ಹಬ್ಬದ ಖುಷಿಯಿಂದ ಕೂಡಿದ ವಾತಾವರಣದಲ್ಲಿ ಪ್ರತಿಯೊಬ್ಬರು ಆನಂದದ ಮೂಡ್‌ನಲ್ಲಿ ಇರುತ್ತಾರೆ. ಆದರೆ ಮಹಿಳೆಯರಿಗೆ ಇಂತಹ ಖುಷಿ ಖುಷಿಯ ಸಂದರ್ಭದಲ್ಲಿ ಮುಟ್ಟು ಶುರುವಾಗಿಬಿಟ್ಟರೆ, ಅವರ ಆನಂದದಲ್ಲಿ ಕಿರಿಕಿರಿಯ ಅನುಭವ ಉಂಟಾಗುತ್ತದೆ. ಈ ಅವಧಿಯಲ್ಲಿ ಉಂಟಾಗುವ ದಣಿವು, ಬೆನ್ನು ಹಾಗೂ ಹೊಟ್ಟೆನೋವು ಅತಿಯಾದ ರಕ್ತಸ್ರಾವ ಮತ್ತು ತಲೆನೋವಿನಂತಹ ಸಮಸ್ಯೆಗಳು ಅವರ ಉತ್ಸಾಹಕ್ಕೆ ತಣ್ಣೀರೆರಚುತ್ತವೆ. ಅಂತಹ ಸ್ಥಿತಿಯಲ್ಲಿ ಅವರು ಇಷ್ಟಪಟ್ಟೂ ಕೂಡ ಏನೂ ಮಾಡಲು ಆಗುವುದಿಲ್ಲ. ಮನೆಯ ಇತರೆ ಸದಸ್ಯರು ಖುಷಿಯಲ್ಲಿ ತೇಲಾಡುವುದನ್ನು ನೋಡಿ ಅವರ ಮುಖದಲ್ಲಿ ಉದಾಸತನದ ಛಾಯೆ ಆರಿಸಿಕೊಳ್ಳುತ್ತದೆ. ಅಂತಹ ಸ್ಥಿತಿಯಲ್ಲಿ ನೀವು ಈ ಕೆಳಕಂಡ ಸಂಗತಿಗಳ ಬಗ್ಗೆ ಗಮನಹರಿಸಿದರೆ ನಿಮ್ಮ ಮುಖದಲ್ಲಿ ಹಬ್ಬದ ಕಳೆ ಮಸುಕಾಗುವುದಿಲ್ಲ.

ಟೆನ್ಶನ್‌ ಫ್ರೀ ಆಗಿರಿ

ಇಂತಹ ಸಮಯದಲ್ಲಿ ಮಹಿಳೆಯರು ತಮ್ಮನ್ನು ತಾವು ಒಂದು ಸೀಮಿತ ವ್ಯಾಪ್ತಿಗೆ ಕಟ್ಟಿ ಹಾಕಿಕೊಳ್ಳುತ್ತಾರೆ ಹಾಗೂ ತಮ್ಮನ್ನು ಅನಾರೋಗ್ಯಪೀಡಿತರು ಎಂದು ಭಾವಿಸುತ್ತಾರೆ. ಆದರೆ ಇದು ಯಾವುದೇ ರೋಗವಲ್ಲ, ಇದೊಂದು ನೈಸರ್ಗಿಕ ಪ್ರಕ್ರಿಯೆ. ಹೀಗಾಗಿ ನಿಮ್ಮನ್ನು ಹತ್ತಿಕ್ಕಿಕೊಳ್ಳುವ ಬದಲು ಮುಕ್ತರಾಗಿ ಜೀವಿಸಿ. ಮುಟ್ಟಿನ ಬಗ್ಗೆ ಹೆಚ್ಚು ಒತ್ತಡಗ್ರಸ್ತರಾಗಬೇಡಿ. ಹೆಚ್ಚು ಒತ್ತಡಗ್ರಸ್ತರಾಗುವುದು ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡಬಹುದು. ನಿಮ್ಮ ಯೋಚನೆ ಸಕಾರಾತ್ಮಕವಾಗಿರಲಿ.

ಎಲ್ಲಕ್ಕೂ ಮಹತ್ವದ ಸಂಗತಿಯೆಂದರೆ, ಪರಿಸ್ಥಿತಿ ಹೇಗೆಯೇ ಇರಲಿ, ನೀವು ಖುಷಿಯಿಂದಿದ್ದರೆ, ನಿಮ್ಮ ಮುಖದ ಮೇಲಿನ ಹೊಳಪು ಬೇರೆ ರೀತಿಯದ್ದೇ ಆಗಿರುತ್ತದೆ.

ಬಿಸಿ ನೀರಿನ ಕಾವು

ಮುಟ್ಟಿನ ಸಂದರ್ಭದಲ್ಲಿ ಹೊಟ್ಟೆಯಲ್ಲಿ ನೋವು ಉಂಟಾಗುತ್ತಿದ್ದರೆ, ನೀವು ಬಿಸಿ ನೀರಿನ ಹಬೆಯಿಂದ ಕಾವು ಕೂಡ ಪಡೆದುಕೊಳ್ಳಬಹುದು. ಮುಟ್ಟಿನ ಸಂದರ್ಭದಲ್ಲಿ ಹೊಟ್ಟೆಯ ಕೆಳಭಾಗಕ್ಕೆ ಬಿಸಿ ನೀರಿನ ಕಾವು ಕೊಟ್ಟರೆ ಗರ್ಭಕೋಶದ ಮಾಂಸಖಂಡಗಳಿಗೆ ನಿರಾಳತೆ ದೊರಕುತ್ತದೆ ಮತ್ತು ನೋವಿನಿಂದಲೂ ಮುಕ್ತಿ ದೊರಕುತ್ತದೆ.

ಸ್ವಚ್ಛತೆಯ ಬಗ್ಗೆ ಗಮನ

ಮುಟ್ಟಿನ ದಿನಗಳಲ್ಲಿ ಸ್ವಚ್ಛತೆಯ ಬಗ್ಗೆ ವಿಶೇಷ ಗಮನ ಕೊಡಿ. ಏಕೆಂದರೆ ಆರೋಗ್ಯದ ಮೇಲೆ ಅದರ ದುಷ್ಪರಿಣಾಮ ಉಂಟಾಗದಿರಲಿ. ಈ ಸಂದರ್ಭದಲ್ಲಿ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನ ಕೊಡುವುದರಿಂದ ಯುಟಿಐ ಹಾಗೂ ಸೋಂಕಿನಂತಹ ರೋಗಗಳಿಂದ ದೂರ ಇರಬಹುದಾಗಿದೆ. ಇದರಲ್ಲಿ ಮಹತ್ವದ ಪಾತ್ರ ವಹಿಸುವುದೆಂದರೆ ಅದು ಸ್ಯಾನಿಟರಿ ಪ್ಯಾಡ್‌ ಅಥವಾ ನ್ಯಾಪ್‌ಕಿನ್‌. ಇದರ ಹೊರತಾಗಿ ಮುಟ್ಟಿನ ಸಮಯದಲ್ಲಿ ಆ್ಯಂಟಿಬಯಾಟಿಕ್‌ ಸೋಪು ಅಥವಾ ಕ್ಲೆನ್ಸರ್‌ನಿಂದ ಗುಪ್ತಾಂಗವನ್ನು ಸ್ವಚ್ಛಗೊಳಿಸಿ. ಸ್ನಾನವನ್ನು ಅವಶ್ಯವಾಗಿ ಮಾಡಿ. ಏಕೆಂದರೆ ಅದರಿಂದ ತಾಜಾತನದ ಅನುಭವ ಉಂಟಾಗುತ್ತದೆ.

ಕಂಫರ್ಟ್‌ ಅತ್ಯಗತ್ಯ

ಈಗಲೂ ಎಂತಹ ಕೆಲವು ಮಹಿಳೆಯರಿದ್ದಾರೆಂದರೆ, ಮುಟ್ಟಿನ ದಿನಗಳಲ್ಲಿ ಅವರು ಸ್ಯಾನಿಟರಿ ಪ್ಯಾಡ್‌ ಬಳಸದೆ, ಕೊಳಕು ಬಟ್ಟೆ, ವರ್ತಮಾನ ಪತ್ರಿಕೆ, ಎಲೆಗಳು ಇಲ್ಲಿ ಬಳಸಲು ಸಾಧ್ಯವಾಗದ ಪ್ಯಾಡ್‌ಗಳನ್ನು ಬಳಸುತ್ತಾರೆ. ಇದು ಅವರಲ್ಲಿ ಅಸಹಜತೆಯ ಭಾವನೆ ಉಂಟಾಗುವಂತೆ ಮಾಡುತ್ತದೆ. ಬಟ್ಟೆ ಕೊಳಕಾಗುತ್ತದೆ ಎಂಬ ಅಳುಕಿನಿಂದ ಹೊರಗೆಲ್ಲೂ ಹೋಗುವುದಿಲ್ಲ ಹಾಗೂ ಹಬ್ಬದ ಆನಂದವನ್ನು ಮುಕ್ತವಾಗಿ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇಂತಹ ಸಂದರ್ಭದಲ್ಲಿ ಪ್ಯಾಡನ್ನಷ್ಟೇ ಬಳಸಿ. ಏಕೆಂದರೆ ಮುಕ್ತವಾಗಿ ಜೀವಿಸುವ ಅನುಭವವಾಗಬೇಕು.

ಸೂಕ್ತ ಪ್ಯಾಡ್‌ನ ಆಯ್ಕೆ

ಮುಟ್ಟಿನ ಸಂದರ್ಭದಲ್ಲಿ ಒಂದೇ ಪ್ಯಾಡನ್ನು ಹೆಚ್ಚುವ ಸಮಯದವರೆಗೆ ಧರಿಸುವುದು ನಿಮಗೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಹೀಗಾಗಿ ನೀವು ಬಳಸುವ ಪ್ಯಾಡ್‌ ಎಷ್ಟೇ ಉತ್ತಮ ಗುಣಮಟ್ಟದ್ದಾಗಿದ್ದರೂ ದಿನಕ್ಕೆ 3 ಸಲ ಅದನ್ನು ಬದಲಿಸಬೇಕು. ಅದರ ಜೊತೆಗೆ ಪ್ಯಾಡ್‌ನ ಗುಣಮಟ್ಟದ ಬಗ್ಗೆ ಕೂಡ ಗಮನಹರಿಸಬೇಕು. ಎಷ್ಟೋ ಮಹಿಳೆಯರು ಅಗ್ಗದ ದರದಲ್ಲಿ ದೊರೆಯುತ್ತದೆಂಬ ಕಾರಣದಿಂದ ಗುಣಮಟ್ಟದ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಹಾಗೂ ಕಡಿಮೆ ಬೆಲೆಯಲ್ಲಿ ಕೀಳು ದರ್ಜೆಯ ನ್ಯಾಪ್‌ಕಿನ್‌ ಬಳಸತೊಡಗುತ್ತಾರೆ. ಇದರಿಂದ ಅವರಿಗೆ ರಾಶೆಸ್‌ ಉಂಟಾಗುತ್ತದೆ.

ಅಂದಹಾಗೆ, ಮಾರುಕಟ್ಟೆಯಲ್ಲಿ ಬೇರೆ ಬೇರೆ ಬ್ರಾಂಡ್‌ಗಳ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಲಭಿಸುತ್ತವೆ. ಅವುಗಳಲ್ಲಿ ಕೆಲವು ಮುಕ್ತವಾಗಿ ಜೀವಿಸುವ ಅವಕಾಶ ಮಾಡಿಕೊಡುತ್ತವೆ. ಕೆಲವು ಡ್ರೈ ಆ್ಯಕ್ಸಿನ್‌ ಮುಕ್ತವಾಗಿದ್ದು, ಅವು ಅತಿಯಾದ ರಕ್ತಸ್ರಾವವನ್ನು ತಡೆಯುತ್ತವೆ ಹಾಗೂ ಲೀಕ್‌ ಕೂಡ ಆಗುವುದಿಲ್ಲ. ಅದನ್ನು ಡಿಸ್‌ಪೋಸ್‌ ಮಾಡುವುದು ಕೂಡ ಸುಲಭ. ಎಲ್ಲಕ್ಕೂ ಮಹತ್ವದ್ದೆಂದರೆ, ಕೆಲವು ಬ್ರಾಂಡ್‌ಗಳು ಕೈಗೆಟಕುವ ಬೆಲೆಯಲ್ಲಿ ಲಭಿಸುತ್ತವೆ.

– ಪ್ರತಿನಿಧಿ

ಅತ್ಯವಶ್ಯಕ ಸಂಗತಿಗಳು

ಸ್ಯಾನಿಟರಿ ಪ್ಯಾಡ್‌ನ್ನು 3-4 ಗಂಟೆಗಳಿಗೊಮ್ಮೆ ಬದಲಿಸುತ್ತಾ ಇರಿ.

ಮುಟ್ಟಿನ ದಿನಗಳಲ್ಲಿ ಸ್ವಚ್ಛತೆಯ ಬಗ್ಗೆ ಸಂಪೂರ್ಣ ಗಮನಕೊಡಿ.

ಮುಟ್ಟಿನ ಸಮಯದಲ್ಲಿ ಗುಪ್ತಾಂಗದ ಸ್ವಚ್ಛತೆಯ ಬಗ್ಗೆ ಗಮನಕೊಡಿ.

ಕಾಟನ್‌ ಒಳ ಉಡುಪನ್ನೇ ಧರಿಸಿ.

ಮುಟ್ಟಿನ ದಿನಗಳಲ್ಲಿ ನಿರ್ಜಲೀಕರಣದ ಸಮಸ್ಯೆ ಉಂಟಾಗಬಹುದು. ಹೀಗಾಗಿ ಹೆಚ್ಚೆಚ್ಚು ನೀರು ಕುಡಿಯಿರಿ.

ಈ ಅವಧಿಯಲ್ಲಿ ಬಿಗಿ ಬಟ್ಟೆ ಧರಿಸಬೇಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ