ಬಹಳಷ್ಟು ಸಿಂಗಲ್ ವುಮನ್ಸ್ ತಮ್ಮನ್ನು ತಾವು ಸೂಪರ್ ವುಮನ್ ಎಂದು ಭಾವಿಸುತ್ತಾರೆ. ಇಡೀ ದಿನ ಕೆಲಸ ಮಾಡುವುದು ಹಾಗೂ ಮಗುವಿನ ಯೋಗಕ್ಷೇಮ ನೋಡಿಕೊಳ್ಳುವುದರ ಜೊತೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಅಥವಾ ಮನೆಯಲ್ಲಿ ಯಾವಾಗಲೂ ಸಿದ್ಧ ಆಹಾರವನ್ನೇ ಸರ್ವ್ ಮಾಡಬೇಕು ಅಥವಾ ಮಗುವಿನ ಪ್ರತಿಯೊಂದು ಅವಶ್ಯಕತೆಗಳನ್ನು ತಕ್ಷಣವೇ ಈಡೇರಿಸಬೇಕು ಎನ್ನುವುದಾಗಿರುತ್ತದೆ. ಆದರೆ ಅಷ್ಟೊಂದೆಲ್ಲ ಮಾಡುವುದು ಕಷ್ಟದ ಕೆಲಸ.
ಜೀವನ ಸಹಜವಾಗಿ ನಡೆದುಕೊಂಡು ಹೋಗಲು ಕಾಲಕಾಲಕ್ಕೆ ನೀವು ನಿಮ್ಮ ಗುರಿಯನ್ನು ನಿರ್ಧರಿಸುವತ್ತ ಬನ್ನಿ. ಆ ಗುರಿಗಳು 1 ದಿನ, 1 ವಾರ, 1 ತಿಂಗಳು ಅಥವಾ ಹಲವು ವರ್ಷ ಯಾವುದೇ ಆಗಿರಬಹುದು. ಅವು ಆರ್ಥಿಕ, ಸಾಮಾಜಿಕ, ಭಾವನಾತ್ಮಕ ಅಥವಾ ಕೌಟುಂಬಿಕ ಯಾವುದೇ ವಿಷಯಕ್ಕೆ ಸಂಬಂಧಪಟ್ಟಂತೆ ಇರಬಹುದು.
ಸಿಂಗಲ್ ಮದರ್ ಅಥವಾ ಏಕಾಂಗಿ ತಾಯಿಗೆ ತನ್ನದೇ ಶಕ್ತಿ ಸಾಮರ್ಥ್ಯದ ಮೇಲೆ ಮಗುವಿನ ಪಾಲನೆಪೋಷಣೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ ಧೈರ್ಯದಿಂದ ಕಾರ್ಯಪ್ರವೃತ್ತರಾದರೆ, ತಮ್ಮ ಉದ್ದೇಶದಲ್ಲಿ ಯಶಸ್ವಿಯಾಗುವುದರ ಜೊತೆಗೆ ಬೇರೆಯವರಿಗೂ ಪ್ರೇರಣಾದಾಯಿ ವ್ಯಕ್ತಿಯಾಗಬಹುದು. ಅದು ಈ ರೀತಿಯಲ್ಲಿ……
ಕೆಲಸ ಮಗುವಿನ ಜೊತೆಗಿನ ಸಂಬಂಧ
ನೀವು ನಿಮ್ಮ ಆಫೀಸಿನ ಹ್ಯಾಪಿ ಅವರ್ಸ್ ಗೆಳತಿಯ ಬರ್ಥ್ ಡೇ ಪಾರ್ಟಿ, ಯಾವುದೇ ಸಿದ್ಧತೆ ಇಲ್ಲದೆ ಡೇಟ್ನಂತಹ ಸಂದರ್ಭಗಳಲ್ಲಿ ಮಗು ಅಥವಾ ಒಡೆದುಹೋದ ಹೃದಯದ ಕಾರಣದಿಂದ ಬ್ಯಾಕ್ ಸೀಟ್ಗೆ ಬಿಟ್ಟು ಹೋಗುತ್ತೀರಾ? ಅದೇ ರೀತಿಯಲ್ಲಿ ಯಾವಾಗಲಾದರೊಮ್ಮೆ ಡಾಕ್ಟರ್ ಅಪಾಯಿಂಟ್ಮೆಂಟ್ ಅಥವಾ ಬ್ಯೂಟಿ ಪಾರ್ಲರ್ಗೆ ಹೋಗುವುದನ್ನು ಕೂಡ ಏಕಾಂಗಿ ತಾಯಿ ಆಗಿರುವ ಕಾರಣದಿಂದ ನೀವು ದೈಹಿಕವಾಗಿ ಅಥವಾ ಮಾನಸಿಕವಾಗಿ ಮಗುವಿನ ಜೊತೆ ಇರುವುದು ಅನಿವಾರ್ಯವಾಗುತ್ತದೆ. ಆದರೆ ಆ ಕಾರಣದಿಂದ ಸಮಾಜದಿಂದ ದೂರ ಇರುವುದು ಹಾಗೂ ನಿಮ್ಮ ಅಗತ್ಯಗಳನ್ನು ದೂರ ಸರಿಸುವುದು ಸಮಂಜಸವಲ್ಲ.
ಎಂದಾದರೊಮ್ಮೆ ನಿಮ್ಮ ತಾಯ್ತನದ ಹೊಣೆಗಾರಿಕೆಯಿಂದ ಮುಕ್ತರಾಗಿ ಸ್ವಲ್ಪ ಹೊತ್ತು ನಿಮಗಾಗಿಯೇ ಕಳೆಯುವುದು ಅತ್ಯವಶ್ಯ. ಏಕೆಂದರೆ ನಿಮ್ಮ ಎನರ್ಜಿಯ ಬ್ಯಾಟರಿ ರಿಚಾರ್ಜ್ ಆಗುತ್ತಿರಬೇಕು ಹಾಗೂ ಅತ್ಯುತ್ತಮ ರೀತಿಯಲ್ಲಿ ನಿಮ್ಮ ಹೊಣೆಗಾರಿಕೆಯನ್ನು ನಿಭಾಯಿಸುವಂತಾಗಬೇಕು.
ನಿಮ್ಮ ಸಕಾರಾತ್ಮಕತೆಯನ್ನು ಕಾಯ್ದುಕೊಂಡು ಹೋಗಿ ಹಾಗೂ ಜೀವನದಲ್ಲಿ ಮುಂದೆ ಸಾಗುವ ದಾರಿಯನ್ನು ಮುಕ್ತವಾಗಿಟ್ಟುಕೊಳ್ಳಿ. ಜನರ ಜೊತೆ ಬೆರೆಯುತ್ತ ಇರಿ ಹಾಗೂ ಜನರ ನಡುವೆ ತಲೆ ಎತ್ತಿ ಓಡಾಡುವಂತಾಗ ಬೇಕು. ನೀವು ಬಚ್ಚಿಟ್ಟುಕೊಳ್ಳುವುದರಿಂದ ಅಥವಾ ದುಃಖಿತರಾಗುವುದರಿಂದ ಏನೂ ಪ್ರಯೋಜನವಿಲ್ಲ.
ಕಮ್ಯೂನಿಟೀಸಿನ ಬೆಂಬಲ ಹುಡುಕಿ : ಸಿಂಗಲ್ ಮದರ್ ತನ್ನನ್ನು ತಾನು ಏಕಾಂಗಿ, ದುಃಖಿತಳೆಂದು ಭಾವಿಸುತ್ತಾಳೆ. ತಾನು ಏಕಾಂಗಿಯೆಂದು ಆಕೆಗೆ ಅನಿಸುತ್ತಿರುತ್ತದೆ. ಆದರೆ ಈ ಭಾವನೆ ಸೂಕ್ತವಲ್ಲ ನೀವು ಸಿಂಗಲ್ ಮದರ್ಸ್ ಗೆ ಸಂಬಂಧಪಟ್ಟ ಕಮ್ಯುನಿಟೀಸ್ ಅಂದರೆ ಪೇರೆಂಟ್ಸ್ ವಿದ್ಯುಕ್ತ ಪಾರ್ಟ್ನರ್ಸ್, ಸಿಂಗಲ್ ಮಾಮ್ಸ್ ಕನೆಕ್ಟ್ ಆರ್ಗನೈಜೇಶನ್ನಂತಹ ಸಂಸ್ಥೆಗಳ ಸದಸ್ಯರಾಗಬಹುದು. ಅಕ್ಕಪಕ್ಕದವರು ನಿಮ್ಮ ಹಾಗೆಯೇ ಇವರು ಸಿಂಗಲ್ ಮದರ್ಸ್ ನಿಮ್ಮ ಸಪೋರ್ಟ್ ಸಿಸ್ಟಮ್ ಆಗಬಹುದು. ನೀವು ಆನ್ಲೈನ್ನಲ್ಲಿ ಯಾವುದಾದರೂ ಕಮ್ಯುನಿಟಿಯ ಮ್ಯಾಚರ್ಆಗಿ ಸಪೋರ್ಟ್ ಪಡೆಯಬಹುದು.
ನೆರವು ಪಡೆಯಿರಿ : ಸಿಂಗಲ್ ಮದರ್ ಆದವಳು ಎಷ್ಟೋ ಸಲ ನೆರವು ಕೇಳುವ ಅಥವಾ ನೆರವಿನ ಅಗತ್ಯ ಸ್ವೀಕರಿಸಲು ಕೂಡ ಹಿಂದೇಟು ಹಾಕುತ್ತಾಳೆ. ನಿಮಗೆ 2-3 ಗಂಟೆಗಳಿಗಾಗಿ ಎಲ್ಲಿಯಾದರೂ ಹೋಗಬೇಕಿದ್ದರೆ ಅಥವಾ ನಿಮ್ಮ ಆರೋಗ್ಯ ಸರಿಯಿರದಿದ್ದರೆ, ನೀವು ಮನೆ ಸಮೀಪವೇ ಯಾರದ್ದಾದರೂ ನೆರವಿಗಾಗಿ ಶೋಧ ಮಾಡಬಹುದು. ನಿಮಗೆ ಸಹಾಯ ಮಾಡುವವರು ಪಕ್ಕದ ಮನೆಯವರು, ಸಂಬಂಧಿಕರು, ಸ್ನೇಹಿತರು ಹೀಗೆ ಯಾರಾದರೂ ಆಗಿರಬಹುದು.
ನೀವು ನಿಮ್ಮ ಅಗತ್ಯಗಳನ್ನು ಅವರಿಗೆ ಸ್ಪಷ್ಟವಾಗಿ ತಿಳಿಸಿ ಹಾಗೂ ಅವರಿಂದ ಸಹಾಯ ಪಡೆದುಕೊಳ್ಳಿ. ನಿಮ್ಮ ಜೀವನದಲ್ಲಿ ಅಂತಹ ಅದೆಷ್ಟೋ ಜನರಿರಬಹುದು. ಅವರು ನಿಮಗಾಗಿ ಸಹಾಯ ಮಾಡಲು ಮುಂದೆ ಬರಬಹುದು. ಯಾವುದೇ ಸಂಕೋಚವಿಲ್ಲದೆ ನೀವು ಅವರ ಸಹಾಯ ಪಡೆದುಕೊಳ್ಳಿ. ಅವರ ಮಗುವಿಗಾಗಿ ನೀವು ಏನಾದರೂ ಸಹಾಯ ಮಾಡುವುದರ ಮೂಲಕ ಅವರ ಋಣ ತೀರಿಸಬಹುದು. ನೀವು ಸಂಬಂಧಿಕರು ಅಥವಾ ಸ್ನೇಹಿತರಿಗೆ ಯಾವುದೇ ತೊಂದರೆ ಕೊಡಬಾರದು ಎಂದುಕೊಂಡರೆ, ನೀವು ನಿಮ್ಮ ಸಮವಯಸ್ಸಿನ ನೆರೆಮನೆಯವರಿಂದ ಸಹಾಯ ಪಡೆದುಕೊಳ್ಳಬಹುದು.
ಬೆಂಗಳೂರಿನ 32 ವರ್ಷದ ವೀಣಾ ಹೀಗೆ ಹೇಳುತ್ತಾರೆ, “ನಾನು ಹಾಗೂ ಪತಿ ಬೇರೆ ಬೇರೆಯಾದಾಗ ನನ್ನ ಮಗುವಿನ ವಯಸ್ಸು ಕೇವಲ 15 ತಿಂಗಳು ಆಗಿತ್ತು. ಆಗ ನನ್ನ ನೆರವಿಗೆ ಬಂದವರು ನೆರೆಮನೆಯ ಶೃತಿ. ಆಗ ಅವರಿಗೆ 2 ವರ್ಷದ ಮಗುವಿತ್ತು. ನಾವಿಬ್ಬರೂ ಒಂದು ನಿರ್ಧಾರಕ್ಕೆ ಬಂದಿದ್ದೆ. ನಾವು ಎಲ್ಲಿಯಾದರೂ ಹೋಗಬೇಕೆಂದಾಗ ಪರಸ್ಪರರ ಮನೆಯಲ್ಲಿ ಮಗುವನ್ನು ಬಿಟ್ಟು ಹೋಗಬೇಕೆಂಬುದೇ ಆ ನಿರ್ಧಾರವಾಗಿತ್ತು. ನಮ್ಮ ನಡುವಿನ ಈ ಒಪ್ಪಂದ ನಮ್ಮ ಸಮಯ, ಹಣ ಹಾಗೂ ಮನಶ್ಶಾಂತಿಯನ್ನು ಕಾಯ್ದುಕೊಂಡು ಹೋಗುವಲ್ಲಿ ನೆರವಾಯಿತು.
ನಿಮ್ಮ ಆದ್ಯತೆಗಳನ್ನು ಮತ್ತೊಮ್ಮೆ ಅಡ್ಜೆಸ್ಟ್ ಮಾಡಿಕೊಳ್ಳಿ : ಬಹಳಷ್ಟು ಸಿಂಗಲ್ ವುಮನ್ಸ್ ತಮ್ಮನ್ನು ತಾವು ಸೂಪರ್ ವುಮನ್ ಎಂದು ಭಾವಿಸುತ್ತಾರೆ. ಇಡೀ ದಿನ ಕೆಲಸ ಮಾಡುವುದು ಹಾಗೂ ಮಗುವಿನ ಯೋಗಕ್ಷೇಮ ನೋಡಿಕೊಳ್ಳುವುದರ ಜೊತೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಅಥವಾ ಮನೆಯಲ್ಲಿ ಯಾವಾಗಲೂ ಸಿದ್ಧ. ಆಹಾರವನ್ನೇ ಸರ್ನ್ ಮಾಡಬೇಕು ಅಥವಾ ಮಗುವಿನ ಪ್ರತಿಯೊಂದು ಅವಶ್ಯಕತೆಗಳನ್ನು ತಕ್ಷಣವೇ ಈಡೇರಿಸಬೇಕು ಎನ್ನುವುದಾಗಿರುತ್ತದೆ. ಆದರೆ ಅಷ್ಟೊಂದೆಲ್ಲ ಮಾಡುವುದು ಕಷ್ಟದ ಕೆಲಸ. ಈ ನಿಟ್ಟಿನಲ್ಲಿ ಏಕಾಂಗಿ ಮಾತೆಯರಿಗೆ ವಾಸ್ತವದ ಬಗ್ಗೆ ಅರಿವಿರಬೇಕು. ಒಂದು ದಿನದಲ್ಲಿ ಏನನ್ನು ಮಾಡಬಹುದು? ಏನು ಮಾಡಲು ಆಗುವುದಿಲ್ಲ? ಎನ್ನುವುದರ ಬಗ್ಗೆ ತಿಳಿದಿರಬೇಕು.
ಒಂದು ಮಹತ್ವದ ವಿಚಾರವೆಂದರೆ, ನಿಮಗೆ ನೀವು ಅಗತ್ಯಕ್ಕಿಂತ ಹೆಚ್ಚು ಅಪೇಕ್ಷೆಗಳನ್ನು ಇಟ್ಟುಕೊಳ್ಳಬೇಡಿ. ನಿಮಗೆ ನೀವೇ ಒಂದಿಷ್ಟು ಬ್ರೇಕ್ ಕೊಡುವುದು ಅಗತ್ಯ. ನೀವು ಡಿನ್ನರ್ಗಾಗಿ ಎಂದಾದರೊಮ್ಮೆ ಫಾಸ್ಟ್ ಫುಡ್ ಅಥವಾ ಸೀರಿಯಲ್ಸ್ ಮಾಡಬಹುದು.
ಆದರೆ ಮಗುವಿನ ಓವರ್ ಆಲ್ ಡಯೆಟ್ ಆರೋಗ್ಯಕರವಾಗಿರಬೇಕು. ಅದೇ ರೀತಿ ಸದಾ ನಿಮ್ಮ ಮನೆ ಸ್ವಚ್ಛವಾಗಿರಬೇಕು ಎಂದೇನಿಲ್ಲ. ನಿಮ್ಮ ಸಹಾಯಕ್ಕಾಗಿ ಒಬ್ಬರು ಕೆಲಸದವರ ಸಹಾಯ ಪಡೆಯಬಹುದು. ಕೆಲವು ಕೆಲಸಗಳನ್ನು ನೀವು ನಿರ್ಲಕ್ಷ್ಯ ಕೂಡ ಮಾಡಬಹುದು. ಏಕೆಂದರೆ ಮಗುವಿನ ಜೊತೆ ನೀವು ಹೆಚ್ಚು ಸಮಯ ಕಳೆಯಲು ಸಾಧ್ಯವಾಗಬೇಕು ಹಾಗೂ ಸಂಪೂರ್ಣ ನಿದ್ರೆ ಪಡೆಯಲು ಸಾಧ್ಯವಾಗಬೇಕು.
ಅಪರಾಧಿಪ್ರಜ್ಞೆಯಿಂದ ಮುಕ್ತರಾಗಿ : ನೀವು ಏಕಾಂಗಿಯಾಗಿರುವ ಕಾರಣ ಏನೇ ಆಗಿರಬಹುದು, ಅದರ ಕುರಿತಂತೆ ಮನಸ್ಸಿನಲ್ಲಿ ಯಾವುದೇ ಬಗೆಯ ಅಪರಾಧಿಪ್ರಜ್ಞೆ ಇಟ್ಟುಕೊಳ್ಳಬೇಡಿ. ನಾನು ಒಬ್ಬಂಟಿಯಾಗಿದ್ದುಕೊಂಡು ಇಷ್ಟೊಂದು ಕೆಲಸ ಮಾಡಬೇಕಾಗಿ ಬಂತು. ಅಂಥವನ ಜೊತೆಯ ವಿರಸದಿಂದಾಗಿ ನಾನು ಈಗಲೂ ಕಹಿ ಅನುಭವ ಪಡೆಯುವಂತಾಯಿತು. ಮಗುವಿಗೆ ಕಷ್ಟ ಅನುಭವಿಸುವಂತಾಯಿತು. ಅವನಿಗೆ ತಮ್ಮ ಅಥವಾ ತಂಗಿಯನ್ನು ಕೊಡಲು ಸಾಧ್ಯವಾಗಲಿಲ್ಲ. ಕುಟುಂಬ ಚೂರು ಚೂರಾಯಿತು. ನಾನು ಒಳ್ಳೆಯ ತಾಯಿಯಾಗಲಿಲ್ಲ ಎಂಬ ಖೇದ ನಿಮ್ಮ ಮನಸ್ಸಿನಲ್ಲಿ ಇರಬಾರದು.
ನೀವು ನಿಮ್ಮನ್ನು ತಪ್ಪಿತಸ್ಥರನ್ನಾಗಿ ಕಾಣುತ್ತಿದ್ದರೆ, ಅದರ ಪರಿಣಾಮ ಒಳ್ಳೆಯದಾಗಿರುವುದಿಲ್ಲ. ಈ ತೆರನಾದ ಭಾವನೆಗಳಿಂದ ನಿಮ್ಮ ಮನಸ್ಸು ಚಂಚಲಗೊಳ್ಳುತ್ತದೆ. ಆ ಕಾರಣದಿಂದ ನೀವು ವರ್ತಮಾನದ ಮೇಲೆ ಫೋಕಸ್ ಮಾಡಲು ಆಗುವುದಿಲ್ಲ. ನೀವು ಆದಷ್ಟು ಪ್ರಸ್ತುತ ದಿನಗಳ ಬಗ್ಗೆ ಗಮನಕೊಡಿ. ಮಗುವನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳಬಹುದು ಹಾಗೂ ಅದರ ಅವಶ್ಯಕತೆಗಳನ್ನು ಎಷ್ಟರಮಟ್ಟಿಗೆ ಪೂರೈಸಬಹುದು? ಎನ್ನುವುದರ ಬಗ್ಗೆ ಚಿಂತನ ಮಂಥನ ಮಾಡಿ.
ಜೀವನ ಉದ್ದೇಶಕ್ಕಾಗಿ ಗುರಿ ನಿರ್ಧರಿಸಿ : ಜೀವನ ಸಹಜವಾಗಿ ನಡೆದುಕೊಂಡು ಹೋಗಲು ಕಾಲಕಾಲಕ್ಕೆ ನೀವು ನಿಮ್ಮ ಗುರಿಯನ್ನು ನಿರ್ಧರಿಸುವತ್ತ ಬನ್ನಿ. ಆ ಗುರಿಗಳು 1 ದಿನ, 1 ವಾರ, 1 ತಿಂಗಳು ಅಥವಾ ಹಲವು ವರ್ಷ ಯಾವುದೇ ಆಗಿರಬಹುದು. ಅವು ಆರ್ಥಿಕ, ಸಾಮಾಜಿಕ, ಭಾವನಾತ್ಮಕ ಅಥವಾ ಕೌಟುಂಬಿಕ ಯಾವುದೇ ವಿಷಯಕ್ಕೆ ಸಂಬಂಧಪಟ್ಟಂತೆ ಇರಬಹುದು. ಅವನ್ನು ಸಕಾಲಕ್ಕೆ ಈಡೇರಿಸಿಕೊಳ್ಳುವುದರತ್ತ ಗಮನಹರಿಸಿ.
ನೀವು ದೀರ್ಘಾವಧಿಯ ಯೋಜನೆ ಸಹ ರೂಪಿಸಿಕೊಳ್ಳಬಹುದು. ಯಾವುದಾದರೊಂದು ವಿಶೇಷ ಡಿಗ್ರಿ ಪಡೆದುಕೊಳ್ಳುವುದು, ತೂಕ ಇಳಿಸಿಕೊಳ್ಳುವುದು, ಬೇರೊಂದು ಒಳ್ಳೆಯ ವಾತಾವರಣದಲ್ಲಿ ಶಿಫ್ಟ್ ಆಗುವುದು. ಹೀಗೆ ಯಾವುದಾದರೂ ಆಗಿರಬಹುದು. ಆದರೆ ಇವೆಲ್ಲದರ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅತ್ಯವಶ್ಯ. ಏಕೆಂದರೆ ನಿಮ್ಮ ಮಗುವಿಗಾಗಿ ಪರಿಪೂರ್ಣ ಕೊಡಲು ಸಾಧ್ಯವಾಗಿರಬೇಕು. ಮಗುವಿಗೆ ರಜೆ ಇದ್ದಾಗ ಹೊರಗೆ ಕರೆದುಕೊಂಡು ಹೋಗಿ ಬನ್ನಿ. ಅದರ ಹೋಂವರ್ಕ್, ಪ್ರಾಜೆಕ್ಟ್ ವರ್ಕ್ ಮಾಡಿಸಿ ಮ್ಯೂಸಿಕ್ ಆಲಿಸಿ, ಪುಸ್ತಕ ಓದಿ, ವ್ಯಾಯಾಮ ಮಾಡಿ, ಹೊಸ ಹೊಸ ಡಿಶೆಸ್ ತಯಾರಿಸಿ.
ಹಳೆಯ ಕಹಿ ನೆನಪು ನಿಮ್ಮನ್ನು ಆರಿಸಿಕೊಳ್ಳದಿರಲಿ : ಸಿಂಗಲ್ ಮದರ್ ತನ್ನ ಮನಸ್ಸಿನ ಶಾಂತಿ ಹಾಗೂ ಉತ್ಸಾಹವನ್ನು ಸದಾ ಕಾಯ್ದುಕೊಂಡು ಹೋಗಲು ಪ್ರಯತ್ನಿಸಬೇಕು. ಹಳೆಯ ಕಹಿ ಘಟನೆಗಳು ಎಕ್ಸ್ ಜೊತೆಗಿನ ಹಳೆಯ ನೆನಪುಗಳು ನಿಮ್ಮ ವರ್ತಮಾನಕ್ಕೆ ಏಟು ಕೊಡದಂತೆ ನೋಡಿಕೊಳ್ಳಿ. ನಿಮ್ಮ ದೃಷ್ಟಿಕೋನ ಯಾವಾಗಲೂ ಸಕಾರಾತ್ಮಕವಾಗಿರಬೇಕು. ಹಿಂದಿನ ಎಲ್ಲವನ್ನು ಮರೆತು, ಯಾವುದೇ ಪಶ್ಚಾತ್ತಾಪ ಇಲ್ಲದೆ ನಿಮ್ಮ ಹೊಸ ಜೀವನವನ್ನು ಸ್ವೀಕರಿಸಿ. ಏಕೆಂದರೆ ನಿಮ್ಮ ಮಾನಸಿಕ ಸ್ಥಿತಿಯ ಪರಿಣಾಮ ನಿಮ್ಮ ಮಗುವಿನ ಮೇಲೆ ಉಂಟಾಗುತ್ತದೆ.
ವ್ಯರ್ಥ ಖರ್ಚು ಬೇಡ : ನೀವು ಕಡಿಮೆ ಗಳಿಸುತ್ತಿರಬಹುದು ಅಥವಾ ಹೆಚ್ಚು, ಸಿಂಗಲ್ ಪೇರೆಂಟ್ ಆಗಿರುವ ಕಾರಣದಿಂದ ಅನಾವಶ್ಯಕ ಖರ್ಚುಗಳ ಮೇಲೆ ಕಡಿವಾಣ ಹಾಕಿ. ನೀವು ಏಕಾಂಗಿಯಾಗಿಯೇ ಎಲ್ಲವನ್ನೂ ನಿಭಾಯಿಸಬೇಕಿದೆ. ಮಗುವಿನ ಅವಶ್ಯಕತೆ ಈಡೇರಿಸುವುದರ ಜೊತೆ ಜೊತೆಗೆ ಅವರ ಭವಿಷ್ಯವನ್ನೂ ರೂಪಿಸಬೇಕಾದ ಹೊಣೆಗಾರಿಕೆ ನಿಮ್ಮ ಮೇಲಿದೆ.
ನಿಮ್ಮ ಖರ್ಚುಗಳನ್ನು ಮಿತಿಯಲ್ಲಿಟ್ಟುಕೊಳ್ಳಿ. ವ್ಯರ್ಥ ಖರ್ಚು ಬೇಡ. ಜೀವ ವಿಮೆ, ಆರೋಗ್ಯ ವಿಮೆಗಳಲ್ಲಿ ಹಣ ತೊಡಗಿಸಿ. ನೀವು ಯೋಜನೆ ಮಾಡಿ ಹಣ ತೊಡಗಿಸಿದರೆ ಮುಂದೊಮ್ಮೆ ತುರ್ತು ಸ್ಥಿತಿಯಲ್ಲಿ ಅದರ ಉಪಯೋಗ ಆಗಿಯೇ ಆಗುತ್ತದೆ.
ಮಗುವಿಗಾಗಿ ವಿಭಿನ್ನ ಯೋಜನೆಗಳಲ್ಲಿ ಹಣ ತೊಡಗಿಸಿ. ಮುಂದೆ ಯಾರ ಮುಂದೆಯೂ ಹಣಕ್ಕಾಗಿ ಕೈಯೊಡ್ಡುವ ಸ್ಥಿತಿ ಬರಬಾರದು.
ರೋಲ್ ಮಾಡೆಲ್ ಹುಡುಕಿ: ಸಿಂಗಲ್ ಮದರ್ಸ್ಸ್ ಹಾಗೂ ಅವರ ಮಕ್ಕಳು ಏನನ್ನಾದರೂ ಸಾಧಿಸಬಹುದು. ಅಂತಹ ನೂರಾರು ಉದಾಹರಣೆಗಳಿವೆ. ನೀವು ಸಿಂಗಲ್ ಪೇರೆಂಟ್ಸ್ ಗಳ ಒಂದು ಪಟ್ಟಿ ಸಿದ್ಧಪಡಿಸಿ. ಅಂಥವರಿಂದ ನಿಮಗೆ ಪ್ರೇರಣೆ ದೊರಕಬೇಕು. ಅಮೆರಿಕದ ಮಾಜಿ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮರನ್ನು ಅವರ ಸಿಂಗಲ್ ಮದರ್ ಹಾಗೂ ಅವರ ತಾತ, ಅಜ್ಜಿ ಪಾಲನೆ ಪೋಷಣೆ ಮಾಡಿದ್ದರು. ಇನ್ನೋರ್ವ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಕೂಡ ತಮ್ಮ ತಾಯಿಯ ಗರಡಿಯಲ್ಲಿಯೇ ದೊಡ್ಡವರಾಗಿದ್ದರು. ಅಂದಹಾಗೆ ಪರಿಸ್ಥಿತಿಗಳು ಎಷ್ಟೇ ಕಠಿಣವಾಗಿರಬಹುದು. ಆದರೆ ಮನಸ್ಸಿನಲ್ಲಿ ದೃಢ ನಿರ್ಧಾರವಿದ್ದರೆ ವ್ಯಕ್ತಿ ಯಶಸ್ಸಿನ ತುತ್ತ ತುದಿ ತಲುಪಬಹುದು.
ಇವರು ನಿಮಗೆ ಮಾದರಿ……
ಜಗತ್ತಿನ ಕಣ್ಣಿಗೆ ಅವರು ಹೇಗೇ ಕಾಣಬಹುದು. ಆದರೆ ಮಗುವಿನ ದೃಷ್ಟಿಯಲ್ಲಿ ಆಕೆ ಸದಾ ಮಮತಾಮಯಿ. ಸಿನಿಮಾ ಹಾಗೂ ಟಿವಿಯ ಅಂತಹ ಕೆಲವು ಕಲಾವಿದೆಯರ ಉದಾಹರಣೆಗಳು ಇಲ್ಲಿವೆ :
ಸುಷ್ಮಿತಾ ಸೇನ್ : ಮಿಸ್ ಇಂಡಿಯಾ ಹಾಗೂ ಮಿಸ್ ಯೂನಿವರ್ಸ್ ಆಗಿದ್ದ ಸುಷ್ಮಿತಾ 43ನೇ ವರ್ಷದಲ್ಲೂ ಅವಿವಾಹಿತೆ. ಆದರೆ ಈಗ ಅವರದು ತುಂಬಿದ ಕುಟುಂಬ. ಅವರು ದತ್ತು ಪಡೆದ ರಿನಿ ಹಾಗೂ ಅಲೀಶಾ ಅವರ ಕುಟುಂಬ ಜೀವನಕ್ಕೆ ಅರ್ಥ ತಂದು ಕೊಟ್ಟಿದ್ದಾರೆ. `ಅವರೇ ನನ್ನ ಜೀವನ’ ಎಂದು ಸುಷ್ಮಿತಾ ಹೇಳುತ್ತಾರೆ.
ಕರಿಷ್ಮಾ ಕಪೂರ್ : ಬಾಲಿವುಡ್ನ ಒಂದು ಕಾಲದ ಪ್ರಸಿದ್ಧ ನಾಯಕಿ. ಸಂಜೀವ್ ಕಪೂರ್ ಜೊತೆ ಅವರ ವಿವಾಹವಾಗಿತ್ತು. ಆದರೆ ಅವರ ವಿವಾಹಬಂಧ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ತಮಗೆ ಹುಟ್ಟಿದ ಇಬ್ಬರೂ ಮಕ್ಕಳನ್ನು ಕರಿಷ್ಮಾ ಈಗ ಒಬ್ಬರೇ ಸಂಭಾಳಿಸುತ್ತಿದ್ದಾರೆ. ಸಿಂಗಲ್ ಮದರ್ ಆಗಿ ಅವರು ಮಕ್ಕಳಿಗೆ ಪರಿಪೂರ್ಣ ಪ್ರೀತಿ ಕೊಡುತ್ತಾರೆ ಹಾಗೂ ಅವರಿಗೆ ಮಾರ್ಗದರ್ಶನ ಮಾಡುತ್ತಾರೆ.
ರವೀನಾ ಟಂಡನ್ : ಅನಿಲ್ ಥಂಡಾಯಿ ಅವರನ್ನು ಮದುವೆ ಆಗುವುದಕ್ಕಿಂತ ಮುಂಚೆ ರವೀನಾ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದರು. ಈಗ ಅವರು ನಾಲ್ಕು ಮಕ್ಕಳ ತಾಯಿ ಎಲ್ಲರಿಗೂ ಸಮಾನ ಪ್ರೀತಿ ನೀಡುತ್ತಿದ್ದಾರೆ.
ಕೊಂಕಣಾ ಸೇನ್ : ಇಬ್ಬರು ಧೈರ್ಯಶಾಲಿ ಹಾಗೂ ಯಶಸ್ವಿ ಸಿಂಗಲ್ ಮದರ್ ರಣವೀರ್ ಶೌರಿರವರಿಂದ ವಿಚ್ಛೇದನ ಪಡೆದ ಬಳಿಕ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳಲು ನಟನೆಯಿಂದ ಬ್ರೇಕ್ ಪಡೆದರು.
ಅಮೃತಾ ಸಿಂಗ್ : ಸೈಫ್ ಅಲಿಖಾನ್ ಮೊದಲ ಪತ್ನಿ ಅಮೃತಾ ಸಿಂಗ್ಗೆ ಇಬ್ಬರು ಮಕ್ಕಳಿದ್ದಾರೆ. ಸೈಫ್ರಿಂದ ಬೇರೆಯಾದ ಬಳಿಕ ಧೃತಿಗೆಡದೆ ತಮ್ಮಿಬ್ಬರು ಮಕ್ಕಳನ್ನು ಪೋಷಿಸುತ್ತಿದ್ದಾರೆ. ಅದಕ್ಕಾಗಿ ಅವರು ತಮ್ಮ ಸಿನಿ ಜೀವನಕ್ಕೂ ಗುಡ್ ಬೈ ಹೇಳಿದ್ದಾರೆ.
ನೀನಾ ಗುಪ್ತಾ : ಇವರು ಬಾಲಿವುಡ್ನ ಹೆಸರಾಂತ ಸಿಂಗಲ್ ಮದರ್. ತಮ್ಮ ಪುತ್ರಿ `ಮಸಾಬಾ’ಳನ್ನು ತಾವೊಬ್ಬರೇ ಬೆಳೆಸಿದರು. ಈಗ ಮಸಾಬಾ ಹೆಸರಾಂತ ಡಿವೈಸರ್ ಆಗಿದ್ದಾರೆ.
ಸಾರಿಕಾ : ಕಮಲ್ ಹಾಸನ್ರ ಪತ್ನಿ ಸಾರಿಕಾ ತಮ್ಮ ಪುತ್ರಿ ಶೃತಿಯನ್ನು ಏಕಾಂಗಿಯಾಗಿಯೇ ಪಾಲನೆ ಪೋಷಣೆ ಮಾಡಿದ್ದಾರೆ.
ಪೂನಂ ದಿಲ್ಲೋನ್ : ಮಿಸ್ ಇಂಡಿಯಾ ಆಗಿದ್ದ ಇವರು ನಿರ್ಮಾಪಕ ಅಶೋಕ್ ಟಕೇರಿಯಾ ಜೊತೆಗೆ ಮದುವೆ ಮಾಡಿಕೊಂಡಿದ್ದರು. ಅವರ ಜೊತೆಗಿನ ಸಂಬಂಧದಲ್ಲಿ ಬಿರುಕು ಉಂಟಾದ ಬಳಿಕ ಪೂನಂ ತಮ್ಮಿಬ್ಬರು ಮಕ್ಕಳನ್ನು ತಾವೇ ಸಾಕಿ ಸಲಹುತ್ತಿದ್ದಾರೆ.
ಜುಲೈ 2015ರಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿ ಅವಿವಾಹಿತ ತಾಯಿಗೆ ಹುಟ್ಟಿದ ಮಗುವಿಗೆ ಆಕೆಯೇ ಅದರ ಪೋಷಕರು ಎಂದು ಮೊಹರು ಹಾಕಿತು. ಯಾವುದೇ ಸಿಂಗಲ್ ಅಥವಾ ಅವಿವಾಹಿತ ತಾಯಿ ತನ್ನ ಮಗುವಿನ ಹುಟ್ಟಿದ ದಿನಾಂಕದ ಪ್ರಮಾಣ ಪತ್ರಕ್ಕಾಗಿ ಅರ್ಜಿ ಹಾಕಿದಾಗ ಅವರಿಗೆ ಪ್ರಮಾಣ ಪತ್ರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತು. ಮದುವೆಗೂ ಮುನ್ನ ಗರ್ಭಿಣಿಯಾದ ತಾಯಂದಿರಿಗೆ ಅದರ ತಂದೆಯ ಹೆಸರನ್ನು ಹೇಳುವುದು ಈಗ ಕಡ್ಡಾಯವಾಗಿರುವುದಿಲ್ಲ.