ಅಮೆರಿಕನ್‌ ಕಸ್ಟಮ್ಸ್ ಮತ್ತು ಬಾರ್ಡರ್‌ ಪ್ರೊಟೆಕ್ಷನ್‌ನ್ನು ದೇಶದ 20 ಟಾಪ್‌ ಏರ್‌ಪೋರ್ಟ್‌ಗಳಲ್ಲಿ ಆರಂಭಿಸಲು ಸಿದ್ಧತೆಗಳು ನಡೆದಿವೆ. ಇದರನ್ವಯ ಫೇಶಿಯಲ್ ರೆಕಗ್ನಿಶನ್‌ ಅಂದರೆ ಮುಖದ ಗುರುತನ್ನು ಕಂಡುಹಿಡಿಯಲಾಗುತ್ತದೆ.

ಹಲವು ದೇಶಗಳಲ್ಲಿ ತಂತ್ರಜ್ಞಾನ

ಅಮೆರಿಕನ್‌, ಬ್ರಿಟನ್‌, ಕೆನಡಾ, ಆಸ್ಟ್ರೇಲಿಯಾ, ಅರಬ್‌ ಒಕ್ಕೂಟ, ಜಪಾನ್‌, ರಷ್ಯಾ, ಐರ್ಲೆಂಡ್‌, ಸ್ಕಾಟ್‌ಲೆಂಡ್‌, ಸ್ವಿಡ್ಜರ್ಲೆಂಡ್‌, ಫ್ರಾನ್ಸ್, ನ್ಯೂಜಿಲ್ಯಾಂಡ್‌, ಫಿನ್‌ಲ್ಯಾಂಡ್‌, ಹಾಂಕಾಂಗ್‌, ನೆದರ್‌ ಲ್ಯಾಂಡ್‌, ಸಿಂಗಾಪುರ, ರೊಮಾನಿಯಾ, ಕತಾರ್‌, ಪನಾಮಾದಂತಹ ದೇಶಗಳಲ್ಲಿ ಈಗಾಗಲೇ ಈ ತಂತ್ರಜ್ಞಾನವನ್ನು ಅನುಸರಿಸಲಾಗುತ್ತಿದೆ.

ಚೀನಾದಲ್ಲಿ ಎಲ್ಲಕ್ಕೂ ಮೊದಲು ಈ ತಂತ್ರವನ್ನು ಅನುಷ್ಠಾನಗೊಳಿಸಲಾಯಿತು. ಜರ್ಮನಿ ದೇಶ ಉಗ್ರರನ್ನು ಗುರುತಿಸಲು ಈ ತಂತ್ರಜ್ಞಾನ ಬಳಸುತ್ತದೆ. ಈಗ ಭಾರತದಲ್ಲೂ ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಸಮಯ ಉಳಿಸುವ ನಿಟ್ಟಿನಲ್ಲಿ ಬಯೋಮೆಟ್ರಿಕ್ ಸ್ಕ್ರೀನಿಂಗ್‌ ಸಿಸ್ಟಮ್ ನ ಈ ವ್ಯವಸ್ಥೆಯನ್ನು ವಿಮಾನ ನಿಲ್ದಾಣಗಳಲ್ಲಿ ಅನ್ವಯಿಸಲು ನಿರ್ಧರಿಸಿದೆ.

ಬಿಐಎಎಲ್ ಅಂದರೆ ಬೆಂಗಳೂರು ಇಂಟರ್‌ ನ್ಯಾಷನಲ್ ಏರ್‌ಪೋರ್ಟ್‌ ಲಿಮಿಟೆಡ್‌ ತನ್ನ ಟ್ವೀಟ್‌ನಲ್ಲಿ ನಿಮ್ಮ ಮುಖವೇ ನಿಮ್ಮ ಬೋರ್ಡಿಂಗ್‌ ಪಾಸ್‌ ಆಗಿರುತ್ತದೆ ಎಂದು ಹೇಳಿಕೊಂಡಿತ್ತು. ಬೆಂಗಳೂರನ್ನು ಭಾರತದ ಮೊದಲ ಪೇಪರ್‌ ಲೆಸ್‌ ಏರ್‌ಪೋರ್ಟ್ ಆಗಿಸಲು ಬಿಐಎಎಲ್ ವಿಶನ್‌ ಬಾಕ್ಸ್ ನೊಂದಿಗೆ ಅಗ್ರಿಮೆಂಟ್‌ಗೆ ಸಹಿ ಹಾಕಿದೆ.

ಬಿಐಎಎಲ್ ಜಾರಿ ಮಾಡಿದ ಒಂದು ಪ್ರಕಟಣೆಯಲ್ಲಿ ಬೋರ್ಡಿಂಗ್‌ಗೆ ರಿಜಿಸ್ಟ್ರೇಶನ್‌ಗಾಗಿ ಪೇಪರ್‌ ಲೆಸ್‌ ಆಗಿಸಿ ವಿಮಾನ ಪ್ರವಾಸವನ್ನು ಸುಲಭಗೊಳಿಸಲು ಪ್ರಯತ್ನ ನಡೆಸಲಾಗುತ್ತದೆ. ಅದೇ ಉದ್ದೇಶದಿಂದ ಈ ಸೌಲಭ್ಯ ಶುರು ಮಾಡಲಾಗಿದೆ.

ಬಯೋಮೆಟ್ರಿಕ್‌ ತಂತ್ರಜ್ಞಾನದ ಮುಖಾಂತರ ಪ್ರಯಾಣಿಕರ ಮುಖದಿಂದಲೇ ಅವರನ್ನು ಗುರುತಿಸಲಾಗುತ್ತದೆ. ಏರ್‌ ಪೋರ್ಟ್‌ಗಳಲ್ಲಿ ಯಾವುದೇ ತೊಂದರೆಯಿಲ್ಲದೆ ಪ್ರಯಾಣಿಸಬಹುದು. ಅದಕ್ಕಾಗಿ ಮೇಲಿಂದ ಮೇಲೆ ಬೋರ್ಡಿಂಗ್‌ ಪಾಸ್‌, ಪಾಸ್‌ ಪೋರ್ಟ್‌ ಅಥವಾ ಇತರೆ ಗುರುತಿನ ಚೀಟಿಗಳನ್ನು ತೋರಿಸಬೇಕಾದ ಅವಶ್ಯಕತೆ ಉಂಟಾಗುವುದಿಲ್ಲ.

ಎಲ್ಲಕ್ಕೂ ಮೊದಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಶುರುವಾಗಲಿದೆ. ತಮ್ಮ ಪಾಸ್‌ ಪೋರ್ಟ್ ಬೋರ್ಡಿಂಗ್‌ ಪಾಸ್‌ ತೋರಿಸುವ ಬದಲು ಪ್ರಯಾಣಿಕರನ್ನು ಒಂದು ಕ್ಯಾಮೆರಾ ಮುಂದೆ ನಿಲ್ಲಿಸಲಾಗುತ್ತದೆ. ಅಲ್ಲಿ ಅವರ ಒಂದು ಫೋಟೋ ತೆಗೆದುಕೊಳ್ಳಲಾಗುತ್ತದೆ. ಆ ಫೋಟೋವನ್ನು ಸರ್ಕಾರಿ ಡೇಟಾ ಬೇಸ್‌ನಲ್ಲಿ ಫೈಲ್ ‌ಮಾಡಲಾದ ಫೋಟೋಸ್‌ ಜೊತೆಗೆ ಹೋಲಿಕೆ ಮಾಡಿ ನೋಡಲಾಗುತ್ತದೆ. ಈ ಹೋಲಿಕೆಯ ಆಧಾರದ ಮೇರೆಗೆ ಆ ವ್ಯಕ್ತಿಯನ್ನು ಗುರುತಿಸಲಾಗುತ್ತದೆ.

ಈ ಬಯೋಮೆಟ್ರಿಕ್‌ ಸ್ಕ್ರೀನಿಂಗ್‌ನಲ್ಲಿ ಹಲವು ಲಾಭಗಳು ಗೋಚರಿಸುತ್ತಿದ್ದರೂ, ಇದು ನಮ್ಮ ವೈಯಕ್ತಿಕತೆಯ ಮೇಲೆ ದಾಳಿ ಮಾಡಬಹುದು. ಈ ವಿಧಾನದ ಮೂಲಕ ನಮ್ಮ ಟ್ರ್ಯಾಕಿಂಗ್‌ ಮಾಡಬಹುದು. ಒಂದು ಬಗೆಯ ಟ್ರ್ಯಾಕಿಂಗ್‌ನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಅದು ಬಹು ಉಪಯೋಗಿಯಾಗಿ ಕೆಲಸ ಮಾಡಲಿದೆ.

ಪ್ರೈವೆಸಿ ಇನ್ಲ್ಯಾಂಡಿಂಗ್

ಟೆಕ್ನಾಲಜಿ ಒಂದು ರೀತಿಯಲ್ಲಿ ನಮ್ಮ ಖಾಸಗಿ ಜೀವನದಲ್ಲಿ ಹಸ್ತಕ್ಷೇಪ ಮಾಡುವ ದಾರಿಯಾಗಿದೆ. ಅದು ಒಂದು ರೀತಿಯ ಜಾಲವಾಗಿದ್ದು, ಅದರ ಮುಖಾಂತರ ನಮ್ಮ ಮುಖ ಚಹರೆಯನ್ನು ಡೇಟಾದ ರೂಪದಲ್ಲಿ ಬಳಸಲಾಗುತ್ತದೆ. ಆ ಡೇಟಾವನ್ನು ಸ್ಟೋರ್‌ ಮಾಡಬಹುದು, ಟ್ರ್ಯಾಕ್‌ ಮಾಡಬಹುದು ಅಥವಾ ಕದಿಯಲೂಬಹುದು.

ಜನತೆ ಈ ಬಗ್ಗೆ ಡೋಲಾಯಮಾನ ಸ್ಥಿತಿಯಲ್ಲಿದ್ದಾರೆ, 2018ರಲ್ಲಿ 2000 ಯು ಇಂಟರ್‌ನೆಟ್‌ ಬಳಕೆದಾರರ ಮೇಲೆ ನಡೆಸಲಾದ ಒಂದು ಸಮೀಕ್ಷೆಯ ಪ್ರಕಾರ, ಶೇ.44ರಷ್ಟು ಜನರು ಇದನ್ನು `ಅನ್‌ ಫೇರೆಬಲ್’ ಎಂದು ಹೇಳಿದರೆ, 27% ಜನರು `ಫೇರೆಬಲ್’ ಎಂದು ತಿಳಿಸಿದರು.

ಭಾರತದಲ್ಲಿ ಯಾವುದೇ ಸರ್ಕಾರವಿರಲಿ, ನಿಮ್ಮ ಪ್ರೈವೆಸಿಗೆ ಧಕ್ಕೆ ತರುವಂತಹ ತಂತ್ರಜ್ಞಾನವನ್ನು ಬಳಸಿಯೇ ಬಳಸುತ್ತವೆ. ನಿಮ್ಮ ಮುಖದ ಸ್ಕ್ಯಾನ್‌ ಮಾಡಲಾಗಿದೆಯೆಂದು ನಿಮಗೆ ಸುಳಿವು ಸಹ ಸಿಗಲಾರದು, ಅದು ವರ್ಷಾನುವರ್ಷ ಹಾಗೆಯೇ ಇರುತ್ತದೆ. ನೀವು ಹ್ಯಾಕಿಂಗ್‌ಗೆ ತುತ್ತಾಗಬಹುದು. ಈ ರೀತಿಯಲ್ಲಿ ಅನಗತ್ಯ ಹಸ್ತಕ್ಷೇಪಕ್ಕೆ ತುತ್ತಾಗಬೇಕಾಗುತ್ತದೆ.

ಭಾರತೀಯ ರೈಲ್ವೆ ಪೇಪರ್ಲೆಸ್

ಭಾರತೀಯ ರೈಲ್ವೆ ಕೂಡ ತನ್ನ ಕಾರ್ಯವೈಖರಿಯನ್ನು ಪೇಪರ್‌ ಲೆಸ್‌ ಆಗಿಸಿದೆ. 2011ರಲ್ಲಿ ಐಆರ್‌ಸಿಟಿಸಿ ತನ್ನ ಸೌಲಭ್ಯ ಒದಗಿಸುತ್ತ ಪ್ರಯಾಣಿಕರು ತಮ್ಮ ಜೊತೆಗೆ ಕೌಂಟರ್‌ ಟಿಕೆಟ್‌ ಇಟ್ಟುಕೊಳ್ಳಲೇಬೇಕೆಂಬ ಅಗತ್ಯವಿಲ್ಲವೆಂದು ಹೇಳಿತು. ಜನರು ಎಸ್‌ಎಂಎಸ್‌ ಅಥವಾ ಇಟಿಕೆಟ್‌ ಮುಖಾಂತರ ಪ್ರಯಾಣ ಮಾಡಬಹುದಾಗಿದೆ.

ಈ ರೀತಿಯ ಗುರುತು ಪ್ರವೇಶಕ್ಕಾಗಿ ಮೊಬೈಲ್‌ನ ಬಳಕೆ ಪ್ರೈವೆಸಿ ಅಥವಾ ಫ್ರಾಡ್‌ ಇಂಪ್ಲಿಮೇಶನ್‌ಗೆ ಕಾರಣವಾಗಲಾರದು. ಆದರೆ ಫೇಶಿಯಲ್ ರೆಕಗ್ನೇಶನ್‌ ಕುರಿತು ಹಲವು ಪ್ರಶ್ನೆಗಳು ಏಳಬಹುದು.

ಸಿಂಧೂ  

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ