`ಎಂದೆಂದಿಗೂ’ ನಿಮಗಾಗಿ ನೃತ್ಯ ನಿರ್ದೇಶನಿಂದ ಕೂಡಲೇ ತಟ್ಟನೆ ನೆನಪಿಗೆ ಬರೋದು ಉಡುಪಿ ಜಯರಾಂ ಮತ್ತು ದೇವಿ, ಚಿನ್ನಿ ಪ್ರಕಾಶ್‌ ಮತ್ತು ರೇಖಾ. ಇವರುಗಳು ಸೆಟ್ಟಿಗೆ ಬಂದರೆ ಸಾಕು ಕಲಾವಿದರು ಕಾಲಿಗೆ ನಮಸ್ಕರಿಸಿ ಹಾಡಿನ ಚಿತ್ರೀಕರಣಕ್ಕೆ ರೆಡಿಯಾಗುತ್ತಿದ್ದರು. ಕಾಲ ಬದಲಾದಂತೆ ಎಲ್ಲವೂ ಬದಲಾದವು. ಹೊಸ ತಾರೆಯರ ಜೊತೆ ಹೊಸ ಟೆಕ್ನೀಶಿಯನ್ಸ್, ಕೊರಿಯೊಗ್ರಾಫರ್‌, ಬೆಳಕಿಗೆ ಬಂದರು. ಇಂದು ಕನ್ನಡ ಚಿತ್ರರಂಗದಲ್ಲಿ ಒಬ್ಬೊಬ್ಬ ಸ್ಟಾರ್‌ಗೂ ಒಬ್ಬೊಬ್ಬ ಕೊರಿಯೊಗ್ರಾಫರ್‌ ಇರುತ್ತಾರೆ. ಸುದೀಪ್‌ ಚಿತ್ರಗಳಿಗೆ ಹರ್ಷ ಫಿಕ್ಸ್. ದರ್ಶನ್‌ಗೂ ಅವರದೇ ಆದ ಸ್ಟೈಲ್ ‌ಇರೋದ್ರಿಂದ ಮಾಲೂರು, ತ್ರಿಭುವನ್‌, ಮುರಳಿ ಇವರೆಲ್ಲರೂ ನೃತ್ಯ ಸಂಯೋಜನೆ ಮಾಡುತ್ತಿರುತ್ತಾರೆ. ಫೈವ್ ‌ಸ್ಟಾರ್‌ ಗಣೇಶ್‌ ಆಚಾರ್ಯ ಕೂಡಾ ಎಲ್ಲ ನಾಯಕರಿಗೂ ಕೊರಿಯೊಗ್ರಾಫ್‌ ಮಾಡುತ್ತಾರೆ. ಇತ್ತೀಚೆಗೆ ಹರ್ಷ ತನ್ನ ನಿರ್ದೇಶನದ ಮೂರನೇ ಚಿತ್ರ `ಭಜರಂಗಿ’ ನಿರ್ದೇಶಿಸಿದಾಗ ಶಿವರಾಜ್ ಕುಮಾರ್‌ ಅವರನ್ನು ಅದ್ಭುತವಾಗಿ ತೆರೆ ಮೇಲೆ ತೋರಿಸಿದ್ದರು.  ಚಿತ್ರ ಸೂಪರ್‌ ಹಿಟ್‌ ಆಯಿತು.

ಸ್ಟಾರ್‌ ಕೊರಿಯೊಗ್ರಾಫರ್‌ ಎಂದೇ ಜನಪ್ರಿಯರಾಗಿರುವ ಇಮ್ರಾನ್‌ ಸರ್ದಾರಿಯಾ ಇದೀಗ ಸ್ಟಾರ್ಟ್‌ ಹೇಳಲಾಗಿದೆ. ಎಸ್‌.ವಿ. ಬಾಬು ನಿರ್ಮಾಣದ `ಎಂದೆಂದಿಗೂ’ ಚಿತ್ರವನ್ನು ಇಮ್ರಾನ್‌ ಬಹಳ ಸ್ಟೈಲಿಶ್‌ ಆಗಿ ನಿರ್ದೇಶಿಸಿದ್ದಾರೆಂದು ತಿಳಿದು ಬಂದಿದೆ. ಇಮ್ರಾನ್‌ `ಬಿಸಿ ಬಿಸಿ’ ಚಿತ್ರದಿಂದ ತಮ್ಮ ಕೊರಿಯೊಗ್ರಾಫರ್‌ ವೃತ್ತಿ ಶುರು ಮಾಡಿ ಸಿನಿಮಾರಂಗದಲ್ಲಿ ತಳವೂರಲು ಸಾಕಷ್ಟು ಶ್ರಮ ವಹಿಸಬೇಕಾಯ್ತು. ಆದರೂ ತಾಳ್ಮೆ ಕಳೆದುಕೊಳ್ಳಲಿಲ್ಲ. `ಹುಡುಗಾಟ’ ಚಿತ್ರದ `ಸ್ಟೋಲೈ… ಸ್ಟೋಲೈ…’ ಹಾಡಿನ ನಂತರ ಇಮ್ರಾನ್‌ಗೆ ಅದೃಷ್ಟ ಖುಲಾಯಿಸಿತು.

ಆಮೇಲೆ ಅವರು ಗಣೇಶ್‌ ಚಿತ್ರಗಳಲ್ಲಿ ಪರ್ಮನೆಂಟ್‌ ಆಗಿಬಿಟ್ಟರು. ಯಾವಾಗ ಪುನೀತ್‌ ರಾಜ್‌ಕುಮಾರ್‌ ಚಿತ್ರಕ್ಕೆ ನೃತ್ಯ ನಿರ್ದೇಶನ ಶುರು ಮಾಡಿದರೋ ಇನ್ನಷ್ಟು ಮಿಂಚತೊಡಗಿದರು. ಬಿಡುವಿಲ್ಲದಷ್ಟು ಕೆಲಸ, ದೇಶ ವಿದೇಶಗಳ ಸುತ್ತಾಟ. ಇವೆಲ್ಲದರ ನಡುವೆ ಇಮ್ರಾನ್‌ಗೆ ಒಂದ ಒಳ್ಳೆ ಚಿತ್ರವನ್ನು ನಿರ್ದೇಶಿಸಬೇಕೆಂಬ ಆಸೆ ಚಿಗುರತೊಡಗಿತು.

ಒಳ್ಳೆಯ ಸಬ್ಜೆಕ್ಟ್ ಸಿಗುವವರೆಗೂ ನಿರ್ದೇಶನಕ್ಕೆ ಕೈ ಹಾಕೋಲ್ಲ ಎಂದಿದ್ದ ಇಮ್ರಾನ್‌ ಈಗಷ್ಟೇ ಚಿತ್ರವೊಂದನ್ನು ರೆಡಿ ಮಾಡಿದ್ದಾರೆ. ಅದರ ಹೆಸರು `ಎಂದೆಂದಿಗೂ.’ ಎಸ್‌.ವಿ. ಬಾಬು ಅವರ ನಿರ್ಮಾಣ ಎಂದ ಮೇಲೆ ಬಜೆಟ್‌ ಬಗ್ಗೆ ಚಿಂತಿಸುವುದೇ ಬೇಡ. ಸಿನಿಮಾ ಸಲುವಾಗಿ ಹಿಂದು ಮುಂದು ನೋಡದೆ ಅದ್ಧೂರಿಯಾಗಿ ಖರ್ಚು ಮಾಡುವ ಬಾಬು ಅವರಂಥ ನಿರ್ಮಾಪಕರು ಸಿಕ್ಕಿರೋದು ಇಮ್ರಾನ್‌ ಅವರ ಅದೃಷ್ಟವೆನ್ನಬಹುದು.

`ಎಂದೆಂದಿಗೂ’ ಲವ್ ಸ್ಟೋರಿಯಾಗಿದ್ದು, ರಾಧಿಕಾ ಪಂಡಿತ್‌ ಅಜೇಯ್‌ ರಾವ್‌ ಹೊಸರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಜೇಯ್‌ ರಾವ್ ‌ರಾಧಿಕಾ ಪಂಡಿತ್‌ ಜೋಡಿ ಈಗಾಗಲೇ `ಕೃಷ್ಣನ್‌ ಲವ್ ಸ್ಟೋರಿ’ ಮೂಲಕ ಸಾಕಷ್ಟು ಹಿಟ್‌ ಆಗಿದೆ. ರಾಧಿಕಾ ಪಂಡಿತ್‌ ಅಚ್ಚ ಕನ್ನಡದ ಪ್ರತಿಭೆ. ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಪ್ರತಿಭೆಯನ್ನು ಪ್ರದರ್ಶಿಸಿ ಪ್ರಶಸ್ತಿಗಳ ಜೊತೆ ಪ್ರಶಂಸೆಯನ್ನೂ ಪಡೆದಂಥ ತಾರೆ. ಎಂಥದ್ದೇ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಸಲ್ಲಿಸುವ ಕಲೆ ರಾಧಿಕಾಳಿಗೆ ಗೊತ್ತಿದೆ.

Endendigu4

`ಎಕ್ಸ್ ಕ್ಯೂಸ್‌ ಮಿ` ಚಿತ್ರದ ಮೂಲಕ ಅಜೇಯ್‌ ರಾವ್ ‌ನಾಯಕ ನಟನಾಗಿ ಬೆಳಕಿಗೆ ಬಂದಂಥ ಕಲಾವಿದ. ಹೆಚ್ಚು ಮಾತನಾಡದೇ ಕೆಲಸ ಜಾಸ್ತಿ ಮಾತು ಕಡಿಮೆ ಎನ್ನುವುದಕ್ಕೆ ಬದ್ಧನಾಗಿರುವ ಅಜೇಯ್‌ಗೆ `ತಾಜ್‌ಮಹಲ್’ ಚಿತ್ರ ಮರುಜನ್ಮ ನೀಡಿತು. ಅಲ್ಲಿಯವರೆಗೂ ಯಾವುದೇ ಚಿತ್ರಗಳು ಅಜೇಯ್‌ನನ್ನು ಸ್ಟಾರ್‌ ಆಗಿ ಗುರುತಿಸುವಂತೆ ಮಾಡಿರಲಿಲ್ಲ.

`ತಾಜ್‌ ಮಹಲ್’ ಚಿತ್ರದಲ್ಲಿ ಪೂಜಾಗಾಂಧಿ ಜೋಡಿಯಾಗಿದ್ದಳು. ಚಂದ್ರು ಅವರ ಮೊದಲ ನಿರ್ದೇಶನದ ಚಿತ್ರ ಅದಾಗಿತ್ತು. ಅಜೇಯ್‌, ರಾಧಿಕಾ ಪಂಡಿತ್‌ ಪ್ರತಿಭೆಯುಳ್ಳ ಕಲಾವಿದರು. ಇವರನ್ನು ಒಂದು ಹೊಸ ರೀತಿಯ ಲವ್ ಸ್ಟೋರಿಯ ಮೂಲಕ ಇಮ್ರಾನ್‌ ತೋರಿಸಲು ಪ್ರಯತ್ನಿಸಿದ್ದಾರಂತೆ. `ಎಂದೆಂದಿಗೂ’ ಚಿತ್ರದ ಸ್ಟಿಲ್ಸ್ ‌ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ.

ಇಮ್ರಾನ್‌ ಪತ್ನಿ ಸಾನಿಯಾ ಕೂಡಾ ಡ್ರೆಸ್‌ ಡಿಸೈನರ್‌ ಆಗಿರೋದ್ರಿಂದ ಚಿತ್ರಕ್ಕೆ ಇನ್ನಷ್ಟು ಶ್ರೀಮಂತಿಕೆ ಮತ್ತು ಸ್ಟೈಲಿಶ್‌ ಟಚ್ ತುಂಬಲಾಗಿದೆ.

`ಎಂದೆಂದಿಗೂ’ ಥ್ರಿಲ್ಲಿಂಗ್‌ ಲವ್ ಸ್ಟೋರಿ ಎಂಬುದಾಗಿ ಇಮ್ರಾನ್‌ ಹೇಳುತ್ತಾರೆ.

ಈ ಮೊದಲು ಅವರು ಕೆ. ಮಂಜು ನಿರ್ಮಾಣದ ಚಿತ್ರವೊಂದನ್ನು ನಿರ್ದೇಶಿಸಬೇಕಿತ್ತು, ದಿಗಂತ್‌ ನಟಿಸಬೇಕಿತ್ತು. ಆದರೆ ಕಾರಣಾಂತರದಿಂದ ಆ ಚಿತ್ರವನ್ನು ಅಲ್ಲಿಗೆ ಡ್ರಾಪ್‌ ಮಾಡಬೇಕಾಗಿ ಬಂತು.

ರಮ್ಯಾ ಜೊತೆಯಲ್ಲಿ ಒಂದು ಚಿತ್ರ ಮಾಡಬೇಕೆಂಬ ಆಸೆ ಇಮ್ರಾನ್‌ಗೆ ಮೊದಲಿನಿಂದಲೂ ಇತ್ತು. ಚಿತ್ರದಲ್ಲಿ ನಟಿಸುವುದಾಗಿಯೂ ರಮ್ಯಾ ಒಪ್ಪಿಕೊಂಡಿದ್ದಳು. ಆದರೆ ಸಂಸದೆಯಾದ ನಂತರ ಸಿನಿಮಾದಲ್ಲಿ ನಟಿಸುವ ನಿರ್ಧಾರವನ್ನು ಹಿಂತೆಗೆದುಕೊಂಡ ನಂತರ, ರಾಧಿಕಾ ಪಂಡಿತ್‌ ನಾಯಕಿಯಾಗಿ ಆಯ್ಕೆಯಾದಳು.

ಹೊರದೇಶದಲ್ಲಿ ಸುಂದರವಾದ ಲೊಕೇಶನ್‌ಗಳಲ್ಲಿ  ಶೂಟ್‌ ಮಾಡಿಕೊಂಡು ಬಂದಿರುವ ಇಮ್ರಾನ್‌ ಅವರ `ಎಂದೆಂದಿಗೂ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

Endendigu3

`ಎಂದೆಂದಿಗೂ’ ತೆರೆಗೆ ಬರುವ ಮೊದಲೇ ಸಾಕಷ್ಟು ಸುದ್ದಿ ಮಾಡುತ್ತಿದೆ. ಇಮ್ರಾನ್‌ ಅವರ ಮೊದಲ ನಿರ್ದೇಶನದ ಚಿತ್ರ ಇದಾದರೆ, ದೊಡ್ಡ ಗ್ಯಾಪ್‌ ನಂತರ ಎಸ್‌.ವಿ. ಬಾಬು ಮತ್ತೆ ಚಿತ್ರ ನಿರ್ಮಾಣಕ್ಕೆ ಮರಳಿರೋದು.ಸ್ವೀಡನ್‌ನಲ್ಲಿ ಚಿತ್ರೀಕರಣ ನಡೆಸಿದ ನಂತರ ಬೆಂಗಳೂರಿನಲ್ಲಿ ಶೂಟಿಂಗ್‌ ನಡೆಯಲಿದೆ. ನ್ಯೂ ಲುಕ್ಸ್ ನಲ್ಲಿ ರಾಧಿಕಾ ಪಂಡಿತ್‌ ಅಜೇಯ್‌ ರಾವ್ ಈಗಾಗಲೇ  ಫೋಟೋ ಶೂಟ್‌ಗಳಲ್ಲೇ ಸಾಕಷ್ಟು ಗಮನಸೆಳೆಯುತ್ತಿದ್ದಾರೆ.

`ಎಂದೆಂದಿಗೂ’  ಏಕ್‌ ದೂಜೆ ಕೇ ಲಿಯೇ ಎನ್ನುವ ಟ್ಯಾಗ್‌ ಲೈನ್‌ನೊಂದಿಗೆ ಬರುತ್ತಿರುವ ಈ ಚಿತ್ರಕ್ಕೆ ಇಮ್ರಾನ್‌ ಸಾಕಷ್ಟು ಹೊಸತನ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ.

ಭಾರೀ ತಾರಾಗಣವೇ ಇವರು `ಎಂದೆಂದಿಗೂ’ ಚಿತ್ರ ಬರಲಿರುವ ಹೊಸ ವರ್ಷದಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಇದ್ದರೂ, ಇಮ್ರಾನ್‌ ಈ ವರ್ಷದ ಅಂತ್ಯದಲ್ಲೇ ತೆರೆಗೆ ತರುವುದಾಗಿ ಹೇಳುತ್ತಿದ್ದಾರೆ.

ಒಬ್ಬ ನೃತ್ಯ ನಿರ್ದೇಶಕನಾಗಿ, ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಲು ಸಾಕಷ್ಟು ಶ್ರಮವಹಿಸಿರುವ ಇಮ್ರಾನ್‌ ಕೊರಿಯೊಗ್ರಾಫರ್‌ ಆಗಿ ಮಿಂಚಿದಂತೆ ನಿರ್ದೇಶಕನಾಗಿಯೂ ಈ ಚಿತ್ರದ ಮೂಲಕ ಗೆಲ್ಲುವರೇ ಎನ್ನುವ ಕುತೂಹಲ ಎಲ್ಲರಿಗೂ ಇದೆ. ಹೊಸತನವನ್ನು ಕನ್ನಡದ ಪ್ರೇಕ್ಷಕರು ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಇಮ್ರಾನ್‌ ಪ್ರೇಕ್ಷಕರನ್ನು ರಂಜಿಸುವಂತಾಗಲಿ, ಹಾಗೆಯೇ ಉತ್ತಮ ಚಿತ್ರಗಳನ್ನು ಕೊಡುವುದರಲ್ಲಿ ಯಶಸ್ವಿಯಾಗಲಿ….. ಎಂದು ಗೃಹಶೋಭಾ ಹಾರೈಸುತ್ತಾಳೆ.

– ಜಾಗೀರ್‌ದಾರ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ