ಫ್ರೂಟ್‌ ಕ್ರೀಂ

AA-fruit-cream-(2)

ಸಾಮಗ್ರಿ : 1 ಪ್ಯಾಕೆಟ್‌ ಕ್ರೀಂ, ಸಣ್ಣಗೆ ಹೆಚ್ಚಿದ ಸೇಬು, ಬಾಳೆ, ದ್ರಾಕ್ಷಿ, ಕಿತ್ತಳೆ, ಸಪೋಟ, ಸ್ಟ್ರಾಬೆರಿ ಇತ್ಯಾದಿ (ಒಟ್ಟಾರೆ 2 ಕಪ್‌), 1 ಚಮಚ ತುಂಡರಿಸಿದ ಹಸಿ ಖರ್ಜೂರ, ರುಚಿಗೆ ತಕ್ಕಷ್ಟು ಬೆಲ್ಲದ ಪುಡಿ (ರೆಡಿಮೇಡ್‌).

ವಿಧಾನ : 2 ಚಮಚ ಬಿಸಿ ಹಾಲಿನಲ್ಲಿ ಬೆಲ್ಲದ ಪುಡಿ ಕದಡಿಕೊಂಡು, ಇದಕ್ಕೆ ಕ್ರೀಂ ಬೆರೆಸಿ ಗೊಟಾಯಿಸಿ. ಒಂದು ಬಟ್ಟಲಿಗೆ ಹಣ್ಣುಗಳ ಮಿಶ್ರಣ ಹಾಕಿ, ಅದಕ್ಕೆ ಇದನ್ನು ಬೆರೆಸಿ ಸರ್ವ ‌ಮಾಡಿ.

ನಟ್ಸ್ ರೋಲ್

AA-nuts-roll

ಸಾಮಗ್ರಿ : ಹುರಿದು ತರಿಯಾಗಿಸಿದ ಕಡಲೆಬೀಜ, ಗೋಡಂಬಿ, ಬಾದಾಮಿ, ಪಿಸ್ತಾ, ಎಳ್ಳು  (ಒಟ್ಟಾರೆ 2 ಕಪ್‌), 150 ಗ್ರಾಂ ಹಸಿ ಖರ್ಜೂರ, ತುಸು ಬೆಲ್ಲದ ಪುಡಿ, ತುಪ್ಪ, ಏಲಕ್ಕಿ ಪುಡಿ.

ವಿಧಾನ : ಹಸಿ ಖರ್ಜೂರವನ್ನು ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿ ನಂತರ ಮಿಕ್ಸಿಯಲ್ಲಿ ಪೇಸ್ಟ್ ಮಾಡಿ. ಒಂದು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ ಎಲ್ಲಾ ಸಾಮಗ್ರಿ ಹಾಕಿ ಮಂದ ಉರಿಯಲ್ಲಿ ಹುರಿಯಿರಿ. ಇದಕ್ಕೆ ಖರ್ಜೂರದ ಪೇಸ್ಟ್, ಬೆಲ್ಲ, ಇನ್ನಷ್ಟು ತುಪ್ಪ ಹಾಕಿ ಕೆದಕಿ ಕೆಳಗಿಳಿಸಿ. ಆರಿದ ನಂತರ ಚಿತ್ರದಲ್ಲಿರುವಂತೆ ಆಕಾರ ನೀಡಿ ಸವಿಯಿರಿ.

ಸ್ಪೆಷಲ್ ಶ್ಯಾವಿಗೆ ಪಾಯಸ

ಸಾಮಗ್ರಿ : 1 ಕಪ್‌ ತುಂಡರಿಸಿದ ಶ್ಯಾವಿಗೆ, 1ಲೀ. ಗಟ್ಟಿ ಹಾಲು, ರುಚಿಗೆ ತಕ್ಕಷ್ಟು ಪುಡಿ ಮಾಡಿದ ಬಿಳಿ/ಕೆಂಪು ಕಲ್ಲುಸಕ್ಕರೆ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ, ಖರ್ಜೂರದ ಚೂರು (ಒಟ್ಟಾರೆ 1 ಕಪ್‌), 2 ಚಿಟಕಿ ಏಲಕ್ಕಿ ಪುಡಿ, ತುಸು ತುಪ್ಪ.

ವಿಧಾನ : ಮೊದಲು ತುಸು ತುಪ್ಪ ಬಿಸಿ ಮಾಡಿ ದ್ರಾಕ್ಷಿ, ಗೋಡಂಬಿ ಹುರಿದು ತೆಗೆದಿಡಿ. ಇದಕ್ಕೆ ಮತ್ತಷ್ಟು ತುಪ್ಪ ಹಾಕಿ ಅದರಲ್ಲಿ ಶ್ಯಾವಿಗೆ ಹುರಿಯಿರಿ. ಇದಕ್ಕೆ ಹಾಲು ಬೆರೆಸಿ ಚೆನ್ನಾಗಿ ಕುದಿಸಿ ಬೇಯಿಸಿ. ಕಲ್ಲುಸಕ್ಕರೆಯ ಪುಡಿ, ಏಲಕ್ಕಿ ಕೊನೆಯಲ್ಲಿ ದ್ರಾಕ್ಷಿ, ಗೋಡಂಬಿ ಬೆರೆಸಿ, ಇನ್ನಷ್ಟು ಹಾಲು ಸೇರಿಸಿ ಬಿಸಿಯಾಗಿ ಸವಿಯಲು ಕೊಡಿ.

ಫ್ರೂಟ್ಸ್ ಪನೀರ್‌ ರಬಡಿ

AA-paneer-rabri-with-fruits

ಸಾಮಗ್ರಿ : 150 ಗ್ರಾಂ ಪನೀರ್‌, ಅಗತ್ಯವಿದ್ದಷ್ಟು ಹೆಚ್ಚಿದ ವಿವಿಧ ಹಣ್ಣುಗಳು, ಸಿಹಿ ಸ್ಟ್ರಾಬೆರಿ, 2 ಕಪ್‌ ಹಾಲು.

ವಿಧಾನ : ತುರಿದ ಪನೀರ್‌ನ್ನು ಕುದಿ ಹಾಲಿಗೆ ಹಾಕಿ ಮಂದ ಉರಿಯಲ್ಲಿ ಚೆನ್ನಾಗಿ ಕೆದಕಬೇಕು. ಎಲ್ಲಾ ಹಣ್ಣುಗಳನ್ನೂ ಮಿಕ್ಸಿಯಲ್ಲಿ ಪೇಸ್ಟ್ ಮಾಡಿ ಇದಕ್ಕೆ ಬೆರೆಸಿ. ಕೆಳಗಿಳಿಸಿ ಚೆನ್ನಾಗಿ ಆರಿದ ನಂತರ ಚಿತ್ರದಲ್ಲಿರುವಂತೆ ಸ್ಟ್ರಾಬೆರಿ, ಕಪ್ಪು ದ್ರಾಕ್ಷಿಗಳಿಂದ ಅಲಂಕರಿಸಿ, 1 ತಾಸು ಫ್ರಿಜ್‌ನಲ್ಲಿರಿಸಿ ಸವಿಯಿರಿ.

ಡ್ರೈಫ್ರೂಟ್ಸ್ ಲಡ್ಡು

AA-dryfruity-ladoo-(3)

ಸಾಮಗ್ರಿ : ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ, ಅಂಜೂರ, ಹಸಿ ಖರ್ಜೂರ (ಒಟ್ಟಾರೆ 250 ಗ್ರಾಂ ಚೂರು), ಅಗತ್ಯವಿದ್ದಷ್ಟು ತುಪ್ಪ, ಗೋಂದು, ಏಲಕ್ಕಿಪುಡಿ.

ವಿಧಾನ : ಅಂಜೂರ, ಖರ್ಜೂರವನ್ನು ಮೈಕ್ರೋವೇವ್‌ನಲ್ಲಿ ತುಸು ಬಿಸಿ ಮಾಡಿ ಮಿಕ್ಸಿಯಲ್ಲಿ ಪೇಸ್ಟ್ ಮಾಡಿ. ಉಳಿದೆಲ್ಲವನ್ನೂ ತುಪ್ಪದಲ್ಲಿ ಹುರಿಯಿರಿ. ಗೋಂದನ್ನು ತುಪ್ಪದಲ್ಲಿ ಹುರಿದು ಕುಟ್ಟಿ ಪುಡಿ ಮಾಡಿ. ಇದಕ್ಕೆ ಉಳಿದೆಲ್ಲ ಸಾಮಗ್ರಿ ಹಾಕಿ ಕೆದಕಿ ಕೆಳಗಿಳಿಸಿ. ಆರಿದ ನಂತರ ಉಂಡೆ ಕಟ್ಟಿ ಸವಿಯಿರಿ.

ಖರ್ಜೂರದ ಖೀರು

AA-khajuri-phirni-(7)

ಸಾಮಗ್ರಿ : 1 ಲೀ. ಗಟ್ಟಿ ಹಾಲು, ಅರ್ಧ ಬಟ್ಟಲು ಹಸಿ ಖರ್ಜೂರದ ಪೇಸ್ಟ್, ಅರ್ಧ ಕಪ್‌ ಅಕ್ಕಿ, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಅರ್ಧ ಕಪ್‌), ತುಸು ಬೆಲ್ಲದ ಪುಡಿ, ಏಲಕ್ಕಿ, ತುಪ್ಪ.

ವಿಧಾನ : ಅಕ್ಕಿಯನ್ನು 1-2 ಗಂಟೆ ಕಾಲ ನೆನೆಸಿ ನುಣ್ಣಗೆ ರುಬ್ಬಿಕೊಳ್ಳಿ. ಹಾಲು ಕಾಯಿಸಿ, ಮಂದ ಉರಿಯಲ್ಲಿ ಕುದಿಸುತ್ತಾ ಅರ್ಧದಷ್ಟು ಹಿಂಗಿಸಿ. ಇದಕ್ಕೆ ಅಕ್ಕಿ ಹಿಟ್ಟು ಬೆರೆಸಿ ನಿಧಾನವಾಗಿ ಕೈಯಾಡಿಸುತ್ತಾ ಇರಿ. ಬೆಲ್ಲದ ಪುಡಿ, ಏಲಕ್ಕಿ ಸೇರಿಸಿ. 5 ನಿಮಿಷ ಕುದಿಸಿ ಕೆಳಗಿಳಿಸಿ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಸೇರಿಸಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ