ಸುಷ್ಮಾ ಸ್ವರಾಜ್ವಿದೇಶಾಂಗ ಸಚಿವೆ

ಅರ್ಹತೆ, ಕರ್ತವ್ಯ ಪ್ರಜ್ಞೆ ಮತ್ತು ಆಡಳಿತ ನಿರ್ವಹಣೆಯ ಜೊತೆಗೆ ಧರ್ಮ ನಿರಪೇಕ್ಷ ಭಾವನೆ ಹೊಂದಿರುವ ಸುಷ್ಮಾ ಸ್ವರಾಜ್‌ ವಿಶಿಷ್ಟ ಕೀರ್ತಿಯೊಂದಕ್ಕೆ ಪಾತ್ರರಾಗಿದ್ದಾರೆ. ವಿದೇಶಾಂಗ ಸಚಿವೆಯಾದ ಭಾರತದ ಪ್ರಥಮ ಮಹಿಳೆ ಎಂಬ ಖ್ಯಾತಿ ಅವರ ಹೆಸರಿನೊಂದಿಗೆ ಸೇರಿಕೊಂಡಿದೆ.

ಫೆಬ್ರವರಿ 1952ರಲ್ಲಿ ಪಂಜಾಬ್‌ನ ಅಂಬಾಲಾದಲ್ಲಿ ಜನಿಸಿದ ಸುಷ್ಮಾ ಅವರು ಪಂಜಾಬ್‌ ವಿ.ವಿ.ಯಿಂದ ಕಾನೂನು ಪದವಿ ಪಡೆದಿದ್ದಾರೆ. ದೀರ್ಘ ಕಾಲದವರೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ವಕಾಲತ್ತು ಮಾಡಿದ್ದ ಅವರು ಬಳಿಕ ರಾಜಕೀಯ ಪ್ರೀವೇಶಿಸಿದರು. 1998ರಲ್ಲಿ ಅವರು ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಹೊಸದೊಂದು ಕೀರ್ತಿಗೆ ಪಾತ್ರರಾದರು. ಅವರು ಭಾಜಪಾದ ರಾಷ್ಟ್ರೀಯ ಕಾರ್ಯಾಲಯದ ಮೊದಲ ಮಹಿಳೆ ಮತ್ತು ಭಾರತದ `ಅತ್ಯುತ್ತಮ ಸಂಸದೆ ಪ್ರಶಸ್ತಿ’ ಪಡೆದ ಪ್ರಥಮ ಮಹಿಳೆ.

ಸುಷ್ಮಾ ಸ್ವರಾಜ್‌ ಆರಂಭದಿಂದಲೇ ತಾವೊಬ್ಬ ಮಾದರಿ ಮಹಿಳೆ ಎಂಬುದ್ನು ಸಾಬೀತುಪಡಿಸುತ್ತಲೇ ಬಂದಿದ್ದಾರೆ. 1970ರಲ್ಲಿ ಅವರು ಎಸ್‌.ಡಿ. ಕಾಲೇಜಿನಲ್ಲಿ `ಅತ್ಯುತ್ತಮ ವಿದ್ಯಾರ್ಥಿ’ ಪುರಸ್ಕಾರಕ್ಕೆ ಪಾತ್ರರಾಗಿದ್ದರು. ಆ ಕಾಲೇಜಿನಲ್ಲಿ 3 ವರ್ಷಗಳ ತನಕ `ಅತ್ಯುತ್ತಮ ಎನ್‌ಸಿಸಿ ಕ್ಯಾಡೆಟ್‌’ ಮತ್ತು 3 ವರ್ಷಗಳ ಕಾಲ `ರಾಜ್ಯದ ಶ್ರೇಷ್ಠ ಭಾಷಣಕಾರ್ತಿ’ ಬಹುಮಾನಕ್ಕೆ ಪಾತ್ರರಾಗಿದ್ದರು.

ಚೌದರಿ ದೇವಿಲಾಲ್

‌ಸರ್ಕಾರದಲ್ಲಿ 1977ರಿಂದ 79ರ ಅವಧಿಯಲ್ಲಿ ಹರಿಯಾಣದ ಕಾರ್ಮಿಕ ಸಚಿವೆಯಾಗಿದ್ದರು. 25ನೇ ವರ್ಷದಲ್ಲಿ ಸಂಪುಟ ದರ್ಜೆ ಸಚಿವೆಯಾಗಿದ್ದುದು ಅವರ ಮತ್ತೊಂದು ದಾಖಲೆ, 1987 ಮತ್ತು 1996ರಲ್ಲಿ ಅವರು ಕೇಂದ್ರದಲ್ಲಿ ವಾರ್ತಾ ಮತ್ತು ಪ್ರಚಾರ ಸಚಿವೆಯಾಗಿ ಎಲ್ಲರೂ ಸೈ ಅನ್ನುವಂತೆ ಕಾರ್ಯನಿರ್ಹಿಸಿದ್ದರು.

1975ರಲ್ಲಿ ಸ್ವರಾಜ್‌ ಕೌಶಲ್ ಜೊತೆ ಅವರ ವಿವಾಹವಾಯಿತು. ಅವರು 6 ವರ್ಷಗಳ ಕಾಲ ರಾಜ್ಯಸಭೆ ಸದಸ್ಯರಾಗಿದ್ದರು. ಬಳಿಕ ಮಿಜೋರಾಂ ರಾಜ್ಯಪಾಲರೂ ಆಗಿದ್ದರು.

ಅತ್ಯಂತ ಕಡಿಮೆ ವಯಸ್ಸಿನಲ್ಲಿ ರಾಜ್ಯಸಭಾ ಸದಸ್ಯರಾದ ಖ್ಯಾತಿಯೂ ಸ್ವರಾಜ್‌ ಕೌಶಲ್ ಹೆಸರಿಗೆ ಇದೆ. ಸುಷ್ಮಾ ಸ್ವರಾಜ್‌ ಹಾಗೂ ಅವರ ಪತಿಯ ಸಾಧನೆ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ ನಲ್ಲಿ ನಮೂದಾಗಿದ್ದು, ಅವರಿಗೆ `ವಿಶೇಷ ದಂಪತಿಗಳು’ ಎಂಬ ದರ್ಜೆ ನೀಡಲಾಗಿದೆ.

ಮಧ್ಯಪ್ರದೇಶದ ವಿಧೀಶಾ ಕ್ಷೇತ್ರದಿಂದ 4,10,698 ಮತಗಳಿಂದ ಜಯ ಗಳಿಸಿದ ಸುಷ್ಮಾ ಅವರಿಗೆ ಒಬ್ಬ ಮಗಳಿದ್ದು, ಆಕೆ ಆಕ್ಸ್ ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದು ಈಗ ವಕಾಲತ್ತು ನಡೆಸಿದ್ದಾರೆ.

ಸ್ಮೃತಿ ಇರಾನಿ

Smriti-Irani

ಮಾನವ ಸಂಪನ್ಮೂಲ ಸಚಿವೆ ಮನೇಕಾ ಗಾಂಧಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉತ್ತರಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ‌ಗಾಂಧಿ ಹಾಗೂ ಆಮ್ ಆದ್ಮಿ ಪಕ್ಷದ ಕುಮಾರ್‌ ವಿಶ್ವಾಸ್‌ ಅವರಿಗೆ ಪ್ರಬಲ ಎದುರಾಳಿ ಎನಿಸಿಕೊಂಡ ಸ್ಮೃತಿ ಇರಾನಿ ಮೋದಿ ಸಚಿವ ಸಂಪುಟದಲ್ಲಿ ಮಾನವ ಸಂಪನ್ಮೂಲ ಸಚಿವೆ.

1976ರಲ್ಲಿ ದೆಹಲಿಯಲ್ಲಿ ಜನಿಸಿದ ಸ್ಮೃತಿ ಪಾರಂಪರಿಕ ಪಂಜಾಬಿ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಆದರೆ ಎಲ್ಲ ಅಡೆತಡೆಗಳು, ನಿರ್ಬಂಧಗಳನ್ನೂ ಬದಿಗೊತ್ತಿ. ಅವರು ಬ್ಯಾಚುಲರ್‌ ಆಫ್‌ ಕಾಮರ್ಸ್‌ ಪಾರ್ಟ್‌ (ಅಂಚೆ ತೆರಪಿನ ಶಿಕ್ಷಣ) ಪಾಸ್‌ ಆಗಿ ಗ್ಲಾಮರ್ ಜಗತ್ತಿಗೆ ಕಾಲಿರಿಸಿದರು. 1998ರಲ್ಲಿ ಅವರು `ಫೇಮಿನಾ ಮಿಸ್‌ ಇಂಡಿಯಾ’ ಸೌಂದರ್ಯ ಸ್ಪರ್ಧೆಯಲ್ಲಿ ಅಂತಿಮ ಸುತ್ತಿನ ತನಕ ತಲುಪಿದ್ದರು.

2000ದ ಇಸ್ವಿಯಲ್ಲಿ `ಹಮ್ ಹೈ ಕಲ್ ಆಜ್‌ ಔರ್‌ ಕಲ್’ ಧಾರಾವಾಹಿ ಮೂಲಕ ಟಿ.ವಿ. ಲೋಕಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ಏಕ್ತಾ ಕಪೂರರ `ಕ್ಯೋಂಕಿ ಸಾಸ್‌ ಬೀ ಕಭಿ ಬಹೂ ಥಿ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿ ಮನೆ ಮಾತಾದರು.

ಸ್ಮೃತಿ 5 ಸಲ ಶ್ರೇಷ್ಠ ನಟಿ ಭಾರತೀಯ ಟೆಲಿವಿಷನ್‌ ಅಕಾಡೆಮಿ ಅವಾರ್ಡ್‌ನ್ನು 4 ಸಲ ಇಂಡಿಯನ್‌ ಟೆಲಿ ಅವಾರ್ಡ್‌ ಮತ್ತು 8 ಸಲ ಸ್ಟಾರ್‌ ಪರಿವಾರ್‌ ಅವಾರ್ಡ್‌ ಪಡೆದಿದ್ದಾರೆ.

2003ರಲ್ಲಿ ಭಾಜಪಾ ಸೇರಿದ ಅವರು 2010ರಲ್ಲಿ ಮಹಿಳಾ ಮೋರ್ಚಾದ ಚುಕ್ಕಾಣಿ ಹಿಡಿದರು. 2011ರಲ್ಲಿ ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾದರು.

2001ರಲ್ಲಿ ಜ್ಯಾಬಿನ್‌ ಇರಾನಿಯವರೊಂದಿಗೆ ವಿವಾಹವಾದ ಅವರಿಗೆ ಜೋಹರ್‌ ಎಂಬ ಪುತ್ರನಿದ್ದಾನೆ. ಪತಿಯ ಮೊದಲ ಹೆಂಡತಿ ಮೋನಾಗೆ ಜನಿಸಿದ ಒಬ್ಬ ಮಗಳು ಕೂಡ ಇವರ ಜೊತೆಯೇ ಇದ್ದಾಳೆ.

ಮೋದಿ ಸಚಿವ ಸಂಪುಟದ ಅತ್ಯಂತ ಕಿರಿಯ ವಯಸ್ಸಿನ ಸಚಿವೆ ಎಂಬ ಖ್ಯಾತಿಗೆ ಸ್ಮೃತಿ ಪಾತ್ರರಾಗಿದ್ದಾರೆ.

ಮನೇಕಾ ಗಾಂಧಿ

menka-gandhi

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉತ್ತರ ಪ್ರದೇಶದ ಫಿಲಿಬಿತ್‌ ಮತಕ್ಷೇತ್ರದಿಂದ ಚುನಾಯಿತರಾದ ಮನೇಕಾ ಗಾಂಧಿ ಮೋದಿ ಸಚಿವ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆಗಸ್ಟ್ 26, 1956ರಲ್ಲಿ ದೆಹಲಿಯ ಸಿಖ್‌ ಕುಟುಂಬದಲ್ಲಿ ಜನಿಸಿದ ಮನೇಕಾ, ಲಾರೆನ್ಸ್ ಸ್ಕೂಲ್ ‌ಹಾಗೂ ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ಶಿಕ್ಷಣ ಪಡೆದವರು. 18 ವರ್ಷದವರಿದ್ದಾಗಲೇ ಇಂದಿರಾ ಗಾಂಧಿಯವರ ಕಿರಿಯ ಮಗ ಸಂಜಯ್‌ ಗಾಂಧಿ ಜೊತೆ ಇವರ ವಿವಾಹವಾಯಿತು. ಅವರಿಗೆ 23 ವರ್ಷ ಹಾಗೂ ಮಗ ವರುಣ್‌ ಗಾಂಧಿಗೆ ಕೇವಲ 100 ದಿನ ಮಾತ್ರ ಆಗಿದ್ದಾಗ ವಿಮಾನ ಅಪಘಾತದಲ್ಲಿ ಸಂಜಯ್‌ ಗಾಂಧಿ ಅಸುನೀಗಿದರು. ಬಳಿಕ ಮನೇಕಾ `ಸಂಜಯ್‌ ಗಾಂಧಿ ಮಂಚ್‌’ ಹೆಸರಿನಲ್ಲಿ ಒಂದು ಪಕ್ಷ ಸ್ಥಾಪನೆ ಮಾಡಿ 1982ರಲ್ಲಿ ರಾಜಕೀಯಕ್ಕೆ ದುಮುಕಿದರು.

1998ರಲ್ಲಿ ಅವರು ತಮ್ಮ ಪಕ್ಷವನ್ನು ಜನತಾ ಪಕ್ಷದಲ್ಲಿ ವಿಲೀನಗೊಳಿಸಿದರು ಹಾಗೂ ಅದರ ಪ್ರಧಾನ ಕಾರ್ಯದರ್ಶಿಯಾದರು. ಆ ಪಕ್ಷದಿಂದ ಚುನಾಣೆಗೆ ಸ್ಪರ್ಧಿಸಿ ಗೆದ್ದರಲ್ಲದೆ, 33 ವರ್ಷದಲ್ಲಿಯೇ ಮಂತ್ರಿಯಾಗಿ ಅತ್ಯಂತ ಕಡಿಮೆ ವಯಸ್ಸಿನ ಸಚಿವೆ ಎಂಬ ಖ್ಯಾತಿಗೂ ಪಾತ್ರರಾದರು.

ರಾಜಕೀಯದ ಹೊರತಾಗಿ ಮನೇಕಾ ಗಾಂಧಿ ಲೇಖಕಿ, ಪರಿಸರವಾದಿ ಮತ್ತು ಪ್ರಾಣಿ ಪಕ್ಷಿಗಳ ಬಗ್ಗೆ ಅಪಾರ ಕಾಳಜಿ ಹೊಂದಿದರು. ಅವರು ಒಂದು ಪತ್ರಿಕೆಯ ಸಂಪಾದಕಿ ಕೂಡ ಆಗಿದ್ದರು. ಕಾನೂನು ಹಾಗೂ ಪ್ರಾಣಿ ಪಕ್ಷಿಗಳ ಕುರಿತಂತೆ ಅನೇಕ ಪುಸ್ತಕಗಳನ್ನು ಕೂಡ ಬರೆದಿದ್ದಾರೆ.

`ಗೃಹಶೋಭಾ’ ಹಾಗೂ `ಚಂಪಕ’ ಪತ್ರಿಕೆಗಳಲ್ಲಿ ಅವರು ಪ್ರಾಣಿಪಕ್ಷಿಗಳು ಮತ್ತು ಪರಿಸರಕ್ಕೆ ಸಂಬಂಧಪಟ್ಟ ವಿಷಯದ ಮೇಲೆ ನಿಯಮಿತವಾಗಿ ಅಂಕಣ ಬರೆಯುತ್ತಾರೆ. ಚುನಾವಣೆಯ ಸಮಯದಲ್ಲೂ ಅವರ ಬರವಣಿಗೆ ನಿಂತಿರಲಿಲ್ಲ.

ಪ್ರಾಣಿಪಕ್ಷಿಗಳ ಮೇಲೆ ನಡೆಯುವ ನಿರಂತರ ದೌರ್ಜನ್ಯದ ಕುರಿತಂತೆ ಅವರು ಸದಾ ಲೇಖನಿಯ ಮೂಲಕ, ಹೋರಾಟದ ಮೂಲಕ ಧ್ವನಿ ಎತ್ತುತ್ತಲೇ ಇರುತ್ತಾರೆ.

ಹರಸಿಮ್ರತ್‌ ಕೌರ್‌ ಬಾದ್‌

ಆಹಾರ ಸಂಸ್ಕರಣೆ ಮತ್ತು ಉದ್ಯೋಗ ಸಚಿವೆ 47 ವರ್ಷದ ಹರಸಿಮ್ರತ್‌ ಕೌರ್‌ ಬಾದ್‌ ಮೋದಿ ಸಂಪುಟದಲ್ಲಿ ಆಹಾರ ಸಂಸ್ಕರಣೆ ಉದ್ಯೋಗ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2009 ಹಾಗೂ 2014ರ ಚುನಾವಣೆಯಲ್ಲಿ ಅವರು ಪಂಜಾಬಿನ ಭಟಿಂಡಾ ಕ್ಷೇತ್ರದಿಂದ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಶಿರೋಮಣಿ ಅಕಾಲಿ ದಳದ ಸದಸ್ಯರಾಗಿರುವ ಅವರು ಪಂಜಾಬಿನ ಉಪಮುಖ್ಯಮಂತ್ರಿ ಸುಖಬೀರ್‌ ಸಿಂಗ್‌ ಬಾದಲ್ ಅವರ ಪತ್ನಿ.

ಹರಸ್ರಿಮತ್‌ ಕೌರ್‌ ಮೆಟ್ರಿಕ್ಯುಲೇಟ್‌ ತನಕ ಹಾಗೂ ಟೆಕ್ಸ್ ಟೈಲ್ಸ್ ಡಿಸೈನಿಂಗ್‌ನಲ್ಲಿ ಡಿಪ್ಲೋಮಾ ಹೋಲ್ಡರ್‌ ಆಗಿದ್ದಾರೆ.

ಉಮಾ ಭಾರತಿ

download (2)

ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾನದಿ ಪುನಶ್ಚೇತನ ಸಚಿವೆ ಹರಸಿಮ್ರತ್‌ ಕೌರ್‌ ಬಾದ್‌ ಆಹಾರ ಸಂಸ್ಕರಣೆ ಮತ್ತು ಉದ್ಯೋಗ ಸಚಿವೆ 47 ವರ್ಷದ ಹರಸಿಮ್ರತ್‌ ಕೌರ್‌ ಬಾದ್‌ ಮೋದಿ ಸಂಪುಟದಲ್ಲಿ ಆಹಾರ ಸಂಸ್ಕರಣೆ ಉದ್ಯೋಗ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2009 ಹಾಗೂ 2014ರ ಚುನಾವಣೆಯಲ್ಲಿ ಅವರು ಪಂಜಾಬಿನ ಭಟಿಂಡಾ ಕ್ಷೇತ್ರದಿಂದ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಶಿರೋಮಣಿ ಅಕಾಲಿ ದಳದ ಸದಸ್ಯರಾಗಿರುವ ಅವರು ಪಂಜಾಬಿನ ಉಪಮುಖ್ಯಮಂತ್ರಿ ಸುಖಬೀರ್‌ಸಿಂಗ್‌ ಬಾದಲ್ ಅವರ ಪತ್ನಿ. ಹರಸ್ರಿಮತ್‌ ಕೌರ್‌ ಮೆಟ್ರಿಕ್ಯುಲೇಟ್‌ ತನಕ ಹಾಗೂ ಟೆಕ್ಸ್ಟೈಲ್ಸ್ ಡಿಸೈನಿಂಗ್‌ನಲ್ಲಿ ಡಿಪ್ಲೋಮಾ ಹೋಲ್ಡರ್‌ ಆಗಿದ್ದಾರೆ. ಆತ್ಮವಿಶ್ವಾಸಿ ವ್ಯಕ್ತಿತ್ವ, ಪ್ರಖರ ರಾಜಕೀಯ ನಾಯಕಿಯೆನಿಸಿರುವ ಉಮಾ ಭಾರತಿ

ಸಮಾಜ ಸೇವೆಯ ಜೊತೆ ಜೊತೆಗೆ ಹಿಂದೂ ಮಹಾಕಾವ್ಯಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಮೋದಿ ಸಚಿವ ಸಂಪುಟದಲ್ಲಿ ಜಲಸಂಪನ್ಮೂಲದಂತಹ ಪ್ರಮುಖ ಖಾತೆಯೇ ದೊರೆತಿದೆ. ಗಂಗಾ ಶುದ್ಧೀಕರಣದ ಹೊಣೆಯೂ ಅವರ ಹೆಗಲಿಗಿದೆ.

1959ರಲ್ಲಿ ಮಧ್ಯಪ್ರದೇಶದ ರಜಪೂತ್‌ ಕುಟುಂಬದಲ್ಲಿ ಜನಿಸಿದ ಅವರ ಪೂರ್ತಿ ಹೆಸರು ಉಮಾಶ್ರೀ ಭಾರತಿ. ಅವರ ಪಾಲನೆ ಪೋಷಣೆ ಆದದ್ದು ಆಗಿನ ಗ್ವಾಲಿಯರ್‌ನ ರಾಜಮಾತೆ ವಿಜಯರಾಜೇ ಸಿಂಧಿಯಾ ಬಳಿ. ಕೇವಲ 6ನೇ ತರಗತಿಯವರೆಗೆ ಓದಿದ ಉಮಾ ಭಾರತಿ ಅವರ 3 ಪುಸ್ತಕಗಳು ಕೂಡ ಪ್ರಕಟವಾಗಿವೆ.

ಚಿಕ್ಕ ವಯಸ್ಸಿನಲ್ಲಿ ರಾಜರೀಯ ಜೀವನ ಆರಂಭಿಸಿದ ಅವರು ಬಿಜೆಪಿಯಿಂದ 1984ರಲ್ಲಿ ಮೊದಲ ಬಾರಿ ಚುನಾವಣೆ ಎದುರಿಸಿದ್ದರು. 1991ರಲ್ಲಿ ಅವರು ಖಜುರಾಹೋ ಲೋಕಸಭಾ ಕ್ಷೇತ್ರದಿಂದ ಗೆಲವು ಸಾಧಿಸಿದ್ದರು. ಆ ಬಳಿಕ ಈ ಕ್ಷೇತ್ರದಿಂದ ಸತತ 3 ಸಲ ಗೆಲುವು ಸಾಧಿಸಿದರು. ವಾಜಪೇಯಿ ಮಂತ್ರಿ ಮಂಡಲದಲ್ಲಿ ಮಾನವ ಸಂಪನ್ಮೂಲ, ಪ್ರವಾಸೋದ್ಯಮ, ಕ್ರೀಡೆ ಮತ್ತು ಯುವಜನ ಸೇವೆ ಮುಂತಾದ ಖಾತೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು.

2003ರಲ್ಲಿ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿಯಾದರು. ಕೆಲವು ಸಮಯ ಅವರು ಬಿಜೆಪಿಯಿಂದ ಉಚ್ಛಾಟಿಸಲ್ಪಟ್ಟಿದ್ದರು. ಆಗ ಇವರು `ಭಾರತೀಯ ಜನಶಕ್ತಿ ದಳ’ ಎಂಬ ಪಕ್ಷ ರಚಿಸಿದ್ದರು.

ಪುನಃ ಬಿಜೆಪಿಗೆ ವಾಪಸ್ಸಾದ ಇವರು ಉತ್ತರ ಪ್ರದೇಶದಲ್ಲಿ `ಗಂಗಾ ರಕ್ಷಿಸಿ’ ಆಂದೋಲನದಲ್ಲಿ ಪಾಲ್ಗೊಂಡಿದ್ದರು. ಸದಾ ಸರಳ ಉಡುಗೆಯಲ್ಲಿರುವ ಇವರು ಅವಿವಾಹಿತೆ. ತಮ್ಮ ಗುರಿ ಈಡೇರಿಸಿಕೊಳ್ಳುವಲ್ಲಿ ಸದಾ ಮುಂಚೂಣಿಯಲ್ಲಿರುತ್ತಾರೆ.

– ಗಿರಿಜಾ ರಾವ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ