ಗಜಕೇಸರಿ : ಆನೆ ಪ್ರಿಯ ಯಶ್‌

ಭಾರಿ ನಿರೀಕ್ಷೆಯ `ಗಜಕೇಸರಿ’ ಚಿತ್ರ ತೆರೆಗೆ ಬರಲು ರೆಡಿಯಾಗ್ತಿದೆ. ಅದ್ಧೂರಿ ನಿರ್ಮಾಣದ ಈ ಚಿತ್ರದಲ್ಲಿ ಯಶ್‌ನ ಗೆಟಪ್‌ ಈಗಾಗಲೇ ಭಾರಿ ಸುದ್ದಿ ಮಾಡುತ್ತಿದೆ. ಜೋರ್ಡಾನ್‌ನಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಖ್ಯಾತ ಛಾಯಾಗ್ರಾಹಕ ಕೃಷ್ಣ (ಮುಂಗಾರು ಮಳೆ) ಅವರ ಮೊದಲ ನಿರ್ದೇಶನದ ಚಿತ್ರವಿದು. ಯಶ್‌ ಜೋಡಿಯಾಗಿ ಅಮೂಲ್ಯ ಕಾಣಿಸಿಕೊಳ್ಳುತ್ತಾಳೆ. ಈ ಚಿತ್ರಕ್ಕಾಗಿ ಹದಿನೈದು ಕೆ.ಜಿ. ತೂಕ ಇಳಿಸಿ ಇನ್ನಷ್ಟು ಸ್ಲಿಮ್ಮಾಗಿ ಸುಂದರವಾಗಿ ಕಾಣಿಸುತ್ತಾಳೆ ಅಮೂಲ್ಯ. ಯಶ್‌ ಆನೆ ಮೇಲೆ ನಿಂತಿರುವ ಸ್ಟಿಲ್ ‌ನೋಡಿದಾಗ ಇದೆಲ್ಲಾ ಹೇಗೆ ಸಾಧ್ಯವಾಯ್ತು ಅಂತ ಕೇಳಿದರೆ, “ಚಿತ್ರೀಕರಣಕ್ಕೆ ಮೊದಲು ಆನೆಯನ್ನು ಗೆಳೆಯನನ್ನಾಗಿ ಮಾಡಿಕೊಂಡೆ. ಅದಕ್ಕೆ ಬೆಲ್ಲ ತಿನ್ನಿಸುತ್ತಿದ್ದೆ. ಅದರ ಜೊತೆಯಲ್ಲೇ ಕಾಲ ಕಳೆಯುತ್ತಾ ಸ್ನೇಹ ಬೆಳೆಸಿದೆ. ಹಾಗಾಗಿ ನಾನು ಆನೆಯೊಂದಿಗೆ ಕ್ಯಾಮೆರಾ ಎದುರಿಸುವಾಗ ಅದು ಶಾಂತವಾಗಿಯೇ ಭಾಗವಹಿಸುತ್ತಿತ್ತು. ನನಗೆ ಆನೆ ಅಂದ್ರೆ ತುಂಬಾನೆ ಇಷ್ಟ. ಪ್ರತಿನಿತ್ಯ ಅದರ ಮುಖ ನೋಡಿದಾಗ ಒಂದು ರೀತಿ ರೋಮಾಂಚನವಾಗ್ತಿತ್ತು. ಫೈಟ್‌ ಮಾಡುವಾಗಲೂ ಸಹ ಆನೆ ನನ್ನೊಂದಿಗಿರುತ್ತದೆ,” ಎನ್ನುವ ಯಶ್‌ ಗಜಕೇಸರಿ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ನ್ಯಾ ಕೈಯಲ್ಲಿ ಮಾಣಿಕ್ಯ

_O5A6253

ಸಿನಿಮಾರಂಗಕ್ಕೆ ಬರುವಾಗಲೇ ಕೈಯಲ್ಲಿ ಮಾಣಿಕ್ಯ ಇಟ್ಕೊಂಡು ಬಂದಂಥ ನಟಿ ರನ್ಯಾ ರಾವ್. `ಮಾಣಿಕ್ಯ’ ಚಿತ್ರ ಯಶಸ್ವಿಯಾಗಿ ಓಡುತ್ತಿದೆ. ರನ್ಯಾ ಕೂಡಾ ಯಶಸ್ಸಿನ ಗುಂಗಿನಲ್ಲಿ ಹಾರಾಡುತ್ತಿದ್ದಾಳೆ. ಕನ್ನಡದ ಹುಡುಗಿಯರನ್ನೇ ತೆಗೆದುಕೊಳ್ಳಬೇಕು ಅಂತ ಸುದೀಪ್‌ ನಾಯಕಿಯ ತಲಾಷೆಯಲ್ಲಿದ್ದಾಗ ರನ್ಯಾಳ ಫೋಟೋ ಕಂಡಕೂಡಲೇ ಈ ಹುಡುಗಿಯನ್ನು ಕರೆಸಿ, ಅಭಿನಯ ಬಾರದಿದ್ದರೂ ಮಾಡಿಸೋಣ ಎಂದರಂತೆ. `ಸುದೀಪ್‌ ನನ್ನ ಗುರು’ ಎಂದು ಹೇಳುವ ರನ್ಯಾ `ಮಾಣಿಕ್ಯ’ ಚಿತ್ರದಲ್ಲಿ ಅದ್ಭುತವಾಗಿ ನಟಿಸಿ ತೋರಿಸಿದ್ದಾಳೆ. `ನಿಜಕ್ಕೂ ನಾನು ಅದೃಷ್ಟವಂತೆ! ಸುದೀಪ್‌ ಅವರ ಸಿನಿಮಾದಲ್ಲಿ ಅವರ ಜೊತೆ ನಟಿಸುವ ಅವಕಾಶ ಸಿಕ್ಕಿತು,” ಎನ್ನುತ್ತಾಳೆ. ಕಾಲೇಜು ಕಾಂಪೌಂಡ್‌ನಿಂದ ನೇರವಾಗಿ ಹೋಗಿ ಕ್ಯಾಮೆರ ಮುಂದೆ ನಿಂತರೆ ಹೇಗಾಗಬಾರದು? ಅದೇ ರೀತಿ ರನ್ಯಾ ಮೊದಲ ಬಾರಿಗೆ ಕ್ಯಾಮೆರಾ ಎದುರಿಸುವಾಗ ಅನುಭವಿಸಿದ್ದಾಳೆ. `ಮಾಣಿಕ್ಯ’ ಬಿಡುಗಡೆಯಾಗಿ ಯಶಸ್ಸು ಕಾಣುತ್ತಿದ್ದಂತೆ ರನ್ಯಾಳಿಗೆ ಅವಕಾಶಗಳ ಸುರಿಮಳೆ. ಆದರೆ ಯಾವುದನ್ನೂ ಒಪ್ಪಿಕೊಳ್ಳುತ್ತಿಲ್ಲವಂತೆ. ನನ್ನ ಅಭಿನಯದ ಬಗ್ಗೆ ಜನ ಹೇಗೆ ಪ್ರತಿಕ್ರಿಯೆ ಕೊಡುತ್ತಾರೆಂದು ತಿಳಿದ ನಂತರವೇ ಎರಡನೇ ಚಿತ್ರವನ್ನು ಒಪ್ಪಿಕೊಳ್ಳುತ್ತೇನೆ ಎನ್ನುತ್ತಾಳೆ ರನ್ಯಾ.

ಪರವಶನಾದೆನು…..

DSC08985

ಹೌದು, ಈ ಶೀರ್ಷಿಕೆ ಹೊಸ ಚಿತ್ರದ್ದಾಗಿದೆ. ಸಂಜನಾ ತಂಗಿ ನಿಕ್ಕಿ ನಾಯಕಿಯಾಗಿ ನಟಿಸುತ್ತಿರುವ ಚಿತ್ರವಿದು. ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ಮನೋಜ್‌ ಎನ್ನುವ ತರುಣ ಆರು ವರ್ಷಗಳಿಂದ ಹೀರೋ ಆಗಬೇಕೆಂದು ಕನಸು ಕಂಡಂಥ ಆಶಾವಾದಿ. ಗಾಂಧಿನಗರದಲ್ಲಿ ಅವಕಾಶ ಗಿಟ್ಟಿಸಬೇಕೆಂದರೆ ಅದೆಷ್ಟು ಸೈಕಲ್ ಹೊಡೆಯಬೇಕಾಗುತ್ತೆ ಎಂಬುದು ಗೊತ್ತಿರುವ ಸಂಗತಿ. ಮನೋಜ್‌ ಆರು ವರ್ಷಗಳ ಹಿಂದೆ `ಮೊಗ್ಗಿನ ಮನಸ್ಸು’ ಚಿತ್ರದಲ್ಲಿ ಪಾತ್ರವೊಂದನ್ನು ನಿರ್ವಹಿಸಿದ್ದರಷ್ಟೆ. ನಾಯಕನಾಗಿಯೇ ಕಾಣಿಸಿಕೊಳ್ಳಬೇಕೆಂಬ ಹಟವಿತ್ತು. ಆರು ವರ್ಷಗಳ ನಂತರ ಪ್ರಯತ್ನ ಫಲ ಕೊಟ್ಟಿದೆ. `ಪರವಶನಾದೆನು’ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ನಿಕ್ಕಿ ಕೂಡಾ ಸಂಜನಾಳಂತೆ ಬ್ಯೂಟಿಫುಲ್ ಬೆಡಗಿ. ಮನೋಜ್‌ ನಿಕ್ಕಿ ಜೋಡಿ ತೆರೆ ಮೇಲೆ ಮೂಡಿಬರಲಿದೆ. `ಪರಮಾತ್ಮ’ ಚಿತ್ರದ ಹಾಡನ್ನು ನೆನಪಿಸುವ `ಪರವಶನಾದೆನು ಅರಿಯುವ ಮುನ್ನವೇ….’ ಎಂಬಂತೆ ಈ ಚಿತ್ರ ಆ ಹಾಡಿನಷ್ಟೆ ಜನಪ್ರಿಯತೆ ಕಾಣಲಿ.

ಆರ್ಯನ್‌ ತೆರೆಗೆ ಸಿದ್ಧ

IMG_2050

ಬಹು ನಿರೀಕ್ಷಿತ ಚಿತ್ರ `ಆರ್ಯನ್‌’ ತೆರೆಗೆ ಬರಲು ಸಿದ್ಧವಾಗಿದೆ. ಡಿ. ರಾಜೇಂದ್ರಬಾಬು ಅವರ ಕಡೆಯ ಚಿತ್ರ ಇದಾಗಿದ್ದರೂ ಅದನ್ನು ಪೂರ್ಣಗೊಳಿಸಿದ್ದು ಚಿ. ಗುರುದತ್‌. ಶಿವರಾಜ್‌ ಕುಮಾರ್‌ ರಮ್ಯಾ ಜೋಡಿಯ ಈ ಚಿತ್ರ ಅವರಿಬ್ಬರೂ ಪಾಲ್ಗೊಂಡಿದ್ದ ಹಾಡಿನ ಚಿತ್ರೀಕರಣದೊಂದಿಗೆ ಪೂರ್ಣಗೊಂಡಿದೆ. ರಮ್ಯಾ ಇದೀಗ ರಾಜಕೀಯ ರಂಗದಲ್ಲಿ ಬಿಜಿಯಾಗಿರೋದ್ರಿಂದ ಬಹುಶಃ ಇದೇ ಆಕೆಯ ಕಡೆಯ ಚಿತ್ರವಾಗಬಹುದು. ಶಿವರಾಜ್‌ ಕುಮಾರ್‌ ಕೋಚ್‌ ಆಗಿ ಪಾತ್ರ ನಿರ್ವಹಿಸುತ್ತಿದ್ದಾರೆ. ಮೊದಲಿನಿಂದಲೂ ಇಂಥವೊಂದು ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆಯೂ ಅವರಿಗಿತ್ತು. ಶಿವಣ್ಣ ಉತ್ತಮ ಕ್ರಿಕೆಟ್‌ ಪಟು ಆಗಿರೋದ್ರಿಂದ ಅವರಿಗೆ ಸ್ಪೋರ್ಸ್ ನಲ್ಲಿ ತುಂಬಾನೆ ಆಸಕ್ತಿ. ಚುನಾವಣೆಯಿಂದಾಗಿ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ. ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಅವರು ಚುನಾವಣೆಯಲ್ಲಿ ಸ್ಪರ್ಧಿಸಿರೋದ್ರಿಂದ, ಶಿವಣ್ಣ ಪತ್ನಿ ಪವರ ಪ್ರಚಾರ ಕಾರ್ಯ ನಿರ್ವಹಿಸಿದ್ದರು.

ಕ್ರೇಜಿ ಫಾದರ್‌ ಜನಪ್ರಿಯ ನಾಯಕ

paravashanadenu

ತನ್ನ ಹೀರೋ ಇಮೇಜಿನಿಂದ ಮೆರೆಯುತ್ತಿರುವಾಗಲೇ ಮತ್ತೊಬ್ಬ ನಾಯಕನಿಗೆ ತಂದೆಯಾಗುವುದೆಂದರೆ ತಮಾಷೆಯಲ್ಲ. ಅಂಥಿಂದು ಟ್ರಾನ್ಸ್ ಫರ್ಮೇಶನ್‌ ರವಿಚಂದ್ರನ್‌ ರ್ಲಾಗಿದೆ. ಹೌದು, ಸುದೀಪ್‌ಗೆ ತಂದೆಯಾಗಿ `ಮಾಣಿಕ್ಯ’ ಚಿತ್ರದಲ್ಲಿ ಕಾಣಿಸಿಕೊಂಡಾಗಿನಿಂದ ರವಿಚಂದ್ರನ್‌ ಅವರ ಹೊಸ ರೂಪವನ್ನು ಅವರ ಅಭಿಮಾನಿಗಳು ಕಾಣುವಂತಾಗಿದೆ. ರವಿಯವರನ್ನು ಇಂಥವೊಂದು ಪಾತ್ರಕ್ಕೆ ಒಪ್ಪಿಸುವುದು ಸುಲಭಲ್ಲ. ಅವರ ಬಳಿ ಹೋಗಿ ಕೇಳಲು ಹಿಂದು ಮುಂದೆ ನೋಡುತ್ತಾರೆ. ಆದರೆ ಸುದೀಪ್ `ಮಾಣಿಕ್ಯ’ ಚಿತ್ರವನ್ನು ರವಿಚಂದ್ರನ್‌ ಒಪ್ಪಿದರೆ ಮಾತ್ರ ಮಾಡುತ್ತೇನೆ, ಇಲ್ಲದೇ ಹೋದರೆ ಚಿತ್ರವನ್ನು ಮಾಡುವುದೇ ಇಲ್ಲ ಎಂದು ಮೊದಲೇ ನಿರ್ಧರಿಸಿದ್ದರು. ಭೇಟಿಯಾಗಲು ಹೋದಾಗ ಸಾರ್‌ ಅಪ್ಪನ ಪಾತ್ರವಿದೆ ಎಂದು ಹೇಳುವುದಕ್ಕೆ ಮೊದಲೇ, ಏನ್‌ಕ್ಯಾರಿಕ್ಟರ್‌ ಅಂತ ರವಿಯೇ ಕೇಳಿಬಿಟ್ಟರಂತೆ. ಸುದೀಪ್‌ ಬಂದು ಕೇಳುವಾಗ ಇಲ್ಲ ಎನ್ನಲು ಮನಸ್ಸಾಗಲಿಲ್ಲ. ಪ್ರೀತಿ ಇಟ್ಟುಕೊಂಡು ಬಂದು ಕೇಳಿದ್ದಾನೆ ಅಂತ ಗ್ರೀನ್‌ ಸಿಗ್ನಲ್ ಕೊಟ್ಟೇಬಿಟ್ಟರು. ಇಂದು `ಮಾಣಿಕ್ಯ’ ಸೂಪರ್‌ ಹಿಟ್‌. ನನ್ನ ಮೂರು ಮಕ್ಕಳ ಜೊತೆ ಸುದೀಪ್‌ ಕೂಡಾ ಸೇರಿಕೊಂಡು ನನಗೀಗ ನಾಲ್ಕು ಜನ ಮಕ್ಕಳು ಎಂದು ರವಿ ಭಾವುಕರಾಗಿ ಹೇಳುತ್ತಾರೆ.

ಮೊದ ಮೊದಲ ಮಾತು

tamil-spicy-model-actress-subha-punja-hot-latest-pictures-1_720_southdreamz

ಜನಪ್ರಿಯ ಹಾಡುಗಳ ಸಾಲುಗಳನ್ನು ಟೈಟಲ್ ಆಗಿಡೋ ಟ್ರೆಂಡ್‌ ಬಹಳ ವರ್ಷಗಳ ಹಿಂದೆ ಶುರುವಾದದ್ದು. ಟೈಟಲ್ ನೋಡಿದಾಕ್ಷಣ ಆ ಚಿತ್ರದ ಹಾಡು ನೆನಪಾಗುತ್ತೆ. ಒಟ್ಟಿನಲ್ಲಿ ಸದಾ ನೆನಪಿನಲ್ಲುಳಿಯುವಂತೆ ಮಾಡುತ್ತವೆ ಈ ಸಿನಿಮಾ ಟೈಟಲ್ ಗಳು. `ಮೊದ ಮೊದಲ ಮಾತು ಚಂದ…’ ಹಾಡು ಸಾಕಷ್ಟು ಜನಪ್ರಿಯವಾಗಿತ್ತು. ಈಗ ಅದೇ ಹಾಡಿನ ಸವಾಲನ್ನು ಸಿನಿಮಾ ಟೈಟ್ಲಾಗಿಡಲಾಗಿದೆ. ಶಿವಲಿಂಗ ನಿರ್ದೇಶಿಸುತ್ತಿರುವ `ಮೊದ ಮೊದಲ ಮಾತು ಚಂದ’ ಅವರಿಗೆ ಚೊಚ್ಚಲ ಚಿತ್ರವಾಗಿದೆ. ಮನಾಲಿಯಲ್ಲಿ ನಡೆಯುವ ಕ್ಯೂಟ್‌ ಲವ್ ಸ್ಟೋರಿ. ಪ್ರೀತಿ, ಆ್ಯಕ್ಷನ್‌, ಸೆಂಟಿಮೆಂಟ್‌ ಹೊಂದಿರುವ ಈ ಚಿತ್ರದಲ್ಲಿ ಒಂದಷ್ಟು ಹವ್ಯಾಸ ಇದೆಯಂತೆ. ಶಿವಲಿಂಗು ಅವರಿಗೆ ರವಿಚಂದ್ರನ್‌, ಫಣಿರಾಮಚಂದ್ರರ ಜೊತೆ ಕೆಲಸ ಮಾಡಿದ ಅನುಭವವವಿದೆ. ಸಾಯಿಕುಮಾರ್‌ಗೆ ವಿಶೇಷ ಪಾತ್ರ ನೀಡಲಾಗಿದೆ. ಈ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವವರು ಕುಶಾಲ್ ‌ರಾಜ್‌. ಕಂಪನಿಯೊಂದರಲ್ಲಿ ಒಳ್ಳೆ ನೌಕರಿ ಇದ್ದರೂ ಸಿನಿಮಾ ಮೇಲಿನ ಆಸೆಯಿಂದ ಮುಂಬೈನಲ್ಲಿ ಅಭಿನಯ, ಡ್ಯಾನ್ಸ್, ಫೈಟ್‌ ಕಲಿತು ಬಂದಿದ್ದಾರೆ. ಕುಶಾಲ್ ರಾಜ್ ಸಿನಿಮಾ ಸಲುವಾಗಿ ಹದಿನಾರು ಕೆ.ಜಿ. ತೂಕ ಇಳಿಸಿಕೊಂಡಿದ್ದಾರಂತೆ. ಈ ಚಿತ್ರಕ್ಕೆ ಇಬ್ಬರು ನಾಯಕಿಯರು. ಲಿಯೋನಾ  ಹಾಗೂ ಕನ್ನಡದ ತೇಜಸ್ವಿನಿ. ನಿರ್ಮಾಪಕ ಶಾಂತರಾಜ್‌ ಕನ್ನಡ ಚಿತ್ರರಂಗಕ್ಕೆ ಹೊಸಬರೇನಲ್ಲ. ಅವರು ತಮ್ಮ ಪುತ್ರ ಕುಶಾಲ್ ‌ರಾಜ್‌ನನ್ನು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.

ಮಿನಿ ಜೂ ಮಾಡ್ತೀನಿ

IMG_0197

ಶುಭಾ ಪೂಂಜಾ ಸದ್ಯಕ್ಕೆ ಸಖತ್‌ ಬಿಜಿಯಾಗಿದ್ದಾಳೆ. ಒಟ್ಟು ನಾಲ್ಕು ಚಿತ್ರಗಳ ಚಿತ್ರೀಕರಣ ಮುಗಿದಿದೆ. ಡಬ್ಬಿಂಗ್‌ ಮಾಡುತ್ತಿದ್ದಾಳೆ. ಜೊತೆಗೆ `ತರ್ಲೆ ನನ್ಮಕ್ಕಳು’ ಚಿತ್ರದಲ್ಲಿ ಹಾಡೊಂದನ್ನು ಸಹಾ ಹಾಡಿದ್ದಾಳೆ. `ತರ್ಲೆ ನನ್ಮಕ್ಕಳು,’ `ಚಿರಾಯು’ `ಕೋಟಿಗೊಂದು ಲವ್ ಸ್ಟೋರಿ,’ `ಅದೃಷ್ಟ’ ಚಿತ್ರಗಳ ಭರಾಟೆಯಲ್ಲಿ ತನ್ನ ವರ್ಕೌಟ್‌ ಬಗ್ಗೆ ಕಾಳಜಿ ವಹಿಸುವುದಕ್ಕೆ ಸಮಯವಿರಲಿಲ್ಲ ಎನ್ನುವ ಶುಭಾ ಪ್ರಾಣಿ ಪ್ರಿಯೆ. ಹತ್ತು ನಾಯಿ ಸಾಕಿದ್ದಳು. ಮೂರು ಉಳಿದುಕೊಂಡಿವೆ. ಪ್ರತಿನಿತ್ಯ ಮನೆ ಬಳಿ ಇರುವ ಐದು ಹಸುಗಳಿಗೆ ನೀರು, ಬೂಸ ಇಡುತ್ತಾಳೆ. ಶುಭಾಗೆ ತಾನೊಂದು ಮಿನಿ ಜೂ ಮಾಡಬೇಕು ಎನ್ನುವ ಆಸೆಯಿದೆ. ಕುದುರೆ, ಹುಲಿ, ಚಿರತೆ ಇವೆಲ್ಲವನ್ನೂ ಸಾಕಬೇಕೆಂಬುದು ಅವಳ ಕ್ರೇಜಿ ವಿಚಾರ. ಸಿನಿಮಾ ಬಿಟ್ಟರೆ ಬೇರೇನೂ ಗೊತ್ತಿಲ್ಲ ಎನ್ನುವ ಶುಭಾ ಭವಿಷ್ಯದಲ್ಲಿ ತಾನೇನೇ ಮಾಡಬೇಕೆಂದರೂ ಇದೇ ರಂಗದಲ್ಲೇ ಸಾಹಸ ಮಾಡುತ್ತೇನೆ ಎನ್ನುತ್ತಾಳೆ.

ಮುತ್ತು ರಾಜ್‌ ಶಿವಣ್ಣ

7-X-5-copy

`ಭಜರಂಗಿ’ ನಂತರ ಶಿವಣ್ಣ ಯಾವ ಚಿತ್ರದಲ್ಲಿ ನಟಿಸುತ್ತಾರೆ? ಎಂಬ ಪ್ರಶ್ನೆಗೆ ಉತ್ತರವಾಗಿ `ಬೆಳ್ಳಿ’ ಚಿತ್ರ ಸೆಟ್ಟೇರಿತು. `ಭಜರಂಗಿ’ ಚಿತ್ರದಲ್ಲಿ ನಿರ್ದೇಶಕ ಹರ್ಷರ ಜೊತೆ ಕೆಲಸ ಮಾಡಿದ್ದು ಶಿವಣ್ಣ ಅವರಿಗೂ ಖುಷಿ ಕೊಟ್ಟಿತ್ತು. ಮೊದಲ ಬಾರಿಗೆ ಸಿಕ್ಸ್ ಪ್ಯಾಕ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದ ಶಿವಣ್ಣ ಈಗ ಹರ್ಷ ನಿರ್ದೇಶನದಲ್ಲಿ `ಮುತ್ತು ರಾಜ್‌’ ಎನ್ನುವ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.  ಮುತ್ತು ರಾಜ್‌ ರಾಜ್‌ ಅವರ ಅಸಲಿ ಹೆಸರು ಎಂಬುದು ಎಲ್ಲರಿಗೂ ಗೊತ್ತಿದೆ. ರಾಜ್‌ ಕೂಡಾ ಶಿವಣ್ಣನನ್ನು ಮುತ್ತು ಎಂದು ಕರೆಯುತ್ತಿದ್ದರಂತೆ. ಶಿವಣ್ಣ ಯಾವತ್ತೂ ಒಂದೇ ಇಮೇಜಿಗೆ ಅಂಟಿಕೊಂಡವರಲ್ಲ. ಅವರಲ್ಲಿ ಪ್ರತಿಭೆ ಇರೋದ್ರಿಂದ ಎಂಥದ್ದೇ ಪಾತ್ರ ಇರಲಿ, ಅದಕ್ಕೆ ಒಗ್ಗಿಬಿಡುತ್ತಾರೆ. `ಜೋಗಿ,’ `ಸಂತ,’ `ಭಜರಂಗಿ,’ `ತಮಸ್ಸು’ ಎಲ್ಲ ವಿಭಿನ್ನ ರೀತಿಯ ಪಾತ್ರಗಳು. ಹೊಸ ನಿರ್ದೇಶಕರನ್ನು ಪ್ರೋತ್ಸಾಹಿಸುವ ಶಿವಣ್ಣ ಒಳ್ಳೆ ಕಥೆ ತರುವ ಪ್ರತಿಭಾವಂತ ನಿರ್ದೇಶಕರನ್ನು ಯಾವತ್ತೂ ನಿರಾಸೆಗೊಳಿಸಿಲ್ಲ. ಹಾಗೆಯೇ ಎಲ್ಲ ಯುವ ನಿರ್ದೇಶಕರೂ ಒಮ್ಮೆ ಶಿವಣ್ಣನವರೊಂದಿಗೆ ಚಿತ್ರ ಮಾಡಬೇಕು ಎಂದು ಆಸೆ ಇಟ್ಟುಕೊಂಡೇ ಇರುತ್ತಾರೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ