ಹುಂಡೈ ಕ್ರೇಟಾ ಕಂಪನಿಗೆ ಒಂದು ಅದ್ಭುತ ಯಶಸ್ಸು ಎಂದು ಹೇಳಬಹುದು. ಕ್ರೇಟಾ ಸಾಕಷ್ಟು ಮಟ್ಟಿಗೆ ಭಾರತದಲ್ಲಿ ಎಚ್‌ಯುವಿಗಾಗಿ ಒಂದು ಬೆಂಚ್‌ ಮಾರ್ಕ್‌ ಸ್ಥಾಪನೆ ಮಾಡಿದೆ. ಇದು ಕೇವಲ ಪರ್ಫೆಕ್ಟ್ ಸೈಟಿನಲ್ಲಷ್ಟೇ ದೊರಕುವುದಿಲ್ಲ. ಅದ್ಭುತ ಸ್ಟೈಲ್ ಹಾಗೂ ಹುಂಡೈನ ವಿಶಿಷ್ಟ ಸರ್ವೀಸ್‌ ಸಪೋರ್ಟ್‌ ಹಾಗೂ ಇದರ ಜೊತೆಗೆ ಅದ್ಭುತ ಫೀಚರ್ಸ್‌ನ ಒಂದು ದೊಡ್ಡ ಪಟ್ಟಿಯೇ ಸಿಗುತ್ತದೆ. ಕಳೆದ ಕೆಲವು ವರ್ಷಗಳ ಬಗ್ಗೆ ಪ್ರಸ್ತಾಪಿಸಬೇಕೆಂದರೆ, ಕ್ರೇಟಾವನ್ನು ಹಲವು ಅಡೆತಡೆಗಳೆದುರು ಒಡ್ಡಲಾಯಿತು. ಅದರಲ್ಲಿ ಕ್ರೇಟಾ ನಮ್ಮನ್ನು ಪ್ರಭಾವಿತಗೊಳಿಸಲು ಹಿಂದೆ ಬೀಳಲಿಲ್ಲ. ಅದು ಎಂಥದೇ ಪರಿಸ್ಥಿತಿಯಲ್ಲೂ ಅತ್ಯುತ್ತಮ ಪರಿಣಾಮ ಕೊಟ್ಟಿತು.ಈ ಸಲ ನಾವು ಹುಂಡೈ ಕ್ರೇಟಾಗೆ ಒಂದು ಹೊಸ ಆಯಾಮದಲ್ಲಿ ಆಹ್ವಾನ ಕೊಡಲು ಯೋಚಿಸಿದೆ. ಹಾಗೆ ನೋಡಿದರೆ, ವೈವಿಧ್ಯತೆಗಳಿಂದ ತುಂಬಿರುವ ಭಾರತದಲ್ಲಿ ಕಾರಿನ ವಾಸ್ತವ ತಿಳಿದುಕೊಳ್ಳುವ ಅವಕಾಶವೆಂದರೆ, ಅದು ಮದುವೆಗಳು. ಇದೊಂದು ವೈಯಕ್ತಿಕ ಸಮಾರಂಭ.

ಆದರೆ ಮದುವೆಯ ಸಂದರ್ಭದಲ್ಲಿ ಎಲ್ಲ ವ್ಯವಸ್ಥೆಗಳು ಸಮರ್ಪಕವಾಗಿ ನಡೆಯಬೇಕೆಂದರೆ, ನಿಜಕ್ಕೂ ಅದು ಸವಾಲಿನ ಸಂಗತಿಯೇ ಹೌದು. ಮದುವೆಯ ಸಂದರ್ಭದಲ್ಲಿ ಎಲ್ಲ ಕೆಲಸಗಳು ಸಮರ್ಪಕ ರೀತಿಯಲ್ಲಿ ಸಕಾಲಕ್ಕೆ ಆಗಲು ಬಹಳಷ್ಟು ಓಡಾಟ ಇದ್ದೇ ಇರುತ್ತದೆ. ಒಂದು ವೇಳೆ ಎಲ್ಲ ಕೆಲಸ ಕಾರ್ಯಗಳು ಮುಗಿದ ಬಳಿಕ ನಾವು ಧೈರ್ಯಶಾಲಿಗಳು, ಆಶಾವಾದಿಗಳಾಗುತ್ತೇವೆ. ಆಗ ನೀವು ಯಾವುದೇ ಈವೆಂಟ್‌ ನಲ್ಲಿ ಮಾಸ್ಟರ್‌ ಪುರಸ್ಕಾರ ಪಡೆಯುವ ಹಕ್ಕುದಾರರಾಗಿರುತ್ತೀರಿ.

ಹಾಗೆಂದೇ ಮದುವೆ ಸಮಾರಂಭಗಳಲ್ಲಿ ಆಗುವ ಪರೀಕ್ಷೆಯೇ ಯಾವುದೇ ಕುಟುಂಬದ ವಾಹನವೊಂದಕ್ಕೆ ನಡೆಯುವ ಎಲ್ಲಕ್ಕೂ ಮಹತ್ವದ ಪರೀಕ್ಷೆಯಾಗಿರುತ್ತದೆ. ಏಕೆಂದರೆ ಬೇರೆ ಯಾವುದೇ ಸಂದರ್ಭದಲ್ಲೂ ಇಂತಹ ಒಂದು ಅವಕಾಶ ದೊರಕಲಾರದು. ಆಗ ವಾಹನ ಒಂದು ಕಡೆಯಿಂದ ಮತ್ತೊಂದು ಕಡೆಗೆ ನಿರಂತರವಾಗಿ ಚಲಿಸುತ್ತ ಇರುತ್ತದೆ. ಅಷ್ಟೇ ಅಲ್ಲ, ವಾಹನದಲ್ಲಿ ಜನ ಆಹಾರ, ವಸ್ತುಗಳು, ಬಟ್ಟೆಗಳು, ಮಕ್ಕಳು ಹಾಗೂ ನಿಮ್ಮ ಸಾಕುಪ್ರಾಣಿಗಳನ್ನು ಕೂಡ ಸಾಗಿಸುವ ಕೆಲಸ ನಿರಂತರವಾಗಿ ಸಾಗುತ್ತಿರುತ್ತದೆ. ಬೇರೆ ಬೇರೆ ಜನರು, ತಮ್ಮದೇ ಆಟ ವಿಶಿಷ್ಟ ರೀತಿಯಲ್ಲಿ ಚಲಾಯಿಸುತ್ತಿರಬಹುದು. ಸ್ವಲ್ಪ ಯೋಚಿಸಿ ನೋಡಿ, ನಿಮ್ಮ ದೊಡ್ಡಪ್ಪನ ಮಗ ಕೇವಲ ಜಿಟಿಎ ಡ್ರೈವ್ ‌ಮಾಡಿರಬಹುದು, ಇಂತಹದರಲ್ಲಿ ಅವನಿಗೆ ನಿಮ್ಮ ಗಾಡಿ ಸಿಕ್ಕಿಬಿಟ್ಟರೆ ಆಗಿಯೇ ಹೋಯಿತು.

ನಮಗೆ ಈ ಅವಕಾಶ ಸಿಕ್ಕಿದ್ದು ನಮ್ಮ ಒಬ್ಬ ಗೆಳೆಯನ ಮದುವೆ ಸಿದ್ಧತೆ ನಡೆದಾಗ, ಆಗ ನಾವು ಸ್ವಲ್ಪ ವಿಳಂಬ ಮಾಡದೇ ಸಂದರ್ಭದ ಲಾಭ ಪಡೆದುಕೊಂಡೆ. ಕೊರೋನಾದ ಸಂದರ್ಭದಲ್ಲಿ ಎಲ್ಲ ನಾರ್ಮಲ್ ಆಗಿತ್ತು. ಅತಿಥಿಗಳ ಸಂಖ್ಯೆ ಕೇವಲ 20 ಆಗಿರಬಹುದು. ಆದರೆ ಎಲ್ಲರೂ ಪ್ರೊಟೋಕಾಲ್ ‌ಪಾಲನೆ ಮಾಡುವುದು ಅನಿವಾರ್ಯವಾಗಿತ್ತು. ಆಗ ಇದ್ದ ನಿಯಮವೆಂದರೆ,  ಡ್ರೈವರ್‌ ಜೊತೆಗೆ ಕೇವಲ ಇಬ್ಬರೂ ಮಾತ್ರ ಕುಳಿತುಕೊಳ್ಳಬೇಕು ಎನ್ನುವುದಾಗಿತ್ತು. ಹೀಗಾಗಿ ಒಂದೇ ರಸ್ತೆಯಲ್ಲಿ ಹಲವು ಸಲ ಹೋಗಿ ಬರಬೇಕಾಗಿತ್ತು. ಹಳ್ಳಿಯಿಂದ 150 ಕಿ.ಮೀ. ದೂರದಲ್ಲಿರುವ ನಗರಕ್ಕೆ ಹಲವು ಸಲ ಪ್ರಯಾಣ ಮಾಡಬೇಕಾಯಿತು.

ಹಳ್ಳಿಯಿಂದ ನಗರಕ್ಕೆ ಸುತ್ತಾಡುತ್ತಿದ್ದ ಕ್ರೇಟಾದ 7 ಸ್ಪೀಡ್‌ ಡಿಸಿಟಿಯು ನಮಗೆ ಸ್ವಲ್ಪ ದಣಿವು ಉಂಟಾಗದಂತೆ ಮಾಡಿತು. ಕ್ರೇಟಾದ ಗೇರ್‌ ಬಾಕ್ಸ್ ಆಮೆ ವೇಗದಲ್ಲಿ ಚಲಿಸುವಾಗ ಅಥವಾ ಹೈವೆಯಲ್ಲಿ ಜೋರಾಗಿ ಚಲಿಸುವಾಗ ಒಂದಿಷ್ಟೂ ತೊಂದರೆಯಾಗಲಿಲ್ಲ.

ಕಾರಿನ ಸೀಟಿನ ಬಗ್ಗೆ ಹೇಳಬೇಕೆಂದರೆ, 10 ದಿನಗಳಲ್ಲಿ ಇದರಲ್ಲಿ ಎಷ್ಟು ಜನರು ಕಂಫರ್ಟ್‌ಗೆ ಮನಸೋತಿದ್ದರು. 26.03 ಸೆಂಟಿಮೀಟಿರಿನ ಟಚ್‌ ಸ್ಕ್ರೀನ್‌ ನ್ಯಾವಿಗೇಶನ್‌ ನಮಗೆ ಬಹಳ ದೂರ ದೂರದ ತನಕ ಜನಸಂಖ್ಯೆ ಇರದ ಕಡೆಯೂ ಕೂಡ ನೆರವಾಯಿತು.

ವಾಹನದಲ್ಲಿ ಸ್ಪೇಸ್‌ ಬಗ್ಗೆ ಕೇಳಲೇಬೇಡಿ, ಕೇವಲ 8 ಗಂಟೆ ಸಮಯಷ್ಟೇ ಉಳಿದಿರಬಹುದು ಮತ್ತು ಬಹಳಷ್ಟು ಸಾಮಗ್ರಿ ಸಾಗಿಸುವುದಿರಬಹುದು, ಇಂತಹದರಲ್ಲಿ ಕ್ರೇಟಾದ 433 ಲೀ. ಟನ್ ಮತ್ತು 60:40 ಸ್ಲಿಟ್‌ ಆಗುವ ಸೀಟುಗಳು ನಮಗೆ ನೆಮ್ಮದಿಯಿಂದ ಉಸಿರಾಡಿಸುವಂತೆ ಮಾಡಿದ.

ನಾವು ದೆಹಲಿಯ ಕ್ರೇಟಾವನ್ನು ಈ ಟೆಸ್ಟ್ ನಲ್ಲಿ ಪರೀಕ್ಷಿಸಲು ಹೊರಟಾಗ, ಕೆಲವು ಐಡಿಯಾಗಳಂತೂ ಇದ್ದವು. ಅದರಲ್ಲಿ ಕ್ರೇಟಾ ಯಶಸ್ವಿಯಾಗಿ ಪಾರಾಗುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ ಯಾವುದೇ ಒಂದು ಮದುವೆ ಯೋಜನೆಗೆ ತಕ್ಕಂತೆ ಆಗುವುದಿಲ್ಲ. ಅದರಲ್ಲಿ ಒಂದಿಲ್ಲೊಂದು ಅಡೆತಡೆ ಬಂದೇ ಬರುತ್ತದೆ. ಆದರೆ ಕ್ರೇಟಾವನ್ನು ಹೇಗೆ ನಿರ್ಮಿಸಲಾಗಿದೆ ಎಂದರೆ, ಅದು ಯಾವುದೇ ಸಂದರ್ಭದಲ್ಲೂ ಒಂದಿಷ್ಟೂ ಮಿಸುಕಾಡಲಿಲ್ಲ. ಅದು ಹಳ್ಳಿಯ ಕಚ್ಚಾ ರಸ್ತೆಯೇ ಆಗಿರಬಹುದು ಅಥವಾ ಹೆದ್ದಾರಿಯ ವೇಗದ ರಸ್ತೆಯೇ ಇರಬಹುದು. ಕ್ರೇಟಾದ ಗ್ರೇಟ್‌ ಸಸ್ಪೆನ್ಶನ್‌ ಮತ್ತು ಇದರ ಅದ್ಭುತ 1.4 ಲಿ. ಜಿಡಿಐ ಪೆಟ್ರೋಲ್ ಬಿಎಸ್‌ ಟರ್ಬೊ ಚಾರ್ಜ್‌ ಎಂಜಿನ್‌ ನಿಂದ ಪ್ರಯಾಣ ಸುಲಭವಾಯಿತು. ನೀವು ಇದರಲ್ಲಿ ಏನಾದರೂ ಕೊರತೆ ಕಾಣುತ್ತೀರೆಂದರೆ, ಇದು ಅದರ ಸ್ಟೇರಿಂಗ್‌ ಮೇಲೆ ಹೆಚ್ಚು ಹಿಡಿತ ಹೊಂದಲು ಆಗುವುದಿಲ್ಲ ಹಾಗೂ ಇದರ ಟಿಲ್ಟ್ ಆ್ಯಂಗಲ್ ಕೂಡ ಸ್ವಲ್ಪ ಬಿಗಿಯಾಗಿವೆ. ಆದರೆ 8 ರೀತಿಯಲ್ಲಿ ಅಡ್ಜಸ್ಟ್ ಆಗುವ ಡ್ರೈವಿಂಗ್‌ ಸೀಟ್‌ ದೀರ್ಘ ಪ್ರಯಾಣಕ್ಕೆ ಹೆಚ್ಚು ಆರಾಮದಾಯಕವಾಗಿದೆ.

ಕ್ರೇಟಾದ್ದೇ ಆದ ಪ್ರೀಮಿಯಂ ಬಾಸ್‌ ಸೌಂಡ್‌ ಸಿಸ್ಟಮ್ ಎಲ್ಲರಿಗೂ ಪ್ರೀತಿಪಾತ್ರ ಆಗುವಂಥದ್ದು. ಅದೊಂದು ಸಮಯ ಹೇಗೆ ಬಂತೆಂದರೆ, ಮದುವೆಯಲ್ಲಿ ಹಾಡು ಹಾಕಲು ಕ್ರೇಟಾದ ಸೌಂಡ್‌ ಸಿಸ್ಟಮ್ ನ್ನು ಬಳಸಲಾಯಿತು. ಅದರಿಂದ ಒಂದಿಷ್ಟೂ ಕಿರಿಕಿರಿ ಅನಿಸಲಿಲ್ಲ. ಅದರ ಬಳಿಕ ಇದರ ಇನ್ನೊಂದು ವಿಶೇಷತೆ ಎಂದರೆ ಇದರ ಸನ್‌ ರೂಫ್‌, ಅದು ಕ್ಯಾಬಿನ್‌ನ್ನು ಮತ್ತಷ್ಟು ಸಮೃದ್ಧ ಹಾಗೂ ಪ್ರೀಮಿಯಂ ಎಂಬಂತೆ ಅನುಭವ ಮೂಡಿಸುತ್ತದೆ.

ಕ್ರೇಟಾ ನಮ್ಮ ಎಲ್ಲ ಅಗತ್ಯಗಳಲ್ಲೂ ಫಿಟ್‌ ಎಂದು ಸಾಬೀತಾಯಿತು. ಕ್ರೇಟಾದ ಜೊತೆಗೆ ಮದುವೆಯ ಪ್ರತಿಯೊಂದು ಅವಶ್ಯಕತೆಯನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾದೆವು. ಅದು ಈ ಟೆಸ್ಟ್ ನಲ್ಲಿ 10ಕ್ಕೆ 10 ಅಂಕ ಗಳಿಸಿತು ಎಂದು ಭಾವಿಸಿ ನಾವು ಕೂಡ ಅತ್ಯಂತ ಹೆಮ್ಮೆಯಿಂದ ವಾಪಸ್‌ ಆಗಿ ಕ್ರೇಟಾವನ್ನು ಪಾರ್ಕ್‌ ಮಾಡಿದೆವು.

– ಪ್ರತಿನಿಧಿ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ