ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್‌ ಬಾರ್‌, ಪ್ರೋಟೀನ್‌ ಶೇಕ್‌, ಪ್ರೋಟೀನ್‌ಬಾಲ್ಸ್ ಮುಂತಾದವುಗಳನ್ನು ಸೇವಿಸುತ್ತಿದ್ದಾರೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಪ್ರೋಟೀನ್‌ ಪೌಡರ್‌ಗಳು ಹಾಗೂ ಸಪ್ಲಿಮೆಂಟ್‌ಗಳು ಲಭ್ಯವಿವೆ. ಆರೋಗ್ಯದ ಬಗ್ಗೆ ಜಾಗೃತರಾಗಿರುವ ಜನರು ತಾವು ಹೆಚ್ಚೆಚ್ಚು ಪ್ರೋಟೀನ್‌ ಸೇವಿಸಬೇಕೆಂದು ಇಚ್ಛಿಸುತ್ತಾರೆ. ಆದರೆ ಅವರಿಗೆ ಪ್ರೋಟೀನ್‌ ಸಪ್ಲಿಮೆಂಟ್ಸ್ ನ್ನು ಯಾವ ಪ್ರಮಾಣದಲ್ಲಿ ಸೇವಿಸಬೇಕು, ಯಾವಾಗ ಸೇವಿಸಬೇಕು ಎನ್ನುವುದು ತಿಳಿದಿರುವುದಿಲ್ಲ. ಪ್ರೋಟೀನ್‌ನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಯಾವ ರೀತಿಯಲ್ಲಿ ಹಾನಿಕಾರಕ ಎಂಬುದು ಕೂಡ ಅವರಿಗೆ ತಿಳಿದಿರುವುದಿಲ್ಲ.

ಏನಿದು ಪ್ರೋಟೀನ್‌?

ಪ್ರೋಟೀನ್‌ ನಮ್ಮ ದೇಹಕ್ಕೆ ಅತ್ಯವಶ್ಯವಿರುವ ಮೈಕ್ರೋ ನ್ಯೂಟ್ರಿಯೆಂಟ್ಸ್ ಗಳಲ್ಲಿ ಒಂದಾಗಿದೆ. ಅದರ ಹೊರತಾಗಿ ಎರಡು ಇತರೆ ಮೈಕ್ರೋನ್ಯೂಟ್ರಿಯೆಂಟ್ಸ್ ಫ್ಯಾಟ್ಸ್ ಮತ್ತು ಕಾರ್ಬೋಹೈಡ್ರೆಟೆಡ್‌ ಆಗಿದ್ದು, ಪ್ರೋಟೀನ್‌ ಎಂತಹ ಒಂದು ಮೈಕ್ರೋನ್ಯೂಟ್ರಿಯೆಂಟ್‌ಆಗಿದೆ ಎಂದರೆ, ಅದು ನಮ್ಮ ಮಸ್‌ ಮಾಸ್‌ ನಿರ್ಮಾಣಕ್ಕೆ ಅತ್ಯವಶ್ಯಕವಾಗಿದೆ. ಪ್ರೋಟೀನ್‌ ನಮ್ಮ ದೇಹದ ಬೆಳವಣಿಗೆ ಹಾಗೂ ಪುನರುತ್ಥಾನಕ್ಕೆ ಅತ್ಯವಶ್ಯ. ಹೆಚ್ಚು ಪ್ರೋಟೀನ್‌ ಇರುವ ಪದಾರ್ಥಗಳು ಅಂದರೆ ಹಾಲಿನ ಪದಾರ್ಥಗಳು, ಮಾಂಸ, ಮೀನು, ಮೊಟ್ಟೆ, ಬೇಳೆ ನಮ್ಮ ದೇಹಕ್ಕೆ ಅತ್ಯುಪಯುಕ್ತ. ನಾವೆಲ್ಲ ಇಂತಹ ಪದಾರ್ಥ ಸೇವಿಸಿದಾಗ, ನಮ್ಮ ದೇಹದಲ್ಲಿ ಇವನ್ನು ಅಮೈನೊ ಆ್ಯಸಿಡ್‌ಗಳು ಕರುಳಿನತನಕ ತಲುಪಿಸುತ್ತವೆ. ನಮ್ಮ ದೇಹಕ್ಕೆ ಬೇಕಾಗುವ ಅಮೈನೊ ಆ್ಯಸಿಡ್‌ಗಳು ಯಾವ ಎನ್ನುವುದನ್ನು ಕರುಳು ನಿರ್ಧರಿಸಿ, ಅವನ್ನು ಬೇರ್ಪಡಿಸಿ ದೇಹ ಅವನ್ನು ಮೂತ್ರದ ಮುಖಾಂತರ ಹೊರಗಟ್ಟುತ್ತದೆ.

ಎಷ್ಟು ಸೇವಿಸಬೇಕು?

ಯಾರು ಹೆಚ್ಚು ಓಡಾಟ ಅಥವಾ ಶ್ರಮದ ಕೆಲಸ ಮಾಡುವುದಿಲ್ಲ, ಅವರು ದೇಹ ತೂಕದ ಪ್ರತಿ ಕಿಲೋಗೆ 0.75 ಗ್ರಾಮ್ ನಂತೆ ಪ್ರತಿದಿನ ಪ್ರೋಟೀನ್‌ ಸೇವಿಸಬೇಕು. ಈ ಸರಾಸರಿ ಪ್ರಮಾಣ ಪುರುಷರಿಗೆ 55 ಗ್ರಾಮ್ ಹಾಗೂ ಮಹಿಳೆಯರಿಗೆ 45 ಗ್ರಾಂ ಲೆಕ್ಕದಲ್ಲಿ ಸರಿಯಾಗಿರುತ್ತದೆ.

ಬಾಡಿ ಬಿಲ್ಡಿಂಗ್‌ ಹಾಗೂ ಮಾಂಸಖಂಡಗಳ ಬೆಳವಣಿಗೆಗೆ ಹೆಚ್ಚು ಪ್ರೋಟೀನ್‌ ಅತ್ಯಗತ್ಯ. ಹೆಚ್ಚು ವ್ಯಾಯಾಮ ಮಾಡುವುದರಿಂದ ಮಾಂಸಖಂಡಗಳಲ್ಲಿರುವ ಪ್ರೋಟೀನ್‌ ಕ್ಷೀಣಿಸುತ್ತದೆ. ಇಂತಹ ಸ್ಥಿತಿಯಲ್ಲಿ ಮಾಂಸಖಂಡಗಳನ್ನು ಶಕ್ತಿಶಾಲಿಯಾಗಿಸಲು ಪ್ರೋಟೀನ್‌ನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕಾಗಿ ಬರುತ್ತದೆ. ಏಕೆಂದರೆ ಮಸಲ್ಸ್ ದುರಸ್ಥಿಯಾಗುತ್ತಾ ಇರಬೇಕು. ಈ ಕಾರ್ಯದಲ್ಲಿ ಪ್ರೋಟೀನ್‌ನಲ್ಲಿರುವ ಲ್ಯೂಸಿನ್‌ ಎಂಬ ಅಮೈನೊ ಆ್ಯಸಿಡ್‌ ಬಹಳ ಉಪಯುಕ್ತವೆಂದು ಸಾಬೀತಾಗಿದೆ.

ವಯಸ್ಸಾದವರಿಗೆ ಆಹಾರದ ಹೊರತಾಗಿ ಸಪ್ಲಿಮೆಂಟ್‌ ರೂಪದಲ್ಲೂ ಪ್ರೋಟೀನ್‌ ಸೇವಿಸಬೇಕಾದ ಅಗತ್ಯ ಇರುತ್ತದೆ. ಅವರಿಗೆ ತಮ್ಮ ತೂಕದ ಲೆಕ್ಕಾಚಾರದಲ್ಲಿ ಪ್ರತಿ ಕಿಲೋ 1.2 ಗ್ರಾಂನಂತೆ ಸೇವಿಸಬೇಕಾಗುತ್ತದೆ.

ತೂಕ ತಗ್ಗಿಸಲು ಉಪಯುಕ್ತ

ಆ್ಯಬರ್ಡಿನ್‌ ಯೂನಿವರ್ಸಿಟಿಯ ಅಲೆಕ್ಸ್ ಜಾನ್‌ಸ್ಟನ್‌ ಪ್ರಕಾರ, ಆಹಾರದಲ್ಲಿ ಕಾರ್ಬೋಹೈಡ್ರೇಟ್‌ ಪ್ರಮಾಣ ಕುಗ್ಗಿಸಿ, ಪ್ರೋಟೀನ್‌ಯುಕ್ತ ಆಹಾರ ಸೇವನೆ ಮಾಡುವುದರ ಮೂಲಕ ನೀವು ನಿಮ್ಮ ತೂಕವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು. ಅದು ಎಂತಹ ಆಹಾರವೆಂದರೆ ಅದರಲ್ಲಿ 30% ಪ್ರೋಟೀನ್‌, 40% ಕಾರ್ಬೋಹೈಡ್ರೇಟ್ಸ್ ಹಾಗೂ 30% ಫ್ಯಾಟ್‌ ಇರಬೇಕು. ಅದರಿಂದ ತೂಕ ತಗ್ಗಿಸಲು ಸಾಕಷ್ಟು ನೆರವಾಗುತ್ತದೆ. ಆಹಾರದಲ್ಲಿ ಸರಾಸರಿ 15% ಪ್ರೋಟೀನ್‌, 55% ಕಾರ್ಬೋಹೈಡ್ರೇಟ್‌ ಹಾಗೂ 35% ಫ್ಯಾಟ್‌ ಇರುತ್ತದೆ.

ಸೂಕ್ತ ಪ್ರಮಾಣದಲ್ಲಿ ಪ್ರೋಟೀನ್‌ ಸೇವನೆ ಮಾಡದೇ ಇದ್ದರೆ ಕೂದಲು ಉದುರುತ್ತವೆ. ತ್ವಚೆ ಸಮಸ್ಯೆ ಉಂಟಾಗುತ್ತದೆ. ತೂಕ ಹಾಗೂ ಮಾಂಸಖಂಡ ಕುಗ್ಗುವ ಸಮಸ್ಯೆಗಳು ಆಗುತ್ತವೆ.

ಪ್ರೋಟೀನ್‌ ಸಪ್ಲಿಮೆಂಟ್‌ಗಳ ಲಾಭ ಪ್ರೋಟೀನ್‌ ಸಪ್ಲಿಮೆಂಟ್‌ಗಳು ಪೋಷಣೆಯಿಂದ ಕೂಡಿದ್ದು, ನಮ್ಮನ್ನು ಆರೋಗ್ಯಕರ ಹಾಗೂ ರೋಗಮುಕ್ತಗೊಳಿಸುತ್ತವೆ. ಕೆಟ್ಟ ಕೊಲೆಸ್ಟ್ರಾಲ್, ರಕ್ತದೊತ್ತಡ ಹಾಗೂ ಹೃದ್ರೋಗಗಳಿಂದಲೂ ದೂರ ಇಡುತ್ತವೆ.

ನೀವು ಪ್ರೋಟೀನ್‌ ಸಪ್ಲಿಮೆಂಟ್‌ಗಳಿಂದ ನಿಮ್ಮ ದಿನವನ್ನು ಆರಂಭಿಸಿದರೆ, ನಿಮ್ಮನ್ನು ನೀವು ಇತರೆ ಕೆಲಸಗಳಿಗೆ ಚಾರ್ಜ್ ಮಾಡಿಕೊಂಡ ಹಾಗೆ ಪ್ರೋಟೀನ್‌ನಿಂದ ನಿಮ್ಮ ಎನರ್ಜಿ ಲೆವೆಲ್ ‌ಹೆಚ್ಚುತ್ತದೆ. ಹೆಚ್ಚಿನ ಕೆಲಸದಿಂದ ನೀವು ದಣಿದವರಂತೆ ಭಾಸವಾಗುವುದಿಲ್ಲ.

ಪ್ರೋಟೀನ್‌ ಮಾಂಸಖಂಡಗಳನ್ನು ವರ್ಧಿಸುತ್ತವೆ ಹಾಗೂ ದೇಹದಿಂದ ಫ್ಯಾಟ್‌ ಕಡಿಮೆಗೊಳಿಸುತ್ತದೆ. ಅದು ಗಮನ ಕೇಂದ್ರೀಕರಿಸಲು ಸಹ ನೆರವಾಗುತ್ತದೆ. ದೇಹದ ಜೀವಕೋಶಗಳನ್ನು ಹೆಚ್ಚಿಸಲು ಅವು ಕ್ರಿಯಾಶೀಲವಾಗಿ ಕೆಲಸ ಮಾಡಲು ಪ್ರೋಟೀನ್‌ ಅತ್ಯವಶ್ಯ.

ಪ್ರೋಟೀನ್‌ ಸಪ್ಲಿಮೆಂಟ್‌ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಅವುಗಳಿಂದಾಗಿ ಇವನ್ನು ಸೇವಿಸಲು ಹಿಂದೇಟು ಹಾಕುತ್ತಾರೆ. ಫಿಟ್ನೆಸ್‌ ಎಕ್ಸ್ ಪರ್ಟ್‌ ಪ್ರಕಾರ ಅಂತಹ ಕೆಲವು ತಪ್ಪು ಕಲ್ಪನೆಗಳ ಬಗ್ಗೆ ಇಲ್ಲಿ ಉಲ್ಲೇಖಿಸಿದ್ದಾರೆ.

ತಪ್ಪು ಕಲ್ಪನೆ : ಪ್ರೋಟೀನ್‌ ಸಪ್ಲಿಮೆಂಟ್‌ ತೂಕ ಹೆಚ್ಚಿಸುತ್ತದೆ.

ವಾಸ್ತವ : ವಾಸ್ತವದಲ್ಲಿ ಪ್ರೋಟೀನ್‌, ಪ್ರೋಟೀನ್‌ ಶೇಕ್‌, ಸ್ಮೂದಿ ತೂಕ ಕಡಿಮೆಗೊಳಿಸಲು ಹಾಗೂ ತೆಳ್ಳಗಾಗಿಸಲು ನೆರವಾಗುತ್ತವೆ. ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ. ನೀವು ಯಾವುದೇ ರೂಪದಲ್ಲಾದರೂ ಪ್ರೋಟೀನ್‌ ಸೇವಿಸುತ್ತಿದ್ದರೆ, ನಿಮ್ಮ ಹೊಟ್ಟೆ ಸದಾ ತುಂಬಿದಂತೆ ಭಾಸವಾಗುತ್ತದೆ. ಪ್ರೋಟೀನ್‌ ಸೇವನೆಯ ಬಳಿಕ ನೀವು ದೀರ್ಘ ಹೊತ್ತಿನತನಕ ಆಹಾರವಿಲ್ಲದೆ ಇರಬಹುದಾಗಿದೆ ಮತ್ತು ಬಹಳ ಕಡಿಮೆ ಕ್ಯಾಲೋರಿ ಸೇವಿಸುತ್ತೀರಿ. ಪ್ರೋಟೀನ್‌ನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ದುಷ್ಪರಿಣಾಮಗಳು ಕೂಡ ಆಗಬಹುದು.

ತಪ್ಪು ಕಲ್ಪನೆ : ಪ್ರೋಟೀನ್‌ ಸಪ್ಲಿಮೆಂಟ್‌ ಸೇವನೆಯಿಂದ ಮೂಳೆಗಳು ದುರ್ಬಲವಾಗುತ್ತವೆ.

ವಾಸ್ತವ : ಯಾರು ಸರಿಯಾದ ಪ್ರಮಾಣದಲ್ಲಿ ಪ್ರೋಟೀನ್‌ ಸೇವಿಸುತ್ತಾರೊ, ಅವರು ಮೂಳೆಗಳನ್ನು ಸರಿಯಾಗಿ ಕಾಪಾಡಿಕೊಳ್ಳುತ್ತಾರೆ.

ಅವರಿಗೆ ಆಸ್ಟೂಪೊರೊಸಿಸ್‌ ಹಾಗೂ ಫ್ರಾಕ್ಚರ್‌ ಉಂಟಾಗುವ ಅಪಾಯ ಕಡಿಮೆ. ಇದು ಮಹಿಳೆಯರಿಗೆ ಮಹತ್ವದ್ದಾಗಿದ್ದು, ಮೆನೊಪಾಸ್‌ ಬಳಿಕ ಆಸ್ಟೂಪೊರೊಸಿಸ್‌ನಿಂದ ಹೈರಿಕ್ಸ್ ನಲ್ಲಿರುತ್ತಾರೆ. ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್‌ ಸೇವಿಸಿ, ಸಕ್ರಿಯರಾಗಿರುವುದು ಒಳ್ಳೆಯ ವಿಧಾನ.

ತಪ್ಪು ಕಲ್ಪನೆ : ಪ್ರೋಟೀನ್‌ ಸಪ್ಲಿಮೆಂಟ್‌ನ ಸೇವನೆ ಕಿಡ್ನಿಗಳಿಗೆ ಅಪಾಯಕಾರಕ.

ವಾಸ್ತವ : ಬಹಳಷ್ಟು ಜನ ಹೇಳುವುದೇನೆಂದರೆ, ಹೈ ಪ್ರೋಟೀನ್‌ನ ಸೇವನೆಯಿಂದ ಕಿಡ್ನಿಗಳಿಗೆ ಹಾನಿಯಾಗುತ್ತದೆಂದು. ಅದು ಸರಿಯಾದ ವಿಷಯ, ಆದರೆ ಗಮನಿಸಬೇಕಾದ ಸಂಗತಿಯೆಂದರೆ, ಹೈ ಪ್ರೋಟೀನ್‌ ಸಪ್ಲಿಮೆಂಟ್‌ನ ಸೇವನೆ ಕಿಡ್ನಿ ಸಮಸ್ಯೆಯುಳ್ಳವರಿಗೆ ಹಾನಿಯನ್ನುಂಟು ಮಾಡುತ್ತದೆ. ಆದರೆ ಆರೋಗ್ಯವಂತ ಕಿಡ್ನಿಯುಳ್ಳ ಜನರಿಗೆ ಅದು ಯಾವುದೇ ಹಾನಿಯುಂಟು ಮಾಡದು. ಪ್ರೋಟೀನ್‌ ಸಪ್ಲಿಮೆಂಟ್‌ ಸೇವನೆಯ ಜೊತೆಗೆ ಸಾಕಷ್ಟು ನೀರು ಕುಡಿಯುವುದರಿಂದ ಕಿಡ್ನಿಗಳ ಮೇಲೆ ಯಾವುದೇ ಹೊರೆ ಉಂಟಾಗದು.

ತಪ್ಪು ಕಲ್ಪನೆ : ಪ್ರೋಟೀನ್‌ ಸಪ್ಲಿಮೆಂಟ್‌ ಮುಖ್ಯವಾಗಿ ಪಶು ಪ್ರೋಟೀನ್‌ ಆಗಿರುತ್ತದೆ.

ವಾಸ್ತವ : ಪ್ರೋಟೀನ್‌ ಸಪ್ಲಿಮೆಂಟ್‌ ಕೇವಲ ಅನಿಮಲ್ ಬೇಸ್ಡ್ ಪ್ರಾಡಕ್ಟ್ ಗಳಲ್ಲಿ ಮಾತ್ರ ಇರುತ್ತದೆ ಎಂದು ಯೋಚಿಸುವುದು ತಪ್ಪು. ಏಕೆಂದರೆ ಮಾರುಕಟ್ಟೆಯಲ್ಲಿ ಪ್ಲಾಂಟ್‌ ಪ್ರೋಟೀನ್‌ ಕೂಡ ಪೌಡರ್‌ ರೂಪದಲ್ಲಿ ಲಭಿಸುತ್ತದೆ. ಅದು ದೇಹದ ಪ್ರೋಟೀನ್‌ಕೊರತೆಯನ್ನು ನೀಗಿಸುತ್ತದೆ. ಶುದ್ಧ ಸಸ್ಯಾಹಾರಿಗಳು ಪ್ಲಾಂಟ್‌ ಬೇಸ್ಡ್ ಪ್ರೋಟೀನ್‌ನನ್ನೇ ಬಳಸುತ್ತಾರೆ.

ನೀವು ಮನೆಯಲ್ಲೇ ಪ್ಲಾಂಟ್‌ ಪ್ರೋಟೀನ್‌ನ್ನು ತಯಾರಿಸಿಕೊಳ್ಳಬಹುದು. ಕೆಲವು ನಟ್ಸ್ ಮಿಶ್ರಣ ಮಾಡಿಕೊಂಡು ನೀವು ಪ್ರೋಟೀನ್‌ತಯಾರಿಸಬಹುದು. ಮಾರುಕಟ್ಟೆಯಲ್ಲಿ ಸೋಯಾ ಪ್ರೋಟೀನ್‌ ಪೌಡರ್‌ ಕೂಡ ಲಭಿಸುತ್ತದೆ. ಅದು ಶುದ್ಧ ನೈಸರ್ಗಿಕ ಹಾಗೂ ಪ್ಲಾಂಟ್‌ ಬೇಸ್ಟ್ ಆಗಿರುತ್ತದೆ. ಶುದ್ಧ ಸಸ್ಯಾಹಾರಿಗಳನ್ನು ವಾದ ಕೂಡ ನಿರರ್ಥಕ. ನಾವು ಬಳಸುವ ಅನೇಕ ಪದಾರ್ಥಗಳಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಮಾಡಿರುತ್ತಾರೆ. ಹಲವು ಕಾಸ್ಮೆಟಿಕ್ಸ್ ಗಳಲ್ಲಿ ಪ್ರಾಣಿಗಳ ದೇಹದಿಂದ ತೆಗೆದ ಪದಾರ್ಥಗಳನ್ನು ಮಿಶ್ರಣ ಮಾಡಿರುತ್ತಾರೆ.

ತಪ್ಪು ಕಲ್ಪನೆ : ಪ್ರೋಟೀನ್‌ ಸೇವನೆಯಿಂದ ನಮ್ಮ ಪಚನ ವ್ಯವಸ್ಥೆ ಹಾಳಾಗುತ್ತದೆ.

ವಾಸ್ತವ : ಕೆಲವರಿಗೆ ಪ್ರೋಟೀನ್‌ ಪಚನ ಮಾಡಿಕೊಳ್ಳುವ ಸಮಸ್ಯೆ ಇರುತ್ತದೆ. ಊತ, ಗ್ಯಾಸ್‌ ಹಾಗೂ ಮಲಬದ್ಧತೆಯ ಸಮಸ್ಯೆ ಇರುತ್ತದೆ. ಆದರೆ ಇವುಗಳಲ್ಲಿ ಹೆಚ್ಚಿನ ಸಮಸ್ಯೆ ಲ್ಯಾಕ್ಟೋಸ್‌ ಇಂಟಾಲರೆನ್ಸ್ ಗೆ ಸಂಬಂಧಿಸಿದಂತೆ ಇರುತ್ತದೆ. ಯಾರಿಗೆ ಲ್ಯಾಕ್ಟೋಸ್‌ ಇಂಟಾಲರೆನ್ಸ್ ಸಮಸ್ಯೆ ಇರುತ್ತದೋ ಅರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಎಂಜೈಮೈ ಲ್ಯಾಕ್ಟೋಸ್‌ನ್ನು ಉತ್ಪಾದಿಸಲು ಆಗುವುದಿಲ್ಲ. ಅದರ ಅವಶ್ಯಕತೆ ಲ್ಯಾಕ್ಟೋಸ್‌ ಪಚನ ಮಾಡಿಕೊಳ್ಳಲು ನೆರವಾಗುತ್ತದೆ. ಅಂಥವರು ಪ್ರೋಟೀನ್‌ ಐಸೋಲೇಟ್‌ಪೌಡರ್‌ ತೆಗೆದುಕೊಳ್ಳಬಹುದು.

ತಪ್ಪು ಕಲ್ಪನೆ : ಎಷ್ಟು ಹೆಚ್ಚು ಪ್ರೋಟೀನ್‌ ಸೇವಿಸಿದರೆ ಅಷ್ಟು ಒಳ್ಳೆಯದು.

ವಾಸ್ತವ : ಕೆಲವರು ಎಷ್ಟು ಹೆಚ್ಚು ಪ್ರೋಟೀನ್‌ ಸೇವಿಸುತ್ತೇವೆ, ಅಷ್ಟು ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸುತ್ತಾರೆ. ಆದರೆ ಅದು ಹಾಗಲ್ಲ. ನಮ್ಮ ದೇಹದ ಅವಶ್ಯಕ್ಕನಗುಣವಾಗಿ ಪ್ರೋಟೀನ್‌ ಸೇವಿಸಬೇಕು. ದೈಹಿಕವಾಗಿ ಕಡಿಮೆ ಕೆಲಸ ಮಾಡುವವರಿಗೆ 0.5 ರಿಂದ 0.8 ಗ್ರಾಂ ಪ್ರೋಟೀನ್‌ ಸಾಕು, ಅಥ್ಲೀಟ್‌ಗಳಿಗೆ 1 ರಿಂದ 1.5 ಗ್ರಾಂ ಅಗತ್ಯ. ಏಕೆಂದರೆ ಅವರು ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ.

ಸುಧಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ