ದಂತ ವೈದ್ಯೆ, ಲಂಡನ್‌ನಲ್ಲಿ ಪ್ರಾಕ್ಟೀಸ್‌ ಮಾಡಿದ ಅನುಭವ, ವೈದ್ಯಕೀಯ ಕ್ಷೇತ್ರಕ್ಕೂ ಸಿನಿಮಾರಂಗಕ್ಕೂ ಅಜಗಜಾಂತರ. ಆದರೆ ಸಿನಿಮಾರಂಗ ಬಿಡಬೇಕಲ್ಲ…. ಹೇಗಾದರೂ ಆಕರ್ಷಿಸಿ ಕರೆತರುತ್ತದೆ. ಹಾಗೆ ಬಂದವರೇ ಶಿಲ್ಪಾ ರಮೇಶ್‌ ರಮಣಿ, `ಫೇರ್‌ ಅಂಡ್ ಲವ್ಲಿ’ ಚಿತ್ರದ ನಿರ್ಮಾಪಕಿ. ತೆರೆಗೆ ಬರಲು ರೆಡಿಯಾಗಿರುವ ಈ ಚಿತ್ರವನ್ನು ರಘುರಾಮ್ ನಿರ್ದೇಶಿಸಿದ್ದಾರೆ. ತಮ್ಮ ಹೊಸ ಚಿತ್ರದ ಬಗ್ಗೆ ಮಾತನಾಡಲು ಭೇಟಿಯಾದ ಶಿಲ್ಪಾ ನಿರ್ಮಾಪಕಿಯಾದ ಅನುಭವವನ್ನು ಹಾಗೂ `ಫೇರ್‌ ಅಂಡ್‌ ಲವ್ಲಿ’ ಚಿತ್ರದ ಬಗ್ಗೆ ಗೃಹಶೋಭಾಳಿಗಾಗಿ ಮಾತನಾಡಿದ್ದಾರೆ :

ಹೇಗಿದೆ ನಿರ್ಮಾಪಕಿಯಾಗಿದ್ದು?

ನನಗಿದು ಮೊದಲ ಚಿತ್ರವಲ್ಲ. `ದೇವ್ S/O ಮುದ್ದೇಗೌಡ’ ಚಿತ್ರಕ್ಕೆ ನಾವು ಹಣ ಹಾಕಿದ್ವಿ ಹಾಗಾಗಿ ನಾವು ಈ ಚಿತ್ರದ ನಿರ್ಮಾಪಕರಾದೆವು. ಇಂದ್ರಜಿತ್‌ ಲಂಕೇಶ್‌ ಅವರು ನಿರ್ದೇಶನ ಮಾಡಿದ್ರು. ಈ ಚಿತ್ರ ತೆಲುಗಿಗೆ ಡಬ್‌ ಆಗುವುದಕ್ಕೆ ಎಲ್ಲ ರೀತಿ ಸಹಕಾರ ನೀಡಿದ್ದು ರಘುರಾಮ್ ಅವರು. ಹಾಗಾಗಿ ಅವರ ಪರಿಚಯವಾಯಿತು. ಆಗಷ್ಟೇ `ಚೆಲುವೆಯೇ ನಿನ್ನ ನೋಡಲು’ ಚಿತ್ರ ಮಾಡಿದ್ದರು. ಪ್ರಮೋಶನ್‌ಗಾಗಿ ನಮ್ಮಲ್ಲಿ ಬಂದಿದ್ದರು. ರಘು ತುಂಬಾನೆ ಕ್ಲೋಸ್‌ ಆದರು. ಮೂರ್ನಾಲ್ಕು ಕಥೆ ತಂದು ಸಿನಿಮಾ ಮಾಡಬೇಕೆಂದು ತಿಳಿಸಿದಾಗ ನಾವು ಆ ಕ್ಷಣದಲ್ಲಿ ಸಿನಿಮಾ ನಿರ್ಮಾಣವೇ ಬೇಡವೆಂದು ನಿರ್ಧರಿಸಿ ಬಿಟ್ಟಿದ್ದೆವು. ಆದರೆ ರಘುರಾಮ್ ಅವರ ಕಾಂಟ್ಯಾಕ್ಟ್ ಮಾತ್ರ ಹಾಗೆಯೇ ಇತ್ತು. ಇದೇ ಮುಂದಕ್ಕೆ `ಫೇರ್‌ ಅಂಡ್‌ ಲವ್ಲಿ’ ಚಿತ್ರ ನಿರ್ಮಾಣಕ್ಕೆ ನಾಂದಿಯಾಯಿತು.

`ಫೇರ್ಅಂಡ್ಲವ್ಲಿಚಿತ್ರ ನಿರ್ಮಿಸಲು ಕಾರಣ?

ರಘುರಾಮ್ ಅವರು ಪತ್ರಕರ್ತರು ಹಾಗೂ ಕಥೆಗಾರರೂ ಆಗಿದ್ದ ಯತಿರಾಜ್‌ ಅವರನ್ನು ಕರ್ಕೊಂಡು ಬಂದರು. ಯತಿರಾಜ್‌ ತಮ್ಮ ಬಳಿ ಇದ್ದ ಕಥೆಯನ್ನು ಹೇಳಿದರು. ಐದು ನಿಮಿಷದಲ್ಲಿ ಕಥೆ ಓ.ಕೆ. ಮಾಡಿದೆ. ರಿಸ್ಕ್ ತಗೊಂಡು ಈ ಸಿನಿಮಾ ಮಾಡೇ ಮಾಡ್ತೀನಿ ಅಂತ ನಿರ್ಧರಿಸಿದೆ. ರಘು ಅವರೇ ಉಳಿದೆಲ್ಲ ತಯಾರಿ ಮಾಡಿಕೊಂಡರು. ಬಹಳ ಯೋಚಿಸಿ ಹಣ ಖರ್ಚು ಮಾಡಿದ್ದೇವೆ. ಕಷ್ಟಪಟ್ಟು ಸಂಪಾದಿಸಿದ ಹಣವಿದು. ಕಥೆಯ ಒಂದು ಲೈನ್‌ ಕೇಳಿದ್ದ ನನಗೆ ರಘು ಮತ್ತು ಆನಂದ್‌ ಚಿತ್ರಕಥೆ, ಜೊತೆಗೆ ಕಂಪ್ಲೀಟ್ ಸ್ಕ್ರಿಪ್ಟ್ ತಗೊಂಡು ಬಂದಾಗ ನನಗಂತೂ ಆಶ್ಚರ್ಯವಾಗಿತ್ತು. ಕಥೆಗೆ ಒಳ್ಳೆ ಶೇಪ್‌ ಕೊಟ್ಟಿದ್ದರು. ಬ್ಯೂಟಿಫುಲ್ ಕಥೆ, ಅಷ್ಟೇ ಚೆನ್ನಾಗಿ ನಿರೂಪಣೆ ನೀಡಿದ್ದಾರೆ ರಘು ಆನಂದ್‌. ಇಡೀ ಚಿತ್ರದ ಜವಾಬ್ದಾರಿ ರಘು ಹೊತ್ತುಕೊಂಡು ಬಹಳ ಶ್ರಮಹಿಸಿ ಸಿನಿಮಾ ಮಾಡಿದ್ದಾರೆ. ನನಗಂತೂ ರಘು ಅವರ ಜೊತೆ ಕೆಲಸ ಮಾಡಿದ್ದೇ ಒಂದು ಒಳ್ಳೆಯ ಅನುಭವ.

`ಫೇರ್ಅಂಡ್ಲವ್ಲಿ‘  ಚಿತ್ರಕ್ಕಾಗಿ ನಿರ್ಮಾಪಕಿಯಾಗಿ ನಿಮ್ಮ ಕಾಂಟ್ರಿಬ್ಯೂಷನ್‌?

ರಘು ಅವರು ಎಲ್ಲಾ ಜವಾಬ್ದಾರಿ ತೆಗೆದುಕೊಂಡಿದ್ದರು. ಅವರಿಂದಲೇ ನಾವು ಅನೇಕ ಜನರ ಕಾಂಟ್ಯಾಕ್ಟ್ಸ್ ಬೆಳೆಸಿಕೊಂಡೆ. ರಘುಗೆ ತುಂಬಾ ಒಳ್ಳೆ ಕಾಂಟ್ಯಾಕ್ಟ್ಸ್ ಇದೆ. ನಾನು ನಿರ್ಮಾಪಕಿಯಾಗಿ ಹಣ ಹೂಡಿ ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಸಿನಿಮಾದ ಪ್ರತಿಯೊಂದು ಕೆಲಸದಲ್ಲೂ ಇನ್‌ವಾಲ್ವ್ ಆಗುತ್ತಿದ್ದೆ. ಚಿತ್ರೀಕರಣವಿರಲಿ, ಹಾಡಿನ ಧ್ವನಿಮುದ್ರಣ, ಕಾಸ್ಟ್ಯೂಮ್, ಲೊಕೇಶನ್‌ಎಲ್ಲದರಲ್ಲೂ ಆಸಕ್ತಿ ವಹಿಸುತ್ತಿದ್ದೆ. ನನಗೆ ಕೆಲಸ ಗೊತ್ತಿಲ್ಲದಿದ್ದರೂ ನೋಡಿ ಕಲಿತುಕೊಳ್ಳುತ್ತಿದ್ದೆ. ನನಗೇನಾದರೂ ಅನುಮಾನವಿದ್ದರೆ ಕೂಡಲೇ ಕೇಳುತ್ತಿದ್ದೆ. ಯಾವುದಾದರೂ ಸೀನ್‌ ಚೆನ್ನಾಗಿ ಬಾರದೇ ಹೋದಾಗ ಡಿಸ್ಕಸ್‌ ಮಾಡ್ತಿದ್ದೆ. ಪ್ರೇಮ್ ಅವರನ್ನೇ ಹೀರೋ ಆಗಿ ತೆಗೆದುಕೊಳ್ಳಬೇಕೆಂಬುದು ನನ್ನ ಸಜೆಷನ್‌. ಶ್ವೇತಾ ಶ್ರೀವಾತ್ಸವ್ ನನಗಿಂತ ಮೊದಲೇ ಈ ಕಥೆಯನ್ನು ಕೇಳಿ ಓ.ಕೆ ಮಾಡಿದ್ದರಂತೆ. ಹಾಗಾಗಿ ಆಕೆ ಡೇಟ್ಸ್ ಮೊದಲೇ ರಘು ಬಳಿ ಇತ್ತು. ನನಗೂ ಆಕೆ ತುಂಬಾ ಇಷ್ಟವಾದ್ರು. ಪ್ರೇಮ್ ಶ್ವೇತಾ ಜೋಡಿ ಬ್ಯೂಟಿಫುಲ್ ಆಗಿ ಕಾಣುತ್ತೆ.

IMG_3878

ಚಿತ್ರಕ್ಕೆ ಸ್ಟೋರಿನೇ ಹೀರೋ. ಹೆಜ್ಜೆ ಹೆಜ್ಜೆಗೂ ಹೊಸ ತಿರುವು ಪಡೆದುಕೊಳ್ಳುತ್ತದೆ. ಹಾಗಾಗಿ ಕಥೆ ಬಗ್ಗೆ ಏನೂ ಹೇಳುವಂತಿಲ್ಲ. ಸಿನಿಮಾ ನಿರ್ಮಾಪಕಿಗಿಂತ ನಾನು ಒಬ್ಬ ಒಳ್ಳೆ ವಿಮರ್ಶಕಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆ. ಹಾಗಂತ ನಾನು ಪತ್ರಕರ್ತೆಯಲ್ಲ, ಸಿನಿಮಾ ಬಗ್ಗೆ ನೇರವಾಗಿ ಇದ್ದದ್ದನ್ನು ಇದ್ದಂತೆ ಹೇಳಬಲ್ಲೆ. ಹಾಗಾಗಿ ಸೆಟ್‌ನಲ್ಲಿ ನಾನು ಸುಮ್ಮನಿದ್ದರೆ ರಘು ಅವರು ರೇಗಿಸುತ್ತಿದ್ದರು. ಮೇಡಂ ನೀವು ತಲೆ ತಿಂತಾ ಇರಬೇಕು. ಇಲ್ಲದೇ ಹೋದರೆ ಬೋರ್‌ ಆಗುತ್ತೆ ಅಂತ. ಸಾಮಾಜಿಕ ಕಳಕಳಿ ಇರೋದ್ರಿಂದ ಒಳ್ಳೆದೊಂದು ಮೆಸೇಜ್‌ ಕೂಡಾ ಇದೆ. ನಾನು ಹಣ ಮಾಡದಿದ್ದರೂ ಪರವಾಗಿಲ್ಲ, ಸಿನಿಮಾ ಬಗ್ಗೆ ಹತ್ತು ಜನ ಒಳ್ಳೆ ಮಾತುಗಳನ್ನು ಹೇಳಿದರೆ ಸಾಕು. ಸಿನಿಮಾದ ಎಲ್ಲಾ ವಿಭಾಗಗಳಲ್ಲೂ ಆಸಕ್ತಿ ವಹಿಸಿ ಕಲಿಯುವ ಪ್ರಯತ್ನ ಮಾಡಿದ್ದೇನೆ.

ರಘು ನನ್ನ ಗುರು. ಒಬ್ಬ ನಿರ್ಮಾಪಕಿಯಾಗಿ ನನಗೆ ಇಡೀ ಚಿತ್ರದ ಸೀನ್‌ ಬೈ ಸೀನ್‌ ಗೊತ್ತಿದೆ. ನಮ್ಮ ಮೊದಲ ಚಿತ್ರ ಮಾಡುವಾಗ ಈ ರೀತಿ ಅನುಭವವಾಗಿರಲಿಲ್ಲ.

ಹಾಗಾದರೆ ನಿರ್ದೇಶಕಿಯಾಗುವ ಆಸೆ ಇದೆಯಾ?

ಅಯ್ಯೋ… ಎಲ್ರೂ ಹಾಗೇ ಕೇಳ್ತಾರೆ. ನಿರ್ದೇಶಕಿಯಾಗಲು ಇನ್ನು ಸಾಕಷ್ಟು ಟೈಮ್ ಬೇಕಾಗುತ್ತೆ. ಆದರೆ ನನಗೆ ಕಾನ್ಛಿಡೆನ್ಸ್ ಇದೆ. ಏಕೆಂದರೆ ನಾನೊಬ್ಬ ಬರಹಗಾರ್ತಿ. ಜೊತೆಗೆ ಎಲ್ಲಾ ಬಗೆಯ ಸಿನಿಮಾಗಳನ್ನೂ ನೋಡುತ್ತೇನೆ.

`ಫೇರ್ಅಂಡ್ಲವ್ಲಿಚಿತ್ರದ ಬಜೆಟ್‌?

ಮೂರು ಕೋಟಿ ದಾಟಿದೆ ಅಂತ ರಫ್‌ ಆಗಿ ಹೇಳಬಹುದು. ಸಿನಿಮಾಗೆ ಏನು ಬೇಕೋ ಅದೆಲ್ಲವನ್ನೂ ಕೊಟ್ಟಿದ್ದೇನೆ.

ನಿಮ್ಮ ಸಿನಿಮಾ ಸಂಗೀತದ ಬಗ್ಗೆ?

ಹರಿಕೃಷ್ಣ ಚೆನ್ನಾಗಿರೋ ಹಾಡುಗಳನ್ನು ಕೊಟ್ಟಿದ್ದಾರೆ. ನಮ್ಮ ಪಾಲಿಗೆ ಹರಿ ಕೂಡಾ ಗಾಡ್‌ ಫಾದರ್‌. ಹರಿ ರಘು ಅವರ ಗೆಳೆಯರು. ಹರಿ ಕೂಡಾ ಮುಖ್ಯವಾದ ಸಲಹೆ ನೀಡಿದ್ದಾರೆ. ಒಂದು ಹಾಡನ್ನು ಕೂಡಾ ಬರೆದಿದ್ದಾರೆ. ಕ್ಲೈಮ್ಯಾಕ್ಸ್ ಸಾಂಗ್‌ ಅಂತೂ ಫಿಂಟಾಸ್ಟಿಕ್ ಆಗಿದೆ! ಹಳೆಯ ಹಾಡಿನಂತಿದೆ, ಎಲ್ಲರಿಗೂ ತುಂಬಾ ಇಷ್ಟವಾಗಿದೆ. ಇಂಟಡ್ರಕ್ಷನ್‌ ಸಾಂಗ್‌ಇನ್ನು ಚಿತ್ರೀಕರಣವಾಗಬೇಕಿದೆ. ಚಿತ್ರವನ್ನು ಸಾಧ್ಯವಾದಷ್ಟೂ ಇದೇ ತಿಂಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್‌ ಹಾಕಿಕೊಂಡಿದ್ದೀವಿ.

ಪ್ರೇಮ್, ಶ್ವೇತಾ ಅಭಿನಯ ಹೇಗಿದೆ?

ಇಬ್ಬರೂ ಸರಿಸಮನಾಗಿ ನಟಿಸಿದ್ದಾರೆ. ನಾನು ಆ್ಯಕ್ಟ್ ಮಾಡಿದ್ದಕ್ಕೆ ಮೇಡಂ ರಿಯಾಕ್ಟ್ ಮಾಡಲಿಲ್ಲ ಎಂದು ಪ್ರೇಮ್ ಹೇಳುತ್ತಿದ್ದರು. ಶ್ವೇತಾ ಅವರಂತೂ ತುಂಬಾ ಬ್ಯೂಟಿಫುಲ್ ಆಗಿ ಪಾತ್ರ ನಿರ್ವಹಿಸಿದ್ದಾರೆ. ಕಾಸ್ಟ್ಯೂಮ್ ನಲ್ಲೂ ಕೂಡಾ ಶ್ವೇತಾ ಆಸಕ್ತಿ ವಹಿಸಿ ಸಿದ್ಧಪಡಿಸಿದ್ದಾರೆ. ಅಭಿನಯದಲ್ಲಿ ಇಬ್ಬರದೂ ನರಸ ಕಾಣಬಹುದು.

ವೈದ್ಯಕೀಯ ವೃತ್ತಿಗೆ ಸಮಯ ಸಿಗುತ್ತಾ?

ದಂತ ವೈದ್ಯಕೀಯ ಬಿಟ್ಟು ಸುಮಾರು ವರ್ಷಗಳಾಯ್ತು. ಏಕೆಂದರೆ ಸಂಸಾರ, ಮಕ್ಕಳು ಎಲ್ಲವನ್ನು ನೋಡಿಕೊಳ್ಳಬೇಕಿತ್ತು. ಈಗ ಸಿನಿಮಾ ನಿರ್ಮಾಣವನ್ನೇ ಗಂಭೀರವಾಗಿ ಪರಿಗಣಿಸುತ್ತಿದ್ದೇನೆ.

ಸರಸ್ವತಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ