ದೂರು ನೀಡುವುದು ಮೌಲಿಕ ಹಕ್ಕು

ಮನೆಯ ಸುತ್ತಮುತ್ತಲಿನ ವಾತಾವರಣ ವಾಣಿಜ್ಯೀಕರಣದಿಂದಾಗಿ ದಿನೇದಿನೇ ಕೆಡುತ್ತಿದ್ದರೆ, ಮಹಿಳೆಯರು ಹಾಗೂ ಕುಟುಂಬದವರಿಗೆ ಏನು ಹಕ್ಕು ಇರುತ್ತದೆ ಹಾಗೂ ಪೊಲೀಸ್‌ನವರ ಜವಾಬ್ದಾರಿಗಳೇನು ಎಂಬುದು, ದೆಹಲಿಯ ಸಮೀಪದ ಖಿಡಕೀ ಗ್ರಾಮದ ಆಫ್ರಿಕಾದ ಯುವಜನತೆ ಹಾಗೂ ಆಮ್ ಆದ್ಮಿ ಪಾರ್ಟಿಯ ಹೊಸ ಮಂತ್ರಿ ಸೋಮನಾಥ್‌ ಭಾರತಿ ಪೊಲೀಸರೊಂದಿಗೆ ನಡೆದುಕೊಂಡ ರೀತಿಯಿಂದ ಏನೂ ಸ್ಪಷ್ಟವಾಗುವುದಿಲ್ಲ. ಅವರು ಅಲ್ಲಿನ ಸ್ಥಳೀಕರ ದೂರು ಕೇಳಲಿಕ್ಕಾಗಿ ಖಿಡಕೀ ಕ್ಷೇತ್ರಕ್ಕೆ ಹೋದರು. ಆದರೆ ಪೊಲೀಸರು, ದೆಹಲಿ ರಾಜ್ಯ ಸರ್ಕಾರದ ನಿಯಂತ್ರಣದಲ್ಲಿಲ್ಲದ ಕಾರಣ, ಏನಾದರೂ ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡಿದರು.

ಮುಂದೆ ಇದೇ ವಿಷಯ ದೊಡ್ಡದಾಯಿತು. ಅವರು ಪೊಲೀಸರ ವಿರುದ್ಧ ವಿಚಾರಣೆ ನಡೆಯಲೇಬೇಕೆಂದು ಪಟ್ಟುಹಿಡಿದರು. ಆಗ ಮುಖ್ಯಮಂತ್ರಿ ಅರವಿಂಜ್‌ ಕೇಜ್ರಿವಾಲ್ ಸಹ ಅದೇ ಬೇಡಿಕೆಯನ್ನು ಮುಂದಿಟ್ಟರು. ಆದರೆ ಕೇಂದ್ರೀಯ ಗೃಹಮಂತ್ರಿ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಆಗ ಕೇಜ್ರಿವಾಲ್ ಕೊರೆಯುವ ರಾತ್ರಿಯ ಥಂಡಿಯಲ್ಲಿ ಸತತ 2 ದಿನ ಧರಣಿ ಕೂರಬೇಕಾಯಿತು. ಅರೆ ಮನಸ್ಸಿನಿಂದ ಗೃಹಮಂತ್ರಿ ಕೆಲವು ಮಾತುಗಳನ್ನು ಒಪ್ಪಿದರು. ಆದರೆ, ತಮ್ಮ ಪ್ರದೇಶಕ್ಕೆ ಬೇಜವಾಬ್ದಾರಿಯ ಜನ ನುಗ್ಗಿದಾಗ, ಅಂಥವರನ್ನು ಎದುರಿಸಲು ಕುಟುಂಬದ ಮಂದಿಗೆ ಯಾವ ಹಕ್ಕಿದೆ ಎಂಬುದು ಒಂದಿಷ್ಟೂ ಸ್ಪಷ್ಟವಾಗಲಿಲ್ಲ.

ಮನೆ ಎಂಬುದು ಸುರಕ್ಷಾ ಕವಚ ಇದ್ದಂತೆ, ಜೊತೆಗೆ ಸುತ್ತಮುತ್ತ ವಾಸಿಸುವ ಜನ ಸಹ ತಮ್ಮ ಸುರಕ್ಷತೆಗೆ ಇರುತ್ತಾರೆ ಎಂಬ ಭಾವನೆ ಇರುತ್ತದೆ. ಹಾಗಿದ್ದರೇನೇ ನಗರ ಜೀವನ ಕ್ಷೇಮಕರ ಎನಿಸುವುದು. ಇಲ್ಲದಿದ್ದರೆ ಕಾಡುವಾಸಿಗಳಂತೆ ಬೇರೆ ಬೇರೆ ಇರಬಹುದಿತ್ತಲ್ಲ? ಆದರೆ ನೆರೆಹೊರೆಯ ಸಂಬಂಧ ಕೆಟ್ಟರೆ, ಮನೆಯಿಂದ ಹೊರಗೆ ಹೊರಡುವುದೇ ಕಷ್ಟಕರವಾದರೆ, ಆಗ ದೂರು ನೀಡುವಿಕೆ ಅನಿವಾರ್ಯವಾಗುತ್ತದೆ.

ನಗರದ ಮುಕ್ತ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಮೊದಲಿನಿಂದಲೇ ಅನುಮತಿ ಇದ್ದು, ಅದು ಕ್ರಮೇಣ ಹೆಚ್ಚಲಿ ಬಿಡಲಿ, ಅಲ್ಲಿನ ಸ್ಥಳೀಕರಿಗೆ ಮಾತ್ರ ಅದರ ವಿರುದ್ಧ ದೂರು ನೀಡುವ ಹಕ್ಕೇ ಇಲ್ಲ. ಆದರೆ ಮುಕ್ತ ಪ್ರದೇಶಗಳನ್ನು ವಾಣಿಜ್ಯ ಚಟುವಟಿಕೆಗಳಿಗಾಗಿ ಮನೆ ಮಾಲೀಕರ ಮರ್ಜಿ ಮೇರೆಗೆ ಸತತ ಬಿಟ್ಟುಬಿಟ್ಟರೆ, ಇದು ಖಂಡಿತಾ ತಪ್ಪಾದೀತು. ಮುಕ್ತ ಪ್ರದೇಶಗಳಲ್ಲಿ ಮನೆ, ಗಲ್ಲಿ, ಉದ್ಯಾನ ಇತ್ಯಾದಿ ಸುರಕ್ಷಿತ ಎನಿಸಿವೆ. ಅಲ್ಲಿ ಕಸ ಸಂಗ್ರಹಣೆಯೂ ಕಡಿಮೆ. ಹೀಗಾಗಿ ಅಪರಿಚಿತರು ನುಗ್ಗುವುದು ಕಡಿಮೆ. ಅಲ್ಲಿ ಸ್ಕೂಟರ್‌, ಕಾರುಗಳು ಹೆಚ್ಚಿದರೂ ಸಹ ಪರಸ್ಪರ ಸಹಕಾರ ಇರುತ್ತದೆ. ಆದರೆ ಇಂಥ ಪ್ರದೇಶಗಳಲ್ಲಿ ಅಂಗಡಿ, ಆಫೀಸ್‌, ಹೋಟೆಲ್, ಗೆಸ್ಟ್ ಹೌಸ್‌, ನರ್ಸಿಂಗ್‌ ಹೋಮ್ ಗಳು ಹೆಚ್ಚತೊಡಗಿದರೆ ಸುತ್ತಮುತ್ತ ವಾಸಿಸುವವರ ಕಷ್ಟ ತಪ್ಪಿದ್ದಲ್ಲ. ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಯ ಸಮಸ್ಯೆ ಒಂದೆಡೆಯಾದರೆ, ವಿನಾಕಾರಣ ಬಂದುಹೋಗುವ ಅಸಂಖ್ಯಾತ ಜನರು ಅವರ ವಾಹನಗಳ ಮಾಲಿನ್ಯ ಸಹಿಸಬೇಕಾದ ಕರ್ಮ ಉಂಟಾಗುತ್ತದೆ. ವಿದ್ಯುತ್‌ ತಂತಿಗಳು ಕಡಿಮೆ ಎನಿಸುತ್ತವೆ, ಜನರೇಟರ್‌ ತಂತಾನೇ ಹೆಚ್ಚುತ್ತದೆ. ಸುತ್ತಮುತ್ತಲ ಹಸಿರು ವಾತಾವರಣ ಮಂಗಮಾಯ! ರಸ್ತೆಗಳಲ್ಲಿ ಎಲ್ಲೆಲ್ಲೂ ಸಣ್ಣಪುಟ್ಟ ಅಂಗಡಿಗಳು ಏಳುತ್ತವೆ, ಪಾರ್ಕಿಂಗ್‌ ಸಮಸ್ಯೆ ಕೇಳುವುದೇ ಬೇಡ! ಖಿಡಕೀ ಗ್ರಾಮದಲ್ಲಿ ಆಗಿದ್ದೂ ಇದೇ ಸಮಸ್ಯೆ. ಅಲ್ಲಿನ ಮನೆ ಮಾಲೀಕರು ಸ್ಥಳೀಕರಿಗೆ ಬದಲಾಗಿ ಆಫ್ರಿಕಾ ಮೂಲದ ಮಂದಿಗೆ ದುಬಾರಿ ದರದಲ್ಲಿ ಬಾಡಿಗೆಗೆ ಮನೆ ನೀಡಲಾರಂಭಿಸಿದರು.

ಕಡಿಮೆ ಓದಿನ ಈ ಜನ ಸ್ಥಳೀಕರ ಕಣ್ಣುರಿಗೆ ಗುರಿಯಾದರು. ಅವರ ಮುಕ್ತ ಲೈಂಗಿಕ ವ್ಯವಹಾರಗಳನ್ನು ಸ್ಥಳೀಕರು ಸಹಿಸುವುದು ಅಸಾಧ್ಯವಾಯಿತು. ಅಲ್ಲಿನ ಸ್ಥಳೀಕರ ಪ್ರಕಾರ, ಈ ಕುರಿತಾಗಿ ಅವರು ಎಷ್ಟೇ ದೂರು ಕೊಟ್ಟರೂ ಪರಿಹಾರವಂತೂ ಶೂನ್ಯ!

ಏಕೆಂದರೆ ಅಲ್ಲಿನ ಪೊಲೀಸರಿಗೆ ಈ ಆಫ್ರಿಕನ್‌ ಮಂದಿಯಿಂದ ನಿತ್ಯ `ಗಿಂಬಳ’ ದಕ್ಕುತ್ತಿತ್ತು.

ಸೋಮನಾಥ್‌ ಭಾರತಿ ಅಗತ್ಯಕ್ಕಿಂತ ಹೆಚ್ಚು ಕೋಪಗೊಂಡು, ಸಮಸ್ಯೆ ಎದುರಿಸುವ ಬದಲು ಅದನ್ನು ಮತ್ತಷ್ಟು ಜಟಿಲಗೊಳಿಸಿದರು. ಮುಕ್ತ ಪ್ರದೇಶಗಳಲ್ಲಿ ಶಾಂತಿ ನೆಮ್ಮದಿ ಹೋಗಿ, ಪ್ರಕರಣ ಹೊಸ ಮುಖಂಡರ ಉದ್ಧಂಡತೆ ಹಾಗೂ ಕರಿಯರ ಜೊತೆ ಜಾತೀಯ ವರ್ಣಭೇದದ ಸಮಸ್ಯೆಗೆ ನಾಂದಿಯಾಯಿತು. ಮುಖ್ಯಮಂತ್ರಿ ಕೇಜ್ರಿವಾಲ್‌ಗೆ ಇದೊಂದು ಮರೆಯದ ಪೆಟ್ಟು. ತಮ್ಮ ಕಡೆಯ ಮಂತ್ರಿಗಳಿಗೆ ಅವರು ಆಡಳಿತದ ಮಂತ್ರ ಸರಿಯಾಗಿ ಉಪದೇಶಿಸಿಲ್ಲ ಎಂದಾಗಿದೆ. ಆದರೆ ದಿನೇ ದಿನೇ ಬೆಳೆದು ದೊಡ್ಡ ಹಗರಣವಾದ ಈ ಸಮಸ್ಯೆ, ಸ್ಥಳೀಕರ ಕುಟುಂಬದ ಹಕ್ಕಿನ ವಿಷಯ ಒಟ್ಟಾರೆ ಮರೆಯಾಯ್ತು.

shashi-and-sunanda

 

ಇಲ್ಲಿ ಪ್ರಕರಣ ಸ್ಥಳೀಕರ ಮನಶ್ಶಾಂತಿಗೆ ಸಂಬಂಧಿಸಿದ್ದು, ಮನೆ ಮಾಲೀಕರು ತಮ್ಮ ಸ್ವಾರ್ಥಕ್ಕಾಗಿ ಸುತ್ತಮುತ್ತಲ ಕುಟುಂಬದವರನ್ನು ಗೋಳುಹೊಯ್ದುಕೊಳ್ಳುವುದು ಸರಿಯಲ್ಲ. ನಾಗರಿಕರ ಇಂಥ ಹಕ್ಕಿನ ಕುರಿತು ನಮ್ಮ ಕಾನೂನಿನಲ್ಲಿ ಬರೆಯಲಾಗಿದೆಯೋ ಇಲ್ಲವೋ, ನೈತಿಕವಾಗಿ ಅವರ ಮನಶ್ಶಾಂತಿಯನ್ನಂತೂ ಯಾರೂ ಹಾಳು ಮಾಡುವಂತಿಲ್ಲ ಎಂಬುದು ನಿಜ. ಸೋಮನಾಥ್‌ರನ್ನು ಈ ಹಕ್ಕು ಉಳಿಸಿಕೊಳ್ಳುವ ವಿಷಯವಾಗಿ ಅನಗತ್ಯವಾಗಿ ಎಳೆದಾಡಲಾಗುತ್ತಿದೆ.

ಸೂಚನೆ : ಈ ಲೇಖನ ಅಚ್ಚಿಗೆ ಹೋಗುವ ಹೊತ್ತಿಗೆ ಕೇಜ್ರಿವಾಲ್ ‌ತಮ್ಮ ಮುಖ್ಯಮಂತ್ರಿ ಪದವಿಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಪತಿ, ಪತ್ನಿ ಮತ್ತು ಅವಳು

ಸುನಂದಾ ಪುಷ್ಕರ್‌ರ ಸಾವು ವಿಷದಿಂದ ಆಯಿತೋ, ಹತ್ಯೆ ಮಾಡಲಾಯಿತೋ, ಆತ್ಮಹತ್ಯೆ ಅಥವಾ ದುರ್ಘಟನೆಯಿಂದ ಆಯಿತೋ ಅದು ಬಹುಶಃ ಎಂದೂ ತಿಳಯಲಾರದು. ಏಕೆಂದರೆ ಅವರ ಮೂರನೆಯ ಪತಿ ಶಶಿ ತರೂರ್‌ ಕೇಂದ್ರ ಮಂತ್ರಿಯಾಗಿದ್ದಾರೆ. ಕಾಂಗ್ರೆಸ್‌ ತನ್ನ ಒಬ್ಬ ಮಂತ್ರಿಯನ್ನು ಹತ್ಯೆ ಅಥವಾ ಆತ್ಮಹತ್ಯೆಗೆ ಹೊಣೆ ಮಾಡುವ ಅಪರಾಧದಲ್ಲಿ ಸಿಲುಕಿಸಲು ಇಚ್ಛಿಸುವುದಿಲ್ಲ. ಕಾಂಗ್ರೆಸ್‌ನ ಅನೇಕ ಮಂತ್ರಿಗಳು ಲಂಚಗಳು ಅಥವಾ ಬೇರೆ ವಿವಾದಗಳಲ್ಲಿ ಸಿಲುಕಿ ಜೈಲಿನಲ್ಲಿದ್ದಾರೆ. ಹೀಗಾಗಿ ಬರುವ ಚುನಾವಣೆಗೆ ಮುಂಚೆ ಅದು ಇನ್ನೊಂದು ವಿವಾದ ಹೊರಬರಲು ಬಿಡುವುದಿಲ್ಲ. ಜೊತೆಗೆ ಇದು ವೈಯಕ್ತಿಕ ವಿಷಯವಾದ್ದರಿಂದ ಪ್ರತಿಪಕ್ಷದವರೂ ಇದಕ್ಕೆ ಅಡ್ಡಿ ಬರುವುದಿಲ್ಲ.

ಆದರೆ ಸುನಂದಾ ಪುಷ್ಕರ್‌ ಮತ್ತು ಶಶಿ ತರೂರ್‌ರಂತಹ ಆಕರ್ಷಕ ವ್ಯಕ್ತಿತ್ವದವರ ಮದುವೆ ಸದೃಢಗೊಳ್ಳುವುದು ಬಹಳ ಕಷ್ಟ. ಶಶಿ ತರೂರ್‌ಗೆ ಹಿಂದೆ ಇಬ್ಬರು ಪತ್ನಿಯರಿದ್ದು ಅವರಿಂದ ವಿಚ್ಛೇದನ ಪಡೆದಿದ್ದರು. ಅದೇ ರೀತಿ ಸುನಂದಾರಿಗೂ ಶಶಿ ಮೂರನೆಯ ಗಂಡನಾಗಿದ್ದರು. ಇಬ್ಬರೂ ಬಹಳ ಸ್ಮಾರ್ಟ್‌ ಹಾಗೂ ಫಾಸ್ಟ್. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಯಶಸ್ಸು ಪಡೆದಿದ್ದರು. ಶಶಿ ತರೂರ್ ಒಳ್ಳೆಯ ಲೇಖಕರೂ ಹೌದು. ಅವರು ಸರ್ಕಾರದಲ್ಲಿ ಒಳ್ಳೆಯ ಪದವಿಗಳಲ್ಲಿದ್ದು, ನಂತರ ರಾಜಕಾರಣಕ್ಕೆ ಬಂದರು. ಸುನಂದಾರವರ ಮುಖ ಹಾಗೂ ಪರ್ಸನಾಲಿಟಿ ಬಹಳಷ್ಟು ಹೇಳುತ್ತಿದ್ದವು. ಶಶಿ ತರೂರ್‌ ಮಾತಾಡುವಾಗಲಂತೂ ಸಮಯ ಹೇಗೆ ಕಳೆಯುತ್ತದೋ ತಿಳಿಯುವುದಿಲ್ಲ.

ಅವರಿಬ್ಬರ ಮದುವೆ ಬಹಳ ಅಪರೂಪದ ಮದುವೆಯಾಗಿದ್ದು, ನರೇಂದ್ರ ಮೋದಿಯವರು ಇವರು 50 ಕೋಟಿ ರೂ.ಗಳ ಪತ್ನಿ ಎಂದು ಹಾಸ್ಯ ಮಾಡಿದ್ದರು. ಸುನಂದಾ ಕೇರಳ ಕ್ರಿಕೆಟ್‌ ಟೀಮ್ ನ ಆಸ್ತಿಯ ಬಗ್ಗೆ ಎದ್ದ ವಿವಾದದಲ್ಲಿ ಶಶಿಯ ಸಮೀಪ ಬಂದಿದ್ದರು. ನಂತರ ಅವರಿಗೆ ಕ್ರಿಕೆಟ್‌ಗಿಂತ ಹೆಚ್ಚಾಗಿ ಶಶಿ ತರೂರ್‌ರಲ್ಲಿ ಆಕರ್ಷಣೆ ಉಂಟಾಯಿತು.

ಇಂತಹ ಪತ್ನಿಗೂ ಸಹ ಪತಿಯ ರಸಿಕತೆಗಳಿಂದ ಭಯ ಉಂಟಾಗಿದ್ದು ಆಶ್ಚರ್ಯವೇ ಸರಿ. ಶಶಿ ಪಾಕಿಸ್ತಾನದ ಒಬ್ಬ ಪತ್ರಕರ್ತೆ ಮೆಹರ್‌ ತರಾರ್‌ ಕೈಗೆ ಹೇಗೋ ಸಿಕ್ಕರು ಮತ್ತು ಇಬ್ಬರಲ್ಲೂ ಕೊಂಚ ಸೆಳೆತ ಉಂಟಾಗತೊಡಗಿತು. ಆದರೆ ದೂರದ ಸಂಬಂಧ ಸುನಂದಾರಿಗೆ ಇಷ್ಟವಾಗಲಿಲ್ಲ. ಅವರು ಶಶಿಯ ಅಕೌಂಟ್‌ನಿಂದ ಕೆಲವು ಸಂದೇಶಗಳನ್ನು ಟ್ವಿಟರ್‌ನಲ್ಲಿ ಕಳಿಸತೊಡಗಿದರು. ಅವುಗಳಲ್ಲಿ ಮೆಹರ್‌ ಐಎಸ್‌ಡಿ ಮತ್ತು ಪಾಕಿಸ್ತಾನದ ಗುಪ್ತ ಏಜೆನ್ಸಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನುವವರೆಗೆ ಆರೋಪ ಹೊರಿಸಲಾಗಿತ್ತು. ಆಗ ಶಶಿ ಮತ್ತು ಸುನಂದಾರ ನಡುವೆ ವಿವಾದ ಬಹಳ ದೊಡ್ಡದಾಯಿತು. ಅವರು ಪರಸ್ಪರ ನಾಯಿ ಬೆಕ್ಕುಗಳಂತೆ ಜಗಳವಾಡುತ್ತಿದ್ದರು.

ಪತಿ ಪತ್ನಿಯರು ಪರಸ್ಪರ ಪೂರಕವಾಗಿದ್ದು, ಪರಸ್ಪರರಲ್ಲಿ ನಂಬಿಕೆ ಹೊಂದಿದ್ದು, ಕೊರತೆಗಳನ್ನು ನಿರ್ಲಕ್ಷಿಸಿ, ಪರಸ್ಪರರನ್ನು ತಮ್ಮ ವೈಯಕ್ತಿಕ ಆಸ್ತಿ ಎಂದು ಬಯಸದೆ ಇರುವವರ ಸಂಬಂಧಗಳಲ್ಲಿ ಮಾಧುರ್ಯತೆ ಹಾಗೂ ತಮ್ಮತನಗಳಿರುತ್ತವೆ. ಯಾವುದೇ ಪತಿ ಇನ್ನೊಂದು ಚಿಟ್ಟೆಯ ಹಿಂದೆ ಸುಮ್ಮನೆ ಓಡಿಬಿಡುವುದಕ್ಕಾಗಲ್ಲ. ಯಾವುದೇ ಪತ್ನಿಯೂ ಯಾವುದೋ ಭ್ರಮರಕ್ಕೆ ಸುಮ್ಮನೆ ಒಪ್ಪಿಗೆ ಕೊಡುವುದಿಲ್ಲ. ಬದುಕಿನಲ್ಲಿ ಏರುಪೇರುಗಳು ಉಂಟಾದಾಗ ಈ ವಿಷಯಗಳು ಬರುತ್ತವೆ. ಪತಿ ಪತ್ನಿಯರ ಕರ್ತವ್ಯವೆಂದರೆ ಸುಖಜೀವನಕ್ಕಾಗಿ ಅವರು ತಮ್ಮ ವ್ಯಕ್ತಿತ್ವವನ್ನು ಪತಿ ಪತ್ನಿಯರ ಸಂಬಂಧಗಳ ಮೇಲೆ ಪ್ರಭಾವ ಬೀರಲು ಹೋಗಬಾರದು.

ಮನೆಯಿಂದಾಚೆ ಏನಾದರೂ ಇರಲಿ. ಆದರೆ ಮನೆಯಲ್ಲಿ ಕೇವಲ ಜೀವನಸಂಗಾತಿ ಇದ್ದಾಳೆ. ಇದೇ ಮೂಲಮಂತ್ರ.

ಮಾಡೆಲ್‌ಗಳು ವಸ್ತುಗಳನ್ನು ಮಾರಲ್ಲ

ಒಂದು ವೇಳೆ ನಂ.1 ಹೀರೋಯಿನ್‌ ವಿಶೇಷವಾದ ಬ್ರ್ಯಾಂಡ್‌ನ ಫೇಶಿಯಲ್ ಕ್ರೀಂ ಹಚ್ಚುವುದರಿಂದಲೇ ತನ್ನ ತ್ವಚೆ ಕೋಮಲವಾಗಿರುತ್ತದೆ ಎಂದರೆ ಎಲ್ಲ ಮಹಿಳೆಯರೂ ಒಪ್ಪಿಕೊಳ್ಳುತ್ತಾರೆಯೇ? ಒಂದು ವೇಳೆ ಈ ಹೇಳಿಕೆ ತಪ್ಪಾದರೆ ಆ ಹೀರೋಯಿನ್‌ ದೋಷಿಯೇ? ಈ ಪ್ರಶ್ನೆಯನ್ನು ಕನ್ಸ್ಯೂಮರ್‌ ಪೇರಂ ಎತ್ತಿದ್ದು ಜಾಹೀರಾತುಗಳ ಹೇಳಿಕೆ ಎಷ್ಟು ಸುಳ್ಳು ಹಾಗೂ ಎಷ್ಟು ನಿಜವಾಗಿರುತ್ತವೆ ಎಂದು ಪರೀಕ್ಷಿಸಬೇಕಿದೆ. ಸುಳ್ಳಾಗಿದ್ದಲ್ಲಿ ದೋಷಿಗಳಿಗೆ ಶಿಕ್ಷೆ ಸಿಗಬೇಕು ಎನ್ನುತ್ತದೆ.

ಅವ್ಯವಸ್ಥೆ ಇದ್ದಲ್ಲಿ ಗುಣಾವಗುಣಗಳ ಪರೀಕ್ಷೆ ಆಗಲಾರದು. ಅವ್ಯವಸ್ಥೆ ಇದ್ದಲ್ಲಿ ಹೂವು ಹುಲ್ಲು ಒಂದೇ ಧಾರಣೆ ಇರುತ್ತದೆ. ಜಾಹೀರಾತುಗಳಲ್ಲಿ ಜನರಿಗೆ ಹೀಗೆ ಸಲಹೆ ಕೊಡಲಾಗುತ್ತದೆ. ಉತ್ಪನ್ನ ಲಭ್ಯವಿದೆ. ಜನ ಕೊಂಡು ಪರೀಕ್ಷಿಸಿ. ಜಾಹೀರಾತುಗಳ ಮಾಡೆಲ್‌ಗಳು ಪರಿಚಿತರಿರಲಿ ಅಥವಾ ಅಪರಿಚಿತರಿರಲಿ, ಒಂದು ವೇಳೆ ಉತ್ಪನ್ನದ ಗ್ಯಾರಂಟಿಯ ಬಗ್ಗೆ ಕೊಳ್ಳುವವರು ಒಪ್ಪಿಕೊಂಡರೆ ಇದು ತಪ್ಪಾಗುತ್ತದೆ.

ಒಂದು ವೇಳೆ ಈ ತರ್ಕವನ್ನು ಒಪ್ಪಿಕೊಂಡರೆ ಬಹಳಷ್ಟು ಜನ ಜೈಲಿಗೆ ಹೋಗಬೇಕಾಗುತ್ತದೆ. ಏಕೆಂದರೆ ಪ್ರತಿ ಮಂತ್ರಿ, ಪ್ರತಿ ಸಂಸದ, ಪ್ರತಿ ಎಂ.ಎಲ್.ಎ., ಪ್ರತಿ ನ್ಯಾಯಾಧೀಶರೂ ಸಂವಿಧಾನಬದ್ಧರಾಗಿ ಕೆಲಸ ಮಾಡುತ್ತೇವೆಂದು ಶಪಥ ಮಾಡಿರುತ್ತಾರೆ. ಆದರೆ ಮಾಡುವುದೇ ಬೇರೆ. ಒಂದುವೇಳೆ ತಪ್ಪು ಕೆಲಸ ಮಾಡುತ್ತಿದ್ದರೆ, ಅಪರಾಧಗಳು ನಡೆಯುತ್ತಿದ್ದರೆ, ಕೋರ್ಟುಗಳಲ್ಲಿ ಮೊಕದ್ದಮೆಗಳು ತಡವಾಗಿ ನ್ಯಾಯ ಸಿಗದಿದ್ದರೆ, ದಂಗೆಗಳಾಗುತ್ತಿದ್ದರೆ, ರೈಲುಗಳು ತಡವಾಗಿ ಬಂದರೆ, ಅಂಚೆಪೆಟ್ಟಿಗೆಯಿಂದ ಪತ್ರ ಕಳುವಾದರೆ ಪ್ರತಿ ಜಡ್ಜ್, ಪ್ರತಿ ಮಂತ್ರಿ, ಪ್ರತಿ ಆಫೀಸರ್‌ಗಳನ್ನು ಆಶ್ವಾಸನೆ ಅಥವಾ ಹೇಳಿಕೆಯ ವಿರ್ಧು ನಡೆದ ಅಪರಾಧದಲ್ಲಿ ಜೈಲಿಗೆ ಕಳಿಸಬೇಕಾಗುತ್ತದೆ.

ಜಾಹೀರಾತುಗಳು ಉತ್ಪನ್ನದ ಬಗ್ಗೆ ವಿವರಿಸಲು ತಯಾರಾಗಿರುತ್ತವೆ. ಅವುಗಳ ಮಾಡೆಲ್‌ಗಳು ಆ ಜಾಹೀರಾತುಗಳ ಕಡೆ ಜನತೆಯ ಗಮನ ಸೆಳೆಯುತ್ತಾರೆ. ಆ ಮಾಡೆಲ್‌ಗಳು ವಸ್ತುಗಳನ್ನು ಮಾರುವುದಿಲ್ಲ. ಅವರಿಗೆ ಏನಾದರೂ ಮಾಡುತ್ತೇವೆಂದು ಬೆದರಿಕೆ ಹಾಕುವುದು ತಪ್ಪು. ಇದು ಹೆಸರಾಂತ ಜನರಲ್ಲಿ ಕಾರಣವಿಲ್ಲದೆ ಭಯ ಉಂಟು ಮಾಡುತ್ತದೆ. ಏಕೆಂದರೆ ಈ ದೇಶದಲ್ಲಿ ಕೆಲವರಿಗೆ ಸಣ್ಣ ಕಾರಣವಿಲ್ಲದೆ ಕೋರ್ಟುಗಳಲ್ಲಿ ಮೊಕದ್ದಮೆ ಹೂಡಿ ಮೋಜು ಪಡೆಯುವುದು ಅಭ್ಯಾಸವಾಗಿದೆ. ಇದರಿಂದ ಬಿಟ್ಟಿ ಪ್ರಚಾರ ಸಿಗುತ್ತದೆ ಹಾಗೂ ಅನೇಕ ಬಾರಿ ಕೇಸ್‌ ವಾಪಸ್‌ ಪಡೆಯುವುದರಿಂದ ಹಣ ಸಿಗುತ್ತದೆ.

ಒಂದು ವೇಳೆ ಯಾವುದಾದರೂ ಸಮಿತಿ ಇಂತಹ ಶಿಫಾರಸು ಮಾಡಿಬಿಟ್ಟರೆ ಕೋರ್ಟುಗಳಲ್ಲಿ ಸ್ಟಾರ್‌ಗಳು ಹಾಗೂ ಆಟಗಾರರ ವಿರುದ್ಧ ಕೇಸುಗಳ ಪ್ರವಾಹವೇ ಬಂದುಬಿಡುತ್ತದೆ. ಈ ಮೂರ್ಖತನದ ಕೆಲಸವನ್ನು ಮಾಡದಿರಲು ಪ್ರಾರಂಭದಲ್ಲೇ ನಿರ್ಣಯ ತೆಗೆದುಕೊಳ್ಳಬೇಕು. ವೆಟ್‌ ಬೈಯರ್‌ ಬಿವೇರ್‌ ಅಂದರೆ ಖರೀದಿಸುವವರೇ, ಎಚ್ಚರದಿಂದಿರಿ ಎಂಬ ಪಾಠವನ್ನು ಹೇಳಿಕೊಡಬೇಕಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ