ಮದುವೆ ಹಾಗೂ ಮಗು ಕೆರಿಯರ್ಗೆ ಅಡ್ಡಿಯೇನಲ್ಲ

ಯುವತಿಯರ ಎದುರು 2 ದೊಡ್ಡ ತಿರುವುಗಳು ಬರುತ್ತವೆ. ಒಂದು ಮದುವೆಯ ಬಗ್ಗೆ ಹಾಗೂ ಇನ್ನೊಂದು ಮಗುವಿಗೆ ಜನ್ಮ ಕೊಡುವ ಬಗ್ಗೆ. ಇಂದಿನ ಯುವತಿಯರು ನೌಕರಿಯಲ್ಲಿರುವವರು. ನೌಕರಿ ಚಿಕ್ಕದಿರಲಿ, ದೊಡ್ಡದಿರಲಿ ಮದುವೆಯಾಗಿದ್ದಕ್ಕೆ ಅಥವಾ ಮಗುವಾಗಿದ್ದಕ್ಕೆ ನೌಕರಿ ಬಿಡುವುದು ಕಷ್ಟವಾಗುತ್ತದೆ. ಹೇಗೆಂದರೆ ಮದುವೆಯ ನಂತರ ಅಮ್ಮನ ಮನೆ ಬಿಡುವುದು ಅಥವಾ ವಿವಾದದಿಂದಾಗಿ ಗಂಡನ ಮನೆ ಬಿಡುವುದು. ಮದುವೆಗಾಗಿ ಅಥವಾ ಮಕ್ಕಳಿಗಾಗಿ ಕೆರಿಯರ್‌ನ್ನು ಹಾಳು ಮಾಡಿಕೊಂಡರೆ ತಿಂಗಳುಗಟ್ಟಲೆ, ವರ್ಷಗಟ್ಟಲೆ ಕೆಡುಕೆನಿಸುತ್ತದೆ.

ಒಳ್ಳೆಯ ನೌಕರಿ ಇದ್ದು, ಒಳ್ಳೆಯ ಸಂಬಳ ಸಿಗುತ್ತಿದ್ದು, ಪ್ರಮೋಷನ್‌ ಸಿಗುತ್ತಿದ್ದರೆ ಮೇಲಿನ ಎರಡೂ ಸ್ಥಿತಿಗಳು ಹೆಚ್ಚಿನ ನೋವು ತರುತ್ತವೆ. ನೌಕರಿ ಕೊಡುವವರಿಗೆ, ಮದುವೆಯ ನಂತರ ಎಫಿಶಿಯನ್ಸಿ ಹಾಗೇ ಇದ್ದರೆ ಮಹಿಳೆಯರು  ಮದುವೆಯಾದರೆ ಮತ್ತು ಮಕ್ಕಳಿಗೆ ಜನ್ಮ ಕೊಟ್ಟರೆ ಏನೂ ತೊಂದರೆಯಾಗುವುದಿಲ್ಲ. ಈ ಸಮಸ್ಯೆ ಪುರುಷರಿಗೆ ಬರುವುದಿಲ್ಲ. ಈ ಘಟನೆಯ ನಂತರ, ನೌಕರ ಮತ್ತಷ್ಟು ಸದೃಢನಾಗುತ್ತಾನೆ ಎಂದು ಕಂಪನಿಗಳು ತಿಳಿಯುತ್ತವೆ.

ಈ ವಿಕಟ ಸ್ಥಿತಿಗೆ ಮುಖ್ಯ ಕಾರಣ ನಮ್ಮ ಸಾಮಾಜಿಕ ವ್ಯವಸ್ಥೆ ಹಾಗೂ ಆಲೋಚನೆ. ಮದುವೆಯ ನಂತರ ಸಾಮಾನ್ಯವಾಗಿ ಹುಡುಗಿಯರು ಧಾರ್ಮಿಕ ಹಾಗೂ ಸಾಮಾಜಿಕ ಲೋಕಗಳಲ್ಲಿ ಹೆಚ್ಚು ಸಿಕ್ಕಿಕೊಳ್ಳುತ್ತಾರೆ. ಅವರು ಬಳೆ, ಮಂಗಳಸೂತ್ರ ಧರಿಸಿ ಕುಂಕುಮ ಇಟ್ಟುಕೊಂಡು ಆಫೀಸಿಗೆ ಹೋಗತೊಡಗುತ್ತಾರೆ. ಇಡೀ ದಿನ ವೈವಾಹಿಕ ಬಂಧನ ಅವರ ತಲೆಯ ಮೇಲೆ ಹೇರಲ್ಪಟ್ಟಿರುತ್ತದೆ. ಅವರ ಮೊಬೈಲ್‌ಗಳಲ್ಲಿ ಸ್ನೇಹಿತೆಯರ ಹೆಸರುಗಳು ಕಡಿಮೆಯಾಗಿ ಅತ್ತೆ, ನಾದಿನಿ, ಅತ್ತಿಗೆಯರ ಕರೆಗಳು ಹೆಚ್ಚು ಬರತೊಡಗುತ್ತವೆ.

ಮಗುವಾದ ಮೇಲಂತೂ ಅವರು ಶಕುನ, ರೀತಿ ರಿವಾಜುಗಳು, ಉಡುಪುಗಳ ಬಗ್ಗೆ ಉದಾಸೀನತೆ ಬಿಟ್ಟು ಅವಕ್ಕೆ ಇನ್ನೂ ಹೆಚ್ಚಿನ ಗಮನ ಕೊಡತೊಡಗುತ್ತಾರೆ. ಆ ದಿನಗಳು ಅಫೀಸಿನ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದಿಲ್ಲ. ಮತ್ತೆ ಅಫೀಸಿಗೆ ಮರಳಿದಾಗ ಕೆಲಸದ ಅರ್ಧ ಸಮಯ ಮಕ್ಕಳ ಬಗ್ಗೆ ಚಿಂತಿಸುತ್ತಿರುತ್ತಾರೆ. ಆಮೇಲೆ ಮದುವೆ ಹಾಗೂ ಮಕ್ಕಳು ತಮ್ಮ ಕೆರಿಯರ್‌ಗೆ ಅಡ್ಡಿಯಾಗುತ್ತಿವೆ ಎಂದು ಗೊಣಗುತ್ತಾರೆ.

ಮದುವೆ ಹಾಗೂ ಮಕ್ಕಳಿದ್ದರೂ ಪ್ರಕೃತಿಯ ಎಲ್ಲ ಜೀವಿಗಳೂ ತಮ್ಮ ಜೀವನವನ್ನು ಹಿಂದಿನಂತೆಯೇ ನಡೆಸುತ್ತಾರೆ. ನಮ್ಮಲ್ಲಿ ಧರ್ಮ ಮಹಿಳೆಯರ ಮೇಲೆ ರೀತಿ ರಿವಾಜುಗಳನ್ನು ಹೇರಿದೆ. ತಮ್ಮನ್ನು ತಾವು ಗಮನಿಸಿಕೊಳ್ಳುವ ಮಕ್ಕಳನ್ನು ಹೇಗೆ ಪಾಲಿಸಬೇಕೆಂದು ಹಗಲು ರಾತ್ರಿ ಉಪದೇಶಿಸಲಾಗುತ್ತದೆ. ತಂದೆ ತಾಯಿಯರ ಸೇವೆ ಮಾಡು, ಗುರುಗಳ ಪಾದದಡಿಯಲ್ಲಿ ಕುಳಿತುಕೊ, ಪತಿಯನ್ನು ಗೌರವಿಸು, ದಾನ ಮಾಡು, ಮಕ್ಕಳನ್ನು ಗಮನಿಸು ಇತ್ಯಾದಿ ಆದೇಶಗಳನ್ನು ಒಟ್ಟಿಗೆ ಸೇರಿಸಿ ಕಾಕ್‌ಟೇಲ್ ‌ಮಾಡಿ ಒಂದೇ ಉಸಿರಿನಲ್ಲಿ ಕುಡಿಸಲಾಗುತ್ತದೆ. ಮಹಿಳೆಯರಿಗೆ ಕೆರಿಯರ್‌ ಬಗ್ಗೆ ಯೋಚಿಸು ಎಂದು ಯಾರೂ ಹೇಳುವುದಿಲ್ಲ.ಮದುವೆ ಮತ್ತು ಮಗು ಕೆರಿಯರ್‌ನಲ್ಲಿ ಎಂದಿಗೂ ಅಡ್ಡಿಯಾಗುವುದಿಲ್ಲ. ಒಂದುವೇಳೆ ಮಹಿಳೆಯರು ರಜೆಯಲ್ಲಿದ್ದೂ ಮನಸ್ಸನ್ನು ಸಂಪೂರ್ಣವಾಗಿ ಕೆಲಸದ ಮೇಲೆ ಇಟ್ಟರೆ, ಹಣ ಸಿಗದಿದ್ದರೂ ಅವರು ಫೋನ್‌ ಮೂಲಕ ಕೆಲಸ ಮಾಡುತ್ತಿರಬಹುದು. ಅವಕಾಶ ಸಿಕ್ಕಾಗ 1-2 ಗಂಟೆ ಆಫೀಸಿಗೆ ಬಂದು ಕೆಲಸ ಮಾಡಬಹುದು. ಅವರು ಆಫೀಸಿನಲ್ಲಿ ಇಲ್ಲವೆಂದು ಯಾರಿಗೂ ಭಾಸವಾಗುವುದಿಲ್ಲ. ಆಫೀಸಿನಲ್ಲಿ ಅತ್ತೆಯ ಮಾತು ಕೇಳಿಸಿಕೊಂಡಂತೆ ರಜೆಯಲ್ಲಿ ಮನೆಯಲ್ಲಿಯೂ ಬಾಸ್‌ ಅಥವಾ ಸಹೋದ್ಯೋಗಿಯ ಮಾತನ್ನು ಕೇಳಿಸಿಕೊಂಡರೆ ತಪ್ಪೇನು?

ಮದುವೆ ಮತ್ತು ಮಗುವನ್ನು ಹೊರೆಯೆಂದುಕೊಳ್ಳಬೇಡಿ. ನಿಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಿಕೊಳ್ಳಿ. ಕೆರಿಯರ್‌ ತಾನಾಗಿಯೇ ಹೊಳೆಯತೊಡಗುತ್ತದೆ. ಯಶಸ್ವಿ ಕುಟುಂಬ ನಿಮ್ಮಿಂದ 24 ಗಂಟೆಗಳು ಗಮನವನ್ನು ಕೋರಿದರೆ, ಯಶಸ್ವಿ ಕೆರಿಯರ್‌ ಕೂಡ ನೀವು 24 ಗಂಟೆ ಲಭ್ಯವಿರಬೇಕೆನ್ನುತ್ತದೆ. 5 ಗಂಟೆಯ ನಂತರ ಮನಸ್ಸು ಆಫೀಸಿನ ಹೊರಗೆ ಎಂಬ ಆಲೋಚನೆ ಇಟ್ಟುಕೊಳ್ಳಬೇಡಿ. ಕೆರಿಯರ್‌, ಮದುವೆ ಮತ್ತು ಮಕ್ಕಳು ಎಲ್ಲ ಒಟ್ಟಿಗೆ ಸಾಗಬಹುದು.

ಸಮತೋಲನ ಬಿಗಡಾಯಿಸಿದರೆ ಸಮಸ್ಯೆ ಹೆಚ್ಚುತ್ತದೆ

ಭಾರತದಲ್ಲಿ ಹುಡುಗಿಯರ ಕೊರತೆ ಇದೀಗ ದೊಡ್ಡದಾಗಿ ಕಾಣಿಸುತ್ತಿದೆ. ಎಷ್ಟೋ ಪ್ರದೇಶಗಳಲ್ಲಿ ಹೊರಗಿನ ಪ್ರದೇಶದಿಂದ ಹೆಂಡತಿಯರನ್ನು ಖರೀದಿಸಿ ತರಲಾಗುತ್ತಿದೆ. ಡೆಲ್ಲಿ ಪ್ರೆಸ್‌ನ `ಸರಸ್‌ ಸಲಿಲ್‌’ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ಒಂದು ವರದಿಯ ಪ್ರಕಾರ, ಹರಿಯಾಣದ ಒಂದು ಹಳ್ಳಿಯಲ್ಲಿ ಹಲವಾರು ಹೆಂಗಸರೊಂದಿಗೆ ಮಾತನಾಡಿದ ನಂತರ ಬೇರೆ ಪ್ರದೇಶದಿಂದ ಬಂದಿದ್ದ ಹೆಂಗಸರಿಗೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು, ಆದರೆ ಅಂಥವರ ತವರಿನವರಿಗೆ  ವರದಕ್ಷಿಣೆ ಕೊಡಬೇಕಾದ ಕಷ್ಟವೇನೂ ಆಗಲಿಲ್ಲ.

ಅಮೆರಿಕಾದಲ್ಲಿ ಇದೀಗ ಬೇರೆ ತರಹದ ಸಮಸ್ಯೆ ಎದುರಾಗಿದೆ. ಅಲ್ಲಿ 25-35 ವರ್ಷದ ಪದವೀಧರರ ಕೊರತೆ ಕಾಡುತ್ತಿದೆ. 100 ಹುಡುಗಿಯರ ಹಿಂದೆ 85 ಹುಡುಗರು ಸುತ್ತುವ ಪರಿಸ್ಥಿತಿ ಬಂದಿದೆ. ಎಷ್ಟೋ ಹುಡುಗಿಯರಿಗೆ ಯಾವುದೋ ಒಂದು ಸಂಬಂಧವನ್ನು ಒಪ್ಪಿ ಅನಿವಾರ್ಯ ಮದುವೆ ಆಗಬೇಕಾಗಿದೆ ಅಥವಾ ಒಂಟಿಯಾಗಿಯೇ ಇರಬೇಕಾಗುತ್ತದೆ. ಅಮೆರಿಕಾದಲ್ಲಿ ಶ್ವೇತರಲ್ಲದ ಕಪ್ಪು ಜನರನ್ನು ಖಾಸಗಿ ಕಂಪನಿಗಳು ನಡೆಸುತ್ತಿರುವ ಜೇಲಿಗೆ ಕೆಟ್ಟ ರೀತಿಯಲ್ಲಿ ದೂಡಲಾಗುತ್ತಿದೆ ಹಾಗೂ ಇದೊಂದು ಭಾರಿ ಭಯಾನಕ ಷಡ್ಯಂತ್ರವಾಗುತ್ತಿದೆ. ಈ ಕಾರಣದಿಂದ ಹೆಣ್ಣುಮಕ್ಕಳು ಮದುವೆಯಿಲ್ಲದೆ ಕೊರಗುವಂತಾಗಿದೆ, ಜೇಲು ಸೇರಿದ ಹುಡುಗರು ಕೈತಪ್ಪಿದ್ದರಿಂದ ಅವರು ಅವಿವಾಹಿತರಾಗೇ ಉಳಿಯುವಂತಾಗಿದೆ.

ಬಿಳಿಯರಲ್ಲಿ ಹುಡುಗಿಯರಿಗೆ ಉನ್ನತ ಶಿಕ್ಷಣ ಅತಿ ದುಬಾರಿ ಆಗುತ್ತಿರುವ ಕಾರಣ ಕಾಲೇಜು ಓದನ್ನು ಕೈಬಿಡಬೇಕಾಗಿದೆ ಹಾಗೂ ಬಿಳಿಯ ಹುಡುಗಿಯರು ಈ ರೀತಿ ಅರೆಬರೆ ಕಲಿತ ಹುಡುಗರನ್ನು ಮದುವೆ ಆಗೋಲ್ಲ. ಅಂಥವರ ಭವಿಷ್ಯದ ಗ್ಯಾರಂಟಿ ಇರದು.

ಪ್ರಕೃತಿ ತನ್ನ ಸಮತೋಲನ ಕಾಯ್ದುಕೊಳ್ಳಲು ಏನಾದರೂ ಮಾಡುತ್ತಿರುತ್ತದೆ. ನೀವು ಎಂಥದೇ ನಿರ್ಧಾರ ಕೈಗೊಳ್ಳಿ, ಯಾವುದೇ ನೀತಿ ಅನುಸರಿಸಿ, ಕೊನೆಯಲ್ಲಿ ಸಮತೋಲನ ಬಿಗಡಾಯಿಸಿದರೆ ಸಮಸ್ಯೆ ಕಗ್ಗಂಟಾಗುತ್ತದೆ.

ಹುಡುಗಿಯರಿಗೆ ಜೀವನ ನಡೆಸಲು ಯೋಗ್ಯ ಗಂಡ ಸಿಗಬೇಕಾದುದು ಒಂದು ಪ್ರಾಕೃತಿಕ, ಜೈವಿಕ ಹಾಗೂ ಸಾಮಾಜಿಕ ಅವಶ್ಯಕತೆಯಾಗಿದೆ. ಧರ್ಮ, ಸಮಾಜ ಮತ್ತು ಕಾನೂನು ಅನಗತ್ಯವಾಗಿ ಇದರಲ್ಲಿ ಮೂಗು ತೂರಿಸಿ ಪ್ರಾಕೃತಿಕ ಸಮತೋಲನವನ್ನು ಹಾಳು ಮಾಡುವ ಹುನ್ನಾರ ನಡೆಸುತ್ತವೆ. ಒಂದು ಪಕ್ಷ ಹುಡುಗರು ಕಡಿಮೆ ಆದರೆ, ಅವಿವಾಹಿತ ತಾಯಂದಿರು ಹೆಚ್ಚಾಗುತ್ತಾರೆ. ತಂದೆ ಇರದ ಕುಟುಂಬಗಳು ಹೆಚ್ಚುತ್ತವೆ. ಇದನ್ನೆಲ್ಲ ಯೋಚಿಸಲಿಕ್ಕೂ ಹೋಗದೆ ಅಮೆರಿಕಾ ವಿವಾಹಪೂರ್ವ ಸೆಕ್ಸ್ ಗೆ ಮಾನ್ಯತೆ ನೀಡಿಬಿಟ್ಟಿತು, ಆದರೆ ವಿವಾಹದಂಥ ಜವಾಬ್ದಾರಿ ನಿರ್ವಹಿಸುವ ಹುಡುಗರು ಅಲ್ಲಿ ಯಾರೂ ಸಿಗುತ್ತಿಲ್ಲ.

ನಮ್ಮಲ್ಲಿ ಹುಡುಗರ ಸಂಖ್ಯೆ ಹೆಚ್ಚುತ್ತಿದೆ, ಅಂತೂ ಇಂತೂ ಹೇಗೋ ಮದುವೆಯಾಗಿ ಜೀವನ ನಡೆಸುತ್ತಾರೆ. ಅಮೆರಿಕಾದಲ್ಲಿ ಡಿಗ್ರಿ ಪಡೆದ ಹುಡುಗಿಯರು, ಬ್ಲೂ ಕಾಲರ್ಡ್‌ ಪತಿಯನ್ನು ಹೊಂದುವುದು ಪ್ರಾಕೃತಿಕ ಅವಶ್ಯಕತೆ ಎಂದುಕೊಳ್ಳುತ್ತಾರೆ. ಇದು ಮುಂದೆ ಬೊಂಬಾಟ್‌ ಸ್ಥಿತಿ ಆಗಲಿದೆ. ಬಹುಶಃ ಮುಂದೆ ಭಾರತೀಯ ಯುವಕರಿಗೆ ಅಮೆರಿಕನ್‌ ವೀಸಾ ದೊರಕುವುದು ಅಲ್ಲಿನ ಹುಡುಗಿಯರನ್ನು ಮದುವೆಯಾದರೆ ಮಾತ್ರ ಎಂಬಂತಾಗಬಹುದು, ಇದು ಹೊಸ ಬಗೆಯ ಎಕ್ಸ್ ಪೋರ್ಟ್‌ ಇಂಪೋರ್ಟ್‌ವ್ಯವಹಾರಕ್ಕೆ ನಾಂದಿಯಾಗಬಹುದು.

ಮೂಢನಂಬಿಕೆಯನ್ನು ವಿಜೃಂಭಿಸುವ  ಹೊಸ ವಿಧಾನ

ವಾಟ್ಸ್ ಆ್ಯಪ್‌ನಲ್ಲಿ ಎಸ್‌.ಎಂ.ಎಸ್‌ಗಳನ್ನು ಅತ್ತಿತ್ತ ಫಾರ್ವರ್ಡ್ ಮಾಡಲಾಗುತ್ತಿದೆ. ಅದರಲ್ಲೇನಿದೆ ಅಂತೀರಾ? ಸಾಯಿಬಾಬಾರನ್ನು ರಾತ್ರಿ ಕನಸಿನಲ್ಲಿ ಕಂಡಿದ್ದರಿಂದ ಒಬ್ಬ ಹೆಂಗಸಿನ ಕಾಯಿಲೆ ಗುಣವಾಯಿತಂತೆ! ಆ ಹೆಂಗಸಿಗೆ ಮಾರನೇ ಬೆಳಗ್ಗೆ ಇಂಗ್ಲಿಷ್‌ನಲ್ಲಿ ಬರೆಯಲಾಗಿದ್ದ ಒಂದು ಚೀಟಿ ಸಿಕ್ಕಿತು, ಒಂದು ರೀತಿಯ ತಪ್ಪಾದ ಆಂಗ್ಲ ವಾಕ್ಯದ ಪೋಸ್ಟ್ ನ್ನು ಅಂಧವಿಶ್ವಾಸಿಗಳಾದ ಭಕ್ತರು, ತಾವು ಓದುಬರಹ ಬಲ್ಲವರೆಂದು ಹೇಳಿಕೊಳ್ಳುವವರೂ ಸಹ, ಸ್ಮಾರ್ಟ್‌ ಫೋನ್‌ ತೆಗೆದುಕೊಂಡು ನಿಸ್ಸಂಕೋಚವಾಗಿ ಇತರರಿಗೆ ಫಾರ್ವರ್ಡ್ ಮಾಡುತ್ತಾರೆ, ಏಕೆಂದರೆ ಯಾರು ಇದನ್ನು ಡಿಲಿಟ್‌ ಮಾಡುತ್ತಾರೋ ಅವರು ಕಷ್ಟಕ್ಕೆ ಸಿಲುಕುತ್ತಾರೆ ಎಂದು ಅದರಲ್ಲಿ ನಮೂದಿಸಲಾಗಿತ್ತು.

ಮೂಢನಂಬಿಕೆ ಎಂಬುದು ಯಾವ ರೀತಿ ಜನರ ಮನದಲ್ಲಿ ಬೇರೂರಿ, ಸೋಶಿಯಲ್ ಮೀಡಿಯಾ ಮೂಲಕ ಎಲ್ಲೆಡೆ ಹರಡುತ್ತಿದೆ ಎಂದರೆ, ಜನ ತಮ್ಮ ತರ್ಕ ವಿವೇಕಗಳನ್ನು ಬಳಸುವುದನ್ನೇ ಮರೆಯತೊಡಗಿದ್ದಾರೆ. ವಾಟ್ಸ್ ಆ್ಯಪ್‌ ಅಥವಾ ಫೇಸ್‌ ಬುಕ್‌ ಕೇವಲ ತಮ್ಮ ಬಳಿ ಇರುವ ವಿಷಯವನ್ನು ಇತರರಿಗೆ ಹಂಚುವ ಪ್ಲಾಟ್‌ ಫಾರ್ಮ್ ಅಷ್ಟೆ. ಏಕೆಂದರೆ ಸ್ವಂತ ಬುದ್ಧಿ ಬಳಸಿ ಜನ ವಿಚಾರ ತಿಳಿಸಲು ಹಿಂಜರಿಯುತ್ತಾರೆ. ಅಂಥವರಿಂದ ಇಂದಿನ ಯುಗದಲ್ಲಿ ಇಂಗ್ಲಿಷ್‌ ಬಿಡಿ, ತಮ್ಮ ಮಾತೃಭಾಷೆಯಲ್ಲೇ ಸರಿಯಾದ ವ್ಯಾಕರಣಬದ್ಧ ವಾಕ್ಯ ರಚಿಸಲಾಗದು.ಇಂಥ ಪರಿಸ್ಥಿತಿಯಲ್ಲಿ ಕೆಲವು ಯೋಗ್ಯರು ಮಾತ್ರವೇ ತಮ್ಮ ವಿಚಾರವನ್ನು ಹೇಳಬಲ್ಲರು. ಅಂಥವರಲ್ಲಿ ಧರ್ಮಪ್ರಚಾರಕರು ಎಲ್ಲರಿಗಿಂತ ಹೆಚ್ಚು, ಏಕೆಂದರೆ ಅದರಿಂದ ಅವರಿಗೆ ಆರ್ಥಿಕ ಲಾಭ ಉಂಟು. ಧರ್ಮದ ಮಾರ್ಕೆಟಿಂಗ್‌ನ ಒಂದು ಮೂಲ ಸಿದ್ಧಾಂತವೆಂದರೆ, ತಮಗಾಗಿ ಎಂದೂ ಏನೂ ಕೇಳಬಾರದು. ನನ್ನ ಮೇಲಲ್ಲ, ಭಗವಂತನ ಮೇಲೆ ಭರವಸೆ ಇಡಿ. ನನಗೆ ಬೇಡ, ಸುಯೋಗ್ಯರಿಗೆ ದಾನ ಮಾಡಿ, ಸಂಕಟ ದೂರ ಮಾಡಿಕೊಳ್ಳಲು ನನ್ನ ಬಳಿ ಬರುವ ಬದಲು ಯೋಗ್ಯ ಪುರೋಹಿತರು, ಪಾದ್ರಿಗಳ ಬಳಿ ಹೋಗಿ ಎನ್ನುತ್ತಿರುತ್ತಾರೆ.

ಧರ್ಮದ ದಲ್ಲಾಳಿಗಳಿಗೆ ತಾವು ಅದನ್ನು ಮಾಡದಿದ್ದರೆ ಬೇರೆಯವರು ಅದನ್ನು ವೈಭವೀಕರಿಸಿ ಭಕ್ತರೆಂಬ ಗ್ರಾಹಕರನ್ನು ಸೆಳೆದುಕೊಳ್ಳುತ್ತಾರೆ ಎಂದು ಗೊತ್ತು. ಯಾಚಕರ ದೃಷ್ಟಿಯಿಂದ ವ್ಯವಹರಿಸುತ್ತಾ, ಪೊಳ್ಳು ಭರವಸೆಗಳನ್ನು ನಂಬುತ್ತಾರೆಂದೂ ಗೊತ್ತು. ಸಾಯಿಬಾಬಾರ ಈ ಪೋಸ್ಟ್ ಸಹ ಅಂಥದ್ದೇ. ಇದರಲ್ಲಿ ಸೆಂಡರ್‌ ತನ್ನ ಹೆಸರು, ವಿಳಾಸ ಹೇಳಿಲ್ಲ. ಎಲ್ಲಿ ದಾನ ಕೊಡಬೇಕು ಎಂದೂ ಹೇಳಿಲ್ಲ, ಸಾಯಿಬಾಬಾ ಪೂಜೆಗಾಗಿ ಮಂದಿರಕ್ಕೆ ಹೋಗಬೇಕೆಂದೂ ಹೇಳಿಲ್ಲ. 10 ಮಂದಿ ಫ್ರೆಂಡ್ಸ್ ಗೆ ಇದನ್ನು ಫಾರ್ವರ್ಡ್ ಮಾಡಬೇಕೆಂಬುದರ ಅರ್ಥ, ಗ್ರಾಹಕರು ಸಿಕ್ಕಿಬಿದ್ದರೆಂದೇ! 10 ಮಂದಿಗೆ ಈ ಮೆಸೇಜ್‌ ಫಾರ್ವರ್ಡ್ ಮಾಡಿದವನು ಹತ್ತಿರದ ಸಾಯಿಮಂದಿರಕ್ಕೆ ಹೋಗಿ ಕಾಣಿಕೆ ಸಲ್ಲಿಸಿ, ಜೇಬು ಹಗುರ ಮಾಡಿಕೊಳ್ಳುತ್ತಾನಷ್ಟೆ. ಹೀಗೆ ಪೋಸ್ಟ್ ಮಾಡಿದನು, ಈ ಮೂಢನಂಬಿಕೆ ಇನ್ನಷ್ಟು ಹೊಳಪಿನಿಂದ ಬೆಳಗಿದಷ್ಟೂ ತನಗೆ ಹೆಚ್ಚಿನ ಲಾಭ ಬರುತ್ತದೆಂದು ಹಿಗ್ಗುತ್ತಾನೆ. ಸೋಶಿಯಲ್ ಮೀಡಿಯಾದಲ್ಲಿ ಇಂದು ಕಲಿತು ವಿದ್ಯಾವಂತರೆನಿಸಿದರು, ತಮ್ಮ ತರ್ಕ ಮುಂದಿಡುವರು, ವೈಜ್ಞಾನಿಕ ದೃಷ್ಟಿಕೋನ ಹೊಂದಿರುವುದಾಗಿ ಹೇಳುವವರು ಎಲ್ಲರೂ ಈ ನಿಟ್ಟಿನಲ್ಲಿ ಒಂದಾಗಿ ಇಂಥ ಮೂಢನಂಬಿಕೆಯ ಸಂದೇಶಗಳನ್ನು ವಿಜೃಂಭಿಸುತ್ತಾರೆ. ಈ ಹಾದಿಯಲ್ಲಿ ಸಾಗುವುದೇ ಸರಳವೆಂದು ಭಾವಿಸುತ್ತಾರೆ. ಈ ಮಾನಸಿಕತೆಗೆ ಸಮೂಹಸನ್ನಿ ಎಂದು ಹೆಸರು. ಧರ್ಮದ ಹೆಸರಿನಲ್ಲಿ ಅನಾಚಾರ, ಶೋಷಣೆಗಳಿಗೆ ಈ ಜಡಸ್ವಭಾವವೇ ಮೂಲ. ಸೋಶಿಯಲ್ ಮೀಡಿಯಾ ಹಾಗೂ ಸ್ಮಾರ್ಟ್‌ ಫೋನ್ ಇದನ್ನು ಕಾಳ್ಗಿಚ್ಚಿನಂತೆ ಹಬ್ಬಿಸುತ್ತಿವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ