ತಮ್ಮೊಂದಿಗೆ ತಾವೇ ಫನ್ ಹೊಂದುವ ಮಜಾ : ಕೊರೋನಾ ಅಥವಾ ಕರ್ಫ್ಯೂ ಇರಲಿ, ಜನ ಮದುವೆ ಅಂತೂ ಬಲು ಗ್ರಾಂಡ್ ಆಗಿಯೇ ಮಾಡಿಕೊಳ್ಳುತ್ತಾರೆ. ಹೀಗಾಗಿಯೇ ಅಮೆರಿಕಾದ ಟೆಕ್ಸಾಸ್‌ನಲ್ಲಿ ಟ್ಯಾರೆಂಟ್ ಈವೆಂಟ್ ಸೆಂಟರ್, ಮದುವೆಗಳಿಗಾಗಿಯೇ ಹೊಸ ಫೆಸಿಲಿಟಿ ತೆರೆದಿದೆ. ಅಲ್ಲಿ ವಿವಾಹ ವೇದಿಕೆಯ ಪುಷ್ಪಾಲಂಕಾರದಿಂದ ಹಿಡಿದು ಊಟದವರೆಗೂ ಫನ್ ಮಜವೇ ಮಜಾ! ಅಮೆರಿಕಾದವರಂತೂ ಕೋವಿಡ್‌ಗೆ ಏನೇನೂ ಹೆದರಲಿಲ್ಲ. ಯಾರು ತೀರಿಕೊಂಡರೋ ಅವರಿಗೆ ವಿಷಾದ ವ್ಯಕ್ತಪಡಿಸುತ್ತಾ, ಅತ್ತ ಮಾಸ್ಕ್ ಇಲ್ಲದೆ, ಇತ್ತ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತ ತಲೆ ಕೆಡಿಸಿಕೊಳ್ಳದೆ ಬಿಂದಾಸ್ ಆಗಿದ್ದುಬಿಟ್ಟರು. ಡೊನಾಲ್ಡ್ ಟ್ರಂಪ್‌ರ ಹಂಗಾಮಾ ಇದ್ದಾಗಲೂ ಗುಂಪಲ್ಲಿ ಗೋವಿಂದ ಆದರು. ಟ್ರಂಪ್ ಭಕ್ತರು ಇಲ್ಲಿನ ಭಗವಾ ಭಕ್ತರಂತೆಯೇ, ಅವರು ಕೊರೋನಾ ಇಲ್ಲ ಎಂದರು, ಇವರು ಹೌದೆಂದು ತಲೆದೂಗಿದರು.
ಅವಕಾಶ ಸಿಕ್ಕಿದಾಗ ಬಿಡಬೇಡಿ : ಚಳಿಗಾಲದಲ್ಲಿ ಬಟ್ಟೆ ಕಳಚಿ ಬಿಸಿಲಿಗೆ ಮೈ ಕಾಯಿಸುತ್ತಾ ಮರಳಿನ ಮೇಲೆ ಮಲಗುವ ಅವಕಾಶ ಸಿಕ್ಕರೆ ಅದರ ಮಜವೇ ಬೇರೆ! ಯೂರೋಪಿನ ದಕ್ಷಿಣ ಫ್ರಾನ್ಸಿನ ಸಾಗರತೀರದಲ್ಲಿ ಪ್ರವಾಸಿಗರು ಸದಾ ತುಂಬಿರುತ್ತಾರೆ. ಕೊರೋನಾಗೆ ಸಡ್ಡು ಹೊಡೆದು ಕಳೆದ ವರ್ಷವಿಡೀ ಈ ತೀರದಲ್ಲಿ ಮಂದಿ ಮಂದೆಯಾಗಿದ್ದರು. ನಮ್ಮಲ್ಲಿ ಗೋವಾದಲ್ಲೂ ಹಾಗೇ! ನಿಮಗೂ ಅವಕಾಶ ಸಿಕ್ಕರೆ ಬಿಡಬೇಡಿ. ಗಂಡ, ಮಕ್ಕಳು ಜೊತೆಗೆ ಬರದಿದ್ದರೆ ಇನ್ನೂ ಬೊಂಬಾಟ್! 3-4 ಫ್ರೆಂಡ್ಸ್ ಒಟ್ಟುಗೂಡಿ ಹೊರಟುಬಿಡಿ.
ಸವಾಲು ತುಂಬಿದ ಕೆರಿಯರ್ : ಸೈನ್ಲ್ ನಲ್ಲಿ ಕೆರಿಯರ್ ಬಲು ಎಗ್ಸೈಟ್‌ಮೆಂಟ್‌ಫುಲ್ ಫಿಲಿಂಗ್ ಅನಿಸುತ್ತದೆ, ಏಕೆಂದರೆ ವಿಶ್ವಕ್ಕೆ ಕಿಂಚಿತ್ತಾದರೂ ನಿಮ್ಮಿಂದ ಅಳಿಲು ಸೇವೆ ಸಿಗುತ್ತಿದೆ ಎಂಬ ತೃಪ್ತಿ ಇರುತ್ತದೆ. ಜೆನ್ ಮಮಿ ಟಿಫನ್ ಆಂಕಾಲಜಿ ಪ್ರೋಗ್ರಾಮಿನಲ್ಲಿದ್ದಾರೆ, ಇದು ಕ್ಯಾನ್ಸರ್ ವಿರುದ್ಧ ಸತತ ಹೋರಾಡುವ ಕ್ಷೇತ್ರ. ಈ ಸಾವಾಲು ತುಂಬಿದ ಕೆರಿಯರ್‌ನಲ್ಲಿ ಸರಹದ್ದೇ ಇಲ್ಲ. ಇದು ತಲೆ ತಿನ್ನುವ ಹಾಗೂ 24 x 7 ಸಮಯ ಬೇಡುವಂಥದ್ದು, ಆದರೆ ನಿಸ್ಸಂದೇಹವಾಗಿ ಎದುರಾಳಿಯನ್ನು ಧರಾಶಾಯಿ ಆಗಿಸುತ್ತದೆ.
ಇದು ಸುಲುಭದ ಕೆಲಸವಲ್ಲ! : ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರವೇ ಈಕೆಯನ್ನು ರಫ್ & ಟಫ್ ಮಹಿಳಾ ಪೊಲೀಸ್ ಅಧಿಕಾರಿ ಮಾತ್ರವಲ್ಲದೆ, ಅಮೆರಿಕಾದ ಸಮ್ಮಾಮಿಶ್‌ನಗರದ ಪೊಲೀಸ್ ಚೀಫ್ ಅದೂ 2016 ರಿಂದ ಅಮೆರಿಕಾದ ಈ ರಾಜ್ಯ ಸೀಟ್ ಎಷ್ಟೋ ಪ್ರೋಗ್ರೆಸಿವ್ ಆಗಿದ್ದು, ಆ ಕಾರಣದಿಂದಲೇ ಮಹಿಳೆಯರು ಈ ಇಲಾಖೆಯ ಇಂಥ ಉಚ್ಚ ಪದವಿಗೇರಲು ಸಾಧ್ಯ. ಇಲ್ಲಿ ನಮ್ಮಲ್ಲಿಯೂ ಸಹ ರೂಟ್‌ನಲ್ಲಿ ಎಷ್ಟೋ ಮಹಿಳೆಯರು ಉನ್ನತ ಪೊಲೀಸ್‌ಅಧಿಕಾರಿಗಳಾಗಿದ್ದಾರೆ, ಆದರೆ ಈ ಕೆಲಸವಂತೂ ಕಬ್ಬಿಣದ ಕಡಲೆಯೇ ಸರಿ, ನಮ್ಮ ಬಾಲಿವುಡ್ ಸಿನಿಮಾಗಳಲ್ಲಿ ತೋರಿಸುವಷ್ಟು ಖಂಡಿತಾ ಸಲೀಸಲ್ಲ.
ಹಣ ಮಸ್ತಿ ಎರಡೂ ಸಹ : ಈಕೆ ಅಜಾನಾ, ಅಮೆರಿಕಾದ ಯುವ ಗಾಯಕಿ, ಈಕೆ ಹಲವು ವರ್ಷಗಳ ಕಠಿಣ ಸಾಧನೆಯಿಂದ ಹೆಸರು ಗಳಿಸಿದ್ದಾಳೆ. ಈಗ ಈಕೆಯ ಸಾಫ್ಟ್ ದನಿಯಲ್ಲಿ `ಬೆಟರ್ ಲೇಟ್ ದ್ಯಾನ್ ನೆವರ್’ ಕ್ರಮೇಣ ಜನಪ್ರಿಯತೆ ಗಳಿಸುತ್ತಿದೆ. ಅಮೆರಿಕನ್ನರು ಹೀಗೆ ಕಠಿಣಶ್ರಮದಿಂದ ದುಡಿದಾಗ, ಅಷ್ಟೇ ಗಮ್ಮತ್ತಿನಿಂದ ಹಾಡಿ ಕುಣಿದೂ ಮಾಡುತ್ತಾರೆ, ಹೀಗಾಗಿ ಇಲ್ಲಿ ಮ್ಯೂಸಿಕ್‌ಉತ್ತಮ ಕೆರಿಯರ್ ಎನಿಸಿದೆ. ಈ ಶೋ ಬಿಸ್‌ನೆಸ್‌ನಲ್ಲಿ ಹಣ, ಹೆಸರು, ಮಸ್ತಿ….. ಮಾತ್ರವಲ್ಲ ಸೆಕ್ಸ್ ಸಹ ಧಾರಾಳ ಇದೆ, ಹೀಗಾಗಿ ಅಭಿಮಾನಿಗಳಿಗೇನೂ ಕೊರತೆ ಇಲ್ಲ.
ಭವಿಷ್ಯದ ಚಿಂತೆಯೂ ಇರಲಿ : ಜರ್ಮನಿಯ ರಾಜಧಾನಿ ಬರ್ಲಿನ್‌ನ ಪ್ರಸಿದ್ಧ ಬ್ರಾಂಡನ್ ಗರ್ಲ್ ಗೇಟ್‌ನಲ್ಲಿ 5000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಜಮೆಗೊಂಡಾಗ, ಕ್ಲೈಮೆಟ್ ಚೇಂಜ್ ಸಹ ಅಷ್ಟೇ ಕೋವಿಡ್ ಯುದ್ಧದಷ್ಟೇ ಮುಖ್ಯವಾಯ್ತು. ಇಂದಿನ ಸುಖ, ಸೌಲಭ್ಯಗಳಿಗಾಗಿ ಪ್ರತಿದಿನ ಜನ, ಬರಲಿರುವ ಭವಿಷ್ಯದ ಸಮಸ್ಯೆಗಳನ್ನು ಬೇಕೆಂದೇ ನಿರ್ಲಕ್ಷಿಸುತ್ತಾರೆ, ನಾವು ಎಷ್ಟೆಷ್ಟು ಹೆಚ್ಚು ಸಾಮಗ್ರಿಗಳನ್ನು ಬಳಸುತ್ತೇವೆಯೋ, ನಾಳಿನ ಕ್ಲೈಮೆಟ್ ಸಮಸ್ಯೆಗಳು ಅಷ್ಟೇ ತೀವ್ರಗೊಳ್ಳುತ್ತವೆ. ಆದರೆ ಈ ಯುವಜನತೆಯನ್ನು ಹುಡುಗು ಮುಂಡೇವು ಸ್ಟ್ರೈಕ್ ಮಾಡುತ್ತಿವೆ ಎಂದೇ ನಿರ್ಲಕ್ಷಿಸಲಾಯಿತು.
ಕಳ್ಳನೇ ಕಾವಲುಗಾರ! : ತೀರಾ ಬಡ ದೇಶಗಳಲ್ಲಿ ಕುಡಿಯವ ನೀರಿನ ಸಮಸ್ಯೆ ಅಲ್ಲಿನ ಹಸಿವಿಗಿಂತಲೂ ಕ್ರೂರವಾದುದು. ಇಥಿಯೋಪಿಯಾದ ಹಳ್ಳಿಗಳ ಸ್ಥಿತಿಯಂತೂ ಭಾರತದ ಗ್ರಾಮಗಳಿಗಿಂತ ದರಿದ್ರವಾಗಿದ್ದು, ನೀರಿಗಾಗಿ ಸದಾ ಹಾಹಾಕಾರ ತಪ್ಪಿದ್ದಲ್ಲ. ಒಂದು ಹಳ್ಳಿಯಲ್ಲಿ ಡೀಸೆಲ್ ಜನರೇಟರ್‌ನಿಂದ ನೀರನ್ನು ಪಂಪ್ ಮಾಡಲಾಗಿತ್ತು, ಆದರೆ ಅದು ಕೆಟ್ಟದ್ದರಿಂದ ಅದನ್ನು ರಿಪೇರಿ ಮಾಡಿಸಲಿಕ್ಕೂ ಹಣ ಇಲ್ಲವಾಗಿತ್ತು. ಅಭಿವೃದ್ಧಿ ಮಂಡಳಿಯಿಂದ ಸೋಲಾರ್ ಪಂಪ್‌ಗಾಗಿ ಹಣ ದೊರೆತಾಗ, ಆಫ್ರಿಕಾದ ಈ ಕಡು ಬಡ ಗ್ರಾಮಗಳ ಜನತೆಗೆ ಉಸಿರಲ್ಲಿ ಉಸಿರು ಬಂತು. ನಮ್ಮಲ್ಲಿ ಇರುವಂತೆಯೇ ಅಲ್ಲೂ ವಾಟರ್ ಟ್ಯಾಂಕರ್ ಮಾಫಿಯಾ ಹಾಗೂ ಲೋಕಲ್ ಗೂಂಡಾಗಳ ಕಾಟ ತಪ್ಪಿದ್ದಲ್ಲ.