ಉಳಿತಾಯದ ಅಡಿಪಾಯದ ಮೇಲೆ ನಿಂತ ಮನೆ

ಈಗ ಮಹಿಳೆಯರಿಗೆ ಲಾಕ್‌ ಡೌನ್‌ ಸಮಯದಲ್ಲಿ ಮನೆ ಖರ್ಚು ನಿಭಾಯಿಸುವುದರ ಜೊತೆ ಜೊತೆಗೆ ಮತ್ತೊಂದು ಸವಾಲನ್ನು ಎದುರಿಸಬೇಕಾಗಿ ಬರುತ್ತದೆ. ದೇಶದಲ್ಲಷ್ಟೇ ಅಲ್ಲ, ವಿಶ್ವಾದ್ಯಂತ ವ್ಯಾಪಾರ ಹಾಗೂ ಉದ್ಯಮಗಳು ಬಂದ್‌ ಆಗಿರುವುದರಿಂದ, ಮನೆಗಳಲ್ಲಿ ನಿರುದ್ಯೋಗ ಭಾರಿ ಪ್ರಮಾಣದಲ್ಲಿ ಏರಿಕೆ ಉಂಟಾಗಿದೆ. ಮನೆಯಲ್ಲಿ ದುಡಿಯುವ ವ್ಯಕ್ತಿ ಗಂಡನೇ ಆಗಿದ್ದರೆ, ಹೆಂಡತಿಯಾದವಳು ಹೇಗಾದರೂ ಮಾಡಿ ಕುಟುಂಬ ನಡೆಸಲೇಬೇಕಾಗುತ್ತದೆ.

ಕೋವಿಡ್‌ ಜೀವನಶೈಲಿ ಮೇಲೆ ಗಾಢ ಪರಿಣಾಮ ಬೀರಿದೆ. ಅದಕ್ಕೂ ಹೆಚ್ಚಾಗಿ ಅದು ಕೆಲಸ ಕಾರ್ಯಗಳ ಮೇಲೆ ಪರಿಣಾಮ ಉಂಟು ಮಾಡಿದೆ. ಜನರು ಮೊದಲು ದುಂದುವೆಚ್ಚಕ್ಕೆ ಕಟ್ಟುಬಿದ್ದಿದ್ದರು. ಈಗ ಅದರ ಅರ್ಧದಷ್ಟು ಅಲ್ಲ, ಕೇವಲ ಕಾಲು ಭಾಗ ಮಾತ್ರ ಖರ್ಚು ಮಾಡಬಹುದು. ಗಂಡನ ನೌಕರಿ ಏನಾದರೂ ಹೋಗಿದ್ದರೆ, ಹೊಸ ನೌಕರಿ ದೊರೆಯುತನಕ ಆಕೆ ಧೈರ್ಯ ಕಾಪಾಡಿಕೊಂಡು ಮನೆ ನಡೆಸಬೇಕು.

ಸರ್ಕಾರವನ್ನು, ದೇರವನ್ನು, ನಮ್ಮ ಹಣೆಬರಹವನ್ನು ಹಳಿಯುವುದರಿಂದ ಏನೂ ಆಗದು. ಪೂಜೆ ಪುನಸ್ಕಾರಗಳಿಂದಲೂ ಏನೂ ಆಗುವುದಿಲ್ಲ. ಸಂಕಟ ಬಂದಾಗ ವೆಂಕಟರಮಣ ಎಂದು ನಾವೆಲ್ಲ ಹೇಳಿಕೊಂಡು ಬಂದಿದ್ದೇವೆ. ಇದರಿಂದ ಧರ್ಮದ ವ್ಯಾಪಾರಿಗಳಿಗೆ ಮಾತ್ರ ಲಾಭವಾಗುತ್ತದೆ. ಅವರು ದುರ್ಬಲರನ್ನು ಸುಲಿಗೆ ಮಾಡುತ್ತಾರೆ. ಜನರು ಸಂಕಟಕ್ಕೆ ಸಿಲುಕಬೇಕು, ಆಗ ಜನ ನಮ್ಮ ಬಳಿ ಬರುತ್ತಾರೆ, ಆಗ ನಮ್ಮ ವ್ಯಾಪಾರ ಚೆನ್ನಾಗಿ ನಡೆಯುತ್ತದೆ ಎಂದವರು ಭಾವಿಸುತ್ತಾರೆ.

ನೂರಾರು ಸಿನಿಮಾಗಳು, ಕಥೆಗಳು ಹಾಗೂ ಟಿವಿ ಧಾರಾವಾಹಿಗಳಲ್ಲಿ ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಇದೇ ಪಾಠವನ್ನು ಮೇಲಿಂದ ಮೇಲೆ ಒತ್ತಿ ಒತ್ತಿ ಹೇಳಲಾಗುತ್ತದೆ. ಅದು ಜನರನ್ನು ಇನ್ನಷ್ಟು ದುರ್ಬಲರನ್ನಾಗಿ ಮಾಡುತ್ತದೆ. ಸಂಕಷ್ಟದಿಂದ ಹೊರ ಬರಲು ಪೂಜೆ ಪುನಸ್ಕಾರ, ದಾನದಕ್ಷಿಣೆಯಲ್ಲಿ ತೊಡಗುವಂತೆ  ಮಾಡುತ್ತದೆ. ಮನೆಯಲ್ಲಿ ಅಳಿದುಳಿದ ಉಳಿತಾಯವನ್ನು ಪುರೋಹಿತರು ಮೌಲ್ವಿಗಳಿಗೆ, ಪಾದ್ರಿಗಳಿಗೆ ಕೊಡುವಂತೆ ಮಾಡುತ್ತದೆ.

ಕೊರೋನಾದ ಇಂದಿನ ದಿನಗಳಲ್ಲಿ ನಿರುದ್ಯೋಗವನ್ನು ಸಮರ್ಥವಾಗಿ ಎದುರಿಸಲು ಖರ್ಚನ್ನು ಅತ್ಯಂತ ಕಡಿಮೆ ಮಾಡಬೇಕು. ಅಡುಗೆ ಖರ್ಚುಗಳನ್ನು ಹೊರತುಪಡಿಸಿ ಬೇರಾವುದೇ ಖರ್ಚು ಆಗದಂತೆ ನೋಡಿಕೊಳ್ಳಬೇಕು. ಅದ್ಧೂರಿ ಊಟ, ಕುಡಿತ, ಪೂಜೆ ಪುನಸ್ಕಾರದ ಖರ್ಚನ್ನು ನಿಲ್ಲಿಸಿಬಿಡಬೇಕು. ಮಕ್ಕಳ ಫೀಸ್‌ ಅಂತೂ ಕಟ್ಟಲೇಬೇಕು. ಖಾಸಗಿ ಶಾಲೆಗಳು ದುಬಾರಿ ಎನಿಸಿದರೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬಹುದು.

ಈಗ ವಾಸಿಸುವ ಮನೆ ದುಬಾರಿ ಎನಿಸಿದರೆ ಅದನ್ನು ಬದಲಿಸಿ ಚಿಕ್ಕ ಮನೆಗೆ ಹೋಗಬಹುದು. ಅವರಿವರಿಗೆ ಆಹ್ವಾನ ಕೊಡುವುದನ್ನು ನಿಲ್ಲಿಸಬೇಕು. ಯಾವುದೇ ಹೊಸ ಸಾಮಗ್ರಿ ಖರೀದಿಸಬಾರದು.

ಹಣದ ಕೊರತೆ ಮನಸ್ಸಿಗೆ ಬಾಧಿಸಬಾರದು. ಅದಕ್ಕಾಗಿ ನೀವೇ ಸುಣ್ಣಬಣ್ಣ  ಮಾಡಿಕೊಳ್ಳಿ. ಹಳೆಯ ಸಾಮಾನುಗಳನ್ನೊಳಗೊಂಡ ಮನೆ ಸ್ವಚ್ಛವಾಗಿದ್ದರೆ ಚೆಂದ ಕಾಣುತ್ತದೆ. ವಿದ್ಯುತ್‌ ಬಿಲ್ ‌ಉಳಿಸಲು ಕಿಟಕಿಗಳನ್ನು ತೆರೆದಿಡಿ. ಹೊರಗಿನವರಿಗೆ ಮನೆ ಗಲೀಜು ಹಾಗೂ ದುರ್ವಾಸನೆಯುಳ್ಳದ್ದಾಗಿ ಕಾಣಿಸಬಾರದು. ಇದು ವ್ಯಾಪಾರಿಗಳ ಮನೆಯೋ ವೇತನ ಕಡಿತದಾರರ ಮನೆಯೋ ಎಂಬಂತೆ ಗೋಚರವಾಗಬಹುದು.

ಉಳಿತಾಯದಿಂದ ಕನಿಷ್ಠ ಮೊತ್ತ ಮಾತ್ರ ತೆಗೆಯಿರಿ. ಇದು ಭವಿಷ್ಯದ ಬಗ್ಗೆ ಆಶಾಕಿರಣದ ಭಾವನೆಯನ್ನುಂಟು ಮಾಡುತ್ತದೆ. ಉಳಿತಾಯ ಎನ್ನುವುದು ಮನೆಯ ಅಡಿಪಾಯ. ಅದನ್ನು ಅತ್ಯಂತ ಕೊನೆಯಲ್ಲಿ ವಿನಿಯೋಗ ಮಾಡಬೇಕು. ನೌಕರಿ ಕೈ ಬಿಟ್ಟುಹೋದ ಮೇಲೆ ಅಥವಾ ವೇತನ ಕಡಿತದ ಬಗ್ಗೆ ಮನೆಯಲ್ಲಿ ಹೌಹಾರುವುದು ಸಹಜ. `ಮೊದಲು ಹೇಗಿದ್ದೆ’ ಇದು ಸಹಜವಾಗಿ ಕೇಳಿಬರುವ ಮಾತು. ನಮ್ಮ ಅದೃಷ್ಟ ಸರಿ ಇರಲಿಲ್ಲ. ಹಾಗಾಗಿ ಹೀಗಾಯ್ತು ಎನ್ನುವ ಮಾತುಗಳು ಕೇಳಿಸುವಂತಾಗಬಾರದು. ಇಬ್ಬರೂ ಸೇರಿ ಸಾಲವನ್ನು ಎದುರಿಸುವ ಧೈರ್ಯ ಬಂದರೆ ಸಮತೋಲನ ಕಾಯ್ದುಕೊಂಡು ಹೋಗಬಹುದು. ಅರ್ಥವ್ಯವಸ್ಥೆ ಹದಗೆಟ್ಟಿರುವುದರಲ್ಲಿ ಸರ್ಕಾರದ ಪಾಲು ಕೂಡ ಇದೆ. ಏಕೆಂದರೆ ಕಳೆದ 4 ವರ್ಷಗಳಲ್ಲಿ ಸರ್ಕಾರ (ಅರ್ಥವ್ಯವಸ್ಥೆಯ ಮೇಲೆ) ಬಹಳಷ್ಟು ಹೊಸ ಅಡೆತಡೆಗಳನ್ನು ಉಂಟು ಮಾಡಿತು. ಸರ್ಕಾರದ ಮುಖ್ಯ ಕೆಲಸ ಹಿಂದೂ ಮುಸ್ಲಿಂ, ಮೇಲು ಕೀಳು ಜಾತಿಗಳನ್ನು ಎಣಿಕೆ ಮಾಡುವುದರಲ್ಲಿ ಕಳೆದುಹೋಯಿತು. ಸರ್ಕಾರ ದೇಗುಲಗಳನ್ನು ನಿರ್ಮಿಸುವುದರಲ್ಲಿ ತೊಡಗಿತ್ತು. ಪುಸ್ತಕಗಳನ್ನು ಬದಲಿಸುವುದರಲ್ಲಿ ಮಗ್ನವಾಗಿತ್ತು. ತನ್ನ ಆದಾಯ ಹೆಚ್ಚಿಸಿಕೊಳ್ಳುವಲ್ಲಿ ನಿರತವಾಗಿತ್ತು.

ಕೋವಿಡ್‌ನ ದಾಳಿಯನ್ನು ಮಂತ್ರ ಶ್ಲೋಕಗಳಿಂದ ನಿವಾರಿಸುವ ಸಲಹೆಗಳನ್ನು ಕೊಡಲಾಗುತ್ತಿದೆ. ಅರ್ಥಶಾಸ್ತ್ರಜ್ಞರು ಹೇಳುವುದನ್ನು ಕೇಳಿಸಿಕೊಳ್ಳಲಾಗುತ್ತಿಲ್ಲ. ಸರ್ಕಾರಿ ಸಮರ್ಥಕ ಉದ್ಯಮಿಗಳ ಮಾತನ್ನು ಹೆಚ್ಚಾಗಿ ಕೇಳಿಸಿಕೊಳ್ಳಲಾಗುತ್ತಿದೆ. ಅವರು ಜನರ ಉಳಿತಾಯವನ್ನು ನುಂಗಿದರು.

ಅಮೆರಿಕ, ಫ್ರಾನ್ಸ್, ಬ್ರಿಟನ್‌, ಆಸ್ಟ್ರೇಲಿಯಾದ ಹಾಗೆ ಇಲ್ಲಿ ಸರ್ಕಾರ ಕೂಲಿಕಾರರಿಗೆ ಹೊಟ್ಟೆ ತುಂಬ ಊಟ ಅಥವಾ ನಗರಾಸಿಗಳಿಗೆ ಅದಿವತನ ಕೊಡಲು ಸಜ್ಜಾಗಿದೆ. ಈ ಸಂಕಷ್ಟವನ್ನು ಪ್ರತಿಯೊಂದು ಮನೆಗಳು ನಿಭಾಯಿಸಬೇಕು. ಮಹಿಳೆಯೇ ಮನೆಯ ಮುಂದಾಳು. ಆಕೆಯ ತಿಳಿವಳಿಕೆಯೇ ಮನೆಯನ್ನು ಸಂಕಷ್ಟದಿಂದ ಪಾರು ಮಾಡಬಲ್ಲದು.

ನಿರ್ಬಂಧದಿಂದ ಯಾರಿಗೂ ಲಾಭ ಇಲ್ಲ…… ಬಹುತೇಕ ಎಲ್ಲ ನಗರಗಳಲ್ಲಿ ರೆಸಿಡೆಂಟ್ ವೆಲ್‌ಫೇರ್‌ ಅಸೋಸಿಯೇಶನ್‌ಗಳು ಕೋವಿಡ್‌ನ ಕಣ್ಗಾವಲಿನ ಹೊಣೆಯನ್ನು ಅತ್ಯಂತ ಉತ್ಸಾಹದಿಂದ ಹೊರಲು ಶುರು ಮಾಡಿವೆ. ಕೊರೋನಾ ರೋಗ ಸೋಂಕಿನಿಂದ ಹರಡುತ್ತದೆ. ಅಪಾರ್ಟ್‌ಮೆಂಟ್‌ ಕಾಲೋನಿ ಬೀದಿಗೆ ಒಂದೇ ಒಂದು ಪ್ರಕರಣ ಬಂದರೂ ಅದು ಬಹಳಷ್ಟು ಜನರನ್ನು  ತೊಂದರೆಗೀಡು ಮಾಡುತ್ತದೆ. ಹೀಗಾಗಿ ತಮ್ಮ ಭಾಗದಲ್ಲಿ ಅದರ ಸೋಂಕು ಹರಡಿದರಲಿ, ಅದಕ್ಕಾಗಿ ಅವು ಕಟ್ಟುನಿಟ್ಟಿನ ಕ್ರಮ ಅನುಸರಿಸುತ್ತಿವೆ. ಇದು ಒಳ್ಳೆಯ ಕೆಲಸವೇ ಹೌದು.

ಈ ಒಂದು ಅವಕಾಶ ಪರಸ್ಪರ ಸಹಕಾರವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಇದರಿಂದ ಅಲ್ಲಲ್ಲಿ ಒಂದಷ್ಟು ಗೊಂದಲಗಳು ಉಂಟು ಮಾಡಬಹುದು, ಹೊಡೆದಾಟದ ಪ್ರಸಂಗ ಬರಬಹುದು. ಇದರಿಂದ ಬಹುದೂರದ ತನಕ ಪರಿಣಾಮ ಉಂಟಾಗುತ್ತದೆ. ನಗರ ಪ್ರದೇಶದಲ್ಲಿ ನಾವು ತಂಡದ ಸಹಕಾರವಿಲ್ಲದೆ ಇರಲು ಸಾಧ್ಯವಿಲ್ಲ. ಆದರೆ ಬಹಳಷ್ಟು ಜನ ಬೇರೆಯವರಿಂದ ನಮಗೇನಾಗಬೇಕಿದೆ ಎಂದುಕೊಂಡು ಮುಂದೆ ಸಾಗುತ್ತಾರೆ. ಆದರೆ ಪಕ್ಕದ ಮನೆಯವರಿಂದ, ಪರಿಚಿತರಿಂದಲೇ ನಾವು ಈ ಏರಿಯಾಕ್ಕೆ ಬಂದಿದ್ದೇವೆ ಎನ್ನುವುದನ್ನು ಮರೆತುಬಿಡುತ್ತಾರೆ.

ಕೋವಿಡ್‌ ಬಾಗಿಲಿನಿಂದ ಹೊರಡಗೆಯೇ ತಡೆಯಲು ಬಹಳಷ್ಟು ಕಠೋರ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿ ಬರುತ್ತದೆ. ಇದನ್ನು ಆಯಾ ವಿಭಾಗದವರಷ್ಟೇ ಮಾಡಿಕೊಂಡರೆ ಸೂಕ್ತ. ಈ ಕಾರಣದಿಂದಾಗಿ ಎರಡು ಗುಂಪುಗಳು ಪರಸ್ಪರ ಕಿತ್ತಾಡುವಂತಾಗಬಾರದು. ಆದರೆ ಎಲ್ಲ ನಿರ್ಬಂಧಗಳಿಂದಾಗಿ ಯಾರಿಗೂ ಲಾಭವಿಲ್ಲ.

ಮಗುವಿನ ಜವಾಬ್ದಾರಿಗಳನ್ನು ಯಾರು ನಿಭಾಯಿಸುತ್ತಾರೋ, ಅವರು ಅದಕ್ಕಾಗಿ ತಮ್ಮ ಹೆಚ್ಚಿನ ಸಮಯವನ್ನು ವಿನಿಯೋಗಿಸಬೇಕಾಗಿ ಬರುತ್ತದೆ. ರಾತ್ರಿ ಹಗಲು ನಿರೀಕ್ಷಣೆ ಮಾಡುತ್ತಾ ಇರಬೇಕಾಗುತ್ತದೆ. ರಾತ್ರಿ ಅಪರಾತ್ರಿಯಲ್ಲಿ ಫೋನ್‌ಮಾಡಬಹುದು. ನಡುದಾರಿಯಲ್ಲೂ ಅಡ್ಡಗಟ್ಟಬಹುದು. ಇದರಿಂದ ಎಲ್ಲರಿಗೂ ಅನುಕೂಲ. ಹೀಗಾಗಿ ಪದಾಧಿಕಾರಿಗಳಿಗೆ ಸೂಕ್ತ ಗೌರವ ದೊರಕಬೇಕು.

ಕೋವಿಡ್‌ನಿಂದಾಗಿ ಗಲ್ಲಿಗಳಲ್ಲಿ ಗೇಟ್‌ಗಳನ್ನು ಅಳವಡಿಸಲಾಗುತ್ತಿದೆ. ಸ್ವಚ್ಛತೆಯ ಬಗ್ಗೆ ಗಮನ ಕೊಡಲಾಗುತ್ತಿದೆ. ಸುರಕ್ಷತೆಯನ್ನು ಮತ್ತಷ್ಟು  ಬಿಗಿಗೊಳಿಸಲಾಗುತ್ತಿದೆ, ಕ್ಯಾಮೆರಾ ಅಳಡಿಸಲಾಗುತ್ತಿದೆ. ಇದಕ್ಕಾಗಿ ಕೆಲವರು ಹಣ ಕೊಡಲು ಸತಾಯಿಸುತ್ತಾರೆ, ಅದು ತಪ್ಪು. ಆ ಏರಿಯಾದಲ್ಲಿ ಇರಲು ಅವರು ಅರ್ಹರಲ್ಲ. ಪದಾಧಿಕಾರಿಗಳು ಆ ಹಣವನ್ನು ತಮ್ಮ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಬಹುದು ಎಂದು ಅದನ್ನು ಗಮನಿಸಲು ಕೆಲವರು ಹದ್ದುಗಣ್ಣಿನಿಂದ ಕಾಯುತ್ತಿರುತ್ತಾರೆ.

ಯಾರಿಗೆ ವಿನ ನಿರ್ದಯದ ಬಗ್ಗೆ ದೂರುಗಳಿವೆಯೋ, ಅವರು ವಿನಲ್ಲಿ ಸೇರ್ಪಡೆಗೊಳ್ಳಬೇಕು. ಅದರಲ್ಲಿ ಸೇರಿಕೊಂಡ ಬಳಿಕ ಪದಾಧಿಕಾರಿಗಳಾದರು ಹೇಗೆ ಕೆಲಸ ಮಾಡುತ್ತಾರೆ, ಅದು ಎಂತಹ ಥ್ಯಾಂಕ್‌ಲೆಸ್‌ ಕೆಲಸ ಎನ್ನುವುದು ಗೊತ್ತಾಗುತ್ತದೆ. ಈಗ ಕೋವಿಡ್‌ನ್ನು ಹೊರಗಿಟ್ಟರೆ ನಾಳೆ ಅಪರಾಧ ಮತ್ತು ದುರ್ಬಳಕೆಯನ್ನು ದೂರ ಇಡಬಹುದು.

post_corona_women

ಇದು ಹೆದರಿಸುವ ಮಾತಲ್ಲ                                                             

ಕೊರೋನಾದ ಹಾವಳಿ ಬಹಳ ದಿನಗಳ ಕಾಲ ಹಾಗೆಯೇ ಮುಂದುವರಿದರೆ ಮದುವೆ ಮಾಡಿಕೊಳ್ಳುವುದು ಹೇಗೆ ಎಂಬ ಚಿಂತೆ ಆವರಿಸಿಕೊಂಡಿದೆ. ಭಾರತದಲ್ಲಂತೂ ಪ್ರತಿಯೊಬ್ಬ ತಂದೆ ತಾಯಿಯರು ಫಿಕ್ಸ್ ಮಾಡಿದ ಮದುವೆಗಳಿಗೆ ಅಡಿಕ್ಟ್ ಆಗಿದ್ದಾರೆ. ಕೆಲವೊಂದು ಸಮುದಾಯಗಳಲ್ಲಂತೂ ಮದುವೆ ದಿನದ ರಾತ್ರಿಯೇ ಪರಸ್ಪರರ ಮುಖ ನೋಡುತ್ತಾರೆ. ಇಂತಹ ಮದುವೆಗಳು ಎಷ್ಟು ನೋವನ್ನುಂಟು ಮಾಡುತ್ತವೆ ಎನ್ನುವುದು ನಮಗೆ ಗೊತ್ತೇ ಇದೆ. ಹುಡುಗನ ಮನೆಯವರು ಹುಡುಗಿಯನ್ನು ಭೇಟಿ ಆಗಿರುತ್ತಾರೆ. ಅವರ ಮನೆತನ ಎಂಥದು ಎಂಬುದನ್ನು ಕಂಡುಕೊಂಡಿರುತ್ತಾರೆ. ಮಧ್ಯವರ್ತಿಗಳು ಮಾತ್ರ ಏನೇನೋ ವದಂತಿಗಳನ್ನು ಹಬ್ಬಿಸಿರುತ್ತಾರೆ.

ಕೊರೋನಾದ ಇಂದಿನ ಯುಗದಲ್ಲಿ ಭೇಟಿಯೇ ಸಾಧ್ಯವಾಗದಿದ್ದರೆ ಅರೇಂಜ್ಡ್ ಮ್ಯಾರೇಜ್‌ ಕೂಡ ಸುಲಭವಲ್ಲ. ಲವ್ ಮ್ಯಾರೇಜ್‌ಗಳು ಇನ್ನಷ್ಟು ಕಷ್ಟವಾಗುತ್ತವೆ. ಅದು ಮೊದಲು ಬಹಳ ಸುಲಭವಿತ್ತು. 10-20 ಗೆಳೆಯರಾದರೂ ಸೇರುತ್ತಿದ್ದರು. ಅಂತಹ ಸಂದರ್ಭದಲ್ಲಿ ಒಬ್ಬರು ಯಾರನ್ನೊ ಭೇಟಿಯಾಗುತ್ತಿದ್ದರು. ಅದು ಕೂಡ ಇನ್ನೊಂದು ಲವ್ ಮ್ಯಾರೇಜ್‌ಗೆ ಕಾರಣವಾಗುತ್ತಿತ್ತು. ಈಗ ಅದೆಲ್ಲ ಹೇಗೆ ಸಾಧ್ಯ? ಫೋನ್‌ನಲ್ಲಿ ಸಿಗಬಹುದಾ? 6 x 4 ಅಂಗುಲದ ಸ್ಕ್ರೀನ್‌ ಮೇಲೆ ನಿರ್ಧರಿಸಬಹುದಾಗಿ ಮನೆಯ ವಿಳಾಸ ಗೊತ್ತಿಲ್ಲ. ಕೆಲಸ ಏನೆಂದು ತಿಳಿದಿಲ್ಲ. ಸ್ನೇಹಿತರು ಯಾರು ಎನ್ನುವುದರ ಬಗ್ಗೆ ತಿಳಿದಿಲ್ಲ. ಅವರೆಲ್ಲ ಸೇರಿ ಮದುವೆ ನಿರ್ಧರಿಸಿಬಿಡುತ್ತಾರೆ. ಇನ್ನೂ ಸೆಕ್ಸ್ ಅಂತೂ ಮರೆತುಬಿಡಬೇಕು. ಈಗ ಎಲ್ಲಕ್ಕೂ ಮೊದಲು ಕೊರೋನಾ ಟೆಸ್ಟ್ ಆಗಬೇಕು, ರೊಮಾನ್ಸ್ ಮಾತೇ ಎತ್ತುವ ಹಾಗಿಲ್ಲ.

ಇದು ಹೆದರಿಸುವ ಮಾತಲ್ಲ. ಈ ತೆರನಾದ ಜೀವನದ ಮಹತ್ತರ ಹೆಜ್ಜೆಯ ಬಗ್ಗೆ ಯೋಚಿಸಬೇಕಾಗಿದೆ. ಜೀವನವಿಡೀ ಜೊತೆಗಿರುವುದು, ಮಕ್ಕಳನ್ನು ಹೆರುವುದು ಹಾಗೂ ಕೊರೋನಾ ರೋಗಿಯಾದಾಗ ಸಂಗಾತಿಯನ್ನು ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಳ್ಳುವುದು ಸುಲಭದ ಮಾತಲ್ಲ.

ಎಲ್ಲಿಯವರೆಗೆ ಕೊರೋನಾಕ್ಕೆ ಲಸಿಕೆ ಬರುವುದಿಲ್ಲವೋ, ಅಲ್ಲಿಯವರೆಗೆ ಮದುವೆ ಮಾಡಿಕೊಳ್ಳುವ ಹಾಗಿಲ್ಲವೇ? ಇದು ನಿಜಕ್ಕೂ ಕಷ್ಟಕರ. ಮನೆಯಲ್ಲಿ ಇರುವುದರಿಂದ ಮನಸ್ಸಿನ ಕಾಮನೆಗಳನ್ನು ಹತ್ತಿಕ್ಕುವುದು ಕಷ್ಟ. ಕೆಲಸವಂತೂ ಅಪಾಯ ಮೈಮೇಲೆ ಎಳೆದುಕೊಂಡು ತಪ್ಪು ಆಸೆ ಈಡೇರಿಸಿಕೊಳ್ಳಲು ಪ್ರಯತ್ನಿಸಬಹುದು. ಅಂಥವರು ತೊಂದರೆಗೆ ಸಿಲುಕಬಹುದು.

ಯಾವುದೇ ಆಡಂಬರವಿಲ್ಲದೆ ಮದುವೆಗಳಾಗಬಹುದು. ಬ್ಯಾಂಡಿಲ್ಲ, ಬಾಜಾ ಭಜಂತ್ರಿ ಇಲ್ಲ, ಕುಣಿತ ಇಲ್ಲ ಹತ್ತು ಹಲವು ವಿಧಿವಿಧಾನಗಳಿಲ್ಲ. ಫೋನ್‌ನಲ್ಲಿ ಭೇಟಿಯಾದರು, ಚಾಟಿಂಗ್‌ ಮಾಡಿದರು. ಸೂಪರ್‌ ಮಾರ್ಕೆಟ್‌ನ ಲೈನ್‌ನಲ್ಲಿ ಭೇಟಿಯಾದರು. ಮದುವೆ ಮಾಡಿಕೊಂಡರು. ಪುರೋಹಿತರಿಲ್ಲ, ಪಾದ್ರಿಗಳಿಲ್ಲ, ಜಾತಕದ ಸುಳಿವೇ ಇಲ್ಲ. ಧರ್ಮದ ಬಗ್ಗೆ ತಿಳಿದೇ ಇಲ್ಲ. ಮುಖ ನೋಡಿದರು, ಧ್ವನಿ ಕೇಳಿಸಿಕೊಂಡರು ಮತ್ತು ಬಯೋಡೇಟಾ ಕಳಿಸಿಕೊಂಡರು. ಮದುವೆ ವಯಸ್ಸಿಗೆ ಬಂದ ಹುಡುಗ ಹುಡುಗಿಯ ತಾಯಿ ತಂದೆಯರು ಹೊಸದೇನನ್ನಾದರೂ ಯೋಚಿಸುತ್ತಿದ್ದರೆ ಅದು ಸರಿ. ಕೊರೋನಾ ಇನ್ನೂ ಕೆಲವು ವರ್ಷ ನಮ್ಮ ಜೊತೆಗೆ ಇರಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ