ಕೊರೋನಾದ ಅವಧಿಯಲ್ಲಿ ಕೌಟುಂಬಿಕ ಕಲಹಗಳು ಸಾಕಷ್ಟು ಏರಿಕೆಯಾಗಿದ್ದವು. ಪೂಜೆ, ಪುನಸ್ಕಾರದ ಕಾರಣವೊಡ್ಡಿ ದೇವಸ್ಥಾನಗಳನ್ನು ತೆರೆದು ಮಹಿಳೆಯರಿಗೆ ದೇವರಲ್ಲಿ ಶರಣಾಗಿ ಕಷ್ಟದಿಂದ ಪಾರಾಗಲು ಉಪದೇಶ ನೀಡಲಾಯಿತು. ಕೊರೋನಾ ಬಂದ್‌ ಆದ್ದರಿಂದ ಜನರ ಭರವಸೆ ಕಡಿಮೆಯಾಗುತ್ತ ಹೊರಟಿತ್ತು. ಇಂತಹ ಸ್ಥಿತಿಯಲ್ಲಿ ನೈವೇದ್ಯ, ಆರತಿ ತಟ್ಟೆಯ ವಹಿವಾಟು ನಿಂತು ಹೋಗದಿರಲಿ ಎಂದು ಎಲ್ಲ ಧರ್ಮಗಳಲ್ಲೂ ಪೂಜಾ ಸ್ಥಳಗಳನ್ನು ತೆರೆಯುವ ಆಗ್ರಹ ಹೆಚ್ಚುತ್ತಲೇ ಹೊರಟಿತ್ತು.

ಧಾರ್ಮಿಕ ಸ್ಥಳಗಳಿಗೆ ಹೋದರೆ ಕೊರೋನಾದಿಂದ ರಕ್ಷಣೆ ಸಿಗುವುದಿಲ್ಲ ಎನ್ನುವುದು ಜನರಿಗೆ ಗೊತ್ತಾಗಿ ಹೋಯಿತು. ಆ ಕಾರಣದಿಂದ ಈಗಲೂ ಈ ಸ್ಥಳಗಳಲ್ಲಿ ಅಷ್ಟೊಂದು ದಟ್ಟಣೆ ಕಣ್ಣಿಗೆ ಬೀಳುತ್ತಿಲ್ಲ. ಈಗ ದಾನ ಹಾಗೂ ಕಾಣಿಕೆಗಾಗಿ ಆನ್‌ ಲೈನ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಆದಾಗ್ಯೂ ಮಹಿಳೆಯರ ನಂಬಿಕೆ ಮಾತ್ರ ತಗ್ಗುತ್ತಿಲ್ಲ. ದರ್ಶನ ಮಾಡುವವರಿಂದ ಹಿಡಿದು ಪೂಜಾರಿಗಳ ತನಕ ಎಲ್ಲರೂ ಭಯದಲ್ಲಿ ಬದುಕುತ್ತಿರುವಾಗ ಅವರು ಬೇರೆಯವರಿಗೆ ಕಷ್ಟನ್ನು ಹೇಗೆ ಬಗೆಹರಿಸಲು ಸಾಧ್ಯ?

ಕೊರೋನಾ ಸಂಕಷ್ಟದ ಕಾಲದಲ್ಲಿ ಮೂಲಭೂತ ಹಕ್ಕುಗಳು ಮೂಲೆಗುಂಪಾಗಿದ್ದವು. ಲಾಕ್‌ ಡೌನ್‌ ಅವಧಿಯಲ್ಲಿ ಪೂಜೆ ಮಾಡುವ ಹಕ್ಕಿನ ಕುರಿತಂತೆ ದೇಗುಲ ಹಾಗೂ ಚರ್ಚ್‌ನಂತಹ ಪೂಜಾಸ್ಥಳಗಳನ್ನು ತೆರೆಯುವಂತಹ ಬೇಡಿಕೆ ಅಮೆರಿಕಾದಿಂದ ಹಿಡಿದು ಭಾರತದ ತನಕ ಎಲ್ಲೆಡೆ ಕೇಳಿಬಂದಿತ್ತು. ಆದರೆ ಕೊರೋನಾದ ಸಂಕಷ್ಟದಲ್ಲಿ ದೇಗುಲಗಳನ್ನು ತೆರೆಯಲು ನಿರ್ಬಂಧವಿತ್ತೇ ಹೊರತು, ಮನೆಯಲ್ಲಿ ಪೂಜೆ ಪುನಸ್ಕಾರಕ್ಕೆ ಯಾವುದೇ ಅಡೆ ತಡೆ ಇರಲಿಲ್ಲ.

ದೇಗುಲಗಳನ್ನು ತೆರೆಯುವುದರ ಹಿಂದಿನ ಉದ್ದೇಶ ಇಷ್ಟೇ ಆಗಿತ್ತು. ಅದೇನೆಂದರೆ ಪೂಜಾರಿಗಳಿಗೆ ಕಾಣಿಕೆಗಳು ದೊರೆಯುತ್ತಿರಲಿಲ್ಲ. ದೇವಸ್ಥಾನದ ಹುಂಡಿಗಳಿಗೆ ಹಣ ಬೀಳುತ್ತಿರಲಿಲ್ಲ. ದೇವಸ್ಥಾನಗಳಿಗೆ ದಾನ ಕಾಣಿಕೆ ನೀಡುವವರಲ್ಲಿ, ಹೆಚ್ಚಿನವರು ಮಹಿಳೆಯರೇ. ಇಂತಹ ಸ್ಥಿತಿಯಲ್ಲಿ ಮಹಿಳೆಯರನ್ನು ದೇವಸ್ಥಾನಕ್ಕೆ ಕರೆತರುವುದು ಹಾಗೂ ಪೂಜೆ ಪುನಸ್ಕಾರಗಳಿಗೆ ದೇವಸ್ಥಾನಗಳನ್ನು ತೆರೆಯಬೇಕೆನ್ನುವ ಬೇಡಿಕೆ ಪ್ರಬಲವಾಗಿತ್ತು.

3 ತಿಂಗಳ ಲಾಕ್‌ ಡೌನ್‌ ಅವಧಿಯಲ್ಲಿ ಪೂಜಾರಿಗಳು ಹಾಗೂ ಬ್ರಾಹ್ಮಣರ ಕೆಲವು ಸಂಘಟನೆಗಳು ಪೂಜಾರಿ ಪುರೋಹಿತರಿಗೆ ದೈನಂದಿನ ಹೊಟ್ಟೆಪಾಡಿಗೆ ತೊಂದರೆಯಾಗುತ್ತಿದೆ. ಅದಕ್ಕಾಗಿ ದೇವಸ್ಥಾನದ ಬಾಗಿಲುಗಳನ್ನು ತೆರೆಯಿರಿ ಎಂಬ ಲಿಖಿತ ಮನವಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು.

ಕೊರೋನಾ ಕಾಲದಲ್ಲಿ ದೇವಸ್ಥಾನಗಳು ಹಾಗೂ ಇತರೆ ಪೂಜಾ ಸ್ಥಳಗಳಿಗೆ ಬೀಗ ಜಡಿಯಲಾಗಿತ್ತು. ದೇವಸ್ಥಾನಗಳು ಭಕ್ತರಿಂದ ದೊರೆಯುವ ದಾನ ಹಾಗೂ ಕಾಣಿಕೆಗಳ ಮೇಲೆ ನಿಂತಿದ್ದವು.

ಆದರೆ ಅವು ಯಾವವೂ ದೊರೆಯದ್ದರಿಂದ ಆದಾಯದ ಸಂಕಷ್ಟ ತಲೆದೋರಿತ್ತು. ದೇವಸ್ಥಾನಗಳ ಬಳಿ ಈ ಮುಂಚೆಯೇ ಸಂಗ್ರಹವಾಗಿದ್ದ ಚಿನ್ನಬೆಳ್ಳಿ ಹಾಗೂ ಇತರೆ ಕಾಣಿಕೆ ವಸ್ತುಗಳನ್ನು ಅವು ಇಂತಹ ಸಂಕಷ್ಟದ ಸಮಯದಲ್ಲಿ ಬಳಸಿಕೊಳ್ಳಲು ತಯಾರಿರಲಿಲ್ಲ. ಮತ್ತೊಂದೆಡೆ ಜನರ ಮನಸ್ಸಿನಲ್ಲಿ ಒಂದು ವಿಷಯ ಕುಳಿತುಬಿಟ್ಟಿತ್ತು. ಕೊರೋನಾದ ಭಯದಿಂದ ದೇವರು ತನ್ನ ಬಾಗಿಲು ಮುಚ್ಚಿಕೊಂಡು ಕುಳಿತಿರುವಾಗ ಅವನು ಜನರನ್ನು ಕೊರೋನಾದಿಂದ ಹೇಗೆ ರಕ್ಷಿಸಲು ಸಾಧ್ಯ

ಧಾರ್ಮಿಕತೆ ಉಳಿಸುವ ಕಸರತ್ತು

ಲಾಕ್‌ ಡೌನ್‌ ಅವಧಿಯಲ್ಲಿ ಪ್ರಧಾನಿ ಮೋದಿ ಜನರಲ್ಲಿ ಧಾರ್ಮಿಕ ಭಾವನೆಗಳನ್ನು ಕಾಯ್ದುಕೊಂಡು ಹೋಗಲು ಪರಿಪೂರ್ಣ ಪ್ರಯತ್ನ ಮಾಡಿದರು. ಮಾರ್ಚ್‌ 22 `ಜನತಾ ಕರ್ಫ್ಯೂ’ ದಿನದಂದು ಜನರಿಗೆ ಚಪ್ಪಾಳೆ ಹಾಗೂ ಜಾಗಟೆ ಬಾರಿಸಲು ವಿನಂತಿಸಿಕೊಂಡಿದ್ದರು. ಆ ಬಳಿಕ ಸಂಪೂರ್ಣ ಲಾಕ್‌ ಡೌನ್‌ ಬಳಿಕ ಶಂಖ ಊದುವುದು, ಚಪ್ಪಾಳೆ ಹೊಡೆಯುವುದು, ದೀಪ ಉರಿಸುವುದರ ಮೂಲಕ ಮನೆಯಲ್ಲಿಯೇ ಉಳಿದುಕೊಂಡು ದೇವರ ಪೂಜೆ ಮಾಡಲು ಸಂದೇಶ ನೀಡಿದರು.

ಕ್ರಮೇಣ ಕೊರೋನಾದ ಸಂಕಷ್ಟ ಹೆಚ್ಚುತ್ತಾ ಹೋಯಿತು. ಯಾವುದೇ ತೆರನಾದ ಪ್ರಯತ್ನಗಳು ಕೆಲಸಕ್ಕೆ ಬರಲಿಲ್ಲ. ಪ್ರಧಾನಿ ಜನರ ಧಾರ್ಮಿಕ ಭಾವನೆಗಳನ್ನು ಕಾಯ್ದುಕೊಂಡು ಹೋಗಲು ಪ್ರಯತ್ನಿಸಿದರು. ರಮ್ಜಾನ್‌ ಹಾಗೂ ನವರಾತ್ರಿ ಇವು ಕೊರೋನಾದ ಮೇಲೆ ಪ್ರಭಾವ ಬೀರುತ್ತವೆ. ಕೊರೋನಾ ತಗ್ಗುತ್ತದೆ ಎಂದು ಅವರು ಭರವಸೆ ನೀಡಿದ್ದರು. 3 ತಿಂಗಳ ದೊಡ್ಡ ಲಾಕ್‌ ಡೌನ್‌ ಬಳಿಕ ಕೊರೋನಾ ತನ್ನ ಅಟ್ಟಹಾಸ ಕಡಿಮೆ ಮಾಡಲಿಲ್ಲ ಎಂದಾಗ ದೇಗುಲಗಳ ಬಾಗಿಲು ತೆರೆಯಲಾಯಿತು. ಏಕೆಂದರೆ ದೇಗುಲಗಳಿಗೆ ದಾನ ಹಾಗೂ ಕಾಣಿಕೆ ಸಿಗಬೇಕಿತ್ತು.

ದಾನ ಕಾಣಿಕೆ ಹರಿದು ಬರಲೆಂದು ಕೇವಲ ದೇವಸ್ಥಾನ ಹಾಗೂ ಪೂಜಾ ಸ್ಥಳಗಳನ್ನಷ್ಟೇ ತೆರೆಯಲಾಗಲಿಲ್ಲ. ದರ್ಶನಕ್ಕೆ ಬರುವವರು ಸುರಕ್ಷಿತಾಗಿರಲೆಂದು ಅಲ್ಲಿ ಕೆಲವು ಬದಲಾವಣೆಗಳನ್ನು ಕೂಡ ಮಾಡಲಾಯಿತು. ಅದರಲ್ಲಿನ ದೊಡ್ದ ಬದಲಾವಣೆಯೆಂದರೆ, ಪ್ರಸಾದ ನೀಡದಿರುವುದು ಹಾಗೂ ಮೂರ್ತಿಗಳನ್ನು ಮುಟ್ಟಬಾರದು ಎನ್ನುವುದಾಗಿತ್ತು.

ಪೂಜಾ ಸ್ಥಳಗಳ ಬಾಗಿಲುಗಳನ್ನು ತೆರೆಯುವುದು ಹಾಗೂ ದೇವರಿಗೆ ಪೂಜೆ ಮಾಡಬೇಕೆಂಬ ಬೇಡಿಕೆ ಇತ್ತು. ಆದರೆ ಕೊರೋನಾದ ಹೆದರಿಕೆಯ ಪ್ರಭಾವ ಮಾತ್ರ ಇದ್ದೇ ಇದೆ. ದೇಗುಲಗಳನ್ನು ತೆರೆಯಬೇಕೆನ್ನುವ ಸರ್ಕಾರದ ಆದೇಶದ ಬಳಿಕ ಪ್ರತಿಯೊಂದು ದೇಗುಲ ಕೊರೋನಾದಿಂದ  ಸುರಕ್ಷಿತವಾಗಿರಲು ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡವು. ದೇವರನ್ನು ದೂರದಿಂದಲೇ ದರ್ಶನ  ಮಾಡಬೇಕು. ಪೂಜೆಯ ಸಮಯದಲ್ಲಿ ಮಾತ್ರ ದರ್ಶನ ಮಾಡಬೇಕು. ಪರಸ್ಪರರದಿಂದ ಅಂತರ ಕಾಯ್ದುಕೊಳ್ಳಬೇಕು ಹಾಗೂ ಮಾಸ್ಕ್ ಧರಿಸುವ ಅನಿವಾರ್ಯತೆ ಮಾಡಲಾಯಿತು.

ದೇವಸ್ಥಾನಗಳನ್ನು ತೆರೆಯುವುದರ ಹಿಂದಿನ ಎಲ್ಲಕ್ಕೂ ದೊಡ್ಡ ಕಾರಣವೆಂದರೆ, ಒಂದು ಸಲ ಜನರ ಮನಸ್ಸಿನಲ್ಲಿ ದೇವಸ್ಥಾನ ಹಾಗೂ ದೇವರು ನಮ್ಮನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ ಎಂದು ಗೊತ್ತಾಗಿಬಿಟ್ಟರೆ ಅವರು ಮತ್ತೆಂದೂ ಸುಲಭವಾಗಿ ದೇವಸ್ಥಾನಗಳಿಗೆ ಬರುವುದಿಲ್ಲ. ಅಂದಹಾಗೆ ಧರ್ಮ ಕೂಡ ಒಂದು ಅಮಲಿನ ಥರ. ಒಂದು ಸಲ ಅದರ ಅಭ್ಯಾಸ ತಪ್ಪಿ ಹೋದರೆ ಮುಂದೆ ಅದರ ಅಭ್ಯಾಸ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಯಾವ ರೀತಿಯಲ್ಲಿ ಮದ್ಯ, ಗುಟ್ಕಾ ಮಾರುವವರು ಹೇಗೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರೊ ಅದೇ ರೀತಿ ದೇವಸ್ಥಾನಗಳಿಗೆ ಸಂಬಂಧಪಟ್ಟ ಜನರು ಕೂಡ ದೇಗುಲಗಳನ್ನು ತೆರೆಯಲು ಒತ್ತಡ ಹೇರಲು ಶುರು ಮಾಡಿದ್ದರು. ಕೊರೋನಾದ ಲಾಕ್‌ ಡೌನ್‌ ಅವಧಿಯಲ್ಲಿ ಮನೆಗಳಲ್ಲಿ ಪೂಜೆ ಪುನಸ್ಕಾರಕ್ಕೆ ನಿರ್ಬಂಧ ಇರಲಿಲ್ಲ. ಒಂದು ವೇಳೆ ದಾನ ಕಾಣಿಕೆಯ ವಿಷಯವೇ ಇರದಿದ್ದರೆ ದೇವಸ್ಥಾನವನ್ನು ತೆರೆಯಬೇಕೆಂದು ಏಕೆ ಆಗ್ರಹಿಸುತ್ತಿದ್ದರು?

ಕಾಣಿಕೆ ತಟ್ಟೆ ಹಾಗೆಯೇ ಉಳಿಯಿತು

ದೇವಸ್ಥಾನಗಳನ್ನು ಆರತಿ ಬೆಳಗುವ ಸಮಯದಲ್ಲಿ ತೆರೆಯುವುದರ ಹಿಂದಿನ ಉದ್ದೇಶ ಬೇರೆಯೇ ಆಗಿದೆ. ಆ ವೇಳೆಯಲ್ಲಿಯೇ ಅತಿ ಹೆಚ್ಚಿನ ಕಾಣಿಕೆ ಅರ್ಪಿಸಲಾಗುತ್ತದೆ. ದೇವಸ್ಥಾನಗಳು ಬಹಳಷ್ಟು ಬದಲಾವಣೆ ಮಾಡಿಕೊಂಡ. ಆದರೆ ಕಾಣಿಕೆಯ ತಟ್ಟೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆರತಿ ಸಮಯದಲ್ಲಿ ಹೆಚ್ಚಿನ ಜನರು ಕಾಣಿಕೆ ಅರ್ಪಿಸಲಿ ಎಂದು ಆ ಸಮಯದಲ್ಲಿ ದೇವಸ್ಥಾನದ ಪ್ರವೇಶಕ್ಕೆ ಅನುಮತಿ ನೀಡಲಾಯಿತು.

ಆದರೆ ಯಾವುದೇ ಒಂದು ದೇವಾಲಯದಲ್ಲಿ ಈಗ ಮೊದಲಿನ ಹಾಗೆ ಜನದಟ್ಟಣೆ ನೋಡಲು ಸಿಗುತ್ತಿಲ್ಲ. ಒಂದು ವೇಳೆ ಜನರನ್ನು ದೇವರೇ ರಕ್ಷಿಸುತ್ತಿದ್ದಾನೆಂದರೆ, ದೇವಸ್ಥಾನಗಳ ಬಾಗಿಲುಗಳು ಮುಚ್ಚಲ್ಪಡುತ್ತಿರಲಿಲ್ಲ. ಪೂಜಾರಿಗಳು ಮಾಸ್ಕ್ ಇಲ್ಲಿ ಬಟ್ಟೆಯಿಂದ ಮುಖ ಮುಚ್ಚಿಕೊಂಡು ಭಕ್ತರನ್ನು ಎದುರಾಗುತ್ತಿರಲಿಲ್ಲ.

ದೇವಸ್ಥಾನಗಳ ಎದುರು ಪೂಜಾ ಸಾಮಗ್ರಿ ಮಾರುವ ಹೆಚ್ಚಿನ ಅಂಗಡಿಗಳು ಬಂದ್‌ ಆಗಿದ್ದವು. ದೇವಸ್ಥಾನಗಳನ್ನು ತೆರೆದು ಅವರಿಗೂ ದೈನಂದಿನ ಮಾರಾಟ ಪ್ರಕ್ರಿಯೆ ಶುರು ಮಾಡಿಸಬೇಕು ಎನ್ನುವುದು ಇದರ ಹಿಂದಿನ ಉದ್ದೇಶ. ವಾಸ್ತವದಲ್ಲಿ ದೇವಸ್ಥಾನ, ಪ್ರಸಾದ, ಕಾಣಿಕೆ ಹಾಗೂ ದೇವಸ್ಥಾನದ ಎದುರಿಗಿನ ಅಂಗಡಿಕಾರರ ನಡುವೆ ಪರಸ್ಪರ ಸಂಬಂಧವಿರುತ್ತದೆ.

ದೊಡ್ಡ ದೊಡ್ಡ ದೇವಾಲಯಗಳ ಆಡಳಿತ ಮಂಡಳಿಯವರು ಅದರ ಮೇಲೂ ತಮ್ಮ ಅಧೀನ ಹೊಂದಿದ್ದಾರೆ. ಅಂದರೆ ಅಧಿಕೃತ ಅಂಗಡಿಗಳಿಂದ ಪೂಜಾ ಸಾಮಗ್ರಿ ತರಬೇಕೆನ್ನುವುದು ಇದರ ಹಿಂದಿನ ತರ್ಕವಾಗಿರುತ್ತದೆ. ಕೆಲವು ದೇವಾಲಯಗಳು ತಮ್ಮ ಆವರಣದಲ್ಲಿಯೇ ಅಂಗಡಿಗಳನ್ನು ನಿರ್ಮಿಸಿ ಅವುಗಳ ಆದಾಯದ ಮೇಲೆ ಅವಲಂಬಿಸಿದ. ದೇವಾಲಯಗಳ ಬಾಗಿಲುಗಳನ್ನು ತೆರೆಯುವುದರ ಹಿಂದಿನ ಉದ್ದೇಶ ಆ ವಹಿವಾಟು ನಡೆಸುವವರ ಜೀವನ ವ್ಯವಸ್ಥಿತವಾಗಿ ನಡೆಯಲಿ ಎನ್ನುವುದಾಗಿತ್ತು.

ಪೂಜೆಯಿಂದ ದೂರವಾಗುತ್ತಿಲ್ಲ ಸಂಕಷ್ಟ

ಕೊರೋನಾ ಸಂಕಷ್ಟ ಕಾಲದಲ್ಲಿ ಎಲ್ಲಕ್ಕೂ ಹೆಚ್ಚು ಜವಾಬ್ದಾರಿಯನ್ನು ಮಹಿಳೆಯರೇ ಹೊರಬೇಕಾಗಿ ಬರುತ್ತಿದೆ. ಕೊರೋನಾ ಸೋಂಕಿನಿಂದ ರಕ್ಷಣೆಗಾಗಿ ಆಹಾರ ಪದಾರ್ಥಗಳನ್ನು ಸುರಕ್ಷಿತವಾಗಿಡುವುದು, ಅವನ್ನು ಸ್ವಚ್ಛಗೊಳಿಸುವುದು ಹಾಗೂ ಇತರೆ ಕೆಲಸಗಳನ್ನು ಮಹಿಳೆಯರೇ ಮಾಡಬೇಕಾಗಿ ಬರುತ್ತಿವೆ. ವರ್ಕ್‌ ಫ್ರಮ್ ಹೋಮ್ ನಲ್ಲಿ ಮಹಿಳೆಯರಿಗೆ ಮನೆಯಿಂದ ಹೊರಗೆ ಹೋಗುವುದು ಬಂದ್‌ ಆಗಿದೆ. ಆದರೆ ಮನೆಯಲ್ಲಿ ಹೆಚ್ಚಿನ ಕೆಲಸಗಳನ್ನು ಮಾಡಬೇಕಾಗಿ ಬರುತ್ತಿದೆ. ಮನೆಯಿಂದ ಹೊರಗೆ ಹೋದಾಗ ಅವರಿಗೆ ತಮಗೆ ಇಷ್ಟವಾದ ವಾತಾವರಣ ದೊರಕುತ್ತಿತ್ತು. ಈಗ ಅದು ದೊರಕದಂತಾಗಿದೆ.

ಮನೆಯಲ್ಲಿಯೇ ಇರುವುದು, ಸ್ನೇಹ ಬಳಗದಿಂದ ದೂರ ಇರುವುದರಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಈ ಕಾರಣದಿಂದ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತಿವೆ. ಲಾಕ್‌ ಡೌನ್‌ ಅವಧಿಯಲ್ಲಿ ಗಂಡ ಹೆಂಡತಿ ನಡುವೆ ಹೆಚ್ಚು ವಿವಾದಗಳು ಕಂಡುಬಂದಿವೆ.

ಕೊರೋನಾ ಸಂಕಷ್ಟದ ಕಾಲದಲ್ಲಿ ದೇವಸ್ಥಾನಗಳಿಗೆ ಹೋದ ಬಳಿಕ ಮಹಿಳೆಯರ ಕಷ್ಟಗಳೇನೂ ಕಡಿಮೆಯಾಗಿಲ್ಲ. ಇಂತಹ ಸ್ಥಿತಿಯಲ್ಲಿ ದೇವಾಲಯಗಳನ್ನು ತೆರೆದೂ ಕೂಡ ಯಾವುದೇ ಲಾಭವಾಗುವುದಿಲ್ಲ.

ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಲಾಕ್‌ ಡೌನ್‌ ಬಳಿಕ ಕೌಟುಂಬಿಕ ಕಲಹಗಳ ಪ್ರಕರಣಗಳು ಹೆಚ್ಚಾದವು. ಚುಡಾಯಿಸುವ ಪ್ರಕರಣಗಳು ಕೂಡ ಅದರಲ್ಲಿದ್ದವು. ಗಂಡ ನಿರಂತರವಾಗಿ ಮನೆಯಲ್ಲಿದ್ದುದರಿಂದ ಆತ ತನ್ನ ಮೇಲೆ ಸದಾ ಆರೋಪ ಹೊರಿಸುತ್ತಿದ್ದ, ಕೆಲವೊಮ್ಮೆ ಕೈ ಎತ್ತುತ್ತಿದ್ದ ಎಂದು ಒಬ್ಬ ವಿವಾಹಿತ ಮಹಿಳೆ ತನ್ನ ಅಭಿಪ್ರಾಯ ತಿಳಿಸಿದಳು. ಇಂತಹ ಸ್ಥಿತಿಯಲ್ಲಿ ಅವರ ವಿರುದ್ಧ ದೂರು ಕೊಡಲು ಹೊರಗೆ ಹೋಗಲು ಕೂಡ ಆಗುತ್ತಿರಲಿಲ್ಲ. ಲಾಕ್‌ ಡೌನ್‌ನಲ್ಲಿ ವ್ಯಸ್ತರಾಗಿದ್ದ ಪೊಲೀಸರು ಈ ರೀತಿಯ ದೂರುಗಳನ್ನು ಕೂಡ ತೆಗೆದುಕೊಳ್ಳುತ್ತಿರಲಿಲ್ಲ ಎಂದು ಕೆಲವರು ಹೇಳಿದ್ದಾರೆ.

ದೇವಸ್ಥಾನಗಳಿಗೆ ಹೋಗುವುದರಿಂದಲೂ ಅವರಿಗೆ ಈ ಸಂಕಷ್ಟಗಳಿಂದ ಮುಕ್ತಿ ದೊರಕುವುದಿಲ್ಲ. ಇಂತಹ ಜಗಳಗಳಿಂದ ಪಾರಾಗಲು ಪರಸ್ಪರ ಮಾತುಕತೆ ನಡೆಸಬೇಕು. ವಿವಾದದ ಸಮಯದಲ್ಲಿ ದೇವಸ್ಥಾನಗಳು ಯಾವುದೇ ಕೆಲಸಕ್ಕೆ ಬರುವುದಿಲ್ಲ.

–  ಶೈಲಜಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ