ಹಿಂದೆ ತಾಯಂದಿರು ತಮ್ಮ ಮಗಳಿಗೆ ಮದುವೆಯಲ್ಲಿ ಬಹಳ ಇಷ್ಟಪಟ್ಟು 16 ಮೊಗ್ಗುಗಳ ಲಂಗ ಹೊಲಿಸುತ್ತಿದ್ದರು. ಆದರೆ ಇಂದು ಮಗಳು ಫ್ಯಾಷನ್‌ ಟ್ರೆಂಡ್‌ಗೆ ಅನುಗುಣವಾಗಿ ಮದುವೆಯ ಉಡುಪನ್ನು ಹೊಲಿಸಿ ಧರಿಸಲು ಇಚ್ಛಿಸುತ್ತಾರೆ. ಬ್ರೈಡಲ್ ಲಂಗಗಳಲ್ಲಿ ಕಾಲ ಕಾಲಕ್ಕೆ ಎಷ್ಟು ಬದಲಾವಣೆ ಬಂದಿದೆಯೆಂದು ನೀವು ಗಮನಿಸಿರಬಹುದು. ದುಪಟ್ಟಾ ಸ್ಟೈಲ್‌ನಲ್ಲಿ ಬದಲಾಗಿದೆಯಲ್ಲದೆ, ಬ್ಲೌಸ್ ನ ಕಟ್‌ ಕೂಡ ಬದಲಾಗಿದೆ. ಇಂದು ವಧು ತನ್ನ ವೆಡ್ಡಿಂಗ್‌ ಡ್ರೆಸ್‌ನೊಂದಿಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಲು ಇಚ್ಛಿಸುವುದಿಲ್ಲ. ಅವಳು ಯಾಕಾದರೂ ರಾಜಿ ಮಾಡಿಕೊಳ್ಳಬೇಕು? ಅವಳ ಮದುವೆಯ ದಿನ ಅವಳ ಬದುಕಿನಲ್ಲಿ ಅತ್ಯಂತ ವಿಶೇಷ ದಿನವಾಗಿರುತ್ತದೆ. ಅಂದು ಸುಂದರವಾಗಿ ಕಾಣಿಸಿಕೊಳ್ಳುವುದು ಅವಳ ಹಕ್ಕು. ಫ್ಯಾಷನ್‌ ಪ್ರೊಫೆಶನ್‌ಗಾಗಿ ಯಾವ ರೀತಿಯ ಲಂಗಗಳು ಫ್ಯಾಷನ್‌ನಲ್ಲಿವೆ, ಯಾವುದನ್ನು ಧರಿಸಿ ನಿಮ್ಮ ವಿಶೇಷ ದಿನವನ್ನು ಇನ್ನಷ್ಟು ವಿಶೇಷವನ್ನಾಗಿ ಮಾಡುವುದೆಂದು ತಿಳಿಸಿಕೊಡುತ್ತಿದ್ದಾರೆ.

ಲೇಟೆಸ್ಟ್ ಟ್ರೆಂಡ್

ದೊಡ್ಡ ಸುತ್ತುಗಳಿರುವ ಲಂಗ ಫ್ಯಾಷನ್‌ನಲ್ಲಿ ಇರಲಿಲ್ಲ. ಈಗ ಇದು ಸಾಕಷ್ಟು ಫ್ಯಾಷನೆಬಲ್ ಆಗಿಬಿಟ್ಟಿದೆ. ಇದು ಸೊಂಟದಿಂದ ಹಿಡಿದು ಮಂಡಿಯವರೆಗೆ ಶರೀರಕ್ಕೆ ಫಿಟ್‌ ಆಗಿರುತ್ತದೆ. ಇದರಲ್ಲಿ ಕೆಳಗೆ ಮೊಗ್ಗುಗಳಿಂದ ಸುತ್ತುವರಿದಿರುತ್ತದೆ. ಇದರಲ್ಲಿ ಬ್ರೈಡ್‌ನ ಫಿಗರ್‌ ಅಡಗುವುದರ ಬದಲಾಗಿ ಇನ್ನಷ್ಟು ಅರಳುತ್ತದೆ. ಈ ದಿನಗಳಲ್ಲಿ ಫ್ಯೂಷನ್‌ ಡ್ರೇಪ್‌ ಬೀಟ್‌ ಲಂಗಗಳನ್ನು ಬಹಳವಾಗಿ ಪ್ರಶಂಸಿಸಲಾಗುತ್ತಿದೆ. 8 ಮೊಗ್ಗಿನ ಲಂಗ ಅಥವಾ ಟ್ರೆಡಿಶನಲ್ ಲಂಗಗಳೊಂದಿಗೆ ರವಿಕೆ, ಅನಾರ್ಕಲಿ ಮತ್ತು ಜಾಕೆಟ್‌ ಟಾಪ್‌ ಹೆಚ್ಚು ಚಾಲ್ತಿಯಲ್ಲಿದೆ. ಅಂಬ್ರೆಲಾ ಕಟ್‌ ಘಾಘ್ರಾ ಮತ್ತು ರವಿಕೆಯ ಫ್ಯಾಷನ್‌ ಈ ದಿನಗಳಲ್ಲಿ ಔಟ್‌ ಆಗಿಬಿಟ್ಟಿದೆ. ಅವುಗಳ ಜಾಗದಲ್ಲಿ ಈಗ ಸ್ಲಿಮ್ ಲಾಂಗ್‌ ಸ್ಕರ್ಟ್ಸ್ ಬಂದಿವೆ. ಅವನ್ನು ಲಾಂಗ್‌ ಸ್ಲೀವ್ ‌ಬ್ಲೌಸ್‌ನೊಂದಿಗೆ ಮ್ಯಾಚ್‌ ಮಾಡಲಾಗುತ್ತಿದೆ. ಅದಲ್ಲದೆ ಶೇರ್ವಾನಿ ಲಂಗ ಮತ್ತು ಸೀರೆ ಗೌನ್‌ ಕೂಡ ಈಗ ಬಹಳ ಚಾಲ್ತಿಯಲ್ಲಿದೆ. ಇವು 21ನೇ ಶತಮಾನದ ಬ್ರೈಡಲ್‌ಗಳಿಗೆ ಇಂಟರ್‌ನ್ಯಾಷನಲ್ ಲುಕ್‌ ಮತ್ತು ಫೀಲಿಂಗ್‌ ಕೊಡುತ್ತವೆ. ಇವು ವೆಸ್ಟರ್ನ್‌ ಫ್ಯಾಷನ್‌ನಿಂದಲೂ ಸಾಕಷ್ಟು ಪ್ರಭಾವಿತವಾಗಿವೆ. ವೆಸ್ಟರ್ನ್ ಬ್ರೈಡಲ್ ಫ್ಯಾಷನ್‌ನಲ್ಲಿ ವಿಂಟೇಜ್‌ ಮತ್ತು ಎಲಿಜಬೆತ್‌ ಎರಾದ ಹೊಳಪಿದೆ. ಒಂದು ವೇಳೆ ನೀವು ಮದುವೆಯಲ್ಲಿ ವೆಸ್ಟರ್ನ್‌ ಮತ್ತು ಸಮಕಾಲೀನ ಲುಕ್‌ ಬಯಸಿದರೆ ಗೌನ್‌ ಲಂಗ ಸೆಲೆಕ್ಟ್ ಮಾಡಿ. ಇಂದು ಇದು ಫ್ಯಾಷನ್‌ ಟ್ರೆಂಡ್‌ನಲ್ಲಿದೆ. ಹೆವಿ ಲುಕ್‌ ಬಯಸಿದರೆ ವಿಕ್ಟೋರಿಯನ್‌ ಗೌನ್‌ ಆರಿಸಿಕೊಳ್ಳಿ. ಸೀರೆ ಗೌನ್‌ ಕೂಡ ಈಗ ಫ್ಯಾಷನ್‌ನಲ್ಲಿವೆ. 3ಡಿ ಲಂಗ ಕೂಡ ಫ್ಯಾಷನ್‌ನಲ್ಲಿದ್ದು, ಅದು 3ಡಿ ಎಫೆಕ್ಟ್ ಕೊಡುತ್ತದೆ. ಈಗ ವೆಡ್ಡಿಂಗ್‌ ಡ್ರೆಸ್‌ನಲ್ಲಿ ಫಿಶ್‌ ಕಟ್‌ ಲಂಗ, ಏ ಲೈನ್‌ ಲಂಗ, ಸ್ಕರ್ಟ್‌ ಟೈಪ್‌ ಲಂಗ, ಏ ಲೈನ್‌ ಸೆಟ್‌, ಬ್ರೈಡಲ್ ಸೀರೆ, ಲಂಗ ಸ್ಟೈಲ್ ಸೀರೆ ಮತ್ತು ಫಿಶ್‌ ಕಟ್‌ ಸೀರೆಯೂ ಫ್ಯಾಷನ್‌ನಲ್ಲಿದೆ.

ಕಲರ್‌ ಇನ್‌ ಫ್ಯಾಷನ್‌

 

ಹೆಚ್ಚಿನ ಹುಡುಗಿಯರು ಮದುವೆಯಲ್ಲಿ ಕೆಂಪು ಅಥವಾ ಮೆರೂನ್‌ ಬಣ್ಣದ ಉಡುಪನ್ನೇ ಧರಿಸಬೇಕು ಎಂದುಕೊಳ್ಳುತ್ತಾರೆ. ಆದರೆ ಈಗ ಆ ಆಲೋಚನೆ ಬದಲಾಗಿದೆ. ಮದುವೆಯಲ್ಲಿ ಕೂಡ ಫ್ಯಾಷನ್‌ ಟ್ರೆಂಡ್‌ಗಳಿಗೆ ತಕ್ಕಂತೆ ಡ್ರೆಸಪ್‌ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿ ಲೈನ್‌, ಸೀ ಗ್ರೀನ್‌, ನಿಯಾನ್‌ ಕಲರ್ಸ್‌ ಮತ್ತು ಯೆಲ್ಲೋ ಮತ್ತು ಪರ್ಪಲ್ ಕಲರ್‌ ಟ್ರೆಂಡ್‌ನಲ್ಲಿದೆ. ನೀವು ಬೇಬಿ ಪಿಂಕ್‌, ಆ್ಯಕ್ವಾ ಬ್ಲೂ ಮತ್ತು ಡಸ್ಟಿ ಆರೆಂಜ್‌ಗಳಂತಹ ಸಾಫ್ಟ್ ಕಲರ್ಸ್‌ ಟೋನ್ಸ್ ಕೂಡ ಉಪಯೋಗಿಸಬಹುದು. ಬ್ಲೂ, ಮೆಟಾಲಿಕ್‌, ಪೀಕಾಕಿ ಶೇಡ್‌ ಕೂಡ ಇವೆ. ಒಂದು ವೇಳೆ ನಿಮ್ಮ ಮದುವೆ ಹಗಲಿನಲ್ಲಿದ್ದರೆ ಪೇಸ್ಟಲ್ ಕಲರ್‌ ಅಂದರೆ ಲೈಟ್‌ ಶೇಡ್‌ ಧರಿಸಿ.

ಸಂಜೆಗಾಗಿ ಆರೆಂಜ್‌, ಪರ್ಪಲ್ ಕಲರ್‌ ಪರ್ಫೆಕ್ಟ್ ಆಗಿರುತ್ತದೆ.

wedding-dress-copy

ವರ್ಕ್‌ ಈ ದಿನಗಳಲ್ಲಿ ಲಂಗದ ಮೇಲೆ ಜರಿ, ದಬಕಾ, ಗೋಟಾ, ಲೇಸ್‌ ಮತ್ತು ಆ್ಯಂಟಿಕ್‌ ಮ್ಯಾಚಿಂಗ್‌ ವರ್ಕ್‌ನ ಫ್ಯಾಷನ್‌ ಆಗಿದೆ. ಬ್ರೈಡಲ್ ಕಲೆಕ್ಷನ್‌ನಲ್ಲಿ ಚಿಕನ್‌ಕಾರಿಯೊಂದಿಗೆ ಪ್ರಯೋಗಿಸಲಾಗುತ್ತದೆ. ಇದರಲ್ಲಿ ಆರೀ, ಏಪ್ಲೀಕ್‌ ಮತ್ತು ಕಸೂತಿ ಕೆಲಸವನ್ನು ಕಂಬೈನ್‌ ಮಾಡಲಾಗುತ್ತಿದೆ. ಹೆವಿ ಕ್ರಿಸ್ಟಲ್, ಸೀಕ್ವೆನ್ಸ್ಡ್ ಬಾರ್ಡರ್‌ ಮತ್ತು ವೆಲ್ವೆಟ್‌ನ ಏಪ್ಲೀಕ್‌ ವರ್ಕ್‌ ಕೂಡ ಇದ್ದು ಅದರಲ್ಲಿ ಥ್ರೆಡ್ ವರ್ಕ್‌, ವೀಟ್‌ ವರ್ಕ್‌ನ ಬೇಡಿಕೆ ಹೆಚ್ಚಾಗಿದೆ. ಥ್ರೆಡ್‌ ವರ್ಕ್‌ನಲ್ಲಿ ಬಣ್ಣ ಬಣ್ಣದ ದಾರಗಳನ್ನು ಉಪಯೋಗಿಸಲಾಗುತ್ತಿದೆ. ಲಂಗದ ಮೇಲೆ ಜರಕೌನ್‌ ಮತ್ತು ಬೀಟ್‌ ವರ್ಕ್‌ ಹೆಚ್ಚಾಗಿ ಉಪಯೋಗವಾಗುತ್ತಿದೆ. ಮುಂಬರುವ ದಿನಗಳಲ್ಲಿ ಫ್ಯಾಷನ್‌ ಪೇರ್‌ ಕ್ಯಾಸ್ಟ್ ಪ್ರಕಾರ ಪ್ರಿಂಟ್‌ ಮೇಲೆ ಎಂಬ್ರಾಯಿಡರಿ ಫ್ಯಾಷನ್‌ ಇರುತ್ತದೆ. ಒಂದುವೇಳೆ ನೀವು ಟ್ರೆಡಿಶನಲ್ ಲುಕ್‌ ಬಯಸಿದರೆ ಜರಿ, ಗೋಟಾ, ದಬಕಾ ಇರುವ ಲಂಗ ಸೆಲೆಕ್ಟ್ ಮಾಡಿ ಮತ್ತು ಬೋಲ್ಡ್ ಲುಕ್‌ಗಾಗಿ ಥ್ರೆಡ್‌ ವರ್ಕ್‌ ಮತ್ತು ಬೀಡ್ಸ್ ಇರುವ ಲಂಗ ಆರಿಸಿ.

ಸ್ಟೈಲಿಶ್‌ ಬ್ಲೌಸ್‌

ಸೀರೆಯಾಗಲೀ, ಲಂಗವಾಗಲೀ ಈ ದಿನಗಳಲ್ಲಿ ರವಿಕೆಗಳ ಬಗ್ಗೆ ವಿಶೇಷವಾಗಿ ಗಮನಿಸಲಾಗುತ್ತದೆ. ರವಿಕೆಯ ಮೂಲಕ ಡ್ರೆಸ್‌ಗೆ ಗ್ಲಾಮರಸ್‌ ಲುಕ್‌ ಕೊಡಲಾಗುತ್ತಿದೆ. ಸ್ಲೀವ್ಸ್ ನಲ್ಲಿ ಕಟ್‌ ಬ್ಲೌಸ್‌ ಫ್ಯಾಷನ್‌ನಲ್ಲಿದೆ. ಆದರೂ ಒಂದುವೇಳೆ ನೀವು ಸ್ಲೀವ್ಸ್ ಇಷ್ಟಪಟ್ಟರೆ ಶಾರ್ಟ್‌, ತ್ರೀ ಕ್ವಾರ್ಟರ್‌, ಲಾಂಗ್‌ ಸ್ಲೀವ್ಸ್ ಕೂಡ ಹೊಲಿಸಿಕೊಳ್ಳಬಹುದು. ಇಂದು ರವಿಕೆಯ ಮೇಲೆ ಸ್ಟೋನ್‌ ಮತ್ತು ಬೀಡ್‌ ವರ್ಕ್‌ಇರುತ್ತದೆ. ನೀವು ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳಬೇಕೆಂದಿದ್ದರೆ ಬ್ಯಾಕ್‌ಲೆಸ್‌ ಶಾರ್ಟ್‌ ರವಿಕೆ ತೊಡಿ.

ಫ್ಯಾಬ್ರಿಕ್‌ ಲಂಗದಲ್ಲಿ ಫ್ಯಾಬ್ರಿಕ್‌ ಬಗ್ಗೆ ಮಾತಾಡುವುದಾದರೆ ಈಗ ಬರೀ ಸಿಲ್ಕ್ ನ ಆಯ್ಕೆ ಮಾತ್ರ ಇರದೇ ನೆಟ್‌, ವೆಲ್ವೆಟ್‌, ಚಂದೇರಿ, ಕ್ರೇಪ್‌ ಫ್ಯಾಬ್ರಿಕ್‌ ಕೂಡ ಇದರ ಲಿಸ್ಟ್ ನಲ್ಲಿ ಸೇರಿದೆ.

ನಾವು ಒಮ್ಮೊಮ್ಮೆ ಅವಸರದಲ್ಲಿ ಯಾವುದು ಇಷ್ಟವಾದರೂ ಖರೀದಿಸಿಬಿಡುತ್ತೇವೆ. ಆದರೆ ಬ್ರೈಡಲ್ ಡ್ರೆಸ್‌ ಖರೀದಿಸುವಾಗ ಫ್ಯಾಬ್ರಿಕ್‌ ಮತ್ತು ಸೀಸನ್‌ ಗಮನಿಸುವುದು ಅಗತ್ಯ. ಏಕೆಂದರೆ ಪ್ರತಿ ಫ್ಯಾಬ್ರಿಕ್‌ ಪ್ರತಿ ಸೀಸನ್‌ನಲ್ಲಿ ಚಾಲ್ತಿ ಇರುವುದಿಲ್ಲ. ಶಿಫಾನ್‌, ಜಾರ್ಜೆಟ್‌, ನೆಟ್‌ ಇತ್ಯಾದಿ ಸಮ್ಮರ್‌ ವೆಡ್ಡಿಂಗ್‌ಗೆ ಬೆಸ್ಟ್. ಆದರೆ ವಿಂಟರ್‌ನಲ್ಲಿ ಸಿಲ್ಕ್, ಸ್ಯಾಟಿನ್‌ ಮತ್ತು ವೆಲ್ವೆಟ್‌ ಒಳ್ಳೆಯದು. ಬ್ರೈಡಲ್ ಯಾವಾಗಲೂ ಸೀಸನ್‌ಗೆ ತಕ್ಕಂತೆ ಡ್ರೆಸ್‌ ಆರಿಸಿಕೊಳ್ಳಬೇಕು.

ಸೀರೆಗೂ ಡಿಮ್ಯಾಂಡ್

ಫ್ಯಾಷನ್‌ ಬದಲಾದ ನಂತರ ಸೀರೆ ಫ್ಯಾಷನ್‌ ಲಿಸ್ಟ್ ನಿಂದ ಔಟ್‌ ಡೇಟೆಡ್‌ ಆಗಿದೆ. ಈಗ ನೆಟ್‌ ಸೀರೆ ಮತ್ತು ಲಂಗ ಸೀರೆಗೆ ಡಿಮ್ಯಾಂಡ್‌ ಇದೆ. ಈ ಸೀರೆಗಳು ಕಳೆದ ವರ್ಷದಲ್ಲೇ ಫ್ಯಾಷನ್‌ ಆಗಿದ್ದವು. ಆದರೂ ಮುಂದೆಯೂ ಇವುಗಳ ಕ್ರೇಝ್ ಖಾಯಮ್ಮಾಗಿ ಇರುತ್ತದೆ.

ಬಾಡಿ ಶೇಪ್‌ಗೆ ತಕ್ಕಂತೆ ಡ್ರೆಸ್‌ ಆರಿಸಿ

ಮದುವೆಯ ದಿನ ಸುಂದರವಾಗಿ ಕಾಣುವುದು ವಧುವಿನ ಹಕ್ಕು. ಆದ್ದರಿಂದ ಅಂದು ಹಕ್ಕಿನಿಂದ ನಿಮಗೆ ಚೆನ್ನಾಗಿ ಕಾಣು ಹಾಗೂ ನಿಮ್ಮ ಸೌಂದರ್ಯಕ್ಕೆ ಕಾಂತಿ ತರು ಉಡುಪುಗಳನ್ನೇ ಧರಿಸಿ. ಆದರೆ ಅವನ್ನು ಆರಿಸುವಾಗ ನಿಮ್ಮ ಬಾಡಿ ಶೇಪ್‌ ಬಗ್ಗೆ ಅಗತ್ಯವಾಗಿ ಗಮನಿಸಿ.

ಪಿಯರ್‌ ಶೇಪ್‌

ನಿಮ್ಮ ಬಾಡಿ ಪಿಯರ್‌ ಶೇಪ್‌ ಆಗಿದ್ದರೆ ಅಂದರೆ ಮೇಲಿನ ಭಾಗ ತೆಳ್ಳಗೆ ಹಾಗೂ ಕೆಳಗಿನ ಭಾಗ ದಪ್ಪವಾಗಿದ್ದರೆ ಹೆಚ್ಚು ವರ್ಕ್‌ ಇರುವ ರವಿಕೆ ಹಾಗೂ ಲಂಗ ಧರಿಸಿ. ಏಕೆಂದರೆ ಮೇಲಿನ ಭಾಗ ಕೆಳಗಿನ ಭಾಗದೊಂದಿಗೆ ಮ್ಯಾಚ್‌ ಆಗುವಂತಿರಬೇಕು. `ವಿ’ ನೆಕ್‌ರವಿಕೆ ಹೊಲಿಸಿಕೊಳ್ಳಿ.

ಆ್ಯಪಲ್ ಶೇಪ್

ನಿಮ್ಮ  ಬಾಡಿ ಆ್ಯಪಲ್ ಶೇಪ್‌ನದಾಗಿದ್ದರೆ ಸಾಫ್ಟ್ ಫ್ಯಾಬ್ರಿಕ್‌ ಆರಿಸಿಕೊಳ್ಳಿ. ಹೆವಿ ಫ್ಯಾಬ್ರಿಕ್‌ ಧರಿಸುವುದರಿಂದ ನೀವು ದಪ್ಪಗೆ ಕಾಣುವಿರಿ. ಅನಾರ್ಕಲಿ ಮತ್ತು ಶರಾರಾ ಸ್ಟೈಲ್ ನಿಮಗೆ ಬೆಸ್ಟ್ ಆಪ್ಶನ್‌.ಪರ್ಫೆಕ್ಟ್ ಶೇಪ್‌ ನಿಮಗೆ ಯಾವುದೇ ಸ್ಟೈ‌ಲ್‌ನ ಲಂಗ ಸುಂದರವಾಗಿರುತ್ತದೆ. ಆದರೂ ಸ್ಲಿಮ್ ಫಿಟ್‌ ಲಂಗ ನಿಮಗೆ ಬೆಸ್ಟ್.

ಬಜೆಟ್

ನಿಮ್ಮ ವೆಡ್ಡಿಂಗ್‌ ಡ್ರೆಸ್‌ ಬಗ್ಗೆ ಯೋಚಿಸುವಾಗ ನಿಮ್ಮ ಬಜೆಟ್‌ ಬಗ್ಗೆ ಅಗತ್ಯವಾಗಿ ಯೋಚಿಸಿ. ನಿಮ್ಮ ಬಜೆಟ್‌ ಎಷ್ಟೇ ಇದ್ದರೂ ಡಿಸೈನರ್‌ಗೆ ಯಾವಾಗಲೂ ಅದಕ್ಕಿಂತ ಕಡಿಮೆ ಹೇಳಿ. ಏಕೆಂದರೆ ಬಜೆಟ್‌ ಯಾವಾಗಲೂ ಹೆಚ್ಚುತ್ತದೆ.

ಡಿಸೈನರ್‌ ಲಂಗಾ 20 ಸಾವಿರ ರೂ.ಗಳಿಂದ ಶುರುವಾಗುತ್ತದೆ. ಆದರೆ ಬೇರೆ ಬೇರೆ ಮಾರ್ಕೆಟ್‌ಗಳಲ್ಲಿ ಇವು ಬೇರೆ ಬೇರೆ ರೇಂಜ್ ಗಳಲ್ಲಿ ಲಭ್ಯವಿವೆ. ನೀವು ನಿಮ್ಮ ಬಜೆಟ್‌ಗೆ ಅನುಗುಣವಾಗಿ ಆಯ್ದುಕೊಂಡು ನಿಮ್ಮ ವಿಶೇಷ ದಿನವನ್ನು ಇನ್ನಷ್ಟು ವಿಶೇಷವನ್ನಾಗಿಸಬಹುದು.

– ಎಸ್‌. ಜಮುನಾ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ