ಫ್ಲರ್ಟಿಂಗ್ ಬಗ್ಗೆ ಸಾಮಾನ್ಯವಾಗಿ ಪುರುಷರು ಹೆಸರು ಕೆಡಿಸಿಕೊಂಡಿರುತ್ತಾರೆ. ಹುಡುಗಿಯರು ಕಣ್ಣಿಗೆ ಬೀಳುತ್ತಿದ್ದಂತೆ ಕೆಲವು ಪರುಷರು ಅವರ ಕುರಿತಂತೆ ಕನಸು ಕಾಣುತ್ತಾರೆ. ಅವರನ್ನು ಒಲಿಸಿಕೊಳ್ಳಲು ಬಗೆಬಗೆಯ ಪ್ರಯತ್ನ ಮಾಡುತ್ತಾರೆ. ಆದರೆ ಅದು ಹಾಗಲ್ಲ. ಪುರುಷರಿಗೆ ಹೋಲಿಸಿದಲ್ಲಿ ಮಹಿಳೆಯರು 5 ಬಗೆಯ ಎಂತಹ ಕೆಲವು ಸೆಕ್ಸಿ ಬಾಡಿ ಸಿಗ್ನಲ್ಸ್ ಕೊಡುತ್ತಾರೆಂದರೆ, ಅವಳು ತನ್ನನ್ನು ಇಷ್ಟಪಡುತ್ತಾಳೆ ಎಂಬ ಸಂಕೇತ ಪುರುಷರಿಗೆ ದೊರಕುತ್ತದೆ.
ಫ್ಲರ್ಟ್ ಮಾಡುವುದರಲ್ಲಿ ಪುರುಷರಿಗೆ ಹೋಲಿಸಿದಲ್ಲಿ ಮಹಿಳೆಯರು ಮುಂದಿದ್ದಾರೆ ಎಂಬುದನ್ನು ವಿಜ್ಞಾನಿಗಳು ಸಂಶೋಧನೆಗಳಿಂದ ಕಂಡುಕೊಂಡಿದ್ದಾರೆ. ಒಬ್ಬ ಜೀವಶಾಸ್ತ್ರಜ್ಞ ಕೂಡ ತನ್ನ ಸಂಶೋಧನೆಯಿಂದ ಕಂಡುಕೊಂಡ ಸತ್ಯಾಂಶವೆಂದರೆ ಮಹಿಳೆಯರು ಪುರುಷರಿಗಿಂತ ಹೆಚ್ಚಿಗೆ ಫ್ಲರ್ಟ್ ಮಾಡುತ್ತಾರೆ.
ಹೆಲನ್ ಫಿಶರ್ ಹೆಸರಿನ ವಿಜ್ಞಾನಿ, `ಅನಾಟಮಿ ಲವ್’ ನಲ್ಲಿ ಹೀಗೆ ಉಲ್ಲೇಖಿಸಿದ್ದಾರೆ. ಮಹಿಳೆ ತನ್ನ ಎಕ್ಸ್ ಪ್ರೆಶನ್‌ನಿಂದ ತಾನು ಪುರುಷನ ಬಗ್ಗೆ ಆಸಕ್ತನಾಗಿದ್ದೇನೆ ಅಥವಾ ಇಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಾಳೆ. ಅದನ್ನು ಒಬ್ಬ ಮಹಿಳೆಯ ನಗು ಹಾಗೂ ಕಣ್ಣುಗಳ ಸನ್ನೆಯಿಂದ ಪತ್ತೆ ಹಚ್ಚಬಹುದು. ಈ ಪರಿಪೂರ್ಣ ರಹಸ್ಯವನ್ನು ತಿಳಿದುಕೊಳ್ಳಲು ವಾಷಿಂಗ್ಟನ್‌ನ ಮಾನಶಾಸ್ತ್ರಜ್ಞ ಡೇವಿಡ್ ಗಿನ್ಸ್ ಹಾಗೂ ಸೆಕ್ಸಾಲಜಿಸ್ಟ್ ತಿಮೋಥಿ ಪರ್ಪರ್ ಹಲವು `ಬಾರ್’ ಹಾಗೂ `ಕ್ಲಬ್’ಗಳಲ್ಲಿ ನೂರಾರು ಗಂಟೆಗಳ ಕಾಲ ಕುಳಿತು ಜೋಡಿಗಳ ಮೊದಲ ಭೇಟಿಯ ಸನ್ನಿವೇಶವನ್ನು ಕಂಡುಕೊಂಡರು.
ಈ ಸಂಶೋಧನೆಯ ಮೂಲಕ ಹೊರಬಂದ ಪರಿಣಾಮ ಸಾಕಷ್ಟು ಅಚ್ಚರಿ ಹುಟ್ಟಿಸುವಂತಿತ್ತು. ಏಕೆಂದರೆ ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಮಹಿಳೆಯರೇ ಮೊದಲು ಪ್ರೀತಿಯ ಪ್ರಸ್ತಾಪ ಮಾಡಿದ್ದರು. ಹೆಲನ್ ಫಿಶರ್ 2010ರಲ್ಲಿ 25,000 ಹುಡುಗ-ಹುಡುಗಿಯರ ಬಗ್ಗೆ ಸಿಂಗಲ್ ಆಗಿ ಅಧ್ಯಯನ ಮಾಡಿದರು. ಈ ಅಧ್ಯಯನದಿಂದ ಎಲ್ಲ ವಯಸ್ಸಿನ, ವರ್ಣದ ಮಹಿಳೆಯರು ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿರುತ್ತಾರೆ ಎಂಬುದು ಖಚಿತಗೊಂಡಿದೆ.
ಆ ಬಳಿಕ 2012ರಲ್ಲಿ ಸುಮಾರು 50,000 ಪುರುಷರು ತಮಗೆ ಮಹಿಳೆಯರಿಂದ ಹೊರಗೆ ಭೇಟಿಯಾಗಲು ಆಹ್ವಾನ ಕೊಟ್ಟಿದ್ದರು. ಶೇ.95 ರಷ್ಟು ಪುರುಷರು ಈ ಬಗ್ಗೆ ಖುಷಿ ವ್ಯಕ್ತಪಡಿಸುತ್ತಾರೆ. ಮಹಿಳೆ ಹಾಗೂ ಪುರುಷರು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ ಇದರಲ್ಲಿ ಒಬ್ಬರು `ಹಿಂಟ್’ ಮಿಸ್ ಮಾಡಿಕೊಂಡರೆ ಇಡೀ ಆಟವೇ ಕೊನೆಗೊಂಡುಬಿಡುತ್ತದೆ.
ಫ್ಲರ್ಟಿಂಗ್‌ನ ಸಂಕೇತಗಳು
ಕೆಲವು ಮಹಿಳೆಯರು ಫ್ಲರ್ಟ್ ಮಾಡಲು ಬಳಸುವ ಸಂಕೇತಗಳು ಹೇಗಿರುತ್ತವೆಂದರೆ, ಅವು ಪುರುಷರಿಗೆ ಸರಿಯಾಗಿ ಅರ್ಥವಾಗುತ್ತದೆ.
ಯಾವುದೇ ಒಬ್ಬ ಮಹಿಳೆ ಮಾತುಕತೆಯ ಸಂದರ್ಭದಲ್ಲಿ ಪುರುಷನಿಗೆ ತೀರಾ ನಿಕಟ ಬರುವ ಪ್ರಯತ್ನ ಮಾಡಿದಳೆಂದರೆ, ಆಕೆ ಆ ಪುರುಷನನ್ನು ಇಷ್ಟಪಡುತ್ತಾಳೆಂದು ಅರ್ಥ.
ಅಂದಹಾಗೆ ಮಹಿಳೆಯರು ಪುರುಷರಿಂದ ಅಂತರ ಕಾಪಾಡಿಕೊಳ್ಳಲು ಪ್ರಯತ್ನ ಪಡುತ್ತಾರೆ. ಆದರೆ ಫ್ಲರ್ಟ್ ಸಂದರ್ಭದಲ್ಲಿ ಅವರು ನಿಮಗೆ ಅತ್ಯಂತ ನಿಕಟವಾಗಿರಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ಅವರು ನಿಮ್ಮಿಂದ `ಸಾರಿ’ ಕೇಳುತ್ತಾರೆ. ಆ ನಿಕಟತೆಯಿಂದಲೇ ನಿಮಗೆ ಅದು ಫ್ಲರ್ಟ್ ಎಂದು ಅರ್ಥವಾಗುತ್ತದೆ.
ಯಾವುದೇ ಒಬ್ಬ ಮಹಿಳೆ ಮೇಲಿಂದ ಮೇಲೆ ತನ್ನ ಕೂದಲನ್ನು ತನ್ನ ಕಿವಿಗಳ ಹಿಂದೆ ಒಯ್ಯುತ್ತಾಳೆ ಹಾಗೂ ತನ್ನ ಕೈ ಬೆರಳುಗಳನ್ನು ತಿರುಗಿಸುತ್ತಾಳೆಂದರೆ, ಅದರ ನೇರ ಅರ್ಥ ಆಕೆ ಪುರುಷನ ಕಡೆ ಆಕರ್ಷಿತಳಾಗುತ್ತಿದ್ದಾಳೆ.
ಪುರುಷನೊಂದಿಗೆ ಮಾತನಾಡುವಾಗ ಮಹಿಳೆಯೊಬ್ಬಳು ತನ್ನ ಕೈಗಳನ್ನು ಒತ್ತಿಕೊಂಡರೆ ಅಥವಾ ದೇಹವನ್ನು ಸ್ಪರ್ಶಿಸಿಕೊಂಡರೆ, ಉದಾಹರಣೆಗೆ ತನ್ನ ಕತ್ತು, ಬಾಹುಗಳ ಮೇಲೆ ಕೈಗಳನ್ನು ಬಳಸಿಕೊಂಡರೆ ನೀವು ಅವಳಿಗೆ ಕಾಫಿಗೆ ಆಹ್ವಾನ ಕೊಡಬಹುದು. ಆಕೆ ನಿಮ್ಮ ಆಹ್ವಾನ ತಿರಸ್ಕರಿಸಲಾರಳು.
ಒಂದು ವೇಳೆ ಮಹಿಳೆ ಮಾತನಾಡುವಾಗ ಬಹಳ ಹೊತ್ತಿನತನಕ ಕಣ್ಣುಗಳ ನೇರ ಸಂಪರ್ಕದಲ್ಲಿದ್ದರೆ ಅಥವಾ ಒಂದು ವಿಶಿಷ್ಟ ಭಂಗಿಯಲ್ಲಿ ತನ್ನ ದೃಷ್ಟಿಯನ್ನು ತಗ್ಗಿಸಿದಳೆಂದರೆ ಆಕೆ ನಿಮ್ಮತ್ತ ಆಕರ್ಷಿತಳಾಗುತ್ತಿದ್ದಾಳೆಂದು ಅರ್ಥ.
ಪುರುಷ ಮಿತ್ರ ಭೇಟಿಯಾದಾಗ ಮುಗುಳ್ನಕ್ಕು ಅವನನ್ನು ಸ್ವಾಗತಿಸುವುದು, ಅವನನ್ನು ನೋಡುತ್ತಿದ್ದಂತೆಯೇ ತನ್ನ ಬಟ್ಟೆ ಸರಿಪಡಿಸಿಕೊಳ್ಳುತ್ತಾಳೆಂದರೆ ಅದು ಫ್ಲರ್ಟಿಂಗ್‌ನ ಲಕ್ಷಣ.
ಪುರುಷನನ್ನು ಯಾವ ರೀತಿಯಲ್ಲಿ ತನ್ನತ್ತ ಆಕರ್ಷಿಸಿಕೊಳ್ಳಬೇಕು, ಅವನಿಗೆ ತನ್ನ ಹೃದಯದ ಯಾವ ಮಾತನ್ನು ತಲುಪಿಸಬೇಕೆಂದು ಫ್ಲರ್ಟಿಂಗ್‌ನಲ್ಲಿ ಎಕ್ಸ್ ಪರ್ಟ್ ಆಗಿರುವ ಮಹಿಳೆಗೆ ಚೆನ್ನಾಗಿ ಗೊತ್ತಿರುತ್ತದೆ.
ಆಕೆ ನಿಮಗೆ ಹತ್ತಿರವಾಗಲು ಪ್ರಯತ್ನಿಸಿದರೆ, ಸ್ಪರ್ಶಿಸಲು ಉದ್ದೇಶಿಸಿದ್ದರೆ ಅದು ನಿಮಗೆ ಆಕೆಯ ಕಡೆಯಿಂದ ಹಸಿರು ನಿಶಾನೆ ಎಂದು ಭಾವಿಸಬೇಕು.
ಯಾವ ಮಹಿಳೆ ಫ್ಲರ್ಟಿಂಗ್‌ನಲ್ಲಿ ನಿಷ್ಣಾತೆಯಾಗಿರುತ್ತಾಳೊ ಅವಳು ಬಹಳ ಸ್ಮಾರ್ಟ್ ಆಗಿ ಪುರುಷನನ್ನು ತನ್ನತ್ತ ಒಲಿಸಿಕೊಳ್ಳಲು ಎಷ್ಟು ಬೇಕೊ ಅಷ್ಟು ಸ್ಕಿನ್ ರಿವೀಲ್ ಮಾಡಿಕೊಳ್ಳಲು ಪ್ರಯತ್ನಿಸುವಳು.
ಫ್ಲರ್ಟೀ ಮಹಿಳೆ ಪುರುಷ ಮಿತ್ರನ ಬಳಿ ಬಂದು ಮಾದಕ ಧ್ವನಿಯಲ್ಲಿ ಏನನ್ನೋ ಉಸುರುವಳು. ಅದನ್ನು ಕಂಡು ಪುರುಷ ಅವಳಿಗೆ ತಾನು ಇಷ್ಟವಾಗುತ್ತಿದ್ದೇನೆ ಎಂದು ಭಾವಿಸುತ್ತಾನೆ.
ಮಹಿಳೆಯರು ಏನು ಯೋಚಿಸುತ್ತಾರೆ?
ಫ್ಲರ್ಟಿಂಗ್ ಬಗ್ಗೆ ಮಹಿಳೆಯರ ಯೋಚನೆಯೇ ಬೇರೆ ಆಗಿದೆ. ಅವರು ಹೇಳುವುದೇನೆಂದರೆ, ಫ್ಲರ್ಟಿಂಗ್‌ನ ಕಲೆ ಕೇವಲ ನಿಮ್ಮನ್ನು ಖುಷಿಯಿಂದಷ್ಟೇ ಇಡುವುದಿಲ್ಲ. ಅದು ರೀಫ್ರೆಶ್ ಕೂಡ ಮಾಡುತ್ತದೆ. ಈ ಕಲೆಯಲ್ಲಿ ತಾವು ಪುರುಷರಿಗಿಂತ ಹಿಂದೆ ಇಲ್ಲ, ತಮ್ಮ ವಿಧಾನ ಪುರುಷರಿಗಿಂತ ಭಿನ್ನವಾಗಿದೆಯೆಂದು ಅವರು ಹೇಳುತ್ತಾರೆ.
ಫ್ಲರ್ಟಿಂಗ್ ನಿಮ್ಮನ್ನು ಫ್ರೆಶ್ ಆಗಿಡುತ್ತದೆ. ರೊಮ್ಯಾಂಟಿಕ್ ಕೂಡ ಆಗಿಸುತ್ತದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಜೀವನ ವರ್ಣಮಯ ಎಂಬಂತೆ ಗೋಚರಿಸುತ್ತದೆ ಎಂದು ಮಹಿಳೆಯರು ಹೇಳುತ್ತಾರೆ.
ಯಾರಾದರೂ ತನ್ನ ಹೃದಯಕ್ಕೆ ಹತ್ತಿರವಾಗುತ್ತಿದ್ದಾರೆಂದರೆ, ಅವರೊಂದಿಗೆ ಫ್ಲರ್ಟ್ ಮಾಡುವುದರಲ್ಲಿ ತಪ್ಪೇನಿದೆ ಎಂದು ಮಹಿಳೆಯರು ಪ್ರಶ್ನಿಸುತ್ತಾರೆ.
ಫ್ಲರ್ಟಿಂಗ್‌ನಲ್ಲಿ ಎರಡೂ ಕಡೆಯವರ ಫೀಲ್ ಗುಡ್ ಫ್ಯಾಕ್ಟರ್ ಪರಸ್ಪರ ಸಂಬಂಧಪಟ್ಟಿರುತ್ತದೆ.
ಫ್ಲರ್ಟಿಂಗ್‌ನಿಂದ ಶುರುವಾದ ಮಾತು ರೊಮ್ಯಾಂಟಿಕ್ ಸಂಬಂಧದ ತನಕ ತಲುಪಿದರೂ ತಲುಪಬಹುದು ಎಂಬುದು ಮಹಿಳೆಯರ ಅಭಿಪ್ರಾಯವಾಗಿರುತ್ತದೆ.
ಫ್ಲರ್ಟಿಂಗ್‌ನ್ನು ಕೆಲವೊಮ್ಮೆ ಜನರು ನಿಮ್ಮ ಚಾರಿತ್ರ್ಯದ ಜೊತೆ ಥಳುಕು ಹಾಕಿ ಮಾತನಾಡುತ್ತಾರೆ. ಹೀಗಾಗಿ ಫ್ಲರ್ಟಿಂಗ್‌ನ್ನು ಯೋಚಿಸಿ ಮಾಡಬೇಕು.
ಯಾವುದೇ ತಪ್ಪು ಉದ್ದೇಶ ಇಟ್ಟುಕೊಂಡು ಫ್ಲರ್ಟಿಂಗ್ ಮಾಡಬಾರದು ಫ್ಲರ್ಟಿಂಗ್‌ನಿಂದ ನೀವು ಖುಷಿಯಿಂದಿರಬೇಕು, ಎದುರಿಗಿನ ವ್ಯಕ್ತಿ ಕೂಡ ಖುಷಿಯಾಗಿರಬೇಕು.
ಯಾರಾದರೂ ಚೆನ್ನಾಗಿ ಕಂಡರೆ ಅವರನ್ನು ನೋಡುವುದರಲ್ಲಿ, ನಗುವುದರಲ್ಲಿ, ಮಾತನಾಡುವುದರಲ್ಲಿ ಯಾವುದೇ ತಪ್ಪೇನಿಲ್ಲ. ಆದರೆ ಅದರಲ್ಲಿ ಯಾವುದೇ ಕೆಟ್ಟ ಉದ್ದೇಶ ಇರಬಾರದು.
ಯಾರಾದರೂ ಚೆನ್ನಾಗಿ ಕಂಡುಬರುತ್ತಿದ್ದರೆ ಅವರಿಗೆ ಅದರ ಬಗ್ಗೆ ಕಾಂಪ್ಲಿಮೆಂಟ್ ಕೊಡುವುದು ಅತ್ಯವಶ್ಯ.
ಫ್ಲರ್ಟ್‌ನಿಂದ ಏನೇನು ಹಾನಿ?
ಫ್ಲರ್ಟಿಂಗ್‌ನಿಂದ ನೀವು ಹಾನಿ ಕೂಡ ಅನುಭವಿಸಬಹುದು.
ನಿಮ್ಮ ಉದ್ದೇಶ ಸರಿಯಾಗಿಯೇ ಇರಬಹುದು. ಆದರೆ ಫ್ಲರ್ಟಿಂಗ್ ಮಾಡುವ ಮಹಿಳೆಯರನ್ನು ಸಮಾಜ ಒಳ್ಳೆಯ ದೃಷ್ಟಿಯಿಂದ ನೋಡುವುದಿಲ್ಲ. ಜನರು ಆಕೆಯ ಬಗ್ಗೆ ಬಗೆ ಬಗೆಯ ಮಾತುಗಳನ್ನು ಆಡಬಹುದು. ಕೆಲವರು ಇದರ ದುರುಪಯೋಗ ಮಾಡಿಕೊಳ್ಳಲು ನೋಡಬಹುದು. ಯಾರೂ ಅಂಥವರ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ತಮಾಷೆಗಾಗಿ ನಿಮ್ಮ ಜೊತೆ ಸ್ನೇಹ ಬೆಳೆಸಬಹುದು.
ಫ್ಲರ್ಟಿಂಗ್ ಮಾಡುತ್ತಾ ಭಾವನಾತ್ಮಕ ನಂಟು ಬೆಳೆಯುತ್ತದೆ. ಇಂತಹ ಸ್ಥಿತಿಯಲ್ಲಿ ಫ್ಲರ್ಟಿಂಗ್‌ನ್ನು ಯೋಚಿಸಿ ವಿಚಾರ ಮಾಡಿ. ಇಲ್ಲದಿದ್ದರೆ ಸಂಬಂಧದಲ್ಲಿ ಸಮಸ್ಯೆ ಉಂಟಾಗಬಹುದು.
ಮಹಿಳೆಯರ ಫ್ಲರ್ಟಿಂಗ್ ಸ್ಟೈಲ್‌ನ್ನು ಕೆಲವು ಪುರುಷರು ತಪ್ಪಾಗಿ ಭಾವಿಸುತ್ತಾರೆ. ಅವರ ಸನ್ನೆಯನ್ನು ತಪ್ಪು ದಿಸೆಯಲ್ಲಿ ಕೊಂಡೊಯ್ಯುತ್ತಾರೆ. ಹೀಗಾಗಿ ಫ್ಲರ್ಟಿಂಗ್ ಕಲೆಯ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯ.
ಸಂಶೋಧಕರು ಹೇಳುವುದೇನೆಂದರೆ, ತಮ್ಮ ಲೈಂಗಿಕ ಆಸಕ್ತಿಯ ಕುರಿತಂತೆ ಪುರುಷರು ಮಹಿಳೆಯರ ಮೌನ ಸಂಕೇತಗಳನ್ನು ಅರಿಯದೇ ಹೋಗುತ್ತಾರೆ. ಹೀಗಾಗಿ ಆ ಸಂಕೇತಗಳನ್ನು ಮಹಿಳೆಯರು ಅರ್ಥ ಮಾಡಿಕೊಳ್ಳುವುದು ಅಗತ್ಯ.
– ವಾರಿಜಾ