ಸ್ವಾರ್ಥಿಗಳೋ ಪುಕ್ಕಲರೋ? : ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಭಾರತದಲ್ಲಿ ಕೇವಲ ಸರ್ಕಾರದ ಹೆಸರು ಮಾತ್ರ ಕೇಳಿಬರುತ್ತದೆ. ಅದೊಂದೇ ಅಸಲಿ ಮತ್ತು ಏಕಾಂಗಿ ಕಾಳಜಿದಾರ ಎಂಬಂತೆ. ಕೋವಿಡ್‌ ಮಹಾಮಾರಿ ವಿರುದ್ಧ ಹೋರಾಡಲು ವಾಲಂಟಿಯರ್ಸ್‌ ಫೋರ್ಸ್‌ನ ಅತಿ ಅಗತ್ಯವಿದೆ, ಆದರೆ ನಮ್ಮಲ್ಲಿ ಎಲ್ಲರೂ ಸ್ವಾರ್ಥಿಗಳು ಅಥವಾ ಹೆದರುಪಕ್ಕಲರು. ಇಲ್ಲಿ ನಮ್ಮ ಹೆಂಗಳೆಯರು ಕೊರೋನಾ ವಿರುದ್ಧ ತಾವಾಗಿ ಮುಂದೆ ಬಂದು ಏನೂ ಮಾಡಲಿಲ್ಲ, ಅನಗತ್ಯ ಸಂದರ್ಭಗಳಲ್ಲಿ ಆರತಿ ಮಾಡುವಂತೆ….. ವಿಶ್ವದೆಲ್ಲೆಡೆ ಯುನೈಟೆಡ್‌ ನೇಶನ್ಸ್ ಮತ್ತು ಅದನ್ನು ಸಪೋರ್ಟ್‌ ಮಾಡುವ ಸಂಸ್ಥೆಗಳು ಇದರ ವಿರುದ್ಧ ಅಹರ್ನಿಶಿ ಹೋರಾಡುತ್ತಲಿವೆ.

fea-pfizer-vaccine-update

ಮುಂದಿನ ಆಡಳಿತ ಯಾರದು? : ಅಮೆರಿಕಾದಲ್ಲಿ ಇತ್ತೀಚೆಗೆ ಬೈಡನ್‌ ಮತ್ತು ಕಮಲಾ ಹ್ಯಾರಿಸ್‌ರ ಗೆಲುವಿಗಾಗಿ ಎಲ್ಲರೂ ರಸ್ತೆಗಳಲ್ಲಿ ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದ್ದು ನಿಜವಾದರೂ, ಇಡೀ ಅಮೆರಿಕಾ ಇಂದು ಖುಷಿಯಾಗಿದೆ ಎಂದೇನೂ ಅಲ್ಲ. ಅಮೆರಿಕಾ ಸಹ ಇಂದು ಭಾರತದಂತೆಯೇ ತೀರಾ ಭಿನ್ನ ಭಿನ್ನ ಜನರ ಸಮೂಹವಾಗಿದೆ. ಹೀಗಾಗಿ ಅಮೆರಿಕನಿಸಂ ಇಂದು ಟ್ರಂಪಿಸಂ ಆಗಿಹೋಗಿದೆ. ಕರಿಯರು, ಮೆಕ್ಸಿಕನ್ನರು, ವ್ಯಾಟಿನ್ನರು, ಭಾರತೀಯರ ದಂಡು ಇದೆ…… ಕೇವಲ ಸೇವೆಗಾಗಿ ಮಾತ್ರ. ಆದರೆ ಆಡಳಿತ ನಡೆಸುವವರು ಮಾತ್ರ ಪಕ್ಕಾ ಬಿಳಿಯರೇ, ಆ ವೋಟು ಬ್ಯಾಲೆಟ್‌ ಬಾಕ್ಸ್ ಅಥವಾ ಬುಲೆಟ್‌ನಿಂದಲೇ ದೊರಕಿರಲಿ!

PB-K2P-FamilyCruz-1120-BW-RGB

ಸಾಮಾಜಿಕ ಪರಿರ್ತನೆಯ ಮಾಧ್ಯಮ : ಡ್ಯಾನ್ಸ್ ಕೇವಲ ಇತರರನ್ನು ಖುಷಿ ಪಡಿಸಲಿಕ್ಕೆ ಮಾತ್ರವಲ್ಲ, ಇದು ದೇಹದ ಕವಿತೆಯ ಅಭಿವ್ಯಕ್ತಿಯೂ ಹೌದು. ಪ್ರಾಚೀನ ಕಾಲದಿಂದ ಇದು ಧಾರ್ಮಿಕ ಕಂದಾಚಾರಿ ಮತ್ತು ರಾಜರ ಅಧೀನದಲ್ಲೇ ಕಂಟ್ರೋಲ್ ‌ಆಗುತ್ತಿತ್ತು. ಫಿಲಿಪೀನ್ಸ್ ಸಹ ನಮ್ಮಂತೆಯೇ ಹಂಚಿ ಹೋಗಿರುವ ಅರ್ಧಂಬರ್ಧ ಪ್ರಜಾಪ್ರಭುತ್ವ ದೇಶವಾಗಿದೆ. ಒಬ್ಬ ಚಿಂತಕರ ಪ್ರಕಾರ, ಅಲ್ಲಿ ಡ್ಯಾನ್ಸ್ ಸಾಮಾಜಿಕ ಪರಿವರ್ತನೆಯ ಒಂದು ಮಾಧ್ಯಮವಾಗಲಿದೆ, ಒಂದು ಪಕ್ಷ ಜನ ಇದನ್ನು ಸರಿಯಾಗಿ ಪರಿಪಾಲಿಸಿದಲ್ಲಿ, ಇದು ದೇಹ ಮತ್ತು ಆತ್ಮ ಎರಡನ್ನೂ ಲಿಬರೇಟ್‌ ಮಾಡುತ್ತದೆ. ಹೀಗಾಗಿಯೇ ನಮ್ಮಲ್ಲಿ ಇಂದಿಗೂ ನೃತ್ಯ ಮಾಡುವವರನ್ನು ತುಸು ಕೀಳು ಎಂಬಂತೆ ಅವಮಾನಿಸಲಾಗುತ್ತದೆ.

nike-nadine-lustre-ac-lalata

ಅಭಿಮಾನಿಗಳಿಗೇನೂ ಕೊರತೆ ಇಲ್ಲ : ಅಮೆರಿಕಾದ ಫಿಲೆಡೆಲ್ಛಿಯಾದ ಮ್ಯೂಸಿಕ್‌ ಗ್ರೂಪ್‌, ಪಬ್ಲಿಕ್‌ನಲ್ಲಿ ಡ್ಯಾನ್ಸ್ ಪ್ರದರ್ಶನದ ನಿರ್ಬಂಧವಿದ್ದರೂ, ತಮ್ಮ ಮ್ಯೂಸಿಕ್‌ ಆಲ್ಬಂನ್ನು ರಿಲೀಸ್‌ ಮಾಡಿದ್ದಾರೆ, ಇದರಲ್ಲಿ ಅನೇಕ ಬಗೆಯ ಮೂಡ್‌ಗೆ ತಕ್ಕಂತೆ ಹಾಡುಗಳಿವೆ. ಈ ಚತುಷ್ಟಯರಂತೂ ಅಲ್ಲಿ ಬಹಳ ಪಾಪ್ಯುಲರ್‌ ಹಾಗೂ ಇವರುಗಳು ತಮ್ಮ ಹಾಡನ್ನು ರೆಕಾರ್ಡ್‌ ಮಾಡಿಸಲು ಬಹಳ ತಡ ಮಾಡುತ್ತಾರೆ. ಹೀಗಾಗಿ ಇವರ ಅನಂತಕೋಟಿ ಅಭಿಮಾನಿಗಳು ಇದಕ್ಕಾಗಿ ಸದಾ ಕಾಯುತ್ತಿರುತ್ತಾರೆ.

jay1-1536x1024

ಮಾಸ್ಕ್ ಅಂತೂ ಅತ್ಯಗತ್ಯ : ಈ ಅಂತಾರಾಷ್ಟ್ರೀಯ ಖ್ಯಾತಿವೆತ್ತ ಮಾಡೆಲ್ ಹಾಫ್‌ ವುಮೆನ್‌ ಹೇಳುತ್ತಾಳೆ, ಫ್ಯಾಷನ್‌ ಹೇಗೆ ಇರಲಿ ಮಾಸ್ಕ್ ಅಂತೂ ಇರಲೇಬೇಕು! ಇವಳ ಈ ಫ್ಯಾಷನ್‌ ಸ್ಟೇಟ್‌ಮೆಂಟ್‌ ಎಲ್ಲರನ್ನೂ ಚಕಿತಗೊಳಿಸಿದೆ. ಇದರಿಂದ ನೀವು, ನಿಮ್ಮ ಎದುರಿನವರೂ ಸುರಕ್ಷಿತರು ಎನ್ನುತ್ತಾಳೆ.

Womens-movements

ಎಲ್ಲರ ನಿರೀಕ್ಷೆಯ ಗುರಿ : ಫೈಝರ್‌ಬಯೋ ಆ್ಯನ್‌ ಟಾಕ್‌ ಮೂಲಕ ತಯಾರಿಸಲಾದ ಕೊರೋನಾ ವೈರಸ್‌ ವ್ಯಾಕ್ಸಿನ್‌ಗಾಗಿ ವಿಶ್ವದೆಲ್ಲೆಡೆ ಕಾತರದ ನಿರೀಕ್ಷೆ ಇದೆ. ಈ ವ್ಯಾಕ್ಸಿನ್‌ ಕುರಿತು ರಾಚೆಸ್ಟರ್‌ ಯೂನಿವರ್ಸಿಟಿಯ ಮೆಡಿಕಲ್ ಸೆಂಟರ್‌ನಲ್ಲಿ ಪ್ರಯೋಗ ನಡೆದಿದ್ದು ಇದುವರೆಗೂ ಎಲ್ಲವೂ ಸರಿ ಇದೆ. ಕಳೆದ ಮೇ ತಿಂಗಳಿಂದಲೇ ಈ ಯೂನಿವರ್ಸಿಟಿಯಲ್ಲಿ ಇದರ ಕುರಿತಾದ ಪ್ರಯೋಗ ನಡೆಯುತ್ತಿದ್ದು, ವಿಶ್ವವಿಡೀ ಸರ್ಕಾರಗಳು ಇದಕ್ಕಾಗಿ ಕಾಯುತ್ತಿವೆ.

Jy17AeK

ಬನ್ನಿ, ಒಂದು ಸಂಕಲ್ಪ ಕೈಗೊಳ್ಳೋಣ : ಅಮೆರಿಕಾದ ಸಮಾಜದಲ್ಲೂ ಸಹ ಮಾಜಿ ಸೈನಿಕರ ಪುನರ್ಸ್ಥಾಪನೆ ಒಂದು ದೊಡ್ಡ ಸಮಸ್ಯೆ. ಅನೇಕ ವರ್ಷ ಸೇನೆಯಲ್ಲಿದ್ದು ಬಂದ ಮೇಲೆ, ಅವರು ಬಯಸಿದ ನೌಕರಿ, ಮನೆ ಮಠ ಸುಲಭವಾಗಿ ದಕ್ಕದು. ಏಕೆಂದರೆ ಅವರ ವ್ಯವಹಾರ ಮಾನಸಿಕತೆ ಬದಲಾಗಿರುತ್ತದೆ. ಅನೇಕ ಸಂಘಸಂಸ್ಥೆ, ಕಂಪನಿಗಳು ಇವರುಗಳಿಗಾಗಿ ಏನಾದರೂ ಮಾಡುತ್ತಿರುತ್ತವೆ. ಪ್ಯಾಲ್ ‌ಬಾಯ್ಸ್ ಎಂಬ ಕಂಪನಿಯೊಂದು ಈ ಸೈನಿಕರಿಗಾಗಿ 45ಕ್ಕೂ ಹೆಚ್ಚು ಗಾಡಿಗಳನ್ನು ವಿತರಿಸಿತು ಹಾಗೂ ಅವರ ಸರ್ವಿಸ್‌ ವೌಚರ್‌ ಸಹ, ಅದರಿಂದ ಅವರು ಇಡೀ ಅಮೆರಿಕಾ ಪೂರ್ತಿ ಫ್ರೀಯಾಗಿ ಓಡಾಡಬಹುದು! ಈ ಸಮಸ್ಯೆ ವಿಶ್ವದೆಲ್ಲೆಡೆಯ ಸೈನಿಕರದೂ ಆಗಿದೆ. ಒಮ್ಮೆ ದೇಶದ ರಕ್ಷಕರೆನಿಸಿದವರು ನಂತರ ದೇಶಕ್ಕೆ ಸಾಮಾಜಿಕ ಹೊರೆ ಎನಿಸುತ್ತಾರೆ. ಹೀಗಾಗಿ ಪ್ರತಿ ಕುಟುಂಬ ಒಬ್ಬ ಪುರೋಹಿತನ ಬದಲು ಸೈನಿಕನನ್ನು ಪೋಷಿಸುವ ಸಂಕಲ್ಪ ತೊಡಬೇಕು!

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ