ಕಾನೂನಲ್ಲ, ಧರ್ಮ ಮತ್ತು ಸಮಾಜದ ತಪ್ಪು

ಆರ್ಥಿಕವಾಗಿ ಸಮೃದ್ಧವಾಗಿರುವ ಕೆಲವು ಕುಟುಂಬಗಳ ಪುರುಷರು ಕಾರ್ಮಿಕರ ಪುಟ್ಟ ಹುಡುಗಿಯರನ್ನು ನೋಡಿ ಜೊಲ್ಲು ಸುರಿಸುತ್ತಾರೆ. ಅದಕ್ಕೊಂದು ಉದಾಹರಣೆ ಇತ್ತೀಚೆಗೆ ದೆಹಲಿಯಲ್ಲಿ ನೋಡಲು ಸಿಕ್ಕಿತು. 13 ವರ್ಷದ ಬಾಲೆ ತನ್ನ 3 ಜನ ಅಣ್ಣ ತಂಗಿಯರ ಜೊತೆ, ತಾಯಿ ತಂದೆಯರೊಂದಿಗೆ ವಾಸಿಸುತ್ತಿದ್ದಳು. ಆ ಮನೆಯ ಮೂಲಕ ಹುಡುಗಿಯ ತಾಯಿ ತಂದೆಯನ್ನು ಪುಸಲಾಯಿಸಿ, ತನ್ನ ಸಂಬಂಧಿಕರ ಮಕ್ಕಳ ಜೊತೆ ಆಟ ಆಡುತ್ತಿರು ಎಂದು ಆ ಹುಡುಗಿಯನ್ನು ಗುರುಗ್ರಾಮಕ್ಕೆ ಕಳಿಸಿಕೊಟ್ಟ.

1 ತಿಂಗಳ ಬಳಿಕ ಆ ವ್ಯಕ್ತಿ ಹುಡುಗಿಯ ತಾಯಿ ತಂದೆಗೆ “ಫುಡ್‌ ಪಾಯಿಸನಿಂಗ್‌ ನಿಂದಾಗಿ ಹುಡುಗಿ ಮೃತಪಟ್ಟಿದ್ದು, ಬಾಡಿಯನ್ನು ಆಂಬ್ಯುಲೆನ್ಸ್ ಮೂಲಕ ದೆಹಲಿಗೆ ತೆಗೆದುಕೊಂಡು ಬರುತ್ತಿದ್ದೇವೆ,” ಎಂದು ಫೋನ್‌ ಮಾಡಿ ಹೇಳಿದ. ಹುಡುಗಿಯ ತಂದೆ ಅದನ್ನು ಸತ್ಯ ಎಂದು ನಂಬಿದ್ದ. ಆದರೆ ಅಕ್ಕಪಕ್ಕದವರ ಹೇಳಿಕೆಯ ಮೇರೆಗೆ ಹುಡುಗಿಯ ದೇಹವನ್ನು ಗಮನಿಸಿದಾಗ ಆಕೆಯ ದೇಹದ ಮೇಲೆ ಕೆಲವು ಗುರುತುಗಳು ಕಂಡುಬಂದವು. ಒಂದು ಆಸ್ಪತ್ರೆಗೆ ಒಯ್ದು ತಪಾಸಣೆ ಮಾಡಿದಾಗ, ರೇಪ್‌ ಮಾಡಿ ಅವಳ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದು ಗೊತ್ತಾಯಿತು.

ಇಂತಹ ಘಟನೆಗಳು ಸಾವಿರಾರು ಸಂಖ್ಯೆಯಲ್ಲಿ ಪ್ರತಿ ತಿಂಗಳು ಮರುಕಳಿಸುತ್ತಿರುತ್ತವೆ. ಆದರೆ ಅದರಲ್ಲಿ ಕೆಲವೇ ಕೆಲವು ಪ್ರಕರಣಗಳು ಪೊಲೀಸ್‌ ಠಾಣೆಗೆ ಬರುತ್ತವೆ. ಹೆಚ್ಚಿನ ಪ್ರಕರಣಗಳು ಮುಚ್ಚಿ ಹಾಕಲ್ಪಡುತ್ತವೆ. ಸಾವಿನ ಪ್ರಕರಣ ನಡೆಯದ ಕಡೆ ಹುಡುಗಿ ಹಲವು ವರ್ಷಗಳ ತನಕ ದೈಹಿಕ ಹಾಗೂ ಮಾನಸಿಕ ನೋವಿನಿಂದ ನರಳುತ್ತಿರುತ್ತಾಳೆ.

ಕಾನೂನು ಹೇಗೇ ಇರಲಿ, ಅತ್ಯಾಚಾರಿಗೆ ಎಂಥದೇ ಶಿಕ್ಷೆಯಾದರೂ ಒಂದು ಸಂಗತಿ ಪಕ್ಕ, ಅದೇನೆಂದರೆ, ಯಾವ ಅಪರಾಧ ಘಟಿಸಿರುತ್ತೊ, ಅದರ ಸಾಮಾಜಿಕ ಹಾಗೂ ನೈತಿಕ ಪರಿಣಾಮವನ್ನು ಕಾನೂನಿನ ಮುಖಾಂತರ ಸರಿಪಡಿಸಲು ಆಗುವುದಿಲ್ಲ. ವಾಸ್ತವದಲ್ಲಿ ಹುಡುಗಿಯ ರೇಪ್‌ ಆಗಿದ್ದರಿಂದ ಅಪರಾಧಿಗೆ ಶಿಕ್ಷೆ ವಿಧಿಸಲ್ಪಡುತ್ತದೆ. ಆದರೆ ಹೇಳಿಕೊಳ್ಳುವವರು ಮಾತ್ರ ಅದು ಸಮ್ಮತಿಯ ಸೆಕ್ಸ್ ಆಗಿತ್ತು, ಆ ಬಳಿಕ ಕೊಡು ತೆಗೆದುಕೊಳ್ಳುವುದರಲ್ಲಿ ಜಗಳಾಯಿತು ಎಂದು ಹೇಳುತ್ತಾರೆ. ರೇಪ್‌ ಗೆ ತುತ್ತಾದವಳಿಗೆ ವೇಶ್ಯೆ ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ.

ರೇಪ್‌ ನ ಅಪರಾಧ ಒಂದು ದೈಹಿಕ ಅಪರಾಧದ ಜೊತೆಗೆ ಸಾಮಾಜಿಕ ವೈಕಲ್ಯತೆಯನ್ನುಂಟು ಮಾಡುತ್ತದೆ. ಇದು ಈ ಅಪರಾಧ ಎಸಗಲು ಎಲ್ಲಕ್ಕೂ ದೊಡ್ಡ ಹೊಣೆಗಾರ ಎಂದು ಹೇಳಬಹುದು. ಒಂದು ವೇಳೆ ರೇಪ್‌ನ್ನು ಕೇವಲ ಹೊಡೆದು ಬಡಿದು ಮಾಡುವುದೆಂದು ಒಪ್ಪುದಾದರೆ, ಪ್ರತಿಯೊಂದು ರೇಪ್‌ ಬಗೆಗೂ ಮುಕ್ತವಾಗಿ ದೂರುಗಳು ಕೇಳಿಬರುತ್ತಿದ್ದವು ಹಾಗೂ ಪ್ರತಿಯೊಬ್ಬ ಅತ್ಯಾಚಾರಿ ಹೆದರಿಕೊಳ್ಳುತ್ತಿದ್ದ. ತಾನು ಬಂಧಿಸಲ್ಪಟ್ಟರೆ ಏನಾಗುತ್ತದೋ ಎಂಬ ಭೀತಿ ಇರುತ್ತಿತ್ತು. ಈಗ ಪ್ರತಿಯೊಬ್ಬ ಅತ್ಯಾಚಾರಿ ತಿಳಿದುಕೊಳ್ಳುವುದೇನೆಂದರೆ, ಹುಡುಗಿ ಸುಮ್ಮನೇ ಇರುತ್ತಾಳೆ. ಏಕೆಂದರೆ ವಿಷಯ ಬಹಿರಂಗವಾದರೆ ಆಕೆಯದೇ ಮರ್ಯಾದೆ ಹೋಗುತ್ತದೆ. ಕುಟುಂಬದ ಗೌರ ಮಣ್ಣುಪಾಲಾಗುತ್ತದೆ. ಆಕೆಯ ಅಣ್ಣ ತಮ್ಮ ಆಕೆಯನ್ನು ದ್ವೇಷಿಸುತ್ತಾರೆ. ತಾಯಿ ತಂದೆ ಸದಾ ಅಪರಾಧೀಪ್ರಜ್ಞೆ ಹೊತ್ತು ತಿರುಗುವಂತಾಗುತ್ತದೆ.

ವಿವಾಹಿತಿ ಅಹಲ್ಯಾಳ ಪತಿಯ ವೇಷ ಧರಿಸಿ, ಇಂದ್ರ ಆಕೆಯ ಜೊತೆ ಸಂಬಂಧ ಬೆಳೆಸಿದಾಗ, ಅದರ ತಪ್ಪನ್ನು ಅಹಲ್ಯಾಳ ಮೇಲೆಯೇ ಹೊರಿಸಲಾಯಿತು. ಇನ್ನೊಂದೆಡೆ ಅತ್ಯಾಚಾರಿಯಿಂದ ಪಾರಾಗಲು ಸತಿ ಪದ್ಧತಿಯನ್ನು ಮುಕ್ತಕಂಠದಿಂದ ಹೊಗಳಲಾಗುತ್ತದೆ ಮತ್ತು ವಿಧವಾ ವಿವಾಹಕ್ಕೆ ಅನುಮತಿ ಕೊಡದೇ ಇರಬಹುದು. ಆಗ ಈ ರೀತಿಯ ಮಾನಸಿಕತೆ ಇರುವುದು ದೊಡ್ಡ ಸಂಗತಿಯೇನಲ್ಲ.

ಅತ್ಯಾಚಾರಿ ಆರೋಪಿಗೆ ಸೂಕ್ತ ಶಿಕ್ಷೆ ದೊರಕಬೇಕು. ಆದರೆ ಇದು ಸಾಧ್ಯವಾಗುವುದು, ಅತ್ಯಾಚಾರಕ್ಕೆ ತುತ್ತಾದವರು ದೂರು ನೀಡಿದಾಗ ಮಾತ್ರ. ಆ ಘಟನೆಯ ಬಗ್ಗೆ ಪೊಲೀಸರಿಗೆ, ಡಾಕ್ಟರ್‌, ಕೌನ್ಸೆಲರ್‌, ನ್ಯಾಯಾಲಯ ಹಾಗೂ ವಕೀಲರಿಗೆ ಮತ್ತೆ ಮತ್ತೆ ತಿಳಿಸಬೇಕಾಗುತ್ತದೆ. ಆಕೆ ನಡೆದ ಸಂಗತಿಯನ್ನು ಮತ್ತೆ ಮತ್ತೆ ಹೇಳುತ್ತಾ ಇರುವುದಕ್ಕಿಂತ ಮೌನವಾಗಿರುವುದೇ ಹೆಚ್ಚು ಸೂಕ್ತವೆನಿಸುತ್ತದೆ.

ಇದು ಕಾನೂನಿನ ತಪ್ಪಲ್ಲ, ವ್ಯವಸ್ಥೆಯ ತಪ್ಪು. ಧಾರ್ಮಿಕ ಹಾಗೂ ಸಾಮಾಜಿಕ ವ್ಯವಸ್ಥೆಯದ್ದು. ಯಾವುದೇ ದೇಗುಲ ಕಣ್ಣಿಗೆ ಕಾಣುತ್ತಿದ್ದಂತೆ ಪುರುಷ ತಲೆಬಾಗಿಸುತ್ತಾನೆ. ಆದರೆ ಮರುಕ್ಷಣವೇ ಪರಸ್ತ್ರೀ ಕಣ್ಣಿಗೆ ಕಂಡುಬಂದರೆ ಅವಳನ್ನು ತನ್ನವಳಾಗಿಸಲು ಹೊಂಚು ಹಾಕುವ ದೃಷ್ಟಿಯಿಂದ ನೋಡುತ್ತಾನೆ. ತನ್ನನ್ನು ತಾನು ಸೃಷ್ಟಿ ರಚನೆಕಾರ ಭಗವಾನವರ ಏಜೆನ್ಸಿ ಎಂದು ಹೇಳಿಕೊಳ್ಳುವ ಧರ್ಮ ತನ್ನ ಭಕ್ತರನ್ನು ರೇಪ್‌ ಮಾಡುವುದರಿಂದ ಏಕೆ ತಡೆಯಬಾರದು ತಪ್ಪು ಕಾನೂನಿನದಲ್ಲ, ಸದಾ ವಟಗುಟ್ಟುವ ಹಾಗೂ ಭಾರಿ ಚಂದಾ ವಸೂಲಿ ಮಾಡುವ ಧರ್ಮ ಮತ್ತು ಸಮಾಜದ್ದು.

ಮಹಿಳೆಗೆ ದಯೆಯಲ್ಲ, ಹಕ್ಕು ಕೊಡಿ

ಆಫ್ಘಾನ್‌ನ ಮಹಿಳೆಯರ ದುಸ್ಥಿತಿಗೆ ಇಡೀ ಜಗತ್ತೇ ರೋದಿಸುತ್ತಿದೆ. ಇದಕ್ಕೆಲ್ಲ ಹೊಣೆ ಜಗತ್ತಿನಾದ್ಯಂತದ ಮಹಿಳೆಯರು. ಅವರು ತಮಗೆ ದೊರೆತ ಅಷ್ಟಿಷ್ಟು ಸ್ವಾತಂತ್ರ್ಯವನ್ನು ಆ ಆಫ್ಘಾನ್‌ ಮಹಿಳೆಯರಿಗಾಗಿ ಉಪಯೋಗಿಸಲಿಲ್ಲ. ಅಫ್ಘಾನ್‌ನ ಕಾಬೂಲ್ ‌ಅಥವಾ ಕಂದಹಾರ್‌ನಲ್ಲಿ ಇಲ್ಲವೇ ಬೆಟ್ಟಗಳ ಮರೆಯಲ್ಲಿರುವ ಗ್ರಾಮಗಳಲ್ಲಿರುವವರ ಮೇಲೆ ಧರ್ಮದ ದೌರ್ಜನ್ಯ ಎಷ್ಟಿದೆಯೆಂದರೆ, ಅದನ್ನು ಅವರು ನಿಸರ್ಗದ ಉಡುಗೊರೆ ಎಂದೇ ತಿಳಿಯುತ್ತಾರೆ.

ಸಾಮಾನ್ಯ ಮಹಿಳೆಯರು ಜಗತ್ತಿನಲ್ಲಿ ಎಲ್ಲೇ ಇರಲಿ, ಅವರು ತಮ್ಮನ್ನು ತಾವು ದೇವರ ಪಾಪಗ್ರಸ್ತೆ ಎಂದು ಭಾವಿಸುತ್ತಾರೆ. ತಮಗೆ ದೊರೆ ಸುಖವನ್ನು ಕೃಪೆ ಎಂದು ಭಾವಿಸಿದರೆ, ತಮಗೆ ಬರುವ ದುಃಖವನ್ನು ತಪ್ಪು ಕೆಲಸದ ಸಜೆ ಎಂದು ತಿಳಿಯುತ್ತಾರೆ.

ಇಂತಹದೇ ಮಹಿಳೆಯರ ಬಲದ ಮೇಲೆ ಆಫ್ಘಾನಿ ತಾಲಿಬಾನಿಗಳು ಶರಿಯಾ ಕಾನೂನು ಜಾರಿಗೆ ತರುತ್ತಿದ್ದಾರೆ. ಹಿಂದೂ ಅಥವಾ ಕ್ರೈಸ್ತ ಧರ್ಮದ ಕಾನೂನುಗಳು ಶರಿಯಾ ಕಾನೂನಿಗಿಂತ ಹೆಚ್ಚು ಒಳ್ಳೆಯವೇನಾಗಿಲ್ಲ. ಒಂದು ವೇಳೆ ಒಳ್ಳೆಯದೇನಾದರೂ ಆಗಿದ್ದರೆ, ಉನ್ನತ ದೇಶಗಳಲ್ಲಿ ಶಿಕ್ಷಣದ ವಾತಾವರಣ ಧರ್ಮದ ಮೌಢ್ಯವನ್ನು ಹಿಂದೆ ಹಾಕಿವೆ.

ಆಫ್ಘಾನ್‌ ಮಹಿಳೆಯರ ಸ್ಥಿತಿ ತಾಲಿಬಾನಿಗಳ ಕೈಗೆ ಅಧಿಕಾರಕ್ಕೆ ಬರುವ ಮುಂಚೆ ಬಹಳ ಒಳ್ಳೆಯದೇನೂ ಆಗಿರಲಿಲ್ಲ. 1200 ವರ್ಷಗಳ ಹಿಂದೆ ಹೇಗಿದ್ದರೊ, ಈಗಲೂ ಹಾಗೆಯೇ ಇದ್ದಾರೆ. ಅವರ ಜೀವನದ ಮೇಲೆ ತಂತ್ರಜ್ಞಾನ ಒಂದಷ್ಟು ಪರಿಣಾಮ ಬೀರಿದೆ. ಆದರೆ ಅವರ ಯೋಚನೆಯಲ್ಲಿ ಮಾತ್ರ ಬದಲಾವಣೆ ಆಗಿಲ್ಲ. ಪುರುಷ ಹಾಗೂ ಮಹಿಳೆ ಎಲ್ಲ ನಿಟ್ಟಿನಲ್ಲೂ ಸಮಾನ. ಇದನ್ನು ಅಮೆರಿಕ ಹಾಗೂ ಯೂರೋಪ್‌ನಲ್ಲೂ ಒಪ್ಪುವುದಿಲ್ಲ. ಕೌಟುಂಬಿಕ ದೌರ್ಜನ್ಯದ ಪ್ರಕರಣಗಳು ಆಫ್ಘಾನ್‌ನಲ್ಲಿರುವಂತೆಯೇ ಇವೆ.

vihangam-2

ಇದೇ ಶಿಕ್ಷಣವನ್ನು ಜಗತ್ತಿನಾದ್ಯಂತ ಮಹಿಳೆಯರಿಗೆ ಚರ್ಚ್‌ಗಳು, ಮಂದಿರಗಳು, ಮಠಗಳು, ಆಶ್ರಮಗಳು ಕೊಡುತ್ತಿವೆ. ವಿವಾಹದ ಪರಂಪರೆಯೇ ಪುರುಷರಿಗೆ ಮಹಿಳೆಯನ್ನು ಸಂಪತ್ತಿನಂತೆ ಒಪ್ಪಿಸಲಾಗುತ್ತದೆ. ಕೆಲವು ಕಡೆ ಒಬ್ಬಳೇ ಮಹಿಳೆಗೆ ಸೀಮಿತ ಮತ್ತೆ ಕೆಲವೆಡೆ ಒಬ್ಬರಿಗಿಂತ ಹೆಚ್ಚು ಮದುವೆಗೆ ಅವಕಾಶ. 1956ಕ್ಕಿಂತ ಮೊದಲು ಹಿಂದೂ ಪುರುಷ ಎಷ್ಟು ಬೇಕಾದಷ್ಟು ವಿಧವೆ ಪತ್ನಿಯರನ್ನು ಇಟ್ಟುಕೊಳ್ಳಬಹುದಿತ್ತು. ಆದರೆ ಒಬ್ಬ ಪತ್ನಿಗೆ ಬೇರೆ ಪುರುಷನಿಂದಾದ ಸಂತಾನವನ್ನು ಅನೈತಿಕ ಎಂದು ತಿಳಿಯಲಾಗುತ್ತದೆ.

ಆಫ್ಘಾನಿ ಮಹಿಳೆಯರು ಶರಿಯಾ ಕಾನೂನನ್ನು ಒಪ್ಪಿಕೊಂಡಿದ್ದಾರೆ. ಅವರು ಮನೆಗಳಲ್ಲಿ ಅದನ್ನು ಅನ್ವಯಿಸುತ್ತಾರೆ. ಶರಿಯಾ ಕಾನೂನಿನ ಪ್ರಕಾರ, ಮಹಿಳೆಯರ ಮೇಲೆ ಗುಂಡು ಹಾರಿಸುವ ವ್ಯಕ್ತಿಯ ತಾಯಿ, ಪತ್ನಿ, ಮಗಳು ಆ ವ್ಯಕ್ತಿಯನ್ನು ಅಪರಾಧಿ ಎಂದು ಭಾವಿಸುವುದಿಲ್ಲ. ಸಮಾಜದ ರಕ್ಷಕ ಎಂದು ತಿಳಿಯುತ್ತಾರೆ. ಜಗತ್ತಿನಾದ್ಯಂತದ ಮಹಿಳೆಯರು ಎಲ್ಲಿಯವರೆಗೆ ತಮ್ಮ ಮನೆಗಳಲ್ಲಿ ಈ ಕೆಟ್ಟ ಯೋಚನೆಯನ್ನು ಕಸದ ಬುಟ್ಟಿಗೆ ಎಸೆಯುವುದಿಲ್ಲವೋ, ಅಲ್ಲಿಯವರೆಗೆ ಅವರು ಹೇಗೆ ತಾನೇ ಆಫ್ಘಾನಿ ಮಹಿಳೆಯರ ದುಸ್ಥಿತಿಗೆ ಕಣ್ಣೀರು ಹಾಕುತ್ತಾರೆ? ಅದೂ ಕೂಡ ಕೇವಲ ಕೆಲವೇ ಕೆಲವು ನಗರ ಪ್ರದೇಶ ಆಫ್ಘಾನಿ ಮಹಿಳೆಯರಿಗಾಗಿ ಪ್ರಗತಿಗಾಗಿ ಪತಿ ಪತ್ನಿ ಹೆಗಲಿಗೆ ಹೆಗಲು ಕೊಟ್ಟು ತಮ್ಮ ನೆಲೆಯನ್ನು ಭದ್ರಪಡಿಸಿಕೊಳ್ಳಬೇಕು. ಮಕ್ಕಳನ್ನು ಪೋಷಿಸಬೇಕು, ಆಫೀಸು, ಕಾರ್ಖಾನೆ ಹಾಗೂ ಹೊಲಗಳಲ್ಲಿ ಕೆಲಸ ಮಾಡಬೇಕು. ವೈವಾಹಿಕ ದಾಸ್ಯವನ್ನು ಕಿತ್ತೆಸೆಯಬೇಕು. ಏಕೆಂದರೆ ನಿಸರ್ಗದ ಅಡೆತಡೆಯನ್ನು ಎದುರಿಸಲು ಸಾಧ್ಯವಾಗಬೇಕು. ಮಹಿಳೆಯರ ಮೇಲೆ ದಯೆ ತೋರಿಸಿ ಅವರಿಗೆ ಹಕ್ಕು ಕೊಡಬೇಡಿ, ಅವರು ಸಮಾಜದ ಅಭಿವೃದ್ಧಿಗೆ ಅತ್ಯವಶ್ಯ. ಅದನ್ನು ಯೋಚಿಸಿಯೇ ಏನು ಮಾಡಬೇಕೊ, ಅದನ್ನು ಮಾಡಬೇಕು.

ಘೋಷಣೆಗಳಿಂದ ದೇಶ ನಡೆಯುವುದಿಲ್ಲ

ಬಂಗಾರ ಗೃಹಿಣಿಯರಿಗೆ ಅಲಂಕರಿಸಿಕೊಳ್ಳಲಷ್ಟೇ ಅಲ್ಲ, ಅದು ಆಪತ್ಕಾಲದ ಉಳಿತಾಯ ಕೂಡ ಆಗಿರುತ್ತದೆ. ಈ ವರ್ಷ ಸರ್ಕಾರ ಬಗೆಬಗೆಯ ಪ್ರಗತಿಯ ಡಂಗೂರ ಹೊಡೆದುಕೊಳ್ಳುತ್ತಿದೆ ಹಾಗೂ ನಾಗರಿಕ ತಿದ್ದುಪಡಿ ಮಸೂದೆ, ತ್ರಿವಳಿ ತಲಾಖ್‌ ಮಸೂದೆ, 370ರ ತಿದ್ದುಪಡಿಯ ಬಗ್ಗೆ ಹೇಳಿಕೊಳ್ಳುತ್ತಿದೆ. ದೇಶಾದ್ಯಂತ ಮಹಿಳೆಯರು ತಮ್ಮ ಬಳಿಯಿದ್ದ ಚಿನ್ನವನ್ನು ಅಡವಿಟ್ಟು ಸಾಲ ಪಡೆಯುತ್ತಿದ್ದಾರೆ. ಅಂಕಿಅಂಶಗಳ ಪ್ರಕಾರ, ಬ್ಯಾಂಕುಗಳಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆಯುವ ಪ್ರಮಾಣ ಶೇ.77ರಷ್ಟು ಹೆಚ್ಚಳವಾಗಿದೆ.

ಅಷ್ಟೇ ಅಲ್ಲ, ಬ್ಯಾಂಕುಗಳ ಕ್ರೆಡಿಟ್‌ ಕಾರ್ಡ್‌ ಮೇಲೆ ಸಾಲ ಕೂಡ 10,000 ಕೋಟಿಗಳಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಬ್ಯಾಂಕುಗಳಿಂದ ಜನರು ಪಡೆದ ಸಾಲದ ಪ್ರಮಾಣ `ರೀಟೇಲ್ ‌ಸಾಲ’ ಶೇ.10ರಷ್ಟು ಹೆಚ್ಚಾಗಿದೆ. ಇದಕ್ಕೆ ಹೋಲಿಸಿದರೆ ಉದ್ಯಮಿ ಮತ್ತು ವ್ಯಾಪಾರಕ್ಕೆ ಪಡೆದ ಸಾಲದಲ್ಲಿ ಹೆಚ್ಚಳ ಶೇ.2ರಷ್ಟು ಮಾತ್ರ ಆಗಿದೆ.

ಇದು ವಾಸ್ತವದಲ್ಲಿ `ಟಿಪ್‌ ಆಫ್‌ ಐಸ್‌ ಬರ್ಗ್‌’ ಎಂದು ಹೇಳಲಾಗುತ್ತದೆ. ಸಮುದ್ರದ ನೀರಿನಲ್ಲಿ ತೇಲುವ ಮಂಜುಗಡ್ಡೆಯ ಬಂಡೆಗಳು ನೀರಿನ ಹೊರಗಡೆ ಎಷ್ಟು ದೊಡ್ಡದಾಗಿ ಗೋಚರಿಸುತ್ತವೆ, ಅದಕ್ಕೆ ಹಲವು ಪಟ್ಟು ನೀರಿನ ಒಳಗಡೆ ಇರುತ್ತದೆ. ದೇಶಿ ಹಾಗೂ ಖಾಸಗಿ ವರ್ಗಗಳ ಈ ಅಂಕಿಅಂಶಗಳು ಎಷ್ಟು ನಿಖರವಾಗಿವೆ ಎನ್ನುವುದನ್ನು ತಿಳಿಯವುದು ಕಷ್ಟ.

ದೇಶದ ಹೆಚ್ಚಿನ ಜನತೆ ಸಾಲವನ್ನು ಗಿರವಿ ಅಂಗಡಿಗಳಿಂದ ಹಾಗೂ ಸಂಬಂಧಿಕರಿಂದ ಪಡೆಯುತ್ತವೆ. ಅದು ಬ್ಯಾಂಕುಗಳ ಸಾಲಕ್ಕಿಂತ ಹಲವು ಪಟ್ಟು ಹೆಚ್ಚಿಗೆ ಇದೆ. ಅಡ ಇಟ್ಟ ಚಿನ್ನವನ್ನು ಗ್ರಾಹಕರು ವಾಪಸ್‌ ಪಡೆಯುತ್ತಾರೆನ್ನುವುದಕ್ಕೆ ಯಾವುದೇ ಖಾತ್ರಿ ಇಲ್ಲ. ಮುತ್ತೂಟ್‌ ಗೋಲ್ಡ್ ಲೋನ್‌ ಹಾಗೂ ಮಣಪ್ಪುರಮ್ ಫೈನಾನ್ಸ್ನವರು ಪತ್ರಿಕೆಗಳಲ್ಲಿ ಪುಟಗಟ್ಟಲೆ ಸಾಲದ ಹೆಸರಿನಲ್ಲಿ ಜಾಹೀರಾತು ಕೊಡುತ್ತಲೇ ಇರುತ್ತಾರೆ.

ರಿಸರ್ವ್ ‌ಬ್ಯಾಂಕಿನ ಒಂದು ಮೂಲದ ಪ್ರಕಾರ, ಸಾರ್ವಜನಿಕರ 600 ದಶಲಕ್ಷ ರೂ. ಮೌಲ್ಯದ ಚಿನ್ನ ಬ್ಯಾಂಕುಗಳ ಬಳಿ ಇದೆ. 2020ರಲ್ಲಿ ಅದು 185 ದಶಲಕ್ಷ ರೂ. ಆಗಿತ್ತು. ದೇಶದ ಮಹಿಳೆಯರು ತಮ್ಮ ಬಳಿಯಿರುವ ಚಿನ್ನ ಅಡವಿಟ್ಟು ಹೊಟ್ಟೆ ಹೊರೆದುಕೊಳ್ಳುವುದು, ಆರೋಗ್ಯ ರಕ್ಷಣೆ ಮಾಡಿಕೊಳ್ಳುವುದು ದೇಶದ ಪ್ರಗತಿಯಾಗಿದೆ. ಇನ್ನೊಂದೆಡೆ ಸರ್ಕಾರ ಎಲ್ಲೆಡೆ ಮಂದಿರಮಠ ನಿರ್ಮಿಸುತ್ತಿದೆ. ಅವು ಯಾವಾಗಲೂ ಖಾಲಿ ಹೊಡೆಯುತ್ತಿರುತ್ತವೆ.

ಚಿನ್ನ ಶೃಂಗಾರಕ್ಕಿಂತ ಹೆಚ್ಚಾಗಿ ಜೀವನದ ಅಂಗವಾಗಿದೆ. ಅದೇ ಮಾರಾಟವಾಗಿ ಬಿಟ್ಟಿದೆ. ಮನೆಗಳ ಆತ್ಮವಿಶ್ವಾಸ ಚೂರು ಚೂರಾಗುತ್ತದೆ. ದೇಶ ಘೋಷಣೆಗಳಿಂದ ನಡೆಯುವುದಿಲ್ಲ. ಮಹಿಳೆಯರ ಮೇಲೆ ಅತ್ಯಾಚಾರ ತಾಲಿಬಾನಿಗಳ ರೈಫಲ್ ನಿಂದಲ್ಲ, ಒಲೆಯ ಗ್ಯಾಸ್‌ ದುಬಾರಿ ಮಾಡಿ, ನಿರುದ್ಯೋಗ ಹೆಚ್ಚಳ ಮಾಡಿ ಕೂಡ ಮಾಡಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ