ಪ್ರತಿ ವೆಡ್ಡಿಂಗ್‌ ಸೀಸನ್‌ನಲ್ಲಿ ಫ್ಯಾಷನ್‌ ಬಹಳಷ್ಟು ಬದಲಾಗುತ್ತದೆ. ಅದು ಬ್ರೈಡಲ್ ವೇರ್‌, ಜ್ಯೂವೆಲರಿ ಅಥವಾ ಬ್ರೈಡಲ್ ಮೇಕಪ್ ಆಗಿರಬಹುದು. ಬ್ರೈಡಲ್ ಮೇಕಪ್‌ನ ನೂತನ ಟ್ರೆಂಡ್‌ನಲ್ಲಿ ಥೀಮ್ ಬೇಸ್ಡ್ ವೆಡಿಂಗ್‌ನ ಮಾದರಿಯಲ್ಲಿ ಈಗ ಥೀಮ್ ಬೇಸ್ಡ್ ಅರೇಬಿಯನ್‌ ಸ್ಟೈಲ್ ಮೇಕಪ್‌ನ ಟ್ರೆಂಡ್‌ ಇದೆ. ಈ ಟ್ರೆಂಡನ್ನು ಗಮನದಲ್ಲಿಟ್ಟುಕೊಂಡು ಮೇಕಪ್‌ ಆರ್ಟಿಸ್ಟ್ ಮತ್ತು ಹೇರ್ ಡಿಸೈನರ್‌ ಉಷಾ ಅವುಗಳ ಟೆಕ್ನಿಕ್‌ ಬಗ್ಗೆ ಹೇಳಿದ್ದಾರೆ.

ಈ ಮೇಕಪ್‌ನ ವೈಶಿಷ್ಟ್ಯಅರೇಬಿಯನ್‌ ಸ್ಟೈಲ್ ಬ್ರೈಡಲ್ ಮೇಕಪ್‌ ತನ್ನ ಹೆಸರಿನಂತೆಯೇ ರಾಯಲ್ ಆಗಿದೆ. ಈ ಮೇಕಪ್‌ನ ವಿಶೇಷತೆ ಎಂದರೆ ಇದರಲ್ಲಿ ಕಣ್ಣುಗಳನ್ನು ಹೆಚ್ಚು ಹೈಲೈಟ್‌ ಮಾಡಲಾಗುತ್ತದೆ.

ಕಣ್ಣುಗಳಿಗೆ ಡಾರ್ಕ್‌, ಡ್ರಮಾಟಿಕಲ್ ಮತ್ತು ಸೆನ್ಶುಯಸ್‌ ಲುಕ್‌ ಕೊಡಲಾಗುತ್ತದೆ. ಅರೇಬಿಯನ್‌ ಐ ಮೇಕಪ್‌ನಲ್ಲಿ ಗೋಲ್ಡನ್‌ಐ ಶ್ಯಾಡೋ ಉಪಯೋಗಿಸಲಾಗುತ್ತದೆ. ಜೊತೆಗೆ ಬ್ಲೂ, ಗ್ರೀನ್‌, ಪರ್ಪಲ್, ಯೆಲ್ಲೋ, ಬ್ಲ್ಯಾಕ್‌ ಮತ್ತು ಡಾರ್ಕ್‌ ಗ್ರೇ ಇತ್ಯಾದಿಗಳನ್ನು ಬ್ರೈಡಲ್ ನ ಡ್ರೆಸ್‌ನೊಂದಿಗೆ ಮ್ಯಾಚ್‌ ಮಾಡಿ ಉಪಯೋಗಿಸಲಾಗುತ್ತದೆ.

ಫೇಸ್ಮೇಕಪ್

ಎಲ್ಲಕ್ಕೂ ಮೊದಲು ಮುಖವನ್ನು ಚೆನ್ನಾಗಿ ಕ್ಲೆನ್ಸಿಂಗ್‌ ಮಾಡಿ. ಕ್ಲೆನ್ಸಿಂಗ್‌ ನಂತರ ಓಪನ್‌ ಪೋರ್ಸ್‌ಗಳನ್ನು ಮುಚ್ಚಲು ಟೋನರ್ ಹಚ್ಚಿ. ನಂತರ ಮುಖಕ್ಕೆ ಪ್ರೈಮರ್‌ ಹಚ್ಚಿ. ಪ್ರೈಮರ್‌ನ ತೆಳುವಾದ ಲೇಯರ್‌ನ್ನು ತ್ವಚೆಯಲ್ಲಿ ಪೂರ್ತಿಯಾಗಿ ಬ್ಲೆಂಡ್‌ ಮಾಡಿ. ನಂತರ ಮುಖದ ಫೀಚರ್ಸ್‌ನ್ನು ಶಾರ್ಪ್‌ ಆಗಿ ತೋರಿಸಲು ಫೇಸ್‌ನ ಕಾಂಟೂರಿಂಗ್‌ ಮತ್ತು ಕರೆಕ್ಷನ್‌ ಮಾಡಿ. ಡರ್ಮಾ ಕಲರ್‌ಗಾಗಿ ಡೀಜೆ ಸೀರೀಸ್‌ನ್ನು ಉಪಯೋಗಿಸಿ. ಅದನ್ನು ಹಚ್ಚಿ ಮುಖದ ಕಲೆಗಳನ್ನು ಮುಚ್ಚಿ. ಕಾಂಟೂರಿಂಗ್‌ನಿಂದ ಅಗಲವಾದ ಮೂಗನ್ನು ತೆಳುವಾಗಿ ಕಾಣಿಸಬಹುದು. ಫೋರ್‌ ಹೆಡ್‌ ಅಗಲವಾಗಿದ್ದರೆ ಅದನ್ನೂ ಕಾಂಟೂರಿಂಗ್‌ ಮಾಡಿ. ನಂತರ ಸ್ಕಿನ್‌ಗೆ ಅನುಗುಣವಾಗಿ ಬೇಸ್‌ ಹಚ್ಚಿ. ಬ್ರಶ್‌ನಿಂದ ಪ್ಯಾನ್‌ ಕೇಕ್‌ ಡೌನ್‌ವರ್ಡ್ಸ್ ಹಚ್ಚಿ. ಮುಖಕ್ಕೆ ಉತ್ತೇಜನ ನೀಡಲು ಚೀಕ್‌ ಬೋನ್ಸ್ ಏರಿಯಾ ಮತ್ತು `ಜಾ’ ಲೈನ್‌ ಏರಿಯಾದಲ್ಲಿ  ಜಾ ಲೈನ್‌ ಏರಿಯಾದ ಕಟಿಂಗ್‌ ಮಾಡಿ ನಂತರ ಟ್ರಾನ್ಸ್ ಲೂಸೆಂಟ್‌ ಪೌಡರ್‌ ಹಚ್ಚಿ ಮತ್ತು ಪಾಲಿಶಿಂಗ್‌ ಬ್ರಶ್‌ನಿಂದ ಮುಖದ ಪಾಲಿಶಿಂಗ್‌ ಮಾಡಿ. ಕೊನೆಯಲ್ಲಿ ಸ್ಟುಡಿಯೋ ಫಿಕ್ಸರ್‌ ಹಚ್ಚಿ. ಇದು ಮೇಕಪ್‌ನ್ನು ಫಿಕ್ಸ್ ಮಾಡುತ್ತದೆ.

ಮೇಕಪ್

ಅರೇಬಿಯನ್‌ ಸ್ಟೈಲ್‌ನ ಈ ಬ್ರೈಡಲ್ ಮೇಕಪ್‌ನಲ್ಲಿ ಐ ಲೈನರ್‌ನ್ನು ಕಣ್ಣುಗಳ ಮೂಲೆಯಿಂದ ಮುಂದೆ ತಂದು ಬ್ರೈಡಲ್‌ನ ಔಟ್‌ ಫಿಟ್‌ನೊಂದಿಗೆ ಮ್ಯಾಚ್‌ ಮಾಡುತ್ತಾ ಕಲರ್ಸ್‌ ಹಚ್ಚಲಾಗುತ್ತದೆ. ಈ ಐ ಮೇಕಪ್‌ನಲ್ಲಿ ಕಣ್ಣುಗಳ ತುದಿಯಲ್ಲಿ ಕೊಂಚ ಡಾರ್ಕ್‌ ಶೇಡ್ ಕೊಡಲಾಗುತ್ತದೆ. ಇದಲ್ಲದೆ, ವಾಲ್ಯೂಮ್ ಐಸ್‌ ಮಸ್ಕರಾದಿಂದ ರೆಪ್ಪೆಗಳನ್ನು ತುಂಬಿದಂತೆ ಮಾಡಲಾಗುತ್ತದೆ. ಮೊದಲು ಐ ಬ್ರೋಸ್‌ಗೆ ಕೆಳಗಿನಿಂದ ಶೇಪ್‌ ಕೊಡಿ. ನಂತರ ಬ್ರೋಸ್‌ ಬ್ರಶ್‌ನಿಂದ ಬ್ರೋಸ್‌ಗೆ ಬ್ರಶ್‌ ಮಾಡಿ. ಕಣ್ಣುಗಳ ಮೇಲೆ ಗೋಲ್ಡನ್‌ ಕಲರ್‌ನ ಹೈಲೈಟರ್‌ ಹಚ್ಚಿ. ಐ ಬಾಲ್ಸ್ ಮೇಲೆ ಗೋಲ್ಡನ್‌ ಐ ಶ್ಯಾಡೋ ಹಚ್ಚಿ. ಅದರಿಂದ ಮೇಕಪ್‌ ಎನ್‌ ಹ್ಯಾನ್ಸ್ ಆಗುತ್ತದೆ. ಔಟ್ ಸೈಡ್‌ನಲ್ಲಿ ಬ್ಲ್ಯಾಕ್‌ ಶ್ಯಾಡೋ ಹಚ್ಚಿ, ಕಣ್ಣುಗಳ ವಾಟರ್‌ ಲೈನ್‌ ಏರಿಯಾದ ಹೊರಗೆ ತೆಳುವಾಗಿ ಐ ಲೈನರ್‌ ಹಚ್ಚಿ. ವಾಟರ್‌ ಲೈನ್ ಏರಿಯಾದಲ್ಲಿ ಕಾಜಲ್ ಹಚ್ಚಿ. ಐ ಬಾಲ್ಸ್ ಮೇಲೆ ಸ್ಪಾರ್ಕ್ಸ್‌ ಕೂಡ ಹಚ್ಚಿ. ನಂತರ ಐ ಲ್ಯಾಶಸ್‌ ಮೇಲೆ ಮಸ್ಕರಾ ಹಚ್ಚಿ. ಎಷ್ಟು ಹೆಚ್ಚು ಮಸ್ಕರಾ ಕೋಟ್‌ ಹಚ್ಚುತ್ತೀರೋ ಕಣ್ಣುಗಳು ಅಷ್ಟು ಸುಂದರವಾಗಿ ಕಾಣುತ್ತವೆ.

ಲಿಪ್ಮೇಕಪ್

ತುಟಿಗಳನ್ನು ಕೋಮಲವಾಗಿ ಮಾಡಲು ಮಾಯಿಶ್ಚರೈಸರ್‌ ಹಚ್ಚಿ. ನಂತರ ಲಿಪ್‌ ಪೆನ್ಸಿಲ್‌ನಿಂದ ಲಿಪ್ಸ್ ನ ಔಟ್‌ ಲೈನ್‌ ಮಾಡಿ. ತುಟಿಗಳಿಗೆ ಲಿಪ್‌ಸ್ಟಿಕ್‌ ಹಚ್ಚಿ. ಅದರ ಮೇಲೆ ಗ್ಲಾಸ್‌ ಹಚ್ಚಿ. ಬ್ಲಶರ್‌ ಚೀಕ್‌ ಬೋನ್ಸ್ ಮೇಲೆ ಪೀಚ್‌ ಬ್ಲಶರ್‌ ಹಚ್ಚಿ. ಅದನ್ನು ಬ್ರಶ್‌ನಿಂದ ಚೆನ್ನಾಗಿ ಮರ್ಜ್‌ ಮಾಡಲು ಮರೆಯದಿರಿ.

hair-style1

ಹೇರ್ಸ್ಟೈಲ್ (ಅರೇಬಿಕ್ಸ್ಟೈಲ್ ಜಡೆ)

ಕ್ರೌನ್‌ ಏರಿಯಾದಲ್ಲಿ ಸ್ಟಫಿಂಗ್‌ ಮಾಡಿ. ಅದನ್ನು ಪಿನ್‌ನಿಂದ ಸೆಟ್‌ ಮಾಡಿ ಜಡೆಯ ಆಕಾರ ಕೊಡಿ. ನಂತರ ಮುಂದಿನ ಕೂದಲನ್ನು ಸ್ವಲ್ಪ ಸ್ವಲ್ಪ ಭಾಗ ತೆಗೆದುಕೊಂಡು ಬ್ಯಾಕ್‌ ಕೂಂಬಿಂಗ್‌ ಮಾಡಿ. ನಂತರ ಅವನ್ನು ಟ್ವಿಸ್ಟ್ ಮಾಡುತ್ತಾ ಗುಂಡಗೆ ರೋಲ್ ಮಾಡಿ ಮತ್ತು ಹಿಂದಿನ ಜಡೆಯ ಮೇಲೆ ಸೆಟ್‌ ಮಾಡುತ್ತಿರಿ. ಮಧ್ಯದಲ್ಲಿ ಜೆಲ್ ಸ್ಪ್ರೇ ಮಾಡಿ. ಅದರಿಂದ ಹೇರ್‌ ಸ್ಟೈಲ್ ಸೆಟ್‌ ಆಗುತ್ತದೆ. ನಂತರ ಉಳಿದ ಕೂದಲಿನಲ್ಲಿ ಆರ್ಟಿಫಿಶಿಯ್‌ ಕರ್ಲಿ ಹೇರ್‌ನ್ನು 2 ಭಾಗಗಳಲ್ಲಿ ಹಂಚಿ ರೋಲ್ ಮಾಡುತ್ತಾ ಹಚ್ಚಿ ಮತ್ತು ಸೈಡ್‌ನಲ್ಲಿ ಗುಂಡಗೆ ತಿರುಗಿಸಿ ಜಡೆಯ ಆಕಾರ ಕೊಡಿ. ನಂತರ ಕೂದಲಿನಲ್ಲಿ ಹೇರ್‌ ಆ್ಯಕ್ಸೆಸರೀಸ್‌ ಸಿಕ್ಕಿಸಿ.

ಇಂಡೋ ಅರೇಬಿಕ್ಹೇರ್ಸ್ಟೈಲ್

ಕ್ರೌನ್‌ ಏರಿಯಾದ ಮಧ್ಯದಲ್ಲಿ ಸ್ಟಫಿಂಗ್‌ ಮಾಡಿ. ಮುಂದಿನ ಕೂದಲನ್ನು ಬ್ಯಾಕ್‌ ಕೂಂಬಿಂಗ್‌ ಮಾಡುತ್ತ ಹಿಂದಿನ ಕೂದಲಿನಿಂದ ಸ್ಟಫಿಂಗ್‌ನ್ನು ಕವರ್‌ ಮಾಡಿ. ಮುಂದಿನ ಕೊಂಚ ಕೂದಲನ್ನು ಸೈಡ್‌ನಿಂದ ಫೋರ್‌ ಹೆಡ್‌ ಮೇಲೆ ತೆಗೆದುಕೊಂಡು ಹಿಂದಿನತ್ತ ಪಿನ್ ಅಪ್‌ ಮಾಡಿ. ಹಿಂದೆ ಹೇಳಿದ ಎಲ್ಲ ಕೂದಲಿನಿಂದ ಸ್ಟಫಿಂಗ್‌ನ್ನು ಕವರ್‌ ಮಾಡುತ್ತಾ ಒಂದು ಸೈಡ್‌ಗೆ ತನ್ನಿ. ನಂತರ ಉಳಿದ ಕೂದಲನ್ನು ರಾಡ್‌ನಿಂದ ಕರ್ಲ್ ಮಾಡಿ ಮತ್ತು ಜ್ಯೂಡಿಲ್ ‌ಹೇರ್‌ ಆ್ಯಕ್ಸೆಸರೀಸ್‌ಗಳಿಂದ ಅಲಂಕರಿಸಿ ಮತ್ತು ಮುಂದಿನ ಕೂದಲಿನಲ್ಲಿ ಸ್ಟೋನ್ಸ್ ಸಿಕ್ಕಿಸಿ. ಅರೇಬಿಕ್‌ ಸ್ಟೈಲ್ ಫಾರ್‌ ಲಾಂಗ್‌ ಹೇರ್‌ ಮೀಡಿಯಂ ಸೈಜ್‌ನ ಬಂಪೆಟ್ಸ್ ನ್ನು ಕ್ರೌನ್‌ ಏರಿಯಾದಲ್ಲಿ ಮಿಕ್ಸ್ ಮಾಡಿ ಮತ್ತು ಮುಂದಿನ ಕೂದಲನ್ನು ತೆಗೆದುಕೊಂಡು ಕವರ್‌ ಮಾಡಿ. ನಂತರ ಎಲ್ಲ ಕೂದಲನ್ನೂ ಹಿಂದೆ ತೆಗೆದುಕೊಂಡು ಅದಕ್ಕೆ ರಬ್ಬರ್‌ ಬ್ಯಾಂಡ್‌ ಸಿಕ್ಕಿಸಿ. ಚಿಕ್ಕ ಕೂದಲನ್ನು ಸ್ಪ್ರೇ ಮೂಲಕ ಸೆಟ್‌ ಮಾಡಿ ಪಿನ್‌ ಸಿಕ್ಕಿಸಿ. ಹಿಂದೆ ಸ್ಟಫಿಂಗ್ ಮಾಡಿ ಸಣ್ಣ ಜಡೆ ಹೆಣೆಯಿರಿ. ಹೀಗೆ ಹಿಂದಿನ ಕೊಂಚ ಕೂದಲಿಗೆ ಬಾಬ್‌ ಪಿನ್‌ ಮೂಲಕ ಕವರ್‌ ಮಾಡಿ. ಸೈಡ್‌ನ ಕೂದಲನ್ನು ರೋಪಿಂಗ್‌ ಮಾಡಿ ಮತ್ತು ಜಡೆಯನ್ನು ಅದರಿಂದ ಕವರ್‌ ಮಾಡಿ. ಕೂದಲನ್ನು ಸಣ್ಣ ಸಣ್ಣ ಭಾಗಗಳಲ್ಲಿ ತೆಗೆದುಕೊಂಡು ಎತ್ತುತ್ತಾ ಮತ್ತು ಸರ್ಕಲ್ ಮಾಡುತ್ತಾ ಜಡೆಯನ್ನು ಕವರ್‌ ಮಾಡಿ. ಹಿಂದೆ ಉಳಿದ ಕೂದಲನ್ನು 2 ಭಾಗಗಳಲ್ಲಿ ಕೂಡಿಸಿ ನಾಟ್‌ ಕಟ್ಟಿ. ಜುಟ್ಟಿನ ಆಕಾರ ಕೊಡಿ ಮತ್ತು ಜಡೆಗೆ ಪಿನ್‌ ಮೂಲಕ ಅಟ್ಯಾಚ್‌ ಮಾಡಿ.

ಬಿ.ಕೆ. ಸುಮತಿ

ಬ್ರೈಡಲ್ ಮೇಕಪ್ಟಿಪ್ಸ್

ವಧುವಿನ ಸೌಂದರ್ಯದಲ್ಲಿ ತ್ವಚೆಯ ಕೊಡುಗೆ ವಿಶೇಷವಾಗಿರುತ್ತದೆ. ಅವರು ಎಷ್ಟೇ ಮೇಕಪ್‌ ಮಾಡಿಕೊಳ್ಳಲಿ ಮತ್ತು ಒಳ್ಳೆಯ ಉಡುಪನ್ನು ಧರಿಸಿರಲಿ, ಆದರೆ ತ್ವಚೆ ಆರೋಗ್ಯವಾಗಿಲ್ಲದಿದ್ದರೆ ಮತ್ತು ಅದರಲ್ಲಿ ಗ್ಲೋ ಇಲ್ಲದಿದ್ದರೆ ಶ್ರಮವೆವ್ವಾ ವ್ಯರ್ಥವಾಗುತ್ತದೆ. ಯಾವುದೇ ಮೇಕಪ್‌ ಪ್ರಾಡಕ್ಟ್ ನಿಂದ ಸೌಂದರ್ಯ ಹೆಚ್ಚಿಸುವ ಬದಲು ನಿಮ್ಮ ಮುಖ ನ್ಯಾಚುರಲಿ ಗ್ಲೋ ಆಗುವಂತಿರಬೇಕು. ನಿಮ್ಮ ತ್ವಚೆ ಆರೋಗ್ಯವಾಗಿ, ಸುಂದರವಾಗಿ ಕಲೆಯಿಲ್ಲದಿದ್ದರೆ ನಿಮ್ಮ ಸೌಂದರ್ಯಕ್ಕೆ ಇನ್ನಷ್ಟು ಗರಿ ಮೂಡಿಸಿದಂತಾಗುವುದು. ಮದುವೆ ಮನೆಯಲ್ಲಿ ಸಾಕಷ್ಟು ವ್ಯಸ್ತತೆ ಇರುತ್ತದೆ. ಅದರಲ್ಲಿ ಸಮಯ ಮಾಡಿಕೊಂಡು ತ್ವಚೆಯನ್ನು ಗಮನಿಸಿಕೊಳ್ಳಬೇಕು.

ಪರ್ಫೆಕ್ಟ್ ಮೇಕಪ್‌ಗಾಗಿ ಈ ಟಿಪ್ಸ್ ಅನುಸರಿಸಿ ಅತ್ಯಂತ ಸುಂದರ ವಧುವಾಗಿ :

ವಧು 1 ವಾರದ ಮೊದಲಿಂದಲೇ ಇಡೀ ಶರೀರಕ್ಕೆ ಮಸಾಜ್‌ ಮಾಡಿಸಬೇಕು. ಇದು ದೈಹಿಕ ಹಾಗೂ ಮಾನಸಿಕವಾಗಿ ನಿಮ್ಮನ್ನು ರಿಲ್ಯಾಕ್ಸ್ ಮಾಡುತ್ತದೆ. ಜೊತೆಗೆ ನಿಮ್ಮ ತ್ವಚೆಗೆ ಹೊಳಪು ನೀಡುತ್ತದೆ.

ಮುಖಕ್ಕೆ ಐಸ್‌ ಕ್ಯೂಬ್‌ನಿಂದ ಉಜ್ಜಿ. ಅದರಿಂದ ತ್ವಚೆ ಮೃದುವಾಗುತ್ತದೆ. ಮುಖ ತಾಜಾತನದಿಂದ ಕೂಡಿದ್ದು ನಿಮ್ಮ ಬ್ಲಡ್‌ಸರ್ಕ್ಯುಲೇಶನ್‌ ಸಹ ಹೆಚ್ಚುತ್ತದೆ.

ದಿನ ಬೆಳಗ್ಗೆ ಯಾವುದಾದರೂ ಕ್ಲೆನ್ಸರ್‌ನಿಂದ ಮುಖ ಹಾಗೂ ಕತ್ತನ್ನು ಸ್ವಚ್ಚಗೊಳಿಸಿ.

ಯಾವುದಾದರೂ ಒಳ್ಳೆಯ ಎಕ್ಸ್ಪೇಲಿಯೇಟ್‌ನಿಂದ ತ್ವಚೆಯನ್ನು ಸ್ವಚ್ಛಗೊಳಿಸಿ. ಅದರಿಂದ ತ್ವಚೆಯ ಡೆಡ್‌ ಸೆಲ್ಸ್ ದೂರವಾಗುತ್ತದೆ.

ಸ್ಟೀಮ್ ತೆಗೆದುಕೊಳ್ಳಿ. ಅದರಿಂದ ನಿಮ್ಮ ಪೋರ್ಸ್‌ ಒಳಗಿನ ಕೊಳೆ ದೂರವಾಗುತ್ತದೆ.

ಫೇಸ್‌ ಪ್ಯಾಕ್‌ಗೆ ಮೊಟ್ಟೆಯ ಬಿಳಿ ಭಾಗ ಮತ್ತು ಜೇನುತುಪ್ಪ ಬೆರೆಸಿ ಹಚ್ಚಿ.

ತ್ವಚೆಯನ್ನು ಸ್ವಚ್ಛಗೊಳಿಸಿದ ನಂತರ ಅದರ ಆರ್ದ್ರತೆ ಉಳಿಸಲು ಮಾಯಿಶ್ಚರೈಸರ್‌ ಉಪಯೋಗಿಸಿ.

ರಾತ್ರಿ ಮಲಗುವ ಮೊದಲು ಮೇಕಪ್‌ ರಿಮೂವರ್‌ನಿಂದ ಮೇಕಪ್‌ ತೆಗೆಯಲು ಮರೆಯದಿರಿ.

ಫೈಬರ್‌ ಹಾಗೂ ವಿಟಮಿನ್‌ಗಳು ಹೇರಳವಾಗಿರುವ ಆಹಾರವನ್ನೇ ಸೇವಿಸಿ.

ಜಂಕ್‌ ಫುಡ್‌, ಪ್ರೋಸೆಸ್ಡ್ ಫುಡ್‌, ಕರಿದ ಹುರಿದ ಆಹಾರ ವರ್ಜಿಸಿ.

ನಿಮ್ಮ ದಿನಚರಿಯಲ್ಲಿ ಎಕ್ಸರ್‌ ಸೈಜ್‌ ಅಥವಾ ಇತರ ಫಿಸಿಕಲ್ ಆ್ಯಕ್ಟಿವಿಟೀಸ್‌ಗಳನ್ನು ಸೇರಿಸಿಕೊಳ್ಳಿ.

ಆಯಾಸ ಮತ್ತು ಒತ್ತಡದಿಂದ ದೂರವಿರಿ. ಖುಷಿಯಾಗಿರಿ ಹಾಗೂ ಚೆನ್ನಾಗಿ ನಿದ್ರಿಸಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ