ಸೆಕ್ಸ್ ನಲ್ಲಿ ಮುಕ್ತತೆ ಅತ್ಯಗತ್ಯ. ಇದನ್ನು ಎಷ್ಟು ಮನದಲ್ಲೇ ಅದುಮಿಡುತ್ತೇವೋ ಅದು ಅಷ್ಟೇ ಹೊರಹೊಮ್ಮಿ ಬರಲು ಪ್ರಯತ್ನಿಸುತ್ತದೆ. ಹೀಗಾಗಿ ಲಾಕ್ ಡೌನ್ ಕಳೆದು ಎಲ್ಲ ಫ್ರೀ ಆಯ್ತು ಎನಿಸಿದರೂ, ಕೊರೋನಾ ಮಾರಿಯ ಕಾಟವಂತೂ ತಪ್ಪಿಲ್ಲ.
ಹೀಗಾಗಿ ಸೆಕ್ಸ್ ಮುಂದುವರಿಸಲು ಅತ್ಯಗತ್ಯ ಆರೋಗ್ಯ ಕ್ರಮ ಕೈಗೊಳ್ಳಲೇಬೇಕು, ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಸೆಕ್ಸ್ ನಂತರ ಹಲವು ವಿಷಯಗಳ ಕಡೆ ನೀವು ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಇದರಲ್ಲಿ ಅತಿ ಮುಖ್ಯವಾದುದು ಸೆಕ್ಷುಯಲ್ ಐಸೋಲೇಶನ್. ಸಾಧಾರಾಣವಾಗಿ ನಮ್ಮ ದೇಶದಲ್ಲಿ ನಮ್ಮ ಗುಪ್ತಾಂಗಳ ಕುರಿತಾಗಿ ಬಹಿರಂಗವಾಗಿ ಮಾತನಾಡುವ ಪದ್ಧತಿಯೇ ಇಲ್ಲ. ಹಾಗಾಗಿ ಐಸೋಲೇಶನ್ ಕುರಿತಾಗಿ ಯೋಚಿಸುವ ಗೊಡವೆಯೇ ಇಲ್ಲ. ನಮ್ಮವರ ಗಮನ ಈ ಕಡೆ ಹೋಗುವುದೇ ಇಲ್ಲ, ಏಕೆಂದರೆ ಬಾಲ್ಯದಿಂದಲೇ ಈ ಬಗ್ಗೆ ನಾವು ಕೇಳಿರುವುದಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಹೀಗಾಗಿ ಈ ಕೊರೋನಾ ಮಹಾಭೀತಿ ಮಧ್ಯೆ ಸೆಕ್ಷುಯಲಿ ಐಸೋಲೇಟ್ ಆಗುವುದು ಅನಿವಾರ್ಯ. ಇಡೀ ವಿಶ್ವ ಕೊರೋನಾ ಕಬಂಧ ಬಾಹುಗಳಿಂದ ಇನ್ನೂ ಹೊರಬಂದಿಲ್ಲ. ಸೋಶಿಯಲ್ ಡಿಸ್ಟೆನ್ಸಿಂಗ್ ಈಗಲೂ ಅನಿವಾರ್ಯ. ಹೀಗಿರುವಾಗ ಸೆಕ್ಸ್ ಬೇಕೆನಿಸಿದಾಗ ವಹಿಸಬೇಕಾದ ಎಚ್ಚರಿಕೆಗಳೇನು?
ಲೈಂಗಿಕ ಸುಖ ಬಯಸಿದರೆ ಅದರಿಂದ ನಮಗೆ ಕೊರೋನಾ ಅಂಟಿಕೊಂಡೀತೇ ಎಂಬ ಭಯ ಯಾರನ್ನೂ ಬಿಟ್ಟಿಲ್ಲ. ಈ ಕುರಿತು ನೀವು ಚಿಂತಿಸಿರಬಹುದು, ಆದರೆ ಸಂಕೋಚದ ಕಾರಣ ಯಾರ ಬಳಿಯೂ ಚರ್ಚಿಸಲು ಸಾಧ್ಯವಿಲ್ಲ. ನುರಿತ ವೈದ್ಯರು ಈ ಕುರಿತು ದಂಪತಿಗಳಿಗೆ ನೀಡುವ ಸಲಹೆಗಳೇನು?
ರಿಲೇಶನ್ ಶಿಪ್ ಮೇಲೆ ಪರಿಣಾಮ
ನೀವು ಲೀವ್ ಇನ್ ರಿಲೇಶನ್ ಶಿಪ್‌ನಲ್ಲಿ ಪಾರ್ಟ್ ನರ್ ಜೊತೆ ವಾಸಾಗಿದ್ದೀರೆಂದರೆ ಈ ವಿಷಯದಲ್ಲಿ ತುಸು ದೂರ ಇರುವುದೇ ಸರಿ. ನಿಮ್ಮಿಬ್ಬರಲ್ಲಿ ಯಾರಿಗೆ ಕೊರೋನಾದ ಲಕ್ಷಣ ಕಾಣಿಸಿಕೊಂಡರೂ, ನಿಮ್ಮನ್ನು ನೀವು ಸಂಗಾತಿಯಿಂದ ಐಸೋಲೇಟ್ (ದೂರ ಇರುವಿಕೆ) ಮಾಡಿಕೊಳ್ಳುವುದೇ ಸರಿ. ಇದರಿಂದಾಗಿ ಪಾರ್ಟ್‌ನರ್ ಬಗ್ಗೆ ತಪ್ಪು ತಿಳಿಯಬಾರದು. ಇದರಿಂದ ಇಬ್ಬರೂ ಸುರಕ್ಷಿತರು! ನೀವು ಸೌಖ್ಯವಾಗಿ ಉಳಿದಾಗ ಮಾತ್ರ ಸೆಕ್ಸ್ ಮಜಾ ಪಡೆಯಲು ಸಾಧ್ಯ.
ಕಿಸ್‌ಗೂ ಇರಲಿ ರೇಶನ್
ಈಗ ನೀವು ಸಂಗಾತಿಯನ್ನು ಕಿಸ್ ಮಾಡುವುದಕ್ಕೂ ಹಲವು ಸಲ ಯೋಚಿಸಬೇಕು. ಹಿಂದೆಲ್ಲ `ಕಿಸ್ ಈಸ್ ದಿ ಕೀ ಆಫ್ ಲವ್’ ಎಂದೇ ಭಾವಿಸುತ್ತಿದ್ದರು. ಆದರೆ ಇದು ಈಗ ಭಯಂಕರ ರೋಗಕ್ಕೆ ನಾಂದಿಯೂ ಆದೀತು. ಇದರರ್ಥ ನೀವು ಸಂಗಾತಿಯನ್ನು ಚುಂಬಿಸಲೇಬಾರದು ಎಂದಲ್ಲ. ಕಿಸ್ ಮಾಡಿ, ಅದು ಸಾಂಕೇತಿಕವಾಗಿರಲಿ. ನಿಮ್ಮಲ್ಲಿ ಯಾರಿಗಾದರೂ ಕೆಮ್ಮು ಜ್ವರ ಲಕ್ಷಣಗಳಿದ್ದರೆ ಹಾಗೂ ಇತ್ತೀಚೆಗಷ್ಟೆ ನೀವು ಬೇರೆ ಯಾರನ್ನೋ ಸಂದರ್ಭವಶಾತ್ ಕಿಸ್ ಮಾಡಿದ್ದಲ್ಲಿ ಹಾಗೂ ಅವರಿಗೀಗ ಕೊರೋನಾ ಲಕ್ಷಣಗಳು ಕಾಣಿಸುತ್ತಿದ್ದಲ್ಲಿ, ನಿಮ್ಮನ್ನು ನೀವು ಸೆಲ್ಫ್ ಐಸೋಲೇಶನ್‌ಗೆ ಗುರಿಪಡಿಸಿಕೊಳ್ಳಬೇಕು. ನೀವು ಒಬ್ಬರ ಗುಪ್ತಾಂಗ ಮುಟ್ಟಿರುವಿರಾದರೆ ಖಂಡಿತಾ ಅವರನ್ನು ಚುಂಬಿಸಿರುತ್ತೀರಿ. ಈ ವೈರಸ್ ಜೊಲ್ಲಿನಿಂದ ಬಹುಬೇಗ ಹರಡುತ್ತದೆಂದು ನಿಮಗೆ ಚೆನ್ನಾಗಿ ಗೊತ್ತು. ಹೀಗಾಗಿ ಆ ನಂತರ ಆಪ್ತ ಸಂಗಾತಿಯನ್ನು ಕಿಸ್ ಮಾಡುವುದು ಅಪಾಯಕರವೇ ಸರಿ. ಹೀಗಾಗಿ ಯಾವ ಪಾರ್ಟ್‌ನರ್ ಜೊತೆ ನೀವು ವಾಸಾಗಿಲ್ಲವೇ ಅಂಥವರ ನಿಕಟ ಕಾಂಟ್ಯಾಕ್ಟ್ ಒಳ್ಳೆಯದಲ್ಲ.
ಉತ್ತಮ ಸೆಕ್ಸ್ ಲೈಫ್‌ಗಾಗಿ
ಈ ಮಾಹಾಮಾರಿ ಜನರನ್ನು ಹೇಗೆ ಯೋಚನೆಗೆ ದೂಡಿದೆ ಎಂದರೆ, ಉತ್ತಮ ಸೆಕ್ಸ್ ಲೈಫ್ ಹೊಂದುವುದು ಹೇಗೆಂದು ಅವರು ತಲೆ ಮೇಲೆ ಕೈ ಹೊತ್ತಿದ್ದಾರೆ. ಈ ರೋಗದ ಕಾರಣ ಯಾರು ಐಸೋಲೇಶನ್‌ನಲ್ಲಿದ್ದಾರೋ ಅವರು ಈ ಅವಕಾಶ, ಅಂತರದ ಲಾಭ ಪಡೆಯುತ್ತಿದ್ದಾರೆ. ಅವರು ಕ್ರಿಯೇಟಿವ್ ಆಗತೊಡಗಿದ್ದಾರೆ. ನೀವು ಮತ್ತು ನಿಮ್ಮ ಪಾರ್ಟ್‌ನರ್ ಒಂದೇ ಮನೆಯಲ್ಲಿ ಐಸೋಲೇಶನ್‌ನಲ್ಲಿ ಇರಬೇಕಾಯಿತೆಂದರೆ, ಈ ಮೂಲಕ ನೀವು ನಿಮ್ಮ ಪಾರ್ಟ್‌ನರ್ ಕುರಿತು ಬೇಕಾದಷ್ಟು ತಿಳಿಯಬಹುದು. ಪರಸ್ಪರರ ಇಷ್ಟಾನಿಷ್ಟಗಳ ಕುರಿತು ತಿಳಿಯಬಹುದು. ಒಂದೇ ಮನೆಯಲ್ಲಿದ್ದು ದೈಹಿಕವಾಗಿ ದೂರವಿದ್ದರೂ, ಮಾನಸಿಕವಾಗಿ ಒಂದಾಗಿರಿ.
ಸಮಾಗಮದಲ್ಲಿ ಸಮಾಧಾನ
ಕೊರೋನಾ ಅಂತೂ ಯಾರು ಎತ್ತ ಎಂದಿಲ್ಲದೆ ಆಕ್ರಮಿಸಿಬಿಡುತ್ತದೆ. ಅದಕ್ಕೆ ಒಂದು ದಾರಿ ಬೇಕಾಗಿರುತ್ತದೆ ಅಷ್ಟೆ. ಸಮಾಗಮದ ಸಮಯದಲ್ಲಿ ಯಾವುದೇ ಸೋಂಕಿನ ಭಯವಿರಬಾರದು ಎಂದರೆ ನೀವು ಆದಷ್ಟೂ ಜಾಗೃತರಾಗಿರಬೇಕು. ಅಂದರೆ ಸ್ವಚ್ಛತೆ ಶುಭ್ರತೆಗಳತ್ತ ಹೆಚ್ಚು ಎಚ್ಚರವಹಿಸಬೇಕು. ನಮ್ಮ ಜೀವನದಲ್ಲಿ ಸ್ವಚ್ಛತೆ ಶುಭ್ರತೆ ಎಷ್ಟು ಮುಖ್ಯವೋ ಸೆಕ್ಸ್ ಲೈಫ್‌ನಲ್ಲಿ ಸೆಕ್ಷುಯಲ್ ಹೈಜೀನ್ ಕೂಡ ಅಷ್ಟೇ ಮುಖ್ಯ. ಒಂದು ಆರೋಗ್ಯಕರ ಸುಖೀ ಲೈಂಗಿಕ ಜೀವನಕ್ಕಾಗಿ, ದಾಂಪತ್ಯ ಸಮಾಗಮಕ್ಕೆ ಮೊದಲು ಹಾಗೂ ನಂತರ ಸ್ವಚ್ಛತೆ ಶುಭ್ರತೆ ಕುರಿತು ಹೆಚ್ಚು ಕಾಳಜಿ ವಹಿಸಬೇಕು. ಸಾಮಾನ್ಯವಾಗಿ ಜನ ಸೆಕ್ಷುಯಲ್ ಹೈಜೀನ್ ಕುರಿತು ಹೆಚ್ಚು ಚಿಂತಿಸುವುದಿಲ್ಲ.
ಇದರಿಂದಾಗಿ ಯೂರಿನರಿ ಟ್ರಾಕ್ಟ್ ಇನ್‌ಫೆಕ್ಷನ್‌ನ ಅಪಾಯ ಇಬ್ಬರು ಸಂಗಾತಿಗಳಿಗೂ ತಪ್ಪಿದ್ದಲ್ಲ. ಹೀಗಾಗಿ ಸ್ವಚ್ಛತೆ ಶುಭ್ರತೆ ಅತಿ ಮುಖ್ಯ. ಸೆಕ್ಸ್ ನಂತರ ಬೇಗ ನಿದ್ರಿಸುವ ಅಭ್ಯಾಸವಿದ್ದರೆ ಅದನ್ನು ಬದಿಗಿಟ್ಟು, ಸಾಧ್ಯವಾದಷ್ಟೂ ಹೈಜೀನ್ ಕಡೆ ಗಮನ ಕೊಡದಿದ್ದರೆ, ನಿಮಗೆ ಸೋಂಕಿನ ಹಿಂಸೆ ತಪ್ಪಿದ್ದಲ್ಲ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯ, ನಿಮಗೋ ಸಂಗಾತಿಗೋ ಕೆಮ್ಮು ಜ್ವರ ಇಲ್ಲ ತಾನೇ ಎಂಬುದು. ಹಾಗಿದ್ದಾಗ ನೀವು ಐಸೋಲೇಟ್ ಆಗುವುದೇ ಸರಿ, ಏಕೆಂದರೆ ಕೆಲವು ಕ್ಷಣಗಳ ಸುಖಕ್ಕಾಗಿ ಅಪಾಯ ತಂದುಕೊಳ್ಳಬಾರದು.
ಸೆಕ್ಷುಯಲ್ ವಾಶಿಂಗ್
ಸೆಕ್ಸ್ ಮೊದಲು ಮತ್ತು ನಂತರ ಉತ್ತಮ ರೀತಿಯಲ್ಲಿ ಹ್ಯಾಂಡ್ ವಾಶ್ ಮಾಡಿಕೊಳ್ಳುವುದೂ ಅಷ್ಟೇ ಮುಖ್ಯ. ಏಕೆಂದರೆ ಬ್ಯಾಕ್ಟೀರಿಯಾ ಅಥವಾ ಕೀಟಾಣುಗಳು ಸಾಮಾನ್ಯವಾಗಿ ನಮ್ಮ ಕೈಗಳಿಂದಲೇ ಹರಡುತ್ತವೆ. ಸೆಕ್ಸ್ ಸಂದರ್ಭದಲ್ಲಿ ಸಮಾಗಮದ ಉತ್ತುಂಗ ಸುಖಕ್ಕಾಗಿ ಕೈಗಳು ಅತ್ತಿತ್ತ ಸರಿಯುತ್ತವೆ, ಅಂಥ ಸಂದರ್ಭದಲ್ಲಿ ನಮ್ಮ ಕೈಗಳು ಶುಚಿಯಾಗಿರದಿದ್ದರೆ, ಗುಪ್ತಾಂಗ ಬೇಗ ಕೀಟಾಣುವಿಗೆ ಬಲಿಯಾಗುವ ಸಾಧ್ಯತೆಗಳಿವೆ. ಹೀಗಾಗಿ ಸೆಕ್ಸ್ ಗೆ ಮೊದಲು ಮತ್ತು ನಂತರ, ಸತತ 20 ಕ್ಷಣ ಕೈಗಳನ್ನು ಸೋಪು ಹಚ್ಚಿ ಚೆನ್ನಾಗಿ ತೊಳೆಯಿರಿ. ಲೈಂಗಿಕ ಸಮಾಗಮಕ್ಕೆ ಮೊದಲು ಮತ್ತು ನಂತರ ನಿಮ್ಮ ಗುಪ್ತಾಂಗಳನ್ನು ಉತ್ತಮವಾಗಿ ಶುಚಿಗೊಳಿಸಿಕೊಳ್ಳಿ.
ಸೋಂಕಿತ ಗಪ್ತಾಂಗಗಳು
ಸೆಕ್ಸ್ ನಂತರ ನಿಮ್ಮ ಗುಪ್ತಾಂಗಗಳನ್ನು ಶುಚಿಯಾಗಿಟ್ಟುಕೊಳ್ಳುವುದೂ ಅಷ್ಟೇ ಮುಖ್ಯ. ಯಾವುದೇ ತರಹದ ಬ್ಯಾಕ್ಟೀರಿಯಾ ಹರಡದಂತೆ ತಡೆಯಲು ಅತಿ ಅಗತ್ಯವಾದುದೆಂದರೆ, ಸಮಾಗಮದ ನಂತರ ತುಸು ಬೆಚ್ಚಗಿನ ನೀರಿನಿಂದ ನಿಮ್ಮ ಗುಪ್ತಾಂಗಗಳನ್ನು ತೊಳೆದು ಶುಚಿಗೊಳಿಸಿ. ಅಗತ್ಯವೆನಿಸಿದರೆ ಬೆಚ್ಚಗಿನ ನೀರಿನ ಜೊತೆ ಮೈಲ್ಡ್ ಸೋಪ್ ಸಹ ಬಳಸಬಹುದು. ಆದರೆ ನಿಮ್ಮ ಸ್ಕಿನ್ ಬಹಳ ಸೆನ್ಸಿಟಿವ್ ಆಗಿದ್ದರೆ, ನಿಮಗೆ ಇರಿಟೇಶನ್ ಸಮಸ್ಯೆ ಆಗಬಹುದು. ಗುಪ್ತಾಂಗಗಳ ಶುಚಿತ್ವಕ್ಕಾಗಿ ಫ್ಯಾನ್ಸಿ ಲೋಶನ್ ಯಾ ಪರ್ಫ್ಯೂಮ್ ಬಳಸುವ ಬದಲು, ಏವನ್ ಮುಂತಾದ ಕಂಪನಿಗಳ `ಪ್ರೈವೇಟ್ ಪಾರ್ಟ್ ಹೈಜೀನ್ ಲೋಶನ್’ ಬಳಸಿ ಶುಚಿಗೊಳಿಸಿ. ಸಂಗಾತಿ ಜೊತೆ ಸಮಾಗಮ ಮುಗಿಸಿ ನೀವು ಬಾತ್ ರೂಮಿಗೆ ಕ್ಲೀನಿಂಗ್‌ಗಾಗಿ ಹೋದಾಗ ಮೂತ್ರ ವಿಸರ್ಜನೆ ಮುಗಿಸಿಯೇ ಬನ್ನಿ. ಇದರರ್ಥ ನಿಮ್ಮ ಬ್ಲಾಡರ್ ಖಾಲಿ ಆಗಬೇಕು. ಏಕೆಂದರೆ ಸೆಕ್ಸ್ ಕಾರಣ ಯಾವುದೇ ಬಗೆಯ ಬ್ಯಾಕ್ಟೀರಿಯಾ ನಿಮ್ಮ ಯೂರಿಥ್ರಾವರೆಗೂ ಪ್ರವೇಶಿಸಿದ್ದರೆ, ಮೂತ್ರ ವಿಸರ್ಜನೆಯಿಂದಾಗಿ ಅದು ಹೊರ ಹೋಗಿಬಿಡುತ್ತದೆ. ಅದಾದ ಮೇಲೆ 1-2 ಗ್ಲಾಸ್ ನೀರು ಕುಡಿದು ಶಾಂತವಾಗಿ ನಿದ್ರಿಸಿ.
ಸುರಕ್ಷತೆಗಾಗಿ ಕಾಂಡೋಮ್
ಕೊರೋನಾ ವೈರಸ್ ಕಾರಣ ವಿಶ್ವದ ಅನೇಕ ದೇಶಗಳು ಲಾಕ್ ಡೌನ್ ಮುಗಿಸಿ, ಮುಂದುವರಿದಿವೆ. ಕಾಂಡೋಮ್ ತಯಾರಿಸುವ ಕಂಪನಿಗಳು ಸಹ ಲಾಕ್ ಡೌನ್‌ನಿಂದ ಮುಕ್ತವಾಗಿರಲಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಕಾಂಡೋಮ್ ಸಿಗುವುದೇ ದುರ್ಲಭವಾಯ್ತು. ವಿಶ್ವದಲ್ಲಿ ಎಲ್ಲೆಡೆ ಇದರ ಕೊರತೆ ದೊಡ್ಡದಾಗಿ ಕಂಡುಬಂತು. ಹೀಗಾಗಿ ಜನರಿಗೆ ಮಾರುಕಟ್ಟೆಯಲ್ಲಿ ಇದು ಸಿಗುತ್ತಲೇ ಇಲ್ಲ. ನೀವು ಸಹ ಇದೇ ಇಕ್ಕಟ್ಟಿಗೆ ಸಿಲುಕಿದ್ದರೆ, ನಿಮ್ಮ ಕಾಮದಾಸೆ ಕಂಟ್ರೋಲ್ ಮಾಡಿ. ನಿಮ್ಮ ಸಂಗಾತಿ ಬಳಿ ಈ ಕುರಿತು ಮುಕ್ತವಾಗಿ ಚರ್ಚಿಸಿ. ಇಬ್ಬರೂ ಕೂಡಿ ಉಪಾಯ ಹುಡುಕಿ. ಈ ಕಾಮದಾಸೆ ತಡೆಯಲು ಆಗದಿದ್ದರೆ, ಇಬ್ಬರೂ ಕೂಡಿ ಬೇರೇನಾದರೂ ಸಾಧ್ಯವೇ ವಿಚಾರಿಸಿ. ನಿಮ್ಮ ವಿಚಾರಗಳನ್ನು ಕಂಟ್ರೋಲ್ ಮಾಡಲು ಯತ್ನಿಸಿ. ಪ್ರತಿ ಸಲ ಸಮಾಗಮದ ಬಗ್ಗೆ ಯೋಚಿಸುವಾಗ, ನಿಮ್ಮ ಕಾಮದಾಸೆ ಕಂಟ್ರೋಲ್ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ನಿಮ್ಮ ಮನಸ್ಸಿನಲ್ಲಿ ಈ ಯೋಚನೆ ತೀವ್ರವಾದಾಗ, ಆದಷ್ಟೂ ಅದರಿಂದ ನಿಮ್ಮ ಗಮನ ಬೇರೆ ಕಡೆ ಹರಿಯುವಂತೆ ಮಾಡಿ. ಸೆಕ್ಷುಯಲ್ ಇಂಧನವನ್ನು ಬೇರೆ ಕ್ರಿಯೇಟಿವ್ ಕೆಲಸಗಳಿಗೆ ಬಳಸಿಕೊಳ್ಳಿ. ಪ್ರೇಮ, ಪ್ರೀತಿ, ರೊಮಾನ್ಸ್ ಎಂದರೆ ಕೇವಲ ದೈಹಿಕ ಸಮಾಗಮವಷ್ಟೇ ಅಲ್ಲ.
ಸ್ಥೂಲಕಾಯರು ದೂರವಿರಿ
ಸಂಶೋಧನೆಗಳ ಪ್ರಕಾರ ಸ್ಥೂಲತೆಯುಳ್ಳ ಸ್ತ್ರೀಪುರುಷರು ಈ ಕೊರೋನಾ ಸಂದರ್ಭದಲ್ಲಿ ಸೆಕ್ಸ್ ನಿಂದ ದೂರವಿರುವುದೇ ಲೇಸು. ಆಧುನಿಕ ವಿಜ್ಞಾನಿಗಳು ಸಹ ಇದನ್ನೇ ಪುಷ್ಟೀಕರಿಸುತ್ತಾರೆ. ಅದರಲ್ಲೂ ಈ ಕೊರೋನಾದ ಕಾಟದ ಮಧ್ಯೆ ಇಂಥವರು ಅಕಸ್ಮಾತ್‌ಸೋಂಕಿಗೆ ಒಳಗಾಗಿ ತಿಳಿಯದೆ ಸೆಕ್ಸ್ ನಲ್ಲಿ ಮುಂದುವರಿದರೆ ಸಂಗಾತಿಗೆ ಅಪಾಯ ತಪ್ಪಿದ್ದಲ್ಲ. ಇಂಥವರಿಗೆ ಬಿ.ಪಿ., ಶುಗರ್‌ಹೆಚ್ಚಿರುವುದರಿಂದ ಬೇಗ ಕೋವಿಡ್ ಹೆಮ್ಮಾರಿಗೆ ಬಲಿಯಾಗುತ್ತಾರೆ, ದೂರ ಉಳಿಯುವುದೊಂದೇ ದಾರಿ.
– ಡಾ. ಪಿ. ವಿಜಯಕುಮಾರಿ