400ಕ್ಕೂ ಹೆಚ್ಚು ಅಡುಗೆ ಪುಸ್ತಕಗಳನ್ನು ಬರೆದಿರುವ, ನ್ಯೂಟ್ರಿಷನ್‌ ಎಕ್ಸ್ ಪರ್ಟ್‌, ಮೀಡಿಯಾ ಪರ್ಸನಾಲಿಟಿ, ಟಿ.ವಿ. ಶೋಗಳ ಸೆಲೆಬ್ರಿಟಿ ಜಡ್ಜ್, ವರ್ಲ್ಜ್ ಕುಕ್‌ ಬುಕ್‌ ಫೇರ್‌, ಪ್ಯಾರಿಸ್‌ನಲ್ಲಿ ಬೆಸ್ಟ್ ಏಷ್ಯನ್‌ ಕುಕ್‌ ಬುಕ್‌ ಅವಾರ್ಡ್‌ನಿಂದ ಸಮ್ಮಾನಿತರು. 2001 ರಿಂದ ಪಾಕಕಲಾ ಅಕಾಡೆಮಿ ಮತ್ತು ರೆಸ್ಟೋರೆಂಟ್‌ ನಡೆಸುವ ನೀತಾ ಮೆಹ್ತಾ ಆಹಾರ ಪ್ರಿಯರ ಚಿರಪರಿಚಿತ ಹೆಸರು.

ಕುಕರಿ ಎಕ್ಸ್ ಪರ್ಟ್‌ ಆಗಿ ನೀವು ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಮತ್ತು ರುಚಿಯ ಜೊತೆಗೆ ಆರೋಗ್ಯದ ಖಜಾನೆ ಕೂಡ ಪಡೆದುಕೊಳ್ಳಿ. ಈ ಕುರಿತಾಗಿ ನಾವು ನೀತಾ ಮೆಹ್ತಾರನ್ನು ಮಾತನಾಡಿಸಿದಾಗ ಅವರು ಕೆಲವು ಟಿಪ್ಸ್ ಕೊಟ್ಟರು :

ತರಕಾರಿಗಳನ್ನು ಬೇಯಿಸಿ ಅಥವಾ ಮೈಕ್ರೊವೇವ್ ‌ಮಾಡಿ.

ಆಹಾರದ ರುಚಿ ಹೆಚ್ಚಿಸಲು ಅದರಲ್ಲಿ ಸ್ವಲ್ಪ ಲವಂಗದ ಪುಡಿ ಮತ್ತು ಏಲಕ್ಕಿ ಪುಡಿ ಹಾಕಿ.

ತರಕಾರಿಗಳ ನೈಸರ್ಗಿಕ ರಂಗು ಕಾಪಾಡಿಕೊಳ್ಳಿ. ಹೀಗಾಗಿ ಅನ್ನು ನಿಗದಿತ ಸಮಯದವರೆಗೆ ಮಾತ್ರ ಬೇಯಿಸಿ. ಹೆಚ್ಚು ಹುರಿಯದಿರಿ.

ಆಹಾರದ ಬಣ್ಣವನ್ನು ಗಮನಿಸಿ. ಗೋಬಿ ಕಪ್ಪಗಾಗದಂತೆ ನೋಡಿಕೊಳ್ಳಿ. ಅರಿಶಿನವನ್ನು ಸಕಾಲಕ್ಕೆ, ಸರಿಯಾದ ಸಮಯಕ್ಕೆ ಹಾಕಿ.

ಸಾಧಾರಣ ಚಪಾತಿಗಳನ್ನು ಮಾಡುವುದಕ್ಕಿಂತ ಪಾಲಕ್‌, ಮೆಂತ್ಯ, ಬೇಳೆಯ ಚಪಾತಿಯನ್ನು ಟ್ರೈ ಮಾಡಿ.

ತರಕಾರಿಗಳನ್ನು ಹೆಚ್ಚುವ ಸಣ್ಣಗೆ ಕತ್ತರಿಸದಿರಿ. ಅವುಗಳ ವಿಟಮಿನ್‌ ಹೊರಟುಹೋಗುತ್ತದೆ.

ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ. ಅದನ್ನು ಬೇರೆ ಬೇರೆ ಡಿಶೆಸ್‌ಗಳಲ್ಲಿ ಬಳಸಿಕೊಳ್ಳಲು ಉಪಯೋಗಿಸಿ.

ಮಲ್ಟಿಗ್ರೇನ್‌ ರೊಟ್ಟಿಗಳನ್ನು ತಯಾರಿಸಿ. ಹಿಟ್ಟು ಹಾಗೂ ಸೋಯಾ 1:4ರ ಅನುಪಾತ ಇಟ್ಟುಕೊಳ್ಳಿ. ರೊಟ್ಟಿಯ ಪೌಷ್ಟಿಕತೆ ಹೆಚ್ಚಿಸಲು ಅದರಲ್ಲಿ ವೀಟ್‌ ಬ್ರಾನ್‌ (ಗೋಧಿ ತೌಡು) ಸೇರಿಸಿ.

ಅಡುಗೆ ಸೋಡಾವನ್ನು ಕಡಿಮೆ ಪ್ರಮಾಣದಲ್ಲಿ ಬಳಸಿ. ಇಲ್ಲದಿದ್ದಲ್ಲಿ ಅದರಲ್ಲಿನ ವಿಟಮಿನ್‌ `ಬಿ' ಹೊರಟುಹೋಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ