ಹಬ್ಬಗಳ ಋತುಗಳು ಕಾಲಿಡುತ್ತಿದ್ದಂತಯೇ ಕಾರುಗಳ ಮಾರುಕಟ್ಟೆ ಕೂಡ ವೇಗ ಪಡೆದುಕೊಳ್ಳುತ್ತಿದೆ. ಕಾರು ಮಾರುಕಟ್ಟೆಯಲ್ಲಿ ಹೊಸ ಹೊಸ ಕಾರುಗಳು ಲಗ್ಗೆ ಇಡುತ್ತಲೇ ಇವೆ. ಕಾರು ಕಂಪನಿಗಳು ಈಗ ಪುಟ್ಟ ಮತ್ತು ಸ್ಪೋರ್ಟಿವ್ ಲುಕ್‌ ಕಾರಿನ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿವೆ.

ಕಾರು ಕಂಪನಿಗಳು ಈ ರೀತಿಯಾಗಿ ಗಮನ ಕೇಂದ್ರೀಕರಿಸಲು ಎರಡು ಮುಖ್ಯ ಕಾರಣಗಳಿವೆ. ಮೊದಲನೆಯದು ಭಾರತದ ಟ್ರ್ಯಾಫಿಕ್‌. ಎರಡನೇಯದು ಕಾರುಗಳ ಬಗ್ಗೆ ಮಹಿಳೆಯರ ಒಲವು.

ಇತ್ತೀಚೆಗೆ ಮಹಿಳೆಯರು ಕಾರುಗಳ ಬಗ್ಗೆ ವಿಶೇಷ ಒಲವು ತೋರಿಸುತ್ತಿದ್ದಾರೆ. ಅದರಲ್ಲೂ ಪುಟ್ಟ ಹಾಗೂ ಕಡಿಮೆ ಬೆಲೆಯ ಕಾರುಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಏಕೆಂದರೆ ದೊಡ್ಡ ಕಾರುಗಳಿಗೆ ಹೋಲಿಸಿದರೆ, ಇವನ್ನು ನಿರ್ವಹಿಸುವುದು ಬಹಳ ಸುಲಭ ಹಾಗೂ ಇವು ಅವರ ಬಜೆಟ್‌ನ್ನು ಏರುಪೇರು ಕೂಡ ಮಾಡುವುದಿಲ್ಲ.

ದೇಶದ ಎರಡನೇ ದೊಡ್ಡ ಕಾರು ನಿರ್ಮಾಣ ಕಂಪನಿ ಹುಂಡೈ ಮೋಟಾರ್‌ ಇಂಡಿಯಾ ಕೂಡ ಮಹಿಳೆಯರ ಆಸಕ್ತಿಯನ್ನೂ ಗಮನದಲ್ಲಿಟ್ಟುಕೊಂಡು ಹ್ಯಾಚ್‌ ಬ್ಯಾಕ್‌ ಕಾರು ಗ್ರ್ಯಾಂಡ್‌ ಐ10ನ್ನು ಮಾರುಕಟ್ಟೆಗೆ ತಂದಿದೆ. ಇದರ ಸುಲಭ ಸರಳ ಫೀಚರ್ಸ್ ಮಹಿಳೆಯರನ್ನು ಮತ್ತಷ್ಟು ಆಕರ್ಷಿಸಿವೆ. ಅದರ ಹೆಸರೊಂದನ್ನು ಹೊರತುಪಡಿಸಿ ಅದರಲ್ಲಿರುವ ವಿಶೇಷತೆಗಳೆಲ್ಲ ಹೊಸದೇ.

ಸ್ಮಾರ್ಟ್‌, ಸ್ಮಾಲ್, ಸ್ಪೋರ್ಟಿವ್!

motor-3

ಸಾಮಾನ್ಯವಾಗಿ ಮಹಿಳೆಯರಿಗೆ ಆಕಾರದಲ್ಲಿ ಚಿಕ್ಕದಾಗಿರುವಂಥ ಮತ್ತು ಸ್ಮಾರ್ಟ್‌ ಆಗಿರುವಂಥ ಬಹಳ ಇಷ್ಟವಾಗುತ್ತವೆ. ಗ್ರ್ಯಾಂಡ್ ಐ10ನ ನಿರ್ಮಾಣದಲ್ಲೂ ಇಂತಹದೇ ವಿಶೇಷತೆಗಳನ್ನು ಗಮನಹರಿಸಲಾಗುತ್ತದೆ. ಈ ಕಾರು ಚಿಕ್ಕ ಕಾರುಗಳ ಸಾಲಿನಲ್ಲಿಯೇ ಬರುತ್ತದೆ. ಆದರೆ ಇದರ ಕಾರಣದಿಂದ ಅದರ ಸೌಂದರ್ಯದಲ್ಲಿ ಸ್ವಲ್ಪ ಕುಂದಾಗಿಲ್ಲ. ಹಾಗಾಗಿ ಗ್ರ್ಯಾಂಡ್‌ ಐ10 ಹೊಸ ಲುಕ್ಸ್ ಇರುವ ಕಾರು ಎನ್ನುವುದರಲ್ಲಿ ಸಂದೇಹವೇ ಇಲ್ಲ.

ಹುಂಡೈ ಈಚೆಗಷ್ಟೇ ತನ್ನ ಕಾರುಗಳಿಗೆ ಹೊಸ ಡೈನಾಮಿಕ್‌ ಲುಕ್ಸ್ ನೀಡಲು ಪ್ಲ್ಯಡಿಕ್‌ ಡಿಸೈನ್‌ ಸ್ಕಲ್ಪಚರ್‌ ಕಾನ್ಸೆಪ್ಟ್ ಪ್ರಸ್ತುತಪಡಿಸಿದೆ. ಕಾರಿನ ಹೆಡ್‌ ಲ್ಯಾಂಪ್‌ಗಳು ಹೆಚ್ಚು ಕಡಿಮೆ ಈವಾನ್‌ ಕಾರಿನ ಹಾಗೆಯೇ ಗ್ರಿಲ್ ‌ಮತ್ತು ಪೇಗ್‌ ಹೆಡ್‌ ಲ್ಯಾಂಪ್ಸ್ ನಂತೆಯೇ ಇವೆ. ಅದೇ ಗಾಡಿಯಲ್ಲಿ ಲೆರ್ನಾ ಕಾರಿನ ಹಾಗೆಯೇ ಓಆರ್‌ವಿಎಸ್‌ ಇಂಡಿಕೇಟರ್ಸ್ ಇರುವ ಡೈಮಂಡ್‌ ಕಟ್‌ ಅವಾಯ್‌ ವೀಲ್ಸ್ ಅಳವಡಿಸಲಾಗಿದೆ. ಒಟ್ಟಾರೆ ಹೇಳಬೇಕೆಂದರೆ, ಈ ಕಾರು ಮಹಿಳೆಯರಿಗೆ ಟ್ರೆಂಡಿ ಸ್ಟೈಲಿಶ್‌ಫೀಲಿಂಗ್ ಕೊಡುತ್ತದೆ.

ಸಣ್ಣ ಕಾರಿನ ದೊಡ್ಡ ಫೀಚರ್‌ ಮಹಿಳೆಯರು ಯಾವುದೇ ಒಂದು ಸಲಕರಣೆ ಖರೀದಿಸಲಿ, ಅದರಲ್ಲಿ ಸಾಕಷ್ಟು ಫೀಚರ್ಸ್ ಇರುವುದನ್ನು ಖಾತ್ರಿಪಡಿಸಿಕೊಳ್ಳುತ್ತಾರೆ. ಗ್ರ್ಯಾಂಡ್‌ ಐ10 ಕೂಡ ಅವರ ಈ ಇಚ್ಛೆಯನ್ನು ಪೊರೈಸುತ್ತದೆ. ಏಕೆಂದರೆ ಹೊಸ ಗ್ರ್ಯಾಂಡ್‌ ಐ10ನಲ್ಲಿ ಎಷ್ಟೊಂದು ಫೀಚರ್‌ಗಳಿವೆಯೆಂದರೆ, ಅವನ್ನು ನಿಮಗೆ ಎಣಿಸುವುದೇ ಕಷ್ಟ.

ಇದರ ಪೆಟ್ರೋಲ್ ಎಂಜಿನ್ನಿನ ಶಕ್ತಿ 83 ಪಿ.ಎಸ್‌. ಆಗಿದ್ದು, ಇದರ ಎಆರ್‌ಎಐ ಮುಖಾಂತರ ಅಳತೆ ಮಾಡಲಾದ ಮೈಲೇಜ್‌ ಪ್ರತಿ ಲೀಟರ್‌ಗೆ 18.9 ಕಿ.ಮೀ. ಆಗಿದೆ. ಅದನ್ನು ಮಿತವ್ಯಯಿ ಪ್ಯಾಕೇಜ್‌ ಎಂದು ಹೇಳಲಾಗುತ್ತದೆ. ಒಂದು ವಿಶೇಷ ಸಂಗತಿಯೆಂದರೆ, ಹುಂಡೈ ಗ್ರ್ಯಾಂಡ್‌ ಐ10 ಎಂಬ ಡೀಸೆಲ್ ‌ಮಾಡೆಲ್ ‌ಸಹ ಮಾರುಕಟ್ಟೆಗೆ ತಂದಿದೆ. ಇದರಲ್ಲಿ ಒಂದು ಆಟೋಮ್ಯಾಟಿಕ್‌ ಟ್ರಾನ್ಸ್ ಮಿಷನ್‌ ಆಪ್ಶನ್‌ ಕೂಡ ಇದೆ. ಡೀಸೆಲ್ ‌ಎಂಜಿನ್ನಿನ ಎಆರ್‌ಎಐ ಮೈಲೇಜ್‌ ಅತ್ಯಂತ ಆಕರ್ಷಕ, ಅಂದರೆ ಪ್ರತಿ ಲೀಟರ್‌ಗೆ 24 ಕಿ.ಮೀ. ಇದೆ. ಇದರಲ್ಲಿ ಎಬಿಎಸ್‌ ಪಾರ್ಕಿಂಗ್‌ ಸೆನ್ಸರ್‌ ಹಾಗೂ ಪ್ರಯಾಣಿಕರ ಸುರಕ್ಷತೆಯ ಹಲವು ಪೀಚರ್ಸ್ ಇವೆ. ಇವು ಮಹಿಳೆಯರಿಗೆ ಬೇಕಾಗುವಂಥವು. ಏಕೆಂದರೆ ಇಂದಿನ ದಿನಗಳಲ್ಲಿ  ಭಾರತದ ಅನಿಯಂತ್ರಿತ ಟ್ರಾಫಿಕ್‌ನಲ್ಲಿ ಟೂ ವೀಲರ್‌ ಮತ್ತು ತ್ರೀ ವೀಲರ್‌ ವಾಹನಗಳು ಅಸುರಕ್ಷಿತ ಎಂಬಂತಾಗಿಬಿಟ್ಟಿವೆ.

ಐಷಾರಾಮಿ ಸೌಲಭ್ಯ

motor-2

ಮಹಿಳೆಯರಿಗೆ ಕಾರು ನಡೆಸುವುದು ಬಂದುಬಿಟ್ಟರೆ, ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವುದು, ಮನೆಗೆ ಕರೆದುಕೊಂಡು ಬರುವ ಕೆಲಸ ಸುಲಭವಾಗುತ್ತದೆ. ಆದರೆ ಎ.ಸಿ. ಕಾರುಗಳ ಗಾಳಿ ಹಿಂದಿನ ಸೀಟುಗಳ ತನಕ ಬರದೇ ಮಕ್ಕಳು ಮುಂದಿನ ಸೀಟಿನಲ್ಲಿಯೇ ಕುಳಿತುಕೊಳ್ಳಲು ಹಠ ಹಿಡಿಯುತ್ತಾರೆ. ಅದು ಮಕ್ಕಳಿಗೆ ಅಪಾಯಕಾರಿಯಾಗಿ ಪರಿಣಮಿಸಬಹುದು.

ನೀವು ಗ್ರ್ಯಾಂಡ್‌ ಐ10 ತೆಗೆದುಕೊಳ್ಳಲು ಯೋಚಿಸುತ್ತಿದ್ದರೆ, ನಿಮಗೆ ಈ ಸಮಸ್ಯೆಯಿಂದಲೂ ಮುಕ್ತಿ ಸಿಗುತ್ತದೆ. ಈ ಕಾರಿನ ಒಂದು ವಿಶೇಷತೆ ಎಂದರೆ, ಹಿಂದಿನ ಸೀಟುಗಳಿಗಾಗಿಯೇ ಎ.ಸಿ. ಲೆಂಟ್‌ ನೀಡಲಾಗಿದೆ. ಇದು ದುಬಾರಿ ಕಾರುಗಳಲ್ಲಷ್ಟೇ ದೊರೆಯುವಂತಹ ವ್ಯವಸ್ಥೆಯಾಗಿತ್ತು. ಅದೀಗ ಗ್ರ್ಯಾಂಡ್‌ ಐ10ನಲ್ಲಿ ದೊರೆಯುತ್ತಿದ್ದು, ಮಕ್ಕಳು ಮುಂದೆ ಕುಳಿತುಕೊಳ್ಳಲು ಹಠ ಮಾಡುವುದಿಲ್ಲ.

ಈ ವಿಶೇಷತೆಗಳ ಹೊರತಾಗಿ ಇದರಲ್ಲಿನ ಮ್ಯೂಸಿಕ್‌ ಸಿಸ್ಟವ್‌ನ್ನು ಹೈಟೆಕ್‌ಗೊಳಿಸಲಾಗಿದೆ. ಇದರಲ್ಲಿ ಇಂಟರ್ನ್‌ ಮೆಮೋರಿ ಇದ್ದು, ಸಾಕಷ್ಟು ಹಾಡು ಸಂಗ್ರಹಿಸಿಕೊಳ್ಳುವ ವ್ಯವಸ್ಥೆ ಇದೆ. ಈ ವಿಶೇಷತೆ ಇರುವುದರಿಂದ ನೀವು ಪ್ರಯಾಣದುದ್ದಕ್ಕೂ ಹಾಡು ಗುನುಗುನಿಸುತ್ತ ಹೋಗಬಹುದು.

ಈ ಕಾರಿನಲ್ಲಿ ಡ್ರೈವರ್‌ ಸೀಟಿನಲ್ಲಿ ಅಡ್ಜಸ್ಟ್ ಮೆಂಟ್‌ ಕೂಡ ಮಾಡಬಹುದಾಗಿದೆ. ಇದರಿಂದ ನೀವು ನಿಮ್ಮ ಎತ್ತರಕ್ಕನುಗುಣವಾಗಿ ಸೀಟಿನ ಎತ್ತರವನ್ನು ಹೆಚ್ಚು ಕಡಿಮೆ ಮಾಡಬಹುದಾಗಿದೆ. ಜೊತೆಗೆ ಪುಶ್‌ ಬಟನ್‌ ಸ್ಟಾರ್ಟ್‌ ಮತ್ತು ಸ್ಟಾಪ್‌, ಬೆಲ್ಟ್ ಮತ್ತು ಸ್ಟೇರಿಂಗ್ ರಿಯರ್‌ ಡಿ ಫಾಗರ್‌ನಂತಹ ದುಬಾರಿ ಕಾರುಗಳಲ್ಲಿ ನೀಡುವ ಫೀಚರ್‌ಗಳನ್ನು ಹುಂಡೈ ತನ್ನ ಗ್ರಾಹಕರಿಗೂ ನೀಡುತ್ತಿದೆ. ಕಾರಿನಲ್ಲಿ ಕೋಲ್ಡ್ ಗ್ಲವ್ಸ್ ಬಾಕ್ಸ್ ಕೂಡ ಇಡಲಾಗಿದೆ. ಅದರಲ್ಲಿ ತಂಪು ಪಾನೀಯ ಹಾಗೂ ಇತರೆ ಪದಾರ್ಥಗಳನ್ನು ಇಡಬಹುದಾಗಿದೆ.

ಗ್ರ್ಯಾಂಡ್‌ ಐ10ನ್ನು ಬೇರೆ ಯಾವುದೇ ಕಾರಿನೊಂದಿಗೂ ಹೋಲಿಸಲಾಗದು. ಅದರಲ್ಲೂ ಭಾರತೀಯ ಟ್ರ್ಯಾಫಿಕ್‌ ಮತ್ತು ರಸ್ತೆಗಳ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಈ ಕಾರಿನ ಬಗ್ಗೆ ಎಲ್ಲರೂ ಮೋಹಿತರಾಗಿದ್ದಾರೆ. ಗ್ರ್ಯಾಂಡ್‌ ಐ10ನಲ್ಲಿ ಅಳವಡಿಸಲಾದ ಆಟೋಮ್ಯಾಟಿಕ್‌ ಗೇರ್‌ ಬಾಕ್ಸ್ ಟ್ರ್ಯಾಫಿಕ್‌ನಲ್ಲಿ ತಕ್ಷಣವೇ ಕಾರನ್ನು ಸ್ಟಾರ್ಟ್‌ ಮಾಡಲು ಸಹಾಯಕವಾಗಿದೆ.

ಇದರ ಅತ್ಯುತ್ತಮ ಬ್ರೇಕ್ಸ್ ಕೆಟ್ಟ ರಸ್ತೆಗಳಲ್ಲೂ ವೇಗವನ್ನು ನಿಯಂತ್ರಿಸಲು ಸಹಾಯಕವಾಗಿದೆ. ಈ ಎಲ್ಲ ಫೀಚರ್‌ಗಳನ್ನು ಗಮನದಲ್ಲಿಟ್ಟುಕೊಂಡು ಇದರ ಬೆಲೆ ಕೂಡ ಅಷ್ಟೇ ಸಮರ್ಪಕವಾಗಿದೆ. ಪೆಟ್ರೋಲ್ ‌ಮಾದರಿ ಕಾರು 4,30,000 ರೂ.ಗಳಿಂದ 5,24,000 ರೂ. ಹಾಗೂ ಡೀಸೆಲ್ ‌ಮಾದರಿ ಕಾರುಗಳ ಬೆಲೆ 6,41,000 ರೂ. ಮೇಲ್ಪಟ್ಟು ಇದೆ.

– ಸಿ.ಕೆ. ಪ್ರಮೀಳಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ