ಭಾರತ ಸಹಿತ ಇಡೀ ಜಗತ್ತಿಗೆ 2020 ಅತ್ಯಂತ ಭಯಾನಕ ವರ್ಷವಾಗಿ ಪರಿಣಮಿಸಿದೆ. ಅರ್ಥ ವ್ಯವಸ್ಥೆಗಳು ಅಲ್ಲೋಲ ಕಲ್ಲೋಲಗೊಂಡಿವೆ. ಕೊರೋನಾ ವೈರಸ್‌ನ ಹಾವಳಿಯಿಂದ ಸಾವಿನ ಅಂಕಿಅಂಶಗಳು ಹೆಚ್ಚುತ್ತಲೇ ಹೊರಟಿವೆ. ಅದರ ಜೊತೆ ಜೊತೆಗೆ ತಮ್ಮವರ ಬಗೆಗಿನ ಚಿಂತೆ ಕೂಡ ವ್ಯಾಪಕವಾಗುತ್ತಾ ಸಾಗಿದೆ. ಕೊರೋನಾ ಹಾವಳಿಯು ಸಮಾಜದಲ್ಲಿ ವಿಜ್ಞಾನ ಹಾಗೂ ಸಂಶೋಧನೆಯ ಮಹತ್ವವನ್ನು ಸಾಬೀತುಪಡಿಸಿದೆ. ವಿಜ್ಞಾನ ನಮಗೆ ಈ ರೋಗದಿಂದ ಹೊರಬರಲು ಎಗ್ಸಿಟ್‌ ಪ್ಲಾನ್ ತಿಳಿಸಿಕೊಡುತ್ತದೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಅದಕ್ಕಾಗಿ ಲಸಿಕೆ ತಯಾರಿಸಲು ಸಿದ್ಧತೆಗಳು ಶುರುವಾಗಿವೆ. ಅದಕ್ಕೂ ಮುಂಚೆ ವಿಜ್ಞಾನಿಗಳು ಮತ್ತು ಸಂಶೋಧಕರು ಈ ವೈರಸ್‌ ಎಲ್ಲಿಂದ ಬಂತು, ಅದರ ಪಸರಿಸುವಿಕೆ ಹೇಗೆ ಆಗುತ್ತಿದೆ, ಯಾವ ತೆರನಾದ ಚಿಕಿತ್ಸೆ ಅದಕ್ಕೆ ಪರಿಣಾಮಕಾರಿ ಆಗಿರುತ್ತದೆ ಎಂಬುದನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಭೂಕಂಪ, ಪರಿಸರ ವಿಕೋಪ ಏನೇ ಆಗಿರಬಹುದು ಅಥವಾ ಬೇರೆ ಯಾವುದೇ ತೆರನಾದ ಸಂಕಟದ ಸಂದರ್ಭಗಳಲ್ಲಿ ಮನುಷ್ಯನ ನೆರವಿಗೆ ಬರುವುದು ವಿಜ್ಞಾನವೇ. ಇಡೀ ಜಗತ್ತು ವಿಜ್ಞಾನದ ದಾರಿಯಲ್ಲಿ ಸಾಗುತ್ತದೆ. ಆದರೆ ಬಹಳಷ್ಟು ಭಾರತೀಯರು ಇಂತಹ ಸಂಕಷ್ಟದ ಸಮಯದಲ್ಲೂ ಮೂಢನಂಬಿಕೆಯ ದಾರಿಯನ್ನೇ ಹಿಡಿಯುತ್ತಾರೆ. ಧಾರ್ಮಿಕ ರೀತಿ ರಿವಾಜುಗಳು, ಅನುಷ್ಠಾನಗಳು, ವ್ರತ ಉಪವಾಸಗಳ ಮುಖಾಂತರ ಸಂಕಷ್ಟಗಳನ್ನು ದೂರಗೊಳಿಸುವ ಉಪಾಯ ಕಂಡುಕೊಳ್ಳುತ್ತಾರೆ.

`ವರ್ಲ್ಡ್ ಎಕನಾಮಿಕ್ಸ್ ಪೇರಮ್' 2008ರಲ್ಲಿ `ಯಂಗ್‌ ಸೈಂಟಿಸ್ಟ್ ಕಮ್ಯುನಿಟಿ' ಆರಂಭಿಸಿತ್ತು. ಈಗ 2020ರಲ್ಲಿ ಜಗತ್ತಿನ 14 ದೇಶಗಳ ಒಟ್ಟು 25 ಯುವ ವಿಜ್ಞಾನಿಗಳು ಹೊರಹೊಮ್ಮಿದ್ದಾರೆ. ಅವರು ಸಂಶೋಧನೆಗಳ ಮುಖಾಂತರ ವಿಶ್ವದ ಸನ್ನಿವೇಶವನ್ನೇ ಬದಲಿಸುವ ಕೆಲಸ ಮಾಡಲಿದ್ದಾರೆ. ಒಂದು ವಿಷಯ ಕೇಳಿ ನಿಮಗೆ ಅಚ್ಚರಿಯಾಗಬಹುದು. ಅದೇನೆಂದರೆ, ಈ 25 ವರ್ಷದ ಯುವ ವಿಜ್ಞಾನಿಗಳಲ್ಲಿ 14 ಜನ ಮಹಿಳೆಯರಿದ್ದಾರೆ. ಆದರೆ ಭಾರತೀಯ ಮಹಿಳೆಯರು ಇದರಲ್ಲಿ ಬಹಳ ಹಿಂದೆ ಇದ್ದಾರೆ.

ಮೂಢನಂಬಿಕೆ ಮತ್ತು ಮಹಿಳೆಯರು

ಭಾರತೀಯ ಮಹಿಳೆಯರ ಒಂದು ವಿಷಯ ಜಗಜ್ಜಾಹೀರವಾಗಿದೆ. ಅದೇನೆಂದರೆ, ಅವರು ಬಹಳ ಹಿಂದಿನಿಂದಲೇ ಧರ್ಮ, ಕಂದಾಚಾರ ಹಾಗೂ ಮೂಢನಂಬಿಕೆಗಳ ಸಂಕೋಲೆಯಲ್ಲಿ ಬಂಧಿಸಲ್ಪಟ್ಟಿದ್ದಾರೆ. ಅವರು ಮುಂದಿಡುತ್ತಿರುವ ಹೆಜ್ಜೆಗಳನ್ನು ಧರ್ಮದ ಅಡೆತಡೆಗಳು ಅಡ್ಡಿಪಡಿಸುತ್ತಿವೆ.

ಕ್ರಿಮಿನಲ್ ಸೈಕಾಜಿಸ್ಟ್ ಹಾಗೂ ಸೋಶಿಯಲ್ ವರ್ಕರ್‌ ಅನುಜಾ ಹೀಗೆ ಹೇಳುತ್ತಾರೆ, ``ಈ ಅಡ್ಡಿಗಳಿಂದಾಗಿ ಮಹಿಳೆಯರು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿದ್ದಾರೆಯೇ ಎಂಬ ಬಗ್ಗೆ ಯೋಚಿಸಬೇಕು. ತಮ್ಮನ್ನು ತಾವು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಹಾನಿ ಅನುಭವಿಸುವಂತೆ ಮಾಡಿಕೊಳ್ಳುತ್ತಿದ್ದಾರೆಯೇ? ಮೂಢನಂಬಿಕೆಯ ಕಾರಣದಿಂದಾಗಿಯೇ ರಾಮ ರಹೀಮ ಚಿನ್ಮಯಾನಂದ ಹಾಗೂ ಆಸಾರಾಮ್ ರಂತಹ ಅನೇಕರು ಮಹಿಳೆಯರ ವಿಶ್ವಾಸದ ದುರ್ಲಾಭ ಪಡೆದುಕೊಳ್ಳುವಂತಾಯಿತು. ಇದರಿಂದಾಗಿ ಅವರು ತಮ್ಮ ಬ್ಯಾಂಕ್‌ ಬ್ಯಾಲೆನ್ಸ್ನ್ನು ಹೆಚ್ಚಿಸಿಕೊಂಡರು. ಮಹಿಳೆಯರ ಜೀವನದೊಂದಿಗೆ ಆಟ ಆಡಿದರು.

ಭಾರತೀಯ ಮಹಿಳೆಯರಲ್ಲಿ ಹೆಚ್ಚಿನವರು ಓದುಬರಹ ಬಲ್ಲವರಾಗಿಲ್ಲ. ಹೀಗಾಗಿ ಅವರ ಮೆದುಳು ಅಷ್ಟು ಮುಕ್ತವಾಗಿರುವುದಿಲ್ಲ ಹಾಗೂ ಜ್ಞಾನದ ಪರಿಪೂರ್ಣ ಉಪಯೋಗ ಮಾಡಿಕೊಳ್ಳುವುದಿಲ್ಲ. ಮನೆಯಲ್ಲಿ ಅತ್ತೆ ಮಾವ, ಅಕ್ಕಪಕ್ಕದವರು ಆಕೆಗೆ ಮೂಢನಂಬಿಕೆ ಒಪ್ಪಿಕೊಳ್ಳಲು ಒತ್ತಡ ಹೇರುತ್ತಾರೆ. ಆಕೆಗೆ ಅವರನ್ನು ಎದುರಿಸಿ ಮಾತನಾಡುವಷ್ಟು ಧೈರ್ಯ ಇರುವುದಿಲ್ಲ. ಹಾಗಾಗಿ ಎಲ್ಲರ ಮಾತನ್ನು ಒಪ್ಪಿ ಮುನ್ನಡೆಯಲೇಬೇಕಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ