ಮೂಢನಂಬಿಕೆಗಳಿಂದ ಹೊರಬಂದು ವಾಸ್ತವ ಜಗತ್ತಿನಲ್ಲಿ ಬದುಕಿ ಎಂದು ವಿಚಾರವಂತರು ಹೇಳಿದ್ದಾರೆ. ಆದರೆ ಇಂದಿನ ಅರ್ಧ ಜನಸಂಖ್ಯೆಯಷ್ಟಿರುವ ಮಹಿಳೆಯರಿಗೆ ಈ ಸಂಗತಿ ಗಮನಕ್ಕೆ ಬರುವುದೇ ಇಲ್ಲ. ಧಾರ್ಮಿಕ ಮೂಢನಂಬಿಕೆಯ ಕಾರಣಗಳಿಂದ ಕಪೋಲಕಲ್ಪಿತ ಶಕ್ತಿಗಳ ಮೇಲೆ ವಿಶ್ವಾಸವಿರಿಸಿ ತಮ್ಮ ಹಣ ಹಾಗೂ ಸಾಮರ್ಥ್ಯವನ್ನು ವ್ಯರ್ಥಗೊಳಿಸಿಕೊಳ್ಳುತ್ತಿದ್ದಾರೆ.

ಎಲ್ಲಕ್ಕೂ ದೊಡ್ಡ ವಿಡಂಬನೆಯೆಂದರೆ, ಓದುಬರಹ ಬಲ್ಲ, ಆರ್ಥಿಕ ಸಾಮರ್ಥ್ಯವುಳ್ಳ ಮಹಿಳೆಯರೇ ಹೆಚ್ಚಾಗಿ ಅದರಲ್ಲಿ ನಂಬಿಕೆಯಿಡುತ್ತಿದ್ದಾರೆ. ಇದರ ಪರಿಣಾಮವೆಂಬಂತೆ ಎಲ್ಲ ವರ್ಗದ ಮಹಿಳೆಯರು ಶೋಷಣೆಗೆ ತುತ್ತಾಗುತ್ತಿದ್ದಾರೆ. ಮತ್ತೆ ಕೆಲವರು ಸ್ವೇಚ್ಛೆಯಿಂದ ತಮಗೆ ತಾವೇ ಹಾನಿ ತಂದುಕೊಳ್ಳುತ್ತಿದ್ದಾರೆ.

ಪರಂಪರೆ ಹಾಗೂ ಆವಸ್ಥೆಯ ಹೆಸರಿನಲ್ಲಿ ಲಕ್ಷ ಲಕ್ಷ ಲೂಟಿಗೊಳಗಾಗಿ ವಾಸ್ತವದಲ್ಲಿದ್ದು ಪರೋಕ್ಷ ಸುಧಾರಣೆಯ ಕರ್ಮದಲ್ಲಿ ತಮ್ಮ ವಾಸ್ತವ ಲೋಕಕ್ಕೆ ಚ್ಯುತಿ ತಂದುಕೊಳ್ಳುತ್ತಿದ್ದಾರೆ.

ಕೆಲವರು ಹೊಟ್ಟೆಪಾಡಿಗಾಗಿ ದೇವರ ಮೂರ್ತಿಗಳ ವ್ಯವಹಾರ ಮಾಡುತ್ತಾರೆ. ಅವರಿಗೆ ಅದರಿಂದ ಅಷ್ಟೇನೂ ಲಾಭ ಬರುವುದಿಲ್ಲ. ಆದರೆ ಆ ಮೂರ್ತಿಗಳ ಹೆಸರಿನಲ್ಲಿ ಸೋಮಾರಿ ವ್ಯಕ್ತಿ ಅದರ ದುರ್ಲಾಭ ಪಡೆದುಕೊಳ್ಳುತ್ತಾನೆ. ಮಹಿಳೆಯರ ಮೂಢನಂಬಿಕೆಯನ್ನು ಗಮನದಲ್ಲಿಟ್ಟುಕೊಂಡು ಸಮಯಸಾಧಕರು ಬಗೆಬಗೆಯ ಶೋಷಣೆಯಲ್ಲಿ ನಿರತರಾಗಿದ್ದಾರೆ. ಅದರಿಂದಾಗಿ ಕೌಟುಂಬಿಕ ಸಂಬಂಧಗಳಲ್ಲಿ ಕಹಿ ಉಂಟಾಗುತ್ತಿದೆ. ಸಂಬಂಧ ಎನ್ನುವುದು ಆಚಾರ ವಿಚಾರಗಳು ಹಾಗೂ ನಂಬಿಕೆಯ ಮೇಲೆ ನಿಂತಿದೆ. ಮನೆಯ ದೈನಂದಿನ ಕಾರ್ಯಗಳನ್ನು ಬದಿಗಿಟ್ಟು, ದೇವರ ಧ್ಯಾನದಲ್ಲಿ ಗಂಟೆಗಟ್ಟಲೆ ಕಾಲ ಕಳೆಯುತ್ತ ಯಾವುದೊ ಚಮತ್ಕಾರದ ನಿರೀಕ್ಷೆ ಮಾಡುತ್ತಾ ಕೌಟುಂಬಿಕ ಕರ್ತವ್ಯಗಳ ಬಗ್ಗೆ ಮುಖ ತಿರುಗಿಸುವುದರಿಂದ ಮಕ್ಕಳ ಜೊತೆಗಿನ ಸಂಬಂಧದ ಮೇಲೆ ಪರಿಣಾಮ ಬೀರುತ್ತಿದೆ. ಕೌಟುಂಬಿಕ ಕಲಹಗಳಿಂದ ಹೆಚ್ಚಾಗಿ ಮಕ್ಕಳ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.

ಧರ್ಮದ ಬಗ್ಗೆ ಸಮ್ಮೋಹಿತ ಮಹಿಳೆಯರು

ಮಹಿಳೆಯರು ಧರ್ಮದ ಕಂದಾಚಾರ ಹಳೆಯ ಕಾಲ್ಪನಿಕ ವಿಚಾರಗಳಿಗೆ ಬಹುಬೇಗ ತುತ್ತಾಗುತ್ತಾರೆ. ಧರ್ಮಗುರುಗಳ ಪ್ರತಿಯೊಂದು ಮಾತನ್ನು ಬ್ರಹ್ಮವಾಕ್ಯ ಎಂಬಂತೆ ಭಾವಿಸಿ ತಮ್ಮ ಕುಟುಂಬ ಸಮೀಪ, ಸಮಾಜವನ್ನು ಕೂಡ ಅಧಃಪತನಕ್ಕೆ ಕೊಂಡೊಯ್ಯುತ್ತಿದ್ದಾರೆ.

ರಂಜಿತಾ, ಹಿಂದೊಮ್ಮೆ ಉತ್ಸಾಹದಿಂದ ಪುಟಿದೇಳುತ್ತಿದ್ದ ಆತ್ಮವಿಶ್ವಾಸಿ ಮಹಿಳೆಯಾಗಿದ್ದಳು. ಆದರೆ ಈಗ ಏಕಾಂಗಿಯಾಗಿ ಜೀವನ ನಡೆಸುವಂತಾಗಿದೆ. ಯಾವುದೋ ಒಂದು ಆಶ್ರಮದಲ್ಲಿ ಸೇವೆ, ಸತ್ಸಂಗದ ಹೆಸರಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಳು. ಆಕೆ ಎಲ್ಲರಿಗೂ ಕೊಡುತ್ತಿದ್ದ ಸಂದೇಶ ಏನಾಗಿರುತ್ತಿತ್ತೆಂದರೆ, “ಜೀವನ ಶಾಶ್ವತವಾಗಿದೆ. ಆ ಕುರಿತಾದ ಧ್ಯಾನದಿಂದ ಮನಸ್ಸು ಶುದ್ಧವಾಗುತ್ತದೆ ಹಾಗೂ ಜಾಗೃತಿ ಉಂಟಾಗುತ್ತದೆ. ಅದು ಅಧ್ಯಯನ ಮಾರ್ಗವನ್ನು ಪ್ರಶಸ್ತಗೊಳಿಸುತ್ತದೆ.”

ಹೀಗೆ ಕ್ರಮೇಣ ಆಕೆ ಕುಟುಂಬದಿಂದ ದೂರ ಉಳಿಯುತ್ತ ಬಂದು ಆಶ್ರಮ ವಾಸದಲ್ಲಿ ಮಗ್ನಳಾಗತೊಡಗಿದಳು.

ಕೆಲವು ದಿನಗಳ ಬಳಿಕ ಸನ್ಯಾಸಿನಿಯ ಹಾಗೆ ಗಂಡನಿಂದ ಪ್ರತ್ಯೇಕವಾಗಿ ತನ್ನದೇ ಆದ ಕೋಣೆ ಮಾಡಿಕೊಂಡಳು. ಸಂಬಂಧಿಕರ ಮದುವೆ ಇತ್ಯಾದಿ ಶುಭ ಸಮಾರಂಭಗಳಿಂದಲೂ ದೂರ ಉಳಿಯತೊಡಗಿದಳು. ಏಕೆಂದರೆ ಸಾತ್ವಿಕ ಆಹಾರ ಎಲ್ಲ ಕಡೆ ಸಿಗುವುದಿಲ್ಲ ಎನ್ನುವುದು ಅವಳ ತರ್ಕವಾಗಿತ್ತು.

ಕೆಲವು ದಿನ ತನ್ನದೇ ಆದ ಲೋಟ ತಟ್ಟೆ ಟಿಫನ್‌ ತೆಗೆದುಕೊಂಡು ಹೋದಳು. ಆದರೆ ಅಲ್ಲೂ ಕೂಡ ಸಮಸ್ಯೆ ಉಂಟಾಯಿತು. ಅವಳು ಅದೆಷ್ಟೋ ಸಲ ತನ್ನ ಮನಸ್ಸಲ್ಲಿ ಇಣುಕಿ ನೋಡಲು ಪ್ರಯತ್ನ ಮಾಡಿದಳು. ಆದರೆ ಅವಳು ಮೂಢನಂಬಿಕೆಯ ದೊಡ್ಡ ಹೊದಿಕೆಯಿಂದ ಹೊರಬರಲು ಆಗಲಿಲ್ಲ.

ಗಂಡ ಹಾಗೂ ಮಕ್ಕಳು ಆಕೆಯ ಕಂದಾಚಾರ ಪ್ರವೃತ್ತಿಯಿಂದ ಬೇಸತ್ತು ತಮ್ಮ ತಮ್ಮ ಕೆಲಸಗಳ್ಲಿ ಮಗ್ನರಾದರು. ಎಲ್ಲರೂ ತಮ್ಮ ತಮ್ಮ ಗುರಿಗೆ ತಲುಪಿದರೆ, ರಂಜಿತಾ ಮಾತ್ರ ಮನೋರೋಗಿಯಂತಾಗಿ ಏಕಾಂಗಿ ಜೀವನ ನಡೆಸುತ್ತಿದ್ದಾಳೆ.

ಹಳೆಯ ಮಾನಸಿಕತೆ

ಶಿಕ್ಷಣಕ್ಕನುಗುಣವಾಗಿ ಜನರ ಮಾನಸಿಕತೆ ಮಾತ್ರ ಬದಲಾಗಿಲ್ಲ. ಕಂದಾಚಾರಿಗಳ ಸಂಪರ್ಕಕ್ಕೆ ಬಂದು ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಕ್ಷುಲ್ಲಕ ಎಂದು ಭಾವಿಸುತ್ತಾನೆ. ತನ್ನನ್ನು ತಾನು ವಿಶೇಷ ಎಂದು ತಿಳಿಯುತ್ತಾನೆ. ಎಷ್ಟೋ ಸಲ ಮಹಿಳೆ, ಮಹಿಳೆಯನ್ನೇ ವೈರಿ ಎಂದು ಭಾವಿಸುತ್ತಾಳೆ. ವಿಧವೆಯ ಜೊತೆ ಆಸ್ಪೃಶ್ಯರ ರೀತಿಯ ವರ್ತನೆ ಮಾಡಲಾಗುತ್ತದೆ. ಎಷ್ಟೇ ಶಿಕ್ಷಣ ಪಡೆದವರಾಗಿದ್ದರೂ ತಮ್ಮ ಭವಿಷ್ಯವನ್ನು ಯಾವುದೊ ಕಾಣದ ಕೈ ಸುಧಾರಣೆ ಮಾಡುತ್ತದೆ ಎಂದು ನಂಬಿದ್ದಾರೆ.

ಇದು ಎಂತಹ ಒಂದು ಸಮಸ್ಯೆಯೆಂದರೆ, ಅದನ್ನು ನಿವಾರಿಸಿಕೊಳ್ಳುವ ಉಪಾಯ ನಮ್ಮ ಬಳಿಯೇ ಇದೆ. ಆದರೆ ಧಾರ್ಮಿಕ ವಿಚಾರಗಳು ಗಾಢವಾಗಿ ಮನಸ್ಸಿನಲ್ಲಿ ಬೇರೂರಿರುವುದರಿಂದ ಉಪಾಯ ಕಣ್ಣೆದುರು ಇದ್ದೂ ಕೂಡ ಬಹುದೂರ ಇದ್ದಂತೆ ಭಾಸವಾಗುತ್ತದೆ.

ಇದರ ಮಾಯಾಜಾಲ ನಗರಗಳು ಮಾರುಕಟ್ಟೆ ಮುಖಾಂತರ ಮನೆ ಮನೆಗೂ ತಲುಪಿದೆ. ಎಲ್ಲಕ್ಕೂ ದೊಡ್ಡ ವಿಡಂಬನೆಯೆಂದರೆ, ಇಂದಿನ ತಂತ್ರಜ್ಞಾನ ಯುಗದಲ್ಲಿ ಕೆಲಸ ಮಾಡುವವರು ಕೂಡ ಇದರ ಕಪಿಮುಷ್ಟಿಗೆ ಸಿಲುಕಿದ್ದಾರೆ.

ಢೋಂಗಿ ಬಾಬಾಗಳು, ಮೌಲ್ವಿಗಳ ಹೇಳಿಕೆಯ ಮೇಲೆ ತಮ್ಮದೆಲ್ಲವನ್ನು ಕಳೆದುಕೊಂಡವರ ಅದೆಷ್ಟೋ ಉದಾಹರಣೆಗಳು ನಮಗೆ ನೋಡಲು ಸಿಗುತ್ತವೆ. 2018ರಲ್ಲಿ ಹರಿಯಾಣ ರಾಜ್ಯದಲ್ಲಿ ಜಿಲೇಬಿ ಬಾಬಾ ತಂತ್ರಮಂತ್ರದ ಹೆಸರಿನಲ್ಲಿ 90ಕ್ಕೂ ಹೆಚ್ಚು ಹುಡುಗಿಯರಿಗೆ ಚಹಾದಲ್ಲಿ ಮತ್ತೇರುವ ಔಷಧಿ ಬೆರೆಸಿ ಅವರ ಮೇಲೆ ವ್ಯಭಿಚಾರ ನಡೆಸಲಾಯಿತು ಹಾಗೂ 120ಕ್ಕೂ ಹೆಚ್ಚು ಅಶ್ಲೀಲ ಚಿತ್ರ ಮಾಡಿದ ಆರೋಪದ ಮೇರೆಗೆ ಬಂಧಿಸಲಾಯಿತು.

ಒಬ್ಬ ವ್ಯಕ್ತಿ ನೀತಿ, ಅನೀತಿ ಸೂಕ್ತ

ಸೂಕ್ತವಲ್ಲದ ಹಾಗೂ ಏನು ಮಾಡಬೇಕು? ಏನು ಮಾಡಬಾರದು? ಎಂಬ ವಿಚಾರಗಳನ್ನು ಬಿಟ್ಟು ತನ್ನ ಇಚ್ಛೆ ಪೂರ್ಣಗೊಳಿಸಲು ಯಾವುದಾದರೂ ಕಪೋಲಕಲ್ಪಿತ ದೈವಶಕ್ತಿಗಳ ಮೇಲೆ ವಿಶ್ವಾಸವಿರಿಸಿದರೆ, ಆ ವ್ಯಕ್ತಿಯಲ್ಲಿ ಲೋಲುಪತೆಯ ಭಾವನೆ ಬರುತ್ತದೆ. ಆಗ ಆ ವ್ಯಕ್ತಿ ಬಹಳ ಸುಲಭವಾಗಿ ಧರ್ಮಾಂಧತೆಯ ಕಪಿಮುಷ್ಟಿಗೆ ಸಿಲುಕುತ್ತಾನೆ.

ಇಂದಿನ ಸ್ಥಿತಿ ಏನಾಗಿದೆಯೆಂದರೆ ಅನೇಕ ರಾಜಕೀಯ ಪಕ್ಷಗಳು ಜಾತಿವಾದ, ಸಂಪ್ರದಾಯವಾದದ ಮರೆಯಲ್ಲಿ ಧರ್ಮಗಳ ಅನೇಕ ಅಂಗಡಿಗಳನ್ನು ತೆರೆದಿವೆ. ಅವು ಕಾಲ ಕಾಲಕ್ಕೆ ಜನರ ಬ್ರೇನ್‌ ವಾಶ್‌ ಮಾಡುವಲ್ಲಿ ನಿರತವಾಗಿರುತ್ತವೆ.

21ನೇ ಶತಮಾನದಲ್ಲೂ ಇದೊಂದು ವ್ಯಾಪಕ ಸಮಸ್ಯೆಯಾಗಿದ್ದು, ಸಾಮಾಜಿಕವಾಗಿ ದುರ್ಬಲಗೊಳಿಸುವ ಪ್ರಯತ್ನ ಮಾಡಬೇಕು. ಕುಸಿಯುತ್ತಿರುವ ಸಂಬಂಧಗಳ ಮೌಲ್ಯವನ್ನು ಎತ್ತಿಹಿಡಿದು ಅವರನ್ನು ಕರ್ಮಯೋಗಿಯಾಗಿಸಬೇಕು. ನಿಮಗೆ ನೀವೇ ಕೈಕೋಳ ಹಾಕಿಕೊಂಡಿದ್ದರೆ, ಬಂಧನಮುಕ್ತರಾಗಲು ಹೇಗೆ ಸಾಧ್ಯ?

– ಭರತ್‌ ಭೂಷಣ್‌

ಚಿಕ್ಕ ಉಳಿತಾಯ ದೊಡ್ಡ ಲಾಭ

ಒಂದಿಷ್ಟು ತಿಳಿವಳಿಕೆ ಯಾವ ರೀತಿ ನಿಮ್ಮ ಉಳಿತಾಯವನ್ನು ಹೆಚ್ಚಿಸುತ್ತದೆ ಎಂಬುದನ್ನು ಕಂಡುಕೊಳ್ಳಿ.

ನಿಮ್ಮ ಅಡುಗೆ ಆಗಲೇ ಸಿದ್ಧವಾಗಿದ್ದು ಅದನ್ನು ಪುನಃ ಬಿಸಿ ಮಾಡಲು ಯೋಚಿಸುತ್ತಿದ್ದರೆ, ಅದನ್ನು ಗ್ಯಾಸ್‌ ಮೇಲೆ ಇಡುವ ಬದಲು ಮೈಕ್ರೋವೇವ್‌ನಲ್ಲಿ ಬಿಸಿ ಮಾಡುವುದು ಸೂಕ್ತ. ಆದರೆ ಮೈಕ್ರೋವೇವ್‌ನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು. ಆಗಲೇ ವಿದ್ಯುತ್ ಬಳಕೆ ಪ್ರಮಾಣ ಕಡಿಮೆಯಾಗುತ್ತದೆ.

ನೀವು ಮಾರುಕಟ್ಟೆಗೆ ಹೋದಾಗ ಈಗಾಗಲೇ ಫ್ರಿಜ್‌ನಲ್ಲಿರುವ ಕೆಲವು ತರಕಾರಿಗಳನ್ನು ಕೂಡ ತೆಗೆದುಕೊಂಡು ಬರುತ್ತೀರಿ. ಹಾಗಾಗಿ ಮೊದಲು ತಂದಿದ್ದ ತರಕಾರಿಗಳು ಹಾಳಾಗುತ್ತವೆ. ಮಾರುಕಟ್ಟೆಗೆ ಹೋಗುವ ಮುನ್ನ ಅವಶ್ಯವಿರುವಷ್ಟೇ ತರಕಾರಿಗಳನ್ನು ತೆಗೆದುಕೊಂಡು ಬನ್ನಿ.

ವಿದ್ಯುತ್‌ ಖರ್ಚಿನಲ್ಲಿ ಉಳಿತಾಯ ಮಾಡಬೇಕೆಂದರೆ ಮಕ್ಕಳ ಮೇಲೆ ಗಮನವಿಡಿ. ಅವರು ಬಾಥ್‌ ರೂಮ್ ಮುಂತಾದ ಕಡೆ ಲೈಟ್ ಹಾಗೆಯೇ ಬಿಟ್ಟು ಬರುತ್ತಾರೆ.

ಅಡುಗೆ ಮಾಡುವ ಸ್ವಲ್ಪ ಹೊತ್ತು ಮುಂಚೆ ಪದಾರ್ಥಗಳನ್ನು ಫ್ರಿಜ್‌ನಿಂದ ಹೊರಗೆ ತೆಗೆದಿಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ಗ್ಯಾಸ್‌ ಉಳಿತಾಯವಾಗುತ್ತದೆ. ಹಾಲನ್ನು ಫ್ರಿಜ್‌ನಲ್ಲಿಟ್ಟಾಗಲೂ ಇದೇ ನಿಯಮ ಅನುಸರಿಸಿ.

ಅಡುಗೆ ಮಾಡುವ ಮುಂಚೆಯೇ ಸಿದ್ಧತೆ ಪೂರ್ಣಗೊಳಿಸಿಕೊಳ್ಳಿ. ಬಾಣಲೆ ಒಲೆ ಮೇಲೆ ಇಟ್ಟು ನಂತರ ಸಿದ್ಧತೆ ಮಾಡಿಕೊಂಡರೆ ಗ್ಯಾಸ್‌ ವ್ಯರ್ಥವಾಗುತ್ತದೆ.

ಬೇಳೆ ತರಕಾರಿ ಬೇಯಿಸುವಾಗ ಎಷ್ಟು ಬೇಕೊ ಅಷ್ಟೇ ನೀರು ಹಾಕಿ ಹೆಚ್ಚು ಹಾಕಿದರೆ ಗ್ಯಾಸ್‌ ಹೆಚ್ಚು ಖರ್ಚಾಗುತ್ತದೆ.

ಬೇಳೆ ಬೇಯಿಸುವ ಮುಂಚೆ ನೆನೆ ಹಾಕಿಟ್ಟರೆ ಕುದಿಯಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಅದರಿಂದ ಗ್ಯಾಸ್‌ ಉಳಿಯುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ