2019ರಲ್ಲಿ ಅರ್ಥಶಾಸ್ತ್ರಜ್ಞ ಸೂರಜ್ ಜಾಕೋಬ್ ಹಾಗೂ ಮಾನಶಾಸ್ತ್ರಜ್ಞ ಶ್ರೀಪರ್ಣಾ ಚಟ್ಟೋಪಾಧ್ಯಾಯ ಅವರು ನಡೆಸಿದ ಒಂದು ಅಧ್ಯಯನದ ಪ್ರಕಾರ, ಭಾರತದಲ್ಲಿ ಸುಮಾರು 14 ಲಕ್ಷ ಜನರು ವಿಚ್ಛೇದಿತರು ಇದ್ದಾರೆ. ಇದು ಒಟ್ಟಾರೆ ಜನಸಂಖ್ಯೆಯ ಶೇ.0.11 ಆಗಿದೆ. ಇದು ವಿವಾಹಿತರ 0.24% ಆಗಿದೆ. ಆಶ್ಚರ್ಯದ ಸಂಗತಿಯೆಂದರೆ, ಪ್ರತ್ಯೇಕವಾಗಿರುವವರ ಸಂಖ್ಯೆ ವಿಚ್ಛೇದಿತರ ಸಂಖ್ಯೆಗಿಂತ 3 ಪಟ್ಟು ಅಧಿಕವಾಗಿದೆ. ಪುರುಷರಿಗೆ ಹೋಲಿಸಿದರೆ ವಿಚ್ಛೇದಿತ ಹಾಗೂ ಗಂಡನಿಂದ ಪ್ರತ್ಯೇಕವಾಗಿರುವ ಮಹಿಳೆಯರ ಸಂಖ್ಯೆ ಅದೆಷ್ಟೋ ಹೆಚ್ಚಿಗೆ ಇದೆ. ವಿಚ್ಛೇದಿತ ಪುರುಷರು ಸಾಮಾನ್ಯವಾಗಿ ಮದುವೆಯಾಗುತ್ತಾರೆ. ಆದರೆ ವಿಚ್ಛೇದಿತ ಮಹಿಳೆಯರು ಏಕಾಂಗಿಯಾಗಿ ಉಳಿದುಬಿಡುತ್ತಾರೆ.
ಲವ್ ಮ್ಯಾರೇಜ್ ಅಥಾ ಅರೇಂಜ್ಡ್ ಮ್ಯಾರೇಜ್ ಆಗಿರಬಹುದು ಎಷ್ಟೋ ಸಲ ಪರಿಸ್ಥಿತಿ ಹೇಗಾಗಿ ಬಿಡುತ್ತದೆ? ಎಂದರೆ, ಮೊದಲು ಪರಸ್ಪರ ಅತಿಯಾಗಿ ಪ್ರೀತಿಸುವ ಗಂಡ ಹೆಂಡತಿಯರೇ ದೂರ ದೂರ ಆಗಿಬಿಡುತ್ತಾರೆ. ಪ್ರೀತಿಯ ಎಳೆಯಿಂದ ರೂಪಿಸಲ್ಪಟ್ಟ ಗಂಡ ಹೆಂಡತಿಯ ಸಂಬಂಧ ಆಕಸ್ಮಿಕವಾಗಿ ತುಂಡಾದಾಗ ಭಾವನಾತ್ಮಕವಾಗಿ ದುರ್ಬಲರಾಗಿರುವ ಸ್ತ್ರೀಪುರುಷರು ಗಾಢ ದುಃಖಕ್ಕೆ ಸಿಲುಕುತ್ತಾರೆ. ಗಮನದಲ್ಲಿಡಬೇಕಾದ ಸಂಗತಿಯೆಂದರೆ, ವೈವಾಹಿಕ ಜೀವನದಲ್ಲಿ ಸಂಗಾತಿ ನಿಕಟವಾಗಿದ್ದೂ ದೂರ ಇರುವಂತೆ ಅನುಭವ ಆಗುತ್ತದೆಯೇ? ಸಂಗಾತಿಯ ಬಾಹುಬಂಧನದಲ್ಲಿದ್ದರೂ ನಿಮಗೆ ಮೊದಲಿನ ಪ್ರೀತಿಯ ಅನುಭವ ಆಗುತ್ತಿಲ್ಲವೇ? ಸಂಗಾತಿ ನೆಪ ಹೇಳಿ ನಿಮ್ಮಿಂದ ದೂರವಾಗಲು ಪ್ರಯತ್ನಿಸುತ್ತಿದ್ದಾನೆಯೇ? ಒಂದು ವೇಳೆ `ಹೌದು’ ಎಂದಾದಲ್ಲಿ, ನೀವು ಈಗಲೇ ಸಂಭಾಳಿಸಿಕೊಳ್ಳಿ ಹಾಗೂ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧರಾಗಿ. ನೀವಿಬ್ಬರೂ ಗಮನಹರಿಸಬೇಕಾದ ಸಂಗತಿಯೆಂದರೆ, ನಿಮ್ಮ ಸಂಬಂಧವನ್ನು ದುರ್ಬಲಗೊಳಿಸುವುದರತ್ತ ಸನ್ನೆ ಮಾಡುವ ಸಂಗತಿಗಳಾವು ಎನ್ನುವುದನ್ನು ತಿಳಿದುಕೊಳ್ಳಿ.
ಪರಸ್ಪರ ನಿಕಟರಾಗಿರದಿರುವುದು
ಆಫೀಸಿನಿಂದ ಮನೆಗೆ ಬಂದ ನೀವು ಒಂದು ಕೋಣೆಯಲ್ಲಿ ಕುಳಿತಿದ್ದೀರಿ. ಆದರೆ ಒಬ್ಬರು ತಮ್ಮ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರಿನಲ್ಲಿ ಮತ್ತೊಬ್ಬರು ಟಿ.ವಿ ಅಥವಾ ಮೊಬೈಲಿನಲ್ಲಿ ವ್ಯಸ್ತರಾಗಿರಬಹುದು. ಪಾರ್ಟಿಯಲ್ಲಿ ಇಬ್ಬರೂ ಜೊತೆ ಜೊತೆಗೆ ಹೋಗಿರುವಿರಿ. ಆದರೆ ಒಬ್ಬರು ಒಂದು ಕೋಣೆಯಲ್ಲಿ ಇನ್ನೊಬ್ಬರು ಇನ್ನೊಂದು ಕೋಣೆಯಲ್ಲಿ ತಮ್ಮ ಸ್ನೇಹ ಬಳಗದೊಂದಿಗೆ ಹರಟುತ್ತಾ ಕಾಲಕಳೆಯುತ್ತಿದ್ದಾರೆ ಅಂದರೆ ಜೊತೆ ಜೊತೆಗೆ ಸೇರಿ ಆನಂದ ಪಡೆಯುವುದರ ಬದಲು, ತಮ್ಮ ತಮ್ಮ ಲೋಕದಲ್ಲಿ ವ್ಯಸ್ತರಾಗಿದ್ದರೆ, ಇದು ನಿಮ್ಮಿಬ್ಬರ ಹೆಚ್ಚುತ್ತಿರುವ ಅಂತರದ ಸಂಕೇತ.
ಜಗಳವನ್ನು ಬಿಟ್ಟುಬಿಟ್ಟಿದ್ದೇವೆ
ಒಂದು ವೇಳೆ ನೀವು ಪರಸ್ಪರರು ವಾದವಿವಾದ ಮಾಡುವುದು ಅಥವಾ ಜಗಳವಾಡುವುದನ್ನು ಬಿಟ್ಟುಬಿಟ್ಟರೆ ಇದೂ ಕೂಡ ಅಂತರ ಹೆಚ್ಚಿರುವುದರ ಸಂಕೇತವಾಗಿದೆ. ಒಂದು ವೇಳೆ ಜಗಳದ ಬಳಿಕ ನೀವು ಈ ವಿಷಯದ ಬಗ್ಗೆ ಮಾತುಕತೆ ನಡೆಸದಿದ್ದರೆ ಅಥವಾ ಸಂಗಾತಿಯ ಮಾತನ್ನು ಕೇಳಿಸಿಕೊಳ್ಳಲು ಸಿದ್ಧರಿರದಿದ್ದಲ್ಲಿ ಈ ನಿಮ್ಮ ಅಭ್ಯಾಸ ಸಂಬಂಧ ತುಂಡರಿಸುವುದರತ್ತ ಹೊರಟಿದೆ ಎನ್ನುವುದರತ್ತ ಕೈ ಬೆರಳು ಮಾಡಿ ತೋರಿಸುತ್ತದೆ. ಎಷ್ಟೋ ಸಲ ದಂಪತಿಗಳ ನಡುವೆ ನಡೆಯುವ ಜಗಳಗಳು ಅವರ ನಿಕಟತೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಆದರೆ ಇದೆಲ್ಲ ಸಾಧ್ಯವಾಗುವುದು ಇಬ್ಬರೂ ಜಗಳದ ಮೂಲದತನಕ ತಲುಪಿ, ಪರಸ್ಪರರ ಮಾತುಗಳನ್ನು ಆಲಿಸಿ, ಅರ್ಥ ಮಾಡಿಕೊಂಡು ಮನಸ್ಸಿನ ಕೊಳೆಯನ್ನು ದೂರ ಮಾಡಲು ಪ್ರಯತ್ನ ಮಾಡುತ್ತೀರೊ ಆಗ ಮಾತ್ರ ಯಶಸ್ಸು ಸಿಗುತ್ತದೆ. ಆದರೆ ಈ ರೀತಿಯ ಪ್ರಯತ್ನ ಮಾಡದೇ ಇದ್ದರೆ, ನೀವು ದೂರಾಗುವ ದಿನಗಳು ಹತ್ತಿರ ಬಂದಿವೆ ಎಂದರ್ಥ.
ಹೃದಯ ಒಡೆಯಲು ಕಾರಣಗಳು
ಅಮೆರಿಕದ ಕಪಲ್ಸ್ ಥೆರಪಿಸ್ಟ್ ಕೆರಿಕೊಲ್ ಹೇಳುವುದೇನೆಂದರೆ, ಕೆಲವು ಸಂಗತಿಗಳು ಸಂಬಂಧದಲ್ಲಿ ಬಿರುಕುಂಟಾಗಲು ಕಾರಣವಾಗುತ್ತವೆ. ಹಾಗಾಗಿ ಪ್ರತಿಸಲ ಸಂಗಾತಿಯನ್ನು ಟೀಕಿಸುವುದು, ಅಪಶಬ್ದಗಳನ್ನು ಬಳಸುವುದು, ತನ್ನನ್ನು ತಾನು ಸುಪೀರಿಯರ್ ಎಂದು ತೋರಿಸಿಕೊಳ್ಳಲು ಪ್ರಯತ್ನಿಸುವುದು, ಯಾವುದೇ ವಿವಾದದ ಬಗ್ಗೆ ಮುಕ್ತವಾಗಿ ಮಾತನಾಡುವ ಬದಲು ಮಾತನ್ನೇ ನಿಲ್ಲಿಸಿಬಿಡುವುದು ಮುಂತಾದವು. ಒಂದು ವೇಳೆ ನೀವು ಪರಸ್ಪರರ ಬಗ್ಗೆ ಹೀಗೆಯೇ ವರ್ತಿಸುತ್ತಿದ್ದರೆ, ನಿಮ್ಮಿಬ್ಬರ ನಡುವೆ ಅಂತರ ಬಂದಿದೆ ಎಂದರ್ಥ.
ಮನಸ್ಸಿನ ಧ್ವನಿಯನ್ನು ನಿರ್ಲಕ್ಷಿಸುವುದು
ಸಾಮಾನ್ಯವಾಗಿ ನಾವು ನಮ್ಮ ಮನಸ್ಸಿನ ಮಾತನ್ನು ಕೇಳಿಸಿಕೊಳ್ಳುವುದಿಲ್ಲ. ಆ ಧ್ವನಿ ಅತ್ಯಂತ ಶಾಂತ ಹಾಗೂ ಮೆಲ್ಲನೆಯದ್ದು. ಅದು ಬಾಹ್ಯ ಜಗತ್ತಿನ ಗೌಜು ಗದ್ದಲದ ನಡುವೆ ನಿರ್ಲಕ್ಷಿಸಲ್ಪಡುತ್ತದೆ. ಎಷ್ಟೋ ಸಲ ಹೃದಯದಿಂದ ಧ್ವನಿ ಹೊರಹೊಮ್ಮುತ್ತಿರುತ್ತದೆ. ಅದೇನೆಂದರೆ ಈಗ ನಾನು ಸಂಗಾತಿಯನ್ನು ಪ್ರೀತಿಸುತ್ತಿಲ್ಲ ಅಥವಾ ಆತ ನನ್ನಿಂದ ದೂರವಾಗಿದ್ದಾನೆ.
ಆದರೆ ತಾರ್ಕಿಕ ಪ್ರಮಾಣದ ಅಭಾವದಲ್ಲಿ ನಾವು ಇದರ ಬಗ್ಗೆ ಗಮನಕೊಡುವುದಿಲ್ಲ ಹಾಗೂ ವಾಸ್ತವದಿಂದ ದೂರ ಓಡುತ್ತೇವೆ. ಆದರೆ ಆಮೇಲೆ ತಿಳಿಯುವ ಸಂಗತಿಯೇನೆಂದರೆ, ನನ್ನ ಮನಸ್ಸಿನ ಧ್ವನಿ ಸರಿಯಿತ್ತು ಹಾಗೂ ನಿಮ್ಮ ಸಂಗಾತಿ ನಿಜವಾಗಿಯೂ ದೂರ ಹೋಗಿಬಿಟ್ಟಿದ್ದಾನೆ.
ಸಂಗಾತಿಯ ನಿಯಂತ್ರಣ ಅಸಹನೀಯ
ಒಂದು ವೇಳೆ ಒಬ್ಬರು ತನ್ನನ್ನು ತಾನು ಇನ್ನೊಬ್ಬರ ನಿಯಂತ್ರಣದಲ್ಲಿ ಉಸಿರುಗಟ್ಟಿದಂತೆ ಅನುಭವ ಮಾಡಿಕೊಳ್ಳುತ್ತಿದ್ದರೆ, ಮೇಲಿಂದ ಮೇಲೆ ಹೇಳಿಯೂ ಕೂಡ ಸಂಗಾತಿಯ ಮಾತು ಕೇಳಿಸಿಕೊಳ್ಳದಿದ್ದರೆ, ಆತ ತನ್ನನ್ನು ತಾನು ಸೋತವನಂತೆ ಭಾವಿಸಿಕೊಳ್ಳತೊಡಗುತ್ತಾನೆ. ಇಂತಹ ಸಂಬಂಧ ಹೆಚ್ಚು ಕಾಲ ನಿಲ್ಲುವುದಿಲ್ಲ.
ಬಾಡಿ ಲ್ಯಾಂಗ್ವೇಜ್ ನಲ್ಲಿ ಪರಿವರ್ತನೆ
ನೀವು ಯಾರೊಂದಿಗಾದರೂ ರಿಲೇಶನ್‌ನಲ್ಲಿ ಇದ್ದರೆ, ಪ್ರೀತಿಸುತ್ತಿದ್ದರೆ, ಹಗಲು ರಾತ್ರಿ ಅವರನ್ನೇ ನೋಡಬೇಕೆಂದು ಇಚ್ಛಿಸುತ್ತೀರಿ ಅಥವಾ ಜೊತೆಗಿರುವ ಅನುಭವ ಮಾಡಿಕೊಳ್ಳುತ್ತೀರಿ. ಆದರೆ ಯಾರಾದರೂ ನಿಮ್ಮ ಹೃದಯವನ್ನು ಚೂರು ಚೂರು ಮಾಡಿದ್ದರೆ ಅಥವಾ ಆ ವ್ಯಕ್ತಿಯ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಪ್ರೀತಿ ಇರದೇ ಇದ್ದರೆ ಆ ವ್ಯಕ್ತಿಯನ್ನು ಎದುರಿಸಲು ಅಥವಾ ಆ ವ್ಯಕ್ತಿಯ ಕಡೆ ನೋಡಲು ಕೂಡ ಮನಸ್ಸು ಹಿಂದೇಟು ಹಾಕುತ್ತದೆ. ಪ್ರೀತಿಯಲ್ಲಿ ವ್ಯಕ್ತಿ ನಿಕಟವಾಗಲು ಹಾಗೂ ಮಾತನಾಡಲು ನೆಪ ಹುಡುಕುತ್ತಾನೆ. ಆದರೆ ಇಬ್ಬರ ನಡುಿ ಮನಸ್ತಾಪ ಉಂಟಾದರೆ, ಇಬ್ಬರೂ ಪರಸ್ಪರರಿಂದ ದೂರಾಗಲು ನೆಪ ಹುಡುಕುತ್ತಾರೆ. ಯಾವ ದಂಪತಿಗಳು ಮಾನಸಿಕವಾಗಿ ನಿಕಟವಾಗಿರುತ್ತಾರೋ, ಅವರ ಬಾಡಿ ಲ್ಯಾಂಗ್ವೇಜ್ ವಿಭಿನ್ನವಾಗಿರುತ್ತದೆ. ಉದಾಹರಣೆಗೆ ಗೊತ್ತಿಲ್ಲದೆಯೇ ಒಬ್ಬರು, ಇನ್ನೊಬ್ಬರ ಎದುರು ತಲೆಬಾಗಿಸುವುದು, ಹಾಡು ಗುನುಗುನಿಸುವುದು, ಕಾಳಜಿ ತೋರಿಸುವುದು, ಒಬ್ಬರು ಇನ್ನೊಬ್ಬರ ಮಾತುಗಳನ್ನು ಗಮನವಿಟ್ಟು ಆಲಿಸುವುದು ಮುಂತಾದವು. ಆದರೆ ಯಾವ ಸಂಬಂಧ ಬ್ರೇಕ್ ಅಪ್‌ಗೆ ಹತ್ತಿರವಾಗಿರುತ್ತೋ, ಆಗ ಮಾತುಗಳು ಕಡಿಮೆ, ವಿವಾದ ಜಾಸ್ತಿ ಆಗುತ್ತದೆ. ಪರಸ್ಪರರ ಹತ್ತಿರ ಕುಳಿತುಕೊಳ್ಳುವ ಬದಲು ಎದುರುಬದುರು ಕುಳಿತುಕೊಳ್ಳುತ್ತೀರಿ ಮತ್ತು ಕೇರ್ ಮಾಡುವುದರ ಬದಲು ಪರಸ್ಪರರನ್ನು ನಿರ್ಲಕ್ಷ್ಯ ಮಾಡತೊಡಗುತ್ತೀರಿ.
ಐ ಕಾಂಟ್ಯಾಕ್ ಕಡಿಮೆಯಾಗುವುದು
ನಿಮಗೆ ಏನು ಇಷ್ಟವೋ ಅದನ್ನು ನೀವು ನೋಡಲು ಬಯಸುವಿರಿ. ಪ್ರೀತಿಯಲ್ಲಿ ದೃಷ್ಟಿ ಮಿಲನ ಆಗುತ್ತಲೇ ಇರುತ್ತದೆ. ಆದರೆ ಇಬ್ಬರೂ ಪರಸ್ಪರ ನೋಡುತ್ತಿದ್ದಂತೆ, ದೃಷ್ಟಿಯನ್ನು ಹಠಾತ್ತನೇ ಹಿಂದಕ್ಕೆ ಪಡೆಯುತ್ತಿದ್ದರೆ, ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದನ್ನು ನಿಲ್ಲಿಸಿಬಿಟ್ಟರೆ ನೀವು ಬ್ರೇಕ್ ಅಪ್‌ಗೆ ಹತ್ತಿರವಾಗುತ್ತಿದ್ದೀರಿ ಎಂದರ್ಥ.
ಈ ಕುರಿತಂತೆ 1970ರಲ್ಲಿ ಸೋಶಿಯಲ್ ಸೈಕಾಲಜಿಸ್ಟ್ ಜಿಕ್ ರುಬಿನ್ ಮುಖಾಂತರ ದಂಪತಿಗಳ ನಡುವಿನ ಐ ಕಾಂಟ್ಯಾಕ್ಟ್ ಆಧಾರದ ಮೇಲೆ ಅವರ ಸಂಬಂಧದ ಆಳವನ್ನು ಅಳೆಯುವ ಪ್ರಯತ್ನ ಮಾಡಲಾಯಿತು. ದಂಪತಿಗಳನ್ನು ಕೋಣೆಯಲ್ಲಿ ಏಕಾಂಗಿಯಾಗಿ ಬಿಡಲಾಯಿತು. ಯಾವ ದಂಪತಿಗಳ ನಡುವೆ ಗಾಢ ಪ್ರೀತಿಯಿತ್ತೋ, ಅವರು ಹೆಚ್ಚು ಹೊತ್ತಿನ ತನಕ ತಮ್ಮ ಸಂಗಾತಿಯನ್ನು ನೋಡುವುದರಲ್ಲಿ ತಲ್ಲೀನರಾಗಿರುವುದು ಕಂಡುಬಂತು. ಕಡಿಮೆ ಪ್ರೀತಿಯಿರುವ ದಂಪತಿಗಳ ನಡುವೆ ಅಂತಹ ಅನುಬಂಧ ಕಂಡುಬರಲಿಲ್ಲ.
ಬೇರೊಬ್ಬರ ಜೊತೆಗೆ ಬೆಸೆದಾಗ
ನೀವು ನಿಮ್ಮ ಸಂಗಾತಿಯ ಜೊತೆಗೆ ಖುಷಿಯಿಂದಿರದಿದ್ದರೆ, ಬೇರೊಬ್ಬ ವ್ಯಕ್ತಿಯ ಜೊತೆಗೆ ಎಮೋಷನಲಿ ಅಟ್ಯಾಚ್ಡ್ ಆಗಿರುವುದು ಹಾಗೂ ಅಫೇರ್ ಹೊಂದುವ ಸಾಧ್ಯತೆ ಹೆಚ್ಚುತ್ತದೆ. ಅಂದಹಾಗೆ ಇಂದಿನ ವೈಜ್ಞಾನಿಕ ಯುಗದಲ್ಲಿ ಆನ್ ಲೈನ್ ಫ್ಲರ್ಟಿಂಗ್ ನಂತಹ ಆಪ್ಶನ್ ಲಭ್ಯವಾಗಿವೆ. ಸ್ಮಾರ್ಟ್ ಫೋನ್ ಹಾಗೂ ಸೋಶಿಯಲ್ ಮೀಡಿಯಾಗಳ ಮುಖಾಂತರ ಸಂಗಾತಿಗೆ ಗೊತ್ತಿಲ್ಲದಂತೆ ಬೇರೊಬ್ಬರೊಂದಿಗೆ ಕಾಂಟ್ಯಾಕ್ಟ್ ನಲ್ಲಿರುವ ಸಾಧ್ಯತೆ ಇದೆ.
ಒಂದು ವೇಳೆ ನೀವು ಕೂಡ ಇಂಥದೇ ಅಫೇರ್‌ನಲ್ಲಿ ಸಿಲುಕಿಕೊಂಡಿದ್ದರೆ, ನೀವು ನಿಮ್ಮ ಖುಷಿಯನ್ನು ಸೆಲೆಬ್ರೇಟ್ ಮಾಡಲು ಹಾಗೂ ನಿಮ್ಮ ತೊಂದರೆ ತಾಪತ್ರಯಗಳನ್ನು ಹೇಳಿಕೊಳ್ಳಲು ಬೇರೊಬ್ಬರನ್ನು ಹುಡುಕಿಕೊಂಡಿದ್ದರೆ, ಈಗ ಈ ಸಂಬಂಧದ ಬಗ್ಗೆ ಗಂಭೀರವಾಗಿ ಯೋಚಿಸುವ ಸಮಯ ಬಂದಿದೆ ಎಂದರ್ಥ.
ಬೇರೊಬ್ಬರೊಂದಿಗೆ ವ್ಯಸ್ತರಾಗಿರುವುದು
ಎಷ್ಟೋ ಸಲ ನಾವು ಸಂಗಾತಿ ದೂರ ಆಗಿರುವುದರ ಅನುಭವವನ್ನು ಬೇರೊಬ್ಬರೊಂದಿಗೆ ನಿಕಟತೆ ಹೆಚ್ಚಿಸಿಕೊಳ್ಳುವುದರ ಮೂಲಕ ಅದರ ನೋವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಅದರಲ್ಲೂ ಮಹಿಳೆಯರು ತಮ್ಮ ರಿಲೇಶನ್ ಶಿಪ್ ಬಗ್ಗೆ ಖುಷಿಯಿಂದರದಿದ್ದರೆ, ತಮ್ಮ ನೋವನ್ನು ಮರೆಯಲು ಅದರ ಮೇಲೆ ಫೋಕಸ್ ಮಾಡುವ ಬದಲು ಬೇರೆಯವರ ಜೀವನದಲ್ಲಿ ನಡೆಯುವ ತೊಂದರೆಗಳೊಂದಿಗೆ ಸಂಘರ್ಷ ನಡೆಸುತ್ತಾರೆ.
ಹೇಳಿಕೊಳ್ಳಲು ಏನು ಇರುವುದಿಲ್ಲ
ನೀವು ನಿಮ್ಮ ಜೀವನದ ವಿಶೇಷ ದಿನಗಳನ್ನು ಮುಂದೂಡುತ್ತಿದ್ದರೆ, ಸಂಗಾತಿ ನಿಮ್ಮ ಬಳಿ ಹಿಂತಿರುಗುವ ನಿರೀಕ್ಷೆ ಇರುವುದಿಲ್ಲ. ಸಂಗಾತಿಯ ಆಗಮನದ ಬಳಿಕ ಒಂದು ಕೋಣೆಯಲ್ಲಿ ಅವರು, ಇನ್ನೊಂದು ಕೋಣೆಯಲ್ಲಿ ನೀವು ಬಿಜಿಯಾಗಿದ್ದರೆ, ಸಂಬಂಧದ ಆಕರ್ಷಣೆ ನಿಮಗೆ ಕಡಿಮೆಯಾಗಿದೆ ಎಂದರ್ಥ.
ಮಾತುಗಳ ಮೇಲೆ ಗಮನಕೊಡದಿರುವುದು
ಒಳ್ಳೆಯ ಸಂಬಂಧಕ್ಕೆ ಪರಸ್ಪರರ ಮಾತುಗಳನ್ನು ಆಲಿಸುವುದು, ಅದರ ಬಗ್ಗೆ ಗಮನ ಕೊಡುವುದು ಅತ್ಯವಶ್ಯ. ಎಷ್ಟೇ ಮಾತನಾಡಿದರೂ ಏನೂ ಉಪಯೋಗವಾಗುವುದಿಲ್ಲ ಎಂದು ನಿಮಗನ್ನಿಸಿದರೆ, ಇದು ಸಂಬಂಧ ದುರ್ಬಲಗೊಳ್ಳುವುದರ ಲಕ್ಷಣವಾಗಿದೆ. ಏಕೆಂದರೆ ಸಂಬಂಧದ ಬಲವರ್ಧನೆಗೆ ಪರಸ್ಪರರ ಮಾತುಗಳನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಆಲಿಸುವುದು ಅತ್ಯಗತ್ಯ. ಇದರಿಂದ ಅಸಮಾಧಾನ ಹಾಗೂ ಕೋಪ ತಣ್ಣಗಾಗುತ್ತದೆ.
ಭವಿಷ್ಯದ ಕನಸಿನ ಪಯಣ
ನೀವು ಮುಂಬರುವ ನೆಮ್ಮದಿಯುತ ಭವಿಷ್ಯದ ಕನಸಿನಲ್ಲಿ ಸಂಗಾತಿಗೆ ಜಾಗ ಕೊಡದೇ ಇದ್ದರೆ ಅದು ಸಂಗಾತಿಯೊಂದಿಗಿನ ಹೆಚ್ಚುತ್ತಿರುವ ಭಾವನಾತ್ಮಕ ಅಂತರವಾಗಿದೆ.
ನಂಬಿಕೆಯ ಕೊರತೆ
ಸೈಕಾಲಜಿಸ್ಟ್ ಜಾನ್ ಗೌಟ್ ಮ್ಯಾನ್ ಸುಮಾರು 4 ದಶಕಗಳ ಕಾಲ ನಡೆಸಿದ ಅಧ್ಯಯನದಿಂದ ಕಂಡುಬಂದ ಸಂಗತಿಯೆಂದರೆ, ಯಾವ ದಂಪತಿಗಳು ದೀರ್ಘಾವಧಿತನಕ ನಂಟು ಹೊಂದಿರುತ್ತಾರೊ, ಅವರು 86% ಸಮಯವನ್ನು ಪರಸ್ಪರರಿಗಾಗಿ ಕೊಡುತ್ತಾರೆ. ಅದು ಅಫೆಕ್ಶನ್ ಕಾರಣದಿಂದಲ್ಲ, ಅದು ಪರಸ್ಪರರ ಮೇಲಿನ ನಂಬಿಕೆಯ ಕಾರಣದಿಂದ ಆಗುತ್ತದೆ. ಅರು ಗಂಭೀರ ವಿಷಯಗಳ ಬಗ್ಗೆ ಪರಸ್ಪರರ ಅಭಿಪ್ರಾಯ ಅರಿಯುವುದು ಹಾಗೂ ಸಹಾಯ ಪಡೆಯಲು ಪ್ರಯತ್ನ ಕೂಡ ಮಾಡುತ್ತಾರೆ. ಆದರೆ ಸಂಬಂಧ ದುರ್ಬಲವಾಗಿದ್ದರೆ ನಂಬಿಕೆ ಕೂಡ ಹೊರಟುಹೋಗುತ್ತದೆ.
ಮುಗುಳ್ನಗೆ ಬೀರದಿರುವುದು
ಒಂದು ವೇಳೆ ದೀರ್ಘಾವಧಿಯ ತನಕ ಪರಸ್ಪರರತ್ತ ನೋಡಿ ಮುಗುಳ್ನಗುವುದು ಇಲ್ಲವೇ ಕೀಟಲೆ ಮಾಡುವುದನ್ನು ಮರೆತುಬಿಟ್ಟಿದ್ದರೆ ಸಂಬಂಧ ಕೊನಗೊಳ್ಳುತ್ತ ಹೊರಟಿದೆ ಎಂದರ್ಥ. ಸರಳ ಹಾಗೂ ತನ್ನತನ ಇವರು ಮುಗುಳ್ನಗೆ ಸಂಬಂಧದ ಗಾಢತೆಗೆ ಪುರಾವೆಯಾಗಿದೆ. ಪರಸ್ಪರರ ಹೊರತಾಗಿ ಯಾವುದೇ ಷರತ್ತಿಲ್ಲದೆ ಪ್ರೀತಿಸುವವರ ಮುಖದಲ್ಲಿ ಮುಗುಳ್ನಗೆ ಸಹಜವಾಗಿಯೇ ಅರಳುತ್ತದೆ.
ಭಿನ್ನಾಭಿಪ್ರಾಯ ವಿವಾದವಾದಾಗ
ಸಂಗಾತಿಯ ಜೊತೆಗೆ ಯಾವುದಾದರೂ ವಿಷಯಕ್ಕೆ ಸಂಬಂಧಪಟ್ಟಂತೆ ಭಿನ್ನಾಭಿಪ್ರಾಯ ಉಂಟಾಗುವುದು ಸಹಜ. ಆದರೆ ಈ ವಾದವಿವಾದ ಆರೋಗ್ಯಕರವಾಗಿರದೆ, ಜಗಳಗಳ ಮುಖಾಂತರ ಕೊನೆಗೊಳ್ಳುತ್ತಿದ್ದರೆ, ಇಬ್ಬರಲ್ಲಿ ಯಾರೊಬ್ಬರೂ ಕಾಂಪ್ರಮೈಸ್ ಆಗಲು ತಯಾರಾಗದಿದ್ದರೆ ಸಂಬಂಧ ಹೆಚ್ಚು ಸಮಯ ಉಳಿಯವಂಥದ್ದಲ್ಲ ಎಂದರ್ಥ.
ಇಬ್ಬರೂ ಪ್ರಯತ್ನ ಕೈಬಿಟ್ಟರೆ ನಿಮ್ಮ ಸಂಬಂಧ ಎಷ್ಟೇ ಕಂಫರ್ಟೆಬಲ್ ಆಗಿರದೇ ಇರಬಹುದು. ನೀವು ಅದರಲ್ಲಿ ಯಾವಾಗಲೂ ಸುಧಾರಣೆ ಮಾಡುವ ಪ್ರಯತ್ನ ಮಾಡುತ್ತಾ ಇರಬೇಕು. ತಪ್ಪು ಮಾಡಿದಾಗ ಕ್ಷಮೆ ಕೇಳುವುದು, ಸಂಗಾತಿಗೆ ಸರ್ಪ್ರೈಸ್ ಕೊಡುವುದು, ನಿಮ್ಮ ಒಳ್ಳೆಯತನವನ್ನು ಪ್ರದರ್ಶಿಸುವುದು, ಚಿಕ್ಕ ಪುಟ್ಟ ವಿಷಯಗಳ ಮುಖಾಂತರ ಸಂಗಾತಿಯ ಮನ ಗೆಲ್ಲುವಂತಹ ಸಂಗತಿಗಳು ಸಂಬಂಧ ತುಂಡರಿಸುವುದನ್ನು ತಡೆಯುತ್ತವೆ. ಒಂದು ವೇಳೆ ನಿಮ್ಮ ಸಂಗಾತಿ ಇಂತಹ ಪ್ರಯತ್ನ ಮಾಡುವುದನ್ನು ಬಿಟ್ಟುಬಿಟ್ಟಿದ್ದರೆ ಮತ್ತು ನಿಮ್ಮ ತಪ್ಪುಗಳ ಮೇಲೆಯೇ ಗಮನ ಕೇಂದ್ರೀಕರಿಸುತ್ತಿದ್ದರೆ, ಸಂಗಾತಿ ನಿಮ್ಮಿಂದ ದೂರವಾಗುತ್ತಿದ್ದಾನೆ ಎಂದರ್ಥ.
ಹೊಗಳುವುದನ್ನು ನಿಲ್ಲಿಸಿದಾಗ
ಸಂಬಂಧದ ಗಟ್ಟಿತನಕ್ಕೆ ಕಾಲಕಾಲಕ್ಕೆ ಒಬ್ಬರು ಇನ್ನೊಬ್ಬರನ್ನು ಪ್ರಶಂಸಿಸುವುದು ಮುಖ್ಯವಾಗಿರುತ್ತದೆ. ನೀವು ಪರಸ್ಪರರು ಫಾರ್ ಗ್ರಾಂಟೆಡ್ ಆಗಿ ತೆಗೆದುಕೊಳ್ಳುತ್ತಿದ್ದರೆ, ಹೊಗಳುವುದನ್ನು ನಿಲ್ಲಿಸಿಬಿಟ್ಟಿದ್ದರೆ, ಕ್ರಮೇಣ ಇಬ್ಬರ ನಡುವೆ ದೂರುಗಳೇ ಹೆಚ್ಚಾಗತೊಡಗುತ್ತವೆ. ಅದು ನಿಮ್ಮನ್ನು ಬ್ರೇಕ್ ಅಪ್‌ನತ್ತ ಕೊಂಡೊಯ್ಯುತ್ತದೆ.
ಜಾನ್ ಗೌಟ್ ಮ್ಯಾನ್ 20 ವರ್ಷಗಳ ತನಕ 200 ಜೋಡಿಗಳ ಕುರಿತು ನಡೆಸಿದ ಅಧ್ಯಯನದ ನಿಷ್ಕರ್ಷೆಯಿಂದ ತಿಳಿದುಬಂದದ್ದೇನೆಂದರೆ, ಯಾವುದೇ ಸಂಬಂಧದ ಸಾಫಲ್ಯ ಜೋಡಿಗಳ ಮುಖಾಂತರ ಪರಸ್ಪರ ವಿವಾದ ಹಾಗೂ ಜಗಳಗಳನ್ನು ಸಮರ್ಥ ರೀತಿಯಲ್ಲಿ ಬಿಡಿಸಿಕೊಳ್ಳುವುದರ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಎಂದೂ ಜಗಳವಾಡದೇ ಇರುವುದು ಒಳ್ಳೆಯ ಸಂಬಂಧದ ಲಕ್ಷಣವಲ್ಲ. ಆದರೆ ಪುನಃ ಒಂದಾಗುವುದು ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಆದರೆ ಸಂಬಂಧದಲ್ಲಿ ಅತಿಯಾದ ಮನಸ್ತಾಪ ಉಂಟಾಗುತ್ತಿದ್ದರೆ, ಸಂಬಂಧ ಮುಂದುವರಿಸಿಕೊಂಡು ಹೋಗುವುದರಿಂದ ಉಸಿರುಗಟ್ಟಿದಂತೆ ಆಗುತ್ತಿದ್ದರೆ, ಸಂಬಂಧವನ್ನು ಮುಂದುವರಿಸುವಲ್ಲಿ ಯಾವುದೇ ಅರ್ಥವಿಲ್ಲ.
– ಗೌರಿ
ಸಾಮಾನ್ಯವಾಗಿ ನಾವು ನಮ್ಮ ಮನಸ್ಸಿನ ಮಾತನ್ನು ಕೇಳಿಸಿಕೊಳ್ಳುವುದಿಲ್ಲ. ಆ ಧ್ವನಿ ಅತ್ಯಂತ ಶಾಂತ ಹಾಗೂ ಮೆಲ್ಲನೆಯದ್ದು. ಅದು ಬಾಹ್ಯ ಜಗತ್ತಿನ ಗೌಜು ಗದ್ದಲದ ನಡುವೆ ನಿರ್ಲಕ್ಷಿಸಲ್ಪಡುತ್ತದೆ. ಎಷ್ಟೋ ಸಲ ಹೃದಯದಿಂದ ಧ್ವನಿ ಹೊರಹೊಮ್ಮುತ್ತಿರುತ್ತದೆ. ಅದೇನೆಂದರೆ ಈಗ ನಾನು ಸಂಗಾತಿಯನ್ನು ಪ್ರೀತಿಸುತ್ತಿಲ್ಲ ಅಥವಾ ಆತ ನನ್ನಿಂದ ದೂರವಾಗಿದ್ದಾನೆ.
ಆದರೆ ತಾರ್ಕಿಕ ಪ್ರಮಾಣದ ಅಭಾವದಲ್ಲಿ ನಾವು ಇದರ ಬಗ್ಗೆ ಗಮನಕೊಡುವುದಿಲ್ಲ ಹಾಗೂ ವಾಸ್ತವದಿಂದ ದೂರ ಓಡುತ್ತೇವೆ. ಆದರೆ ಆಮೇಲೆ ತಿಳಿಯುವ ಸಂಗತಿಯೇನೆಂದರೆ, ನನ್ನ ಮನಸ್ಸಿನ ಧ್ವನಿ ಸರಿಯಿತ್ತು ಹಾಗೂ ನಿಮ್ಮ ಸಂಗಾತಿ ನಿಜವಾಗಿಯೂ ದೂರ ಹೋಗಿಬಿಟ್ಟಿದ್ದಾನೆ.
ಎಷ್ಟೋ ಸಲ ನಾವು ಸಂಗಾತಿ ದೂರ ಆಗಿರುವುದರ ಅನುಭವವನ್ನು ಬೇರೊಬ್ಬರೊಂದಿಗೆ ನಿಕಟತೆ ಹೆಚ್ಚಿಸಿಕೊಳ್ಳುವುದರ ಮೂಲಕ ಅದರ ನೋವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಅದರಲ್ಲೂ ಮಹಿಳೆಯರು ತಮ್ಮ ರಿಲೇಶನ್ ಶಿಪ್ ಬಗ್ಗೆ ಖುಷಿಯಿಂದರದಿದ್ದರೆ, ತಮ್ಮ ನೋವನ್ನು ಮರೆಯಲು ಅದರ ಮೇಲೆ ಫೋಕಸ್ ಮಾಡುವ ಬದಲು ಬೇರೆಯವರ ಜೀವನದಲ್ಲಿ ನಡೆಯುವ ತೊಂದರೆಗಳೊಂದಿಗೆ ಸಂಘರ್ಷ ನಡೆಸುತ್ತಾರೆ.