ವರ್ಕ್‌ ಫ್ರಮ್ ಹೋಮ್ ಮಹಿಳೆಯರಿಗಾಗಿ ಕೆಲಸದ ಅವಕಾಶ ಪಡೆದುಕೊಳ್ಳಲು ಹೊಸ ದಾರಿಯನ್ನು ಮುಕ್ತಗೊಳಿಸಿದೆ. ಅನಾದಿ ಕಾಲದಿಂದ ಮಹಿಳೆ ಪುರುಷನಿಗೆ ಸರಿಸಮಾನವಾಗಿ ಆಹಾರ ಹುಡುಕುವುದು, ಪ್ರಾಣಿಗಳನ್ನು ಜೊತೆ ಜೊತೆಗೆ ಬೇಟೆಯಾಡುವುದು ಮಾಡುತ್ತಿದ್ದಳು. `ಹಂಟರ್‌ ಗ್ಯಾದರರ್‌’ ಎಂದು ಕರೆಯಲ್ಪಡುವ ಅವರು ಆಧುನಿಕ ನಾಗರಿಕತೆಗೂ ಮುಂಚಿನ ಕಾಲದವರು. ಆದರೆ ಸರಿಸಮಾನ ಆಗಿದ್ದರು.

ಕೃಷಿಯಲ್ಲಿ ಹೊಸ ಹೊಸ ಆವಿಷ್ಕಾರಗಳು ಬಂದಿ, ಗೋಧಿ ಸಹಿತ ಇತರೆ ಬೆಳೆಗಳನ್ನು ಬೆಳೆಯಲು ಕಲಿತರೊ, ಆಗ ಧರ್ಮ ಉದಯವಾಯಿತು ಮತ್ತು ಮಕ್ಕಳನ್ನು ಪಾಲನೆ ಪೋಷಣೆ ಮಾಡಲು ಮಹಿಳೆಯನ್ನು ಮನೆಯಲ್ಲಿ ಬಿಡುವ ಪದ್ಧತಿ ಶುರುವಾಯಿತು.

ಹೆಚ್ಚೆಚ್ಚು ಮಕ್ಕಳನ್ನು ಹೆರುವುದು ಧರ್ಮಗಳ ಉದ್ದೇಶವಾಯಿತು. ಮಹಿಳೆಯ ಏಕೈಕ ಕೆಲಸವೆಂದರೆ ಅದು ಮಕ್ಕಳನ್ನು ಹೆರುವುದು ಎಂದಾಯಿತು. ಅವರಿಗೆ ಆಹಾರ ತಯಾರಿಕೆ, ಪಾಲನೆ ಪೋಷಣೆ ಮುಂತಾದ. ಉಳಿದ ಜವಾಬ್ದಾರಿಗಳು ಪುರುಷನ ಹೆಗಲಿಗೆ ಬಿದ್ದವು. ಧರ್ಮ ಇದರಲ್ಲಿ ಹೆಚ್ಚು ಆಸಕ್ತಿಯಿಂದ ಪಾಲ್ಗೊಂಡಿತು.

ಮಹಿಳೆಯೊಬ್ಬಳು ಸದಾ ತನ್ನ ಸುತ್ತ ಗಿರಕಿ ಹೊಡೆಯುವುದನ್ನು ಯಾವ ಪುರುಷ ಇಷ್ಟಪಡೋಲ್ಲ? ತನಗಾಗಿ ಆಹಾರ ಸಿದ್ಧಪಡಿಸುವುದು, ಮನೆಯನ್ನು ಅಚ್ಚುಕಟ್ಟಾಗಿ ಇಡುವುದು, ತನ್ನ ಆಸೆ ಅಭಿಲಾಷೆಗಳನ್ನು ಈಡೇರಿಸುವುದು ಬಹಳ ಇಷ್ಟವಾಗುತ್ತದೆ. ಮಹಿಳೆಯರಿಗೆ ಎಂತಹ ಕೆಲಸಗಳನ್ನು ನೀಡಲಾಯಿತೆಂದರೆ ಅಂತಹ ಕೆಲಸಗಳನ್ನು ಮಾಡಿ ಆಕೆಯ ಕೆಲಸ ಕಡಿಮೆ ದರ್ಜೆಯದ್ದು ಎಂದು ಬಿಂಬಿಸಲಾಯಿತು.

ಮದುವೆ ಮಾಡಿಕೊಳ್ಳುವುದರ ಅರ್ಥ ಆ ಮಹಿಳೆ ನನ್ನವಳು. ಇನ್ನು ಮುಂದೆ ಅವಳು ಬೇರೆಯವಳಲ್ಲ ಎಂದು ಪುರುಷರಿಗೆ ತೋರಿಸಿಕೊಳ್ಳುವುದಾಗಿರುತ್ತದೆ.

ನಮ್ಮ ಇತಿಹಾಸ ಗುಲಾಮ ಹುಡುಗಿಯರು ಹಾಗೂ ವೇಶ್ಯೆಯರ ಅನೇಕ ಉದಾಹರಣೆಗಳಿಂದ ತುಂಬಿಹೋಗಿದೆ. ಎಷ್ಟು ಹೆಚ್ಚು ಧಾರ್ಮಿಕ ನಾಗರಿಕತೆಯೊ, ಅವರ ಮೇಲೆ ಅಷ್ಟು ಹೆಚ್ಚು ದೌರ್ಜನ್ಯ. 18-19ನೇ ಶತಮಾನದಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿ ಮಹಿಳೆಯರ ಸಮಾನತೆಯ ಬಗ್ಗೆ ಹೇಳಲಾಗಿದೆ. ಯುದ್ಧ ನಡೆಯುತ್ತಿರುವಾಗ ಅಗತ್ಯ ಸಲಕರಣೆಗಳ ತಯಾರಿಕೆಗಾಗಿ ಮಹಿಳೆಯರಿಗೆ ಹೊರಗೆ ಬರುವ ಅವಕಾಶ ದೊರಕಿತು. ಯಾವ ದೇಶ, ಸಮಾಜ ಎಷ್ಟು ಮತಾಂಧವಾಗುತ್ತದೊ, ಅಷ್ಟೇ ಬಡತನಕ್ಕೂ ಸಿಲುಕುತ್ತದೆ. ಏಕೆಂದರೆ ಅಲ್ಲಿ ಮಹಿಳೆಯರ ಶ್ರಮವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದಿಲ್ಲ.

ವರ್ಕ್‌ ಫ್ರಮ್ ಹೋಮ್ ಗಿಂತ ಮೊದಲು ಲಕ್ಷಾಂತರ ಮಹಿಳೆಯರು ತಾವು ಮಕ್ಕಳ ನಿರ್ವಹಣೆ ಮಾಡಬೇಕಿದೆ ಎಂಬ ಕಾರಣಕ್ಕೆ ಕೆಲಸಕ್ಕೆ ರಾಜೀನಾಮೆ ಕೊಡಬೇಕಾಗಿ ಬರುತ್ತಿತ್ತು. ಹಾಗೆ ನೋಡಿದರೆ, ಅದು ಪುರುಷ ಮಹಿಳೆಯರಿಬ್ಬರ ಸಂಯುಕ್ತ ಜವಾಬ್ದಾರಿ. ನಾನು ಮನೆ ಕೊಟ್ಟಿದ್ದೇನೆ, ಹಣ ಕೊಡುತ್ತಿದ್ದೇನೆ, ಸುರಕ್ಷತೆ ಕೊಡುತ್ತಿದ್ದೇನೆ ಹೀಗಾಗಿ ನನ್ನ ಮಟ್ಟ ಉನ್ನತವಾಗಿದೆ ಎಂದು ಪುರುಷರು ಹೇಳಿಕೊಳ್ಳುತ್ತಾರೆ.

ವರ್ಕ್‌ ಫ್ರಮ್ ಹೋಮ್ ಮಹಿಳೆಯರಿಗೆ ಮನೆಯಲ್ಲಿದ್ದುಕೊಂಡು ಪುರುಷರಿಂದ ಸ್ವತಂತ್ರವಾಗಿದ್ದುಕೊಂಡು ಹಣ ಗಳಿಸುವ ಸ್ವಾತಂತ್ರ್ಯ ಪಡೆದುಕೊಳ್ಳುವುದಾಗಿರುತ್ತದೆ. ಅವರು ಇಬ್ಬಗೆಯ ಜಾವಾಬ್ದಾರಿ ನಿಭಾಯಿಸುತ್ತಾರೆ. ಈ ದೃಷ್ಟಿಯಿಂದ ಪುರುಷರಿಗಿಂತ ಅತ್ಯುತ್ತಮ ಎಂದು ಸಾಬೀತುಪಡಿಸುತ್ತಾರೆ.

ಮಹಿಳೆಯರಿಗೆ ಈಗ ತಮ್ಮದೇ ಮನೆಯನ್ನು ರೂಪಿಸುವ ಸ್ವಾತಂತ್ರ್ಯ ದೊರಕಿದೆ. ಹಾಗೊಮ್ಮೆ ಇಂಡಸ್ಟ್ರಿಯಲ್ ಪ್ರಾಡಕ್ಟ್ ಗಳನ್ನು ಕಂಪ್ಯೂಟರ್‌ನಲ್ಲಿ ತಯಾರಿಸುವ ಚರ್ಚೆ ನಡೆಯುತ್ತಿದ್ದರೆ, ಇತ್ತ ಮಹಿಳೆ ಅಡುಗೆ ಮನೆಯಲ್ಲಿ ಕಂಡುಬಂದರೆ ಅಚ್ಚರಿಯಿಲ್ಲ. ಇದು ಯಾವ ರೀತಿ ಎಂದರೆ ಜಿಮ್ ನಲ್ಲಿ ವ್ಯಾಯಾಮ ಮಾಡುತ್ತ ಪುರುಷ ಜೂಮ್ ಮೀಟಿಂಗ್‌ನಲ್ಲಿ ಪಾಲ್ಗೊಂಡಂತೆ.

ವರ್ಕ್‌ ಫ್ರಮ್ ಹೋಮ್ ಅವಕಾಶವನ್ನು ಕೊರೋನಾ ವೈರಸ್‌ ನೀಡಿದೆ. ಹೀಗಾಗಿ ಧರ್ಮ ಮಾಡಿದ ನಿಯಮಗಳನ್ನು ಅದು ದುರ್ಬಲಗೊಳಿಸಿದೆ. ಧರ್ಮದ ನೂರೆಂಟು ನಂಬಿಕೆಗಳ ನಡುವೆ ಜಗತ್ತಿನ ಕಣ್ಣು ಕೊರೋನಾವನ್ನು ಹೇಗೆ ತಡೆಗಟ್ಟುವುದು ಎನ್ನುವುದರ ಮೇಲೆ ನಿಂತಿದೆ.

ಈಗ ಮನರಂಜನೆ ಹಾಗೂ ಕ್ರೀಡೆಯಲ್ಲ, ಫಾರ್ಮಾ ಉದ್ಯಮ ಹೊಳೆಯುತ್ತದೆ. ಅಲ್ಲಿ ಮಹಿಳೆ ಹಾಗೂ ಪುರುಷರು ಹೊತ್ತು ಗೊತ್ತಿಲ್ಲದೆ ದುಡಿಯುತ್ತಿದ್ದಾರೆ. ಅವರು ಲಕ್ಷ ಲಕ್ಷ ಜನರನ್ನು ಕಾಪಾಡಿದ್ದಲ್ಲದೆ, ಮಹಿಳೆಯರಿಗೆ ಮನೆ ಹಾಗೂ ಆಫೀಸ್‌ ಈ ಎರಡರ ಸಮಾನ ಅವಕಾಶ ಕಲ್ಪಿಸಿವೆ.

ವರ್ಕ್‌ ಫ್ರಮ್ ಹೋಂನಲ್ಲಿ ಮಹಿಳೆಗೆ ಯಾವುದೇ ಲೈಂಗಿಕ ಶೋಷಣೆಯ ಭೀತಿಯಿಲ್ಲ. ಇಲ್ಲಿ ಎಲ್ಲರೂ ಸರಿಮಾನರು. ಆಫೀಸ್‌ಕೆಲಸಕ್ಕಾಗಿ ಮಹಿಳೆ ತನ್ನದೇ ಆದ ಕಂಪ್ಯೂಟರ್‌, ಟೇಬಲ್, ಕುರ್ಚಿ ಇಟ್ಟುಕೊಳ್ಳಬೇಕಾಗುತ್ತದೆ. ಈಗ ಅವಳಿಗೆ ಮನೆಯೇ ಆಫೀಸು ಫ್ಯಾಕ್ಟರಿ ಆಗಿಬಿಟ್ಟಿದೆ. ಮನೆಯಲ್ಲಿದ್ದುಕೊಂಡು ಆಕೆ ತನಗಾಗಿ ಸಮಾನ ಹಕ್ಕು ಕೇಳಬೇಕು. ಈ ಅವಕಾಶವನ್ನು ಬಿಟ್ಟುಕೊಡಬಾರದು.

ಮಹಿಳೆಯರನ್ನು ಮುಂದಿಟ್ಟುಕೊಂಡು ಅನೇಕ ಯುದ್ಧಗಳು ನಡೆದಿವೆ ಎನ್ನುವುದಕ್ಕೆ ಇತಿಹಾಸ ಸಾಕ್ಷಿಯಿದೆ. ಆ ಬಳಿಕ ಪುನಃ ಅವರನ್ನು ಮೂಲ ಸ್ಥಳದಲ್ಲಿ ಮೂಲೆಗುಂಪು ಮಾಡಲಾಯಿತು.

ಧರ್ಮದ ಶಕ್ತಿ ಹಾಗೂ ಅದರ ಗುರಿಯನ್ನು ಹಗುರವಾಗಿ ಭಾವಿಸಬಾರದು. ಜಗತ್ತಿನಲ್ಲಿ ಪ್ರತಿ ಹಳ್ಳಿ ಹಳ್ಳಿಯಲ್ಲಿ ಧರ್ಮದ ಸೈನಿಕರು ಪಸರಿಸಿದ್ದಾರೆ. ಅವರೆಲ್ಲರ ಭಾಷೆ ಸಂಕೇತ ಒಂದೇ ಆಗಿದೆ. ಅವರಿಗೆ ತಿಳಿವಳಿಕೆ ಹೇಳುವವರು ಯಾರೂ ಇಲ್ಲ. ಅವರು ತಮ್ಮ ಭಕ್ಷಕರ ಪಾದ ಪೂಜೆ ಮಾಡುತ್ತಾರೆ. ಕೊರೋನಾದ ಕೃಪೆಯಿಂದ ಒಂದು ಬಾಗಿಲು ತೆರೆದಿದೆ. ಆ ಬಾಗಿಲಿನಿಂದ ಹೊರಬನ್ನಿ ಮುಕ್ತ ವಾತಾವರಣದಲ್ಲಿ ಉಸಿರಾಡಿಸಿ ಹಾಗೂ ಸಮಾನತೆಯ ದರ್ಜೆ ಪಡೆದುಕೊಳ್ಳಿ.

ಮಹಿಳೆಯರ ದೇಹದ ಮೇಲೆ ಮತ್ತೊಂದು ಹಲ್ಲೆ

work_from_home-2

ಮಹಿಳೆಯನ್ನು ಕಾನೂನಿನ ಮೂಲಕ ಹೇಗೆ ನಿಯಂತ್ರಿಸಲಾಗುತ್ತಿದೆ ಎಂದರೆ, ಧರ್ಮ ನಿಯಂತ್ರಿಸುವ ರೀತಿಯಲ್ಲಿ. ಕ್ರಮೇಣ ಮಹಿಳೆಯರ ಒತ್ತಡದ ಕಾರಣದಿಂದ ಸರ್ಕಾರ ಕಾನೂನನ್ನು ಬದಲಿಸುತ್ತದೆ. ಆದರೆ ಅವು ಅದೆಷ್ಟು ಮಂದಗತಿಯಲ್ಲಿ ಬದಲಾಗುತ್ತದೆಂದರೆ, ತಮ್ಮ ದೇಹದ ಅಧಿಕಾರ ಪಡೆದುಕೊಳ್ಳಲು ಕಾನೂನು ಉಲ್ಲಂಘನೆ ಮಾಡಬೇಕಾಗುತ್ತದೆ. ಅದಕ್ಕಾಗಿ ಅವರು ದುಬಾರಿ ಬೆಲೆ ತೆರಬೇಕಾಗಿ ಬರುತ್ತದೆ. ಅದಕ್ಕೆ ತದ್ವಿರುದ್ಧ ಎಂಬಂತೆ ಹೊಸ ಕಾನೂನುಗಳು ಕೂಡ ರೂಪುಗೊಳ್ಳುತ್ತವೆ.

ಎಂತಹ ಒಂದು ಕಾನೂನು ಸಿದ್ಧವಾಗುತ್ತಿದೆಯೆಂದರೆ, ಅದು ಟೆಸ್ಟ್ ಟ್ಯೂಬ್‌ ಬೇಬಿಯ ವೈದ್ಯಕೀಯ ಪ್ರಕ್ರಿಯೆಯ ನಿಯಂತ್ರಣ ತರಲಿದೆ. `ಅಸಿಸ್ಟೆಡ್‌ ರೀಪ್ರೊಡಕ್ಷನ್‌ ಟೆಕ್ನಾಲಜಿ (ರೆಗ್ಯುಲೇಶನ್‌) ಬಿಲ್‌. ಇದು ಎಂತಹ ಒಂದು ಕಾನೂನೆಂದರೆ, ಅದು ಈಗಷ್ಟೇ ಚಿಗುರಿಕೊಳ್ಳುತ್ತಿರುವ ಐವಿಎಫ್‌, ಇನ್‌ ವಿಟ್ರೊ ಫರ್ಟಿಲೈಜೇಶನ್‌ನ್ನು ಕಾನೂನಿನ ಅಡಕತ್ತರಿಗೆ ಸಿಲುಕಿಸಲಿದೆ.

ಈವರೆಗೆ ಈ ಕ್ಷೇತ್ರ ಸಾಮಾನ್ಯ ಚಿಕಿತ್ಸೆಗೆ ಸಂಬಂಧಪಟ್ಟ ಕಾನೂನಿನಡಿ ಬರುತ್ತಿತ್ತು. ಆದರೆ ಈಗ ವಿಶೇಷ ಕಾನೂನು ತಯಾರಾಗುತ್ತಿದೆ. ಆದರೆ ಈಗ ಯಾವುದೇ ವಿಶೇಷ ಸಮಸ್ಯೆ ಎದುರಾಗಿಲ್ಲ.

ಐವಿಎಫ್‌ನಿಂದ ನೂರಾರು ಬಗೆಯ ಸಮಸ್ಯೆಗಳನ್ನು ನಿವಾರಿಸಲಾಗುತ್ತಿದೆ.

ಒಂದು ರೀತಿಯಲ್ಲಿ ಯುವ ಜೋಡಿಗಳಿಗೆ ಈ ಐವಿಎಫ್‌ ಸೆಂಟರ್‌ಗಳೇ ಸೆಕ್ಸ್ ಕ್ಲಿನಿಕ್‌ ಆಗಿಬಿಟ್ಟಿವೆ. ಮಕ್ಕಳಾಗದೇ ಇರುವ ಸಮಸ್ಯೆಯ ಕಾರಣದಿಂದ ಶೀಘ್ರಸ್ಖಲನ, ನಿಮಿರುವಿಕೆ ಸಮಸ್ಯೆ, ವೀರ್ಯಾಣುಗಳ ಕೊರತೆ, ಯೋನಿ ಸೋಂಕು ಈ ಸಮಸ್ಯೆಗಳಿಗೆ ಬೇರೆ ವೈದ್ಯರು ಸರಳ ಚಿಕಿತ್ಸೆ ನೀಡಬಹುದು. ಆದರೆ ಏಕಾಂಗಿ ಪುರುಷ ಅಥವಾ ದಂಪತಿಗಳು ಅಂತಹ ವೈದ್ಯರ ಬಳಿ ಹೋಗಲು ಧೈರ್ಯ ತೋರಿಸುವುದಿಲ್ಲ ಐವಿಎಫ್‌ ಕೇಂದ್ರಗಳು ಮಕ್ಕಳಾಗದೇ ಇರುವ ದಂಪತಿಗಳಿಗಿವೆ. ಆದರೆ ಆ ನೆಪದಲ್ಲಿ ಎಲ್ಲ ವಿಷಯಗಳು ಪ್ರಸ್ತಾಪವಾಗುತ್ತವೆ.

ಈ ಕಾನೂನಿನ ಬಳಿಕ ಏನಾಗಲಿದೆ? ಎನ್ನುವುದು ಈಗಲೇ ತಿಳಿದಿಲ್ಲ. ಏಕೆಂದರೆ ಸರ್ಕಾರಿ ಕಾನೂನುಗಳು, ಕೃಷಿ ಕಾಯ್ದೆಗಳಂತೆಯೇ ಇರುತ್ತವೆ. ಅವುಗಳ ಮುಖಾಂತರ ಪೂಜಾರಿಗಳಿಗೆ ಇಲ್ಲಿ ಧರ್ಮದ ಗುತ್ತಿಗೆದಾರರಿಗೆ ವ್ಯಾಪಾರವಾಗುತ್ತದೆ. ವೈದ್ಯರ ಮುಖಾಂತರ ನಡೆಸಲ್ಪಡುವ ಐವಿಎಫ್‌ ಕ್ಲಿನಿಕ್‌ಗಳನ್ನು ಮುಗಿಸಿಬಿಟ್ಟು, ಕಾರ್ಪೊರೇಟ್‌ನವರು ನಡೆಸಲ್ಪಡುವ ಪಂಚಾತಾರ ಆಸ್ಪತ್ರೆಗಳಿಗೆ ಸೀಮಿತಗೊಳಿಸುತ್ತಾರೊ ಏನೊ? ಯಾವ ಕಾನೂನು ರೂಪುಗೊಳ್ಳುತ್ತೊ, ಅದರ ಜೊತೆ ಕೆಲವು ನಿಯಮಗಳು ಕೂಡ ಇರುತ್ತವೆ. ಅದರಲ್ಲಿ ವಾಸ್ತವ  ಹೊಡೆತ ಅಡಗಿರುತ್ತದೆ. ಆ ಕಾನೂನಿನ ಬಳಿಕ ಪ್ರತಿಯೊಬ್ಬ ಮಹಿಳೆಯ ಮಾಹಿತಿ ಸರ್ಕಾರಕ್ಕೆ ಲಭಿಸಬಹುದು. ಯಾವ ಸಮಾಜ ಬಂಜೆ ಮಹಿಳೆಯನ್ನು ಕೀಳು ದೃಷ್ಟಿಯಿಂದ ನೋಡುತ್ತಿತ್ತೊ, ಐವಿಎಫ್‌ ಸೆಂಟರಿಗೆ ಹೋಗುವವರನ್ನು ತುಚ್ಛವಾಗಿ ಕಾಣಲಾಗುತ್ತಿತ್ತು. ಅಂತಹದರ ನಡುವೆ ಈ ಕಾನೂನು ಮಾಡುವುದಾದರೂ ಏನು? ಅದರ ಅಂತ್ಯ ಆವಳ ಕಂಡುಹಿಡಿಯುವುದು ಕಷ್ಟ. ಸರೋಗೆಸಿ, ಗರ್ಭಪಾತ, ಅಂಗಾಂಗ ಕಸಿ ಮುಂತಾದವುಗಳ ಬಗ್ಗೆ ಕಾನೂನು ರೂಪಿಸಿ ಸರ್ಕಾರ ವೈದ್ಯರ  ಕೈಗಳನ್ನು ಕಟ್ಟಿ ಹಾಕುತ್ತಿದೆ. ಈ ಸರ್ಕಾರ ಹೇಳುವುದೇನೆಂದರೆ , ಪ್ರತಿಯೊಂದು ರೋಗಕ್ಕೆ ಮದ್ದು ದೇಗುಲದಲ್ಲಿದೆ ಅಥವಾ ಹೋಮ ಹವನದಲ್ಲಿದೆ ಅಥವಾ ಸರ್ಕಾರಿ ಸೇಥ್‌ ವೈದ್ಯ ರಾಮದೇವ್ ‌ಬಳಿ. ಇವುಗಳ ಹೊರತಾಗಿ ವೈದ್ಯರನ್ನು ಸರ್ಕಾರಿ ಗುಲಾಮರಂತೆ ಕಾಣಬಹುದು. ಅವರು ಜನರ ಸಮಸ್ಯೆಗಳನ್ನು ಇತಿಮಿತಿಯಲ್ಲಿ ಬಗೆಹರಿಸಬಹುದು.

ಈ ರೀತಿಯಲ್ಲಿ ಕಾನೂನನ್ನು ವಿರೋಧಿಸಲಾಗುವುದಿಲ್ಲ. ಏಕೆಂದರೆ ಸರ್ಕಾರ ಹಾಗೂ ಅದರ ಕಪಿಮುಷ್ಟಿ ವೈದ್ಯಕೀಯ ವೃತ್ತಿಯ ಮೇಲೂ ಇದೆ. ವೈದ್ಯಕೀಯ ಕ್ಷೇತ್ರದಲ್ಲಿ ಈಗ ಎಷ್ಟೊಂದು ಹಣ ಬರುತ್ತಿದೆಯೆಂದರೆ, ಅಧಿಕಾರಿಗಳು, ಕಾರ್ಪೊರೇಟ್‌ ಹಾಗೂ ಕಂದಾಚಾರಿಗಳು ಎಲ್ಲರೂ ಸೇರಿದ್ದಾರೆ. ಪ್ರತಿಯೊಂದು ದೇವಾಲಯ ಕೂಡ ಅಲೊಪತಿ ಆಸ್ಪತ್ರೆಯನ್ನು ತೆರೆಯುತ್ತಿದ್ದು, ಅಲ್ಲಿ ಪೂಜೆ ಪುನಸ್ಕಾರಗಳ ಜೊತೆ ಪಾಶ್ಚಿಮಾತ್ಯ ದೇಶಗಳ ಔಷಧಿ ಹಾಗೂ ಸಲಕರಣೆಗಳು ಕೂಡ ಇವೆ.

ಎಆರ್‌ಟಿ ಕಾನೂನು ಮಹಿಳೆಯರ ಮೇಲೆ ಮತ್ತೊಂದು ಹಲ್ಲೆಯಾಗಿದೆ. ಆದರೆ ಮೂಢನಂಬಿಕೆ ಗ್ರಸ್ತರಾಗಿರುವ ಮಹಿಳೆಯರಿಗೆ ಈ ಬಗ್ಗೆ ಯೋಚಿಸಲು ಸಮಯವಾದರೂ ಎಲ್ಲಿದೆ?

ಇದಂತೂ ಸಮಾಜದ ಹಠಮಾರಿತನ

ಒಂದೆಡೆ ಮದುವೆ ಖರ್ಚು, ಬಂಧನ, ಮಕ್ಕಳು, ಗಂಡ, ಅತ್ತೆಮಾವನ ದೌರ್ಜನ್ಯ, ಸ್ವಾತಂತ್ರ್ಯಕ್ಕೆ ಕತ್ತರಿ, ಮತ್ತೊಂದೆಡೆ ಏಕಾಂಗಿಯಾಗಿದ್ದರೆ, ಏಕಾಂಗಿತನ ಸಮಾಜದಿಂದ ದೂರವಾಗುವ ಭಯಕ್ಕೆ ಒಂದು ಸರಳ ಉಪಾಯ. ಮಹಿಳೆಯರು ಲೆಸ್ಬಿಯನ್‌ಆಗುತ್ತಿರುವುದು. ಅದರಿಂದ ದೇಹದ ಹಸಿವು ನಿವಾರಣೆಯಾಗುತ್ತದೆ ಹಾಗೂ ಮನಸ್ಸು ಶಾಂತವಾಗುತ್ತದೆ. ಜೊತೆಗೆ ಖಾಯಂ ಸಂಗಾತಿ ದೊರಕುತ್ತಾಳೆ. ಸ್ತ್ರೀ-ಪುರುಷರ ನಡುವಿನ ಕಾನೂನುಬದ್ಧ ಅಥವಾ ಧಾರ್ಮಿಕ ಮದುವೆ ಪರಸ್ಪರರನ್ನು ಸಂಬಂಧ ಮುರಿದು ಹಾಕಲು ತಡೆಯಲು ಆಗುವುದಿಲ್ಲಿ, ಲೆಸ್ಬಿಯನ್‌ಗಳ ಸಂಬಂಧಗಳು ಕೂಡ ಯಾವಾಗಲಾದರೊಮ್ಮೆ ತುಂಡರಿಸಬಹುದು. ಆದರೆ ಅವರಿಗೆ ಮಕ್ಕಳಿರುವುದಿಲ್ಲ. ಹೀಗಾಗಿ ಏನು ತಾನೇ ವ್ಯತ್ಯಾಸ ಆಗುತ್ತದೆ?

ಪ್ರತಿಯೊಬ್ಬ ಹುಡುಗ ಹುಡುಗಿ ಮದುವೆಯಾಗಬೇಕು, ಮಕ್ಕಳಾಗಬೇಕು, ಸಮಾಜ ಮುಂದುವರಿಯಬೇಕು ಎಂದು ಹೇಳುವ ಸಮಾಜದ್ದು ಒಂದು ರೀತಿಯ ಹಠಮಾರಿ ಧೋರಣೆ. ಬಹಳಷ್ಟು ಜನ ಮಾಡುವುದು ಅದನ್ನೇ…. ಏಕೆಂದರೆ ಅದರಲ್ಲಿ ಸ್ಥಿರತೆ ಇದೆ, ಸುಖವಿದೆ. ಆದರೆ ಸಲಿಂಗಿಗಳು ಹಾಗೂ ಲೆಸ್ಬಿಯನ್‌ ಸಂಬಂಧವನ್ನು ನಿರಾಕರಿಸುವುದು, ತಿರಸ್ಕಾರದ ದೃಷ್ಟಿಯಿಂದ ನೋಡುವುದು ತಪ್ಪು.

ಇಬ್ಬರು ಯುವತಿಯರ ನಡುವೆ ದೈಹಿಕ ಹಾಗೂ ಮಾನಸಿಕ ಹೊಂದಾಣಿಕೆ ಇದ್ದಾಗ ಮಾತ್ರ ಅವರು ಲೆಸ್ಬಿಯನ್‌ಗಳಾಗುತ್ತಾರೆ ಮದುವೆ ನಂತರ ಕೂಡ ಇದು ಮುಂದುವರಿಯಬಹುದು. ಯಾರೊಬ್ಬರ ಪತ್ನಿ, ಇನ್ನೊಬ್ಬರ ಲೆಸ್ಬಿಯನ್‌ ಆಗಬಹುದು. ಏಕೆಂದರೆ ಆಕೆಗೆ ದೈಹಿಕ ಹಾಗೂ ಮಾನಸಿಕ ಸಂತೃಪ್ತಿ  ಗಂಡನಿಗಿಂತ ಹೆಚ್ಚಾಗಿ ತನ್ನ ಗೆಳತಿಯಿಂದ ದೊರಕುತ್ತಿರಬಹುದು. ಅವರನ್ನು ಕೀಳು ದೃಷ್ಟಿಯಿಂದ ನೋಡುವುದು ಸಮಾಜದ ತಪ್ಪು. ಇದು ಅವರಲ್ಲಿ ಅಪರಾಧ ಪ್ರಜ್ಞೆಯನ್ನು ತುಂಬುತ್ತದೆ.

ಸಲಿಂಗಿಗಳು ಹಾಗೂ ಲೆಸ್ಬಿಯನ್‌ಗಳನ್ನು ಪ್ರಾಣಿ ಸಂಗ್ರಹಾಲಯಗಳ ಪ್ರಾಣಿಗಳು ಎಂಬಂತೆ ಏಕೆ ಭಾವಿಸಲಾಗುತ್ತದೆ ಎಂದರೆ, ಅವರು ಸಮಾಜ ಎಳೆದ ಗೆರಿಗಳ ಒಳಗೆ ನಡೆಯಲು ತಯಾರಿರುವುದಿಲ್ಲ.

ಲೆಸ್ಬಿಯನ್‌ಗಳ ಪರಸ್ಪರ ಸಂಬಂಧದಲ್ಲಿ ವಿವಾದಗಳು ಉಂಟಾಗುವುದಿಲ್ಲ ಎಂದು ಯೋಚಿಸಬೇಡಿ. ಬ್ರೇಕ್‌ ಅಪ್‌ ಆಗುತ್ತದೆ, ಅದರ ನೋವು ಸತಾಯಿಸುತ್ತದೆ. ಅನಾರೋಗ್ಯ ಅಥವಾ ಅಪಘಾತದಲ್ಲಿ ತೀರಿಹೋಗಬಹುದು. ಆಸ್ತಿವಿವಾದ ಉಂಟಾಗಬಹುದು, ನಂಬಿಕೆದ್ರೋಹ ಮಾಡಬಹುದು. ಸಾಮಾಜಿಕ ದೃಷ್ಟಿ ಸಹಿಸಲು ಆಗದೇ ಒಬ್ಬರು ಅಥವಾ ಇಬ್ಬರೂ ಸಂಬಂಧ ತುಂಡರಿಸಿಕೊಳ್ಳಬಹುದು.

ಒಂದು ವೇಳೆ ಸಮಾಜ ಲೆಸ್ಬಿಯನ್‌ಗಳನ್ನು ಸಹಜವಾಗಿ ಸ್ವೀಕರಿಸಲು ಶುರು ಮಾಡಿದರೆ, ಅವರ ಜಾಯಿಂಟ್‌ ಅಕೌಂಟ್‌ತೆರೆಯಬಹುದು. ಪಾರಂಪರಿಕ ಸಾಲುಗಳಿಗೆ ಉತ್ತರ ದೊರಕಬಹುದು. ಮಕ್ಕಳನ್ನು ದತ್ತು ಪಡೆಯುವ ಹಕ್ಕು ಸಿಗಬಹುದು. ಆಸ್ತಿಯನ್ನು ಜಂಟೀ ಹೆಸರಿನಲ್ಲಿ ಖರೀದಿಸಬಹುದು. ಮದುವೆ ಜಾತ್ರೆಗಳಲ್ಲಿ ಸ್ತ್ರೀ-ಪುರುಷ ಜೋಡಿಯ ಹಾಗೆ ಇವರಿಗೂ ಮಾನ್ಯತೆ ದೊರಕಬಹುದು. ಲೆಸ್ಬಿಯನ್‌ಗಳು ಅಥವಾ ಪುರುಷ ಸಲಿಂಗಿಗಳ ಜೋಡಿ ಸಮಾಜಕ್ಕೆ ತಪ್ಪು ಸಂದೇಶ ನೀಡುವುದಿಲ್ಲ. ನಿಷ್ಠೆ ಹಾಗೂ ಸಮರ್ಪಣೆಯ ಹೊಸ ವ್ಯಾಖ್ಯೆಗಳು ಕೊಡಲ್ಪಡಬಹುದು. ಅವರಿಬ್ಬರ ಸಂಬಂಧ ಕೇವಲ ಮಕ್ಕಳ ಕಾರಣದಿಂದಾಗಿ ಆಗುವುದಿಲ್ಲ. ಅದಕ್ಕೆ ಬಹಳಷ್ಟು ಕಾರಣಗಳಿರಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ