ಬೆಡಗಿಗೆ ಮರುಳಾಗಬೇಡಿ :
ನೀವು ಈ ಮಾಡೆಲ್ ಆಲ್ಯನ್ ಅಲೆಗ್ಸಾಂಡರ್ ಳ ಬೆಡಗಿಗೆ ಮರುಳಾಗದಿರಿ, ಏಕೆಂದರೆ ಆಕೆ ಇಂಥ ಶೋಗಳ ಬೆನ್ನಲ್ಲೇ ನಿಬ್ಬೆರಗಾಗಿಸುವ ಕೆಲಸ ಮಾಡುತ್ತಾಳೆ. ವಿಜ್ಞಾನಕ್ಕೆ ತಮ್ಮನ್ನು ಮೀಸಲಾಗಿರಿಸಿಕೊಂಡ ರಷ್ಯನ್ ದಂಪತಿಯ ಈ ಮಗಳು ಬಲು ಕ್ರಿಯೇಟಿವ್ ಹಾಗೂ ತಾಯಿತಂದೆಯರ ಹೆಸರನ್ನು ಬೆಳುಗುವಳೀಕೆ! ಇತ್ತೀಚೆಗೆ ಈಕೆ ಹೆಂಗಸರ ಏಜಿಂಗ್ ಕುರಿತಾಗಿ ಪ್ರಯೋಗ ನಡೆಸುತ್ತಿದ್ದಾಳೆ. ಮ್ಯೂಸಿಕ್, ಮಾಡೆಲಿಂಗ್ ಗೆ ಬಂದಳು ಅಂತ ಇವಳಿಗೆ ತಲೆ ಇಲ್ಲ ಅಂತ ತಿಳಿಯಬೇಡಿ!
ನಾವು ಖಂಡಿತಾ ಸಕ್ಸೆಸ್ ಆಗ್ತೀವಿ! :
ಭಾರತದಲ್ಲಿ ಹೇಗೆ ದಲಿತರು ಹಿಂದುಳಿದ ಮಹಿಳೆಯರ ಉನ್ನತ ಸ್ಥಾನ ಕೇವಲ 12% ಇದೆಯೋ, ಹಾಗೆಯೇ ಅಮೆರಿಕಾದಲ್ಲಿ 4% ಬ್ಲ್ಯಾಕ್ ವುಮೆನ್ ಸೈನ್ಸ್ ಎಂಜಿನಿಯರಿಂಗ್ ನಲ್ಲಿ ಸಾಧನೆ ಮಾಡುತ್ತಾರೆ. ಒಂದೆಡೆ ಲಿಂಗ ತಾರತಮ್ಯ, ಜೊತೆಗೆ ವರ್ಣಭೇದ ಕೂಡ! ವಿಡಂಬನೆ ಎಂದರೆ ಇವೆಲ್ಲವನ್ನೂ ಮೆಟ್ಟಿ ನಿಂತು ಆಕೆ ಮಾಡಿರುವುದಂತೂ ಅದ್ಭುತ ಸಾಧನೆ!
ಎಂದೂ ಧೈರ್ಯ ಬಿಡಬೇಡಿ :
ಭಾರತ ಅಥವಾ ಅಮೆರಿಕಾ ಆದರೇನು? ವಿಶ್ವದಲ್ಲಿ ಎಲ್ಲೆಡೆ ಭೇದಭಾವ ಇದ್ದೇ ಇದೆ. ಅಮೆರಿಕಾದ ಒಂದು ಸಮೀಕ್ಷೆ ಪ್ರಕಾರ, ಅಲ್ಲಿ ಫಂಡಿಂಗ್ ವಿಷಯ ಬಂದಾಗ, ಹೆಂಗಸರು, ಅಲ್ಪಸಂಖ್ಯಾತರ ಅರ್ಜಿಯನ್ನು ಬೇಕೆಂದೇ ಬದಿಗೆ ಸರಿಸುತ್ತಾರೆ. ಅಮೆರಿಕಾದಲ್ಲಿ ಈ ವಿಷಯ ಆಗಾಗ ಶ್ವೇತಭವನದಲ್ಲಿ ಚರ್ಚೆಗೆ ಬಂದರೂ ಅತ್ತೆ ಮಾತನ್ನು ಸೊಸೆ ನಿರ್ಲಕ್ಷಿಸುವಂತೆ, ಆಡಳಿತ ಮಂಡಳಿ ದಿವ್ಯ ನಿರ್ಲಕ್ಷ್ಯ ತೋರುತ್ತದೆ. ಮೇಲಿನ ಫೋಟೋದಲ್ಲಿ ಸಂಭ್ರಮ ಪಡುತ್ತಿರುವವರು ಹೇಳುವುದೆಂದರೆ, ಧೈರ್ಯ ಬಿಡದೆ, ಸದಾ ಹೋರಾಟ ಮುಂದುವರಿಸಿ, ನಮ್ಮಂತೆ ನಿಮಗೂ ಅದೃಷ್ಟ ಖುಲಾಯಿಸಬಹುದು ಅಂತ.
ಎಚ್ಚರಿಕೆ ಈಗಲೂ ಅತ್ಯಗತ್ಯ :
ಅಮೆರಿಕಾದ ಡಾಸ್ ಡ್ಯಾನ್ಸ್ ಮಾಲುಗಳಲ್ಲಿ, ಅವರ ಸಿಬ್ಬಂದಿ ಕೋವಿಡ್ ಫ್ರೀ ವ್ಯಾಕ್ಸಿನೇಟೆಡ್ ಎಂದು ಪ್ರಚಾರ ಆರಂಭಿಸಿ, ಮಕ್ಕಳನ್ನು ಆಕರ್ಷಿಸಲು ಯತ್ನಿಸುತ್ತಿದ್ದಾರೆ. ಪ್ರೆಸ್ಟೆನ್ ಹೋಲೋ ಡ್ಯಾನ್ಸ್ ತನ್ನ ಟೀಚರ್ಸ್ ಕುರಿತು ಹೇಳುವಾಗ ಈ ಅಂಶ ನೆನಪಿಸಲು ಮರೆಯದು, ಏಕೆಂದರೆ ಅಮೆರಿಕಾದಲ್ಲಿ ವ್ಯಾಕ್ಸಿನ್ ವಿರೋಧಿಗಳಿಗೇನೂ ಕೊರತೆಯಿಲ್ಲ, ಅದರಲ್ಲೂ ಟ್ರಂಪಣ್ಣನ ಕುರುಡು ಅಭಿಮಾನಿಗಳು! ತಾಯಿ ತಂದೆ ಅಂತೂ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲ. ಡ್ಯಾನ್ಸ್ ಕಲಿಯುವಾಗ ಪರಸ್ಪರ ನಿಕಟತೆ, ಮಾಸ್ಕ್ ರಿಮೂವ್ ಅನಿವಾರ್ಯ.
ಸಿನಿಮಾ ತಯಾರಿ ಶುರು :
ಕೊರೋನಾ ಮಹಾಮಾರಿಯ ಕಾಟದಿಂದಾಗಿ ಸಿನಿಮಾ ತಯಾರಿಗೆ ದೊಡ್ಡ ಪೆಟ್ಟು ಬಿದ್ದಿತ್ತು. ಆದರೆ ವಿಶ್ವದೆಲ್ಲೆಡೆ ಎಲ್ಲಾ ಪ್ರೊಡಕ್ಷನ್ ಹೌಸ್, ರಿಸ್ಕ್ ಅನಿವಾರ್ಯ ಎಂದು ನಿಧಾನವಾಗಿ ಸಿನಿಮಾ ತಯಾರಿ ಶುರು ಮಾಡಿಕೊಂಡಿವೆ. ಹೀಗಾಗಿ ಚಿತ್ರಮಂದಿರ ಮತ್ತು OTT ಎರಡೂ ಕಡೆ ಸಿನಿಮಾ ಓಡುತ್ತಿದೆ. `ಇನ್ ದಿ ಹೈಟ್ಸ್’ ಚಿತ್ರ ನ್ಯೂಯಾರ್ಕಿನ ಬ್ರಾಡ್ವೇ ಥಿಯೇಟರಿನಲ್ಲಿ ಮಿಂಚಿದ್ದು ಹೀಗೆ.
ಜೀವನ ರಂಗುರಂಗಾಗಿರಲು :
ಮ್ಯೂಸಿಕ್ ವಿಡಿಯೋ `ದಿ ಹೈವೇ ವುಮನ್’ ಪ್ಯಾಂಡೆಮಿಕ್ ನಲ್ಲೂ ಖ್ಯಾತಿ ಮಾರಾಟದಲ್ಲಿ ಹೊಸ ದಾಖಲೆ ಸ್ಥಾಪಿಸುತ್ತಿದೆ. ಶ್ರೋತೃಗಳು ಕಡಿಮೆ ಆಗಿದ್ದರೂ, ಸ್ಪಾನ್ಸರ್ಸ್ ಗೇನೂ ಕೊರತೆ ಇಲ್ಲ. ಇದಂತೂ ಕೇವಲ ಹುಡುಗಿಯರದೇ ಮ್ಯೂಸಿಕ್ ಬ್ಯಾಂಡ್, ಹೆಸರಂತೂ ಗಗನ ಮುಟ್ಟಿದೆ! ಈ ಮ್ಯೂಸಿಕ್ ಗ್ರೂಪ್ ಭಾರತದಲ್ಲೂ ವಿಖ್ಯಾತವಾಗಿದೆ. ಕೋವಿಡ್ ಇರಲಿ ಬಿಡಲಿ, ಜೀವನದಲ್ಲಿ ರಂಗು ತುಂಬಲು ಇಂಥ ಸಂಗೀತ ಬೇಕೇಬೇಕು. ಸಂಸಾರದ ಜಂಜಾಟದಿಂದ ತುಸು ಹೊತ್ತಾದರೂ ಹೀಗೆ ಮುಕ್ತರಾಗಬಹುದಲ್ಲ…..
ಮಕ್ಕಳಿಗೇನು ಗೊತ್ತು? :
ತಾಯಿ ತಂದೆ ಊರೂರು ಅಲೆಯುತ್ತಿದ್ದರೂ ಸಮಯಾ ಸಮಯಕ್ಕೆ ಮಕ್ಕಳು ಆಗದಿರುತ್ತದೆಯೇ? ಅದರ ಪಾಲನೆ ಪೋಷಣೆಯಲ್ಲಿ ಇನ್ನಿಲ್ಲದ ಜಂಜಾಟ ಕಾಡುತ್ತದೆ, ಅದರಲ್ಲೂ ಪರದೇಶದಲ್ಲಿ ಆಸರೆ ಬೇಡುವಂತಾದಾಗ! ಪಾಶ್ಚಿಮಾತ್ಯ ದೇಶಗಳು ಹೊಸ ಶಿಶುಗಳಿಗೆ ಆಯಾ ಪ್ರಾಂತ್ಯದ ರೀಜನ್ ಐಡೆಂಟಿಟಿ ಕೊಡಲು ಬಹಳ ಹಿಂಜರಿಯುತ್ತವೆ, ಏಕೆಂದರೆ ಆಗ ಆ ಸರ್ಕಾರಕ್ಕೆ ತಾಯಿ ಮಗು ಇಬ್ಬರ ಜವಾಬ್ದಾರಿ ಹೊರಬೇಕಾಗುತ್ತದೆ. ಮಕ್ಕಳಿಗೇನು ಗೊತ್ತು ಈ ಗೋಳು? ತಾಯಿಯ ಸೂಕ್ತ ಆರೈಕೆ ಒಂದೇ ಅವಕ್ಕೆ ಬೇಕು.
ಇದೆಂಥ ಕ್ರೇಝ್! :
ಹಾಲಿವುಡ್‌ನ ಹೆಸರಾಂತ ಕೆಲವೇ ನಟಿಯರಲ್ಲಿ ಆ್ಯಡ್ ಲಿವ್ ಸಹ ಒಬ್ಬಳು. ಅಲ್ಲಂತೂ ಹೆಣ್ಣು ಇರುವುದೇ ತೋರ್ಪಡಿಕೆ ಸೆಕ್ಸೀ ದೃಶ್ಯಗಳಿಗಾಗಿ ಎಂದಾಗಿದೆ. ಆದರೆ ಇಂಥವರು ಗಟ್ಟಿ ಪಾತ್ರಗಳಲ್ಲಿದ್ದಾರೆ. ಈಕೆಯ ಇತ್ತೀಚಿನ ಚೀನೀ ಕೊಟ್ಯಧಿಪತಿಗಳ ಕುರಿತಾದ `ಕ್ರೇಝಿ ರಿಚ್ ಏಷ್ಯನ್’ ಚಿತ್ರ ಬಲು ಯಶಸ್ವೀ ಎನಿಸಿದೆ.