ಸುರಕ್ಷಿತ ಪ್ರಜಾಪ್ರಭುತ್ವದ ಗ್ಯಾರಂಟಿ ಇಲ್ಲ : ಅಮೆರಿಕಾದಲ್ಲಿ ಈಗಲೂ ಸಹ ಬಿಳಿಯೇತರರಿಗೂ ಸಮಾನತೆ ಹಾಗೂ ಪ್ರಜಾಪ್ರಭುತ್ವದ ದೊಡ್ಡ ದೊಡ್ಡ ಮಾತುಗಳಾಡುತ್ತಾರೆಯೇ ಹೊರತು ಭೇದಭಾಲ ತಪ್ಪಿಲ್ಲ. ಕಳೆದ ಆಗಸ್ಟ್ ನಲ್ಲಿ ಒಬ್ಬ 18 ವರ್ಷದ ನಿಶ್ಶಸ್ತ್ರ ಬಿಳಿಯೇತರನ ಬಳಿ ಬಂದೂಕು ಇರಬಹುದೆಂಬ ಗುಮಾನಿ ಮೇಲೆ, ಒಬ್ಬ ಬಿಳಿ ಪೊಲೀಸ್ ಅಧಿಕಾರಿ, ಗುಂಡಿಟ್ಟು ಅವನನ್ನು ಕೊಂದುಬಿಟ್ಟ. ಇದನ್ನು ವಿರೋಧಿಸಿ ಇಡೀ ರಾಷ್ಟ್ರ ತಿರುಗಿಬಿತ್ತು. ಇದೇ ರೀತಿ ನಮ್ಮ ದೇಶದಲ್ಲೂ ಜಾತಿ, ಧರ್ಮದ ಹೆಸರಿನಲ್ಲಿ ಕಾರಣವಿಲ್ಲದೆ ಹತ್ಯಾಕಾಂಡಗಳಾಗುತ್ತವೆ. ಒಟ್ಟಾರೆ ಪ್ರಜಾಪ್ರಭುತ್ವ ಸುರಕ್ಷತೆಯ ಗ್ಯಾರಂಟಿ ನೀಡದು, ಬಹುಸಂಖ್ಯಾತರು, ಅಲ್ಪಸಂಖ್ಯಾತರ ಮೇಲೆ ನಡೆಸುವ ದೌರ್ಜನ್ಯ ತಪ್ಪದು.
ಇದು ಸಂತಸದ ಸಂಗತಿ! : ಪಾಕಿಸ್ತಾನದ ಸ್ಥಿತಿ ಬಿಗಡಾಯಿಸಿದೆ ನಿಜ ಮಲಾಲಾ ಯೂಸುಫ್ ಝೈ ಎಂಬಾಕೆಗೆ ನೊಬೆಲ್ ಪ್ರಶಸ್ತಿ ದೊರಕಿದಾಗ ಪಾಕಿಸ್ತಾನಿಗಳ ಸಂತಸ ಮುಗಿಲು ಮುಟ್ಟಿತು. ಅಂದರೆ ಅಲ್ಲಿಯೂ ಸಹ ಅಹಿಂಸೆ, ಶಾಂತಿ, ನೆಮ್ಮದಿಗಳಿಗಾಗಿ ದನಿಯೆತ್ತುವವರು ಇದ್ದಾರೆ ಎಂದಾಯ್ತು. ಅಲ್ಲಿ ರಕ್ತಪಿಪಾಸುಗಳಿದ್ದಾರೆ, ತಾಲಿಬಾನಿಗಳಲ್ಲ ಎಂಬುದು ಖಚಿತವಾಯ್ತು.
ನೋಡುಗರ ದೃಷ್ಟಿಗೆ ಬಿಟ್ಟಿದ್ದು : ಈ ಕಾರ್ಟೂನ್ ಬ್ರೆಝಿಲ್‌ನ 82 ವರ್ಷದ ಕಾಟರ್ ಯೂನಿಸ್ಟ್ ನ ಕೊಡುಗೆ. ಇಲ್ಲಿ ಕಾರ್ಟೂನಿನ ಹಲ್ಲು ನೋಡುವುದೋ ಅಥವಾ ಬೇರೇನೋ ಎಂಬುದು ನೋಡುಗರ ವೃಷ್ಟಿಗೆ ಬಿಟ್ಟಿದ್ದು.
ಕಂಗಳನ್ನು ಸರಿಸಲಾದೀತೇ? : ಈ ಡಿಸೈನ್ ಒಂದು ಅದ್ಭುತ ವೆಸ್ಟರ್ನ್ ಡ್ರೆಸ್‌ದು, ನಮ್ಮ ಸಲಹೆ ಕೇಳಿದರೆ ಇದೇ ತರಹ ನೀವು ಸಲ್ವಾರ್ ಕಮೀಜ್ ಹೊಲಿಸಿ ಆನಂದಿಸಬಹುದು. ಅದಕ್ಕೆ ತಕ್ಕಂತೆ ನಿಮ್ಮ ದೇಹ ಬಳುಕುತ್ತಿದೆಯೇ…..? ನೋಡಿಕೊಳ್ಳಿ. ಹಾಗೊಮ್ಮೆ ಇಲ್ಲದಿದ್ದರೆ, ದೇಹದ ಆಕಾರ ಸರಿಪಡಿಸುವ ಜಿಮ್, ಸ್ಲಿಮ್ಮಿಂಗ್ ಸೆಂಟರ್ಸ್‌ಗೆ ಹೋಗಿ. ದೇಹದ ಉಬ್ಬು ತಗ್ಗುಗಳಿಗೆ ಹೊಂದುವಂಥ ಡ್ರೆಸ್ ಡಿಸೈನಿಂಗ್ ಇದ್ದಾಗ ಆ ನೋಟದಿಂದ ಕಂಗಳನ್ನು ಸರಿಸಲಾದೀತೇ?
ಇದೇನೆಂದು ಕೇಳದಿರಿ : ಇದೇನು ಆಟಂಬಾಂಬ್ ಇರಬಹುದೇ? ಅಲ್ಲ ಬಿಡಿ, ಇದು ಒಬ್ಬ ಕಲಾವಿದನ ಕ್ರಿಯಾಶೀಲತೆಗೆ ಸಾಕ್ಷಿ, ಪ್ಯಾರಿಸ್‌ನಲ್ಲಿ ಕಂಡುಬಂತು. ಗಾಳಿ ತುಂಬಿದ ಬಲೂನು ಅಥವಾ ಲಾಟೀನ್ ಆಕಾರದ ಈ ಆಕೃತಿ ಇಲ್ಲೇನು ಮಾಡುತ್ತಿದೆ ಎಂದು ಕೇಳಬೇಡಿ, ಅದನ್ನು ನೋಡಿದ ಮೇಲೆ ಹಾಗೇ ಸೈಕಲ್ ತಿರುಗಿಸಿಕೊಂಡು ಹೊರಟುಬಿಡಿ.
ಮೋಜುಮಸ್ತಿಗಾಗಿ ನೃತ್ಯ : ದೀಪ ಹಚ್ಚಿಟ್ಟು ಮನಸ್ಸಿಗೆ ಖುಷಿ ತಂದುಕೊಳ್ಳಿ. ಪಂಜಾಬಿನ ವೈಶಿಷ್ಟ್ಯ ಇರುವುದೇ ಅಲ್ಲಿನ ಜಾನಪದ ನೃತ್ಯಗಳಲ್ಲಿ. ಅದರಲ್ಲಿ ಜೋಶ್, ಮೋಜು, ಮಸ್ತಿ ಎಲ್ಲ ಅಡಗಿರುತ್ತದೆ. ಅಲ್ಲಿನ ಒಂದು ವಿಶ್ವವಿದ್ಯಾಲಯದಲ್ಲಿ ಪ್ರದರ್ಶನ ನೀಡಿದ ಸ್ಥಳೀಯ ಬೆಡಗಿಯರು.
ಸೌಂದರ್ಯದ ಸಿರಿ ಸಮೀಪವಿರಲು : ಭಾರತದ ದೇವಾಲಯಗಳಿಂದ ನರ್ತಕಿಯರನ್ನು ಮರೆಮಾಡಿ, ಈಗ ಅವರು ಕೇವಲ ಕೆತ್ತನೆಯ ಶಿಲ್ಪಗಳಾಗಿ ಅಲಂಕೃತಗೊಂಡಿದ್ದಾರೆ. ಅದೇ ಥೈಲೆಂಡ್, ಕಾಂಬೋಡಿಯಾ, ಇಂಡೋನೇಷ್ಯಾದ ಮಂದಿರಗಳಲ್ಲಿ ಈಗಲೂ ಟೆಂಪಲ್ ಡ್ಯಾನ್ಸರ್ಸ್ ಇದ್ದಾರೆ. ಇವು ನೃತ್ಯಗಳ ಮೂಲಕ ಕಂಗಳಿಗೆ ರಸದೌತಣ ಒದಗಿಸಿ, ಆಸ್ತಿಕರಿಗೆ ಬೇಕಾದ ಸಾಮಗ್ರಿ ಮಾರುತ್ತಾರೆ. ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಇಂಥ ನೃತ್ಯಗಳನ್ನು ಹೆಚ್ಚಾಗಿ ಏರ್ಪಡಿಸುತ್ತಿರುತ್ತಾರೆ. ಬ್ಯಾಂಕಾಕ್‌ನ ಒಂದು ಮಂದಿದಲ್ಲಿ, ಇಂಥ ಒಬ್ಬ ನರ್ತಕಿ ತನ್ನ ಭಾವಭಂಗಿಗಳನ್ನು ಪ್ರದರ್ಶಿಸುತ್ತಾ ಮಾರಾಟಕ್ಕಾಗಿ ಕೈಯಲ್ಲಿ ಏನೋ ಹಿಡಿದಿರುವಾಗ, ಈ ದಿವ್ಯ ಸೌಂದರ್ಯದ ಸಾನ್ನಿಧ್ಯ ಸಾಕು, ಆ ದೇವರ ಸನ್ನಿಧಾನ ಯಾರಿಗೆ ಬೇಕು ಎಂದು ಆಸ್ತಿಕರು ಮೈಮರೆತಂತೆ.
ಭಯದ ನೆರಳಲ್ಲಿ : ಆಫ್ಘಾನಿಸ್ತಾನದಲ್ಲಿ ಗುಂಡೇಟಿನ ಸುರಿಮಳೆಯ ನಡುವೆ ಶಾಲೆಯ ಕಲಿಕೆಯೂ ನಡೆಯುತ್ತಿವೆ. ಅಲ್ಲಿನ ಪುರುಷಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳು ಹೇಗೋ ಕಲಿಕೆ ಮುಂದುವರಿಸಿದ್ದಾರೆ. ಆದರೂ ಅವರ ಮುಖದಲ್ಲಿ ನೋವು ಸಾವಿನ ಭಯ ಎದ್ದು ಕಾಣುತ್ತಿದೆ.
ಇದಲ್ಲವೇ ಗ್ಲಾಮರಸ್ ಗೆಟಪ್! : ದ. ಅಮೆರಿಕಾದ ಪಾಪ್ ಸಿಂಗರ್ ರಿಹಾನಾಳ ಕ್ರೇಜ್ ಅಂತಿಂಥದ್ದಲ್ಲ. ಆಕೆಯ ಶಾರೀರ ಮಾತ್ರವಲ್ಲ, ಶರೀರದ ಗೆಟಪ್, ಡ್ಯಾನ್ಸ್ ಸ್ಟೆಪ್ಸ್ ಹಾಗೂ ಮುಖ್ಯವಾಗಿ ಡ್ರೆಸ್ಸಿಂಗ್ ಸೆನ್ಸ್ ಅದ್ಭುತವಾದುದು! ಲಾಸ್ ಏಂಜಲೀಸ್ ನಗರದಲ್ಲಿ ಒಂದು ಕಾರ್ಯಕ್ರಮ ನಡೆಸಿಕೊಡಲು ಈಕೆ ಧರಿಸಿರುವ ಟಾಪ್ ನೋಡಿ, ಎಲ್ಲಕ್ಕೂ ಗುಂಡಿಗೆ ಬೇಕು!