ಮುಖದ ಸೌಂದರ್ಯಕ್ಕಾಗಿ ಪ್ರತಿಯೊಬ್ಬ ಹೆಂಗಸೂ ಏನಾದರೂ ವಿಶೇಷ ಪ್ರಯತ್ನ ಪಡುತ್ತಲೇ ಇರುತ್ತಾಳೆ. ಅದರಿಂದ ಅವಳ ಚರ್ಮ ಕಲೆರಹಿತ ಹಾಗೂ ಸದಾ ಹೊಳೆ ಹೊಳೆಯುತ್ತಿರಲಿ ಅಂತ. ಆದರೆ ಮುಖದ ಕೇಂದ್ರ ಭಾಗಗಳಲ್ಲಿ ಸದಾ ಜಿಡ್ಡಿನಂಶ ಕಾಡಿಸುವುದರಿಂದ, ಅದು ನೋಡಲಿಕ್ಕೂ ಕೆಟ್ಟದಾಗಿ ಇರುತ್ತದೆ, ಬದಲಿಗೆ ಚರ್ಮ ಅಂಟಂಟಾಗಿ ಇರುತ್ತದೆ. ಆಗ ನಮಗೆ ಹೊಳೆಯುವ ಮೊದಲ ಪ್ರಶ್ನೆ ಎಂದರೆ, ಇದೇಕೆ ನಮ್ಮ ಚರ್ಮ ಬೇರೆಯವರ ತರಹ ಪರ್ಫೆಕ್ಟ್ ಆಗಿಲ್ಲ ಅಂತ.
ಹೀಗಾಗಲು ಮುಖ್ಯ ಕಾರಣ ಬಹುತೇಕ ಯುವತಿಯರಿಗೆ ಮುಖ ಚರ್ಮದ T ಝೋನಿನಲ್ಲಿ ಅತಿ ಹೆಚ್ಚು ಜಿಡ್ಡಿನಂಶ ಮೆತ್ತಿಕೊಂಡಿರುವುದು ಕಂಡುಬರುತ್ತದೆ. ಮುಖ್ಯವಾಗಿ ಆಯ್ಲಿ ಕಾಂಬಿನೇಶನ್ ಸ್ಕಿನ್‌ವುಳ್ಳರಿಗೆ ಈ ಸಮಸ್ಯೆ ಹೆಚ್ಚು ಕಾಡುತ್ತದೆ. ಆದ್ದರಿಂದ ಈ ಝೋನನ್ನು ಅತಿ ಆರೈಕೆ ಮಾಡಿ ನೋಡಿಕೊಳ್ಳಬೇಕು.
T ಝೋನ್ಎಂದರೇನು?
T ಝೋನ್ ಅಂದ್ರೆ ಮುಖದ T ಶೇಪ್ ಏರಿಯಾ ಇದರಲ್ಲಿ ಹಣೆ, ಮೂಗು, ಗಲ್ಲ, ಬಾಯಿಯ ಸುತ್ತಮುತ್ತಲ ಜಾಗ ಕವರ್ ಆಗುತ್ತದೆ. ಇಲ್ಲಿ ನೀವು ಮುಖದ ಇತರ ಭಾಗಗಕ್ಕಿಂತ ಹೆಚ್ಚು ಜಿಡ್ಡು ಜಮೆಗೊಂಡಿರುವುದನ್ನು ಕಾಣಬಹುದು. ಕಾರಣ, ಇಲ್ಲಿ ಹೆಚ್ಚು ತೈಲೀಯ ಗ್ರಂಥಿಗಳು ಅಡಗಿದ್ದು, ಅವು ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್, ಸ್ಕಿನ್ ಇರಿಟೇಶನ್‌ಗೆ ಮೂಲವಾಗುತ್ತದೆ.
ಸರಿಯಾದ ಕ್ಲೆನ್ಸರ್ ಆಯ್ಕೆ
ಯಾವಾಗಲೂ ನಾವು ಯೋಚಿಸುವುದೆಂದರೆ ನಾವು ಇಷ್ಟೆಲ್ಲ ದುಬಾರಿ ಕಾಸ್ಮೆಟಿಕ್ಸ್ ಕೊಂಡು ಬಳಸುತ್ತಿದ್ದೇವೆ, ಆದರೂ ಇಂಥ ಸಮಸ್ಯೆ ಬರುತ್ತಿರುವುದೇಕೆ? ಮುಖ್ಯ ವಿಷಯ ಎಂದರೆ ಎಲ್ಲಾ ದುಬಾರಿ ಪ್ರಾಡಕ್ಟ್ ಅತ್ಯುತ್ತಮ ಅಂತೇನಲ್ಲ. ನಿಮಗೆ ನಿಮ್ಮ ್ಡ ಝೋನ್ ಏರಿಯಾದಿಂದ ಜಿಡ್ಡು ಹೋಗಲಾಡಿಸಬೇಕಿದ್ದರೆ, ಪರ್ಫೆಕ್ಟ್ ಆದ ಕ್ಲೆನ್ಸರ್‌ನ್ನು ಆವರಿಸಿಕೊಂಡಿರಬೇಕು. ಅಂದ್ರೆ ನೀವು ಆರಿಸಿದ ಕ್ಲೆನ್ಸರ್‌ನಲ್ಲಿ ಆಲ್ಕೋಹಾಲ್ ಅಂಶ ಇರಬಾರದು. ಸಾಕಷ್ಟು ಮೈಲ್ಡ್ ಆಗಿರಬೇಕು. ಇದರಿಂದ ಚರ್ಮಕ್ಕೆ ಇರಿಟೇಶನ್ ಆಗುವುದಿಲ್ಲ ಹಾಗೂ ಹೆಚ್ಚಿನಂಶ ಜಿಡ್ಡು ಸುಲಭವಾಗಿ ಹೋಗಿಬಿಡುತ್ತದೆ. ಮತ್ತೊಂದು ಮುಖ್ಯ ವಿಷಯ ನೆನಪಿಡಬೇಕೆಂದರೆ, ಫೇಸ್ ವಾಶ್‌ನ್ನು 2 ಸಲಕ್ಕಿಂತ ಹೆಚ್ಚು ಬಾರಿ ಬಳಸಬಾರದು ಎಂಬುದು.
ವಾಟರ್ ಬೇಸ್ಡ್ ಮಾಯಿಶ್ಚರೈಸರ್
ಮೊದಲೇ ನನ್ನ ಚರ್ಮ ಆಯ್ಲಿ ಅದರ ಮೇಲೆ ಈ ಮಾಯಿಶ್ಚರೈಸರ್ ಬಳಸುವ ಸಲಹೆಯೇ ಎಂದು ನೀವು ಯೋಚಿಸುತ್ತಿದ್ದರೆ, ನಿಮ್ಮ ಯೋಚನೆ ತಪ್ಪು. ಏಕೆಂದರೆ ನೀವು ನಿಮ್ಮ ಜಿಡ್ಡಿನ ಚರ್ಮಕ್ಕೆ ಮಾಯಿಶ್ಚರೈಸರ್ ಹಚ್ಚದಿದ್ದರೆ, ನಿಮ್ಮ ಚರ್ಮ ಇನ್ನಷ್ಟು ಮತ್ತಷ್ಟು ಡ್ರೈ ಆದೀತು! ಅದರಿಂದ ಚರ್ಮ ಇನ್ನಷ್ಟು ಜಿಡ್ಡು ಜಿಡ್ಡಾಗುತ್ತದೆ. ಇದು ನಿಮ್ಮ ಚರ್ಮವನ್ನು ಹೈಡ್ರೇಟೆಡ್ ಆಗಿಡುತ್ತದೆ ಹಾಗೂ ಸ್ಕಿನ್ ಆಯ್ಲಿ ಆಗುವುದನ್ನೂ ತಪ್ಪಿಸುತ್ತದೆ.
ಪೋರ್ಸ್ ಸದಾ ಶುಚಿಯಾಗಿರಲಿ
ನಿಮ್ಮ ಚರ್ಮದ ಪೋರ್ಸ್ ಗಳನ್ನು ಸದಾ ಶುಚಿಯಾಗಿಟ್ಟುಕೊಂಡರೆ ನಿಮ್ಮನ್ನು ಕಾಡುವ ಮೊಡವೆಗಳ ಗೊಡವೆಯಿಂದ ದೂರವಿರಬಹುದು! ಹೇಗೆಂದರೆ, ಪೋರ್ಸ್ ಕ್ಲೋಸ್ ಆಗಿದ್ದರೆ ಜಿಡ್ಡು ಚರ್ಮದ ಒಳಗೇ ಇದ್ದುಬಿಡುತ್ತದೆ, ಅದರಿಂದ ಮೊಡವೆ ಹೆಚ್ಚುತ್ತದೆ. ಬದಲಿಗೆ ನೀವು ಇದನ್ನು ಸದಾ ನೀಟ್‌ಶುಚಿಯಾಗಿಟ್ಟುಕೊಂಡರೆ, ಸ್ಕಿನ್ ಅತ್ತ ಆಯ್ಲಿಯೂ ಆಗುವುದಿಲ್ಲ, ನಿಮಗೆ ಆ್ಯಕ್ನೆ, ಮೊಡವೆಗಳ ಗೊಡವೆಯೂ ಇರೋದಿಲ್ಲ.
ಎಕ್ಸ್ ಪೋಲಿಯೇಟಿಂಗ್ ಮಾಸ್ಕ್
ಸಾಮಾನ್ಯವಾಗಿ ಚರ್ಮ ತಜ್ಞರು ನೀಡುವ ಸಲಹೆ ಎಂದರೆ, ನೀವು ಸ್ಕಿನ್‌ನ್ನು ಆಗಾಗ ಎಕ್ಸ್ ಪೋಲಿಯೇಟ್ ಮಾಡಿಸುತ್ತಿರಬೇಕು ಅಂತ. ಇದರಿಂದ ಚರ್ಮದ ಕೊಳೆ ದೂರ ಆಗುವುದರ ಜೊತೆ, ಸ್ಕಿನ್ ಸಂಪೂರ್ಣ ಕ್ಲಿಯರ್ ಆಗುತ್ತದೆ. ಹೀಗಿರುವಾಗ, ನಿಮ್ಮ ಸ್ಕಿನ್ ಆಯ್ಲಿ ಆಗಿದ್ದು, ನೀವು ನಿಮ್ಮ T ಝೋನ್ ನಲ್ಲಿ ಜಿಡ್ಡು ಗಮನಿಸಿ ಟೆನ್ಶನ್‌ಗೆ ಒಳಗಾದರೆ, ನೀವು ವಾರದಲ್ಲಿ 1 ಸಲ ಅಗತ್ಯವಾಗಿ ಕೋಲಿನ್ ಕ್ಲೇಯುಕ್ತ ಮಾಸ್ಕನ್ನು ಮುಖಕ್ಕೆ ಬಳಸಬೇಕು. ಹಲವು ವಾರಗಳ ಬಳಿಕ ನಿಮ್ಮ ಮುಖದಿಂದ ನಿಧಾನವಾಗಿ ಜಿಡ್ಡಿನಂಶ ಕಣ್ಮರೆಯಾಗುತ್ತದೆ.
ರೋಸ್ ವಾಟರ್ ಆ್ಯಲೋವೇರಾ ಜೆಲ್
ನೀವು ಚರ್ಮದ ಮೇಲೆ ಎಷ್ಟು ನೈಸರ್ಗಿಕ ಸೌಂದರ್ಯ ವರ್ಧಕ ಬಳಸುತ್ತೀರೋ, ಚರ್ಮ ಅಷ್ಟೇ ಚೆನ್ನಾಗಿ ಬೆಳಗುತ್ತದೆ ಹಾಗೂ ಕ್ರಮೇಣ ಚರ್ಮದ ಸಮಸ್ಯೆಗಳೆಲ್ಲ ದೂರವಾಗುತ್ತವೆ. ಹೀಗಾಗಿ ನೀವು ಡೇಲಿ ಹತ್ತಿಯಿಂದ ನಿಮ್ಮ ಚರ್ಮಕ್ಕೆ ರೋಸ್ ವಾಟರ್ ತೀಡುತ್ತಿದ್ದರೆ ಉತ್ತಮ ಬದಲಾವಣೆ ಗಮನಿಸುವಿರಿ. ಜೊತೆಗೆ ಆ್ಯಲೋವೆರಾ ಜೆಲ್ ನಿಂದಲೂ ಚರ್ಮವನ್ನು ಮಸಾಜ್ ಮಾಡುತ್ತಿದ್ದರೆ, ಚರ್ಮದ Ph ಲೆವೆಲ್ ಬ್ಯಾಲೆನ್ಸ್ ಆಗಿರುವುದರ ಜೊತೆ ಚರ್ಮದಲ್ಲಿ ಜಿಡ್ಡು ಒಸರುವಿಕೆಯೂ ನಿಂತುಹೋಗುತ್ತದೆ. ಹೀಗಾಗಿ ಚರ್ಮ ಕ್ರಮೇಣ ನಾರ್ಮಲ್ ಆಗತೊಡಗುತ್ತದೆ.
ಹಲವು ಸಲ ಮುಖ ತೊಳೆಯಿರಿ
ನೀವು ನಿಮ್ಮ ಚರ್ಮ ಸದಾ ನಳನಳಿಸುತ್ತಾ ಇರಬೇಕೆಂದು ಬಯಸಿದರೆ, ನೀವು ಚರ್ಮದ ವಿಶೇಷ ಆರೈಕೆಯತ್ತ ಗಮನ ಕೊಡಬೇಕು. ಇದಕ್ಕಾಗಿ ಪ್ರತಿ ಸಲ ನೀವು ಮುಖ ತೊಳೆಯುವಾಗಲೂ ಫೇಸ್ ವಾಶ್‌ನ್ನೇ ಬಳಸಬೇಕು ಅಂತೇನಿಲ್ಲ, ಬದಲಿಗೆ ಡೇಲಿ 5-6 ಸಲ ನೀವು ಬರೀ ನೀರಿನಿಂದಲೇ ಮುಖ ತೊಳೆಯಿರಿ. ಇದರಿಂದ ನಿಮ್ಮ ಮುಖ ಚರ್ಮ ಬಹಳ ಕ್ಲಿಯರ್ ಆಗುತ್ತದೆ, ಜಿಡ್ಡಿನಂಶ ತೊಲಗುತ್ತದೆ. ಅಂದ್ರೆ ಮುಖ ಟೋಟಲಿ ಗ್ಲೋಯಿಂಗ್‌ಹೆಲ್ದಿ ಸಹ!
ಪೌಷ್ಟಿಕ ಆಹಾರ ಅತ್ಯಗತ್ಯ
ನಾವು ಆಂತರಿಕವಾಗಿ ಆರೋಗ್ಯದಿಂದಿದ್ದರೆ ಇಡೀ ದಿನ ಹೆಚ್ಚು ಆ್ಯಕ್ಟಿವ್ ಆಗಿರಬಹುದು. ಇದೇ ತರಹ ತ್ವಚೆ ಒಳಗಿನಿಂದ ಆರೋಗ್ಯವಾಗಿದ್ದರೆ, ಸಹಜವಾಗಿಯೇ ಮುಖದಲ್ಲಿ ಕಾಂತಿ ಹೊರಸೂಸುತ್ತಿರುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಸದಾ ಪೌಷ್ಟಿಕಾಂಶ ತುಂಬಿ ತುಳುಕುತ್ತಿರಬೇಕು, ಆಗ ಕಾಸ್ಮೆಟಿಕ್ಸ್ ಬಳಕೆಯ ಗೊಡವೆ ಇರೋದಿಲ್ಲ! ಬದಲಿಗೆ ನಿಮ್ಮ ಸ್ಕಿನ್ ನಿಮ್ಮ ಪೌಷ್ಟಿಕ ಆಹಾರದ ಕಾರಣವೇ ನಳನಳಿಸುತ್ತಾ ಇರುತ್ತದೆ. ಇದಕ್ಕಾಗಿ ನೀವು ನಿಮ್ಮ ದೈನಂದಿನ ಆಹಾರದಲ್ಲಿ ತಾಜಾ ಹಸಿರು ಎಲೆಗಳ ಸೊಪ್ಪು, ತರಕಾರಿ, ಹಣ್ಣುಗಳನ್ನು ಬಳಸಿರಿ. ದೇಹವನ್ನು ಸದಾ ಹೈಡ್ರೇಟೆಡ್ ಟಾಕ್ಸಿನ್ ರಹಿತ ಆಗಿ ಇರಿಸಿಕೊಳ್ಳಿ. ಇದಕ್ಕಾಗಿ ಧಾರಾಳ ನೀರು ಕುಡಿಯಿರಿ. ಜೊತೆಗೆ ಆಗಾಗ ನೀರು ಮಜ್ಜಿಗೆ, ನಿಂಬೆ ಪಾನಕ, ಎಳನೀರು, ಬಾರ್ಲಿ ನೀರು ಸೇವಿಸುತ್ತಿರಿ. ವಿಟಮಿನ್ ಭರಿತ ಆಹಾರ ಸೇವಿಸಿ, ಇದರಿಂದಾಗಿಯೇ ಚರ್ಮದಲ್ಲಿ ನೈಸರ್ಗಿಕ ಕಾಂತಿ ಉತ್ಪನ್ನವಾಗುವುದು ಹಾಗೂ ಚರ್ಮದ ಸಮಸ್ಯೆಗಳಿಗೆ ಟಾಟಾ ಬೈಬೈ ಹೇಳಬಹುದು.
– ಪಾರ್ವತಿ ಭಟ್