ನಮ್ರತಾ ಜೋಶೀಪುರಾ ಫ್ಯಾಷನ್ ಜಗತ್ತಿನ ಪ್ರಸಿದ್ಧ ಹೆಸರು. 1996ರಲ್ಲಿ ನಿಫ್ಟ್ ನಿಂದ ಪದವಿ ಪಡೆದ ನಮ್ರತಾ ಆರಂಭದಲ್ಲಿ ಫ್ಯಾಷನ್ ಡಿಸೈನರ್ ಸುನೀತಾ ವರ್ಮರೊಂದಿಗೆ ಕೆಲಸ ಮಾಡಿದರು. ನಂತರ ಅಮೆರಿಕಾಗೆ ಹೋಗಿ 5 ವರ್ಷಗಳ ನಂತರ ಇಂಡಿಯಾಗೆ ಬಂದರು.
ಫ್ಯಾಷನ್ ಇಂಡಸ್ಟ್ರಿಯಲ್ಲಿ ನಮ್ರತಾರನ್ನು ಉಡುಪುಗಳ ರಾಣಿ ಎಂದೂ ತಿಳಿಯಲಾಗುತ್ತದೆ. ಏಕೆಂದರೆ ಇವರು ಡಿಸೈನ್ ಮಾಡಿದ ಡ್ರೆಸ್‌ಗಳಲ್ಲಿ ವಿಶ್ವ ಸೌಂದರ್ಯದ ಹೊಳಪು ಕಂಡುಬರುತ್ತದೆ. ಇವರ ಡ್ರೆಸ್‌ಗಳ ಡಿಸೈನ್‌ನಲ್ಲಿ ವಿಶೇಷ ರೀತಿ ಬಣ್ಣಗಳ ವೈವಿಧ್ಯತೆಯೊಂದಿಗೆ ಅನೇಕ ರೀತಿಯ ವಿಶೇಷತೆಗಳಿದ್ದವು ವಯಸ್ಸು ಮತ್ತು ಕ್ಷೇತ್ರದ ಪ್ರಕಾರವೇ ಎರಕ ಹೊಯ್ಯವಾಗುತ್ತದೆ.
1999ರಲ್ಲಿ ನಮ್ರತಾ ಭಾರತವನ್ನು ಪ್ರತಿನಿಧಿಸಿದರು ಮತ್ತು ಏಷಿಯಾದ ಯುವ ಡಿಸೈನರ್ ಶೋ ಹಾಂಕಾಂಗ್ ಫ್ಯಾಷನ್ ವೀಕ್‌ನಲ್ಲಿ ಎರಡನೆಯ ಬಹುಮಾನ ಪಡೆದರು.
ಡ್ರೆಸ್ ಡಿಸೈನಿಂಗ್ ಲೋಕದಲ್ಲಿ ಹೆಸರು ಮಾಡಿದ ನಮ್ರತಾ ಲ್ಯಾಕ್ಮೆ ಫ್ಯಾಷನ್ ವೀಕ್ ಸಮರ್/ರೆಸಾರ್ಟ್ ಫಿನಾಲೆಗೂ ಫ್ಯಾಷನ್ ಡಿಸೈನರ್ ಆಗಿದ್ದಾರೆ.
ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಅವರೊಡನೆ ಮಾತುಕಥೆ ನಡೆಸಿದಾಗ ಕೆಲವು ಮಹತ್ವಪೂರ್ಣ ಅಂಶಗಳು ತಿಳಿದ :
ಡ್ರೆಸ್ ಡಿಸೈನರ್ ಆಗುವ ಆಸೆ ಹೇಗೆ ಬಂತು?
ನಾನು ದೆಹಲಿ ಯೂನಿವರ್ಸಿಟಿಯಲ್ಲಿ ಬಿ.ಕಾಂ. ಮಾಡುತ್ತಿದ್ದಾಗ ಏನಾದರೂ ವಿಭಿನ್ನವಾಗಿ ಮಾಡುವ ವಿಚಾರ ಬಂದಿತು. ನಾನು ಅಮ್ಮನಿಗೆ ಅದರ ಬಗ್ಗೆ ಹೇಳಿದಾಗ ಅವರು ನನ್ನನ್ನು ನಿಫ್ಟ್ ಗೆ ಸೇರಿಸಿದರು. ಆಗ ದೆಹಲಿಯಲ್ಲಿ ನಿಫ್ಟ್ ಆರಂಭವಾಗಿ ಕೇವಲ 2 ವರ್ಷ ಆಗಿತ್ತು. ನಾನು 1994-96ರಲ್ಲಿ ನನ್ನ ಕೋರ್ಸ್ ಪೂರೈಸಿದೆ.
ಈಗಿನ ಯುವಜನತೆಗೆ ಏನು ಇಷ್ಟ? ಅವರು ವೆಸ್ಟರ್ನ್ ಡ್ರೆಸ್‌ನತ್ತ ಓಡುತ್ತಿದ್ದಾರೆ. ಅವರಿಗೆ ಇಂಡಿಯನ್ ಡ್ರೆಸ್‌ಗಳಲ್ಲಿ ಏನು ಸಿಗುತ್ತಿಲ್ಲ?
ಇಂದಿನ ಯುವಜನತೆಗೆ ವೆಸ್ಟರ್ನ್ ಡ್ರೆಸ್‌ಗಳು ಏಕೆ ಇಷ್ಟವಾಗುತ್ತವೆಂದರೆ ಧಾವಂತದ ಜೀವನದಲ್ಲಿ ವೆಸ್ಟರ್ನ್ ಡ್ರೆಸ್‌ಗಳು ಕಂಫರ್ಟಬಲ್ ಆಗಿರುತ್ತವೆ. ಕಾರ್ಪೋರೇಟ್ ಸೆಕ್ಟರ್‌ನಲ್ಲಿ ಕೆಲಸ ಮಾಡುವ ಮಹಿಳೆಯರು ಸೀರೆ ಉಡಲು ಆಗುವುದಿಲ್ಲ. ಯುವತಿಯರಿಗೂ ಕಾಲೇಜಿಗೆ ಹೋಗಲು ಕಂಫರ್ಟಬಲ್ ಡ್ರೆಸ್ ಆಗತ್ಯ.
ಹೆಚ್ಚಿನ ವಯಸ್ಸಿನ ಮಹಿಳೆಯರು ಫ್ಯಾಷನ್ ದೃಷ್ಟಿಯಲ್ಲಿ ಏನು ಬದಲಾವಣೆ ಕಾಣುತ್ತಾರೆ?
40-50 ವಯಸ್ಸಿನ ಮಹಿಳೆಯರು ಇಂದು ಬಹಳಷ್ಟು ಮಾಡರ್ನ್ ಆಗಿದ್ದಾರೆ. ಅವರು ತಮ್ಮ ಯೌವನದ ದಿನಗಳಲ್ಲಿ ಧರಿಸಲಾಗದಿದ್ದ ಉಡುಪುಗಳನ್ನು ಈ ವಯಸ್ಸಿನಲ್ಲಿ ಧರಿಸುತ್ತಿದ್ದಾರೆ. ಕೋಲ್ಕತಾ, ಲೂಧಿಯಾನಾದಲ್ಲಿ ಹೆಚ್ಚಿನ ವಯಸ್ಸಿನ ಮಹಿಳೆಯರು ಲಾಂಗ್ ಸ್ಕರ್ಟ್ ಮತ್ತು ಟ್ಯೂನಿಕ್ ಧರಿಸುತ್ತಿದ್ದಾರೆ. ಏಕೆಂದರೆ ಈಗ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಲ್ಲೂ ಹೆಚ್ಚು ಜಾಗರೂಕತೆ ಇದೆ. ವಿಶೇಷವಾಗಿ ಫ್ಯಾಷನ್ ವಿಷಯದಲ್ಲಂತೂ ಎಲ್ಲರೂ ಮುಂದಿದ್ದಾರೆ.
ಫಿಲ್ಮೀ ಫ್ಯಾಷನ್ ಜನಸಾಮಾನ್ಯರ ಮೇಲೆ ಏನು ಪ್ರಭಾವ ಬೀರುತ್ತದೆ? ಅವರು ಇದನ್ನು ಎಷ್ಟು ಅನುಸರಿಸುತ್ತಾರೆ?
ಫಿಲ್ಮೀ ಫ್ಯಾಷನ್ ಜನಸಾಮಾನ್ಯರ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಒಮ್ಮೆ ನನ್ನ ಬಳಿ ಒಬ್ಬ ಹುಡುಗಿ ಬಂದಳು. ತನ್ನ ತಂದೆ ತಾಯಿಯ ವೆಡ್ಡಿಂಗ್ ಆ್ಯನಿವರ್ಸರಿಗಾಗಿ ತಾನು ಹೊಸ ಡ್ರೆಸ್ ಧರಿಸಬೇಕು. ಅದು `ಸ್ಟೂಡೆಂಟ್ ಆಫ್ ದಿ ಇಯರ್’ ಫಿಲ್ಮ್ ನಲ್ಲಿ ಆಲಿಯಾ ಭಟ್ ಧರಿಸಿರುವಂಥದ್ದೇ ಆಗಿರಬೇಕು ಎಂದಳು. ಅವಳು ತನ್ನೊಂದಿಗೆ ಆ ವೀಡಿಯೋ ಕೂಡ ತಂದು ತೋರಿಸಿ ನನಗೆ ಸೇಮ್ ಟು ಸೇಮ್ ಇದೇ ಡ್ರೆಸ್ ಬೇಕು ಎಂದಳು.
ಫ್ಯಾಷನ್ ಜಗತ್ತಿನಲ್ಲಿ ಕಾಂಪಿಟೀಶನ್ ಎಷ್ಟಿದೆ? ಯುವಜನತೆಯಲ್ಲಿ ಫ್ಯಾಷನ್ ಟ್ರೆಂಡ್ ಬಗ್ಗೆ ಎಷ್ಟು ಜಾಗರೂಕತೆ ಇದೆ?
ಫ್ಯಾಷನ್ ಜಗತ್ತಿನಲ್ಲಿ ಬಹಳ ಕಾಂಫಿಟಿಶನ್ ಇದೆ. ನಮ್ಮ ಯುವಜನತೆ ಬಹಳ ಜಾಗರೂಕರಾಗಿದ್ದಾರೆ. ಇಂದು `ರೆಡ್ ಕಾರ್ಪೆಟ್‌ಈವೆಂಟ್’ ನಡೆದರೆ ಇಡೀ ವಿಶ್ವಕ್ಕೆ ಗೊತ್ತಾಗುತ್ತದೆ. ಏಕೆಂದರೆ ಇಂಟರ್‌ನೆಟ್ ಮೂಲಕ ಯಾವ ಫ್ಯಾಷನ್ ಟ್ರೆಂಡ್ ಇದೆ, ಯಾವುದು ಔಟ್ ಡೇಟೆಡ್ ಆಗಿದೆ ಎಂದು ಕೂಡಲೇ ತಿಳಿಯುತ್ತದೆ.
ವೆಸ್ಟರ್ನ್ ಡ್ರೆಸ್‌ಗಳನ್ನು ನಮ್ಮ ಫ್ಯಾಷನ್‌ನಲ್ಲಿ ಸೇರಿಸಿಕೊಂಡಂತೆ ಬೇರೆ ದೇಶಗಳಲ್ಲಿ ನಮ್ಮ ಭಾರತೀಯ ಉಡುಗೆಗಳನ್ನು ಧರಿಸುತ್ತಾರಾ?
ಹೌದು. ನಾವು ವೆಸ್ಟರ್ನ್ ಡ್ರೆಸ್‌ಗಳನ್ನು ನಮ್ಮ ಫ್ಯಾಷನ್‌ನಲ್ಲಿ ಸೇರಿದಂತೆ ಇಂಡಿಯನ್ ಡ್ರೆಸ್‌ಗಳನ್ನು ಸೇರಿಸಿಕೊಳ್ಳುತ್ತಾರೆ. ಇತ್ತೀಚೆಗೆ ಅಮೆರಿಕಾದ ಒಂದು ಫ್ಯಾಷನ್ ಶೋ `ಮಾರ್ಕೆಸಾ’ನಲ್ಲಿ ಫ್ಯಾಷನ್ ಡಿಸೈನರ್ ವೀರಾ ಸ್ಯಾಂಗ್ ಡಿಸೈನ್ ಮಾಡಿದ ಉಡುಪುಗಳು ಸೀರೆ, ಗೌನ್, ಟ್ಯೂನಿಕ್ ಇತ್ಯಾದಿಗಳು ಸೊಗಸಾಗಿದ್ದವು.
ರಾಂಪ್ ಶೋನಲ್ಲಿ ಮಾಡೆಲ್ ಧರಿಸುವ ಡ್ರೆಸ್‌ಗಳನ್ನು ಸಾಮಾನ್ಯ ಜೀವನದಲ್ಲಿ ಯಾರೂ ಧರಿಸುವುದಿಲ್ಲ. ಅಂತಹ ಡ್ರೆಸ್‌ಗಳ ಅರ್ಥವೇನು?
ಆ ಡ್ರೆಸ್‌ಗಳನ್ನು ಪ್ರದರ್ಶನದ ಒಂದು ರೂಪದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಆ ಡ್ರೆಸ್‌ಗಳನ್ನು ಧರಿಸಲಾಗುವುದಿಲ್ಲ ಎಂದೇನಿಲ್ಲ. ಬಾಲಿವುಡ್ ಸ್ಟಾರ್‌ಗಳು ಅವನ್ನು ಧರಿಸುತ್ತಾರೆ. ಸಾಮಾನ್ಯರು ಅವನ್ನು ಧರಿಸುವುದಿಲ್ಲ.
ಫ್ಯಾಷನ್‌ಗೆ ತಕ್ಕಂತೆ ಅಪ್‌ಡೇಟ್ ಆಗಿರುವುದು ಎಷ್ಟು ಮುಖ್ಯ ಅನಿಸುತ್ತದೆ?
ಫ್ಯಾಷನ್‌ನೊಂದಿಗೆ ಅಪ್‌ಡೇಟ್ ಆಗಿರುವುದು ಒಳ್ಳೆಯದು. ಫ್ಯಾಷನ್ ಅಷ್ಟೇ ಅಲ್ಲ. ಕಾಲಕಾಲಕ್ಕೆ ಬದಲಾಗುವ ಇತರ ಸಂಗತಿಗಳೊಂದಿಗೂ ಹೊಂದಾಣಿಕೆ ಮಾಡಿಕೊಂಡು ನಡೆದಾಗಲೇ ನೀವು ಸ್ಮಾರ್ಟ್ ವುಮನ್ ಆಗಬಹುದು.
ಮಹಿಳೆಯರಿಗೆ ಏನಾದರೂ ಸಂದೇಶ ಕೊಡುತ್ತೀರಾ?
ಆಧುನಿಕ ಯುಗದಲ್ಲಿ ಮಹಿಳೆಯರ ಸ್ಥಿತಿಗತಿಯಲ್ಲಿ ಸುಧಾರಣೆಯಾಗಿದೆ. ಆದರೂ ಅವರಿಗೆ ಇನ್ನೂ ಅನೇಕ ಅಡೆತಡೆಗಳಿವೆ. ತಮ್ಮನ್ನು ಸಶಕ್ತಗೊಳಿಸಿಕೊಳ್ಳುವುದು ಮತ್ತು ಉತ್ತಮ ಜೀವನ ಸಾಗಿಸಲು ಪ್ರತಿ ಮಹಿಳೆಯೂ ಎಲ್ಲಕ್ಕೂ ಮೊದಲು ಸ್ವಾವಲಂಬಿಗಳಾಗಬೇಕು.
– ಪ್ರಭಾ ಯಾದವ್