ಮದುವೆಯ ದಿನ ಪ್ರತಿಯೊಬ್ಬ ಹುಡುಗಿಗೂ ಒಂದು ವಿಶೇಷ ದಿನವೇ ಆಗಿಬಿಟ್ಟಿರುತ್ತದೆ. ಆ ದಿನದಂದು ತಾನು ಅತ್ಯಂತ ಸುಂದರವಾಗಿ ಕಾಣಬೇಕೆಂಬುದು ಅವಳ ಕನಸಾಗಿರುತ್ತದೆ. ಸೌಂದರ್ಯ ಎನ್ನುವುದು ಪ್ರತಿಯೊಬ್ಬರಿಗೂ ಒಂದೇ ದಿನ ದೊರಕುವುದಿಲ್ಲ. ಅದಕ್ಕಾಗಿ ಏನೇನು ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳಿ.
ಪೌಷ್ಟಿಕ ಉಪಾಹಾರ ಅತ್ಯವಶ್ಯ
ನೀವು ಮುಂಜಾನೆ ಎದ್ದಾಗ ನಿಮ್ಮ ಗ್ಲೂಕೋಸ್ ಹಾಗೂ ರಕ್ತದೊತ್ತಡದ ಮಟ್ಟ ಅತ್ಯಂತ ಕೆಳಮಟ್ಟದಲ್ಲಿರುತ್ತದೆ. ಗ್ಲೂಕೋಸ್ ನಿಮ್ಮ ಮೆದುಳು ಹಾಗೂ ಕೇಂದ್ರ ನರಮಂಡಲಕ್ಕೆ ಶಕ್ತಿ ಸ್ಛೂರ್ತಿಯ ಮುಖ್ಯ ಮೂಲವಾಗಿದೆ.
ಪೌಷ್ಟಿಕ ಉಪಾಹಾರ ಗ್ಲೂಕೋಸ್‌ನ ಕೊರತೆ ನೀಗಿಸಿ ನಿಮಗೆ ಹೊಸ ಶಕ್ತಿ ಸ್ಛೂರ್ತಿ ಕೊಡುತ್ತದೆ. ಯಾರು ತಮ್ಮ ತೂಕ ಇಳಿಸುವ ಬಗ್ಗೆ ಯೋಚಿಸುತ್ತಿರುತ್ತಾರೋ, ಅವರು ಮುಂಜಾನೆ ಉಪಾಹಾರ ತೊರೆಯುವುದರಿಂದ ತಾವು ಅಷ್ಟು ಕ್ಯಾಲೋರಿ ಉಳಿಸುತ್ತಿದ್ದೇವೆ ಎಂದು ಯೋಚಿಸುತ್ತಾರೆ.
ತಜ್ಞರ ಪ್ರಕಾರ, ಪೌಷ್ಟಿಕ ಆಹಾರ ಸೇವನೆಯಿಂದ ನಿಮ್ಮ ಚಯಾಪಚಯ ಕ್ರಿಯೆ ಸಮರ್ಪಕವಾಗಿ ನಡೆಯುತ್ತಿರುತ್ತದೆ. ತೂಕ ಕಡಿಮೆ ಮಾಡಿಕೊಳ್ಳಲು ಚಯಾಪಚಯ ಕ್ರಿಯೆಯನ್ನು ತೀವ್ರಗೊಳಿಸುವುದು. ಅಂದರೆ ನಮ್ಮ ದೇಹದಲ್ಲಿ ಈ ಪ್ರಕ್ರಿಯೆ ನಡೆಯುತ್ತಾ ಇರಬೇಕು. ಪೌಷ್ಟಿಕ ಉಪಾಹಾರ ಯಾವುದೆಂದರೆ, ಅದು ಇಡೀ ದಿನದ ಮೂರನೇ ಒಂದರಷ್ಟು ಕ್ಯಾಲೋರಿಯನ್ನು ನಿಮಗೆ ಒದಗಿಸುವಂತಿರಬೇಕು.
ಯಾರು ಉಪಾಹಾರ ಸೇವನೆ ಮಾಡುವುದಿಲ್ಲವೋ ಅವರು ತಮ್ಮ ದಿನಚರಿಯಲ್ಲಿ ಉಪಾಹಾರ ಸೇರ್ಪಡೆ ಮಾಡುವ ಕೆಲವು ಸುಲಭ ವಿಧಾನಗಳು ಈ ರೀತಿಯಾಗಿವೆ :
ಒಂದು ಕಪ್ ಟೀ ಅಥವಾ ಒಂದು ಗ್ಲಾಸ್ ಜ್ಯೂಸ್‌ನೊಂದಿಗೆ ಹೋಲ್ ವೀಟ್ ಟೋಸ್ಟ್ ನ ಉಪಾಹಾರದಿಂದ ನಿಮ್ಮ ದಿನ ಆರಂಭಿಸಿ. ಕೆಲವು ದಿನಗಳ ಬಳಿಕ 1 ಹಣ್ಣನ್ನು ಕೂಡ ಅದರಲ್ಲಿ ಸೇರ್ಪಡೆ ಮಾಡಿ.
ಆ ಬಳಿಕ ಉಪಾಹಾರಕ್ಕಾಗಿ ಕೇವಲ 1 ಹಣ್ಣನ್ನು ಆಯ್ಕೆ ಮಾಡಿಕೊಳ್ಳಿ. ಅದು ತಾಜಾ ಆಗಿರಬೇಕಾದುದು ಅತ್ಯವಶ್ಯ. ಅದು ನಿಮಗೆ ನಾರಿನಂಶ, ನೈಸರ್ಗಿಕ ಶರ್ಕರ ಮತ್ತು ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ನೀಡುತ್ತದೆ. ಸೇಬು ನಿಮ್ಮ ಆಯ್ಕೆಯ ಅತ್ಯಂತ ಸೂಕ್ತ ಹಣ್ಣು. ಇದರ ಹೊರತಾಗಿ ನೀವು ಕಿತ್ತಳೆ, ದ್ರಾಕ್ಷಿ, ಮಾವು, ಕಲ್ಲಂಗಡಿ ಅಥವಾ ನೇರಳೆ ಹಣ್ಣುಗಳನ್ನು ಸೇವಿಸಬಹುದು.
ಬೇರೆ ತೆರನಾದ ಕೆಲವು ಉಪಾಹಾರಗಳಿಂದಲೂ ನಿಮ್ಮ ದೈನಂದಿನ ಚಟುವಟಿಕೆ ಆರಂಭಿಸಬಹುದು. ಅವನ್ನು ಅತ್ಯಂತ ಕಡಿಮೆ ಸಮಯದಲ್ಲಿ ತಯಾರಿಸಬಹುದು ಇಲ್ಲಿ ರಾತ್ರಿಯೇ ಅದಕ್ಕಾಗಿ ಸಿದ್ಧತೆ ಮಾಡಿ ಇಟ್ಟುಕೊಳ್ಳಬಹುದು.
ಸಲಾಡ್ : ಲೆಟ್ಯೂಸ್‌ನ ಎಲೆಗಳು, ಪಾಲಕ್‌ನ ಸೊಪ್ಪು, ಅಖ್ರೋಟು, ಸೇಬಿನ ತುಂಡು ಮತ್ತು ಮೊಟ್ಟೆ ಇವನ್ನು ರಾತ್ರಿಯೇ ಒಂದು ಪ್ಲಾಸ್ಟಿಕ್ ಕಂಟೇನರ್‌ನಲ್ಲಿ ಹಾಕಿಡಿ. ಮುಂಜಾನೆ ಇದರಲ್ಲಿ ಸ್ವಲ್ಪ ಆಲಿಲ್ ಆಯಿಲ್, ವಿನಿಗರ್ ಮಿಶ್ರಣ ಮಾಡಿಕೊಂಡು ಸೇವಿಸಿ. ಸಸ್ಯಾಹಾರಿಗಳು ಮೊಟ್ಟೆಯೊಂದನ್ನು ಬಿಟ್ಟು ಉಳಿದದ್ದನ್ನು ಸೇವಿಸಬಹುದು.
ಹಾರ್ಡ್ ಬಾಯಿಲ್ಡ್ ಮೊಟ್ಟೆ ಹಣ್ಣಿನ ಜೊತೆ : ರಾತ್ರಿ 2 ಮೊಟ್ಟೆಗಳನ್ನು ಬೇಯಿಸಿಕೊಂಡು ಅವನ್ನು ಫ್ರಿಜ್‌ನಲ್ಲಿ ಇಡಿ. ಮುಂಜಾನೆ ಮೊಟ್ಟೆಯ ಕವಚ ತೆಗೆದು ಹಳದಿ ಭಾಗವನ್ನು ಬೇರ್ಪಡಿಸಿ. ಯಾರಿಗೆ ಕೊಲೆಸ್ಟ್ರಾಲ್‌ನ ಹೆಚ್ಚಿನ ಸಮಸ್ಯೆ ಇದೆಯೋ ಅವರು ಹಳದಿ ಭಾಗವನ್ನು ಸೇವಿಸಬಾರದು. ಮೊಟ್ಟೆಯನ್ನು ಉಪ್ಪು ಹಾಗೂ ಮೆಣಸಿನ ಜೊತೆಗೆ ಸೇವಿಸಿ. ಬಳಿಕ ಒಂದು ಸೇಬು ತಿನ್ನಿ.
ಪೌಷ್ಟಿಕ ಪೇಯ : ಅರ್ಧ ಬಾಳೆಹಣ್ಣು, 1 ಕಪ್ ಯೋಗಾರ್ಟ್, ಕಾಲು ಕಪ್ ಹಾಲು ಮತ್ತು 2 ಕ್ಯೂಬ್ಸ್ ಮಂಜುಗಡ್ಡೆ ಜಾರ್‌ನಲ್ಲಿ ಹಾಕಿ ಬ್ಲೆಂಡ್ ಮಾಡಿ. ಇದರಲ್ಲಿ ಆರೋಗ್ಯಕರ ಒಮೇಗಾ-3ಗಾಗಿ 1 ದೊಡ್ಡ ಚಮಚ ಫ್ಲ್ಯಾಕ್ಸ್ ಸೀಡ್ ಮಿಶ್ರಣ ಮಾಡಿಕೊಳ್ಳಿ. ನಿಮ್ಮ ರುಚಿಕರ ಪೌಷ್ಟಿಕ ಪೇಯ ಸಿದ್ಧ.
ರಾತ್ರಿ ಉಳಿದ ಆಹಾರದಿಂದ ಉಪಾಹಾರ : ರಾತ್ರಿ ಉಳಿದ ತರಕಾರಿಯಲ್ಲಿ 30 ಗ್ರಾಂ ಗ್ರೇಟ್ ಮಾಡಿದ ಚೀಸ್ ಮಿಶ್ರಣ ಮಾಡಿ. 2 ಸ್ಲೈಸ್ ಬ್ರೌನ್ ಬ್ರೆಡ್ ಅಥವಾ ಮಲ್ಟಿಗ್ರೇನ್ ಬ್ರೆಡ್‌ನ ನಡುವೆ ಇಡಿ. ಈ ಉಪಾಹಾರ ಬಹುಬೇಗ ಸಿದ್ಧಗೊಳ್ಳುತ್ತದೆ. ಜೊತೆಗೆ ಆರೋಗ್ಯಕರವಾಗಿಯೂ ಇರುತ್ತದೆ.
ಮಾಂಸಾಹಾರಿ ಕರಿಯಿಂದ ಚಿಕನ್ ಬೇರ್ಪಡಿಸಿ ಅದನ್ನು 2 ಸ್ಲೈಸ್ ಮಲ್ಟಿಗ್ರೇನ್ ಬ್ರೆಡ್ ನಡುವೆ ಇಡಿ. ಒಂದು ವೇಳೆ ನೀವು ರಾತ್ರಿ ಸಲಾಡ್ ಸೇವಿಸಿದ್ದಲ್ಲಿ, ಅದರಲ್ಲಿನ ಸ್ವಲ್ಪ ಪ್ರಮಾಣ ಉಳಿದಿದ್ದರೆ ಅದನ್ನು ಸ್ಯಾಂಡ್‌ವಿಚ್ ಮೇಲೆ ಇಡಬಹುದು ಅಥವಾ ಕೇವಲ ಸಲಾಡ್‌ನ್ನು 30 ಗ್ರಾಂ ಗ್ರೇಟ್ ಮಾಡಿದ ಚೀಸ್‌ನಲ್ಲಿ ಮಿಶ್ರಣ ಮಾಡಿಕೊಂಡು ಹೋಲ್ ವೀಟ್ ಬ್ರೆಡ್ ಜೊತೆಗೆ ಸ್ಯಾಂಡ್‌ವಿಚ್ ಮಾಡಿ.
ಮತ್ತೊಂದು ವಿಧಾನ : ರಾತ್ರಿ 2 ಚಪಾತಿಗಳನ್ನು ಹೆಚ್ಚಾಗಿಯೇ ಮಾಡಿ. ರಾತ್ರಿ ಉಳಿದ ಪಲ್ಯವನ್ನು ಚಪಾತಿಯಲ್ಲಿ ಹಾಕಿ ರೋಲ್ ಮಾಡಿ. ನ್ಯಾಪ್‌ಕಿನ್‌ನಲ್ಲಿ ಅದನ್ನು ರೋಲ್ ಮಾಡಿಕೊಂಡು 30 ಸೆಕೆಂಡುಗಳ ಕಾಲ ಮೈಕ್ರೋವೇವ್‌ನಲ್ಲಿ ಇಡಿ. ನಿಮಗಾಗಿ ಒಂದೊಳ್ಳೆಯ ಉಪಾಹಾರ ಸಿದ್ಧವಾಯಿತು.
ಉಪಾಹಾರದ ಬಳಿಕ ಪೌಷ್ಟಿಕ ಆಹಾರದ ಆಯ್ಕೆಯೇ ಆಹಾರವನ್ನು ಆರೋಗ್ಯಕರಗೊಳಿಸುತ್ತದೆ. ಕೆಲವು ಆಹಾರ ಪದಾರ್ಥಗಳು ಅಂದರೆ ಅವುಗಳನ್ನು ಯಾವ ಪದಾರ್ಥಗಳಲ್ಲಿ ಸಕ್ಕರೆ, ಸೋಡಿಯಂ, ಸಂತೃಪ್ತ ಕೊಬ್ಬು ಹಾಗೂ ಕ್ಯಾಲೋರಿ ಗರಿಷ್ಠ ಪ್ರಮಾಣದಲ್ಲಿರುತ್ತೊ ಅಂತಹ ಪದಾರ್ಥಗಳನ್ನು ತಿನ್ನುವುದರಿಂದ ದೂರ ಇರಿ. ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್ ಮತ್ತು ನಾರಿನಂಶ ಇರುವ ಪದಾರ್ಥಗಳನ್ನೇ ನೀವು ಸೇವಿಸಬೇಕು. ಈ ಪದಾರ್ಥಗಳು ನಿಮ್ಮ ಹಸಿವು ನೀಗಿಸುವುದರ ಜೊತೆಗೆ ನಿಮಗೆ ಶಕ್ತಿಯನ್ನು ದೊರಕಿಸಿಕೊಡುತ್ತವೆ.
ಯಾವುದನ್ನು ಹೇಗೆ ತಿನ್ನಬೇಕು?
ಆಹಾರದ ಪ್ರಮಾಣ ಮಿತಗೊಳಿಸಿ. ನಿಮ್ಮ ಪ್ಲೇಟಿನಲ್ಲಿ ಹೆಚ್ಚು ಆಹಾರ ಇರಬಾರದು. ಹೀಗೆ ಮಾಡುವುದರ ಲಾಭ ಏನೆಂದರೆ ಆಹಾರ ಸುಲಭವಾಗಿ ಪಚನವಾಗುತ್ತದೆ.
ರಾತ್ರಿ ಹೊತ್ತು ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಿ. ಮಲಗುವ 2 ಗಂಟೆ ಮುಂಚೆಯೇ ಆಹಾರ ಸೇವಿಸಬೇಕು.
ಒತ್ತಡದ ಮೇಲೆ ನಿಯಂತ್ರಣ ತರಲು ರಿಫೈನ್ಡ್ ಅಕ್ಕಿ ಮತ್ತು ಗೋದಿಯ ಬದಲು ಹೋಲ್ ಗ್ರೇನ್ಸ್ ಅಕ್ಕಿ ಹಾಗೂ ಗೋದಿಯನ್ನು ಬಳಸಿ. ನೀವು ಪೌಷ್ಟಿಕ ಕಾರ್ಬೊಹೈಡ್ರೇಟ್, ಉದಾಹರಣೆಗೆ ಜವೆಗೋದಿ, ಹೋಲ್ ವೀಟ್ ಬ್ರೆಡ್, ಕ್ರಿನೋಲಾವನ್ನು ಕೂಡ ಉಪಯೋಗಿಸಬಹುದು. ಸಂಜೆ 5 ಗಂಟೆಯ ಬಳಿಕ ಈ ಆಹಾರ ಪದಾರ್ಥಗಳ ಉಪಯೋಗ ಕಡಿಮೆ ಮಾಡಿ.
ಸುಂದರ ಹಾಗೂ ಕಾಂತಿಯುತ ಕೂದಲಿಗೆ ಆಹಾರದಲ್ಲಿ ಪ್ರೊಟೀನನ್ನು ಸೇರ್ಪಡೆ ಮಾಡಿಕೊಳ್ಳಿ. ಇದಕ್ಕಾಗಿ ನೀವು ಕಡಿಮೆ ಕೊಬ್ಬಿನಂಶ ಇರುವ ಹಾಲಿನ ಉತ್ಪನ್ನಗಳು ಅಂದರೆ ಮೊಸರು, ಮಜ್ಜಿಗೆ ಮತ್ತು ಪನೀರನ್ನು ಉಪಯೋಗಿಸಿ.
ಶೀತ ಹಾಗೂ ಜ್ವರದಿಂದ ರಕ್ಷಿಸಿಕೊಳ್ಳಲು ಚಳಿಗಾಲದಲ್ಲಿ ಹಬೆಯಲ್ಲಿ ಬೇಯಿಸಿದ ತರಕಾರಿಗಳು ಮತ್ತು ಡ್ರೈ ರೋಸ್ಟೆಡ್ ತರಕಾರಿಗಳನ್ನು ಉಪಯೋಗಿಸಿ. ಸ್ವಲ್ಪ ಬಿಸಿಲು ಹೆಚ್ಚಾಗುತ್ತಿದ್ದಂತೆ ಹಸಿರು ಸಲಾಡ್‌ನ್ನು ಉಪೂಯೋಗಿಸಲು ಆರಂಭಿಸಿ.
ಬೇಸಿಗೆಗೆ ಸಿಟ್ರಸ್ ಹಣ್ಣುಗಳು, ಸೇಬು ಅತ್ಯಂತ ಉಪಯುಕ್ತ.
ತೂಕ ಹಾಗೂ ಒತ್ತಡ ಕಡಿಮೆ ಮಾಡಲು ಸಾಫ್ಟ್ ಡ್ರಿಂಕ್ಸ್, ಸಕ್ಕರೆಯ ಸೇವನೆ ಕಡಿಮೆ ಮಾಡಿ. ಪ್ರೋಸೆಸ್ಡ್ ಸಕ್ಕರೆಯುಕ್ತ ಆಹಾರ ಪದಾರ್ಥಗಳನ್ನು ಕಡಿಮೆ ಮಾಡಿ.
ಉಗುರು ಹಾಗೂ ಮೂಳೆಗಳನ್ನು ಗಟ್ಟಿಗೊಳಿಸಲು ಹಾಗೂ ಋತುಚಕ್ರದ ಸಂದರ್ಭದಲ್ಲಿ ಹೊಟ್ಟೆನೋವನ್ನು ಕಡಿಮೆಗೊಳಿಸಲು ಹೋಲ್ ಮಿಲ್ಕ್ ಕ್ರೀಮ್, ಚೀಸ್ ಮತ್ತು ಬಟರ್‌ಗೆ ಬದಲು ಕಡಿಮೆ ಕೊಬ್ಬಿನಂಶವುಳ್ಳ ಹಾಲು, ಯೋಗಾರ್ಟ್ ಮತ್ತು ಆಲಿವ್ ಎಣ್ಣೆಯನ್ನು ಉಪಯೋಗಿಸಿ.
ವ್ಯಾಯಾಮ
ನಿಮ್ಮ ಪಚನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನೀವು ವ್ಯಾಯಾಮ ಮಾಡಬೇಕು. ವ್ಯಾಯಾಮ ನಿಮ್ಮ ದೇಹದ ಟಾಕ್ಸಿಸ್ ಗಳನ್ನು ಹೊರಹಾಕಲು ನೆರವಾಗುತ್ತದೆ. ಇದರಿಂದ ನಿಮ್ಮ ದೇಹದ ತೂಕವಂತೂ ಕಡಿಮೆಯಾಗುತ್ತದೆ. ಜೊತೆಗೆ ನಿಮ್ಮ ಒತ್ತಡದ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಇದು ನಿಮ್ಮ ತ್ವಚೆಯ ಸೌಂದರ್ಯ ಹೆಚ್ಚಿಸಲು ಕೂಡ ನೆರವಾಗುತ್ತದೆ.
ಅದಕ್ಕಾಗಿ ನೀವು ಇಂದಿನಿಂದಲೇ ವ್ಯಾಯಾಮ ಮಾಡುವವರ ಗ್ರೂಪ್‌ನ್ನು ಸೇರಿಕೊಳ್ಳಿ. ಇದನ್ನು ನಿಮ್ಮ ದಿನಚರಿಯಾಗಿಸಿಕೊಳ್ಳಿ.
ನಡೆದಾಡುವ ಅವಕಾಶವನ್ನು ಬಿಟ್ಟುಕೊಡಬೇಡಿ. ಚಿಕ್ಕಪುಟ್ಟ ಕೆಲಸಗಳನ್ನು ಕಾಲ್ನಡಿಗೆಯಲ್ಲಿಯೇ ಹೋಗಿ ಮಾಡಿಕೊಂಡು ಬನ್ನಿ. ಲಿಫ್ಟ್ ಬದಲು ಮೆಟ್ಟಿಲುಗಳನ್ನೇ ಉಪಯೋಗಿಸಿ.
– ಡಾ. ಪ್ರಭಾಮಣಿ