ಯಾರದೋ ತಪ್ಪು…. ಯಾರಿಗೋ ಶಿಕ್ಷೆ!
ಹೆಂಡತಿಯರ ಆತ್ಮಹತ್ಯೆಗಳ ವಿಷಯದಲ್ಲಿ ಈಗ ಗಂಡಂದಿರಿಗೆ ಕಠಿಣ ಶಿಕ್ಷೆ ನೀಡಲಾಗುತ್ತಿದೆ. ಆದರೆ ಸಾಮಾನ್ಯವಾಗಿ ಸಾಮಾಜಿಕ ಕೆಡುಕುಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಕೋರ್ಟುಗಳು ಈ ಬಗ್ಗೆ ನಿರ್ದಯವಾಗಿ ವರ್ತಿಸುತ್ತಿವೆ. ಮಧ್ಯಪ್ರದೇಶದಲ್ಲಿ ಗೀತಾಬಾಯಿಯ ಮದುವೆ 1993ರಲ್ಲಿ ಆಯಿತು. 1996ರಲ್ಲಿ ಗೋದಿ ಬೆಳೆಗೆ ಸಿಂಪಡಿಸುವ ಕೀಟನಾಶಕವನ್ನು ಕುಡಿದು ಆಕೆ ಆತ್ಯಹತ್ಯೆ ಮಾಡಿಕೊಂಡಳು. ಗೀತಾಳ ಗಂಡ ಭೂಪೇಂದ್ರ ಸಿಂಗ್ ಹತ್ತು ಸಾವಿರ ರೂ. ಕೇಳಿದ. ನಾನು ಅದನ್ನು ಕೊಡಲಾಗಲಿಲ್ಲ. ಅವನು ಗೀತಾಳನ್ನು ಪೀಡಿಸತೊಡಗಿದ. ಅದರಿಂದಾಗಿ ಅವಳು ಆತ್ಮಹತ್ಯೆ ಮಾಡಿಕೊಂಡಳು ಎಂದು ಗೀತಾಳ ಅಪ್ಪ ಆರೋಪಿಸಿದರು.
ಮದುವೆಯಾಗಿ 7 ವರ್ಷದೊಳಗೆ ಗೀತಾಬಾಯಿಯ ಸಾವು ಅನುಮಾನಾಸ್ಪದವಾಗಿ ಆಗಿದ್ದರಿಂದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498ಎ, 304 ಮತ್ತು 306ರ ಅಡಿಯಲ್ಲಿ ಭೂಪೇಂದ್ರನನ್ನು ದೋಷಿ ಎಂದು ನಿರ್ಧರಿಸಿ 10 ವರ್ಷಗಳ ಶಿಕ್ಷೆ ವಿಧಿಸಲಾಯಿತು. ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯ ಶಿಕ್ಷೆಯನ್ನು ಖಾಯಂ ಆಗಿಸಿತು. ಭೂಪೇಂದ್ರನ ಬದುಕಂತೂ ಹಾಳಾಯಿತು. 2014ರಲ್ಲಿ ಅಪೀಲುಗಳ ನಂತರ ಅವನು ಅನೇಕ ವರ್ಷಗಳನ್ನು ಜೈಲುಗಳಲ್ಲಿ ಕಳೆಯಬೇಕಾಗಿದೆ. 18 ವರ್ಷಗಳಂತೂ ಕೋರ್ಟುಗಳು ಹಾಗೂ ವಕೀಲರೊಂದಿಗೆ ಓಡಾಟದಲ್ಲಿ ಕಳೆದುಹೋದ. ಹೆಂಡತಿಯಂತೂ ಸತ್ತುಹೋದಳು.
ಪತಿ ಪತ್ನಿಯರ ವಿವಾದಗಳಂತೂ ಯಾವಾಗಲೂ ಇದ್ದಿದ್ದೇ. ನಮ್ಮ ಧರ್ಮಗ್ರಂಥಗಳಂತೂ ಇವುಗಳಿಂದಲೇ ತುಂಬಿವೆ. ದಶರಥ ಕೈಕೇಯಿಯರ ವಿವಾದ ಇರಬಹುದು, ಸೀತಾ ಅಯೋಧ್ಯೆಗೆ ಹಿಂತಿರುಗಿದ ನಂತರ ರಾಮ ಅವಳನ್ನು ಕಾಡಿಗೆ ಕಳಿಸಿದ್ದು ಇರಬಹುದು. ದ್ರೌಪದಿ ಗಂಡಂದಿರೊಂದಿಗೆ ವನವಾಸ ಮಾಡಿದ್ದು ಅಥವಾ ಇಂದಿರಾಗಾಂಧಿಗೆ ಪತಿ ಫಿರೋಜ್ ಗಾಂಧಿಯೊಂದಿಗಿನ ವಿವಾದ. ಪರಸ್ಪರ ವಿವಾದ ಹೊಸ ವಿಷಯವೇನಲ್ಲ. ಈ ವಿವಾದಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಅಥವಾ ಮಾಡಿಕೊಳ್ಳುತ್ತೇನೆಂದು ಬೆದರಿಸುವುದು ಅತಿಯಾಗುತ್ತದೆ. ನರೇಂದ್ರ ಮೋದಿಯವರ ಶಬ್ದಗಳಲ್ಲಿ ಹೇಳುವುದೆಂದರೆ, `ಶಶಿ ತರೂರ್‌ರ 50 ಕೋಟಿ ರೂ.ಗಳ ದುಬಾರಿ ಪತ್ನಿ’ ಆತ್ಮಹತ್ಯೆ ಮಾಡಿಕೊಂಡರು.
ಪತಿಪತ್ನಿಯರ ವಿವಾದಗಳಲ್ಲಿ ಆತ್ಯಹತ್ಯೆ ಮಾಡಿಕೊಂಡರೆ ಪತಿ ಹಾಗೂ ಅವನ ಮನೆಯವರಿಗೆ ಅನ್ಯಾಯ ಉಂಟಾಗುತ್ತದೆ. ಒಂದು ಜೀವಕ್ಕಾಗಿ ಇತರರ ಜೀವನಕ್ಕೆ ಹಾನಿಯುಂಟು ಮಾಡುವುದು ತಪ್ಪು.
ಪತಿ ಪತ್ನಿಯರ ಸಂಬಂಧ ಪ್ರೀತಿ ಹಾಗೂ ಪರಸ್ಪರ ವಿಶ್ವಾಸದ್ದಾಗಿದೆ. ಎಲ್ಲ ರೀತಿಯ ಮೇಲು ಕೀಳು ಭಾವನೆ ನಡೆಯುತ್ತಿರುತ್ತದೆ. 3 ಬಾರಿ ತಲಾಕ್ ಎಂದು ಹೇಳಿ ದಾಂಪತ್ಯವನ್ನು ಮುರಿದುಕೊಳ್ಳುವ ಹಕ್ಕು ಕೊಡುವುದು ತಪ್ಪು. ಹಾಗೆಯೇ ಕೊಲ್ಲುತ್ತೇನೆಂದು ಅಥವಾ ಸಾಯುತ್ತೇನೆಂದು ಬೆದರಿಕೆ ಹಾಕುವುದೂ ತಪ್ಪು. ಇಸ್ಲಾಮಿ ಕಾನೂನಿನಷ್ಟೇ ಹೊಸ ಕಾನೂನು ಕೂಡ ಸರಿಯಲ್ಲ. ಎರಡೂ ಅನೇಕ ಜೀವಗಳಿಗೆ ಹಾನಿ ತರುತ್ತದೆ. ಅಪರಾಧ ಎಷ್ಟೇ ಆಗಿರಲಿ ಅಪರಾಧಕ್ಕೆ ಹೋಲಿಸಿದರೆ ಎಷ್ಟೋ ಪಟ್ಟು ಶಿಕ್ಷೆ ನೀಡಲಾಗುತ್ತಿದೆ.
ನಮ್ಮ ದೇಶದಲ್ಲಿ ಸಮಾಜ ಸುಧಾರಣೆಯನ್ನು ಕಾನೂನುಗಳು ಮತ್ತು ಕೋರ್ಟುಗಳಿಗೆ ಹೊಂದಿಸುತ್ತಿರುವ ಪ್ರಯತ್ನಗಳು ತಪ್ಪು. ನಮ್ಮ ವಿಚಾರ ಬದಲಾಗುವುದರಿಂದ ಸಮಾಜ ಸುಧಾರಣೆ ಉಂಟಾಗುತ್ತದೆ. ಪೊಲೀಸ್ ಆ್ಯಕ್ಷನ್‌ನಿಂದಲ್ಲ. ವರದಕ್ಷಿಣೆ ವಿರೋಧಿ ಆಂದೋಲನ ಅಥವಾ ಜಾತಿ ನಿಂದನೆಗಳಿಗೆ ಕಠಿಣ ಕಾನೂನು ಮಾಡಿ ಆ ಕಾನೂನುಗಳನ್ನು ಬ್ಲ್ಯಾಕ್ ಮೇಲ್‌ನ ಅಸ್ತ್ರವನ್ನಾಗಿ ಮಾಡಿಕೊಳ್ಳಲಾಗಿದೆ. ಸಮಾಜ ಎಲ್ಲಿದೆಯೋ ಅಲ್ಲೇ ನಿಂತುಬಿಟ್ಟಿದೆ. ವರದಕ್ಷಿಣೆ ತೆಗೆದುಕೊಳ್ಳಲಾಗುತ್ತಿದೆ ಹಾಗೂ ಕೊಡಲಾಗುತ್ತಿದೆ. ಮನೆಯಲ್ಲಿ ಸೊಸೆ ಏನು ತಂದಳು, ಯಾರಿಗಾಗಿ ತಂದಳು ಎಂಬುದನ್ನು ಲೆಕ್ಕ ಹಾಕಲಾಗುತ್ತಿದೆ. ಇವುಗಳಲ್ಲಿ ಈಗ ಉತ್ತರಾಧಿಕಾರದ ಕಾನೂನುಗಳಲ್ಲಿ ಸುಧಾರಣೆಯಾಗಿರುವುದರಿಂದ ಪತ್ನಿಗೆ ತಾಯಿ ತಂದೆಯರ ಆಸ್ತಿಯಲ್ಲಿ ಸಿಗುವ ಪಾಲನ್ನೂ ಲೆಕ್ಕ ಹಾಕಲಾಗುತ್ತಿದೆ.
ಜೈಲಿಗೆ ಹೋಗಬೇಕಾದ ಭಯ ಸಮಾಜವನ್ನು ಸುಧಾರಿಸುತ್ತಿಲ್ಲ. ಏಕೆಂದರೆ ಪ್ರಚಾರಕರು, ಪುಸ್ತಕಗಳು ಮತ್ತು ಪತ್ರಿಕೆಗಳು ಈ ಮಹತ್ವಪೂರ್ಣ ಕೆಲಸವನ್ನು ಮಾಡಲು ಸಿದ್ಧವಿಲ್ಲ. ಬದಲಿಗೆ ಪ್ರಚಾರಕರು ಭಾರತೀಯ ಹಿಂದೂ ಸಂಸ್ಕೃತಿಯ ಹೆಸರಿನಲ್ಲಿ ಇವುಗಳ ಡೋಲನ್ನು ಜೋರಾಗಿ ಬಾರಿಸುತ್ತಿದ್ದಾರೆ. ಅವರು ವರದಕ್ಷಿಣೆಯ ಬಗ್ಗೆ, ಜಾತಿಯ ಬಗ್ಗೆ ಮಾತಾಡದಿದ್ದರೂ ಜಾತಕಗಳು, ಶುಭ ಮುಹೂರ್ತಗಳು, ಯಾಗಯಜ್ಞಗಳು, ಉಪವಾಸಗಳು, ಆಯುರ್ವೇದ ಮತ್ತು ವಾಸ್ತುವಿನ ಬಗ್ಗೆ ಮಾತನಾಡುತ್ತಾ ಪುರಾತನವಾದದ್ದೇ ಚೆನ್ನ ಎಂದು ಸಾಬೀತುಪಡಿಸುತ್ತಿದ್ದಾರೆ. ಜನ ಈ ಭ್ರಾಂತಿಗೆ ಸಂಪೂರ್ಣವಾಗಿ ಗುಲಾಮರಾಗಿದ್ದಾರೆ. ಆದ್ದರಿಂದ ವರದಕ್ಷಿಣೆ ವಿರೋಧಿ ಕಾನೂನು ಕೆಲವರಿಗಂತೂ ಅಗತ್ಯಕ್ತಿಂತ ಹೆಚ್ಚಾಗಿಬಿಟ್ಟಿದೆ.
ಖಾಸಗಿ ಜೀವನದಲ್ಲಿ ಧರ್ಮದ ಕಾಲು ಏಕೆ?
ಸರ್ವೋಚ್ಚ ನ್ಯಾಯಾಲಯ ಮುಸ್ಲಿಂ ದಂಪತಿಗಳಿಗೆ ದತ್ತು ತೆಗೆದುಕೊಳ್ಳುವ ಹಕ್ಕು ನೀಡುವುದರ ಮೂಲಕ ಮುಸ್ಲಿಂ ಮತಾಂಧರಿಗೆ ಹೊಸದೊಂದು ಸಂದೇಶ ನೀಡಿದೆ. ಅಂದಹಾಗೆ ಸುಪ್ರೀಂ ಕೋರ್ಟ್ ಹೇಳಿದ್ದೇನೆಂದರೆ, ಮಗುವನ್ನು ಧರ್ಮಾತೀತ ದತ್ತು ಕಾನೂನಿನ ಪ್ರಕಾರ ದತ್ತು ತೆಗೆದುಕೊಳ್ಳಬೇಕು. ಇಚ್ಛೆ ಇದ್ದರೆ ಮುಸ್ಲಿಂ ಯುವಕ ಯುವತಿಯರು ಇಂಡಿಯನ್ ಮ್ಯಾರೇಜ್ ಆ್ಯಕ್ಟ್ ಪ್ರಕಾರ ಮದುವೆ ಕೂಡ ಆಗಬಹುದು. ಅದನ್ನು `ಸಿವಿಲ್ ಮ್ಯಾರೇಜ್’ ಎಂದೂ ಹೇಳಲಾಗುತ್ತದೆ. ದತ್ತು ತೆಗೆದುಕೊಳ್ಳುವ ಈ ಪ್ರಕ್ರಿಯೆ ಕೂಡ ಇದೇ ಕಾನೂನಿನನ್ವಯ ಆಗುತ್ತದೆ.
ಈವರೆಗೆ ಮುಸ್ಲಿಂ ದಂಪತಿಗಳು ಮಗುವೊಂದನ್ನು ಪೋಷಕರೆಂದಷ್ಟೇ ಸಾಕಬೇಕಾಗುತ್ತಿತ್ತೇ ಹೊರತು ದತ್ತು ತೆಗೆದುಕೊಳ್ಳಲು ಆಗುತ್ತಿರಲಿಲ್ಲ. ಆ ಮಗು ಮುಂದೆ ದೊಡ್ಡವನಾದಾಗ ವಿದೇಶಕ್ಕೆ ಹೋಗಬೇಕಾಗಿ ಬಂದರೆ ಪಾಸ್ ಪೋರ್ಟ್‌ನಲ್ಲಿ ತಂದೆಯ ಹೆಸರು ನಮೂದಾಗುತ್ತಿರಲಿಲ್ಲ. ದತ್ತು ತೆಗೆದುಕೊಂಡ ತಂದೆತಾಯಿ ಮನೆಯಲ್ಲಿ ಆ ಮಗುವಿಗೆ ಯಾವುದೇ ಸಮಾನ ಹಕ್ಕುಗಳು ದೊರೆಯುತ್ತಿರಲಿಲ್ಲ. ಆತ ಆ ಕುಟುಂಬಕ್ಕೆ ಪಿತ್ರಾರ್ಜಿತ ಹಕ್ಕುದಾರನೂ ಆಗುತ್ತಿರಲಿಲ್ಲ.
ಈವರೆಗೆ ಮುಸ್ಲಿಂ ದಂಪತಿಗಳು ಗಾರ್ಡಿಯನ್ ಮತ್ತು ಅಡಾಪ್ಶನ್ ಆ್ಯಕ್ಟ್ ನ ಲಾಭ ಪಡೆಯಲು ಸಾಧ್ಯ ಆಗುತ್ತಿರಲಿಲ್ಲ. ಒಂದು ವೇಳೆ ಮುಸ್ಲಿಂ ವೈಯಕ್ತಿಕ ಕಾನೂನನ್ನು ಬಿಟ್ಟು ಮಗುವನ್ನು ದತ್ತು ತೆಗೆದುಕೊಂಡರೆ ಆ ಮಗು ಅವರದ್ದೇ ಆಗುತ್ತದೆ. ಆದರೆ ಅದರ ಮೇಲೆ ಇಸ್ಲಾಮಿಕ್ ವೈಯಕ್ತಿಕ ಕಾನೂನು ಅನ್ವಯಿಸುತ್ತದೊ ಅಥವಾ ಧಾರ್ಮಿಕೇತರ ವೈಯಕ್ತಿಕ ಕಾನೂನು ಅನ್ವಯಿಸುತ್ತದೊ ಎಂಬುದನ್ನು ಗಮನಿಸಬೇಕಾಗುತ್ತದೆ.
ಒಂದು ವೇಳೆ ಅದು ಧಾರ್ಮಿಕೇತರ ಕಾನೂನಿನ ವ್ಯಾಪ್ತಿಗೆ ಬಂದರೆ ಯಾರ ಜೊತೆಗೆ ವಿವಾಹ ಮಾಡಿಕೊಳ್ಳಲು ಇಸ್ಲಾಂ ಅನುಮತಿ ನೀಡುತ್ತೊ, ಅವರ ಜೊತೆ ಮದುವೆ ಮಾಡಿಕೊಳ್ಳಲು ಇಂಡಿಯನ್ ಮ್ಯಾರೇಜ್ ಆ್ಯಕ್ಟ್ ಅನುಮತಿ ನೀಡುವುದಿಲ್ಲ. ಅದರ ಮೇಲೆ ಪಿತ್ರಾರ್ಜಿತದ ಇಂಡಿಯನ್ ಸಕ್ಸೇಶನ್ ಆ್ಯಕ್ಟ್ ಅನ್ವಯಿಸುತ್ತದೆ, ಮುಸ್ಲಿಂ ಫರೀಯತ್ ಕಾನೂನು ಅಲ್ಲ.
ಮುಲ್ಲಾಗಳು ತಮ್ಮ ಕೈಯಿಂದ ಗ್ರಾಹಕರು ಜಾರಿ ಹೋಗುವುದನ್ನು ನೋಡಿ ಹೌಹಾರಬಹುದು. `ಇಸ್ಲಾಂ ಅಪಾಯದಲ್ಲಿದೆ’ ಎಂದು ಬೊಬ್ಬೆ ಕೂಡ ಹಾಕಬಹುದು.
ಧರ್ಮ ಯಾವುದೇ ಇರಲಿ, ತನ್ನ ಗ್ರಾಹಕರು ಕೈಯಿಂದ ಜಾರಿ ಹೋಗುವುದನ್ನು ಅದು ಇಷ್ಟಪಡುವುದಿಲ್ಲ. ಹಾಗೊಂದು ವೇಳೆ ಹೊರಗೆ ಹೋದವರನ್ನು ಹೊಡೆದು ಬಡಿದು ಮಾಡಿಯಾದರೂ ಅವರನ್ನು ಪುನಃ ವಾಪಸ್ ಕರೆಸಿಕೊಳ್ಳಲು ಯತ್ನಿಸುತ್ತದೆ. ಶಿಯಾ ಸುನ್ನಿ ಮತ್ತು ಸುನ್ನಿ ಅಹಮದೀಯ ವಿವಾದ ಹಾಗೂ ಜಗಳ ಇದರ ಪರಿಣಾಮವೇ ಆಗಿದೆ. ಬೋಹ್ರಾ ಮುಸ್ಲಿಮರು ಸದಾ ಮತಾಂಧತೆಗೆ ಗುರಿಯಾಗುತ್ತಿರುತ್ತಾರೆ. ಇದಕ್ಕೆ ಕಾರಣ ಧರ್ಮ ದುರ್ಬಲವಾಗುತ್ತದೆಂದಲ್ಲ, ಮುಲ್ಲಾಗಳ ಅಂಗಡಿ ವ್ಯಾಪಾರ ಇಲ್ಲದೆ ಬಿಕೊ ಎನ್ನುತ್ತದೆ ಎಂಬ ಕಾರಣದಿಂದ.
ಪ್ರತಿಯೊಂದು ಧರ್ಮ ಜನರ ಖಾಸಗಿ ಜೀವನದಲ್ಲಿ ಆಳವಾಗಿ ಬೇರೂರಿದೆ. ಅದರ ಮುಖಾಂತರವೇ ಯಾರು ಏನನ್ನು ತಿನ್ನಬೇಕು, ಹೇಗೆ ಕುಳಿತುಕೊಳ್ಳಬೇಕು, ಯಾರನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು, ಯಾರನ್ನು ಮದುವೆಯಾಗಬೇಕು, ಹೇಗೆ ಸಾಯಬೇಕು ಎಂಬ ಬಗ್ಗೆ ಮೇಲಿನವನ ಹೆಸರಿನಲ್ಲಿ ಮಾಡಲಾಗುತ್ತದೆ. ಅದು ಜನರ ಖಾಸಗಿ ಜೀವನಕ್ಕೆ ಅನ್ವಯಿಸಬಾರದು. ಮೊದಲನೆಯ ಸಂಗತಿಯೇನೆಂದರೆ ಖುದಾ ಅಥವಾ ಭಗವಾನ್ ಎಂಬುನು ಇಲ್ಲವೇ ಇಲ್ಲ. ಇದ್ದಿದ್ದರೆ ಅನ್ನು ಮುಲ್ಲಾಗಳು, ಪಾದ್ರಿಗಳು, ಪೂಜಾರಿಗಳನ್ನು ತನ್ನ ಏಜೆಂಟರನ್ನಾಗಿ ಮಾಡಿಕೊಳ್ಳುತ್ತಿದ್ದನೆ? ಅವರ ಕೈಯಿಂದ ಲಕ್ಷಾಂತರ, ಕೋಟ್ಯಂತರ ಜನರನ್ನು ಹೀಗೆ ಸಾಯಿಸುತ್ತಿದ್ದನೆ?
ಯಾರನ್ನು ದತ್ತು ತೆಗೆದುಕೊಳ್ಳಬೇಕು, ಯಾರನ್ನು ಮದುವೆಯಾಗಬೇಕು, ಹೇಗೆ ಇರಬೇಕು ಎಂಬುದೆಲ್ಲ ಅವರವರ ಆಂತರಿಕ ವಿಷಯಗಳು. ಇದರಲ್ಲಿ ಸರ್ಕಾರವಾಗಲಿ, ಧರ್ಮವಾಗಲಿ ಹಸ್ತಕ್ಷೇಪ ಮಾಡಬಾರದು. ಯಾವಾಗ ಧರ್ಮದ ಹಿಡಿತ ಸಡಿಲವಾಯಿತೊ ಆಗ ಸರ್ಕಾರ ತನ್ನ ನಿಯಂತ್ರಣ ಬಿಗಿಗೊಳಿಸಲು ಆರಂಭಿಸಿತು. ಈಗ ವಕೀಲರು ಹಾಗೂ ನ್ಯಾಯಾಲಯಗಳು ಹೊಸ ಪೂಜಾರಿ ಮತ್ತು ಮೌಲ್ವಿಗಳಾಗಿಬಿಟ್ಟಿದ್ದಾರೆ. ಅಲ್ಲಿ ಜನರು ಲೆಕ್ಕವಿಲ್ಲದಷ್ಟು ಸಲ ಅಲೆದಾಡಬೇಕಾಗುತ್ತದೆ.
ಖಾಸಗಿ ವಿಷಯಗಳನ್ನು ಜನರಿಗೇ ಬಿಟ್ಟು ಬಿಡಬೇಕು. ಜನರು ಚಪಾತಿ ತಿನ್ನಲಿ ಅಥವಾ ಪಿಜ್ಜಾ, ಸಲ್ವಾರ್ ಧರಿಸಲಿ ಅಥವಾ ಪ್ಯಾಂಟ್, ಹ್ಯಾಟ್ ಹಾಕಿಕೊಳ್ಳಲಿ ಅಥವಾ ಕೂದಲು ತೆಗೆಸಲಿ, ಇದರಲ್ಲಿ ಧರ್ಮದ ಅಥವಾ ಸರ್ಕಾರದ ಹಿಡಿತ ಇರಬೇಕೇ?
ಜನರು ತಮ್ಮ ವಿವೇಕಕ್ಕೆ ತಕ್ಕಂತೆ ಜೀವಿಸಲು ಅವಕಾಶ ಕೊಡಬೇಕು.
ಗಂಡಹೆಂಡತಿಯ ನಡುವೆ ಕಸ ಗುಡಿಸುವವಳು!
ದೇಶದ ರಾಜಕೀಯ ಕಳೆದ ಕೆಲವು ವರ್ಷಗಳಿಂದ ಗಂಡಹೆಂಡತಿಯ ಹಾಗೆ ನಡೆಯುತ್ತಲ್ಲಿತ್ತು. ಒಮ್ಮೆ ಗಂಡ ಅಂದರೆ ಕಾಂಗ್ರೆಸ್ಸಿನ ವರ್ಚಸ್ಸು ಎದ್ದು ಕಾಣುತ್ತಿತ್ತು. ಆಗ ಹೆಂಡತಿ ಅಂದರೆ ಭಾರತೀಯ ಜನತಾ ಪಾರ್ಟಿ ಬಾಯಿ ಮುಚ್ಚಿಕೊಂಡು ಸುಮ್ಮನಿರುತ್ತಿತ್ತು. ಬಳಿಕ ಹೆಂಡತಿಯ ರಾಜ್ಯಭಾರ ನಡೆಯತೊಡಗಿತು. ಆಗ ಗಂಡ ಬ್ಯಾಗ್ ಹೆಗಲಿಗೇರಿಸಿಕೊಂಡು ಸೂಪರ್ ಬಜಾರ್‌ನಿಂದ ಸಾಮಾನು ಎತ್ತಿಕೊಂಡು ಬರಲಾರಂಭಿಸಿದ.
ಈ ಸಲ ಹೆಂಡತಿಯ ರಂಗು ಬದಲಾಗಿದೆ, ವೇಷ ಬದಲಾಗಿದೆ. ಆಕೆ ಕಾರ್ಪೊರೇಟ್ ಮಹಿಳೆಯ ಹಾಗೆ ಹೊಳೆಯುತ್ತ ಬಂದಿದ್ದಾಳೆ, ಗಂಡನಿಗೇ ಸವಾಲು ಹಾಕುತ್ತಿದ್ದಾಳೆ. ಗಂಡನ ಮನೆಯವರು ಸವಾಲು ಎದುರಿಸುವ ನಿಟ್ಟಿನಲ್ಲಿ ದೂರ ದೂರದ ಸಂಬಂಧಿಕರನ್ನು ಒಗ್ಗೂಡಿಸಿ ಹೆಂಡತಿಯನ್ನು ಹಿಮ್ಮೆಟ್ಟಿಸಲು ಯೋಜನೆ ಹಾಕುತ್ತಿದ್ದಾರೆ.
ಒಂದು ವಿಚಿತ್ರ ಸಂಗತಿಯೇನೆಂದರೆ, ಈ ಗಂಡಹೆಂಡತಿಯ ನಡುವೆ ಕಸ ಗುಡಿಸುವವಳು ಅಂದರೆ ಆಮ್ ಆದ್ಮಿ ಪಾರ್ಟಿ ಧುತ್ತೆಂದು ಪ್ರತ್ಯಕ್ಷವಾಗಿದೆ. ತನ್ನ ಹೊರತಾಗಿ ಈ ಮನೆ ಹೇಗೆ ಸುರಳೀತವಾಗಿ ನಡೆಯುತ್ತದೆ ಎಂದು ಆಕೆ ಪ್ರಶ್ನೆ ಮಾಡುತ್ತಿದ್ದಾಳೆ.
ತನ್ನನ್ನು ಕೆಣಕಿದರೆ ತಾನು ಸುಮ್ಮನಿರುವುದಿಲ್ಲ ಎಂದು ಈ ಕಸ ಗುಡಿಸುವವಳು ಗಂಡನಿಗೆ ಎಚ್ಚರಿಕೆ ಕೊಟ್ಟರೆ, ಹೆಂಡತಿಗೂ ಕೂಡ ನೀನು ಏನೂ ಮಾಡುತ್ತಿಲ್ಲ, ಕೇವಲ ಅಧಿಕಾರ ಚಲಾಯಿಸುತ್ತಿದ್ದೀಯಾ ಎಂದು ತಿರುಗೇಟು ಕೊಡುತ್ತಿದ್ದಾಳೆ. ಆಕೆ ಅವರಿಬ್ಬರ ನಡುವೆ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಸತತ ಪ್ರಯತ್ನ ನಡೆಸಿದ್ದಾಳೆ.
ಕಾಂಗ್ರೆಸ್ ಆಡಳಿತದ 10 ವರ್ಷದಲ್ಲಿ ಸುಧಾರಣೆ ಆಯ್ತೋ, ಬಿಟ್ಟಿತೊ ಗೊತ್ತಿಲ್ಲ. ಆದರೆ ಭ್ರಷ್ಟಾಚಾರಂವಂತೂ ಭಾರಿ ಪ್ರಮಾಣದಲ್ಲಿ ಹೆಚ್ಚಿತು. ಜನ ಈ ಬಗ್ಗೆ ಸಾಕಷ್ಟು ನೊಂದಿದ್ದಾರೆ. ಮುಖಂಡರು ಅಪ್ರಾಮಾಣಿಕತೆಯಿಂದ ಗಳಿಸುತ್ತಿರುವ ಅಪಾರ ಪ್ರಮಾಣದ ಹಣ ತಮ್ಮ ಜೇಬಿನಿಂದಲೇ ಹೋಗುತ್ತಿದೆ ಎಂದು ಜನರಿಗೆ ಸ್ಪಷ್ಟವಾಗಿ ಗೊತ್ತಾಗಿಬಿಟ್ಟಿದೆ. ಅವರೀಗ ಕಾಂಗ್ರೆಸ್ಸಿನವರಿಗೆ ಶಿಕ್ಷೆ ಕೂಡ ಕೊಡಲಾರಂಭಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿ ತಾನು ಉತ್ತಮ ಆಡಳಿತ ಕೊಡುತ್ತೇನೆ ಎಂದು ಎಷ್ಟೇ ಹೇಳಿದರೂ ಕೂಡ, ಅದರ ಬೇರುಗಳಲ್ಲಿನ ಯೋಚನೆ ಧರ್ಮ ಮತ್ತು ಹಿಂದೂ ಅಸ್ಮಿತೆಯ ಬಗ್ಗೆಯೇ ಇದೆ. ಈ ಬಗ್ಗೆ ಮನಸೋಲದವರ ಸಂಖ್ಯೆ ಕಡಿಮೆ ಏನಿಲ್ಲ. ಜಗತ್ತಿನಲ್ಲಿ ಯಶಸ್ಸು ಪೂಜೆ ಪುನಸ್ಕಾರಗಳಿಂದಲೇ ದೊರೆಯುತ್ತದೆ ಎಂದು ಹಲವಾರು ಜನ ನಂಬಿದ್ದಾರೆ. ಅದು ಒಳ್ಳೆಯ ಫಸಲು ಇರಬಹುದು, ವ್ಯಾಪಾರ ವಹಿವಾಟಿನಲ್ಲಿ ಲಾಭವೇ ಆಗಿರಬಹುದು. ಗಂಡ ಹೆಂಡತಿಯ ಪ್ರೀತಿ, ಮಕ್ಕಳ ಖುಷಿ ಹೀಗೆ ಏನೇ ಇರಬಹುದು.
ಆಮ್ ಆದ್ಮಿ ಪಾರ್ಟಿಯಂತೂ ಪ್ರಸ್ತುತ ಭ್ರಷ್ಟಾಚಾರ ನಿವಾರಣೆಯ ಬಗೆಗೆ ಮಾತನಾಡುತ್ತಿದೆ. ಆದರೆ ಆಡಳಿತ ಹಾಗೂ ಆರ್ಥಿಕ ನೀತಿಗಳ ಬಗ್ಗೆ ಅದರ ನಿಲುವು ಸ್ಪಷ್ಟವಾಗಿಲ್ಲ. ಇಷ್ಟಂತೂ ಸ್ಪಷ್ಟ, ಅದೇನೆಂದರೆ ಅದರ ಒಲವು ಭ್ರಷ್ಟಾಚಾರದ ಹಣದ ಕುರಿತಾಗಿಯೂ ಇಲ್ಲ, ಧರ್ಮವನ್ನು ಅಸ್ತ್ರವನ್ನಾಗಿಟ್ಟುಕೊಂಡು ತನ್ನ ಬೇಳೆ ಬೇಯಿಸಿಕೊಳ್ಳುವ ಇರಾದೆಯೂ ಅದಕ್ಕಿಲ್ಲ.
ಮುಂದಿನ ಎರಡು ತಿಂಗಳುಗಳ ಕಾಲ ಗಂಡ, ಹೆಂಡತಿ ಮತ್ತು ಆಕೆಯ ಬಗ್ಗೆ ಸಾಕಷ್ಟು ನೋಡಲು, ಕೇಳಲು ಸಿಗುವುದಿದೆ. ಆ ಬಳಿಕ ಯಾರದ್ದು ನಡೆಯುತ್ತೆ, ಯಾರದ್ದು ಇಲ್ಲ ಎಂದು ಈಗಲೇ ಹೇಳಲು ಆಗದು. ಮುಂದೆ ಮನೆ ಒಡೆಯುವ ಸ್ಥಿತಿ ಬಂದರೂ ಅಚ್ಚರಿಪಡಬೇಕಿಲ್ಲ.