ಪ್ರಚಾರ ಅತ್ಯಗತ್ಯ : ಡ್ಯಾನ್ಸ್ ಕ್ಲಾಸುಗಳಲ್ಲಿ ಕೇವಲ ಡ್ಯಾನ್ಸ್ ಮಾತ್ರ ಕಲಿಯುವುದಲ್ಲ, ಅಲ್ಲಿ ಫ್ರೆಂಡ್ಸ್ ಹೆಚ್ಚುತ್ತಾರೆ, ಪೈಪೋಟಿಯೂ ಹೆಚ್ಚುತ್ತದೆ. ಡ್ಯಾನ್ಸ್ ಕಲಿಸುವ ಇಂಥದೇ ಒಂದು ಕಂಪನಿ ವೆಲ್‌ನೆಸ್‌ ಲಿವಿಂಗ್‌, ಡ್ಯಾನ್ಸ್ ಜೊತೆ ಜೊತೆಗೆ ಪ್ರಮೋಶನ್ಸ್ ಗೂ ಒತ್ತು ಕೊಡುತ್ತದೆ. ಈಗ ಡೇಲಿ ನ್ಯೂಸ್‌ ಪೇಪರ್ಸ್‌ ಜೊತೆ ಸೋಶಿಯಲ್ ಮೀಡಿಯಾದಿಂದಲೂ ಪ್ರಚಾರ ಅತ್ಯಗತ್ಯ ಆಗಿಹೋಗಿದೆ.

police-RVS

ಡ್ಯಾನ್ಸ್ ಕಲಿಯುವ ಅವಕಾಶ : ಬ್ಯಾಲೆ ಡ್ಯಾನ್ಸ್ ಗಳಲ್ಲಿ ಇರುವ ಲಯ ರಿದಮ್ ಬೇರೆ ಇತರ ಡ್ಯಾನ್ಸ್ಗಳಿಲ್ಲವೇ? ಹೀಗಾಗಿಯೇ ಇದರ ಟ್ರೇನಿಂಗ್‌ ಆರಂಭದಿಂದಲೇ ಅಗತ್ಯ ನೀಡಲ್ಪಡುತ್ತದೆ. ಆದರಿಂದ ತಾಯಂದಿರು ತಮ್ಮ ಹೆಣ್ಣುಮಕ್ಕಳನ್ನು 8-9 ವರ್ಷದವರಿದ್ದಾಗಲೇ ಈ  ಡ್ಯಾನ್ಸ್ ಕಲಿಯಲು ಕಳಿಸುತ್ತಾರೆ. ಡ್ಯಾನ್ಸ್ ಅಂತೂ ಜಬರ್ದಸ್ತಾಗಿ ಕಲಿಸಲಾಗುತ್ತದೆ, ಕೊರೋನಾ ಮಹಾಮಾರಿಯ ಕಾಟದ ಮಧ್ಯೆಯೂ ಇದು ಸಾಕಷ್ಟು ಯಶಸ್ವಿ ಎನಿಸಿದೆ. ಇತ್ತೀಚೆಗೆ ಆನ್‌ಲೈನ್‌ ಡ್ಯಾನ್ಸ್ ಪ್ರಾಕ್ಟೀಸ್‌ ಸಹ ಜೋರಾಗಿ ನಡೆಯುತ್ತಿದೆ. ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಅವರಿಗೂ ಇದನ್ನು ಕಲಿಸಿರಿ.

Collaborate-Durham_Brian-Slater_5572-1024x755

ಗ್ರಾಹಕರನ್ನು ಸೆಳೆಯುವ ಹೊಸ ತಂತ್ರ : ಕೊರೋನಾ ಮಹಾಮಾರಿಯಂತೂ ಪ್ರವಾಸೋದ್ಯಮವನ್ನು ಇನ್ನಿಲ್ಲದಂತೆ ನೆಲ ಕಚ್ಚಿಸಿದೆ. ಇದೀಗ ಟ್ರಾವೆಲ್ ‌ಕಂಪನಿಗಳು ಏಜೆಂಟರನ್ನು ಓಲೈಸಲು ಯತ್ನಿಸುತ್ತಿವೆ, ಎಲ್ಲ ಸರಿಯಾಗಿದೆ ತಾನೇ, ನೀವೇ ನೋಡಿಕೊಳ್ಳಿ ಎನ್ನುತ್ತಿದೆ. ಮೆಕ್ಸಿಕೋದ ಒಂದು ಕಂಪನಿ ತನ್ನಲ್ಲೇ ಏಜೆಂಟರಿಗೆ ಇಡೀ ಮೆಕ್ಸಿಕೋದ ಪ್ರವಾಸ ಮಾಡಿಸಿ, ಗ್ರಾಹಕರನ್ನು ಕರೆತರುವ ಆಮಿಷ ಒಡ್ಡಿವೆ. ಏಜೆಂಟರಿಗೂ ಇದು ಸವಾಲಿನ ವಿಷಯವೇ ಸರಿ, ಏಕೆಂದರೆ ದಿನೇ ದಿನೇ ಹೊಸ ಹೊಸ ಮುಖಗಳು ಕೊರೋನಾಗಾಗಿ ಬಲಿಯಾಗುತ್ತಲೇ ಇವೆ, ವ್ಯಾಕ್ಸಿನೇಶನ್‌ ಪರಿಣಾಮ 100% ಇದನ್ನು ತಡೆಯಲಾಗಿಲ್ಲ. ಜನರಿಗೂ ಮನೆಗಳಲ್ಲಿ ಕುಳಿತು ಸಾಕಾಗಿದೆ, ಆದರೆ ಬಿಸ್‌ನೆಸ್‌ನಡೆಯದ ಕಾರಣ ಯಾರ ಬಳಿಯೂ ಹಣವಿಲ್ಲ. ನಮ್ಮ ದೇಶದಲ್ಲಂತೂ ಚುನಾವಣೆ, ತೀರ್ಥಯಾತ್ರೆಗಳಿಗೆ ಮನೆ ಮಠ ಮಾರಿಯಾದರೂ ಖರ್ಚು ಹೊಂದಿಸಿಕೊಳ್ಳುತ್ತಾರೆ ಎಂಬುದರಲ್ಲಿ ಉತ್ಪ್ರೇಕ್ಷೆ ಇಲ್ಲ.

press_release_distribution_0480620_163385

ಯಾವ ಗ್ಯಾರಂಟಿಯೂ ಇಲ್ಲ : ಒಂದು ಕಡೆ ಕೊರೋನಾದಿಂದ ಲಾಕ್‌ ಡೌನ್‌ ಹೆಚ್ಚಾಗಿ, ಯಾವುದು ಸವೆಯಿತೋ ಇಲ್ಲವೋ, ಸೋಫಾಗಳಂತೂ ಸವೆಯುತ್ತಿವೆ, ಎಲ್ಲ ತೆರೆಯಲ್ಪಟ್ಟಾಗ ಸೋಫಾ ರಿಪೇರಿ ಮಾಡಿಸಲೇಬೇಕು. ಇಡೀ ಕುಟುಂಬ ಎಲ್ಲರೂ ಕುಳಿತು ಟೈಂಪಾಸ್‌ಗಾಗಿ ದೇಶ ವಿದೇಶಗಳ ಕಾರ್ಯಕ್ರಮ ನೋಡುತ್ತಿರುತ್ತಾರೆ. ಜೊತೆಗೇ ಕೂರುವುದರಿಂದ ಪರಸ್ಪರ ಪ್ರೀತಿ ಪ್ರೇಮ ಹೆಚ್ಚುತ್ತದೆ ಎಂಬ ಗ್ಯಾರಂಟಿ ಏನೂ ಇಲ್ಲ. ಯಾವ ಚಾನೆಲ್‌, ಯಾವ ಪ್ರೋಗ್ರಾಂ ನೋಡುವುದು ಎಂಬುದರಲ್ಲಿ ಎಷ್ಟೋ ಜಗಳಗಳು ಹೆಚ್ಚುತ್ತವೆ. ಮಮತಾ ಅಮಿತ್‌ ಶಾ ನಡುವಿನ ಜಗಳಕ್ಕಿಂತ ವಿಕೋಪಕ್ಕೆ ಹೋಗದಂತೆ ಎಚ್ಚರವಿರಬೇಕಷ್ಟೆ!

authentication-by-facial-recognition-concept-900x600-Custom-800x415

ಸುರಕ್ಷತೆ ಕಡಿಮೆ ಭಯ ಹೆಚ್ಚು : ಯಾವುದೇ ದೇಶವಿರಲಿ, ತನ್ನ ಪೊಲೀಸ್‌ ಯಾವ ಸೇವೆಯ ಪೆರೇಡ್‌ ಮಾಡಿಸಿದಾಗ, ಅಲ್ಲಿನ ನಾಗರಿಕರಿಗೆ ಸುರಕ್ಷತೆ ಹೆಚ್ಚುತ್ತದೋ ಭಯವೋ ಎಂಬುದನ್ನು ಖಂಡಿತಾ ಹೇಳಲಿಕ್ಕೆ ಬರಲ್ಲ. ಆಫ್ರಿಕಾದ ನೈಜೀರಿಯಾದಲ್ಲಂತೂ ಜನರನ್ನು ಭಯಪಡಿಸಲೆಂದೇ ಇಂಥ ಖಡಕ್‌ ಪೆರೇಡ್‌ ನಡೆಸುತ್ತದೆ ಎಂಬುದು ಸ್ಪಷ್ಟ ಗೋಚರಿಸುತ್ತಿದೆ. ಬೇರೆ ದೇಶಗಳು ಇಂಥ ಪೆರೇಡ್‌ಗಳಿಂದ ಹೆದರುವುದಿಲ್ಲ. ಸೇನೆಯ ಮೇಲೆ ಆಕ್ರಮಣ ಮಾಡಬೇಕಾಗಿ ಬಂದರೂ ಹಿಂಜರಿಯುವುದಿಲ್ಲ. ನಮ್ಮಲ್ಲಿಯೂ ಅಷ್ಟೇ ಸ್ವಾತಂತ್ರ್ಯ ದೊರಕಿದ 75 ವರ್ಷಗಳಿಂದ ಪ್ರಜೆಗಳ ಮೇಲೆ ಚಲಾಯಿಸಿದಷ್ಟು ಗುಂಡನ್ನು ಗಡಿಯ ಯುದ್ಧಗಳಲ್ಲೂ ಬಳಸಿರೋಲ್ಲ.

31181110

ಭಾವನೆಗಳಿಗೆ ಪ್ರಣಾಮ : ಈ ಕೊರೋನಾ ಮಹಾಮಾರಿಯ ಕಾಟದಿಂದ ಇದೀಗ ಆಗಿರುವ ಲಾಭವೆಂದರೆ ನರ್ಸ್‌ ವೃತ್ತಿಗೆ  ದೊರಕಿರುವ ದೊಡ್ಡ ಗೌರವಾದರ! ತಮ್ಮ ಆರೋಗ್ಯವನ್ನೇ ಪಣಕ್ಕೊಡ್ಡಿ ಅವರು ಕೊರೋನಾ ಪೀಡಿತರ ಸೇವೆಗೆ ಮುಂದಾಗಿದ್ದಾರೆ, ತಮ್ಮ ಎಷ್ಟೋ ಸಹೋದ್ಯೋಗಿಗಳು ಕೊರೋನಾಗೆ ಬಲಿಯಾಗಿದ್ದನ್ನು ಕಂಡರೂ ಸಹ! ಇದರಿಂದ ತೀರಿಕೊಂಡವರ ಬಂಧುಬಾಂಧವರಿಗೆ ಎಲ್ಲರಿಗಿಂತ ಹೆಚ್ಚು ಸಾಂತ್ವನ ಹೇಳಿದರು ಎಂದರೆ ಈ ನರ್ಸುಗಳು. ಮೆಡಿಕಲ್ ಪ್ರೊಫೆಶನಲ್‌ನಲ್ಲಿ ಇದುವರೆಗೂ ಕೇವಲ ಎಸ್‌ಎಸ್‌ ಎಂದು ತಲೆಯಾಡಿಸುತ್ತಿದ್ದರು, ಅವರುಗಳೇ ಇಂದು ಎಷ್ಟೋ ರೋಗಿ, ಅವರ ಕುಟುಂಬಗಳ ಜೀವನಾಡಿ ಆಗಿದ್ದಾರೆ. ಎಷ್ಟೋ ಭವ್ಯ ಜಾಗಗಳಲ್ಲಿ ಇವರುಗಳ ಸ್ವಾಗತಕ್ಕೆ ಜನ ಕಾದಿರುವಂತಾಗಿದೆ. ಮುಂದಿನ ಪೀಳಿಗೆ ಈ ಉನ್ನತ ವೃತ್ತಿಗಿಳಿಯಲು ತಾವಾಗಿಯೇ ಧಾವಿಸುತ್ತಾರೆ ಎಂದು ನಂಬೋಣ.

8-Ways-To-Promote-Your-Dance-Studio-Feature-Image-1024x700

ಗುರುತನ್ನು ಅಡಗಿಸುವುದು ಕಷ್ಟ : ಸ್ಯಾನ್‌ ಫ್ರಾನ್ಸಿಸ್ಕೋ ಏರ್‌ ಪೋರ್ಟ್ನಲ್ಲಿ ಬಯೋಮೆಟ್ರಿಕ್‌ ಫೇಸ್‌ ರೆಕಾಗ್ನಿಶನ್‌ ಸಿಸ್ಟಂ ಅಳವಡಿಸಲಾಗಿದೆ, ಈಗ ಅಲ್ಲಿ ಬಗೆಬಗೆಯ ಐಡಿ ಹಿಡಿದು ಎಡತಾಕುವ ಅಗತ್ಯವಿಲ್ಲ. ಅಲ್ಲಿಗೆ ನೀವು ಬಂದ ತಕ್ಷಣವೇ ಆ ಏರ್‌ಪೋರ್ಟ್‌ ನಿಮ್ಮ ಇಡೀ ಜಾತಕ ಗ್ರಹಿಸಬಲ್ಲದು. ನಿಮ್ಮ ಪ್ರೈವೆಸಿ ತುಸು ಹೋಗಿದ್ದರೂ ಅನುಕೂಲಗಳು ಹೆಚ್ಚಿವೆ. ಈಗ ನಿಮ್ಮ ಡೇಟಾ ವ್ಯಾಲ್ಯೂ ಹೆಚ್ಚುತ್ತಾ ಹೋಗುತ್ತದೆ, ಏಕೆಂದರೆ ವಿಶ್ವಾದ್ಯಂತದ ಪ್ರತಿ ಮೂಲೆಯಲ್ಲೂ ನಿಮ್ಮ ಐಡೆಂಟಿಟಿ ಸಿಕ್ಕಿಬಿಡುತ್ತದೆ, ನೀವು ಸಸ್ಯಾಹಾರಿ ಆಗಿದ್ದರೆ, ಹೋಟೆಲ್‌‌ಗಳು ನಿಮಗೆ ಅಂಥದೇ ಮೆನು ಪ್ರಸ್ತುತಪಡಿಸುವವರೆಗೂ ಇದು ಹಬ್ಬಿದೆ! ಈಗ ಅಗತ್ಯ ಇರುವುದು ಅಂದ್ರೆ, ನಿಮ್ಮ ಪಕ್ಕದ ಸೀಟ್‌ನವರು ಯುವಜನತೆ ಆಗಿದ್ದು, ಉತ್ತಮ ಸ್ನೇಹ, ಒಂದು ರೌಂಡ್‌ ಕಾಫಿಗೆ ಹೊರಡುವಂಥರಾಗಿರಬೇಕು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ