ಗೃಹಶೋಭಾ ಮಹಿಳಾ ಓದುಗರ ವಿಶೇಷ ಅಭಿವೃದ್ಧಿ, ವ್ಯಕ್ತಿತ್ವ ವಿಕಾಸ, ಏಳಿಗೆಗಾಗಿ ಎಂದೇ, ಡೆಲ್ಲಿ ಪ್ರೆಸ್‌ ಪ್ರಕಟಣಾ ತಂಡ, ಗೃಹಶೋಭಾ ಮಾಸಪತ್ರಿಕೆಯ ವತಿಯಿಂದ `ಎಂಪವರ್‌ ಹರ್‌’ ಇವೆಂಟನ್ನು ಇತ್ತೀಚೆಗೆ ಬಲು ಅದ್ಧೂರಿಯಾಗಿ ಏರ್ಪಡಿಸಲಾಗಿತ್ತು. ಪ್ರಮುಖ ಪ್ರಾಯೋಜಕರು ಎಂದರೆ ಬ್ಯಾಂಕಿಂಗ್‌ ಪಾರ್ಟ್‌ ನರ್‌ ಕೆನರಾ ಬ್ಯಾಂಕ್‌, ಹೋಮಿಯೋಪಥಿ ಪಾರ್ಟ್‌ ನರ್‌ SBL  ಅಸೋಸಿಯೇಟ್‌ ಸ್ಪಾನ್ಸರ್‌ WOW ಹಾಗೂ ಗಿಫ್ಟಿಂಗ್‌ ಪಾರ್ಟ್‌ ನರ್‌ ಸದ್ಗುರು ಆಯುರ್ವೇದ.

7

ಈ ಕಾರ್ಯಕ್ರಮದ ಇಡೀ ಫೋಕಸ್‌ ಮಹಿಳಾ ಸಬಲೀಕರಣ (ವಿಮನ್‌ ಎಂಪವರ್ಮೆಂಟ್‌)ದ ಕುರಿತಾಗಿತ್ತು. ಕಳೆದ ತಿಂಗಳು ಜೂನ್‌ 8 ರಂದು, ಈ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ರಾಜಾಜಿನಗರದ ಮಾಗಡಿ ರಸ್ತೆಯ ಹೋಟೆಲ್ ವೆಸ್ಟ್ ಫೋರ್ಟ್‌ ನಲ್ಲಿ  ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ನಗರದ ನೂರಾರು ಮಹಿಳೆಯರು ಅತಿ ಉತ್ಸಾಹದಿಂದ ತಮ್ಮ ಆರೋಗ್ಯ ಸೌಂದರ್ಯ, ನ್ಯೂಟ್ರಿಷನ್‌, ಫೈನಾನ್ಸ್ ಕುರಿತಾಗಿ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಸೇರಿದ್ದರು.

ಸ್ಕಿನ್ಕೇರ್ಸೆಷನ್

ಡಾ. ಜಗದೀಶ್‌ ಪಿ., MBBS, DDVL, FRGUHS  (ಡರ್ಮಟಾಲಜಿ) ಇವರು ಬೆಂಗಳೂರಿನ ಕ್ಯುಟಿಕೇರ್‌ ಸೆಂಟರಿನ ಫೌಂಡರ್‌, ಡೈರೆಕ್ಟರ್‌ ಚೀಫ್‌ ಕನ್ಸಲ್ಟೆಂಟ್‌ ಡರ್ಮಟಾಲಜಿಸ್ಟ್ ಆಗಿದ್ದು, ಹೆಂಗಸರಿಗೆ ಸ್ಕಿನ್‌ ಕೇರ್‌ ಬಗ್ಗೆ ಅಪಾರವಾಗಿ ಅತ್ಯುತ್ತಮ ವೈಜ್ಞಾನಿಕ ಮಾಹಿತಿ ತಿಳಿಸಿಕೊಟ್ಟರು. ಚರ್ಮದ ಆರೈಕೆಗೆ ಹೆಣ್ಣುಮಕ್ಕಳು ಹೇಗೆ ಪ್ರಾಮುಖ್ಯತೆ ಕೊಡಬೇಕು, ಯಾವ ರೀತಿ ಮುತುವರ್ಜಿ ವಹಿಸಬೇಕು, ಆರೋಗ್ಯ ಕೆಡದಿರಲು ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದರ ವಿವರಗಳನ್ನು ತಿಳಿಸಿಕೊಟ್ಟರು.

1

ಚರ್ಮದಲ್ಲಿನ 3 ಬಗೆಗಳಾದ ಡ್ರೈ ಸ್ಕಿನ್‌, ಆಯ್ಲಿ ಸ್ಕಿನ್‌, ನಾರ್ಮಲ್ ಸ್ಕಿನ್‌ ಇವುಗಳನ್ನು ಪತ್ತೆ ಹಚ್ಚಿ ತಮ್ಮ ಪ್ರಕಾರ ಯಾವುದೆಂದು ತಿಳಿದುಕೊಂಡು ಅದಕ್ಕೆ ತಕ್ಕಂತೆ ವೈದ್ಯರ ಸಲಹೆಯ ಮೇರೆಗೆ ಕೆಮಿಕಲ್ಸ್ ರಹಿತ ಸೋಪ್‌, ಫೇಸ್‌ ವಾಶ್‌, ಸ್ಕ್ರಬ್‌ ಇತ್ಯಾದಿ ಬಳಸಬೇಕೆಂದು ಸಲಹೆ ನೀಡಿದರು. ದಿನ ಬೆಳಗಾಗುವಷ್ಟರಲ್ಲಿ ಯಾವು ಯಾವುದೋ ಕ್ರೀಂ ಹಚ್ಚಿಕೊಂಡು ಶ್ಯಾಮಲ ವರ್ಣದವರು, ಗೌರವರ್ಣ ಪಡೆಯಲಿಕ್ಕಾಗದು, ಇಂಥ ಜಾಹೀರಾತುಗಳಿಗೆ ಎಂದೂ ಮರುಳಾಗಬಾರದು ಎಂದು ಎಚ್ಚರಿಸಿದರು.

5

ವಿಟಿಲಿಗೊ ಸರ್ಜರಿ, ಲೇಸರ್‌ ಥೆರಪಿ, ಡರ್ಮಟೊ ಸರ್ಜರಿಯಲ್ಲಿ ನುರಿತ ಇವರು ಚರ್ಮ ರಕ್ಷಣೆಯ ಜೊತೆಗೆ ಕೂದಲಿನ ರಕ್ಷಣೆ,  ಬಾಲ್ಡ್ ನೆಸ್‌ ಸಮಸ್ಯೆಗಳು, ಕೂದಲು ಉದುರುವಿಕೆ…. ಇತ್ಯಾದಿ ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳ ಕುರಿತು ಸಹ ಮಾಹಿತಿ ನೀಡಿದರು. ತೊನ್ನು, ವಿಟಿಲಿಗೊ, ಅದರ ಕುರಿತಾದ ನಿವಾರಣೆ ಬಗ್ಗೆ ತಿಳಿಸಿಕೊಟ್ಟರು. ಒಟ್ಟಾರೆ ಯಾವುದೇ ಜಾಹೀರಾತಿಗೆ ಮರುಳಾಗಿ ಪವಾಡದಂಥ ಚರ್ಮ ಬದಲಾವಣೆ, ಬೊಕ್ಕ ತಲೆ ಸಮಸ್ಯೆ ನಿವಾರಣೆ ಅಥವಾ ವಿಟಿಲಿಗೊ ಸಮಸ್ಯೆಗೆ ರಾತ್ರೋರಾತ್ರಿ ತೊನ್ನು ಹೋಗಿ ತಿಳಿ ಚರ್ಮ ಬರುವುದು ಇತ್ಯಾದಿ ನಂಬದೆ, ನುರಿತ ತಜ್ಞರಿಂದ ಚಿಕಿತ್ಸೆ ಪಡೆಯಬೇಕು, ಇದಕ್ಕಾಗಿ ಮನೆಯಲ್ಲಿ ಉತ್ತಮ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ವಿವರಿಸಿದರು. ಇವೆಂಟಿಗೆ ಬಂದಿದ್ದ ಹೆಂಗಸರು ಇವರ ಬಳಿ ತಮ್ಮ ಸ್ಕಿನ್‌ ಕೇರ್‌ ಮತ್ತು ಹೇರ್‌ ಕೇರ್‌ ಸಮಸ್ಯೆಗಳ ಬಗ್ಗೆ ಅನುಮಾನ ಪರಿಹರಿಸಿಕೊಂಡರು.

ನ್ಯೂಟ್ರಿಷನಿಸ್ಟ್ ಸೆಷನ್

ಡಯೆಟೀಶಿಯನ್‌ ನ್ಯೂಟ್ರಿಷನಿಸ್ಟ್ ಆಗಿರುವ ಆಶಾ ಕೃಷ್ಣ, M.Sc, M,Phil, DDHN  ಇವರು ನುರಿತ ಪೌಷ್ಟಿಕ ಆಹಾರ ತಜ್ಞರಾಗಿದ್ದು, ಪ್ರಸ್ತುತ ಬೆಂಗಳೂರಿನ ಅಕ್ಷ ಆಸ್ಪತ್ರೆಯಲ್ಲಿ ಕನ್ಸಲ್ಟೆಂಟ್‌ ಡಯೇಟೀಶಿಯನ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ರಂಗದಲ್ಲಿ ಇವರು 12 ವರ್ಷಗಳ ಅನುಭವ ಹೊಂದಿದ್ದು, ಡಯಾಬಿಟೀಸ್‌ ಎಜುಕೇಟರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

2

ಹೆಣ್ಣುಮಕ್ಕಳು, 40+ ಆದವರು ದೈನಂದಿನ ತಮ್ಮ ಆಹಾರದಲ್ಲಿ ಯಾವ ರೀತಿ ಪೌಷ್ಟಿಕಾಂಶಗಳನ್ನು ಬೆರೆಸಿಕೊಂಡು ದಿನವಿಡೀ ಸೇವಿಸಬೇಕು ಎಂದು ವಿವರಿಸಿದರು. ನಮ್ಮ ಆಹಾರದಲ್ಲಿ ಪ್ರೋಟೀನ್‌, ಕಾರ್ಬೋಹೈಡ್ರೇಟ್‌, ಫ್ಯಾಟ್‌, ವಿಟಮಿನ್‌, ಮಿನರಲ್ಸ್, ಫೈಬರ್‌ ಇತ್ಯಾದಿ ಎಲ್ಲ ಸೂಕ್ತ ಪ್ರಮಾಣದಲ್ಲಿ ಅಡಗಿರಬೇಕು. ಪ್ರತಿ ಆಹಾರ ಕ್ಯಾಲೋರಿ ಕೌಂಟ್‌ ಖಚಿತಪಡಿಸಿಕೊಂಡು ಸೇವಿಸಬೇಕು ಎಂದು ಸಲಹೆ ನೀಡಿದರು. ಹಾಲು, ಹಣ್ಣು, ತಾಜಾ ಹಸಿರು ತರಕಾರಿ, ಮೀನು, ಮೊಟ್ಟೆ, ವೈಟ್‌ ಮೀಟ್‌ (ರೆಡ್ ಮೀಟ್‌ ಬೇಡ) ಇತ್ಯಾದಿಗಳ ಕುರಿತು ಸವಿವರವಾಗಿ ತಿಳಿಸಿಕೊಟ್ಚರು. ಮಧುಮೇಹಿಗಳು ಪಾಲಿಸಬೇಕಾದ ಆಹಾರ, ಓಟ್ಸ್, ಬಾರ್ಲಿ ಇತ್ಯಾದಿಗಳ ಕುರಿತು ಸೂಕ್ಷ್ಮವಾಗಿ ವಿವರಿಸಿದರು.

ಪರ್ಸನಲ್ ಹೈಜೀನ್ಸೆಷನ್

ಡಾ. ಎಚ್‌.ಪಿ. ರಮ್ಯಾ BMHS, SCPH, PgDip (ಕ್ಲಾಸಿಕ್‌ ಹೋಮಿಯೋಪಥಿ). ಇವರು ನ್ಯೂಟ್ರಿಷನ್‌ ಡಯೆಟಿಕ್ಸ್ ನಲ್ಲೂ ನುರಿತವರಾಗಿದ್ದು, ಈ ರಂಗದಲ್ಲಿ 11 ವರ್ಷಗಳ  ಉತ್ತಮ ಅನುಭವ ಹೊಂದಿದ್ದಾರೆ. ಪುಣೆ, ಬೆಂಗಳೂರಿನಲ್ಲಿ ಪ್ರಾಕ್ಟೀಸ್‌ ಮಾಡುವ ಇವರು ಹೀಲಿಂಗ್‌ ಕ್ಲೌಡ್‌ನ ಫೌಂಡರ್‌. ಹೆಣ್ಣುಮಕ್ಕಳ ಮುಟ್ಟಿನ ಸಮಸ್ಯೆಗಳು, ಕಾರಣ, ನಿವಾರಣೆಯ ಬಗ್ಗೆ ಈ ಸೆಷನ್‌ ನಲ್ಲಿ ಸರಳ ಕನ್ನಡದ ವಿವರಣೆ ನೀಡುತ್ತಾ ಮುಟ್ಟಿನ ಸಂದರ್ಭದಲ್ಲಿ ಸಾಮಾನ್ಯವಾಗಿ ಹೆಣ್ಣುಮಕ್ಕಳನ್ನು ಕಾಡುವ ಕಿಬ್ಬೊಟ್ಟೆ ನುಲಿತ, ತೀವ್ರ ನೋವು, ಸಂಕಟ, ಸುಸ್ತು, ಸಿಡುಕುತನ ಇತ್ಯಾದಿಗಳ ಬಗ್ಗೆ ಸ್ಪಷ್ಟ ವಿವರಣೆ ನೀಡಿದರು. ಫೈಬ್ರಾಯ್ಡ್ ಸಮಸ್ಯೆ, ಅದಕ್ಕೆ ಸಂಬಂಧಿಸಿದ ಸರ್ಜರಿ ಇತ್ಯಾದಿಗಳ ಕುರಿತು ವಿವರಿಸಿದರು. ಸದಾ ಪೆಯ್ನ್ ಕಿಲ್ಲರ್ಸ್‌ ಸೇವಿಸುವ ಬದಲು ಸಕಾಲಕ್ಕೆ ಸ್ತ್ರೀರೋಗ ತಜ್ಞರನ್ನು ಕಾಣುವ ಬಗ್ಗೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಹಾಲಲ್ಲಿ ಡ್ರೈ ಫ್ರೂಟ್ಸ್ ನೆನೆಸಿ ಸೇವಿಸಬೇಕೆಂದು ತಿಳಿಸಿದರು.

6

ಫಾಸ್ಟ್ ಫುಡ್‌, ಜಂಕ್‌ ಫುಡ್‌ ಗಳ ಅಪೌಷ್ಟಿಕ ಸೇವನೆಯಿಂದ 7-8ರ ವಯಸ್ಸಿನಲ್ಲೇ ಪುಷ್ಪವತಿಯರಾಗುತ್ತಿರುವ ಕಿರಿಯ ಹೆಣ್ಣುಮಕ್ಕಳ ಸಮಸ್ಯೆ ಬಗ್ಗೆ ಸಹ ತಿಳಿಸಿಕೊಟ್ಟರು. ಸಕಾಲಕ್ಕೆ ಪೌಷ್ಟಿಕ ಆಹಾರ ಸೇವನೆ. ಉದ್ಯೋಗಸ್ಥ ವನಿತೆಯರು ತಡವಾಗಿ ಆಹಾರ ಸೇವಿಸ ಬೇಕಿರುವುದರಿಂದ ಸದಾ ತಮ್ಮ ಬಳಿ ಬಾದಾಮಿ, ಪಿಸ್ತಾ ಇರಿಸಿಕೊಂಡು ಸೇವಿಸಬೇಕೆಂದು ಹೇಳಿದರು. ಇವೆಂಟಿಗೆ ಬಂದಿದ್ದ ಅನೇಕ ಹೆಂಗಸರು ಇವರ ಬಳಿ ತಮ್ಮ ಅನುಮಾನದ ಕುರಿತು ಹೇಳಿಕೊಂಡು ಪರಿಹಾರ ಪಡೆದರು. ಈ ಸಮಸ್ಯೆಗೆ ಹೋಮಿಯೋಪಥಿ ವೈದ್ಯಕೀಯ ಎಷ್ಟು ನಿಖರ ಎಂದು ತಿಳಿಸಿಕೊಟ್ಟರು.

ಫೈನಾನ್ಸ್ ಎಕ್ಸ್ ಪರ್ಟ್ಸೆಷನ್

ಅನುಪಮಾ ಶೆಣೈ CA, (B.Com, FCACS, DISA, AIIA ) ಇವರು ASJC ಯಲ್ಲಿ ಪಾರ್ಟ್‌ನರ್‌ ಹಾಗೂ CA ಆಗಿ ಡಿವಿಜಿ ರಸ್ತೆ, ಬೆಂಗಳೂರಿನಲ್ಲಿ ಆರ್ಥಿಕ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹೆಂಗಸರು ಯಾವ ರೀತಿ ಉಳಿತಾಯ ಮಾಡಬೇಕು, ಆ ಉಳಿತಾಯ ಅವರನ್ನು ಹೇಗೆ ಸ್ವಾವಲಂಬಿ ಆಗಿಸುತ್ತದೆ, ಯಾವ ಯಾವ ರೀತಿ ಬ್ಯಾಂಕಿನಲ್ಲಿ ಖಾತೆ ತೆರೆದು ಉಳಿತಾಯ ಮಾಡಬಹುದು, ಇಂದಿನ ದುಬಾರಿ ಬೆಲೆಗಳ ಕಾಲಕ್ಕೆ ಅದೆಷ್ಟು ಅವಶ್ಯಕ ಎಂದು ವಿವರಿಸಿದರು. SB, RD, FD ಇತ್ಯಾದಿ ಖಾತೆ ತೆರೆದು ನಮ್ಮ ಸಂಪಾದನೆಯ ಶೇ.20ರಷ್ಟನ್ನಾದರೂ ಉಳಿತಾಯ ಮಾಡಿದಾಗ ಮಾತ್ರ ಅದು ನಮ್ಮ ಮುಂದಿನ ಪೀಳಿಗೆಯ ಉನ್ನತ ವ್ಯಾಸಂಗ, ಮದುವೆ, ಮನೆ ಕೊಳ್ಳಲು ಆಧಾರ ಇತ್ಯಾದಿಗಳಿಗೆ ನೆರವಾಗುತ್ತದೆಂದು ತಿಳಿಸಿಕೊಟ್ಟರು.

8

ಸ್ಟಾಕ್‌, ಷೇರು ಮಾರುಕಟ್ಟೆ, ಮ್ಯೂಚುಯೆಲ್ ಫಂಡ್‌ ನಲ್ಲಿ ಹೂಡಿಕೆ, ಅದರಿಂದ ಸಕಾಲಕ್ಕೆ ಸರಿಯಾಗಿ ಷೇರು ಕೊಳ್ಳುವ, ಮಾರಾಟದ ಬಗ್ಗೆ ಹೆಚ್ಚಿನ ಅರಿವು ಇತ್ಯಾದಿಗಳ ಬಗ್ಗೆ ವಿವರಿಸಿದರು. ಮ್ಯೂಚುಯೆಲ್ ಫಂಡ್‌ SIP ಕುರಿತ ಪ್ರಾಮುಖ್ಯತೆ, ಜೀವಿ ವಿಮೆ, ಮೆಡಿಕಲ್ ಇನ್‌ ಶ್ಯೂರೆನ್ಸ್, ಸರ್ಕಾರಿ ಸ್ಕೀಮ್ಸ್, ಪೋಸ್ಟ್ ಆಫೀಸ್‌ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್‌ ಇತ್ಯಾದಿ ಎಲ್ಲದರ ವಿವರಣೆ ನೀಡಿದರು. ಇವೆಂಟಿಗೆ ಬಂದಿದ್ದ ಹೆಂಗಸರು ಇವರ ಬಳಿ ಬ್ಯಾಂಕಿಂಗ್‌ ಹಾಗೂ ಆರ್ಥಿಕ ಸಮಸ್ಯೆಗಳ ಕುರಿತು ಅನೇಕ ಪ್ರಶ್ನೆ ಕೇಳಿ ಪರಿಹಾರ ಪಡೆದರು. ಮುಖ್ಯವಾಗಿ ಖಾಸಗಿ ಚೀಟಿ ವ್ಯವಹಾರ, ಚಿಟ್‌ ಫಂಡ್ಸ್ ನಿಂದ ನಮ್ಮ ಹೆಣ್ಣುಮಕ್ಕಳು ಏಮಾರಿ ಹಣ ಕಳೆದುಕೊಳ್ಳಬಾರದು ಎಂದು ಎಚ್ಚರಿಸಿದರು.

ಗೇಮಿಂಗ್ಸೆಷನ್

ಇಡೀ ಕಾರ್ಯಕ್ರಮದ ನಿರೂಪಣೆ ಮಾಡುತ್ತಾ ಆ್ಯಂಕರ್‌ ಭಾನುಪ್ರಿಯಾ ಪ್ರತಿಯೊಂದು ಸೆಷನ್‌ ಮುಗಿದ ನಂತರ, ಅದಕ್ಕೆ ಸಂಬಂಧಿಸಿದಂತೆ ಸಭಿಕರನ್ನು ಬಗೆ ಬಗೆಯ ಪ್ರಶ್ನೆ ಕೇಳಿದರು. ಅತಿ ಉತ್ಸಾಹದಿಂದ ಇದರಲ್ಲಿ ಪಾಲ್ಗೊಳ್ಳುತ್ತಾ, ಹೆಣ್ಣುಮಕ್ಕಳು ಉತ್ತರ ನೀಡಿ, ಅನೇಕ ಬಗೆ ಬಗೆಯ ಬಹುಮಾನ ಸ್ವೀಕರಿಸಿದರು. ವಿಜೇತರಿಗೆ ಕುಳಿತ ಕಡೆಯೇ ಗೃಹಶೋಭಾ ಸಿಬ್ಬಂದಿ ಬಹುಮಾನ ವಿತರಿಸಿದರು.

3

ಇಷ್ಟೆಲ್ಲಾ ಕಾರ್ಯಕ್ರಮ ಮುಗಿಸಿಕೊಂಡು, ಇವೆಂಟಿಗೆ ಬಂದಿದ್ದ ಹೆಂಗಸರು, ಅತ್ಯುತ್ತಮ ಪೌಷ್ಟಿಕ ಆಹಾರ ಸೇವಿಸಿ, ಪ್ರತಿಯೊಬ್ಬರೂ ಅಪಾರ ಉಡುಗೊರೆ ತುಂಬಿದ್ದ ಗುಡೀ ಬ್ಯಾಗನ್ನು ಪಡೆದು, ಸಂತೋಷದಿಂದ ವಿದಾಯ ಕೋರಿದರು. ಒಟ್ಟಾರೆ ಗೃಹಶೋಭಾ ಎಂಪವರ್‌ ಹರ್‌ ಇವೆಂಟಿಗೆ ಬಂದಿದ್ದ ಹೆಂಗಸರೆಲ್ಲರೂ ಇದನ್ನು ಬಹಳ ಎಂಜಾಯ್‌ ಮಾಡಿದರು, ಇವೆಂಟ್‌ ಬಹಳ ಯಶಸ್ವಿಯಾಗಿ ನೆರವೇರಿತು.

ಪ್ರತಿನಿಧಿ

 

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ