ಅನಿತಾ ರಾವ್ ‌ಅವರದು ಅತ್ಯಂತ ವಿಶಿಷ್ಟ ವ್ಯಕ್ತಿತ್ವ. ಗಗನಸಖಿಯಾಗಿ ಅನೇಕ ದೇಶಗಳನ್ನು ಸುತ್ತಿದ್ದ ಅವರು, ಅತ್ಯಂತ ವೈಭಿನ್ನಬಹುದಾದ ಸೆಲೆನ್‌ ಸ್ಟಾರ್‌ ಸೌಲಭ್ಯ ಪಡೆದರು. ಮದುವೆ ಬಳಿಕ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ, ಪತಿ ಅಶ್ವಿನ್‌ ರಾವ್ ಜೊತೆ ಅಮೆರಿಕಾದಲ್ಲಿದ್ದರು. ಅಲ್ಲಿನ ಏಕತಾನತೆಯ ಜೀವನ ಬೇಸರ ಹುಟ್ಟಿಸಿತ್ತು. ಅಲ್ಲಿಂದ ಭಾರತಕ್ಕೆ ಮರಳಿದ ಬಳಿಕ ಅವರ ಜೀವನದಲ್ಲಿ ಬಹಳಷ್ಟು ಬದಲಾವಣೆ ಉಂಟಾಯಿತು, ಕ್ರಿಯಾಶೀಲವಾಯಿತು. 'ಸಕ್ರಿಯಾ' ಎಂಬ ಚಾರಿಟೆಬಲ್ ಸಂಸ್ಥೆ ಹುಟ್ಟುಹಾಕುವಂತಾಯಿತು.

`ಸಕ್ರಿಯಾ' ಮೂಲಕ ಅವರು ಸಾಮಾನ್ಯ ಮಹಿಳೆಯರಿಗೆ ಗೊತ್ತಿಲ್ಲದ ಮುಟ್ಟಿನ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವಲ್ಲಿ ಹೊಸ ಹೊಸ ಯೋಚನೆ ಯೋಜನೆ ಮಾಡುತ್ತಿದ್ದಾರೆ.

ಆರಂಭಿಕ ಜೀವನ

ಅನಿತಾ ರಾವ್ ಶೇಷಾದ್ರಿಪುರಂನ ಮಹಿಳಾ ವಿದ್ಯಾಲಯದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರು. ಆ ಬಳಿಕ  ಕೆಎಲ್ಇ ಕಾಲೇಜಿನಲ್ಲಿ ಓದು ಮುಂದುವರಿಸಿದರು. ಇನ್ನು ಓದು ಮುಂದುವರಿಸಿರುವ ಸಂದರ್ಭದಲ್ಲಿ ಪತ್ರಿಕೆಯೊಂದರಲ್ಲಿ ಬಂದ ಜಾಹೀರಾತು ಅವರ ಗಮನ ಸೆಳೆಯಿತು. ಅದು `ಕ್ಯಾಬಿನ್‌ ಕ್ರೂ' ನೇಮಕಾತಿ ಕುರಿತಾದದ್ದು. ಆಶ್ಚರ್ಯದ ಸಂಗತಿಯೆಂದರೆ, ಅನಿತಾ ಅವರಿಗೆ `ಕ್ಯಾಬಿನ್‌ ಕ್ರೂ' ಎಂದರೇನು ಎಂಬುದೇ ಗೊತ್ತಿರಲಿಲ್ಲ. ಶಬ್ದಕೋಶದಲ್ಲಿ ಅದರ ಅರ್ಥ ನೋಡಿದಾಗ ಅದು ಗಗನಸಖಿ ಹುದ್ದೆಗೆ ನಡೆಸುವ ಸಂದರ್ಶನ ಎನ್ನುವುದು ಗೊತ್ತಾಯಿತು.

`ಗಲ್ಫ್ ಏರ್‌' ಸಂಸ್ಥೆ ತನ್ನ ವಿಮಾನ ಸೇವೆಗಾಗಿ ಮದ್ರಾಸಿನಲ್ಲಿ ಸಂದರ್ಶನ ಏರ್ಪಡಿಸಿತ್ತು. ಅನಿತಾ ಹಾಗೂ ಅವರ ಗೆಳತಿ ಅಲ್ಲಿಗೆ ಹೋದಾಗ, ``ನಿಮಗೆ ಈಜು ಬರುತ್ತದೆಯೇ?'' ಎಂಬ ಪ್ರಶ್ನೆಗೆ ತಡವರಿಸುತ್ತಾ, ``ಇಲ್ಲ,'' ಎಂದು ಹೇಳಿದ್ದಾರೆ. ಇನ್ನು ತಮ್ಮ ಸಂದರ್ಶನ ವಿಫಲವಾಯಿತು ಎಂದು ಅನಿತಾ ರಾವ್ ‌ಅಂದುಕೊಂಡಿದ್ದರು. ಆದರೆ ಸಂದರ್ಶಕರು ನೀವು ಆಯ್ಕೆಯಾಗಿದ್ದೀರಿ. ಆದರೆ 1 ತಿಂಗಳಲ್ಲಿ ಈಜು ಕಲಿತುಕೊಂಡು ಬರಬೇಕು ಎಂದು ಹೇಳಿದರು. ಅಂತೂ ಅನಿತಾ ರಾವ್ ‌ಗಗನಸಖಿಯಾಗಿ ಬಹ್ರೇನ್‌ಗೆ ಹೋದರು.

ಬಹ್ರೇನ್‌ನಿಂದ ಬೇರೆ ಬೇರೆ ರಾಷ್ಟ್ರಗಳ ಮಹತ್ವದ ನಗರಗಳಿಗೆ ಸಂಚರಿಸುವ ಅವಕಾಶ ಸಿಕ್ಕಿತು. ಪ್ರತಿನಿತ್ಯ 1500 ಜನರನ್ನು ಭೇಟಿ ಮಾಡುತ್ತಿದ್ದ ಅವರು, ಬಹುಭಾಷೆ, ಬಹು ಸಂಸ್ಕೃತಿ, ವೈವಿಧ್ಯಮಯ ಆಹಾರ ಪದ್ಧತಿಗಳನ್ನು ತೀರಾ ಹತ್ತಿರದಿಂದ ಕಾಣಲು ಸಾಧ್ಯವಾಯಿತು. ಎಲ್ಲದಕ್ಕಿಂತಲೂ ಹೆಚ್ಚಾಗಿ ಇದೆಲ್ಲದರಿಂದ ಅವರ ಕಮ್ಯುನಿಕೇಶನ್‌ ಸ್ಕಿಲ್ ವೃದ್ಧಿಯಾಯಿತು. ಬೇರೆಯವರು ಏನು ಹೇಳುತ್ತಾರೆ ಎಂದು ಕೇಳಿಸಿಕೊಳ್ಳುವ ತಾಳ್ಮೆಯ ಗುಣ ಅವರಲ್ಲಿ ವಿಕಸಿತವಾಯಿತು.

ಗಗನಸಖಿಯಾಗಿದ್ದ 6-7 ವರ್ಷಗಳಲ್ಲಿ ಅವರು 60ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ಕೊಟ್ಟರು. ಅವರಿಗೆ ಸಿಗುವ ಸೌಲಭ್ಯ ವೈಭವದಿಂದ ಕೂಡಿದ್ದಾಗಿರುತ್ತಿತ್ತು. ಒಬ್ಬ ವ್ಯಕ್ತಿಗೆ ಇದಕ್ಕಿಂತ ಖುಷಿ ಇನ್ನೇನು ಬೇಕು? ಆದರೂ ಅವರ ಮನಸ್ಸಿನಲ್ಲಿ `ಕೇವಲ ನನಗಾಗಿ ನಾನು ಬದುಕಿದರೆ ಅದು ಜೀವನವೇ?' ಎಂದು ಪ್ರಶ್ನೆ ಏಳುತ್ತಿತ್ತು. ಬೇರೆಯವರಿಗಾಗಿ ಏನಾದರೂ ಮಾಡಬೇಕು ಎಂದು ಅವರು ಮನಸ್ಸಿನಲ್ಲಿ ತುಡಿಯುತ್ತಿತ್ತು. ಆದರೆ ಗಗನಸಖಿಯಾಗಿ ಏನನ್ನು ಮಾಡಲು ಸಾಧ್ಯವಿರಲಿಲ್ಲ.

ವಿವಾಹದ ಬಳಿಕ

ಈ ಮಧ್ಯೆ ಕುಟುಂಬದವರು ಕಲಬುರ್ಗಿ ಮೂಲದ ಅಶ್ವಿನ್‌ ರಾವ್ ಜೊತೆ ಅನಿತಾ ಅವರ ಮದುವೆ ನಿಶ್ಚಯ ಮಾಡಿದರು. ಕುಟುಂಬ ಜೀವನದ ನಿಜ ಅರ್ಥ ತಿಳಿದಿದ್ದ ಅನಿತಾ ಗಗನಸಖಿ ಹುದ್ದೆಗೆ ರಾಜೀನಾಮೆ ನೀಡಿ `ಕುಟುಂಬ ಸಖಿ'ಯಾದರು. ಪತಿ ಸಾಫ್ಟ್ ವೇರ್‌ಎಂಜಿನಿಯರ್‌ ಆಗಿದ್ದರು. ಪ್ರಾಜೆಕ್ಟ್  ವರ್ಕ್‌ ಮೇಲೆ ಅಮೆರಿಕಾದಲ್ಲಿದ್ದರು. ಅನಿತಾ ಕೂಡ ಅಮೆರಿಕಾಕ್ಕೆ ಹೋದರು. ಆದರೆ ಅಲ್ಲಿನ ಯಾಂತ್ರಿಕ, ಏಕತಾನತೆಯ ಜೀವನ ಅವರಿಗೆ ಬೇಸರ ಮೂಡಿಸತೊಡಗಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ