ಕೋಲ್ಕತಾ, ಚಂಡೀಘಡ ಮತ್ತು ದೆಹಲಿಯ ನಂತರ, ಸ್ಪರ್ಧೆಯ ನಾಲ್ಕನೆ ಹಂತ ಬೆಂಗಳೂರಿನಲ್ಲಿ ಪ್ರಾದೇಶಿಕ ಸುತ್ತಿನೊಂದಿಗೆ ಆರಂಭವಾಯ್ತು. ಈ ಹಿನ್ನೆಲೆಯಲ್ಲಿ ಭಾರತದ ಮುಂದಿನ ಸೂಪರ್ ಮಾಡೆಲ್ ಆಗುವ, ಜೀವನದಲ್ಲಿ ಒಮ್ಮೆ ಬರುವ ಅವಕಾಶದಲ್ಲಿ ಭಾಗವಹಿಸಲು ನಗರದ ಯುವಕ ಯುವತಿಯರ ದಂಡು ಇತ್ತೀಚೆಗೆ ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ನೆರೆದಿತ್ತು. `ಫ್ಯಾಷನ್ ಹಬ್’ ಈ ಉತ್ಸಾಹಿ ಯುವ ಸಮುದಾಯದರಿಂದ ತುಂಬಿತ್ತು.
ಮ್ಯಾಕ್ಸ್ ನ ಸಹಯೋಗದೊಂದಿಗೆ ಎಲಿಟ್ 18 ರಿಂದ 23 ವರ್ಷ ವಯಸ್ಸಿನ ಸಾವಿರಾರು ಹುಡುಗ ಹಡುಗಿಯರಿಗೆ, ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳುವ ಅವಕಾಶವನ್ನು ಒದಗಿಸುತ್ತದೆ ಮತ್ತು ಈ ಮೂಲಕ ತಮ್ಮ ನೆಚ್ಚಿನ ವಿಶ್ವಮಟ್ಟದ ರೂಪದರ್ಶಿಗಳಾದ ಸಿಂಡಿ ಕ್ರಾರ್ಪ್, ಸ್ಟೆಫಾನಿ ಸೆಯ್ ಮೌರ್, ಗಿಸೆಲ್ ಬಂಡ್ಚೆನ್, ಸಿಗ್ರಿಡ್ ಆಗ್ರೆನ್ ಮತ್ತು ಕಾನ್ಸ್ಟೆನ್ಸ್ ಜಂಬ್ಲೊಂಸ್ಕಿಯಂಥವರನ್ನು ಅನುಸರಿಸುವ ಅವಕಾಶ ಒದಗಿಸಿತ್ತು. ಫ್ಯಾಷನ್ ಲೋಕದ ದಿಗ್ಗಜರಾದ ಮಾರ್ಕ್ ರಾಬಿನ್ ಸನ್, ಸ್ಯಾಂಡಿನ್‌ಪಿಂಟೊ ಮತ್ತು ಮ್ಯಾಕ್ಸ್ ನ ಕಾರ್ಯನಿರ್ನಾಹಕ ನಿರ್ದೇಶಕ ವಸಂತ್ ಕುಮಾರ್ ಅವರನ್ನೊಳಗೊಂಡ ಹೆಸರಾಂತ ವ್ಯಕ್ತಿಗಳು ತೀರ್ಪುಗಾರರಾಗಿದ್ದರು. ಸ್ಪರ್ಧಿಗಳ ರಾಂಪ್ ನಡಿಗೆ, ಮೊದಲ ಬಾರಿಯ ಪ್ರಭಾ ಮತ್ತು ಫೋಟೋಜೆನಿಕ್ ನೋಟಗಳಂತಹ ಅಂಶಗಳನ್ನು ಆಧರಿಸಿ ಆಯ್ಕೆ ಮಾಡಲಾಯಿತು.
ಚಂಡೀಘಡ, ದೆಹಲಿ, ಕೋಲ್ಕತಾ ಹಾಗೂ ಬೆಂಗಳೂರಿನ ನಂತರ, ಈ ಪ್ರಾದೇಶಿಕ ಆಯ್ಕೆಯ ಅಂತಿಮ ಸುತ್ತು ಮುಂಬೈನಲ್ಲಿ ಜರುಗಲಿದೆ. ಈ ಪೈಕಿ ಆಯ್ಕೆಯಾಗುವ 20 ಸ್ಪಧಿಗಳು (10 ಹುಡುಗರು ಮತ್ತು ಹುಡುಗಿಯರು) ಮುಂಬೈನಲ್ಲಿ ನಡೆಯುವ ರಾಷ್ಟ್ರೀಯ ಆಯ್ಕೆಯಲ್ಲಿ ಭಾಗವಹಿಸುವರು. ನಂತರ ಅಂತಿಮ ಸುತ್ತಿಗೆ ಆಯ್ಕೆಯಾದವರು ಫ್ಯಾಷನ್ ಲೋಕದ ಗುರುಗಳಾದ ಮಾರ್ಕ್ ರಾಬಿನ್ ಸನ್ ರಂತಹ ಖ್ಯಾತ ರೂಪದರ್ಶಿಗಳೊಂದಿಗೆ `ರಾಷ್ಟ್ರೀಯ ಪೂರ್ವ ತಯಾರಿ ಸಪ್ತಾಹ’ದಲ್ಲಿ ಭಾಗಹಿವಸುತ್ತಾರೆ. ಈ ಸುತ್ತಿನಲ್ಲಿ ಸ್ಪರ್ಧಿಗಳಿಗೆ ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಲು ತರಬೇತಿ ಹಾಗೂ ಮಾರ್ಗದರ್ಶನ ನೀಡಲಾಗುತ್ತದೆ. ವಿಜೇತರು ಚೀನಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಅಂತಿಮ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಾರೆ ಮತ್ತು ಎಲಿಟ್ ಏಜೆನ್ಸಿಯಿಂದ 3 ವರ್ಷಗಳ ಕೆಲಸದ ಒಪ್ಪಂದ ಪಡೆಯಲಿದ್ದಾರೆ. ಈ ಉಪಕ್ರಮದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಮ್ಯಾಕ್ಸ್ ನ ಕಾರ್ಯ ನಿರ್ವಾಹಕ ನಿರ್ದೇಶಕ ವಸಂತ್ ಕುಮಾರ್, “ಎಲಿಟ್ ಮಾಡೆಲ್ ಲುಕ್ ಇಂಡಿಯಾ 2014ರ ಚಾಲನೆಯೊಂದಿಗೆ, `ಮ್ಯಾಕ್ಸ್’ ಭಾರತದ ಮಹತ್ವಾಕಾಂಕ್ಷಿ ರೂಪದರ್ಶಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಅವಕಾಶವನ್ನು ಒದಗಿಸುತ್ತದೆ. ಬೆಂಗಳೂರಿನಲ್ಲಿ ಅದ್ಭುತ ಪ್ರತಿಕ್ರಿಯೆಯನ್ನು ಗಮನಿಸಿದ್ದೇವೆ ಮತ್ತು ಭಾರತದ ಮುಂದಿನ ಸೂಪರ್ ಮಾಡೆಲ್‌ಗಾಗಿ ನಡೆಸುತ್ತಿರುವ ಈ ಆಯ್ಕೆಗಳು, ಫ್ಯಾಷನ್ ಲೋಕದಲ್ಲಿ ಏಳ್ಗೆಯನ್ನು ನಿರೀಕ್ಷಿಸುತ್ತಿರುವ ಮಹತ್ವಾಕಾಂಕ್ಷಿ ರೂಪದರ್ಶಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ನೆರವಾಗುತ್ತದೆ ಎಂದು ನಂಬಿದ್ದೇವೆ,” ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಮ್ಯಾಕ್ಸ್ ಇಎಂಎಲ್ ಇಂಡಿಯಾ 2014ರ ಯೋಜನಾ ಮುಖ್ಯಸ್ಥ ಮಾರ್ಕ್ ರಾಬಿನ್ ಸನ್, “ಫ್ಯಾಷನ್ ಕ್ಷೇತ್ರದಲ್ಲಿ 1990ರಲ್ಲಿ ಭಾರತದಲ್ಲಿದ್ದ ಮಹತ್ತರ ಗುರುತು ಇಂದು ಇಲ್ಲ. ಭಾರತ ಸೂಪರ್ ಮಾಡೆಲ್‌ಗಳ ಕೊರತೆಯನ್ನು ಎದುರಿಸುತ್ತಿದೆ. ಮ್ಯಾಕ್ಸ್ ಮತ್ತು ಎಲಿಟ್ ಮಾಡೆಲ್‌ಗಳಾಗಲು ಬಯಸುತ್ತಿರುವ ಯುವ ಸಮುದಾಯಕ್ಕೆ ಅತ್ಯುತ್ತಮ ಅವಕಾಶ ಒದಗಿಸುತ್ತದೆ,” ಎಂದರು.
ಮ್ಯಾಕ್ಸ್ ಕುರಿತು
ಮ್ಯಾಕ್ಸ್ ಒಂದು ಪ್ರಮುಖ ಫ್ಯಾಷನ್ ಬ್ರ್ಯಾಂಡ್ ಆಗಿದ್ದು, ಇಡೀ ಕುಟುಂಬದ ಗ್ರಾಹಕರಿಗೆ ಉಡುಗೆ, ತೊಡುಗೆಗಳು ಮತ್ತು ಪಾದರಕ್ಷೆಗಳ ಶ್ರೇಣಿಯನ್ನು ಒದಗಿಸುತ್ತದೆ.
ಲೈಫ್ ಸ್ಟೈಲ್ ಇಂಟರ್ ನ್ಯಾಷನಲ್ (ಪ್ರೈ) ಲಿ.ನ ವಿಭಾಗವಾದ ಮ್ಯಾಕ್ಸ್, `ವ್ಯಾಲ್ಯೂಮ್ ಫ್ಯಾಷನ್’ ಎಂಬ ಪರಿಕಲ್ಪನೆಯನ್ನು ದೇಶದಲ್ಲಿ ಹುಟ್ಟುಹಾಕಿದ್ದು, ಈ ಮೂಲಕ ಗ್ರಾಹಕರಿಗೆ ಅಂತಾರಾಷ್ಟ್ರೀಯ ಮಟ್ಟದ ಶೈಲಿ ಹಾಗೂ ಗುಣಮಟ್ಟದ ಶಾಪಿಂಗ್ ಆಯ್ಕೆಗಳನ್ನು ಒದಗಿಸುತ್ತಿದೆ. ಇತ್ತೀಚಿನ ಶೈಲಿಯ ಸಿದ್ಧ ಉಡುಗೆಗಳು, ಪಾದರಕ್ಷೆಗಳು ಮತ್ತು ಇತರೆ ಪರಿಕರಗಳನ್ನು ಆಕರ್ಷಕ ದರಗಳಲ್ಲಿ ಒದಗಿಸುತ್ತಿದೆ. ಮಾರಾಟ ಮಳಿಗೆಯೂ ಸಹ ಅಂತಾರಾಷ್ಟ್ರೀಯ ಮಟ್ಟದ ಅನುಭವವನ್ನು ಒದಗಿಸುತ್ತದೆ. ಭಾರತದಾದ್ಯಂತ ಮ್ಯಾಕ್ಸ್ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಚೆನ್ನೈ, ಪಾಂಡಿಚೆರಿ, ಕೊಯಂಬತ್ತೂರು, ಕಣ್ಣೂರ್, ಮದುರೈ, ತ್ರಿಶೂರ್, ತಿರುಚ್ಚಿ,, ಕೋಚಿ, ಕ್ಯಾಲಿಕಟ್, ತಿರುವನಂತಪುರ, ಹೈದರಾಬಾದ್, ವಿಜಯವಾಡ, ವೈಜಾಗ್, ಮುಂಬೈ, ದೆಹಲಿ/ಎನ್‌ಸಿಆರ್, ಕೋಲ್ಕತಾ, ಪುಣೆ, ಭೂಪಾಲ್, ಇಂದೋರ್, ಲಕ್ನೋ, ಭುವನೇಶ್ವರ್, ಜೈಪುರ್, ಜಬ್ಬಲ್ ಪುರ್, ಜಮ್ಮು, ಕಾನ್ಪುರ್, ನಾಗ್ಪುರ್, ರಾಯ್‌ಪುರ್, ಸೂರತ್, ವಡೋದರ, ಗ್ಯಾಂಗ್ಟಾಕ್, ರಾಂಚಿ, ಸಿಲಿಗುರಿ, ಆಗ್ರಾ, ಅಲಹಾಬಾದ್, ಅಮೃತ್‌ಸರ್, ಬರೇಲಿ, ಚಂಡೀಘಡ್, ಡೆಹರಾಡೂನ್, ವಾರಾಣಸಿ ಸೇರಿದಂತೆ ಒಟ್ಟು 43 ನಗರಗಳಲ್ಲಿ 90ಕ್ಕೂ ಹೆಚ್ಚಿನ ಮಳಿಗೆಗಳನ್ನು ಹೊಂದಿದೆ. ಜೊತೆಗೆ ಈ ಹಣಕಾಸು ವರ್ಷದ ಅಂತ್ಯದೊಳಗೆ ತನ್ನ ಮಾರಾಟ ಸಂಪರ್ಕ ಜಾಲವನ್ನು 120 ಮಳಿಗೆಗಳಿಗೆ ಹೆಚ್ಚಿಸುವ ಯೋಜನೆ ಹೊಂದಿದೆ.
ಎಲಿಟ್ ವರ್ಡ್ ಕುರಿತು
ಎಲಿಟ್ ವರ್ಡ್, ಪೆಸಿಫಿಕ್ ಗ್ಲೋಬಲ್ ಮ್ಯಾನೇಜ್ ಮೆಂಟ್ (ಪಿಜಿಎಂ) ಸ್ವಾಮ್ಯದ ಸಂಸ್ಥೆಯಾಗಿದ್ದು, ಮಾಡೆಲಿಂಗ್ ಮತ್ತು ಸಂಗೀತ ಕ್ಷೇತ್ರದಲ್ಲಿ ಕೌಶಲ್ಯ ನಿರ್ವಹಣೆಯನ್ನು ಮಾಡುತ್ತಿರುವ, ಐಷಾರಾಮಿ ಹಾಗೂ ನೇರ ಕಾರ್ಯಕ್ರಮಗಳನ್ನು ಆಯೋಜಿಸುವ ಕಂಪನಿಯಾಗಿದೆ. ಜೊತೆಗೆ, ಈ ಸಮೂಹ ಚೀನಾ ಮೂಲದ ಮನರಂಜನೆ `ಗೋಲ್ಡ್ ಟೈಪನ್’ ಮತ್ತು ಇಟಲಿಯ ಪ್ರಮುಖ ಒಳ ಉಡುಪುಗಳ ಬ್ರ್ಯಾಂಡ್’ಗಳ ಒಡೆತನ ಹೊಂದಿದೆ. ಎಲಿಟ್ ಮಾಡೆಲ್ ಮ್ಯಾನೇಜ್ ಮೆಂಟ್‌ನ್ನು 1972ರಲ್ಲಿ ಸ್ಥಾಪಿಸಲಾಯಿತು. ಇದು ವಿಶ್ವದ ಅತಿ ದೊಡ್ಡ ಮಾಡೆಲ್ ಏಜೆನ್ಸಿಯಾಗಿದ್ದು, ವಿಶ್ವದ 5 ಖಂಡಗಳಲ್ಲಿ ಸಾವಿರಾರು ಮಾಡೆಲ್‌ಗಳ ಪ್ರಾತಿನಿಧ್ಯ ಹೊಂದಿದೆ.
ಹೆಸರಾಂತ ರೂಪದರ್ಶಿಗಳಾದ ಆಡ್ರಿಯಾನ ಲಿಮ, ಲಿಯು ಲೆನ್, ಸಿಗ್ರಿಡ್ ಆಗ್ರೆನ್, ಕಾನ್‌ಸ್ಟೆನ್ಸ್ ಒಬ್ಲೊನ್ಸ್ಕಿ, ಫೇಯ್ ಫೇಯ್, ಸನ್ ಹಾಗೂ ಮಿಂಗ್ ಝಿಯರು ಎಲಿಟ್‌ನ ಪ್ರತಿನಿಧಿಗಳಾಗಿದ್ದಾರೆ. ಎಲಿಟ್ ಕೇವಲ ಮಾಡೆಲ್ ಏಜೆನ್ಸಿಗಳ ಸಂಪರ್ಕ ಜಾಲವಷ್ಟೇ ಆಗಿರದೆ, ಮಾಡೆಲ್ ನಿರ್ವಹಣೆಯಲ್ಲಿ ಹೆಸರನ್ನು ಗಳಿಸಿದೆ ಮತ್ತು ಎಲಿಟ್ ಮಾಡೆಲ್ ಲುಕ್ ಸ್ಪರ್ಧೆ ಹಾಗೂ ವಿಶ್ವದರ್ಜೆಯ ಪರವಾನಗಿಯನ್ನೂ ಹೊಂದಿದೆ.
ಎಲಿಟ್ ಮಾಡೆಲ್ ಲುಕ್ ಕುರಿತು
ಎಲಿಟ್ ಮಾಡೆಲ್ ಲುಕ್ ಪ್ರಮುಖ ಅಂತಾರಾಷ್ಟ್ರೀಯ ರೂಪದರ್ಶಿಯರನ್ನು ಹುಡುಕುವ ಒಂದು ಸ್ಪರ್ಧೆಯಾಗಿದೆ. ಈ ಸ್ಪರ್ಧೆ ಜಗತ್ತಿನ 60ಕ್ಕೂ ಹೆಚ್ಚಿನ ದೇಶಗಳಲ್ಲಿ ಚಾಲನೆಯಲ್ಲಿದ್ದು, ಪ್ರತಿ ವರ್ಷ ಸಾವಿರಾರು ಯುವಕ, ಯುವತಿಯರನ್ನು ಆಕರ್ಷಿಸುತ್ತಿದೆ. ಸಿಂಡಿ ಕ್ರಾಫರ್ಡ್, ಮಿಂಗ್ ಝೂ, ಸಿಗ್ರಿಡ್ ಅಗ್ರೆನ್, ಕಾನ್‌ಸ್ಟೆನ್ಸ್ ಒಬ್ಲೊನ್ಸ್ಕಿ, ಫೇಯ್ ಫೇಯ್, ಸನ್ ಹಾಗೂ ಗಿಸೆಲ್ ಬಂಡ್ಜೆನ್‌ರಂತಹ ಹೆಸರಾಂತ ರೂಪದರ್ಶಿಗಳನ್ನು ಪರಿಚಯಿಸಿದ ಹೆಗ್ಗಳಿಕೆ ಹೊಂದಿದೆ. ಫ್ಯಾಷನ್ ಲೋಕಕ್ಕೆ ಪಾದಾರ್ಪಣೆ ಮಾಡಲು ಬಯಸುವ ಯುವಜನತೆಗೆ ಅವಕಾಶ ಒದಗಿಸಿ, ಅವರಿಗೆ ಯಶಸ್ವಿ ವೃತ್ತಿ ಜೀವನ ನೀಡುತ್ತದೆ.