ಹೈಜೀನ್ ಹೆಸರು ಕೇಳಿದೊಡನೆ ನಮಗೆ ಎಲ್ಲೆಲ್ಲೂ ಕ್ಲೀನ್, ಶುಚಿತ್ವ, ಶುಭ್ರತೆಯ ವಾತಾವರಣದ ನೆನಪಾಗುತ್ತದೆ. ಅದೇ ತರಹ ನಮ್ಮನ್ನು ನಾವು ಶುಚಿಯಾಗಿ, ನೀಟಾಗಿ ಇಟ್ಟುಕೊಳ್ಳುವ ಅಗತ್ಯವಿದೆ. ನಮ್ಮನ್ನು ನಾವು ಶುಭ್ರವಾಗಿಟ್ಟುಕೊಂಡಾಗ ಮಾತ್ರ ರೋಗಗಳಿಂದ ದೂರವಿರಲು ಸಾಧ್ಯ. ಸ್ವಚ್ಛತೆ ಶುಭ್ರತೆ ಎಂದೊಡನೆ ಅದು ಕೇವಲ ದೇಹದ ಹೊರಭಾಗಗಳತ್ತ ಗಮನ ಕೊಡತಕ್ಕದ್ದು ಎಂದುಕೊಳ್ಳಬಾರದು. ಇದರಲ್ಲಿ ಅನಗತ್ಯ ಕೂದಲ ನಿವಾರಣೆ ಪ್ರಧಾನ ಪಾತ್ರ ವಹಿಸುತ್ತದೆ, ಏಕೆಂದರೆ ಅದು ಚರ್ಮದ ಅವಿಚಿನ್ನ ಭಾಗ.
ಆದರೆ ಈಗ ಜನ ಕೊರೋನಾ ಮಹಾಮಾರಿಯ ಕಾಟದಿಂದಾಗಿ ಪಾರ್ಲರ್‌ಗೆ ಹೋಗಿ ನೀಟ್ ಆಗದೆ, ಹೇಗೋ ಇದ್ದರಾಯಿತು ಎಂದುಕೊಳ್ಳುತ್ತಾರೆ. ಹೇಗೂ ಆಫೀಸಿಗೆ, ಹೊರಗೆ ಹೋಗುವ ಗೋಜಿಲ್ಲ. ಮನೆಯಲ್ಲೇ ತಾನೇ ಇರುವುದು? ಹೇಗಿದ್ದರೇನು? ಎನಿಸುತ್ತದೆ. ಮುಂದೆ ಅನುಕೂಲ ಆದಾಗ ಪಾರ್ಲರ್‌ಗೆ ಹೋಗಿ ಒಂದೇ ಸಲ ಎಲ್ಲಾ ಮಾಡಿಸಿಕೊಂಡರಾಯಿತು ಅಂತಾರೆ. ಆದರೆ ಖಂಡಿತಾ ಹೀಗೆ ಭಾವಿಸಬೇಡಿ. ಆದರೆ ಎಲ್ಲವನ್ನೂ ಪಾರ್ಲರ್ ವಶಕ್ಕೇ ಬಿಟ್ಟುಬಿಡುವುದು ಸರಿಯಲ್ಲ. ಆದ್ದರಿಂದ ನೀವು ಮನೆಯಲ್ಲೇ ಅನಗತ್ಯ ಕೂದಲನ್ನು ತೆಗೆದುಹಾಕಿ, ಸ್ಕಿನ್ ಹೈಜೀನ್ ಕಡೆ ಹೆಚ್ಚಿನ ಗಮನ ಕೊಡಬೇಕಿದೆ.
ಮನೆಯಲ್ಲೇ ಹೇರ್ ರಿಮೂವರ್
ಪಾರ್ಲರಿನಂತೆ ಮನೆಯಲ್ಲೇ ನಾವು ಹೇರ್ ರಿಮೂವ್ ಮಾಡಲು ಸಾಧ್ಯವಾ ಎಂದು ಅಂದುಕೊಂಡಿರಾ? ಪಾರ್ಲರಿಗೆ ಹೋಗುವುದರಿಂದ ಬಾಡಿ ಕ್ಲೀನ್ ಆಗುವುದು ಮಾತ್ರವಲ್ಲದೆ ರಿಲ್ಯಾಕ್ಸ್ ಆಗಲು ಸಮಯಾವಕಾಶ ದೊರಕುತ್ತದೆ, ಅಂಥದ್ದು ಮನೆಯಲ್ಲಿ ಹೇಗೆ ಸಾಧ್ಯ? ಹಾಗೇನೂ ಇಲ್ಲ. ಮನೆಯಲ್ಲಿ ನೀವು ತುಸು ಹೆಚ್ಚು ಕಷ್ಟ ಪಡಬೇಕಾದೀತು, ಖರ್ಚಂತೂ ಬಹಳ ಉಳಿಯಿತಲ್ಲವೇ? ಮನೆಯಲ್ಲಿ ಈ ಆಪ್ಶನ್ ನಿರ್ಧರಿಸಿದಾಗ, ನಿಮಗೆ ಬೇಕಾದ ಬೆಸ್ಟ್ ಕ್ವಾಲಿಟಿ ಪ್ರಾಡಕ್ಟ್ಸ್ ಬಳಸಿಕೊಳ್ಳಬಹುದು. ಇದರಿಂದ ನೀವು ಸಕಾಲದಲ್ಲಿ ಸ್ಕಿನ್ ಹೈಜೀನ್ ಕುರಿತು ಎಚ್ಚರಿಕೆ ಕ್ರಮ ತೆಗೆದುಕೊಳ್ಳಬಹುದು. ಜೊತೆಗೆ ನೀವೇ ಮಾಡಿಕೊಳ್ಳುವುದರಿಂದ ಸ್ಕಿನ್ ಅಲರ್ಜಿಯ ಪ್ರಶ್ನೆಯೇ ಏಳುವುದಿಲ್ಲ. ಆದರೆ ಪಾರ್ಲರಿನಲ್ಲಿ ಈ ಸದವಕಾಶವಿಲ್ಲ. ನಿಮ್ಮಿಂದ ಚೆನ್ನಾಗಿ ಹಣ ವಸೂಲಿ ಮಾಡುತ್ತಾರೆ. ಆದರೆ ಬ್ರಾಂಡೆಡ್ ಪ್ರಾಡಕ್ಟ್ ಬಳಸುತ್ತಾರೋ ಇಲ್ಲವೋ ಯಾವ ಗ್ಯಾರಂಟಿಯೂ ಇಲ್ಲ.
ಹೇರ್ ರಿಮೂವ್ ಕ್ರೀಂ
ಹೇರ್ ರಿಮೂವ್ ಕ್ರೀಂ ಹಚ್ಚುವುದರಿಂದ ಅದು ಆಳವಾಗಿ ಬೇರೂರಿದ ಕೂದಲನ್ನು ತೆಗೆಯಲಾರದು, ಮೇಲಷ್ಟೇ ಕ್ಲೀನ್ ಮಾಡುತ್ತದೆ ಎಂದು ಭಾವಿಸಿದ್ದರೆ ಅದು ತಪ್ಪು. ಆದರೆ ಈಗ ಮಾರುಕಟ್ಟೆಯಲ್ಲಿ ಎಂಥ ಪವರ್ ಫುಲ್ ಹೇರ್ ರಿಮೂವ್ ಕ್ರೀಂ ಬಂದಿದೆ ಎಂದರೆ, ಅದು ಬುಡದಲ್ಲಿನ ಕೂದಲನ್ನೂ ಇನ್ನಿಲ್ಲವಾಗಿಸುತ್ತದೆ. ಸುದೀರ್ಘ ಕಾಲ ಆ ಭಾಗದಲ್ಲಿ ಮತ್ತೆ ಕೂದಲು ಕಾಣಿಸುವುದಿಲ್ಲ. ಇಂಥ ಕ್ರೀಂ ವಿಟಮಿನ್, ಆ್ಯಲೋವೆರಾ, ಶಿಯಾ ಬಟರ್‌ನಂಥ ಗುಣಗಳಿಂದ ಸಮೃದ್ಧವಾಗಿರುತ್ತದೆ, ಇದರಿಂದ ನಿಮ್ಮ ಚರ್ಮಕ್ಕೆ ಹೆಚ್ಚಿನ ಲಾಭವಿದೆ.
ರೆಡಿ ಟೂ ಯೂಸ್ ವ್ಯಾಕ್ಸ್ ಸ್ಟ್ರಿಪ್ಸ್
ನೀವು ಪಾರ್ಲರ್‌ನಲ್ಲಿ ವ್ಯಾಕ್ಸ್ ಹಚ್ಚಿಸಿದ ನಂತರ ಸ್ಟ್ರಿಪ್ಸ್ ಬಳಸಿ ಕೂದಲು ತೆಗೆಯುವುದನ್ನು ನೋಡಿಯೇ ಇರುತ್ತೀರಿ. ಆದರೆ ಇದೀಗ ರೆಡಿ ಟು ಯೂಸ್ ವ್ಯಾಕ್ಸ್ ಸ್ಟ್ರಿಪ್ಸ್ ಬಳಸಿ ಮನೆಯಲ್ಲೇ ಸುಲಭವಾಗಿ ಅನಗತ್ಯ ಕೂದಲನ್ನು ತೆಗೆದುಬಿಡುಬಹುದೆಂದು ನಿಮಗೆ ಗೊತ್ತೇ? ಇದಕ್ಕಾಗಿ ನೀವು ವ್ಯಾಕ್ಸ್ ಸ್ಟ್ರಿಪ್ಸ್ ನ್ನು ನಿಮ್ಮ ಕೂದಲಿನ ಡೈರೆಕ್ಷನ್ ನಲ್ಲೇ ಅಪ್ಲೈ ಮಾಡುವ ಅಗತ್ಯವಿದೆ. ನಂತರ ಅದನ್ನು ವಿರುದ್ಧ ದಿಕ್ಕಿನಲ್ಲಿ ಎಳೆದು, ಸುಲಭವಾಗಿ ಕೂದಲನ್ನು ಕಿತ್ತುಹಾಕಬಹುದು. ಇದು ಖಂಡಿತಾ ಪಾರ್ಲರ್‌ನಂಥ ಫಿನಿಶಿಂಗ್‌ನೀಡುವುದರಲ್ಲಿ ಸಂದೇಹವಿಲ್ಲ. 1 ತಿಂಗಳಿಡೀ ಮತ್ತೆ ನೀವು ಈ ಶ್ರಮಪಡುವ ಅಗತ್ಯ ಇರುವುದಿಲ್ಲ.
ಶವರ್ ಹೇರ್ ರಿಮೂವರ್ ಕ್ರೀಂ
ಯಾರು ಮನೆಯಲ್ಲಿ ಅಷ್ಟು ಹೊತ್ತು ಕಾದು ಕುಳಿತು ವ್ಯಾಕ್ಸಿಂಗ್ ಮಾಡಿಕೊಳ್ಳುತ್ತಾರೆ ಎಂಬ ಬೇಸರದಿಂದ, ಇದುವರೆಗೂ ನೀವು ಬಹುಶಃ ಮನೆಯಲ್ಲೇ ಹೇರ್ ವ್ಯಾಕ್ಸಿಂಗ್ ಮಾಡಿಕೊಳ್ಳುವ ಗೋಜಿಗೆ ಹೋಗಿರಲಾರಿರಿ. ನಿಮ್ಮ ಈ ಚಿಂತೆ ಪರಿಹರಿಸಲೆಂದೇ ಬಂದಿದೆ, ಶವರ್ ಹೇರ್ ರಿಮೂವ್ ಕ್ರೀಂ. ಇದು ಎಲ್ಲಾ ಮೆಡಿಕಲ್ ಸ್ಟೋರ್‌ನಲ್ಲೂ ಸುಲಭ ಲಭ್ಯ. ಇದು ನಿಮ್ಮ ಚರ್ಮವನ್ನು ಸಾಫ್ಟ್, ಸ್ಮೂಥ್, ಕ್ಲೀನ್‌ಗೊಳಿಸುವ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ನೀವು ಮಾಡಬೇಕಿರುವುದಿಷ್ಟೆ….. ಸ್ನಾನಕ್ಕೆ ಮೊದಲು ನೀವು ಯಾವ ಭಾಗಗಳಿಂದ ಅನಗತ್ಯ ಕೂದಲು ತೆಗೆಯಬೇಕೆಂದಿರುವಿರೋ ಅಲ್ಲೆಲ್ಲ ಈ ಕ್ರೀಂ ಹಚ್ಚಿಕೊಂಡು, 5 ನಿಮಿಷ ಬಿಟ್ಟು ಸ್ನಾನ ಮಾಡಿ. ಕೆಲವೇ ನಿಮಿಷಗಳಲ್ಲಿ ನಿಮಗೆ ಕಾಂತಿಯುತ ಕ್ಲೀನ್ ಸ್ಕಿನ್ ಸಿಗುತ್ತದೆ, ಅದೂ ಕೆಲವೇ ನಿಮಿಷಗಳಲ್ಲಿ! ಈ ಸಿಂಪಲ್ ಅಪ್ಲೈನಿಂದ ನೀವು ವಿಶೇಷವಾಗಿ ನಿಮ್ಮ ಗುಪ್ತಾಂಗದ ಕೇರ್ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ, ಯಾವುದೇ ಜಂಜಾಟಗಳಿಲ್ಲದೆ.
ನೋವು ಸ್ಟ್ರಿಪ್ಟ್ ವ್ಯಾಕ್ಸ್
ನಿಮ್ಮ ಹೇರ್ ಗ್ರೋಥ್ ಎಷ್ಟೇ ಕಡಿಮೆ ಇರಲಿ, 1-2 ತಿಂಗಳಲ್ಲಂತೂ ಅನಗತ್ಯ ಕೂದಲು ಬಂದೇ ಬರುತ್ತದೆ. ಮುಖ್ಯವಾಗಿ ಹಣೆ, ಮೇಲ್ದುಟಿ, ಬಿಕಿನಿ ಏರಿಯಾ, ಕಂಕುಳು ಇತ್ಯಾದಿ. ಪಾರ್ಲರ್‌ಗೆ ಹೋಗಿ ನೀವು ಇದನ್ನು ತೆಗೆಸುತ್ತಿದ್ದಿರಿ. ಆದರೆ ಈಗ ಬಂದಿರುವ ನೋವು ಸ್ಟ್ರಿಪ್ಸ್ ವ್ಯಾಕ್ಸ್ ನಿಂದ ಯಾವಾಗ ಬೇಕೆಂದರೆ ಆಗ ಕ್ಲೀನ್ ಲುಕ್ಸ್ ಗಾಗಿ ಅನಗತ್ಯ ಕೂದಲನ್ನು ತೆಗೆಯಬಹುದು. ಇದರಿಂದ ಸುಲಭವಾಗಿ ನೀವು ನಿಮ್ಮ ಹುಬ್ಬಿನ ಕೂದಲು ತೆಗೆದು ಅದಕ್ಕೆ ಪರ್ಫೆಕ್ಟ್ ಶೇಪ್ ನೀಡಬಹುದು. ಇದರ ವೈಶಿಷ್ಟ್ಯವೆಂದರೆ ಇಲ್ಲಿ ಯಾವುದೇ ಬಗೆಯ ಸ್ಟ್ರಿಪ್ಸ್ ಇಲ್ಲ! ಬದಲಿಗೆ ಈ ವ್ಯಾಕ್ಸ್ ನ್ನು ಅಗತ್ಯ ಜಾಗಕ್ಕೆ ಹಚ್ಚಿ, ಕೈಗಳಿಂದಲೇ ಲೈಟ್ ಆಗಿ ತೆಗೆದುಬಿಡಬಹುದು. ಇದರಿಂದ ಬುಡಸಮೇತ ಕೂದಲು ತೊಲಗುವುದಲ್ಲದೆ, ಉರಿ, ನೋವಿನ ಪ್ರಶ್ನೆಯೇ ಇಲ್ಲ.
ಬೀನ್ಸ್ ವ್ಯಾಕ್ಸ್
ಇದರ ರಿಸಲ್ಟ್ ಸಹ ಬೆಸ್ಟ್ ಹಾಗೂ ಇದನ್ನು ಕ್ಯಾರಿ ಮಾಡುವುದೂ ಸುಲಭ. ಅಸಲಿಗೆ ಬೀನ್ಸ್ ವ್ಯಾಕ್ಸ್ ಸಣ್ಣ ಸಣ್ಣ ಕಾಳಿನ ರೂಪದಲ್ಲಿರುತ್ತದೆ. ಯಾವಾಗ ಬಳಸಬೇಕೆಂದರೂ ಈ ಕಾಳುಗಳನ್ನು ಹೀಟರ್‌ಗೆ ಹಾಕಿ ಬಿಸಿ ಮಾಡಿ ಹಾಗೂ ಸ್ಪಾಟುಲಾದಿಂದ ಬೇಕಾದ ಕಡೆ ಹಚ್ಚಿರಿ. ಹೀಟರ್ ಇಲ್ಲವೇ ಒಂದು ಬಟ್ಟಲು ಬಿಸಿ ನೀರಿಗೆ ಹಾಕಿಯೂ ಕೆಲಸ ಮಾಡಿಕೊಳ್ಳಬಹುದು. ಇದನ್ನು ಹಚ್ಚಿಕೊಳ್ಳುವುದೂ ಸುಲಭ. ಇದರ ರಿಸಲ್ಟ್ ಎಷ್ಟು ಚೆನ್ನಾಗಿರುತ್ತದೆಂದರೆ, ಮತ್ತೆ ಮತ್ತೆ ನಿಮಗೆ ಇದನ್ನೇ ಬಳಸಬೇಕು ಎನಿಸುತ್ತದೆ. ಪಾರ್ಲರ್ ಬೇಕೆಂದು ಅನಿಸುವುದೇ ಇಲ್ಲ. ಹೀಗೆ ಇಷ್ಟೆಲ್ಲ ವಿವಿಧ ಅವಕಾಶಗಳಿರುವಾಗ, ಸ್ಕಿನ್ ಹೈಜೀನ್ ಕುರಿತು ನಿರ್ಲಕ್ಷ್ಯವೇಕೆ?
ಸ್ಕಿನ್ ಹೈಜೀನಿನ ಮಹತ್ವ
ದೇಹದಲ್ಲಿ ಅನಗತ್ಯ ಕೂದಲು ಯಾರಿಗೆ ತಾನೇ ಇಷ್ಟ? ಇದು ಹೆಣ್ಣಿನ ಸೌಂದರ್ಯ ತಗ್ಗಿಸುವುದಲ್ಲದೆ, ಇದರ ದೆಸೆಯಿಂದ ತರುಣಿಯರು ತಮಗೆ ಬೇಕಾದ ಸ್ಟೈಲಿಶ್‌ಸೆಕ್ಸಿ ಡ್ರೆಸ್ ಹಾಕಿಕೊಳ್ಳಲಿಕ್ಕೂ ಆಗುವುದಿಲ್ಲ. ಇದು ಅವರ ಲುಕ್ಸ್ ಕೆಡಿಸುವುದಷ್ಟೇ ಅಲ್ಲ, ಇದರಿಂದಾಗಿ ಹಲವು ಆರೋಗ್ಯ ಸಮಸ್ಯೆಗಳೂ ಕಾಡಬಹುದು. ಗಂಡಸರಿಗೆ ಹೋಲಿಸಿದಾಗ ಹೆಂಗಸರು ಸ್ಕಿನ್ ಹೈಜೀನ್ ಕುರಿತು ಹೆಚ್ಚು ಗಮನ ಕೊಡುತ್ತಾರೆ, ಅದು ಅಗತ್ಯ ಹೌದು.
ಅಸಲಿಗೆ ನಾವು ಈ ಅನಗತ್ಯ ಕೂದಲನ್ನು ಹಾಗೇ ಬೆಳೆಯಲು ಬಿಟ್ಟರೆ, ಇದರಿಂದ ಸೋಂಕು ತಗಲುವ ಸಾಧ್ಯತೆಗಳು ಹೆಚ್ಚು. ಅದು ಕಂಕುಳ ಅಥವಾ ಗುಪ್ತಾಂಗದ ವಿಷಯವಿರಲಿ, ಸದಾ ಕವರ್ ಆಗಿರುವುದರಿಂದ ಇಲ್ಲಿ ಹೆಚ್ಚು ಬೆವರು, ಜಮೆಗೊಳ್ಳುತ್ತದೆ. ಅದರಿಂದ ಫಂಗಲ್ ಇನ್‌ಫೆಕ್ಷನ್ ತಪ್ಪಿದ್ದಲ್ಲ.
ಬಹು ದಿನಗಳವರೆಗೂ ಇದನ್ನು ಕ್ಲೀನ್ ಮಾಡದಿದ್ದರೆ ನವೆ, ಗುಳ್ಳೆಗಳಂಥ ಸಮಸ್ಯೆ ಏಳಬಹುದು. ಅದು ಮುಂದೆ ಹಲವು ಗಂಭೀರ ರೂಪ ತಳೆಯಬಹುದು. ಹೀಗಾಗಿ ನೀವು ನಿಮ್ಮ ಸ್ಕಿನ್ ಹೈಜೀನ್‌ನ ಕಡೆ ವಿಶೇಷ ಗಮನಕೊಟ್ಟು, ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಿ.
ಗಮನಿಸಬೇಕಾದ ಅಂಶಗಳು
ಯಾವುದೇ ಪ್ರಾಡಕ್ಟ್ ಕೊಳ್ಳುವಾಗ ಅದರ ಎಕ್ಸ್ ಪೈರಿ ಡೇಟ್ ಮೊದಲು ಗಮನಿಸಿ.
ಅಗ್ಗದ ಆಸೆಗೆ ಲೋಕಲ್ ಪ್ರಾಡಕ್ಟ್ಸ್ ಕೊಳ್ಳದಿರಿ.
ಯಾವುದೇ ಪ್ರಾಡಕ್ಟ್ ನ್ನು ಬೇಗ ಬೇಗ ಹಚ್ಚಿಕೊಳ್ಳುವ ಧಾವಂತ ಬೇಡ. 15-20 ದಿನ ಬಿಟ್ಟು ಸ್ಕಿನ್ ಮೇಲೆ ಹಚ್ಚಿಕೊಳ್ಳಿ.
ಕ್ರೀಂ ಯಾವ ವ್ಯಾಕ್ಸ್ ಟೆಸ್ಟ್ ಗಾಗಿ ಮೊದಲು ಅದನ್ನು ಸಣ್ಣ ಏರಿಯಾದಲ್ಲಿ ಹಚ್ಚಿ ನೋಡಿ. ಯಾವುದೇ ಸೈಡ್ ಎಫೆಕ್ಟ್ ಕಂಡು ಬರದಿದ್ದಾಗ, ಅದನ್ನು ದೊಡ್ಡ ಏರಿಯಾದಲ್ಲಿ ಹಚ್ಚಿಕೊಳ್ಳಿ.
ನಿಮಗೆ ಇದನ್ನು ಹಚ್ಚಿದ ಮೇಲೆ ಗುಳ್ಳೆ, ಅಲರ್ಜಿ ಇತ್ಯಾದಿ ಆದರೆ ಖಂಡಿತಾ ಹೇರ್ ರಿಮೂವ್ ಪ್ರಾಡಕ್ಟ್ಸ್ ಬಳಸಲೇಬೇಡಿ.
ವ್ಯಾಕ್ಸಿಂಗ್ ನಂತರ ಆ ಭಾಗದ ಮೇಲೆ ಮಾಯಿಶ್ಚರೈಸರ್ ಹಚ್ಚಲು ಮರೆಯದಿರಿ.
ವ್ಯಾಕ್ಸಿಂಗ್ ನಂತರ 4-5 ಗಂಟೆ ಕಾಲ ಖಂಡಿತಾ ಬಿಸಿಲಿಗೆ ಹೋಗಬೇಡಿ. ಅನಿವಾರ್ಯ ಹೋಗಲೇಬೇಕೆಂದಿದ್ದರೆ, ನಿಮ್ಮನ್ನು ನೀವು ಚೆನ್ನಾಗಿ ಕವರ್ ಮಾಡಿಕೊಳ್ಳಿ, ಸನ್‌ಸ್ಕ್ರೀನ್ ಲೋಶನ್ ಹಚ್ಚಿಕೊಳ್ಳಿ.
ವ್ಯಾಕ್ಸ್ ನ್ನು ಸದಾ ಕೂದಲಿನ ದಿಕ್ಕಿನಲ್ಲೇ ಹಚ್ಚಿ, ಅದನ್ನು ಉಲ್ಟಾ ದಿಕ್ಕಿನಿಂದ ಕಿತ್ತೆಳೆಯಬೇಕು.
ಕ್ರೀಂ ಯಾ ವ್ಯಾಕ್ಸ್ ನಿಂದ ಚರ್ಮದ ಆ ಭಾಗ ಕೆಂಪಾದರೆ, ತಕ್ಷಣ ಐಸ್‌ನಿಂದ ಮಸಾಜ್ ಮಾಡಿ.
ಈ ರೀತಿ ಸುಲಭವಾಗಿ ನಿಮ್ಮ ಬಜೆಟ್ ಅನುಸಾರ ಮನೆಯಲ್ಲೇ ವ್ಯಾಕ್ಸಿಂಗ್ ಮಾಡಿ ಆನಂದಿಸಿ!
– ಪಾರ್ವತಿ ಭಟ್