ಮನೆಯನ್ನು ಅಚ್ಚುಕಟ್ಟುಗೊಳಿಸುವಾಗ ಫರ್ನೀಚರ್, ಪರದೆ, ಕುಶನ್, ಲೈಟ್, ಕಾರ್ಪೆಟ್ ಇವನ್ನು ಬದಲಿಸುವುದು ಅತ್ಯಂತ ಸುಲಭ. ಆದರೆ ಫ್ಲೋರಿಂಗ್‌ನ್ನು ಬದಲಿಸುವುದು ಅಷ್ಟು ಸುಲಭದ ಕೆಲಸವಲ್ಲ. ಫ್ಲೋರಿಂಗ್ ಮನೆಯ ಒಂದು ಬಹುದೊಡ್ಡ ಭಾಗವನ್ನು ಕವರ್ ಮಾಡುತ್ತದೆ. ಹೀಗಾಗಿ ಕೋಣೆಗೆ ಎಲಿಗೆಂಟ್ ಲುಕ್ಸ್ ನೀಡಲು ಇದು ಪ್ರಮುಖ ಪಾತ್ರ ವಹಿಸುತ್ತದೆ. ಫ್ಲೋರಿಂಗ್ ಇಲ್ಲದೇ ಇದ್ದರೆ ಮನೆಯ ಅಂದವೇ ಹೊರಟು ಹೋಗುತ್ತದೆ.
ಈಚೆಗೆ ಮಾರುಕಟ್ಟೆಯಲ್ಲಿ ಫ್ಲೋರಿಂಗ್‌ನ ಸಾಕಷ್ಟು ಪರ್ಯಾಯಗಳು ಲಭ್ಯವಿದ್ದು, ಅದರಲ್ಲಿ ನಿಮಗೆ ಬೇಕಾದುದನ್ನು ಹುಡುಕುವುದು ಕಷ್ಟವೆನಿಸುತ್ತದೆ. ಅದರಲ್ಲೂ ವಿಶೇಷವಾಗಿ ಫ್ಲೋರಿಂಗ್ ಬಹಳ ವರ್ಷ ಸುರಕ್ಷಿತವಾಗಿ ಉಳಿಯಬೇಕೆಂದರೆ, ಬದಲಾಗುತ್ತಿರುವ ಟ್ರೆಂಡ್‌ಗೆ ಹೊಂದುವಂತಹ ಮನೆಗೆ ಮೆರುಗು ಕೊಡುವಂತಹ ಸುಂದರ ಫ್ಲೋರಿಂಗ್‌ನ ಸ್ಟೈಲ್ ನ್ನು ಸೇರ್ಪಡೆ ಮಾಡಿಕೊಳ್ಳಿ.
ಮಾರುಕಟ್ಟೆಯಲ್ಲಿ ಲಭ್ಯವಿರುವ ಅಪಾರ ಫ್ಲೋರಿಂಗ್ ಆಪ್ಶನ್ಸ್ ನಲ್ಲಿ ನಿಮಗೆ ಇಷ್ಟವಾದುದನ್ನು ಆಯ್ಕೆ ಮಾಡಿಕೊಂಡು ಕೋಣೆಯ ಗಾತ್ರಕ್ಕನುಗುಣವಾಗಿ ಅದನ್ನು ಡೆಕೋರೇಟ್ ಮಾಡಬಹುದು. ಫ್ಲೋರಿಂಗ್ ಕವರಿಂಗ್ ಮಾಡಿದ ಬಳಿಕ ಜನರು ಕಾರ್ಪೆಟ್, ವುಡನ್, ಲ್ಯಾಮಿನೇಟ್, ಟೈಲ್ಸ್, ಮಾರ್ಬಲ್, ಬ್ಯಾಂಬೂ, ಕಾರ್ಕ್ ಮುಂತಾದವನ್ನೇ ಇಷ್ಟಪಡುತ್ತಾರೆ.
ಬದಲಾವಣೆಯ ಗಾಳಿ
ಮನೆಯಿರಬಹುದು, ಆಫೀಸ್ ಆಗಿರಬಹುದು ಅಥವಾ ವಾಣಿಜ್ಯ ಸಂಸ್ಥೆ. ಇಲ್ಲೆಲ್ಲ ಫೋರಿಂಗ್‌ನ ಟ್ರೆಂಡ್‌ನಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅದೊಂದು ಕಾಲದಲ್ಲಿ ರೆಡ್ ಆಕ್ಸೈಡ್‌ನ್ನೇ ಹೆಚ್ಚು ಇಷ್ಟಪಡಲಾಗುತ್ತಿತ್ತು. ನಂತರ ಮೊಸಾಯಿಕ್ ಫ್ಲೋರಿಂಗ್‌ನ ಕಾಲ ಬಂತು. ಅದರ ಬಳಿಕ ಮಾರ್ಬಲ್ ನ ಕ್ರೇಜ್ ಬಂತು. ಈಚೆಗೆ ಗ್ರಾನೈಟ್‌ನ ಆಕರ್ಷಣೆ ಕಡಿಮೆಯಾಗಿ ವಿಟ್ರಿಫೈಡ್ ಟೈಲ್ಸ್ ನ ಮೋಹ ಜಾಸ್ತಿಯಾಗಿರುವುದರಿಂದ ಸಾಧಾರಣ ಸೆರಾಮಿಕ್ ಟೈಲ್ಸ್ ಔಟ್ ಡೇಟೆಡ್ ಆಗುತ್ತಿವೆ.
ಈಚೆಗೆ ವುಡನ್ ಹಾಗೂ ಲ್ಯಾಮಿನೇಟೆಡ್ ಫ್ಲೋರಿಂಗ್‌ನ ಟ್ರೆಂಡ್ ಜೋರಾಗಿದೆ. ಜನರಲ್ಲಿ ಅದರ ಬಗ್ಗೆ ಹೆಚ್ಚುತ್ತಿರುವ ಒಲವಿನ ಬಗ್ಗೆ ಇಂಟೀರಿಯರ್ ಡಿಸೈನರ್ ಸುಚಿತ್ರಾ ಹೀಗೆ ಹೇಳುತ್ತಾರೆ, “ಇದನ್ನು ಅಳವಡಿಸುವುದು ಸುಲಭ. ಮನೆಯಲ್ಲಿ ಯಾವುದೇ ಕಸ ಕೊಳೆಯನ್ನುಂಟು ಮಾಡದೆ ಇದು 4-5 ದಿನಗಳಲ್ಲಿ ಮುಗಿದು ಹೋಗುತ್ತದೆ ಮತ್ತು ಇಂಟರ್ ಲಾಕಿಂಗ್ ವ್ಯವಸ್ಥೆಯಿಂದಾಗಿ ಇದನ್ನು ಯಾವಾಗ ಬೇಕಾದರೂ ತೆಗೆದು, ಪುನಃ ಅಳವಡಿಸಬಹುದಾಗಿದೆ.”
ನೈಸರ್ಗಿಕ ವಾತಾವರಣ, ಪಾರಂಪರಿಕ ಅಂದಚೆಂದಕ್ಕಾಗಿ ವುಡನ್ ಫ್ಲೋರ್ ಎಲ್ಲಕ್ಕೂ ಉತ್ತಮ ಎಂದು ಭಾವಿಸಲಾಗುತ್ತದೆ. ಇವು ಪರಿಸರಸ್ನೇಹಿ ಕೂಡ ಆಗಿರುತ್ತವೆ. ಈ ಕಾರಣದಿಂದ ನಿಮ್ಮನ್ನು ನೀವು ಪರಿಸರಕ್ಕೆ ನಿಕಟ ಎಂದು ಭಾವಿಸಬಹುದು. ಅದನ್ನು ಅಳಡಿಸುವುದರಿಂದ ಕೋಣೆಯ ಗಾತ್ರ ಹೆಚ್ಚಾದಂತೆ ಭಾಸವಾಗುತ್ತದೆ. ಎಲ್ಲಕ್ಕೂ ಮಹತ್ವದ ಸಂಗತಿಯೇನೆಂದರೆ, ಅದು ತನ್ನ ಇನ್ಸುವೇಟಿಂಗ್ ಸಾಮರ್ಥ್ಯದಿಂದಾಗಿ ಅನೇಕ ವರ್ಷಗಳ ತನಕ ಹಾಳಾಗುವುದಿಲ್ಲ. ಇದರ ವಿಶೇಷತೆಯೆಂದರೆ, ಇದನ್ನು 4 ಗಂಟೆಗಳಲ್ಲಿಯೇ ಅಳವಡಿಸಬಹುದಾಗಿದೆ. ಇದನ್ನು ಅಳವಡಿಸುವುದು ಅಥವಾ ಲಾಕ್ ಮಾಡಲು ಅಥವಾ ಟಂಗ್ ಎಂಡ್ ಗ್ರೂತಾಂತ್ರಿಕತೆ ಅಥವಾ ಯಾವುದಾರೂ ಅಂಟಿಸುವ ಪದಾರ್ಥ ಅಥವಾ ಮೊಳೆಗಳನ್ನು ಬಳಸಬಹುದಾಗಿದೆ.
ಯಾವ ಫ್ಲೋರಿಂಗ್ ಹೆಚ್ಚು ಚಾಲ್ತಿಯಲ್ಲಿದೆ?
ಹಾರ್ಡ್ ವುಡ್ ಫ್ಲೋರಿಂಗ್ : ಹಾರ್ಡ್ ವುಡ್ ಫ್ಲೋರಿಂಗ್‌ನ ಟ್ರೆಂಡ್ ಬಹಳ ಹಳೆಯದು. ಫೈನಲ್ ಪ್ರೊಸೆಸ್ಡ್ ವುಡನ್‌ನಿಂದ ತಯಾರಿಸಿದ ಹಾರ್ಡ್ ವುಡ್ ಫ್ಲೋರಿಂಗ್‌ನ ಹೊಳಪು ತುಂಬಾ ಚೆನ್ನಾಗಿರುತ್ತದೆ. ಏಕೆಂದರೆ ಅದು ರಿಯಲ್ ವುಡ್ ಆಗಿರುತ್ತದೆ. ಒಂದು ವೇಳೆ ಕೋಣೆಯಲ್ಲಿ ಕಾರ್ಪೆಟ್ ಹಾಸಿದ್ದರೆ ಅದು ನೋಡಲು ಬಹಳ ಸುಂದರವಾಗಿ ಕಾಣುತ್ತದೆ. ಆದರೆ ಅದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಧೂಳು ಶೇಖರಣೆಗೊಳ್ಳುತ್ತದೆ. ಅದು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಹಾರ್ಡ್ ವುಡ್ ಫ್ಲೋರಿಂಗ್‌ಅಳವಡಿಸುವುದರಿಂದ ನೀವು ಈ ಸಮಸ್ಯೆಯಿಂದ ಪಾರಾಗಬಹುದು.
ಇದರ ಪ್ಯಾಟರ್ನ್ ಎಷ್ಟು ಆಕರ್ಷಕವಾಗಿರುತ್ತದೆಂದರೆ, ನೀವು ಬೇರೆ ಬೇರೆ ಕೋಣೆಗಳಿಗೆ ಬೇರೆ ಬೇರೆ ಪ್ಯಾಟರ್ನ್ ಆಯ್ಕೆ ಮಾಡಬಹುದು. ಇದು ಟೀಕ್, ರೋಸ್ ವುಡ್ ಅಥವಾ ಕೆಲವು ವಿದೇಶಿ ಪ್ರಕಾರದ್ದಾಗಿರುತ್ತವೆ. ಅದರ ತೇವಾಂಶವನ್ನು ಬೆಂಕಿ ಅಥವಾ ಭಟ್ಟಿಯಲ್ಲಿ ಹೀರವಂತೆ ಮಾಡಲಾಗಿರುತ್ತದೆ ಮತ್ತು ಅದರ ಮೇಲೆ ಎಂತಹ ಬಗೆಯ ಪಾಲಿಶಿಂಗ್ ಮಾಡಲಾಗುತ್ತದೆಂದರೆ, ಯಾವುದೇ ರೀತಿಯ ಕಲೆಗಳೂ ಗೋಚರವಾಗುವುದಿಲ್ಲ. ಪಾಲಿಶ್‌ನ ಮೇಲೆಯೇ ವುಡನ್ ಬಣ್ಣ ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಇದರ ಬಣ್ಣ ವೈಟ್ ಪೀಚ್ ಅಥವಾ ಡಾರ್ಕ್ ವಾಲ್ ನಟ್ ಆಗಿರುತ್ತದೆ. ಇದರ ಬೆಲೆ ವುಡ್‌ನ ದಪ್ಪವನ್ನು ಆಧರಿಸಿ ನಿರ್ಧಾರವಾಗುತ್ತದೆ. ಇದರ ಬೆಲೆ ಸಾಮಾನ್ಯವಾಗಿ ಪ್ರತಿ ಚದರ ಅಡಿಗೆ 250 ರೂ.ಗಳಲ್ಲಿ ದೊರಕುತ್ತದೆ. ಹಾಗೆಯೇ ಇದರ ದಪ್ಪ 18 ಮಿಲಿಮೀಟರ್ ಇರುತ್ತದೆ. ಇದರ ಗಾತ್ರ 5 36 ಇಂಚು ಇರುತ್ತದೆ. ಬಣ್ಣಕ್ಕನುಗುಣವಾಗಿಯೂ ಇದರ ಬೆಲೆ ನಿರ್ಧಾರವಾಗುತ್ತದೆ.
ಲ್ಯಾಮಿನೇಟೆಡ್ ವುಡನ್ ಫ್ಲೋರಿಂಗ್ಸ್ : ನೋಡಲು ಇದು ಹಾರ್ಡ್ ವುಡ್‌ನಂತೆ ಭಾಸವಾಗುತ್ತದೆ. ಆದರೆ ಇದು ಕಂಪ್ರೆಸ್ಡ್ ಫೈಬರ್‌ನಿಂದ ತಯಾರಾದುದಾಗಿರುತ್ತದೆ. ಮಾಯಿಶ್ಚರ್, ಕೆಮಿಕಲ್, ಸ್ಟ್ರೇನ್ ಮತ್ತು ಸ್ಕ್ರಾಚ್ ಪ್ರೂಫ್ ಆಗಿರುವ ಕಾರಣದಿಂದ ಲ್ಯಾಮಿನೇಟೆಡ್ ವುಡನ್ ಫ್ಲೋರಿಂಗ್ ಹಾರ್ಡ್ ವುಡ್ ಹಾಗೂ ಪರಕ್ವೆಟ್‌ಗಿಂತ ಹೆಚ್ಚು ಇಷ್ಟಪಡಲಾಗುತ್ತದೆ. ಇದು ಉದ್ದನೆಯ ಪಟ್ಟಿಯ ರೂಪದಲ್ಲಿ ದೊರೆಯುತ್ತದೆ. ಹೀಗಾಗಿ ಇದನ್ನು ಅಳವಡಿಸುವುದು ಸುಲಭ. ಒಂದು ವೇಳೆ ಇದು ಹಾಳಾದರೂ ಇದನ್ನು ಬದಲಿಸಿ ಅಳಡಿಸುವುದು ಅತ್ಯಂತ ಸುಲಭ. ಇದರ ಮೇಲೆ ಬೇಸಿಗೆಯ ಪರಿಣಾಮ ಉಂಟಾಗದು. ಇದರ ಮೇಲೆ ಕಲೆಗಳು ಕೂಡ ಉಂಟಾಗುವುದಿಲ್ಲ, ಬಣ್ಣ ಕೂಡ ಕುಂದುವುದಿಲ್ಲ. ಬಹಳಷ್ಟು ಒರಟು ಆಗಿರದೇ ಇರುವ ಕಾರಣದಿಂದ ಇದು ಕಾಲು ನೋವಿನಿಂದ ಬಳಲುವವರಿಗೆ ಅತ್ಯಂತ ಸೌಕರ್ಯದಾಯಕ ಎನಿಸಿಕೊಳ್ಳುತ್ತದೆ. ಇದು ಅಷ್ಟೊಂದು ದುಬಾರಿ ಕೂಡ ಆಗಿರುವುದಿಲ್ಲ.
ಇಂಟೀರಿಯರ್ ಡಿಸೈನರ್ ಸಮೀರ್ ಅವರ ಪ್ರಕಾರ, ಮನೆಗಳಲ್ಲಿ ಇದರ ಪ್ರಯೋಗವನ್ನು ಹೆಚ್ಚೆಚ್ಚು ಮಾಡಲಾಗುತ್ತಿದೆ. ಏಕೆಂದರೆ ಇದನ್ನು ಅಳವಡಿಸುವುದು ಬಹಳ ಸುಲಭ. ಇದರಿಂದ ಬೆಡ್ ರೂಮ್ ಫ್ಲೋರಿಂಗ್ ಕೇವಲ 2 ಗಂಟೆಗಳಲ್ಲಿ ಮುಗಿದುಬಿಡುತ್ತದೆ. ಇದು 8 ಮಿ.ಮೀ. ದಪ್ಪ ಇರುತ್ತದೆ. ಇದನ್ನು ಅಳವಡಿಸುವುದರಿಂದ ಕಲಾತ್ಮಕತೆಯ ಅನುಭೂತಿ ಉಂಟಾಗುತ್ತದೆ. ಇದರ ಬೆಲೆ ಪ್ರತಿ ಚದರ ಅಡಿಗೆ 35 ರೂ. ನಿಂದ ಶುರುವಾಗಿ 200 ರೂ. ತನಕ ಇರುತ್ತದೆ. ಇದರ ಬೆಲೆ ವೆರೈಟಿ ಹಾಗೂ ಬ್ರ್ಯಾಂಡ್‌ಗನುಗುಣವಾಗಿ ನಿರ್ಧಾರವಾಗುತ್ತದೆ.
ಪವರ್ ಕ್ವೆಟ್ : ಪವರ್ ಕ್ವೆಟ್ ಫ್ಲೋರ್ ನ್ಯಾಚುರಲ್ ವುಡ್‌ನಿಂದ ತಯಾರಾಗಿರುತ್ತದೆ. ಇದು ಟೈಲ್ಸ್ ರೂಪದಲ್ಲೂ ಬರುತ್ತದೆ. ಟೈಲ್ಸ್ ನಂತೆ ವಿಭಿನ್ನ ಶೇಡ್ಸ್ ವುಡ್‌ನ ತೆಳುವಾದ ತುಂಡುಗಳನ್ನು ಜೋಡಿಸಿ ತಯಾರಿಸಲಾಗಿರುತ್ತದೆ. ಇದರ ಆಕರ್ಷಕ ಪ್ಯಾಟರ್ನ್ ತಯಾರಿಸಲು ಬಗೆಬಗೆಯ ಗ್ರೇನ್ ಇರುವ ವುಡ್ ಬಳಸಲಾಗುತ್ತದೆ. ಒಂದು ವೇಳೆ ಇವುಗಳಿಂದ ಪರಿಪೂರ್ಣವಾಗಿ ಫ್ಲೋರಿಂಗ್ ಮಾಡಿಸದೇ ಇರುವವರು ಕೂಡ, ಟೈಲ್ಸ್ ನಡುನಡುವೆ ಇವನ್ನು ಪ್ರಯೋಗ ಮಾಡಬಹುದಾಗಿದೆ. ಹೆಚ್ಚಾಗಿ ಇದರಲ್ಲಿ ಬ್ಯಾಸ್ಕೆಟ್ ಹಾಗೂ ಬ್ರಿಕ್ ಸ್ಟೈಲ್‌ನ ಡಿಸೈನ್ ಮಾಡಲಾಗುತ್ತದೆ. ಇದರ ಬೆಲೆ ಪ್ರತಿ ಚದರ ಅಡಿಗೆ ರೂ. 65 ರಿಂದ 700 ರೂ.ವರೆಗೆ ಇರುತ್ತದೆ. ಆದರೆ ಇದನ್ನು ಅವಳಡಿಸಲು ಹೆಚ್ಚು ಸಮಯ ತಗುಲುವುದು ಮತ್ತು ಪಾಲಿಶ್‌ನ ಕಾರಣದಿಂದ ಇದನ್ನು ಹೆಚ್ಚಿನ ಜನ ಇಷ್ಟಪಡುವುದಿಲ್ಲ.
ಕಂಟೆಂಪರರಿ ಲುಕ್ಸ್ ಗಾಗಿ ಲ್ಯಾಯಾಮಿನೇಟೆಡ್ ವುಡನ್ ಕಡಿಮೆ ಬಜೆಟ್‌ನಲ್ಲಿ ಕಂಟೆಂಪರರಿ ಲುಕ್ಸ್ ನೀಡುತ್ತದೆ. ಆಧುನಿಕ ಇಂಟೀರಿಯರ್ ಡಿಸೈನರ್‌ಗಳ ಪ್ರಕಾರ, ಇದನ್ನು ಅಳವಡಿಸುವ ಲೇಟೆಸ್ಟ್ ಟೆಕ್ನಿಕ್‌ನಿಂದ ನೀವು ಕಡಿಮೆ ಸಮಯದಲ್ಲಿಯೇ ನಿಮ್ಮ ಮನೆಗೆ ಫ್ರೆಶ್ ಲುಕ್ಸ್ ನೀಡಬಹುದು. ಇದು ಒಂದು ಬೋರ್ಡ್ ರೂಪದಲ್ಲಿ ಬರುತ್ತದೆ ಹಾಗೂ ಇದನ್ನು ಇಂಟರ್ ವಾಕ್ ಅರೇಂಜ್‌ಮೆಂಟ್ ರೀತಿಯಲ್ಲಿ ಅಳವಡಿಸಲಾಗುತ್ತದೆ. ಇದನ್ನು ಅಳವಡಿಸುವ ಮುಂಚೆ ಇದರ ಕ್ವಾಲಿಟಿ ಹಾಗೂ ಇದನ್ನು ಅಳವಡಿಸಲು ಪೇಸ್ಟ್ ನ ಥಿಕ್‌ನೆಸ್ ಬಗ್ಗೆ ಪರಿಶೀಲನೆ ಮಾಡಬೇಕು.
ಕ್ಲಾಸಿಕ್ ಡೆಕೋರ್‌ಗಾಗಿ ಜನರು ಸಾಮಾನ್ಯವಾಗಿ ಲ್ಯಾಮಿನೇಟೆಡ್ ಫ್ಲೋರಿಂಗ್ ಮತ್ತು ವುಡನ್ ಫ್ಲೋರಿಂಗ್‌ನ್ನು ಒಂದೇ ಎಂದು ಭಾವಿಸುತ್ತಾರೆ. ಆದರೆ ಎರಡೂ ಬೇರೆ ಬೇರೆಯಾಗಿರುತ್ತವೆ. ಸಮೀರ್ ಅವರ ಪ್ರಕಾರ, ಹಾರ್ಡ್ ವುಡ್ ಫ್ಲೋರಿಂಗ್ ಇಡೀ ಮನೆಗೆ ನಿಶ್ಚಿತವಾಗಿಯೂ ರಿಚ್ ಲುಕ್ಸ್ ನೀಡುತ್ತದೆ. ಆದರೆ ಇದು ದುಬಾರಿ ಪ್ರಕ್ರಿಯೆ ಮತ್ತು ಇದರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಇತ್ತೀಚೆಗೆ ಇದರಲ್ಲಿ 2 ಅಥವಾ ಅದಕ್ಕೂ ಹೆಚ್ಚು ಬಣ್ಣಗಳನ್ನು ಮಿಶ್ರಣ ಮಾಡಿ ಫ್ಲೋರಿಂಗ್ ಮಾಡಲಾಗುತ್ತಿದೆ. ಬ್ರೈಟ್ ಹಾಗೂ ವೈಟ್ ಕಲರ್‌ನ್ನು ಮಿಕ್ಸ್ ಮತ್ತು ಮ್ಯಾಚ್ ಮಾಡಿ ಅಳವಡಿಸುವುದರಿಂದಲೂ ವುಡನ್ ಫ್ಲೋರಿಂಗ್ ಒಂದು ವಿಶಿಷ್ಟ ಇಂಪ್ಯಾಕ್ಟ್ ನೀಡುತ್ತದೆ. ಲೈಟ್ ಬ್ರೌನ್‌ನಿಂದ ಹಿಡಿದು ಡಾರ್ಕ್ ಬ್ರೌನ್ ಮತ್ತು ವೈಟ್ ಬ್ಲೂ ಶೇಡ್‌ನಲ್ಲಿ ಲಭ್ಯವಿರುವ ಲ್ಯಾಮಿನೇಟೆಡ್ ವುಡ್ ಪ್ಲ್ಯಾಕ್ಸ್ ನ್ನು ಎಲ್ಲಿಯಾದರೂ ಅಳವಡಿಸಬಹುದಾಗಿದೆ. ಕ್ಲಾಸಿಕ್ ಡೆಕೋರ್ ಮತ್ತು ಚಾರ್ಮ್ ಗಾಗಿ ವುಡನ್ ಫ್ಲೋರಿಂಗ್‌ನ ಟ್ರೆಂಡ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಾ ಹೊರಟಿದೆ.
ಸ್ವಚ್ಛತೆ ಶುಭ್ರತೆ
ವುಡನ್ ಫ್ಲೋರಿಂಗ್‌ನ ನಿಯಮಿತ ಸ್ವಚ್ಛತೆ ಕೈಗೊಳ್ಳಬೇಕು. ಆದರೆ ಸೋಪು ಮತ್ತು ಕೆಮಿಕಲ್ಸ್ ನ್ನು ಯಾವುದೇ ಕಾರಣಕ್ಕೂ ಉಪಯೋಗಿಸಬಾರದು. ಇದರಿಂದ ಅದರ ಹೊಳಪು ಕಡಿಮೆಯಾಗುತ್ತದೆ. ಅದೇ ರೀತಿ ಇದರ ಮೇಲ್ಭಾಗದಿಂದ ಪೀಠೋಪಕರಣಗಳನ್ನು ಎಳೆದಾಡಬೇಡಿ. ಇದರ ಮೇಲೆ ಬೀಳುವ ನೇರ ಬಿಸಿಲು ಕೂಡ ಇದರ ಹೊಳಪನ್ನು ಕಡಿಮೆ ಮಾಡಬಹುದು. ಇದರ ಮೇಲೆ ಹೆಚ್ಚು ನೀರು ಕೂಡ ಹಾಕಬಾರದು, ಒದ್ದೆ ಬಟ್ಟೆಯಿಂದ ಒರೆಸುವುದು ಸೂಕ್ತ.
ಫರ್ನಿಶಿಂಗ್ ಅಂಡ್ ಸ್ಟೈಲ್‌ನ ಮಾಲೀಕ ನವೀನ್ ಅವರು ಈ ಕುರಿತಂತೆ ಹೀಗೆ ಹೇಳುತ್ತಾರೆ, “ಇತ್ತೀಚಿನ ದಿನಗಳಲ್ಲಿ ಸ್ಟೋನ್ ಫ್ಲೋರಿಂಗ್‌ನ ಬದಲಿಗೆ ವುಡನ್ ಫ್ಲೋರಿಂಗ್‌ನ್ನು ಹೆಚ್ಚು ಇಷ್ಟಪಡಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಇದು ಕೋಣೆಯ ತಾಪಮಾನವನ್ನು ಕಾಯ್ದುಕೊಂಡು ಹೋಗುತ್ತದೆ. ಒಂದು ವೇಳೆ ಇದರ ಬಗ್ಗೆ ಸೂಕ್ತ ನಿಗಾ ವಹಿಸಿದರೆ, ಇದು ವರ್ಷಾನುವರ್ಷ ಹಾಗೆಯೇ ಸುರಕ್ಷಿತವಾಗಿ ಉಳಿಯುತ್ತದೆ. ಸಾಮಾನ್ಯವಾಗಿ ನಾವು ಗ್ರಾಹಕರಿಗೆ ಕೇವಲ 10 ವರ್ಷಗಳ ವಾರಂಟಿ ಮಾತ್ರ ನೀಡುತ್ತೇವೆ.” ಮತ್ತೊಬ್ಬ ಇಂಟೀರಿಯರ್ ಡಿಸೈನರ್‌ಶಶಿ ಹೀಗೆ ಹೇಳುತ್ತಾರೆ, “ಇದರ ಮೇಲೆ ವುಡನ್ ಪಾಲಿಶ್‌ನ್ನು ಉಪಯೋಗಿಸಬೇಡಿ. ಏಕೆಂದರೆ ರಿಯಲ್ ವುಡನ್ ಫ್ಲೋರಿಂಗ್‌ಗಾಗಿಯೇ ಇರುತ್ತದೆ ಆದರೆ ಲ್ಯಾಮಿನೇಟೆಡ್ ವುಡ್‌ಗಾಗಿ ಅಲ್ಲ. ವದನ್ನು ಒದ್ದೆ ಬಟ್ಟೆಯಿಂದ ಒರೆಸಿದರೆ ಸಾಕು.”
– ಸುಮನಾ ಭಟ್