಟ್‌ ಆಫರ್‌ಗಳು ಕೇಳಿ ಬರುತ್ತಿದ್ದ. ಆದರೆ ಈಗ ಡಿಸ್ಕೌಂಟ್‌ಗಳಿಗಾಗಿ ಹಬ್ಬದ ನಿರೀಕ್ಷೆ ಮಾಡುತ್ತಾ ಕೂತಿರಬೇಕಾದ ಅಗತ್ಯವಿಲ್ಲ. ಏಕೆಂದರೆ ಈಗ ಸೇಲ್‌ನ ಸಂಭ್ರಮ ವರ್ಷವಿಡೀ ಯಾವುದಾದರೊಂದು ಹೆಸರಿನ ಮೇಲೆ ನಡೆಯುತ್ತಿರುತ್ತದೆ.

ಹಬ್ಬಗಳು ಜನರ ಗಮನ ಸೆಳೆಯುವ ಒಂದು ನೆಪ ಅಷ್ಟೆ. ಸೇಲ್‌ನಳೆಂದರೆ ವಾಸ್ತವದಲ್ಲಿ ಹಬ್ಬಗಳ ಹೆಸರಿನಲ್ಲಿ ಬಹುದೊಡ್ಡ ಲಾಭ ಪಡೆದುಕೊಳ್ಳುವ ದಂಧೆಯಾಗಿರುತ್ತದೆ. ಅದು ಸೇಲ್ ಆಗಿರದೆ ಕಂಪನಿಯ ಹೊಸ ತಂತ್ರವೇ ಆಗಿರುತ್ತದೆ. ಅದರನ್ವಯ ತಮ್ಮ ಉತ್ಪಾದನೆಗಳನ್ನು ಮಾರುವ ಒಂದು ತಂತ್ರವಾಗಿರುತ್ತದೆ.

ಬಗೆ ಬಗೆಯ ಆಫರ್ಗಳು

ಇಂದಿನ ದಿನಗಳಲ್ಲಿ ಬೆಲೆ ಏರಿಕೆ ನಾಗರಿಕರನ್ನು ಕಂಗೆಡಿಸಿಬಿಟ್ಟಿದೆ. ಇಂತಹ ಸ್ಥಿತಿಯಲ್ಲಿ ಕಂಪನಿಗಳ ಬಳಿ ಗ್ರಾಹಕರನ್ನು ಆಕರ್ಷಿಸಲು ಯಾವುದೇ ಉಪಾಯಗಳಿಗಾಗಲಿ, ಸ್ಕೀಮುಗಳಿಗಾಗಲಿ ಕೊರತೆ ಇಲ್ಲ.

ಹಲವು ವರ್ಷಗಳ ಕಾಲ ಕೇವಲ ಸೇಲ್ ಹಾಗೂ ಡಿಸ್ಕೌಂಟ್‌ನ ಹೆಸರಿನ ಮೇಲೆ ನಡೆಯುವ ಕಂಪನಿಗಳು ಈಗ ಅವನ್ನು ಇನ್ನಷ್ಟು ಅಪೀಲಿಂಗ್‌ ಮಾಡಲು ಅದರಲ್ಲಿ ಬದಲಾವಣೆ ತಂದಿವೆ. ಹೀಗಾಗಿ ಈಗ ಸೇಲ್‌ಬದಲಿಗೆ ಕ್ಲಿಯರೆನ್ಸ್ ಸೇಲ್, ಮಾನ್ಸೂನ್‌ ಸೇಲ್‌, ವಿಂಟರ್‌ ಸೇಲ್‌, ಪ್ರಿರಿನೋೀಶನ್‌ ಸೇಲ್‌, ಇಂಡಿಪೆಂಡೆನ್ಸ್ ಡೇ ಸೇಲ್ ‌ಹಾಗೂ ಫೆಸ್ಟಿವಲ್ ‌ಸೀಝನ್‌ ಹೆಸರಿನ ಮೇಲೆ ನಡೆಯುವ ಸೇಲ್‌‌ಗಳ ಪಟ್ಟಿ ಬಹು ಉದ್ದವಾಗಿದೆ.

ಈ ರೀತಿ ರಿಯಾಯಿತಿಗಳ ಸಾಕಷ್ಟು ವೆರೈಟಿಗಳು ನಿಮಗೆ ನೋಡಲು ಸಿಗುತ್ತವೆ. 20%, 30%, 50%ನ ರಿಯಾಯಿತಿ ಹೆಚ್ಚುತ್ತ ಹೆಚ್ಚುತ್ತಾ ಈಗ 70ರ ತನಕ ಹೋಗಿ ತಲುಪಿದೆ. ಇದರ ಜೊತೆಗೆ 1 ತೆಗೆದುಕೊಳ್ಳಿ, ಇನ್ನೊಂದು ಉಚಿತ ಎನ್ನುವುದರ ಜೊತೆಗೆ ಆ ಸಂಖ್ಯೆ ಈಗ 2, 3 ಹೀಗೆ 4ರ ತನಕ ತಲುಪಿದೆ. ಫ್ಯಾಷನ್ನಿನ ಹೊಸ ಇತಿಹಾಸ ಸೃಷ್ಟಿ ರಚನೆ ಮಾಡಿರುವುದಾಗಿ ಹೇಳುವ ರೆಡಿಮೇಡ್‌ ಗಾರ್ಮೆಂಟ್‌ ಕಂಪನಿಯೊಂದು ಹೀಗೆ ಜಾಹೀರಾತು ಮಾಡಿತ್ತು, “ಬೆಳಬೆಳಗ್ಗೆ  ಹಾಗೂ ರಾತ್ರಿ ಶಾಪಿಂಗ್‌ ಮಾಡಿ ಹಾಗೂ ಪ್ರತಿಯೊಂದು ಐಟಮ್ ನ ಮೇಲೆ ಫ್ಲ್ಯಾಟ್‌ 50% ರಿಯಾಯಿತಿ ಪಡೆಯಿರಿ,’ ಕಂಪನಿಯ ಈ ಫಾರ್ಮುಲಾ ಹಿಟ್‌ ಆಯ್ತು.

ಕಂಪನಿಯವರು ಹೇಳಿಕೊಳ್ಳುವುದೇನೆಂದರೆ, 8 ಗಂಟೆಯಲ್ಲಿ ಎಷ್ಟು ಮಾರಾಟ ಆಗುತ್ತೊ, ಅಷ್ಟೊಂದು ಇಡೀ ಸೀಝನ್ನಿನಲ್ಲಿಯೇ ಆಗುವುದಿಲ್ಲ. ಫ್ಯೂಚರ್‌ ಗ್ರೂಪ್‌ನ ಹೈಪರ್‌ ಮಾರ್ಕೆಟ್‌ ಚೇನ್‌ ಬಿಗ್‌ ಬಜಾರ್‌ ಪ್ರತಿ ಸಲ ಸ್ವಾತಂತ್ರ್ಯ ದಿನದ ಪ್ರಯುಕ್ತ ಬಹುದೊಡ್ಡ ಉಳಿತಾಯದ ಅವಕಾಶ ನೀಡುತ್ತದೆ. ಆಗ ಉಚಿತ ಉಡುಗೊರೆಗಳಿಂದ ಹಿಡಿದು ಆಕರ್ಷಕ ಆಫರ್‌ಗಳನ್ನು ನೀಡುತ್ತದೆ.

sale-offer

ಹೆಚ್ಚಿದ ಡಿಸ್ಕೌಂಟ್ಕುಗ್ಗಿದ ಗುಣಮಟ್ಟ

ಸಾಮಾನ್ಯವಾಗಿ ಶೇ.90ರಷ್ಟು ಡಿಸ್ಕೌಂಟ್‌ ಕೊಟ್ಟ ಬಳಿಕ ಈ ದೊಡ್ಡ ಬ್ರ್ಯಾಂಡಿನ ಪ್ರಾಫಿಟ್‌ ಮಾರ್ಜಿನ್‌ 200%ಗಿಂತಲೂ ಹೆಚ್ಚಿಗೆ ಇರುತ್ತದೆ. ಹೆಚ್ಚುತ್ತಿರುವ ಹಣದುಬ್ಬರ ಮತ್ತು ಹತ್ತಿಯ ಬೆಲೆಯಲ್ಲಿ ಶೇ.20-25ರಷ್ಟು ಏರಿಕೆ ಕಂಪನಿಗಳಿಗೆ ಬೇರೆ ರೀತಿಯಲ್ಲಿ ಯೋಚನೆ ಮಾಡುವ ಹಾಗೆ ಮಾಡಿದೆ. ಇದರ ಪರಿಣಾಮ ಡಿಸ್ಕೌಂಟ್‌ ಆಫರ್‌ನಲ್ಲಿ ಕೊಡಲಾಗುವ ಬಟ್ಟೆಗಳಿಗಾಗಿ ಗ್ರಾಹಕ ಯಾವ ಲೆಕ್ಕದಲ್ಲಿ ಹಣ ಪಾವತಿಸುತ್ತಾನೋ, ಗುಣಮಟ್ಟ ಅದಕ್ಕೆ ತಕ್ಕಂತೆ ಇರುವುದಿಲ್ಲ.

ಹೆಸರು ಬಹಿರಂಗಪಡಿಸಬಾರದೆಂಬ ಕರಾರಿನ ಮೇರೆಗೆ ಒಂದು ಕಂಪನಿಯ ಅಧಿಕಾರಿ ಹೀಗೆ ಹೇಳುತ್ತಾರೆ. ಒಂದು ಬಟ್ಟೆಗೆ 200 ರೂ. ಮೂಲ ಖರ್ಚು ಬಂದಿರುತ್ತದೆ. ಆದರೆ ಅದಕ್ಕೆ ಮಾಲ್‌‌ನಲ್ಲಿ 1000 ರೂ. ಟ್ಯಾಗ್‌ ಹಾಕಲ್ಪಟ್ಟಿರುತ್ತದೆ. ಒಂದು ವೇಳೆ ಆ ಟ್ಯಾಗ್‌ಬೆಲೆಯ ಮೇಲೆ 40-50% ಡಿಸ್ಕೌಂಟ್‌ ಕೊಟ್ಟರೂ ಕೂಡ ಲಾಭ ಆಗಿಯೇ ಆಗುತ್ತದೆ.

ಕಾಮರ್ಸ್ಸೈಟ್

ಎಲ್ಲಕ್ಕೂ ಮುಂದೆ ತಾಜಾ ಸಮೀಕ್ಷೆಯ ಪ್ರಕಾರ, ಬಹುತೇಕ ಎಲ್ಲಾ ಶಾಪಿಂಗ್‌ ಸೈಟ್‌ಗಳು ಇತ್ತೀಚಿನ ದಿನಗಳಲ್ಲಿ ಡಿಸ್ಕೌಂಟ್‌ನ ಲಾಲಿಪಾಪ್‌ನ್ನು ತಿನ್ನಿಸುವುದರಲ್ಲಿ  ನಾ ಮುಂದೆ  ತಾ ಮುಂದೆ ಎನ್ನುತ್ತವೆ. ಅದು ಸ್ನ್ಯಾಪ್‌ ಡೀಲ್ ‌ಆಗಿರಬಹುದು. ಮಂತ್ರಾ, ಫ್ಲಿಪ್‌ಕಾರ್ಟ್‌ ಇಲ್ಲವೇ ಅಮೆಜಾನ್‌ ಇರಬಹುದು. ಫ್ಲಿಪ್‌ಕಾರ್ಟ್‌ ಅಂತೂ ಕಳೆದ ವರ್ಷದ ದೀಪಾವಳಿಯ ಸಂದರ್ಭದಲ್ಲಿ ಆನ್‌ಲೈನ್‌ಶಾಪಿಂಗ್‌ನ ಇತಿಹಾಸದಲ್ಲಿ ಬಹುದೊಡ್ಡ ಯಶಸ್ಸನ್ನು ಪಡೆಯಿತು. ಅದು ಕೇವಲ 10 ಗಂಟೆಗಳಲ್ಲಿ 600 ಕೋಟಿ ರೂ.ಗಳ ಸರಕುಗಳನ್ನು ಮಾರಾಟ ಮಾಡಿತು. ಈ ವೆಬ್‌ಸೈಟ್‌ಗೆ 100 ಕೋಟಿಗೂ ಹೆಚ್ಚು ಹಿಟ್ಸ್ ದೊರೆತ. ಇದರಿಂದ ಹಲವು ಜನರಿಗೆ ಸಾಕಷ್ಟು ಲಾಭವಾದರೆ, ಮತ್ತೆ ಕೆಲವರು ನಿರಾಸೆ ಅನುಭವಿಸಬೇಕಾಯಿತು.

ಒಂದೆಡೆ ಶರವೇಗದಲ್ಲಿ ಸರಕುಗಳಿಗಾಗಿ ಆರ್ಡರ್‌ಗಳು ದೊರಕುತ್ತಿವೆ. ಇನ್ನೊಂದೆಡೆ ಇದಕ್ಕೆ ಸಂಬಂಧಪಟ್ಟ ಜನರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತಿದೆ. ಜನರ ಅಭಿಪ್ರಾಯದ ಪ್ರಕಾರ, ಕಂಪನಿಯರು ಉದ್ದೇಶಪೂರ್ವಕವಾಗಿ ಸೇಲ್ಗಿಂತಲೂ ಮುಂಚೆ ದರಗಳನ್ನು ಏಕಾಏಕೀ ಹೆಚ್ಚಿಸಿಬಿಡುತ್ತಾರೆ. ಏಕೆಂದರೆ ಡಿಸ್ಕೌಂಟ್‌ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರಬೇಕು. ಹಲವು ಉತ್ಪಾದನೆಗಳ ಬೆಲೆಗಳು ಬದಲಾಗಿದ್ದುದು ಕಂಡುಬಂದರೆ, ಜಾಹೀರಾತಿನಲ್ಲಿ ತೋರಿಸಿದ ವಸ್ತುಗಳು ವೆಬ್‌ಸೈಟ್‌ನಲ್ಲಿ ಮಾಯವಾಗಿದ್ದುದು ಕಂಡುಬಂತು. ಹೋಮ್ ಡೆಲಿವರಿಯ ಸಂದರ್ಭದಲ್ಲಿ ಹಲವು ಕಂಪನಿಗಳು ಒತ್ತಾಯ ಪೂರ್ವಕವಾಗಿ ಹಣ ವಸೂಲು ಮಾಡುವುದು ಕೂಡ ಕಂಡುಬಂದಿದೆ. ಎಷ್ಟೋ ಕಡೆ ವೆಬ್‌ಸೈಟ್‌ ಕ್ರ್ಯಾಶ್‌ ಆಗಿಬಿಟ್ಟರೆ, ಇನ್ನು ಕೆಲವು ಕಡೆ ಪೇಮೆಂಟ್‌ ಬಳಿಕ ಆರ್ಡರ್‌ ಕನ್‌ಫರ್ಮ್ ಆಗಿರಲಿಲ್ಲ.

ಚಿಕ್ಕ ಅಂಗಡಿಗಳೂ ಹಿಂದಿಲ್ಲ

ದೊಡ್ಡ ದೊಡ್ಡ ಕಂಪನಿಗಳು ರಿಯಾಯಿತಿಯ ಲೂಟಿಯಲ್ಲಿ ಮಿಂದೇಳುತ್ತಿದ್ದರೆ ಬೇರೆ ಚಿಕ್ಕ ಕಂಪನಿಗಳು ಏಕೆ ಸುಮ್ಮನಿರುತ್ತವೆ? ಅವು ಕೂಡ ಅದೇ ದಾರಿಯಲ್ಲಿ ಸಾಗುತ್ತಿವೆ. ಗ್ರಾಹಕರ ವರ್ತನೆ ಕುರಿತು ಅಧ್ಯಯನ ನಡೆಸುವ ಏಜೆನ್ಸಿ ಇಂಡೆಕ್ಸನ್‌ ಎನಾಲಿಟಿಕ್ಸ್ ಹೇಳುವುದೇನೆಂದರೆ, ಗ್ರಾಹಕರು ಈಗ ದೊಡ್ಡ ದೊಡ್ಡ  ಬ್ರ್ಯಾಂಡ್‌ಗಿಂತ ಲೋಕಲ್ ಬ್ರ್ಯಾಂಡ್‌ಗಳತ್ತ ಮುಖ ಮಾಡುತ್ತಿದ್ದಾರೆ.

ಸೇಲ್ ‌ಹಿಂದಿನ ರಹಸ್ಯ ಒಂದು ಕೊಂಡುಕೊಳ್ಳಿ ಒಂದು, ಎರಡು ಉಚಿತವಾಗಿ ಪಡೆಯಿರಿ ಎಂಬಂತಹ ಜಾಹೀರಾತು ಎಷ್ಟು ಆಕರ್ಷಕ ಮತ್ತು ಗಮನ ಸೆಳೆಯುವಂತಹದು ಆಗಿರುತ್ತದೊ, ಅದರ ಹಿಂದಿನ ಕಹಿ ಸತ್ಯ ಬೇರೆಯದ್ದೇ ಆಗಿರುತ್ತದೆ.

ಸಾಮಾನ್ಯವಾಗಿ ಈ ತೆರನಾದ ಜಾಹೀರಾತು ಕೊಡುವ ಕಂಪನಿಗಳ ಸರಕಿನ ಬೆಲೆಗಳು 1000 ರೂ. ಗಿಂತ ಕಡಿಮೆ ಇರುವುದಿಲ್ಲ. ಇಂತಹದರಲ್ಲಿ ನೀವು 4ನ್ನು ಆಯ್ದುಕೊಳ್ಳುತ್ತೀರೆಂದರೆ ಅಥವಾ 2ರ ಜೊತೆಗೆ 2ನ್ನು ಪಡೆಯಿರಿ ಎಂಬ ಜಾಹೀರಾತಿನ ಟೆಕ್ನಿಕ್ ಅನ್ವಯ 1 ಸಾವಿರ ರೂ. ಲೆಕ್ಕದಲ್ಲಿ 2 ಶರ್ಟ್‌ಗಳ ಬೆಲೆ 2000 ರೂ. ಆಗುತ್ತದೆ. ಅದಕ್ಕೆ 2 ಉಚಿತ ಎಂದುಕೊಂಡರೆ, ಶರ್ಟಿನ ಬೆಲೆ 500 ರೂ. ಆಯಿತು. ಅದಕ್ಕಿಂತಲೂ ಒಳ್ಳೆಯ ಬೆಲೆಯ ಬಟ್ಟೆಯನ್ನು ನೀವು ಅದಕ್ಕೂ ಕಡಿಮೆ ಬೆಲೆಯಲ್ಲಿ ಬೇಕೆಂದಾಗ ಕೊಂಡುಕೊಳ್ಳಬಹುದು. ಬ್ರ್ಯಾಂಡೆಡ್‌ ಬಟ್ಟೆ ತಯಾರಿಸುವ ಕಂಪನಿಗಳ ವಸ್ತುಗಳು ಶೇ.40-50ರಷ್ಟು ರಿಯಾಯಿತಿಯಲ್ಲಿ ದೊರೆಯುವುದು ಅಪರೂಪವೇ. ಆದರೆ ರಿಯಾಯಿತಿಯ ಹಿಂದಿನ ಉದ್ದೇಶವೇ ಬೇರೆಯಾಗಿರುತ್ತವೆ. ಕಂಪನಿಗಳಿಗೆ ಔಟ್‌ ಆಫ್ ಷ್ಯಾಷನ್‌ ಆಗಿರುವ ಸ್ಟಾಕ್‌ಗಳನ್ನೇ ಸೇಲ್‌‌ನ ಹೆಸರಿನ ಮೇಲೆ ಕ್ಲಿಯರ್‌ ಮಾಡಬೇಕಾಗಿರುತ್ತದೆ.

ಈಗ ರೀಟೇಲ್ ‌ಚೇನ್‌ನಲ್ಲಿ ನಡೆಯುವ ರಿಯಾಯಿತಿಯ ಗಣಿತದ ಬಗ್ಗೆ ಗಮನಿಸಿ. ಒಂದು ರೀಟೇಲ್ ‌ಚೇನ್‌ ಯೋಜನೆಯೊಂದನ್ನು ಶುರು ಮಾಡಿತು. 15 ಕಿ.ಗ್ರಾಂ. ಪೇಪರ್‌ ರದ್ದಿ ಮಾರಾಟ ಮಾಡಿ ಮತ್ತು ಖರೀದಿಗಾಗಿ ಕೂಪನ್ ಪಡೆದುಕೊಳ್ಳಿ ಎಂದಿತ್ತು. ಇದು ಜನರಿಗೆ ಬಹಳ ಇಷ್ಟವಾಯಿತು. ಅವರು ಮನೆಯಿಂದ ರದ್ದಿ ತೆಗೆದುಕೊಂಡು ಹೋದರು. ಆದರೆ ಅಲ್ಲಿಗೆ ತಲುಪಿದ ಬಳಿಕ ಜನರಿಗೆ ವಾಸ್ತವದ ಅರಿವಾಯಿತು. ವಾಸ್ತವದಲ್ಲಿ ನೀವು ಎಷ್ಟು ಮೊತ್ತದ ರದ್ದಿ ತೆಗೆದುಕೊಂಡು ಬಂದಿರುತ್ತೀರೋ, ಅದಕ್ಕೆ ತಕ್ಕಂತೆಯೇ ಕೂಪನ್‌ಗಳು ದೊರೆಯುತ್ತವೆ. ಆ ಕೂಪನ್‌ನ ಮೊತ್ತ ಉಪಯೋಗಕ್ಕೆ ಬರುವುದು, ನೀವು ಆ ಮೊತ್ತದ ನಾಲ್ಕು ಪಟ್ಟು ಖರೀದಿ ಮಾಡಿದಾಗ, ಅದರಲ್ಲೂ ಆಯ್ದ ಕೌಂಟರ್‌ಗಳಲ್ಲಿ ಮಾತ್ರ.

ಹಾಗೆ ನೋಡಿದರೆ ಮಾಲ್‌‌ನಲ್ಲಿ ನಿರ್ವಹಣೆಯ ಖರ್ಚು ಜಾಸ್ತಿ. ಅಂಕಿ ಅಂಶಗಳ ಪ್ರಕಾರ ಮಾಲ್‌ನಲ್ಲಿ ಪ್ರತಿದಿನ ಲಕ್ಷಾಂತರ ರೂ. ನಿರ್ವಹಣೆಗಾಗಿಯೇ ಖರ್ಚು ಮಾಡಬೇಕಾಗುತ್ತದೆ. ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾದ ಮಾಲ್‌ನಲ್ಲಿ ಅದರ ವ್ಯವಸ್ಥಾಪಕರಿಗೆ `ನೋ ಪ್ರಾಫಿಟ್‌ ನೋ ಲಾಸ್‌’ನಲ್ಲಾದರೂ ನಡೆಸಬೇಕಾಗುತ್ತದೆ. ಹೀಗಾಗಿ ಮಾಲ್‌ನ ಒಳಗಡೆಯ ಅಂಗಡಿಯವರೆಗೆ ಗ್ರಾಹಕರನ್ನು ಹೇಗಾದರೂ ಮಾಡಿ ಸೆಳೆಯಬೇಕಾಗಿರುತ್ತದೆ.

– ಸೀಮಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ