ದೊಡ್ಡ ದೊಡ್ಡ ಏಣಿಗಳು ಹಾಗೂ ವಾಟರ್ ಪೈಪ್‌ನ್ನು ಹೆಗಲಿನ ಮೇಲೆ ಇಟ್ಟುಕೊಂಡು ಓಡುವುದು, ಫೈರ್ ಡ್ರಿಲ್ಲಿಂಗ್‌ನ್ನು ಗಂಟೆಗಟ್ಟಲೇ ಪ್ರ್ಯಾಕ್ಟೀಸ್ ಮಾಡುವುದು, ನಗರ, ಹಳ್ಳಿ ಅಥವಾ ಆಯಿಲ್ ಫೀಲ್ಡ್ ಎಲ್ಲ ಸ್ಥಳಗಳಲ್ಲಿ ಜನರನ್ನು ಆಪತ್ತಿನಿಂದ ರಕ್ಷಿಸುವುದು ಮತ್ತು ಎಲ್ಲ ಕೆಲಸಗಳನ್ನೂ ಚೆನ್ನಾಗಿ ಯೋಜಿಸಿಕೊಂಡು ಮಾಡುವುದು ಫೈರ್ ಎಂಜಿನಿಯರ್ ಹರ್ಷಿನಿ ಕಾನ್ಹೆಕರ್‌ರವರ ಹೆಚ್ಚುಗಾರಿಕೆ. ಅವರು ಭಾರತದ ಮೊದಲ ಫೈರ್‌ಮನ್. ಅವರೊಂದಿಗೆ ನಡೆಸಿದ ಮಾತುಕಥೆಯ ಮುಖ್ಯ ಅಂಶಗಳು :
ಮನೆಯಲ್ಲಿ ಬೆಂಕಿ ಆರಿಸಲು ಆರಂಭಿಕ ಫೈರ್ ಫೈಟಿಂಗ್ ಸಾಧನ ಅಗತ್ಯವಿದೆ.
ಯಾವುದಾದರೂ ಸಾಕೆಟ್‌ನಲ್ಲಿ ಲೀಕೇಜ್ ಇದೆಯೇ ಎಂದು ಅಗತ್ಯವಾಗಿ ತಿಳಿದುಕೊಳ್ಳಿ.
ಮನೆಯಲ್ಲಿ ಎಲೆಕ್ಟ್ರಿಕ್ ವಸ್ತುಗಳು ಇರುವ ಕಡೆ ಸಣ್ಣದಾದ ಕಾರ್ಬನ್ ಡೈಆಕ್ಸೈಡ್ ಎಕ್ಸ್ ಟಿಂಗ್ವಿಶರ್ ಇಡಿ.
ಒಂದು ವೇಳೆ ಬೆಂಕಿ ಕಂಡುಬಂದರೆ ಜೋರಾಗಿ ಕಿರುಚಿ. ಅದರಿಂದ ಸುತ್ತಮುತ್ತಲ ಜನಕ್ಕೆ ವಿಷಯ ತಿಳಿದಂತಾಗುತ್ತದೆ.
ಒಂದು ವೇಳೆ ಎಲೆಕ್ಟ್ರಿಕ್ ವಸ್ತುಗಳಿಗೆ ಬೆಂಕಿ ಬಿದ್ದಿದ್ದರೆ ಕೂಡಲೇ ಮೇನ್ ಸ್ವಿಚ್ ಆರಿಸಿ.
ಎಲ್ಲಕ್ಕೂ ಮೊದಲು ಬೆಂಕಿ ಬಿದ್ದಿರುವ ಸ್ಥಳದಲ್ಲಿ ಕಿಟಕಿ ಹಾಗೂ ಬಾಗಿಲುಗಳನ್ನು ತೆರೆದಿಡಿ.
ಮಹಿಳೆಯರು ಮನೆಯಿಂದ ಹೊರಗೆ ಹೋಗುವಾಗ ಪೂರ್ತಿ ಮನೆಯನ್ನು ಮುಚ್ಚಬೇಡಿ.
ಗ್ಯಾಸ್‌ನ `ನಾಬ್’ನ್ನು ಬಂದ್ ಮಾಡಿ.
– ಪ್ರತಿನಿಧಿ