ಯಾರದೋ ತಪ್ಪು.... ಯಾರಿಗೋ ಶಿಕ್ಷೆ!

ಹೆಂಡತಿಯರ ಆತ್ಮಹತ್ಯೆಗಳ ವಿಷಯದಲ್ಲಿ ಈಗ ಗಂಡಂದಿರಿಗೆ ಕಠಿಣ ಶಿಕ್ಷೆ ನೀಡಲಾಗುತ್ತಿದೆ. ಆದರೆ ಸಾಮಾನ್ಯವಾಗಿ ಸಾಮಾಜಿಕ ಕೆಡುಕುಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಕೋರ್ಟುಗಳು ಈ ಬಗ್ಗೆ ನಿರ್ದಯವಾಗಿ ವರ್ತಿಸುತ್ತಿವೆ. ಮಧ್ಯಪ್ರದೇಶದಲ್ಲಿ ಗೀತಾಬಾಯಿಯ ಮದುವೆ 1993ರಲ್ಲಿ ಆಯಿತು. 1996ರಲ್ಲಿ ಗೋದಿ ಬೆಳೆಗೆ ಸಿಂಪಡಿಸುವ ಕೀಟನಾಶಕವನ್ನು ಕುಡಿದು ಆಕೆ ಆತ್ಯಹತ್ಯೆ ಮಾಡಿಕೊಂಡಳು. ಗೀತಾಳ ಗಂಡ ಭೂಪೇಂದ್ರ ಸಿಂಗ್‌ ಹತ್ತು ಸಾವಿರ ರೂ. ಕೇಳಿದ. ನಾನು ಅದನ್ನು ಕೊಡಲಾಗಲಿಲ್ಲ. ಅವನು ಗೀತಾಳನ್ನು ಪೀಡಿಸತೊಡಗಿದ. ಅದರಿಂದಾಗಿ ಅವಳು ಆತ್ಮಹತ್ಯೆ ಮಾಡಿಕೊಂಡಳು ಎಂದು ಗೀತಾಳ ಅಪ್ಪ ಆರೋಪಿಸಿದರು.

ಮದುವೆಯಾಗಿ 7 ವರ್ಷದೊಳಗೆ ಗೀತಾಬಾಯಿಯ ಸಾವು ಅನುಮಾನಾಸ್ಪದವಾಗಿ ಆಗಿದ್ದರಿಂದ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 498ಎ, 304 ಮತ್ತು 306ರ ಅಡಿಯಲ್ಲಿ ಭೂಪೇಂದ್ರನನ್ನು ದೋಷಿ ಎಂದು ನಿರ್ಧರಿಸಿ 10 ವರ್ಷಗಳ ಶಿಕ್ಷೆ ವಿಧಿಸಲಾಯಿತು. ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯ ಶಿಕ್ಷೆಯನ್ನು ಖಾಯಂ ಆಗಿಸಿತು. ಭೂಪೇಂದ್ರನ ಬದುಕಂತೂ ಹಾಳಾಯಿತು. 2014ರಲ್ಲಿ ಅಪೀಲುಗಳ ನಂತರ ಅವನು ಅನೇಕ ವರ್ಷಗಳನ್ನು ಜೈಲುಗಳಲ್ಲಿ ಕಳೆಯಬೇಕಾಗಿದೆ. 18 ವರ್ಷಗಳಂತೂ ಕೋರ್ಟುಗಳು ಹಾಗೂ ವಕೀಲರೊಂದಿಗೆ ಓಡಾಟದಲ್ಲಿ ಕಳೆದುಹೋದ. ಹೆಂಡತಿಯಂತೂ ಸತ್ತುಹೋದಳು.

ಪತಿ ಪತ್ನಿಯರ ವಿವಾದಗಳಂತೂ ಯಾವಾಗಲೂ ಇದ್ದಿದ್ದೇ. ನಮ್ಮ ಧರ್ಮಗ್ರಂಥಗಳಂತೂ ಇವುಗಳಿಂದಲೇ ತುಂಬಿವೆ. ದಶರಥ ಕೈಕೇಯಿಯರ ವಿವಾದ ಇರಬಹುದು, ಸೀತಾ ಅಯೋಧ್ಯೆಗೆ ಹಿಂತಿರುಗಿದ ನಂತರ ರಾಮ ಅವಳನ್ನು ಕಾಡಿಗೆ ಕಳಿಸಿದ್ದು ಇರಬಹುದು. ದ್ರೌಪದಿ ಗಂಡಂದಿರೊಂದಿಗೆ ವನವಾಸ ಮಾಡಿದ್ದು ಅಥವಾ ಇಂದಿರಾಗಾಂಧಿಗೆ ಪತಿ ಫಿರೋಜ್‌ ಗಾಂಧಿಯೊಂದಿಗಿನ ವಿವಾದ. ಪರಸ್ಪರ ವಿವಾದ ಹೊಸ ವಿಷಯವೇನಲ್ಲ. ಈ ವಿವಾದಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಅಥವಾ ಮಾಡಿಕೊಳ್ಳುತ್ತೇನೆಂದು ಬೆದರಿಸುವುದು ಅತಿಯಾಗುತ್ತದೆ. ನರೇಂದ್ರ ಮೋದಿಯವರ ಶಬ್ದಗಳಲ್ಲಿ ಹೇಳುವುದೆಂದರೆ, `ಶಶಿ ತರೂರ್‌ರ 50 ಕೋಟಿ ರೂ.ಗಳ ದುಬಾರಿ ಪತ್ನಿ' ಆತ್ಮಹತ್ಯೆ ಮಾಡಿಕೊಂಡರು.

ಪತಿಪತ್ನಿಯರ ವಿವಾದಗಳಲ್ಲಿ ಆತ್ಯಹತ್ಯೆ ಮಾಡಿಕೊಂಡರೆ ಪತಿ ಹಾಗೂ ಅವನ ಮನೆಯವರಿಗೆ ಅನ್ಯಾಯ ಉಂಟಾಗುತ್ತದೆ. ಒಂದು ಜೀವಕ್ಕಾಗಿ ಇತರರ ಜೀವನಕ್ಕೆ ಹಾನಿಯುಂಟು ಮಾಡುವುದು ತಪ್ಪು.

ಪತಿ ಪತ್ನಿಯರ ಸಂಬಂಧ ಪ್ರೀತಿ ಹಾಗೂ ಪರಸ್ಪರ ವಿಶ್ವಾಸದ್ದಾಗಿದೆ. ಎಲ್ಲ ರೀತಿಯ ಮೇಲು ಕೀಳು ಭಾವನೆ ನಡೆಯುತ್ತಿರುತ್ತದೆ. 3 ಬಾರಿ ತಲಾಕ್‌ ಎಂದು ಹೇಳಿ ದಾಂಪತ್ಯವನ್ನು ಮುರಿದುಕೊಳ್ಳುವ ಹಕ್ಕು ಕೊಡುವುದು ತಪ್ಪು. ಹಾಗೆಯೇ ಕೊಲ್ಲುತ್ತೇನೆಂದು ಅಥವಾ ಸಾಯುತ್ತೇನೆಂದು ಬೆದರಿಕೆ ಹಾಕುವುದೂ ತಪ್ಪು. ಇಸ್ಲಾಮಿ ಕಾನೂನಿನಷ್ಟೇ ಹೊಸ ಕಾನೂನು ಕೂಡ ಸರಿಯಲ್ಲ. ಎರಡೂ ಅನೇಕ ಜೀವಗಳಿಗೆ ಹಾನಿ ತರುತ್ತದೆ. ಅಪರಾಧ ಎಷ್ಟೇ ಆಗಿರಲಿ ಅಪರಾಧಕ್ಕೆ ಹೋಲಿಸಿದರೆ ಎಷ್ಟೋ ಪಟ್ಟು ಶಿಕ್ಷೆ ನೀಡಲಾಗುತ್ತಿದೆ.

ನಮ್ಮ ದೇಶದಲ್ಲಿ ಸಮಾಜ ಸುಧಾರಣೆಯನ್ನು ಕಾನೂನುಗಳು ಮತ್ತು ಕೋರ್ಟುಗಳಿಗೆ ಹೊಂದಿಸುತ್ತಿರುವ ಪ್ರಯತ್ನಗಳು ತಪ್ಪು. ನಮ್ಮ ವಿಚಾರ ಬದಲಾಗುವುದರಿಂದ ಸಮಾಜ ಸುಧಾರಣೆ ಉಂಟಾಗುತ್ತದೆ. ಪೊಲೀಸ್‌ ಆ್ಯಕ್ಷನ್‌ನಿಂದಲ್ಲ. ವರದಕ್ಷಿಣೆ ವಿರೋಧಿ ಆಂದೋಲನ ಅಥವಾ ಜಾತಿ ನಿಂದನೆಗಳಿಗೆ ಕಠಿಣ ಕಾನೂನು ಮಾಡಿ ಆ ಕಾನೂನುಗಳನ್ನು ಬ್ಲ್ಯಾಕ್‌ ಮೇಲ್‌ನ ಅಸ್ತ್ರವನ್ನಾಗಿ ಮಾಡಿಕೊಳ್ಳಲಾಗಿದೆ. ಸಮಾಜ ಎಲ್ಲಿದೆಯೋ ಅಲ್ಲೇ ನಿಂತುಬಿಟ್ಟಿದೆ. ವರದಕ್ಷಿಣೆ ತೆಗೆದುಕೊಳ್ಳಲಾಗುತ್ತಿದೆ ಹಾಗೂ ಕೊಡಲಾಗುತ್ತಿದೆ. ಮನೆಯಲ್ಲಿ ಸೊಸೆ ಏನು ತಂದಳು, ಯಾರಿಗಾಗಿ ತಂದಳು ಎಂಬುದನ್ನು ಲೆಕ್ಕ ಹಾಕಲಾಗುತ್ತಿದೆ. ಇವುಗಳಲ್ಲಿ ಈಗ ಉತ್ತರಾಧಿಕಾರದ ಕಾನೂನುಗಳಲ್ಲಿ ಸುಧಾರಣೆಯಾಗಿರುವುದರಿಂದ ಪತ್ನಿಗೆ ತಾಯಿ ತಂದೆಯರ ಆಸ್ತಿಯಲ್ಲಿ ಸಿಗುವ ಪಾಲನ್ನೂ ಲೆಕ್ಕ ಹಾಕಲಾಗುತ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ