ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ `ನಮ್ಮ ಮೆಟ್ರೋ'ದಲ್ಲಿ ಪ್ರವಾಸ ಮಾಡುವುದೆಂದರೆ, ಅದು ಯಾವುದೇ ದೂರದ ಪ್ರವಾಸಕ್ಕಿಂತ ಭಿನ್ನ ಎಂದೆನಿಸದಿರದು. ಏಕೆಂದರೆ ಅದು ಎಷ್ಟೊಂದು ಮನೋರಂಜಕ ಆಗಿರುತ್ತದೆಂದರೆ, ಅಲ್ಲಿ ಹತ್ತು ಹಲವು ಸಂಗತಿಗಳು, ರಹಸ್ಯ ವಿಷಯಗಳು ಕಿವಿಗೆ ಬೀಳುತ್ತವೆ. ಆ ರಹಸ್ಯಗಳನ್ನು ಕುತೂಹಲಕಾರಿ ಸಂಗತಿಗಳನ್ನು ಯಾರೊಬ್ಬರೂ ಬಾಯಿಬಿಟ್ಟು ಕೇಳುವುದಿಲ್ಲ. ಅವರೇ ತಮಗೆ ತಾವೇ ಎಳೆ ಎಳೆಯಾಗಿ ಬಹಿರಂಗಪಡಿಸುತ್ತಾರೆ.

ಕೆಲವು ದಿನಗಳ ಹಿಂದಿನ ಮಾತು, ನಾನು ನಾಯಂಡಹಳ್ಳಿ ಹತ್ತಿರದ ಮೈಸೂರು ರೋಡ್‌ ಸ್ಟೇಷನ್‌ ನಿಂದ ಮೆಟ್ರೊ ರೈಲು ಹತ್ತಿದ್ದೆ. ನಾನು ಇಳಿಯಬೇಕಾದ ಸ್ಟೇಷನ್‌ ಇಂದಿರಾನಗರ. ಹೀಗಾಗಿ ನನ್ನ ಬಳಿ ಸಾಕಷ್ಟು ಸಮಯಾವಕಾಶ ಇತ್ತು. ನಾನು ಪುಸ್ತಕ ಕೈಗೆತ್ತಿಕೊಂಡು ಓದಲು ಶುರು ಮಾಡಿದೆ. ಮುಂದಿನ ನಿಲ್ದಾಣ ದೀಪಾಂಜಲಿಯಲ್ಲಿ ಇಬ್ಬರು ಹುಡುಗಿಯರು ಹತ್ತಿದರು. ಅವರು ಎಷ್ಟು ಜೋರು ಜೋರಾಗಿ ಮಾತನಾಡಲು ಶುರು ಮಾಡಿದರೆಂದರೆ, ನನ್ನ ಗಮನ ಪುಸ್ತಕದಿಂದ ಅವರ ಮಾತುಗಳ ಕಡೆ ಹೋಯಿತು.

``ಈ ಲಿಪ್‌ಸ್ಟಿಕ್‌ ಬಹಳ ಚೆನ್ನಾಗಿದೆ, ನೀನೂ ಖರೀದಿಸು.''

``ಅದರ ಬೆಲೆ ಎಷ್ಟು?''

``ಕೇವಲ 300 ರೂ.''

``ಅಷ್ಟು ದುಬಾರಿಯೇ?'' ಇನ್ನೊಬ್ಬಳು ಬಾಯಿ ತೆಗೆದಳು ಎಷ್ಟೊತ್ತಾದರೂ ಹಾಗೆಯೇ ಇದ್ದಳು. ನನಗದು ಬೇಕಿಲ್ಲ. 100 ರೂ.ದ್ದಾಗಿದ್ದರೆ ಬಹುಶಃ ನಾನು ತೆಗೆದುಕೊಳ್ಳುತ್ತಿದ್ದೇನೇನೊ!''

``ಸರಿ ಸರಿ... ನಾನು ನಿನಗೆ ಕಡಿಮೆ ದರದಲ್ಲಿ ಸಿಕ್ಕರೆ ತಂದುಕೊಡ್ತೀನಿ.''

ಆ ಬಳಿಕ ಇಬ್ಬರೂ ನಿಧಾನ ಧ್ವನಿಯಲ್ಲಿ ಮಾತಾಡತೊಡಗಿದರು. ಮತ್ತೆ ನಾನು ಪುಸ್ತಕದಲ್ಲಿ ಗಮನಹರಿಸಿದೆ. ಮತ್ತೆ ಕೆಲವೇ ನಿಮಿಷಗಳಲ್ಲಿ ಅವರ ಧ್ವನಿ ಪುನಃ  ಕೇಳಿಸಿತು. ಈ ಸಲ ಅವರ ಧ್ವನಿ ಮತ್ತಷ್ಟು ರೋಚಕವಾಗಿತ್ತು.

``ನಾನು ಮದುವೆ ಮಾಡಿಕೊಂಡು ಒಂದು ಬಡ ಮನೆತನಕ್ಕೆ ಹೋಗಲು ಇಚ್ಛಿಸುತ್ತೇನೆ,'' ಇನ್ನೊಂದು ಕಡೆ ಕುಳಿತು ಹುಡುಗಿ ಹೇಳಿದಳು.

``ಏಕೆ?'' ಈ ಕಡೆಯ ಹುಡುಗಿ ಕೇಳಿದಳು.

``ಏಕೆಂದರೆ ಯಾವ ಮನೆಗೆ ನಾನು ಮದುವೆ ಮಾಡಿಕೊಂಡು ಹೋಗ್ತೀನೊ, ಅಲ್ಲಿ ನನ್ನದೇ ನಡೆಯಬೇಕು. ನಾನು ಕಷ್ಟಪಟ್ಟು ಮನೆ ನಡೆಸಬೇಕು. ಗಂಡ ನನಗೆ ಸಾಕಷ್ಟು ಪ್ರೀತಿ ಕೊಡಬೇಕು, ಗೌರವ ಕೊಡಬೇಕು. ಮತ್ತೆ ಕುಡಿದು ಬರಬಾರದು. ಅವನು ನನ್ನದೇ ಮಾತು ಕೇಳಬೇಕು.''

ಆ ಹುಡುಗಿಯ ಮಾತು ಕೇಳಿ ನನಗೆ ಜೋರಾಗಿ ನಗಬೇಕೆನ್ನಿಸಿತು. ಏಕೆಂದರೆ ಆ ಹುಡುಗಿಗೆ ಇನ್ನೂ 19 ಕೂಡ ಆಗಿರಲಿಲ್ಲ. ಅವಳಿಗೆ ಏನು ಬೇಕಾಗಿತ್ತು ಎನ್ನುವುದು ಅವಳ ಮಾತುಗಳಿಂದ ಅರ್ಥವಾಗುತ್ತಿತ್ತು. ಅವಳಿಗೆ ಬೇಕಾಗಿದ್ದುದು, ಗಂಡ ಮತ್ತು ಹಕ್ಕು ಮಾತ್ರ. ಈ ಕಡೆ ಕುಳಿತ ನಾನು ಅವಳಿಗೆ ಅಡುಗೆ ಹೇಗೆ ಎಂಬ ಯೋಚನೆ ಇದೆಯೋ ಇಲ್ಲವೋ ಎಂದೆನಿಸಿತು.

ಮಟ್ರೋದಲ್ಲಿ ಕೇಳಲು ಅದೊಂದೇ ಧ್ವನಿಯಾಗಿರಲಿಲ್ಲ. ವಿಜಯನಗರ ಸ್ಟೇಷನ್‌ ಬರುತ್ತಿದ್ದಂತೆ ಮಧ್ಯ ವಯಸ್ಸಿನ ಮಹಿಳೆಯೊಬ್ಬರು ಹತ್ತಿದರು. ಆಕೆ ಫೋನಿನಲ್ಲಿ ಬಹುಶಃ ತನ್ನ ಗೆಳತಿಯೊಂದಿಗೆ ಮಾತಾಡುತ್ತಿರಬಹುದು ಎನಿಸಿತು. ಆಕೆಯ ಮಾತುಗಳಲ್ಲಿ ಕೆಲವು ವಿಚಾರಗಳು ನನ್ನ ಕಿವಿಗೆ ಬಿದ್ದವು.

``ಅವರು ನನ್ನ ಬಗ್ಗೆ, ನನ್ನ ಮಕ್ಕಳ ಬಗ್ಗೆ ಬಹಳ ಅಸೂಯೆ ಪಡುತ್ತಾರೆ. ನನ್ನ ಹೆಣ್ಣು ಮಕ್ಕಳಂತೂ ಅವರನ್ನು ಕಣ್ಣೆತ್ತಿ ಕೂಡ ನೋಡುವುದಿಲ್ಲ. ಆದರೂ ಅವರಿಗೆ ಏನು ಸಮಸ್ಯೆಯೋ ಗೊತ್ತಿಲ್ಲ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ