ಗುಲಾಮಗಿರಿಯತ್ತ ತಳ್ಳುವ ಉಪಾಯ

ಅದೊಂದು ಕಾಲದಲ್ಲಿ ಸ್ಟೀಮ್ ಎಂಜಿನ್‌ ನಿಂದ ನಡೆಯುವ ಕಾರ್ಖಾನೆಗಳು ಲಕ್ಷಾಂತರ ಕಾರ್ಮಿಕರ ಕೆಲಸ ಕಸಿದುಕೊಂಡಿದ್ದವು. ಅದರ ಬದಲಿಗೆ ಕೆಲಸಗಾರರಿಗೆ ಒಳ್ಳೆಯ ಸೌಲಭ್ಯ ಹಾಗೂ ಗ್ರಾಹಕರಿಗೆ ಒಳ್ಳೆಯ ಸಮ್ಮಾನ ಕೊಟ್ಟಿತ್ತು. ಇಂದಿನ ಡಿಜಿಟಲ್ ಕ್ರಾಂತಿ ಕೂಡ ಚಿಕ್ಕ ಅಂಗಡಿಕಾರರು, ಸೇವೆ ನೀಡುವವರು ಹಾಗೂ ಚಿಕ್ಕ ಮೆಕ್ಯಾನಿಕ್‌ ಗಳನ್ನು ಮುಗಿಸಿ ಹಾಕುತ್ತಿವೆ. ಆದರೆ ಈ ಸಲ ವ್ಯಾಪಾರದ ಚುಕ್ಕಾಣಿ ದೊಡ್ಡ ಕಂಪನಿಗಳ ಕೈಯಲ್ಲಿ ಕ್ರೋಢೀಕರಣಗೊಳ್ಳುತ್ತಿದೆ. ಮೊಬೈಲ್ ‌ಬೇಸ್ಡ್ ತಂತ್ರಜ್ಞಾನ ಆಧಾರಿತ ಸೌಲಭ್ಯಗಳ ಕಾರಣದಿಂದ ಈಗ ಸಣ್ಣ ಅಂಗಡಿಕಾರರು, ಟೇಲರ್‌ ಗಳು, ಪೇಂಟರ್ಸ್‌, ಅಡುಗೆ ತಯಾರಿಸುವವರು ಮಾಯಾವಾಗುತ್ತಿದ್ದಾರೆ.

ಫ್ಲಿಪ್‌ ಕಾರ್ಟ್‌, ಅಮೆಝಾನ್‌ ನಂತಹ ಅನೇಕ ಕಂಪನಿಗಳು ಹೆಚ್ಚಿಗೆ ಏನನ್ನೂ ಮಾಡುತ್ತಿಲ್ಲ. ಆದರೆ ಬೇರೆಯವರಿಗೆ ತಯಾರಿಸಿದ ಸಾಮಾನುಗಳನ್ನು ಮಾಡಿ ಭಾರಿ ಲಾಭ ಗಳಿಸುತ್ತಿವೆ.

ಓಲಾ ರೈಡ್‌ ಕಂಪನಿ ದೇಶದಲ್ಲಿರುವ ಟ್ಯಾಕ್ಸಿಗಳನ್ನು ನುಂಗಿ ಹಾಕಿಬಿಟ್ಟಿದೆ. ಅದೀಗ ಆಟೋಗಳನ್ನು ಕೂಡ ಮುಗಿಸಿ ಹಾಕುವುದರಲ್ಲಿದೆ. ಬೈಕ್‌, ಟ್ಯಾಕ್ಸಿ ಉದ್ಯಮ ಕೂಡ ಅದೇ ತಂತ್ರಜ್ಞಾನ ಹೊಂದಿದೆ. ಕಾರನ್ನು ಖರೀದಿಸಲು ಹಾಗೂ ತನ್ನ ಹಳೆಯ ಕಾರುಗಳನ್ನು ಮಾರುವಲ್ಲಿ ನೈಪುಣ್ಯತೆ ಸಾಧಿಸಿದ ಬಳಿಕ ಓಲಾ ಕಂಪನಿ ಹಳೆಯ ವಾಹನ ಉದ್ಯಮದಲ್ಲಿ ಕಾಲಿರಿಸುತ್ತಿದೆ. ಈ ಮೂಲಕ ಹಳೆಯ ಕಾರುಗಳನ್ನು ಮಾರುವವರನ್ನು ನುಂಗಿ ಹಾಕಬಹುದು.

ಈ ತೆರನಾದ ಕಂಪನಿಗಳು ಕಾನೂನನ್ನು ಕೂಡ ಬದಲಿಸಬಹುದು. ಅವು ಸರ್ಕಾರದ ಮೇಲೆ ಒತ್ತಡ ಹೇರಬಹುದು, ಎಲ್ಲಿಯವರೆಗೆ ಸರ್ಟಿಫೈಡ್‌ ಕಾರು ಇರುವುದಿಲ್ಲ ಅಲ್ಲಿಯವರೆಗೆ ಯಾರೂ ಹಳೆಯ ಕಾರನ್ನು ಮಾರಾಟ ಮಾಡಬಾರದು ಹಾಗೂ ಸರ್ಟಿಫಿಕೇಶನ್ ಬಿಸ್‌ನೆಸ್‌ ಗಳನ್ನು ಖರೀದಿಸಲು ಆರಂಭಿಸಬಹುದು. ಅವು ರಸ್ತೆ ಪಕ್ಕದಲ್ಲಿ ಇರುವ ಮಾರುಕಟ್ಟೆ ಬದಲು ನಗರದ ಹೊರಭಾಗದಲ್ಲಿ ಸಾವಿರಾರು ಗಾಡಿಗಳನ್ನು ಒಂದೇ ಕಡೆ ನಿಲ್ಲಿಸುವ ವ್ಯವಸ್ಥೆ ಮಾಡಬಹುದು. ಸೌಲಭ್ಯದ ಹೆಸರಿನಲ್ಲಿ ನಿಮಗೆ ವಾಹನದ ಬಣ್ಣ, ಸರಿಯಾದ ಸ್ಥಿತಿಯಲ್ಲಿದೆ, ಎಷ್ಟು ಕಿ.ಮೀ. ಓಡಿತು, ಸೇಫ್ಟಿ ಫೀಚರ್‌ ಹೀಗೆ ಎಲ್ಲ ಮಾಹಿತಿಗಳು ನಿಮ್ಮ ಮೊಬೈಲ್ ‌ತೆರೆಯ ಮೇಲೆ ಲಭಿಸುತ್ತವೆ.

ಇದರರ್ಥ ಇಷ್ಟೇ, ಲಕ್ಷಾಂತರ ಹಳೆಯ ಕಾರು ಮಾರಾಟಗಾರರ ಮಕ್ಕಳು ಈಗ ಓಲಾ ಅಥವಾ ಬೇರೆ ಕೆಲವು ಕಂಪನಿಗಳಲ್ಲಿ ನೌಕರಿ, ಚಾಕರಿ ಮಾಡಬೇಕಾಗಿಬರಬಹುದು. ಒಂದು ಸ್ವತಂತ್ರ ಉದ್ಯೋಗದಲ್ಲಿ ಹೆಮ್ಮೆ ಪಟ್ಟುಕೊಳ್ಳುತ್ತಿದ್ದರು, ಕಣ್ಮರೆಯಾಗಿ ಹೋಗಬಹುದು.

ಇದೇ ಕೆಲಸವನ್ನು ಟಾಟಾ ಒನ್‌ ಎಂಜಿ ಕಂಪನಿಗಳು ಮಾಡಲು ಹೊರಟಿವೆ. ಅವು ಔಷಧಿಗಳನ್ನು ಫಾರ್ಮಾ ಕಂಪನಿಗಳಿಂದ ಖರೀದಿಸಿ, ತಮ್ಮ ಫ್ರಾಂಚೈಸ್‌ ಮುಖಾಂತರ ಮನೆ ಮನೆಗೆ ತಲುಪಿಸಲಿವೆ. ನಿಮ್ಮ ಪಕ್ಕದಲ್ಲಿಯೇ ಇರುವ ಔಷಧಿ ಅಂಗಡಿಯ ಮುಂಚೆ ಡಾಕ್ಟರ್‌ ಆಗಿ ಸಹ ಕೆಲಸ ಮಾಡುತ್ತಿದ್ದ. ಅವನೀಗ ತನ್ನ ಅಂಗಡಿ ವ್ಯಾಪಾರವಿಲ್ಲದೆ ಮುಚ್ಚುವ ಸ್ಥಿತಿ ಬರಬಹುದು. ಇದೂ ಕೂಡ ಡಿಜಿಟಲ್ ಟೆಕ್ನಾಲಜಿಯ ಚಮತ್ಕಾರ. ಗ್ರಾಹಕರು ಇದನ್ನು ಕೂಡ ಸೌಲಭ್ಯವೆಂದು ಭಾವಿಸಬಹುದು. ಆದರೆ ವಾಸ್ತವದಲ್ಲಿ ಇದು ಕೆಮಿಸ್ಟ್ ಗಳನ್ನು ಡೆಲಿವರಿ ಬಾಯ್‌ ಆಗಿ ಪರಿವರ್ತಿಸುತ್ತದೆ.

ಮುಂಚೆ ರಾಜರು ಖಡ್ಗದ ಬಲದ ಮೇಲೆ ರೈತರನ್ನು ಲೂಟಿ ಮಾಡುತ್ತಿದ್ದರು. ಅದೇ ರೀತಿ ಕಾರ್ಖಾನೆಗಳ ಬಲದ ಮೇಲೆ ಸಾಮಾನ್ಯ ಕೂಲಿಕಾರರನ್ನು ಕಾರ್ಖಾನೆಗಳ ಮಾಲೀಕರು ಗುಲಾಮರನ್ನಾಗಿಸಿಕೊಳ್ಳುತ್ತಿದ್ದಾರೆ. ಈಗ ಡಿಜಿಟಲ್ ಮೊನೊಪಾಲಿಯಿಂದ ಸಾಮಾನ್ಯ ಜನರು ಗುಲಾಮಗಿರಿಯ ಮತ್ತೊಂದು ಕೈಕೋಳವನ್ನು ಕೊರಳಿಗೆ ಹಾಕಲಿದೆ. ಈ ಗುಲಾಮಗಿರಿಯ ಪರಿಣಾಮ ಮನೆಗಳ ಮೇಲೆ ಹೆಚ್ಚಾಗಿ ಉಂಟಾಗಲಿದೆ.

ಸಮಾಜದಲ್ಲಿ ಗುಲಾಮಗಿರಿಯ ವ್ಯಾಪ್ತಿ ಹೆಚ್ಚುತ್ತಾ ಹೋದಂತೆ ಅಲ್ಲಿನ ಮಹಿಳೆಯರು ಮತ್ತಷ್ಟು ಗುಲಾಮಗಿರಿಯತ್ತ ಸಾಗುತ್ತಿದ್ದಾರೆ. ಅದೊಂದು ಕಾಲದಲ್ಲಿ ಸಂಪ್ರದಾಯಾದಿಗಳ ಕಪಿಮುಷ್ಟಿಯಲ್ಲಿ ಸಮಾಜ ಸಿಲುಕಿತ್ತು.

ಆಗ ಮಹಿಳೆಯರ ಮೇಲೆಯೇ ಹಲವು ನಿರ್ಬಂಧಗಳು ಹಾಕಲ್ಪಟ್ಟವು. ಶಿಕ್ಷಣ ಕಾರಣದಿಂದ ಅಥವಾ ಸರ್ಕಾರದಿಂದ ಸಾಮಾನ್ಯ ವ್ಯಕ್ತಿಗೆ ಬಲ ದೊರಕಿತು. ಆ ಕಾರಣದಿಂದ ಮಹಿಳೆ ನೆಮ್ಮದಿಯ ನಿಟ್ಟುಸಿರುಬಿಟ್ಟಳು. ಇದು ಇಡೀ ಸಮಾಜದಲ್ಲಿ ಸಮಾನ ಅವಕಾಶಗಳ ಸ್ವಾತಂತ್ರ್ಯದ ಪರಿಣಾಮವಾಗಿದೆ.

ನೀವು ಮನೆ ಬಳಕೆ ಸಾಮಾನುಗಳು, ಗೃಹ ಸೇವೆಗಳಿಗಾಗಿ 1-2 ಕಂಪನಿಗಳ ಮೇಲೆ ಅವಲಂಬಿಸಿದರೆ ನಿಮ್ಮ ಸ್ವಾತಂತ್ರ್ಯ ಕಸಿದುಕೊಂಡಂತೆ ವಾಟ್ಸ್ ಆ್ಯಪ್‌ ಅಥವಾ ಫೇಸ್‌ ಬುಕ್‌ ನಲ್ಲಿ ಏನನ್ನೋ ನೋಡಿ ಮರುಳಾಗಿಬಿಟ್ಟರೆ, ತಿಂಡಿಯ ಆಮಿಷಕ್ಕೊಳಗಾಗಿ ಬೋನಿಗೆ ಸಿಕ್ಕ ಇಲಿಯಂತಾಗುತ್ತದೆ ನಿಮ್ಮ  ಸ್ಥಿತಿ.

ಅಮೆಝಾನ್‌, ಪ್ಲಿಪ್‌ ಕಾರ್ಟ್‌, ಓಲಾ ಇವು ಆರಂಭದಲ್ಲಿ ಅಗ್ಗದಲ್ಲಿ ಏನನ್ನೋ ಕೊಟ್ಟ. ಈಗ ಅವನ್ನು ಕೊಡುವುದನ್ನು ನಿಲ್ಲಿಸಿವೆ. ಈಗ ಅವು ತಮಗೆ ತೋಚಿದ ಬೆಲೆಯಲ್ಲಿ ಕೊಡಲಾರಂಭಿಸಿವೆ. ಅಕ್ಕಪಕ್ಕದಲ್ಲಿ ಅಂಗಡಿಗಳು ಮುಚ್ಚಿದ್ದರಿಂದ, ನೀವು ಆಲಸಿಗಳಾಗಿ ಹೋಗಿದ್ದರಿಂದ ಮನೆಗೆ ಸಾಮಾನುಗಳನ್ನು ತರಿಸಲು ಶುರು ಮಾಡಿದಿರಿ, ಹೀಗಾಗಿ ನೀವು ಆರ್ಥಿಕವಾಗಿ ಗುಲಾಮರಾಗಿರುವಿರಿ.

ಈ ಭಯ ಏಕೆ?

ಮಹಿಳೆಯರ ಹಕ್ಕುಗಳ ಬಗ್ಗೆ ಈಗಲೂ ದೇಶದ ಒಂದು ದೊಡ್ಡ ವರ್ಗ, (ಅದರಲ್ಲಿ ನ್ಯಾಯಾಧೀಶರೂ ಸೇರಿದ್ದಾರೆ) ಮಹಿಳೆಯರಿಗೆ ವಿವಾಹದ ಗುಲಾಮಗಿರಿಯನ್ನು ಸಾಮಾಜಿಕ ಅವಶ್ಯಕತೆ ಎಂದು ಭಾವಿಸುತ್ತಾರೆ. ಬುಲಂದ ಶಹರದ ಒಬ್ಬ ಮಹಿಳೆ ತನ್ನ ಪತಿಯನ್ನು ಬಿಟ್ಟು ಪ್ರೇಮಿಯೊಂದಿಗೆ ವಾಸಿಸುತ್ತಿದ್ದಳು. ಅವಳ ಪತಿ ಆಕೆ ವಾಸಿಸುತ್ತಿದ್ದ ಮನೆಗೆ ನುಗ್ಗಿ ಗಲಾಟೆ ಮಾಡತೊಡಗಿದಾಗ ಮಹಿಳೆ ನ್ಯಾಯಾಲಯದ ಬಾಗಿಲು ತಟ್ಟಿದ್ದಾಳೆ.

ಅಲಹಾಬಾದ್‌ ಹೈಕೋರ್ಟಿನ ನ್ಯಾಯಾಧೀಶ, ಡಾ. ಕೌಶಲ್ ಜಯೆಂದ್ರ ಠಾಕೂರ್‌ ಹಾಗೂ ನ್ಯಾ. ಸುಭಾಷ್‌ ಚಂದ್ರು ಮಹಿಳೆಯನ್ನು ಮುಕ್ತಗೊಳಿಸಲು ನಿರಾಕರಿಸುತ್ತ, ನ್ಯಾಯಾಲಯದ ಹಸ್ತಕ್ಷೇಪ ಅನೈತಿಕ ಸಂಬಂಧಕ್ಕೆ ಕುಮ್ಮಕ್ಕು ಕೊಟ್ಟಂತಾಗುತ್ತದೆ ಎಂದು ಹೇಳಿದರು. ತಮ್ಮ ಮಾತಿಗೆ ಪುಷ್ಟೀಕರಣ ಕೊಡುತ್ತಾ, ನ್ಯಾಯಾಧೀಶರು ಹೇಳಿದ್ದೇನೆಂದರೆ, ನ್ಯಾಯಾಲಯ ಲಿವ್ ಇನ್ ಸಂಬಂಧಗಳ ವಿರುದ್ಧ ಇಲ್ಲ. ಧರ್ಮ ಹಾಗೂ ಲಿಂಗ ತಾರತಮ್ಯದ ಹೊರತಾಗಿಯೂ ಪ್ರತಿಯೊಬ್ಬರಿಗೂ ತಮ್ಮ ಇಚ್ಛೆಗನುಗುಣವಾಗಿ ಇರುವ ಹಕ್ಕು ಇದೆ. ಆದರೆ ಒಬ್ಬ ವಿವಾಹಿತೆ ನ್ಯಾಯಾಲಯಕ್ಕೆ ರಕ್ಷಣೆಗೆ ಮೊರೆ ಹೋದರೆ, ನ್ಯಾಯಾಲಯಕ್ಕೆ ಸಮಾಜದ ನೀತಿ ನಿಯಮಗಳನ್ನು ಭಂಗಗೊಳಿಸಿದಂತೆ ಅನಿಸುತ್ತದೆ.

ಮದುವೆ ಎನ್ನುವುದು ಕಾನೂನಿನ ಹೊಂದಾಣಿಕೆ, ಅದರ ಮೇಲೆ ಧರ್ಮ ಸವಾರಿ ನಡೆಸುತ್ತಿದೆ. ವಾಸ್ತವದಲ್ಲಿ ಅದು ಇಬ್ಬರ ಖಾಸಗಿ ಹೊಂದಾಣಿಕೆ. ಇಬ್ಬರು ಸೋದರರು ಮನಸ್ಸಿಲ್ಲದಿದ್ದರೂ ಜೊತೆ ಜೊತೆಗೆ ವಾಸಿಸುವಂತೆ, ಇಬ್ಬರೂ ಸಹೋದ್ಯೋಗಿಗಳು ಎಷ್ಟೇ ಕಚ್ಚಾಡಿದರೂ ಒಂದೇ ಆಫೀಸಿನಲ್ಲಿ ಜೊತೆ ಜೊತೆಗೆ ಇರುವಂತೆ, ಗಂಡ ಹೆಂಡತಿ ಕೂಡ ಇಚ್ಛೆ ಬಂದಷ್ಟು ದಿನ ಜೊತೆ ಜೊತೆಗೆ ಇರಬಹುದು.

ಮದುವೆ ಅಥವಾ ಜೊತೆ ಜೊತೆಗಿರುವುದು ಖಾಸಗಿ ವಿಷಯ. ಪುರುಷ ಹಾಗೂ ಮಹಿಳೆ ಧಾರ್ಮಿಕ ವಿವಾಹವಾದಾಗ್ಯೂ ಕೂಡ ಬೇರೆಯವರೊಂದಿಗೆ ವಿವಾಹವಾದ ಅನೇಕ ಉದಾಹರಣೆಗಳು ನಮಗೆ ಪೌರಾಣಿಕ ಗ್ರಂಥಗಳಲ್ಲೂ ನೋಡಲು ಸಿಗುತ್ತವೆ. ಸಾಮಾನ್ಯವಾಗಿ ಈ ಹಕ್ಕು ಪುರುಷರಿಗಷ್ಟೇ ಇತ್ತು. ಈಗಲೂ ಹಾಗೆಯೇ ಇದೆ. ಅವರು ಒತ್ತಾಯಪೂರ್ವಕ ಅಥವಾ ಸಮ್ಮತಿಯ ಸಂಬಂಧ ನಡೆಸುತ್ತಾರೆ.

new-technology-and-gulami-2

ಸಮಾಜ ಹೇಳಲಿಕ್ಕಿಲ್ಲ. ಆದರೆ ಧರ್ಮ ಮತ್ತು ಆಡಳಿತ ಇದನ್ನು ತಪ್ಪೆಂದು ಹೇಳುತ್ತದೆ. ಏಕೆಂದರೆ ಮಹಿಳೆ ಸ್ವತಂತ್ರಳಾದರೆ ಅವರಿಗೆ ಪುಕ್ಕಟೆಯಾಗಿ ಗುಲಾಮಳೊಬ್ಬಳು ಸಿಗುವುದು ತಪ್ಪುತ್ತದೆ. ಅಲಹಾಬಾದ್‌ ಹೈಕೋರ್ಟ್‌ ಕೂಡ ಅದನ್ನೇ ಮಾಡಿದೆ. ಏಕೆಂದರೆ ಅದು ಮೇಲಿಂದ ಮೇಲೆ ಮಹಿಳೆಯರ ಹಕ್ಕುಗಳ ಬಗ್ಗೆ ಹೇಳಿದೆ. ಆದರೆ ವಿವಾಹಿತ ಮಹಿಳೆಯರ ಹಕ್ಕುಗಳನ್ನು ನಿರಾಕರಿಸಿದೆ.

ವಿವಾಹಿತ ಮಹಿಳೆಯರು ಏಕಾಂಗಿಯಾಗಿರಬಹುದು. ಆದರೆ ಬಂಧನದಲ್ಲಿರಬೇಕೆನ್ನುವುದು ತಪ್ಪು. ವಿಚ್ಛೇದನದ ಹಕ್ಕು ಗಂಡನಿಗೆ ಇದೆ. ಒಂದು ವೇಳೆ ಹೆಂಡತಿ ಬೇರೆಯವರ ಮನೆಯಲ್ಲಿ ಇರುತ್ತಿದ್ದರೆ ನ್ಯಾಯಾಲಯ ಅವರಿಗೆ ವಿಳಂಬ ಮಾಡದೆ ವಿಚ್ಛೇದನ ಕೊಟ್ಟುಬಿಡಬೇಕು. ಅವರಿಗೆ ಮಕ್ಕಳಿರಲಿ, ಇಲ್ಲದಿರಲಿ, ಆಸ್ತಿ ಹಂಚಿಕೆ ಆಗಿರಲಿ, ಆಗದೇ ಇರಲಿ, ಇವೆಲ್ಲ ವಿಷಯಗಳು ಆಮೇಲೆ ಬರುತ್ತವೆ.

ಒಂದು ವೇಳೆ ಒಬ್ಬ ಮಹಿಳೆ ಹೈಕೋರ್ಟ್‌ ತನಕ ತಲುಪಿ ತನಗೆ ಸುರಕ್ಷತೆ ಬೇಕೆಂದು ಕೇಳಿದರೆ, ಅದು ಅವಳಿಗೆ ಪತಿ ಅಗತ್ಯಕ್ಕಿಂತ ಹೆಚ್ಚು ತೊಂದರೆ ಕೊಡುತ್ತಿದ್ದಾನೆಂದು ಅರ್ಥ. ಅವಳಿಗೆ ಸಂರಕ್ಷಣೆ ಕೊಡುವುದು ಕಾನೂನಿನ ಕೆಲಸ ಮತ್ತು ಸಮಾಜದ ಫ್ಯಾಬ್ರಿಕ್‌ನ ಹೆಸರು ಹೇಳಿ ಅವಳನ್ನು ಗುಲಾಮಳಾಗಿಸುವುದು ಅಥವಾ ಹೊಡೆತ ಸಹಿಸಿಕೊಂಡಿರಲು ಅನಿವಾರ್ಯವಾಗಿಸಬಾರದು.

ಗೌರವದ ಪಾತ್ರದಾರರು

ಸಾಮಾನ್ಯವಾಗಿ ನರ್ಸ್‌ಗಳ ಬಗ್ಗೆ ಜನರು ಬಹಳ ನಂಬಿಕೆ ಇಡುತ್ತಾರೆ. ಏಕೆಂದರೆ ಮಕ್ಕಳಿರಲಿ, ವಯಸ್ಸಾದವರಿರಲಿ, ಮಹಿಳೆಯರಿರಲಿ ಎಲ್ಲರೂ ನರ್ಸ್‌ ಗಳ ಕೈಯಲ್ಲಿ ತಮ್ಮನ್ನು ಸುರಕ್ಷಿತ ಎಂದು ಭಾವಿಸುತ್ತಾರೆ. ರೋಗಿ ಹಠಮಾರಿಯಾಗಿರಬಹುದು, ಆ ವ್ಯಕ್ತಿಯನ್ನು ನಿರ್ವಹಿಸುವ ತಾಳ್ಮೆಯ ಗುಣ ನರ್ಸ್‌ ಗಳಲ್ಲಿರುತ್ತದೆ. ಅದು ಎಂತಹ ಒಂದು ಕೆಲಸವೆಂದರೆ, ಅದನ್ನು ಅತ್ಯಂತ ಆದರ ಭಾವನೆಯಿಂದ ನೋಡಲಾಗುತ್ತದೆ.

ಅದೇ ಕಾರಣದಿಂದ ಅವರನ್ನು `ಸಿಸ್ಟರ್‌’ ಎಂದು ಹೇಳಲಾಗುತ್ತದೆ. ಎಲ್ಲದರಲ್ಲಿಯೂ ಅಪವಾದಗಳಿರುತ್ತವೆ, ರೋಗಗಳ ಉಪಟಳ ಹೆಚ್ಚಳವಾದಂತೆ ನರ್ಸಿಂಗ್‌ ಹೆಚ್ಚು ಟೆಕ್ನಿಕ್‌ ಆಗುತ್ತದೆ. ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ರೋಗಿ ಹಾಗೂ ನರ್ಸ್‌ ಗಳ ವೈಯಕ್ತಿಕ ಸಂಬಂಧ, ನರ್ಸ್‌ ಹಾಗೂ ರೋಗಿಗಳ ಜನದಟ್ಟಣೆಯಲ್ಲಿ ಕಳೆದುಹೋಗಿದೆ. ನರ್ಸ್‌ ಗಳಲ್ಲಿ ದಣಿವು, ಬೇಸರ, ಒತ್ತಡದಿಂದಾಗಿ ಸೇವೆಯಲ್ಲಿ ಕೊರತೆ ಉಂಟಾಗುತ್ತಿದೆ.

ದೆಹಲಿಯ ಒಂದು ಆಸ್ಪತ್ರೆಯಲ್ಲಿ 2 ತಿಂಗಳ ಹಸುಗೂಸಿಗೆ ಹೊಡೆದ ಆರೋಪದ ಮೇರೆಗೆ ಒಬ್ಬಳು ನರ್ಸ್‌ಳನ್ನು ಬಂಧಿಸಲಾಯಿತು. ಮಗುವಿಗೆ ಕೇವಲ ಏಟು ಅಷ್ಟೇ ಆಗದೆ, ಮೂಳೆ ಫ್ರ್ಯಾಕ್ಚರ್‌ ಕೂಡ ಆಯಿತು.

ಕೋವಿಡ್‌ ನ ದಿನಗಳಲ್ಲಿ ನರ್ಸ್‌ ಗಳು ತಮ್ಮ ಪ್ರಾಣ ಪಣಕ್ಕೊಡ್ಡಿ ಜನರ ಜೀವ ಉಳಿಸಿದರು. ಇಲ್ಲಿ ಕೊನೆಯ ಕ್ಷಣದವರೆಗೂ ಅವರನ್ನು ನೋಡಿಕೊಂಡರು. ಆದಾಗ್ಯೂ ದೂರುಗಳ ದೊಡ್ಡ ಪಟ್ಟಿಯೇ ಇದೆ. ಹೆದರಿಕೆಯಿಂದ ಅಥವಾ ಕೆಲಸದ ಒತ್ತಡದಿಂದ ನರ್ಸ್‌ ಗಳು ರೋಗಿಗಳನ್ನು ಹಾಗೆಯೇ ನರಳುವಂತೆ ಮಾಡಿದರು.

ಇನ್ನೊಂದೆಡೆ ಕೆಲವು ಕಡೆ ನರ್ಸ್‌ ಗಳಿಗೆ ಮನೆ ಪ್ರವೇಶಕ್ಕೆ ಅಡ್ಡಿಯನ್ನುಂಟು ಮಾಡಿದರು. ಕೊರೋನಾ ವೈರಸ್‌ ಹೊತ್ತು ತಂದಿರಬಹುದು ಎಂದು ಹೇಳಿ ಹಾಗೆ ಮಾಡಿದರು. ಮತ್ತೆ ಕೆಲವು ಕಡೆ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅವರ ಮೇಲೆ ಹೂಮಳೆ ಸುರಿಸಲಾಯಿತು. ಅವರ ಕೆಲಸ ನಿಜಕ್ಕೂ ಅಪಾಯದಿಂದ ಕೂಡಿದೆ.

ನರ್ಸ್‌ ಗಳ ಕೊರತೆ ಈಗ ಜಗತ್ತಿನಾದ್ಯಂತ ಬಾಧಿಸುತ್ತಿದೆ. ಏಕೆಂದರೆ ಶ್ರೀಮಂತ ದೇಶಗಳಲ್ಲಿ ಜನರು ದೀರ್ಘಾವಧಿ ಬದುಕು ಸಾಗಿಸುತ್ತಿದ್ದಾರೆ, ಅವರಿಗೆ ಮಕ್ಕಳು ಅಥವಾ ಸಂಬಂಧಿಕರು, ಯಾರೂ ಇರುವುದಿಲ್ಲ. ಅಂಥವರು ಮುಂಚೆಯೇ ಯೋಜನೆ ಮಾಡಿ ಇನ್ಶೂರೆನ್ಸ್ ತೆಗೆದುಕೊಳ್ಳುತ್ತಾರೆ ಆಸ್ಪತ್ರೆಗಳಲ್ಲಿ ಅಥವಾ ಓಲ್ಡ್ ಏಜ್‌ ಹೋಮ್ ಗಳಲ್ಲಿ ತಮ್ಮನ್ನು ನೋಡಿಕೊಳ್ಳಲು ಒಬ್ಬಳು ನರ್ಸ್‌ ಇರಬೇಕೆಂದು ಬಯಸುತ್ತಾರೆ. ನರ್ಸ್‌ ಗಳ ಭರವಸೆಯ ಮೇರೆಗೆ ಕೊನೆಯ ದಿನದ ತನಕ ಬದುಕಬೇಕೆನ್ನುವುದು ಅವರ ಆಸೆ.

ಹಣಕ್ಕಾಗಿ ಬಡ ದೇಶಗಳ ಹುಡುಗಿಯರು ದೂರ ದೇಶಗಳಿಗೆ ಹೋಗುತ್ತಿದ್ದಾರೆ. ಅವರಿಗೆ ಕೈತುಂಬ ಸಂಬಳವೇನೊ ದೊರಕುತ್ತಿದೆ. ಆದರೆ ಅವರಿಗೆ ತಮ್ಮವರೆನ್ನುವವರು ಯಾರೂ ಸಿಗುತ್ತಿಲ್ಲ. ಈ ಕೆಲಸದಲ್ಲಿ 8-10 ಗಂಟೆ ನಿಲ್ಲಲೇಬೇಕಾದ ಅನಿವಾರ್ಯತೆ ಇರುತ್ತದೆ. ಬೇರೆ ನಗರಗಳಲ್ಲಿ ಹಾಗೂ ವಿದೇಶಗಳಲ್ಲಿ ಈ ನೋವು ಇನ್ನಷ್ಟು ಸತಾಯಿಸುತ್ತದೆ. ಒಂದು ವೇಳೆ ರೋಗಿ ದೂರು ಹೇಳಲಾರಂಭಿಸಿದರೆ ಅಥವಾ ಅದು ನ್ಯಾಯವೇ ಆಗಿದ್ದರೆ ಇನ್ನಷ್ಟು ನೋವು ತರುತ್ತದೆ.

ನಮ್ಮ ದೇಶದಲ್ಲಿ ಈ ವೃತ್ತಿಗೆ ಬರುವವರು ಹೆಚ್ಚಾಗಿ ಹಿಂದುಳಿದ ಜಾತಿಯವರು ಹೆಚ್ಚುತ್ತಿರುವ ಜಾತಿ ವಾದ ಹಾಗೂ ಧಾರ್ಮಿಕ ಮತಾಂಧತೆ ಕೂಡ ನರ್ಸ್‌ ಗಳಿಗೆ ಸೂಕ್ತ ಗೌರವ, ಆದರ, ಸಮ್ಮಾನ ಕೊಡಲು ಹಿಂದೇಟು ಹಾಕುತ್ತವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ