ಫಿಲ್ಮಿ ಸಂಗಾತಿ ಬೇಡ `ಮರ್ಡರ್’ ಖ್ಯಾತಿಯ ಮಲ್ಲಿಕಾ ಶೆರಾವತ್
ತನ್ನ ಕೂರಲುಗಿನ ಮಾತುಗಳಿಂದ ಸದಾ ಚರ್ಚೆಯಲ್ಲಿರುತ್ತಾಳೆ. ಯಾವಾಗಮ್ಮ ನಿನ್ನ ಮದುವೆ, ಯಾರ ಜೊತೆ….. ಎಂದು ಯಾರೋ ಕೇಳಿದರಂತೆ. `ನಾನು ಮದುವೆ ಅಂತ ಮಾಡಿಕೊಂಡರೆ ಖಂಡಿತಾ ಅದು ಸಿನಿಮಾ ಮಂದಿಯನ್ನಲ್ಲ,’ ಎನ್ನುತ್ತಾಳೆ.
ಬಹುಶಃ ಮಾಧುರಿ ದೀಕ್ಷಿತ್ ಹಾಗೂ ಶಿಲ್ಪಾ ಶೆಟ್ಟಿಯವರನ್ನು ನೋಡಿ ಮಲ್ಲಿಕಾಳಿಗೂ ಈ ಐಡಿಯಾ ಹೊಳೆದಿರಬಹುದೇ?
ಕಿರು ಪರದೆಯಲ್ಲಿ ಲವ್ವೋ ಲವ್ವು!
ಇತ್ತೀಚಿನ ಯಾವ ಟಿ.ವಿ. ಧಾರಾವಾಹಿ ನೋಡಿ, ಅಲ್ಲಿ ಪ್ರೀತಿ ಪ್ರೇಮಗಳ ಸುರಿಮಳೆಯೇ ಇರುತ್ತದೆ. ಟಿ.ವಿ. ಕಪಲ್ಸ್ ಪರಸ್ಪರ ನಿಕಟವರ್ತಿಗಳಾಗಲು ಎಲ್ಲಾ ಪ್ರಯತ್ನ ಮಾಡುತ್ತಿರುತ್ತಾರೆ. `ಬಡೇ ಅಚೆ ಲಗ್ತೆ ಹೈ’ ಧಾರಾವಾಹಿಯಲ್ಲಿ ಸಿಡಿಮಿಗುಟ್ಟುತ್ತಲೇ ಮದುವೆಯಾದ ಪ್ರಿಯಾ ರಾಮ್ ಕಪೂರ್ ನಂತರ ಆದರ್ಶ ದಂಪತಿಗಳೆನಿಸಿದ್ದಾರೆ. 7 ಸುದೀರ್ಘ ವರ್ಷಗಳ ಕೋಮಾದ ನಂತರ ಎದ್ದ ಪ್ರಿಯಾಳಲ್ಲಿ ರಾಮ್ ಅದೇ ಹಿಂದಿನ ಪ್ರೀತಿ ಉಳಿಸಿಕೊಂಡಿದ್ದರೆ, `ಖೇಲ್ತಿ ಹೈ ಝಿಂದಗಿ ಆಂಖ್ ಮಿಚೋಲಿ’ಯಲ್ಲಿ ವಿಧವೆ ಶೃತಿಯನ್ನು ಪ್ರೇಮಿಸುವ ಸಂಜಯ್, ಅದನ್ನು ವ್ಯಕ್ತಪಡಿಸಲಾಗದೆ ಬೇರೆಲ್ಲ ವಿಧದಲ್ಲೂ ನೆರವಾಗುತ್ತಾ ಪ್ರೇಮಭಿಕ್ಷೆಗಾಗಿ ಕಾಯುತ್ತಾನೆ.
`ಸರಸ್ವತಿ ಚಂದ್ರ’ ಧಾರಾವಾಹಿಯ ಸರಸ್ ಕುಮುದಾಳನ್ನು ಅವಳ ದುಷ್ಟ ಪತಿಯಿಂದ ಬಿಡಿಸಿಕೊಂಡು ಬಂದು ಕಾಪಾಡಿದ್ದರೂ, ತನ್ನ ಪ್ರಣಯ ನಿವೇದನೆ ಮಾಡಿಕೊಳ್ಳಲಾಗದೆ ತುಡಿಯುತ್ತಾನೆ. `ಜೋಧಾ ಅಕ್ಬರ್’ ಧಾರಾವಾಹಿಯಲ್ಲಂತೂ ಜೋಧಾಳನ್ನು ತನ್ನ ಕೋಣೆಯಲ್ಲೇ ಉಳಿಸಿಕೊಳ್ಳಲು ಯತ್ನಿಸಿದರೂ, ಜೋಧಾ ಅಂತರ ಕಾಪಾಡಿಕೊಂಡು ತನ್ನ ಪ್ರೀತಿ ಹಂಚುತ್ತಾಳೆ. ಒಟ್ಟಾರೆ ಪ್ರೇಕ್ಷಕರಿಗೆ ಉತ್ತಮ ಲವ್ ಟ್ರೈನಿಂಗ್ ಲಭಿಸುತ್ತಿದೆ.
ಸ್ಥೂಲತೆಯಿಂದ ತಪ್ಪುತ್ತಿದ್ದ ಅವಕಾಶಗಳು
`ಉತರನ್’ ಧಾರಾವಾಹಿಯಿಂದ ಎಲ್ಲರ ಮನೆಮಾತಾಗಿರುವ ತಪಸ್ಯಾ ಅಥವಾ ದಿವ್ಯಾ ದೇಸಾಯಿ ಒಂದು ಕಾಲದಲ್ಲಿ ಮಹಾ ಡುಮ್ಮಿ ಆಗಿದ್ದಳಂತೆ. ನಾನು ಜನಪ್ರಿಯತೆಯ ಈ ತುದಿಗೇರುತ್ತೇನೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ ಎನ್ನುವ ದಿವ್ಯಾ, ತನ್ನ ಕೆರಿಯರ್‌ನಲ್ಲಿ ಹಲವಾರು ಏರಿಳಿತಗಳನ್ನು ಕಂಡಳು. `ಜನ ನನ್ನ ಆ್ಯಕ್ಟಿಂಗ್ ಹಾಗೂ ಅಂದ ಕಂಡು ಹೊಗಳುತ್ತಿದ್ದರು ನಿಜ, ಆದರೆ ಟಿ.ವಿ.ಗೆ ಬಂದ ಹೊಸದರಲ್ಲಿ ನಾನು ಬಹಳ ಸ್ಥೂಲಳಾಗಿದ್ದೆ. ಈ ಕಾರಣದಿಂದ ನಾನು ಹಲವಾರು ಉತ್ತಮ ಅವಕಾಶಗಳನ್ನು ಕಳೆದುಕೊಂಡಿದ್ದೆ. ಅನೇಕ ಸಲ ಮುಖದ ಮೇಲೆ ಹೊಡೆದಂತೆ ರಿಜೆಕ್ಟ್ ಮಾಡಿಬಿಡುತ್ತಿದ್ದರು. ನನ್ನ ದೃಢ ಸಂಕಲ್ಪದಿಂದ ನಾನು ಪ್ರಯತ್ನಪಟ್ಟು ತೆಳುಕಾಯ ಹೊಂದಿದೆ, ಸ್ವಪ್ರತಿಭೆಯಿಂದ ಹೊಸ ಹೊಸ ಅವಕಾಶ ಪಡೆಯುತ್ತಿದ್ದೇನೆ,’ ಎನ್ನುತ್ತಾಳೆ ದಿವ್ಯಾ.
ಡ್ಯಾನ್ಸ್ ಪೈಪೋಟಿಯ ನಚ್ ಬಲಿಯೇ
ಸಬ್ ಟಿ.ವಿ.ಯ `ಎಫ್.ಐ.ಆರ್’ ಧಾರಾವಾಹಿಯಲ್ಲಿ ಸದಾ ನಕ್ಕು ನಲಿಸುವ ಕೀಕು ಪಾತ್ರಧಾರಿಯನ್ನು ಯಾರೂ ಮರೆಯಲಾರರು. ಇದೀಗ ಕೀಕು ತನ್ನ ಪತ್ನಿ ಪ್ರಿಯಾಂಕಾ ಜೊತೆ `ನಚ್ ಬಲಿಯೇ ಸೀಸನ್-6′ ನಲ್ಲಿ ಕುಣಿದು ಕುಪ್ಪಳಿಸಲಿದ್ದಾನೆ. ಇವನ ಜೊತೆ ರಾಮಾಯಣದ ಸೀತಾರಾಮ ಪಾತ್ರಧಾರಿಗಳಾದ ದಿಬೀನಾ ಬ್ಯಾನರ್ಜಿ ಗುರುಮೀತ್ ಚೌಧರಿ ಹಾಗೂ ಕನ್ನಿಕಾ ಮಹೇಶ್ವರಿ ಅಂಕುರ್ ಘೈ ದಂಪತಿಗಳೂ ಸಹ ಭಾಗವಹಿಸುತ್ತಿದ್ದಾರೆ.
ಅಮೃತಾಳ ಸಿನಿ ಸಮಾಜ ಸೇವೆ
2002ರಲ್ಲಿ `ಅಬ್ ಕೆ ಬರಸ್’ ಚಿತ್ರದಿಂದ ಬಾಲಿವುಡ್‌ಗೆ ಕಾಲಿರಿಸಿದ ಅಮೃತಾರಾವ್, ತನ್ನ ಮುಂದಿನ `ಸಿಂಗಲ್ ಸಾಬ್ ದಿ ಗ್ರೇಟ್’ ಚಿತ್ರದಲ್ಲಿ ಪತ್ರಕರ್ತೆಯಾಗಿ ಮಿಂಚುತ್ತಿದ್ದಾಳೆ. `ಸತ್ಯಾಗ್ರಹ್’ ತರಹವೇ ಈ ಚಿತ್ರ ಸಿಸ್ಟಮ್ ಬದಲಾಯಿಸುವ ಕಥಾಹಂದರ ಹೊಂದಿದೆ. ತನ್ನ ಪಾತ್ರದ ಕುರಿತು ಹೇಳುತ್ತಾ ಅಮೃತಾ, `ಇದರಲ್ಲಿ ನನ್ನದು ಬಲು ಶಾರ್ಪ್ ಆದ ರಿಪೋರ್ಟರ್ ಪಾತ್ರ. ಭ್ರಷ್ಟಾಚಾರದ ನಿರ್ಮೂಲನೆಗೆ ಹೋರಾಡುವುದಕ್ಕಾಗಿ ಅಂಥ ದುಷ್ಟ ರಾಜಕಾರಣಿಗಳ ಬಣ್ಣ ಬಯಲು ಮಾಡುತ್ತೇನೆ. ಕರ್ನಾಟಕ ನನ್ನ ತವರೂರು. ಹಿಂದಿ, ಕೊಂಕಣಿ ಬರುತ್ತದೆ. ಆದರೂ ಸದ್ಯಕ್ಕೆ ಹಿಂದಿಯಲ್ಲಿ ಬೇರೆ ಕಲಾವಿದರು ನನಗಾಗಿ ಡಬ್ಬಿಂಗ್ ಮಾಡುತ್ತಾರೆ. ಮಹೇಶ್ ಬಾಬು ಜೊತೆ ತೆಲುಗಿನ `ವಕ್ಕಡೆ’ ಚಿತ್ರದಲ್ಲಿ ನಟಿಸಿದ್ದೆ. ಭಾಷಾ ಸಮಸ್ಯೆ ಕಾರಣ ತೆಲುಗು, ತಮಿಳಿನ ಆಫರ್ಸ್ ಹೆಚ್ಚು ಒಪ್ಪುತ್ತಿಲ್ಲ,’ ಎನ್ನುತ್ತಾಳೆ.
ನೀನಿಲ್ಲದಿದ್ದರೆ…. ಇನ್ನೊಬ್ಬ!
ಜಾನ್ ಅಬ್ರಹಾಂನಿಂದ ಬೇರ್ಪಟ್ಟ ನಂತರ ಬಿಪಾಶಾ ಬಸು ಹತಾಶಳಾಗಿ ಕುಳಿತಿಲ್ಲ. ಈಗ ಅವಳ ಸುಖದುಃಖ ಹಂಚಿಕೊಳ್ಳಲು ಬೇರೊಬ್ಬ ಸಂಗಾತಿ ಸಿಕ್ಕಿದ್ದಾನೆ, ಪ್ರತಿ ಪಾರ್ಟಿಯಲ್ಲೂ ಈ ಜೋಡಿ ಈಗ ಲಕಲಕ ಮಿಂಚುತ್ತಿದೆ. ಆತನೇ ಹರ್ಮನ್ ಬೀಜಾ! ಇತ್ತೀಚೆಗೆ ಶಿಲ್ಪಾ ಶೆಟ್ಟಿಯ ಪಾರ್ಟಿಯೊಂದಕ್ಕೆ ಆಗಮಿಸಿದ್ದ ಈ ಜೋಡಿ, ಮೀಡಿಯಾಗೆ ಸಿಕ್ಕಿಹಾಕಿಕೊಳ್ಳದಂತೆ ನುಸುಳಿಕೊಂಡಿತು. ಹರ್ಮನ್ ತನ್ನ ಪರ್ಫೆಕ್ಟ್ ಮಿಸ್ಟರ್ ರೈಟ್ ಎನ್ನುತ್ತಾಳೆ ಬಿಪಾಶಾ. ಹರ್ಮನ್ ಜೊತೆ ಇತ್ತೀಚೆಗಷ್ಟೆ ಗೋವಾದಲ್ಲಿ ತನ್ನ ಬರ್ತ್‌ಡೇ ಆಚರಿಸಿಕೊಂಡ ಬಿಪಾಶಾ, ಅಲ್ಲೆಲ್ಲ ಸಾಕಷ್ಟು ಸುತ್ತಾಡಿದ್ದಾಳೆ.
`ಆತ್ಮಾ’ ಫ್ಲಾಪ್ ಆದನಂತರ ಇದೀಗ `ಕ್ರಿಯೇಚರ್ಸ್’ನಲ್ಲಿ ಬಿಝಿ ಆಗಿರುವ ಬಿಪಾಶಾಳ ಮುಂದಿನ ಚಿತ್ರಗಳೆಂದರೆ, `ಹಮ್ ಶಕ್, ಮೋಸ್ಟ್ ವೆಲ್‌ಕಂ-2, ಬ್ಯಾಂಗ್ ಬ್ಯಾಂಗ್’ ಇತ್ಯಾದಿ.
ಕತ್ರೀನಾ….. ಬೀ ಕೇರ್‌ಫುಲ್!
ಇತ್ತೀಚೆಗೆ `ಧೂಮ್’ ಚಿತ್ರದ ಟೈಟ್ ಟ್ರ್ಯಾಕ್ ಲಾಂಚ್ ಆದಾಗ, ಆ ಈವೆಂಟ್‌ಗಾಗಿ ಪಿಂಕ್ ಕಲರ್‌ನ ಸೆಕ್ಸೀ ಶಾರ್ಟ್ ಡ್ರೆಸ್‌ನಲ್ಲಿ ಆಮೀರ್ ಖಾನ್ ಜೊತೆ ಕಾಣಿಸಿಕೊಂಡ ಕತ್ರೀನಾ ಕೈಫ್‌ಳಿಗೆ, ಮೀಡಿಯಾ ಎದುರು ಅಂದು ಒಂದು ಆಘಾತ ಎದುರಿಸಬೇಕಾಯಿತು. ಎತ್ತರದ ಸ್ಟೂಲ್ ಮೇಲೆ ಕುಳಿತಿದ್ದ ಕತ್ರೀನಾಳ ಫ್ರಾಕ್ ಜೋರಾಗಿ ಬೀಸಿದ ಗಾಳಿಯಿಂದ ಮೇಲೆದ್ದಾಗ, ಯಾರೋ ಕೆಲವರು ಆ ದೃಶ್ಯ ಸೆರೆಹಿಡಿದರಂತೆ! ಕತ್ರೀನಾಗೇನೂ ಇದು ಮೊದಲ ಅನುಭವ ಅಲ್ಲ ಬಿಡಿ. ಈ ಚಿತ್ರದಲ್ಲಿ ಆಲಿಯಾಳ ಪಾತ್ರ ವಹಿಸುತ್ತಿರುವ ಕತ್ರೀನಾ, `ಧೂಂ ಮಚಾ ಲೇ ಧೂಂ’ ಹಾಡಿಗೆ `ಶೀಲಾ ಕೀ ಜವಾನಿ’ಯನ್ನೂ ಮೀರಿಸುವ ಸೆಕ್ಸೀ ಡ್ಯಾನ್ಸ್ ಮಾಡಿದ್ದಾಳಂತೆ. ಕೈಫ್….. ಯಾವುದಕ್ಕೂ ಬೀ ಕೇರ್‌ಫುಲ್!
ಅವರವರ ಭಾವಕ್ಕೆಎಲ್ಲರೂ ತಂತಮ್ಮ ಕಿಶೋರರನ್ನು ಬೆಳ್ಳಿತೆರೆಗೆ ಪರಿಚಯಿಸುತ್ತಿರುವ ಈ ಕಾಲದಲ್ಲಿ, ಬಾಲಿವುಡ್‌ನ ಮ್ಯಾಚೋ ಮ್ಯಾನ್ ಎಂದೇ ಖ್ಯಾತರಾಗಿರುವ ಸನ್ನಿ ಡಿಯೋಲ್ ತಮ್ಮ ಇಬ್ಬರು ಗಂಡುಮಕ್ಕಳನ್ನೂ ಬಾಲಿವುಡ್‌ಗೆ ಪರಿಚಯಿಸಲು ಸಿದ್ಧರಿದ್ದಾರೆ, ಆದರೆ ಅವರು ಇಂಥದೇ ಪಾತ್ರ ನಿರ್ವಹಿಸಬೇಕೆಂದು ಒತ್ತಡ ಹೇರುವುದಿಲ್ಲವಂತೆ. `ಅಂದು ನಾನು ಹೊಸದಾಗಿ ಚಿತ್ರರಂಗಕ್ಕೆ ಬಂದಾಗ ಆ್ಯಕ್ಷನ್ ಚಿತ್ರಗಳು ಚಾಲ್ತಿಯಲ್ಲಿದ್ದವು. ಇಂದು ಲವ್ ಸ್ಟೋರಿಗಳದೇ ಮೇಲುಗೈ. ಹೀಗಾಗಿ ತಮಗೆ ಎಂಥ ಪಾತ್ರ ಇರಲೆಂಬುದನ್ನು ಅವರೇ ನಿರ್ಧರಿಸಲಿ. ಅಂದಹಾಗೆ ನನ್ನ ಯಶಸ್ವೀ ಚಿತ್ರ `ಘಾಯ್’ನ ಸೀಕ್ವೆಲ್`ಘಾಯ್ ರಿಟರ್ನ್ಸ್’ ಶೀಘ್ರದಲ್ಲೇ ತೆರೆಗೆ ಬರಲಿವೆ. ಇದರಲ್ಲಿ ಇವರಿಗೆಂಥ ಪಾತ್ರ ಎಂಬುದನ್ನು ತೆರೆ ಮೇಲೆ ನೋಡಿ ಆನಂದಿಸಿ,’ ಎನ್ನುತ್ತಾರೆ.
ದೀಪಿಕಾಳ ಅನುಪಮ ಸೌಂದರ್ಯ
`ಹಿಂದೆ ನಾನು ವೈಜಯಂತಿ ಮಾಲಾರಲ್ಲಿ ಕಂಡಿದ್ದ ಅಂಥ ಅದ್ಭುತ ಸೌಂದರ್ಯವನ್ನು ಈಗಿನವರಲ್ಲಿ ದೀಪಿಕಾ ಪಡುಕೋಣೆಯಲ್ಲಿ ಮಾತ್ರ ಕಂಡುಕೊಂಡೆ,’ ಎನ್ನುತ್ತಾರೆ `ರಾಮ್ ಲೀಲಾ’ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ. ಮೊದಲು ಈ ಚಿತ್ರದ ನಾಯಕಿ ಪಾತ್ರಕ್ಕೆ ಕರೀನಾಳನ್ನು ಸಂಪರ್ಕಿಸಿದ್ದರಂತೆ. ಅವಳು ಬೇಡವೆಂದಾಗ, ನೆಕ್ಸ್ಟ್ ಚಾನ್ಸ್ ದೀಪಿಕಾಳಿಗೆ ನೀಡಿದರು. `ಇದಕ್ಕಾಗಿ ಆಕೆಯನ್ನು ಭೇಟಿಯಾದಾಗ, ಆಕೆ ಸಿಂಪಲ್ ಸಲ್ವಾರ್ ಸೂಟ್‌ನಲ್ಲಿದ್ದಳು. ಯಾವ ಮೇಕಪ್ ಇರಲಿಲ್ಲ. ಅನಾರೋಗ್ಯದಲ್ಲಿದ್ದರೂ ಆಕೆಯ ಬ್ಯೂಟಿ ತುಸು ಕುಂದಿರಲಿಲ್ಲ. ಈಕೆಯೇ ನನ್ನ ಲೀಲಾ ಪಾತ್ರಧಾರಿ ಎಂದು ನಿರ್ಧರಿಸಿದೆ,’ ಎನ್ನುತ್ತಾರೆ. ಈ ಚಿತ್ರ ಬಿಡುಗಡೆಗೆ ಮೊದಲಿನಿಂದಲೇ ವಿವಾದ ಸೃಷ್ಟಿಸಿತ್ತು. ಚಿತ್ರದ ಹೆಸರಿನಿಂದಲೇ ಶುರುವಾದ ವಿವಾದ, ಅತಿ ದೀರ್ಘ ಲಿಪ್ ಲಾಕ್ ಕಿಸ್‌ನಿಂದಾಗಿ ತಾರಕಕ್ಕೇರಿತ್ತು.
ರಾಜಕಾರಣಿಗಳೇಕೆ ಡೆನಿಮ್ ಧರಿಸಬಾರದು?
ಗ್ಲಾಮರಸ್ ನಟಿ ಚಿತ್ರಾಂಗದ ಸಿಂಗ್, ನಮ್ಮ ರಾಜಕೀಯ ಧುರೀಣರು ಪುರಾತನ ಜುಬ್ಬಾ ಪೈಜಾಮಾ ಇತ್ಯಾದಿ ನೇತಾಗಿರಿಯ ಡ್ರೆಸ್ ತ್ಯಜಿಸಿ ಡೆನಿಮ್ ಜೀನ್ಸ್ ಟೀ ಶರ್ಟ್ ಏಕೆ ಧರಿಸಬಾರದು ಎನ್ನುತ್ತಾಳೆ. ಅದರಲ್ಲೂ ಯುವ ರಾಜಕಾರಣಿಗಳು ಕ್ಯಾಶುಯಲ್ಸ್ ನಲ್ಲಿ ಹೆಚ್ಚು ಸ್ಟೈಲಿಶ್ ಎನಿಸುತ್ತಾರೆ. 37ರ ಹರೆಯದ ಚಿತ್ರಾಂಗದಾ ಪ್ರಕಾರ, ಕೇಂದ್ರೀಯ ಮಂತ್ರಿ ಸಚಿನ್ ಪೈಲಟ್ ಹಾಗೂ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದಲ್ಲಾ ಎಲ್ಲರಿಗಿಂತ ಸ್ಟೈಲಿಶ್ ಅಂತೆ.
ರಿಯಲ್ ಲೈಫ್ ಹಿಟ್ ಆದರೆ ರೀಲ್ ಲೈಫ್ ಲೈಫ್ ಠುಸ್
ಕರೀನಾ ಸೈಫ್ ಜೋಡಿಯ ಪ್ರತಿಯೊಂದು ಚಲನವಲನವನ್ನೂ ಜನ ಗಮನಿಸುತ್ತಿರುತ್ತಾರೆ. ಅವರ ಮಾತುಗಳು ಮೀಡಿಯಾದ ಹೈಲೈಟ್ ಆಗುತ್ತವೆ. ಇಷ್ಟೆಲ್ಲ ಆದರೂ ಜನ ಈ ನಿಜ ಜೀವನದ ಜೋಡಿಯನ್ನು ತೆರೆಯ ಮೇಲೆ ಮಾತ್ರ ಎಂಜಾಯ್ ಮಾಡುವುದಿಲ್ಲ. ಹೀಗಾಗಿಯೇ ಈ ಜೋಡಿಯ `ಏಜೆಂಟ್ ವಿನೋದ್, ಟಶನ್, ಕುರ್ಬಾನ್ ಚಿತ್ರಗಳು ಸಾಲು ಸಾಲಾಗಿ ತೋಪಾದವು. ಜೊತೆಗೆ ತಿಮಾಂಶು ಧೂಲಿಯಾರ `ಬೇಗಂ ಸಮರೂ’ ಚಿತ್ರದಲ್ಲಿನ ಅತ್ಯಧಿಕ ಎಕ್ಸ್ ಪೋಸಿಂಗ್‌ನಿಂದಾಗಿ ಕರೀನಾ ಅದನ್ನು ಬಿಟ್ಟಳಂತೆ. ಆದರೆ ಕರೀನಾ ಹೇಳುವುದೇ ಬೇರೆ. ಇದರ ಸೆಕ್ಸೀ ಸೀನ್ಸ್ ನಿಂದ ನಾನೇನೂ ವಿಚಲಿತಳಾಗಿಲ್ಲ, ಆದರೆ ಚಿತ್ರದ ಕಥೆ ನನಗೆ ಒಗ್ಗಲಿಲ್ಲ, ಹೀಗಾಗಿ ಕೈಬಿಟ್ಟೆ ಎನ್ನುತ್ತಾಳೆ. ಹಾಗೆಯೇ ಬಾಲಿವುಡ್‌ನ ಹಳೆಯ ಖಾನ್‌ಗಳಾದ ಆಮೀರ್, ಶಾರೂಖ್, ಸಲ್ಮಾನ್, ಸೈಫ್‌ರನ್ನು ಬಿಟ್ಟು ಹೊಸ ಇಮ್ರಾನ್ ಖಾನ್‌ರಂಥವರ ಜೊತೆ ಮಾತ್ರ ನಟಿಸುತ್ತೇನೆ ಎಂದು ಷರತ್ತು ಒಡ್ಡುತ್ತಾಳೆ.
ದುಷ್ಮನ್ಗೆ ಬೈಬೈ ದೋಸ್ತಿಗೆ ಸಲಾಂ
ಶೋಲೆ, ಡಾನ್, ದೀವಾರ್‌ನಂಥ ಸೂಪರ್ ಡೂಪರ್ ಬ್ಲಾಕ್ ಬಸ್ಟರ್ ಚಿತ್ರಗಳಿಗೆ `ಏ ಹಾಥ್ ಮುಝೇ ದೇದೇ ಠಾಕೂರ್, ಅಬ್ ತೇರಾ ಕ್ಯಾ ಹೋಗಾ ಕಾಲಿಯಾ, ಕಿತ್ನೆ ಆದ್ಮಿ ಥೆ….’ ಮುಂತಾದ ಮರೆಯಲಾಗದ ಡೈಲಾಗ್ಸ್ ನ್ನು ತಮ್ಮ ಲೇಖನಿಯಿಂದ ರಚಿಸಿದ ವಿಖ್ಯಾತ ಸಂಭಾಷಣೆಕಾರ ಜೋಡಿ ಸಲೀಂ ಜಾವೇದ್‌ರದು. 15 ವರ್ಷಗಳ ಕಾಲ ಜೊತೆ ಜೊತೆಯಲ್ಲಿ ದುಡಿದ ಈ ಜೋಡಿ ಭಿನ್ನಾಭಿಪ್ರಾಯಗಳಿಂದ ದೂರವಾಗಿತ್ತು. `ಮಿಸ್ಟರ್ ಇಂಡಿಯಾ’ ಈ ಜೋಡಿಯ ಕೊನೆಯ ಚಿತ್ರವಾಗಿತ್ತು. ಅಂತೂ 26 ವರ್ಷಗಳ ಸುದೀರ್ಘ ಅಗಲಿಕೆಯ ನಂತರ `ಝಂಝೀರ್’ನ ರೀಮೇಕ್ ಕಾರಣ ಈ ಜೋಡಿ ಒಂದಾಗಿದ್ದು, ಪ್ರೇಕ್ಷಕರ ಭಾಗ್ಯವೆಂದೇ ಹೇಳಬೇಕು.
ಕಿಂಗ್ ಖಾನ್ ಕಲಿಯಲಾಗದ ಭಾಷೆ
ಕೋಲ್ಕತಾದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನ ಉದ್ಘಾಟನೆಯ ಸಮಾರಂಭದಲ್ಲಿ ಜಯಾ, ಅಮಿತಾಭ್‌ರ ಜೊತೆ ಬಂದಿದ್ದ ಶಾರೂಖ್ ಖಾನ್ ಬಂಗಾಳಿ ಭಾಷೆಯಲ್ಲಿ ಭಾಷಣ ಮಾಡಲಾಗದ ಕಾರಣ, ಜಯಾರಿಂದ ಟೀಕೆಗೆ ಒಳಗಾದರು. ಅಮಿತಾಭ್, ಕಮಲ್ ಹಾಸನ್ ಬೇರೆ ಭಾಷೆಗಳಲ್ಲಿ ಪಳಗಿ ಮಾತನಾಡಿರುವಾಗ ಶಾರೂಖ್‌ದೇಕೋ ಅತಿಯಾಯಿತು ಎಂದರು. ಅವರ ಮತ್ತು ದ. ಬಂಗಾಳದ ಪ್ರಜೆಗಳೆಲ್ಲರ ಕ್ಷಮೆ ಕೋರಿದ ಶಾರೂಖ್, 3 ವರ್ಷಗಳಿಂದ ಕೋಲ್ಕತಾಗೆ ಈ ಸಮಾರಂಭಕ್ಕಾಗಿ ಬರುತ್ತಿದ್ದರೂ, ಇಲ್ಲಿಯವರೆಗೂ ತಾನು ಬಂಗಾಳಿ ಕಲಿಯಲಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಮುಂದಿನ ವರ್ಷ ಬರುವಷ್ಟರಲ್ಲಿ ಜಯಾರನ್ನೇ ಗುರುವಾಗಿ ಸ್ವೀಕರಿಸಿ ಬಂಗಾಳಿ ಭಾಷೆ ಕಲಿತು ಅದರಲ್ಲಿ ಭಾಷಣ ಮಾಡುತ್ತೇನೆ ಎಂದು ಪ್ರಮಾಣ ಮಾಡಿದರು.
ಮಲ್ಲಿಕಾಳ ಸ್ವಯಂವರ
ಅಂತೂ ಮಲ್ಲಿಕಾ ಶೆರಾವತ್‌ಳ ಸ್ವಯಂವರ ಮುಗಿದು ಅವಳ ಹೃದಯವಲ್ಲಭ ಸಿಕ್ಕಿದ್ದಾನೆ! `ದಿ ಬ್ಯಾಚರ್ಲೆಟ್ ಇಂಡಿಯಾ ಮೇರೆ ಖಯಾಲೋಂಕಿ ಮಲ್ಲಿಕಾ ಶೋ’ ಮೂಲಕ ಉ.ಪ್ರ. ರಾಜ್ಯದ ಧರ್ಮಶಾಲಾ ಜಿಲ್ಲೆಯ ವಿಜಯ್ ಸಿಂಗ್‌ನನ್ನು ತನ್ನ ಸಂಗಾತಿಯಾಗಿ ಆರಿಸಿಕೊಂಡಿದ್ದಾಳೆ. ಮಲ್ಲಿಕಾಳಿಗಿಂತ 10 ವರ್ಷ ಕಿರಿಯನಾದ ವಿಜಯ್ ಒಬ್ಬ ಖ್ಯಾತ ಮಾಡೆಲ್. ಈ ಶೋನ ಫೈನಲ್ ಹಂತ ತಲುಪಲು ವಿಜಯ್ ಎಷ್ಟೋ ಪಾಡುಪಟ್ಟಿದ್ದಾನೆ. ಕೊನೆಯ ಹಂತದ ಡೇಟಿಂಗ್ ರೌಂಡ್‌ನ ರೊಮ್ಯಾಂಟಿಕ್ ಮೂಡ್‌ನಲ್ಲಿ ಆತನಿಂದ ತುಂಬಾ ಇಂಪ್ರೆಸ್ ಆದ ಮಲ್ಲಿಕಾ ಸ್ವೀಟ್ ಕಿಸ್ ಮೂಲಕ, ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾಳೆ.
ಮರಳಿ ಬಂದ ಎಮಿ
ಸೋನಿ ಟಿ.ವಿ.ಯ ಖ್ಯಾತ ಧಾರಾವಾಹಿ `ಅದಾಲತ್’ಗೆ ಬಬ್ಲಿ ಗರ್ಲ್ ಎಮಿ ತ್ರಿವೇದಿ ವಾಪಸ್ ಆಗಿದ್ದಾಳೆ. ಕೆಲವು ಕಾಲ ಎಮಿ ಕಿರುಪರದೆಯಿಂದ ಮಾಯವಾಗಿದ್ದಳು. ನೀರಜ್ ಸಂಘಾಯಿಯನ್ನು ವರಿಸಿದ 3 ವರ್ಷಗಳ ಬಳಿಕ, ಮಗುವಿನ ತಾಯಿಯಾದ ಈಕೆ, ಎಂದಿನಂತೆ `ಅದಾಲತ್’ ಧಾರಾವಾಹಿಯಲ್ಲಿ ಗಡಸು ನಟ ಕೆ.ಡಿ.ಗೆ (ರೋನಿತ್ ರಾಯ್) ಎದುರಾಗಿ ತನ್ನ ಪಬ್ಲಿಕ್ ಪ್ರಾಸಿಕ್ಯೂಟರ್ ಪಾತ್ರ ಮುಂದುವರಿಸಲಿದ್ದಾಳೆ.
ಬಿಗ್ ಬಾಸ್‌ನಲ್ಲಿ ಮಿಂಚಿದ ಬೇ ವಾಚ್ ಗರ್ಲ್
ಎಂದಿನಂತೆ ಈ ಬಾರಿಯೂ `ಬಿಗ್ ಬಾಸ್’ ಶೋ ಕೊನೆಯ ಹಂತ ತಲುಪುತ್ತಿದ್ದಂತೆ. ಅದನ್ನು ಇನ್ನಷ್ಟು ಸ್ಪೈಸಿಗೊಳಿಸಲು, ಇದರ ಆಯೋಜಕರು ಒಬ್ಬ ಖ್ಯಾತ ವಿದೇಶೀ ನಟಿ ಕ್ಯಾರಮಾನ್ ಎಲೆಕ್ಟ್ರಾಳನ್ನು ಅತಿಥಿಯಾಗಿ ಕರೆಸಿದ್ದರು. ಕಳೆದ ಬಾರಿ ಪಮೇಲಾ ಆ್ಯಂಡ ವರ್ಸ್‌ನ್, ಗಾಯಕಿ ಸೋಫಿಯಾ ಹಯತ್, ಪಾಕಿಸ್ತಾನಿ ನ್ಯೂಸ್‌ರೀಡರ್ ಬೇಗಂ ಮುಂತಾದವರು ಇಲ್ಲಿ ಮಿಂಚಿದ್ದನ್ನು ಸ್ಮರಿಸಬಹುದು. 90ರ ದಶಕದಲ್ಲಿ ಪ್ಲೇಬಾಯ್ ಮಾಡೆಲ್ ಆಗಿ ತನ್ನ ಕೆರಿಯರ್ ಆರಂಭಿಸಿದ ಎಲೆಕ್ಟ್ರಾಳ ನಿಜ ನಾಮಧೇಯ ಟಾರಾ ಲೀ ಪ್ಯಾಟ್ರಿಕ್ ಅಂತೆ. ಡೇಲಿ ಸೋಪ್ `ಬೇ ವಾಚ್’ ಅಲ್ಲದೆ, ಈಕೆ ಹಲವಾರು ಹಾಲಿವುಡ್ ಚಿತ್ರಗಳಲ್ಲೂ ಗ್ಲಾಮರಸ್ ಪಾತ್ರ ವಹಿಸಿದ್ದಾಳೆ.
ಕಿರುಪರದೆಗೆ ಪ್ರೀತಿಕಾ ರಾವ್
ಅಕ್ಕನ ಪಡಿನೆಳಲಿನಂತೆ ತಂಗಿ ಟಿ.ವಿ.ಗೆ ಬರುತ್ತಿದ್ದಾಳೆ. ಹೌದು, ಅಮೃತಾ ರಾವ್ ಳ ತಂಗಿ ಪ್ರೀತಿಕಾ ರಾವ್ ಅಕ್ಕನ ತರಹವೇ ಆ್ಯಕ್ಟಿಂಗ್‌ನಲ್ಲಿ ಸಕ್ಸಸ್ ಆಗಬೇಕೆಂದು ಕಿರುಪರದೆಯಿಂದ ಕೆರಿಯರ್ ಆರಂಭಿಸಿದ್ದಾಳೆ. ಅನಿಲ್ ಕಪೂರ್‌ರ ಟಿ.ವಿ. ಶೋ `24’ಗೆ ಆಯ್ಕೆಯಾಗಿದ್ದಾಳೆ. ಮುಂದೆ ಈಕೆ ಅಕ್ಕನ ಯಶಸ್ವೀ ಚಿತ್ರಗಳಾದ `ಮೈ ಹೂಂ ನಾ, ವಿವಾಹ್, ಸತ್ಯಾಗ್ರಹ್’ ಮುಂತಾದವಕ್ಕೆ ಟಾಂಗ್ ಕೊಟ್ಟು ಹೇಗೆ ಮೇಲೇರಲಿದ್ದಾಳೆಂದು ಕಾಲವೇ ನಿರ್ಧರಿಸಬೇಕು.
ಅಪ್ಪಟ ಲವ್ ಸ್ಟೋರಿ `ರಂಗ್ ರಸಿಯಾ’
ಈಗಾಗಲೇ ಕಲರ್ಸ್ ಟಿ.ವಿ.ಯಲ್ಲಿ ಆರಂಭಗೊಂಡಿದೆ ಹೊಸ ಧಾರಾವಾಹಿ `ರಂಗ್ ರಸಿಯಾ.’ ವಿಲಿಯಂ ಶೇಕ್ಸ್ ಪಿಯರ್‌ನ `ಒಥೆವೋ’ ನಾಟಕ ಆಧಾರಿತ ಈ ಧಾರಾವಾಹಿಯನ್ನು ಮುಖ್ಯವಾಗಿ ರಾಜಾಸ್ಥಾನದ ಸ್ವಚ್ಛ ಪರಿಸರದಲ್ಲಿ ಚಿತ್ರಿಸಲಾಗಿದೆಯಂತೆ. ಸಾನ್ಯಾ ಇರಾನಿ ಆಶಿಷ್ ಶರ್ಮ ಮುಖ್ಯ ಪಾತ್ರಗಳಲ್ಲಿರುವ ಇದರಲ್ಲಿ , ಸಾನ್ಯಾ ಪಾರ್ವತಿಯ ರೋಲ್ ನಿಭಾಯಿಸುತ್ತಿದ್ದಾಳೆ. ಪ್ರೇಮೀ ಬಾಳಿನ ಬೆಳಕು ಎಂದು ನಂಬುತ್ತಾಳೆ. ಇವಳ ಪ್ರಿಯಕರ ಆರ್ಮಿ ಆಫೀಸರ್ ರುದ್ರನಾಗಿದ್ದಾನೆ ಆಶಿಷ್, ಆಳವಾದ ಪ್ರೀತಿ ಪ್ರೇಮದಲ್ಲಿ ಇವನಿಗೆ ನಂಬಿಕೆ ಇಲ್ಲವಂತೆ. ಇಂಥ ವೈರುಧ್ಯಗಳ ಈ ಕಥಾಹಂದರದ ಕೊನೆ ಏನು ಎಂಬುದೇ ಕುತೂಹಲಕರ ಅಂಶ.